GRS Fantasy Park Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರು GRS ಫ್ಯಾಂಟಸಿ ಪಾರ್ಕ್ ನಲ್ಲಿ 20ಕ್ಕೂ ಹೆಚ್ಚು ಥೀಮ್ಡ್ ಸೆಟ್ ಸೆಲ್ಫಿ ಫ್ಯಾಕ್ಟರಿ ಆರಂಭ
ಮೈಸೂರು,ಮೇ,4,2026 (www.justkannada.in): ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಮೈಸೂರಿನಲ್ಲಿ 20ಕ್ಕೂ ಹೆಚ್ಚು ಥೀಮ್ಡ್ ಸೆಟ್‌ಗಳನ್ನು ಹೊಂದಿರುವ 4,000 ಚದರ ಅಡಿ ವಿಸ್ತೀರ್ಣದ ಫೋಟೋ ಆಕರ್ಷಣೆಯಾದ ಜಿಆರ್‌ಎಸ್ ಸೆಲ್ಫಿ ಫ್ಯಾಕ್ಟರಿಯನ್ನು ಆರಂಭಿಸಿದೆ.

ಈ ಸೌಲಭ್ಯವನ್ನು ಏ. 1ರಂದು ಸಾಫ್ಟ್ ಲಾಂಚ್ ಮಾಡಲಾಗಿದ್ದು, 14ರಂದು ಅಧಿಕೃತವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಸ್ಥಳೀಯ ಇನ್‌ಫ್ಲುಯೆನ್ಸರ್‌ ಗಳು ಭಾಗವಹಿಸಿದ್ದರು.

ಈ ಆಕರ್ಷಣೆ ಜಿಆರ್‌ ಎಸ್ ಸ್ನೋ ಪಾರ್ಕ್‌ಸಮೀಪದ ಸಂಕೀರ್ಣದ ನೆಲಮಹಡಿಯಲ್ಲಿ ತೆರೆಯಲಾಗಿದ್ದು, ಅಮ್ಯೂಸ್‌ ಮೆಂಟ್ ಮತ್ತು ವಾಟರ್‌ ಪಾರ್ಕ್‌ಗಳಿಂದ ಪ್ರತ್ಯೇಕ ಟಿಕೆಟ್ ವ್ಯವಸ್ಥೆ ಹೊಂದಿದೆ. ಭೇಟಿ ನೀಡುವವರು ಫ್ಯಾಂಟಸಿ ಪಾರ್ಕ್‌ ಗೆ ಪ್ರವೇಶಿಸದೆ ಇದನ್ನು ಉಪಯೋಗಿಸಬಹುದು.

ಇಲ್ಲಿ ಇರುವ 20ಕ್ಕೂ ಹೆಚ್ಚು ಸೆಟ್‌ ಗಳಲ್ಲಿ ನಿಯಾನ್ ಡ್ರೀಮ್ಸ್, ಟ್ರಾಪಿಕಲ್ ಪ್ಯಾರಡೈಸ್, ಮಿಸ್ಟಿಕ್ ಲೈಟ್ಸ್ ಮತ್ತು ವಿಂಟೇಜ್ ವೈಬ್ಸ್ ಮೊದಲಾದವು ಸೇರಿವೆ. ಪ್ರತಿಯೊಂದು ಸೆಟ್‌ ಪ್ರತ್ಯೇಕ ಹಿನ್ನೆಲೆಯೊಂದಿಗೆ ವಿನ್ಯಾಸ ಗೊಳಿಸಲಾಗಿದೆ. ಅದೇ ಸ್ಥಳದಲ್ಲಿ ವಿಂಟೇಜ್ ವೋಕ್ಸ್‌ ವ್ಯಾಗನ್ ವ್ಯಾನ್ ಒಳಗೆ ನಿರ್ಮಿಸಲಾದ ಇನ್ ಹೌಸ್ ಕಾಫೆ ಕೂಡ ಕಾರ್ಯನಿರ್ವಹಿಸುತ್ತದೆ. ಈ ಸ್ಥಳದಲ್ಲಿ ಪ್ರತಿ ಗಂಟೆಗೆ ಸುಮಾರು 100 ಮಂದಿ ಭೇಟಿ ನೀಡಬಹುದು. ಈ ಸೌಲಭ್ಯಕ್ಕಾಗಿ ವಿಶೇಷವಾಗಿ 10 ಮಂದಿ ಸಿಬ್ಬಂದಿ ನೇಮಿಸಲಾಗಿದೆ. ಇದು ವಾರದ ದಿನಗಳಲ್ಲಿ ಬೆಳಗ್ಗೆ 10.30 ರಿಂದ ಸಂಜೆ 7ರವರೆಗೆ ಮತ್ತು ವಾರಾಂತ್ಯದಲ್ಲಿ ರಾತ್ರಿ 8 ರವರೆಗೆ ತೆರೆದಿರುತ್ತದೆ. ಆರಂಭದಲ್ಲಿ 199 ರೂ. ದರದಲ್ಲಿ ಟಿಕೆಟ್‌ನೀಡಲಾಗುತ್ತಿತ್ತು, ಆದರೆ ಕೆಲವು ವಾರಗಳ ನಂತರ 299 ರೂ.ಗೆ ಪರಿಷ್ಕರಿಸಲಾಗಿದೆ.

ಮೈಸೂರಿನ ಜನರು ಹಾಗೂ ಪ್ರವಾಸಿಗರಿಗೆ ನೆನಪು ಗಳನ್ನು ಸೃಷ್ಟಿಸಲು ವಿಶೇಷ ಸ್ಥಳ ಒದಗಿಸುವ ಉದ್ದೇಶದಿಂದ ನಾವು ಸುಮಾರು 1 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಇದರ ಹೆಸರು ಜಿಆರ್‌ಎಸ್ ಸೆಲ್ಫಿ ಫ್ಯಾಕ್ಟರಿ ಆಗಿದ್ದರೂ, ನಾವು ನಿರ್ಮಿಸಿರುವುದು ಕೇವಲ ಒಬ್ಬರ ಫೋಟೋಗಳಿಗೆ ಮಾತ್ರವಲ್ಲ, ಕುಟುಂಬಗಳಿಗೂ ಹೊಂದುವಂತಹ ಸ್ಥಳ. ಮೊದಲ ಮೂರು ವಾರಗಳಲ್ಲಿ ಮದುವೆ ಫೋಟೋಶೂಟ್ ಹಾಗೂ ಶಿಶು ಫೋಟೋಶೂಟ್‌ ಗಳಿಗಾಗಿ ಈಗಾಗಲೇ ಬುಕಿಂಗ್ ಪಡೆದಿರುವುದಾಗಿ ಸಂಸ್ಥೆ ತಿಳಿಸಿದೆ. ಪ್ರತಿಯೊಂದು ಆಕರ್ಷಣೆಗೂ ಪ್ರತ್ಯೇಕ ಟಿಕೆಟ್ ವ್ಯವಸ್ಥೆಯಿದ್ದು, ಹಲವು ಆಕರ್ಷಣೆಗಳನ್ನು ಒಳಗೊಂಡ ಕಡಿತ ದರದ ಕಾಂಬೋ ಟಿಕೆಟ್‌ಗಳು https://grs.fun/ ನಲ್ಲಿ ಲಭ್ಯವಿವೆ.

Key words: Selfie Factory, GRS Fantasy Park, Mysore

The post ಮೈಸೂರು GRS ಫ್ಯಾಂಟಸಿ ಪಾರ್ಕ್ ನಲ್ಲಿ  20ಕ್ಕೂ ಹೆಚ್ಚು ಥೀಮ್ಡ್ ಸೆಟ್ ಸೆಲ್ಫಿ ಫ್ಯಾಕ್ಟರಿ ಆರಂಭ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರಿನ GRS ಫ್ಯಾಂಟಸಿ ಪಾರ್ಕ್‌ ಗೆ ಎರಡು ರಾಷ್ಟ್ರೀಯ ಪ್ರಶಸ್ತಿಗಳ ಗರಿ
ಮೈಸೂರು,ಏಪ್ರಿಲ್,21,2026 (www.justkannada.in): ನಗರದ ಖ್ಯಾತ ಅಮ್ಯೂಸ್‌ಮೆಂಟ್‌ ಪಾರ್ಕ್‌ ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್‌ ಗೆ ಇಂಡಿಯನ್‌ ಅಸೋಸಿಯೇಶನ್‌ ಆಫ್‌ ಅಮ್ಯೂಸ್‌ಮೆಂಟ್‌ ಪಾರ್ಕ್ಸ್‌ ಅಂಡ್‌ ಇಂಡಸ್ಟ್ರೀಸ್‌ (IAAPI) ವತಿಯಿಂದ ಇತ್ತೀಚೆಗೆ ಎರಡು ರಾಷ್ಟ್ರ ಪ್ರಶಸ್ತಿಗಳು ದೊರೆತಿದ್ದು, ಇಡೀ ರಾಷ್ಟ್ರದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೈಸೂರಿನ ಹೆಸರು ಮನೆಮಾತಾಗುವಂತೆ ಮಾಡಿದೆ.

IAAPI ಇಡೀ ರಾಷ್ಟ್ರದ ಅಮ್ಯೂಸ್‌ ಮೆಂಟ್‌ ಪಾರ್ಕ್‌ಗಳನ್ನು ಪರಿಗಣಿಸಿ ಪ್ರತಿ ವರ್ಷ ವಿವಿಧ ಪ್ರಶಸ್ತಿಗಳನ್ನು ನೀಡುತ್ತದೆ. ಈ ಪೈಕಿ ಈ ವರ್ಷ ಜಿಆರ್‌ಎಸ್‌ಗೆ ಬೆಸ್ಟ್‌ ಡಿಜಿಟಲ್‌ ಮಾರ್ಕೆಟಿಂಗ್‌ ವಿಭಾಗದಲ್ಲಿ ಮೊದಲ ಸ್ಥಾನ ಹಾಗೂ ಬೆಸ್ಟ್‌ ಇವೆಂಟ್ಸ್‌ ವಿಭಾಗದಲ್ಲಿ ಎರಡನೆಯ ಸ್ಥಾನ ದೊರೆತಿದೆ. ಒಟ್ಟು 25 ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಬಾರಿ ಮಾರ್ಚ್‌ ನಲ್ಲಿ ಮುಂಬೈನಲ್ಲಿ ನಡೆದ IAAPI ಎಕ್ಸ್‌ಪೋದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಆರ್‌ಎಸ್‌ ಸಂಸ್ಥೆಯ ನಿರ್ದೇಶಕ ಅಶ್ವಿನ್‌ ದಂಗೆ ಅವರು ಇಡೀ ತಂಡದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಈ ಸ್ಪರ್ಧೆಗೆ ಭಾರತದಾದ್ಯಂತದ ಎಲ್ಲಾ ಅಮ್ಯೂಸ್‌ ಮೆಂಟ್‌ ಪಾರ್ಕ್‌ ಗಳನ್ನು ಪರಿಗಣಿಸಲಾಗಿತ್ತು. ಈ ಪೈಕಿ ವಿವಿಧ ಮಾನದಂಡಗಳಿಗೆ ಅನುಗುಣವಾಗಿ ಪ್ರಶಸ್ತಿಗಳನ್ನು ನೀಡಲಾಗಿದೆ. ʻದೇಶದ ಬೇರೆಲ್ಲಾ ಬೃಹತ್‌ ಅಮ್ಯೂಸ್‌ ಮೆಂಟ್‌ ಪಾರ್ಕ್‌ಗಳ ನಡುವೆ ಸ್ಪರ್ಧೆಯಲ್ಲಿದ್ದ ಜಿಆರ್‌ಎಸ್‌ ಗೆ ಎರಡು ಪ್ರಶಸ್ತಿಗಳು ಲಭಿಸಿರುವುದು ಸಂತಸದ ಸಂಗತಿ. ಇದು ಮೈಸೂರಿನ ಕಿರೀಟದಲ್ಲೂ ಒಂದು ಗರಿ. ಇದೇ ರೀತಿ ವಿವಿಧ ಹೊಸ ಸಂಗತಿಗಳೊಂದಿಗೆ ಜನರಿಗೆ ವರ್ಷಪೂರ್ತಿ ಮನರಂಜನೆ ನೀಡುವಂತಾಗಬೇಕು ಎಂಬುದು ನಮ್ಮ ಆಶಯ. ಈ ಬೃಹತ್‌ ಮಾರುಕಟ್ಟೆಯಲ್ಲಿ ನಮ್ಮ ಮೈಸೂರಿನ ಅಮ್ಯೂಸ್‌ಮೆಂಟ್‌ ಪಾರ್ಕ್‌ ಇಷ್ಟರಮಟ್ಟಕ್ಕೆ ಸಾಧನೆ ಮಾಡಿರುವುದು ಮೈಸೂರಿಗೂ ಹೆಮ್ಮೆ ತರುವ ವಿಚಾರʼ ಎಂದು ಜಿಆರ್‌ಎಸ್‌ನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಬೇಸಿಗೆ ಸಮಯದಲ್ಲಿ ಮಕ್ಕಳಿಗೆ, ಹಿರಿಯರಿಗೆ ಹಾಗೂ ಕುಟುಂಬದವರೆಲ್ಲರಿಗೂ ಸಂಪೂರ್ಣ ಮನರಂಜನೆ ನೀಡುವ ಸಲುವಾಗಿ ಜಿಆರ್‌ಎಸ್‌ ವತಿಯಿಂದ ಸೆಲ್ಫೀ ಫ್ಯಾಕ್ಟರಿ, ಬೇಸಿಗೆ ಉತ್ಸವ (ಸಮ್ಮರ್‌ ಕಾರ್ನಿವಲ್)‌ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ಬರುವವರಿಗೆ ವಿವಿಧ ಆಕರ್ಷಣೆಗಳೂ ಇರಲಿವೆ.

Key words: GRS Fantasy Park, Mysore, wins, two, national awards

The post ಮೈಸೂರಿನ GRS  ಫ್ಯಾಂಟಸಿ ಪಾರ್ಕ್‌ ಗೆ ಎರಡು ರಾಷ್ಟ್ರೀಯ ಪ್ರಶಸ್ತಿಗಳ ಗರಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

GRS ಫ್ಯಾಂಟಸಿ ಪಾರ್ಕ್ ನಲ್ಲಿ ಯಂತ್ರಕ್ಕೆ ಸಿಲುಕಿ ಬೆರಳು ಕಟ್: ಎಂ.ಡಿ ಮತ್ತು ಜಿ.ಎಂ.ವಿರುದ್ದ FIR ದಾಖಲು
ಮೈಸೂರು,ನವೆಂಬರ್, 14,2025 (www.justkannada.in):  ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ನ ಆಟವಾಡುವ ವೇಳೆ ಯಂತ್ರದಲ್ಲಿ ಲೋಪ ಕಂಡು ಬಂದು ವ್ಯಕ್ತಿಯೊಬ್ಬರ ಕಾಲು ಯಂತ್ರಗಳ ಮಧ್ಯೆ ಸಿಲುಕಿ ಎರಡು ಬೆರಳುಗಳನ್ನ ಕಳೆದುಕೊಂಡ  ಘಟನೆ ನಡೆದಿದ್ದು ಈ ಸಂಬಂಧ ಜಿಆರ್ ಎಸ್ ನ  ಎಂ.ಡಿ ಮತ್ತು ಜಿ.ಎಂ.ವಿರುದ್ದ ಪ್ರಕರಣ ದಾಖಲಾಗಿದೆ.

ದೆಹಲಿ ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಅಸೆಸರ್ ವಿಶಾಂತ್ ಯಾದವ್ ಅವರೇ ಬೆರಳುಗಳನ್ನ ಕಳೆದುಕೊಂಡವರು. ಶಾಶ್ವತ ಅಂಗವಿಕಲರಾದ ಹಿನ್ನಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿಶಾಂತ್ ಯಾದವ್ ರವರು ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಜನರಲ್ ಮ್ಯಾನೇಜರ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಶಾಂತ್ ಯಾದವ್ ಅಕ್ಟೋಬರ್ ನಲ್ಲಿ ತಮ್ಮ ಸಹೋದರನ ಜೊತೆ ಮೈಸೂರಿಗೆ ಬಂದಿದ್ದರು. ಈ ನಡುವೆ ವಿಶಾಂತ್ ಯಾದವ್ ರವರು GRS ಫ್ಯಾಂಟಸಿ ಪಾರ್ಕ್ ಗೆ ಆಟವಾಡಲು ತೆರಳಿದ್ದು,  ಈ ವೇಳೆ ಸೂಪರ್ ಡ್ರಾಪರ್ ವಾಟರ್ ಸ್ಲೈಡರ್ ನಲ್ಲಿ ಆಟವಾಡುವ ವೇಳೆ ಯಂತ್ರದ ಮಧ್ಯೆ ಕಾಲುಗಳು ಸಿಲುಕಿ ತೀವ್ರ ಗಾಯಗೊಂಡಿದ್ದರು.

ತಕ್ಷಣ ವಿಶಾಂತ್ ಯಾದವ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯಲ್ಲಿ ವಿಶಾಂತ್ ಯಾದವ್ ಎರಡು ಬೆರಳುಗಳನ್ನ ಶಾಶ್ವತವಾಗಿ ಕಳೆದುಕೊಂಡಿದ್ದಾರೆ.

ಸುರಕ್ಷಾ ಕ್ರಮ ಅನುಸರಿಸದೆ ದೋಷಪೂರಿತ ಯಂತ್ರದಿಂದಾಗಿ ತಾವು ಶಾಶ್ವತ ಅಂಗವಿಕಲನಾಗಿದ್ದೇನೆಂದು ಆರೋಪಿಸಿ  ಜಿಆರ್ ಎಸ್ ನ ಎಂಡಿ ಹಾಗೂ ಜಿಎಂ ವಿರುದ್ದ ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದೆ.

Key words: Finger cut, machine, GRS Fantasy Park:, FIR, Mysore

The post GRS ಫ್ಯಾಂಟಸಿ ಪಾರ್ಕ್ ನಲ್ಲಿ ಯಂತ್ರಕ್ಕೆ ಸಿಲುಕಿ ಬೆರಳು ಕಟ್: ಎಂ.ಡಿ ಮತ್ತು ಜಿ.ಎಂ.ವಿರುದ್ದ FIR ದಾಖಲು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಗೂ ಅನುಮತಿ ನೀಡಿ : ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಎಂಪ್ಲಾಯೀಸ್ ಯೂನಿಯನ್ ಪ್ರತಿಭಟನೆ
ಮೈಸೂರು,ನವೆಂಬರ್,11,2020(www.justkannada.in) :  ಸರಕಾರ ಸಿನಿಮಾ ಹಾಲ್, ಮದುವೆ, ವ್ಯಾಯಾಮ ಮುಂತಾದವುಗಳಿಗೆ ಅನುಮತಿ ನೀಡಿದಂತೆ ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಗೂ ಅನುಮತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಕಾರರು ಬೇಡಿಕೆ ಈಡೇರಿಸುವಂತೆ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಯೂನಿಯನ್ ಅಧ್ಯಕ್ಷ ಜಿ.ಜಯರಾಂ ಮಾತನಾಡಿ, ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಆರಂಭವಾಗಿ 21ವರ್ಷ ತುಂಬಿದ್ದು, ಅಂದಿನಿಂದ ಇಲ್ಲಿ ದುಡಿಯುತ್ತಿದ್ದೇವೆ. ಕಳೆದ ಮಾರ್ಚ್ 20ರಿಂದ ಕೋವಿಡ್-19ನಿಂದಾಗಿ ಅಲ್ಲಿ ದುಡಿಯುತ್ತಿದ್ದ ಸುಮಾರು 300ಗೂ ಹೆಚ್ಚು ಕಾರ್ಮಿಕರಿಗೆ ಕೆಲಸವಿಲ್ಲವಾಗಿದೆ ಎಂದು ಬೇಸರವ್ಯಕ್ತಪಡಿಸಿದರು.

ಇಂದಿನ ಬೆಲೆಯೇರಿಕೆಯ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಬಡ ಕಾರ್ಮಿಕರು ಈ ಕೆಲಸವನ್ನೇ ನಂಬಿ ಜೀವನ ನಡೆಸುತ್ತಿದ್ದು, ಕೋವಿಡ್ 19ನಿಂದ ಸರಕಾರ ಅನುಮತಿ ನೀಡದಿರುವುದರಿಂದ ಇದನ್ನೇ ನೆಪಮಾಡಿಕೊಂಡು 21ವರ್ಷಗಳಿಂದ ದುಡಿದುಕೊಂಡು ಬಂದ ಕಾರ್ಮಿಕರಿಗೆ ತಿಂಗಳಿಗೆ 75%, ನಂತರ 60% ವೇತನ ನೀಡುತ್ತಿದ್ದಾರೆ ಎಂದು ದೂರಿದರು.

ಏಪ್ರೀಲ್ ನಿಂದ ಕಡಿತವಾಗಿರುವ ವೇತನವನ್ನು ಕೊಡಿಸಿ, 2019-20ನೇ ಸಾಲಿನ ತುಟ್ಟಿಭತ್ಯೆ ಸೌಲಭ್ಯವನ್ನು ಒದಗಿಸಿ, ಗುತ್ತಿಗೆದಾರರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಿ, ನೌಕರರ ಕೆಲವು ಮೂಲ ಸೌಲಭ್ಯಗಳನ್ನು ಮುಂದುವರಿಸಿ, ಪಾರ್ಕ್ ನಲ್ಲಿ ಜಲಕ್ರೀಡೆ ಆಡಲು ಸರಕಾರ ಶೀಘ್ರ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಯೂನಿಯನ್ ಉಪಾಧ್ಯಕ್ಷ ಎಂ.ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಜಗದೀಶ್, ಜಂಟಿಕಾರ್ಯದರ್ಶಿ ಯು.ಎಸ್.ಶ್ರೀನಿವಾಸ್, ಸಂಘಟನಾಕಾರ್ಯದರ್ಶಿ ಕೆ.ಎಂ.ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

key words : Grant-GRS-Fantasy-Park-permitted-cinema-hall- wedding-gym-GRS Fantasy Park-Employees-Union-protest

The post ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಗೂ ಅನುಮತಿ ನೀಡಿ : ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಎಂಪ್ಲಾಯೀಸ್ ಯೂನಿಯನ್ ಪ್ರತಿಭಟನೆ  appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.