grammar Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಗ್ರಾಪಂ ಚುನಾವಣೆಗಳಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚು ಸ್ಥಾನ : ಸಚಿವ ಸೋಮಶೇಖರ್ ವಿಶ್ವಾಸ
ಬೆಂಗಳೂರು,ಡಿಸೆಂಬರ್,06,2020(www.justkannada.in) : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಆಗಿರುವ ಅರುಣ್ ಸಿಂಗ್ ಅವರನ್ನು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಹಕಾರ ಹಾಗೂ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ಮಾಡಿ ಅಭಿನಂದಿಸಿದರು.

ಇದೇ ವೇಳೆ ಭಾರತದ ಸಂವಿಧಾನ ಕೃತಿಯನ್ನು ನೀಡಿ ಗೌರವಿಸಿದರು. ಜೊತೆಗೆ ಗ್ರಾಮ ಸ್ವರಾಜ್ಯ ಸಮಾವೇಶದ ಬಗ್ಗೆ ಮಾಹಿತಿ ನೀಡಿ, ಕಾವೇರಿ ಕೊಳ್ಳದ ಪ್ರಾಂತ್ಯ ಹಾಗೂ ಹಳೇ ಮೈಸೂರು ಭಾಗದಲ್ಲಿ ಪ್ರಸಕ್ತ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನವನ್ನು ಗೆಲ್ಲಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಕಂದಾಯ ಸಚಿವ ಆರ್.ಅಶೋಕ್ ಅವರ ನೇತೃತ್ವದಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ಮೈಸೂರು ವಿಭಾಗದಲ್ಲಿ ನಡೆಸಲಾಗಿದ್ದು, ತಮ್ಮನ್ನು ಸಹಿತ ಪೌರಾಡಳಿತ ಸಚಿವ ನಾರಾಯಣ್ ಗೌಡ,  ಆಹಾರ ಸಚಿವ ಗೋಪಾಲಯ್ಯ, ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್ ಹಾಗೂ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರ ತಂಡದೊಂದಿಗೆ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರಲಿದ್ದಾರೆ ಎಂದರು.

ಮೈಸೂರು ವಿಭಾಗದಲ್ಲಿ ನವೆಂಬರ್28 ರಿಂದ ಡಿಸೆಂಬರ್ 02 ರವರೆಗೆ ಒಟ್ಟು 5 ಜಿಲ್ಲೆಗಳಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮಕ್ಕಾಗಿ ಪ್ರವಾಸ ಮಾಡಿದ್ದೇವೆ. ಒಟ್ಟು 9 ಸಮಾವೇಶಗಳನ್ನು ನಡೆಸಿದ್ದು, 40 ಮಂಡಲಗಳು ಭಾಗಿಯಾಗಿವೆ. ಈ ಕಾರ್ಯಕ್ರಮಗಳಲ್ಲಿ 3946 ಶಕ್ತಿ ಮತ್ತು ಮಹಾ ಶಕ್ತಿ ಕೇಂದ್ರದ ಪ್ರಮುಖರು ಭಾಗವಹಿಸಿದ್ದರು. ಒಟ್ಟಾರೆಯಾಗಿ 1210 ಕಿಲೋಮೀಟರ್ ದೂರವನ್ನು ಕ್ರಮಿಸಿದಂತಾಗಿದೆ ಎಂದು ಸಚಿವ ಸೋಮಶೇಖರ್ ಮಾಹಿತಿ ನೀಡಿದರು.

ಕರ್ನಾಟಕ ಸಹ ಉಸ್ತುವಾರಿಯಾದ ಡಿ.ಕೆ.ಅರುಣಾ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಹಾಗೂ ರವಿಕುಮಾರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

key words :Most-BJP-backed-candidates-Mysore-region- Grammar-elections-Minister-Somashekhar-Confidence

The post ಗ್ರಾಪಂ ಚುನಾವಣೆಗಳಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚು ಸ್ಥಾನ : ಸಚಿವ ಸೋಮಶೇಖರ್ ವಿಶ್ವಾಸ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಗೆಯ ಬುಗ್ಗೆ, ನವಿರು ಪ್ರೇಮಕಥೆಯ ಕನ್ನಡ ವ್ಯಾಕರಣ ಸವರ್ಣದೀರ್ಘ ಸಂಧಿ….’
ಬೆಂಗಳೂರು,ಅ,18,2019(www.justkannada.in):  ಕನ್ನಡ ಮಣ್ಣಿನ ಘಮಲನ್ನು ಪಸರಿಸುತ್ತಾ ಇಂದಿನ ದಿನಮಾನಕ್ಕೆ ಸರಿ ಹೊಂದುವಂತಹ ಕಥೆಯನ್ನು ಹಾಸ್ಯ ರೂಪದಲ್ಲಿ ಹೇಳುತ್ತಾ ಬಂದಿರುವ ಹೊಸಬರ ಚಿತ್ರ ಸವರ್ಣದೀರ್ಘ ಸಂಧಿ ಸಿನಿ ಪ್ರೇಕ್ಷಕರ ಮನ ಗೆದ್ದಿದೆ.

ಸವರ್ಣದೀರ್ಘ ಸಂಧಿ ಚಿತ್ರದಲ್ಲಿ ಗಮನ ಸೆಳೆಯುವುದು ಪಾತ್ರಗಳ ಹೆಸರುಗಳು. ಕನ್ನಡ ಕವಿಯ ಹೆಸರನ್ನು ಇಟ್ಟುಕೊಂಡ ನಾಯಕ ಮುದ್ದಣ್ಣ (ವೀರೇಂದ್ರ ಶೆಟ್ಟಿ) ರೌಡಿ ಗ್ಯಾಂಗ್ ಕಟ್ಟಿಕೊಂಡಿರುತ್ತಾನೆ. ಸಮಾಜಕ್ಕೆ ಉಪಕಾರ ಮಾಡಲು ರೌಡಿಸಂ ಮಾಡುವುದು ಈ ತಂಡದ ವಿಶೇಷ.

ತಮ್ಮ ಕಾಯಕವನ್ನು ಪಾಸಿಟಿವ್ ರೌಡಿಸಂ ಎಂದು ಕರೆದುಕೊಳ್ಳುತ್ತಾರೆ.  ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ರಕ್ಷಿಸಲು ಇವರ ಗ್ಯಾಂಗ್ ನಲ್ಲಿ ಒಬ್ಬ ಲಾಯರ್ ಇರುತ್ತಾನೆ. ಫ್ಲಾಶ್ ಬ್ಯಾಕ್ ಒಂದರಲ್ಲಿ ಹಳ್ಳಿಯಲ್ಲಿ ಅನಾಥನಾಗಿ ಜೀತದಾಳು ಕೆಲಸ ಮಾಡುತ್ತಾ ಬೆಳೆಯುವ ನಾಯಕ ತಿಮ್ಮ (ಬಾಲ್ಯದ ಹೆಸರು) ಕೆಲಸ ಮಾಡುವ ಹುಡುಗನ ಜೊತೆ ಕನ್ನಡ ಮೇಷ್ಟ್ರ ಬಳಿ ವ್ಯಾಕರಣ ಪಾಠ ಕಲಿಯುವ ದೃಶ್ಯಗಳು ಮೂಡಿಬರುತ್ತವೆ.

ಮೇಷ್ಟ್ರ ಮಗಳು ಮನೋರಮೆಯ ಜೊತೆ ಸ್ನೇಹವೂ ಆಗುತ್ತದೆ. ಆದರೆ ಆಕಸ್ಮಿಕ ಘಟನೆಯಿಂದ ಮೇಷ್ಟ್ರ ಸಖ್ಯದಿಂದ ದೂರವಾಗಿ ನಗರ ಸೇರುತ್ತಾನೆ. ಅಲ್ಲಿ ಪೈಲ್ವಾನ್ ಮನೆ ಸೇರುತ್ತಾನೆ. ಇವನೇ ಮುಂದೆ ಮುದ್ದಣ್ಣ ಎಂದು ಪ್ರಖ್ಯಾತಿ ಪಡೆಯುತ್ತಾನೆ.  ಪೈಲ್ವಾನ್ ನಿಧನದ ನಂತರ ರೌಡಿಗಳ ಗ್ಯಾಂಗನ್ನು ಮುನ್ನಡೆಸುತ್ತಾನೆ.

ಇಲ್ಲಿ ನಾಯಕ ಅವಿದ್ಯಾವಂತನಾದರೂ ಕನ್ನಡ ವ್ಯಾಕರಣದಲ್ಲಿ ಉದ್ಧಾಮ ಪಂಡಿತ. ಕನ್ನಡ ಸಂಧಿ, ಪದ್ಯಗಳು ಅವನ ಬಾಯಲ್ಲಿ ಆಗಾಗ ಕೇಳಿ ಬರುತ್ತವೆ. ನಾಯಕನ ಊರಿಗೆ ಹೊಸದಾಗಿ ಬರುವ ಪೊಲೀಸ್ ಕಪಾಲೀಶ್ವರನ್ ಮುದ್ದಣ್ಣ ಗ್ಯಾಂಗ್‍ನ  ನಾಯಕ ಮುದ್ದಣ್ಣನನ್ನು ಹೇಗಾದರೂ ಮಾಡಿ ಜೈಲಿಗಟ್ಟಬೇಕು ಎಂದು ಶಪಥ ಮಾಡುತ್ತಾನೆ. ಇವರಿಬ್ಬರ ನಡುವಿನ ತಾಕಲಾಟವೇ ಚಿತ್ರದ ಹೂರಣ.

ಪರೋಪಕಾರಿ ರೌಡಿಸಂ, ಕನ್ನಡ ವ್ಯಾಕರಣ ಪಾಠಗಳ ನಡುವೆ ಪ್ರೀತಿಯ ಎಳೆಯೂ ಇದೆ. ನಾಯಕನ ಸಾಮಾಜಿಕ ಕೆಲಸವನ್ನು ನೋಡಿ ಗಾಯಕಿಯಾದ ನಾಯಕಿ ಅಮೃತವರ್ಷಿಣಿಗೆ (ಕೃಷ್ಣ) ಪ್ರೇಮಾಂಕುರವಾಗುತ್ತದೆ. ನಾಯಕನ ಕನ್ನಡ ಪ್ರೇಮವನ್ನು ಕಂಡು ಇನ್ನೂ ಹತ್ತಿರವಾಗುತ್ತಾಳೆ. ಆದರೆ ವೈರಿಗಳ ಕುತಂತ್ರದಿಂದ ನಾಯಕಿ ನಾಯಕನಿಂದ ದೂರವಾಗಬೇಕಾಗುತ್ತದೆ. ಇಲ್ಲಿ ಕಥೆ ತಿರುವು ಪಡೆದುಕೊಳ್ಳುತ್ತದೆ.

ನಾಯಕನ ವೈರಿಗಳಾರು, ನಾಯಕಿ ಏಕೆ ದೂರವಾಗುತ್ತಾಳೆ, ಮುದ್ದಣ್ಣನಿಗೆ ಆಕೆ ಸಿಗುತ್ತಾಳೆಯೇ, ನಾಯಕ ತನ್ನ ವೈರಿಗಳನ್ನು ಹೇಗೆ ಪತ್ತೆ ಹಚ್ಚುತ್ತಾನೆ ಎಂಬ ಕುತೂಹಲಕಾರಿ ಅಂಶಗಳಿಗೆ ಚಿತ್ರ ನೋಡಿಯೇ ಉತ್ತರ ಕಂಡುಕೊಳ್ಳಬೇಕು.

ಸನ್ನಿವೇಶಕ್ಕೆ ತಕ್ಕಂತೆ ನಾಯಕನ ಬಾಯಲ್ಲಿ ನುಡಿಯುವ ಸಂಧಿ, ಪದ್ಯಗಳು, ಪೊಲೀಸರನ್ನು ಗೇಲಿ ಮಾಡಲು ಅವುಗಳನ್ನು ಬಳಸಿಕೊಳ್ಳುವ ಪರಿ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ (ಸಂಭಾಷಣೆ ವೀರೇಂದ್ರ ಶೆಟ್ಟಿ).

ಸಂಭಾಷಣೆಗಳು ನೋಡುಗರ ಮನಸ್ಸಿಗೆ ಮುದ ನೀಡುತ್ತವೆ. ಅಲ್ಲದೆ ಕನ್ನಡ ವ್ಯಾಕರಣದ ಸವರ್ಣದೀರ್ಘ ಸಂಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಮೊದಲ ಚಿತ್ರದಲ್ಲಿಯೇ ನಾಯಕಿ ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ವ್ಯಾಕರಣ ಪಾಠ ಮಾಡುವ ಮೇಷ್ಟ್ರ ಪಾತ್ರವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಉಳಿದಂತೆ ಬರುವ ಪೊಲೀಸರು, ರೌಡಿಗಳು, ಇತರ ಪಾತ್ರಗಳೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪದ್ಮಜಾರಾವ್? ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಚಿತ್ರದ ಗಟ್ಟಿಯಾದ ಕಥಾನಕವನ್ನು ಇನ್ನೊಂದಷ್ಟು ಸೊಗಸಾಗಿ ತೋರಿಸಬಹುದಿತ್ತು. ಆದರೂ ನಿರೂಪಣೆಯಿಂದ ಸಿನಿರಸಿಕರನ್ನು ಸೆಳೆಯುತ್ತದೆ. ಮನೋಮೂರ್ತಿಯವರ ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ “ಕೊರಳಾದೆ ನಾ ಕೃಷ್ಣ ನಿನ್ನ ಕೈಯಲ್ಲಿ..” ಸೇರಿದಂತೆ ಇತರ ಗೀತೆಗಳು ಕೇಳಲು ಇಂಪಾಗಿವೆ.

ಚಿತ್ರದ ಮೊದಲಾರ್ಧದಲ್ಲಿ ಕಂಡು ಬರುವ ಮಲೆನಾಡ ಸೌಂದರ್ಯವನ್ನು ಕ್ಯಾಮರಾ ಆಕರ್ಷಕವಾಗಿ ಸೆರೆ ಹಿಡಿದಿದೆ (ಛಾಯಾಗ್ರಹಣ ಲೋಕನಾಥ್).

ವೀರೇಂದ್ರ ಶೆಟ್ಟಿ ಸವರ್ಣದೀರ್ಘ ಸಂಧಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.

ನಿರ್ಮಾಣದ ನೊಗವನ್ನೂ ಹೊತ್ತಿರುವ ವೀರೇಂದ್ರ ಅವರು ನಾಯಕನಾಗಿಯೂ ಗಮನ ಸೆಳೆದಿದ್ದಾರೆ. ಆದರೆ ಕೆಲವು ಸನ್ನಿವೇಶಗಳಿಗೆ ಜೀವ ತುಂಬಬಹುದಿತ್ತು ಎನಿಸದೆ ಇರದು. ಸಂಕೇತ್ ಶಿವಪ್ಪ ಸಂಕಲನ ಪ್ರೇಕ್ಷಕರನ್ನು ಕಟ್ಟಿಹಾಕುತ್ತದೆ.

“ಅದು ಸುವರ್ಣದೀರ್ಘ ಅಲ್ಲ ಸವರ್ಣದೀರ್ಘ ಸಂಧಿ” ಎಂದು ಚಿತ್ರದಲ್ಲಿ ಆಗಾಗ ಕೇಳಿ ಬರುವ ಸಾಲುಗಳು ಕನ್ನಡ ಪದಗಳನ್ನು ತಪ್ಪಾಗಿ ಉಚ್ಚರಿಸುವ ಮಂದಿಗೆ ತಿವಿದಂತಿದೆ.

ಮೊದಲ ಪ್ರಯತ್ನದಲ್ಲೇ ವೀರೇಂದ್ರ ಶೆಟ್ಟಿ ಯಶಸ್ವಿಯಾಗಿದ್ದಾರೆ. ನಕ್ಕು ಹಗುರಾಗಬೇಕು ಎನ್ನುವ ಮನಸುಗಳಿಗೆ ಚಿತ್ರ ಯಥೇಚ್ಛ ಸರಕನ್ನು ಒದಗಿಸುತ್ತದೆ. ಒಟ್ಟಿನಲ್ಲಿ ನಿರ್ಮಾಪಕರಾದ ವೀರೇಂದ್ರ ಶೆಟ್ಟಿ, ಮನೋ ಮೂರ್ತಿ, ಲುಷಿಂಗ್ಟನ್ ಮತ್ತು ಹೇಮಂತ್ ಕುಮಾರ್ ಹಾಕಿದ ದುಡ್ಡಿಗೆ ಮೋಸವೇನು ಆಗಲ್ಲ.

Key words: sweet – Kannada- love- grammar-savarnadirga sandhi

The post ನಗೆಯ ಬುಗ್ಗೆ, ನವಿರು ಪ್ರೇಮಕಥೆಯ ಕನ್ನಡ ವ್ಯಾಕರಣ ಸವರ್ಣದೀರ್ಘ ಸಂಧಿ….’ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.