Farmer leader Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಜಿಲ್ಲೆಯ ಕೆರೆಗಳ ಅಭಿವೃದ್ದಿಗೆ ಅನುದಾನ, ಕಬ್ಬಿಗೆ ಹೆಚ್ಚುವರಿ ದರ ನಿಗದಿಗೆ ಒತ್ತಾಯ: ಡಿಸಿಗೆ ಮನವಿ
ಮೈಸೂರು,ಸೆಪ್ಟಂಬರ್,9,2025 (www.justkannada.in): ಜಿಲ್ಲೆಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡುವ ಕುರಿತು ಮತ್ತು ಕಬ್ಬಿನ ಹೆಚ್ಚುವರಿ ದರ ನಿಗದಿಪಡಿಸಲು ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿಗೆ ರಾಜ್ಯ  ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರದ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ರಾಜ್ಯ  ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರದ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಶಿವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.

ಜಿಲ್ಲೆಯಲ್ಲಿ ನೂರಾರು ಕೆರೆಗಳಿದ್ದು ಕೆಲವು ಸ್ಥಳೀಯ ಬಲಾಢ್ಯರ ಕೆರೆ ಒತ್ತುವರಿ ಕಾರಣ ಕೆರೆಗಳಿಗೆ ನೀರಿನ ಮೂಲ ನಿಂತು ಹೋಗಿದೆ. ಆದ್ದರಿಂದ ಅಂತರ್ಜಲ ಕುಸಿತವಾಗುತ್ತಿದೆ. ಸುಮಾರು 80 ವರ್ಷಗಳಿಂದ ಕೆರೆಗಳಲ್ಲಿ ಹೂಳು ತುಂಬಿ ಅಂತರ್ಜಲ ಕುಸಿತವಾಗಿದೆ ಆದ್ದರಿಂದ ಹೂಳು ತುಂಬಿದ ಕೆರೆಗಳ ಮಣ್ಣನ್ನು ಬೇಸಿಗೆಯಲ್ಲಿ ರೈತರ ಜಮೀನಿಗೆ ಉಚಿತವಾಗಿ ಸರಬರಾಜು ಮಾಡಿದಲ್ಲಿ ಕೃಷಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇದರಿಂದ ಸರ್ಕಾರ ನೀಡುವ ಡಿ.ಎ.ಪಿ, ಯೂರಿಯಾ ಗೊಬ್ಬರವನ್ನು ರೈತರಿಗೆ ಉಚಿತವಾಗಿ ನೀಡಿದಂತಾಗುತ್ತದೆ ಹಾಗೂ ರೈತರು ರಸಗೊಬ್ಬರ ಔಷಧಿ ರಹಿತವಾದ ಆರೋಗ್ಯಕರವಾದ ಆಹಾರವನ್ನು ಬೆಳೆದು ಸಾರ್ವಜನಿಕರಿಗೆ ಪೂರೈಸಲು ಸಹಕಾರಿಯಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿ ಸಾರ್ವಜನಿಕರಿಗೆ ಹಣ ಉಳಿಸಿದಂತಾಗುತ್ತದೆ ಹಾಗೂ ಸರ್ಕಾರಕ್ಕೆ ಆರ್ಥಿಕ ನಷ್ಟ ತಪ್ಪಿಸಿದಂತಾಗುತ್ತದೆ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಹಾಗೂ ಅಂತರ್ಜಲ ವೃದ್ಧಿಯಾಗುತ್ತದೆ. ಏತ ನೀರಾವರಿ ಬದಲು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದಲ್ಲಿ ನೈಸರ್ಗಿಕವಾದ ಮಳೆ ನೀರನ್ನು ಕ್ರೋಡೀಕರಿಸಿ ಪ್ರತಿ ಜಿಲ್ಲೆಗೆ 40 ಟಿ.ಎಂ.ಸಿ ಮಳೆಯ ನೀರನ್ನು ಸಂಗ್ರಹಿಸಿದಂತಾಗುತ್ತದೆ.

ಒಟ್ಟು ರಾಜ್ಯದಲ್ಲಿ 1,250 ಟಿ.ಎಂ.ಸಿ ನೀರನ್ನು ಮಳೆಯಿಂದಾಗಿ ಸಂಗ್ರಹಿಸಬಹುದಾಗಿರುತ್ತದೆ. ರಾಜ್ಯದ 40 ಲಕ್ಷ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಅರಣ್ಯದ ಒಳಗೆ ಹಾಗೂ ಅಂಚಿನಲ್ಲಿ ಇರುವ ಕೆರೆಗಳ ಪುನರುಜ್ಜಿವನದಿಂದ ಕೆರೆಗಳಲ್ಲಿ ನೀರು ಸಂಗ್ರಹವಾಗಿ ಬೇಸಿಗೆಯಲ್ಲಿ ಪ್ರಾಣಿಗಳು ನಾಡಿಗೆ ಬರುವುದು ತಪ್ಪುತ್ತದೆ. ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಇರುವ ಕೆರೆಗಳಿಗೆ ಗ್ರಾಮಗಳ ಚರಂಡಿಯ ಗಲೀಜು ನೀರು ಹೋಗಿ ಜಾನುವಾರುಗಳಿಗೆ ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇದನ್ನು ಸರಿಪಡಿಸಬೇಕು. ಆದ್ದರಿಂದ ಕೆರೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷವಾಗಿ ಹೆಚ್ಚು ಅನುದಾನ ನೀಡಲು ಯೋಜನೆ ರೂಪಿಸುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಹಾಗೆಯೇ ಮೈಸೂರು ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಟನ್‌ ಗೆ 3295 ರೂಪಾಯಿಗಳನ್ನು ನೀಡುತ್ತಿದ್ದು, ಕಬ್ಬು ಉತ್ಪಾದನೆ ವೆಚ್ಚಕ್ಕೆ ಸರಿಯಾಗಿಲ್ಲ ಆದ್ದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ತಾವು ಕೂಡಲೇ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದು ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆಯನ್ನು ಎಸ್.ಎ.ಪಿ ನಿಗದಿಗೊಳಿಸಬೇಕೆಂದು ಕೋರುತ್ತೇವೆ. ತೋಟಗಾರಿಕೆ ಇಲಾಖೆಯಿಂದ ಬಾಳೆ ಬೆಳೆಗಾರರಿಗೆ ಬರುತ್ತಿದ್ದ ಅನುದಾನ ಕಳೆದ ಒಂದು ವರ್ಷದಿಂದ ಬರುತ್ತಿಲ್ಲ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲೆಯ ಬಾಳೆ ಬೆಳೆಗಾರರಿಗೆ ತೊಂದರೆ: ಸೂಕ್ತ ಕ್ರಮಕ್ಕೆ ಆಗ್ರಹ

ಇನ್ನು ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಿಂದ ಮೂರನೇ ದರ್ಜೆಯ ಬಾಳೆಕಾಯಿ ಮೈಸೂರು ಮಾರ್ಕೆಟ್‌ ಗೆ ಬರುತ್ತಿತ್ತು. ಇದರಿಂದ ಸ್ಥಳೀಯ ರೈತರಿಗೆ ನಷ್ಟವಾಗುತ್ತಿದೆ ಹಾಗೂ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಮೂರನೇ ದರ್ಜೆ ಬಾಳೆಹಣ್ಣು ಕಡಿಮೆ ದರಕ್ಕೆ ಹೋಗುವುದರಿಂದ ಗ್ರಾಹಕರು ಹೆಚ್ಚಾಗಿ ಅಂತರ್ ರಾಜ್ಯದಿಂದ ಬರುವ ಬಾಳೆಕಾಯಿ ತೆಗೆದುಕೊಳ್ಳುತ್ತಿರುವುದರಿಂದ ಮೈಸೂರು ಜಿಲ್ಲೆಯ ಬಾಳೆ ಬೆಳೆಗಾರರಿಗೆ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ನಿಮ್ಮ ಅಧ್ಯಕ್ಷತೆಯಲ್ಲಿ ಬಾಳೆ ಬೆಳೆಗಾರರು ಹಾಗೂ ವ್ಯಾಪಾರಸ್ಥರು ಅಧಿಕಾರಿಗಳ ಸಭೆಯನ್ನು ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂಬರುವ ನವೆಂಬರ್ ತಿಂಗಳ ಮೊದಲ ವಾರದಲ್ಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಕಳೆದ ವರ್ಷದಂತೆ ವಿಳಂಬ ನೀತಿ ಅನುಸರಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಬರಡನಪುರ ನಾಗರಾಜ್, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಮಾರ್ಬಳ್ಳಿ ನೀಲಕಂಠಪ್ಪ, ಬನ್ನೂರು ಸೂರಿ, ಕಾಟೂರು ನಾಗೇಶ್, ಗಿರೀಶ್, ಸಾತಗಳ್ಳಿ ಬಸವರಾಜ, ದೇವನೂರು ಮಹದೇವಪ್ಪ, ಸತೀಶ್, ಕೂರ್ಗಳ್ಳಿ ರವಿಕುಮಾರ್, ಶಿವಪ್ರಸಾದ್, ರಂಗರಾಜು, ವಾಜಮಂಗಲ ಮಹದೇವು, ನಾಗೇಂದ್ರ, ಕಮಲಮ್ಮ, ವಿಜಯಮ್ಮ, ಪುಷ್ಪಾ ಉಪಸ್ಥಿತರಿದ್ದರು.

Key words: Grants, development , lakes, sugarcane, Farmer Leader, appeal, Mysore DC

The post ಜಿಲ್ಲೆಯ ಕೆರೆಗಳ ಅಭಿವೃದ್ದಿಗೆ ಅನುದಾನ, ಕಬ್ಬಿಗೆ ಹೆಚ್ಚುವರಿ ದರ ನಿಗದಿಗೆ ಒತ್ತಾಯ: ಡಿಸಿಗೆ ಮನವಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸೆ.30 ರಂದು ಮೈಸೂರಿನ ಸಿಎಂ ನಿವಾಸದ ಬಳಿ ಧರಣಿ ಸತ್ಯಾಗ್ರಹಕ್ಕೆ ರೈತ ಮುಖಂಡರು ನಿರ್ಧಾರ
ಮೈಸೂರು,ಸೆಪ್ಟಂಬರ್,19,2024 (www.justkannada.in):  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆಪ್ಟಂಬರ್ 30 ರಂದು  ಮೈಸೂರಿನ ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಧರಣಿ ಸತ್ಯಾಗ್ರಹ ಮಾಡಲು ರೈತ ಮುಖಂಡರು ನಿರ್ಧರಿಸಿದ್ದಾರೆ.

ನಗರದ ಗನ್ ಹೌಸ್ ಬಳಿ ಇರುವ ಕುವೆಂಪು ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸಭೆ ನಡೆಯಿತು.  ಸಭೆಗು ಮುನ್ನ ರೈತರು  ವಿವಿಧ ಬೇಡಿಕೆಗಳ ಆಗ್ರಹಿಸಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬಿನ ಬೆಲೆ ಏರಿಕೆ, ಅಕ್ರಮ ಸಕ್ರಮ ವಿದ್ಯುತ್ ಸಂಪರ್ಕ  ಮರುಜಾರಿ, ಹಾಲಿನ ದರ ಪರಿಷ್ಕರಣೆ, ಕೃಷಿ ಬೆಳೆಗಳಿಗೆ  ಬೆಂಬಲ ಬೆಲೆ, ಕಾಡು ಪ್ರಾಣಿಗಳಿಂದ ಬೆಳೆ ಹಾನಿ, ಮಾನವ ಕಾಡುಪ್ರಾಣಿ ಸಂಘರ್ಷ ಸೇರಿದಂತೆ ಹಲವು ಬೇಡಿಕೆಗಳ ಆಗ್ರಹಿಸಿ ಹಲವಾರು ದಿನಗಳಿಂದ ಧರಣಿ, ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ತಲೆಗೂ ಹಾಕಿಕೊಳ್ಳುತ್ತಿಲ್ಲ, ಹಾಗಾಗಿ ಸೆ.30 ರಂದು ಮೈಸೂರಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾದ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ.

ಸಿಎಂ ಸಿದ್ದರಾಮಯ್ಯ ಅವರು ಬಂದ ಕಡೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುತ್ತದೆ. ನಮ್ಮ ಸಮಸ್ಯೆಗಳಿಗೆ ಕೂಡಲೇ ಸರ್ಕಾರ ಸ್ಪಂದಿಸಬೇಕು ಎಂದು ರೈತ ಮುಖಂಡರು ಅಗ್ರಹಿಸಿದರು. ಜಿಲ್ಲಾಡಳಿತ ಈ ಕೂಡಲೇ ಸರ್ಕಾರಕ್ಕೆ ನಮ್ಮ ಬೇಡಿಕೆ ಮುಟ್ಟಿಸಬೇಕು ಎಂದು ರೈತರು ಆಗ್ರಹಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜು, ಗೌರವ ಅಧ್ಯಕ್ಷ ಗೌಡ್ರು ಸಿದ್ದಲಿಂಗಪ್ಪ ಹಾಡ್ಯ ರವಿ, ಕೆರೆಹುಂಡಿ ರಾಜಣ್ಣ ಸೇರಿದಂತೆ ಹಲವು ರೈತರು ಭಾಗಿಯಾಗಿದ್ದರು.

Key words: Farmer leader, protest, Mysore , September 30

The post ಸೆ.30 ರಂದು ಮೈಸೂರಿನ ಸಿಎಂ ನಿವಾಸದ ಬಳಿ ಧರಣಿ ಸತ್ಯಾಗ್ರಹಕ್ಕೆ ರೈತ ಮುಖಂಡರು ನಿರ್ಧಾರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಾವೇರಿ ಹೋರಾಟ: ನಾಳೆ ಸಿಎಂ ಮನೆಗೆ ಮುತ್ತಿಗೆ- ರೈತ ಮುಖಂಡ ಕುರುಬೂರು ಶಾಂತಕುಮಾರ್.
ಬೆಂಗಳೂರು,ಸೆಪ್ಟಂಬರ್,28,2023(www.justkannada.in):  ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನ ನಿಲ್ಲಿಸುವಂತೆ ಆಗ್ರಹಿಸಿ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.  ಇತ್ತ ರಾಜ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲೂ ಹೋರಾಟ ನಡೆಯುತ್ತಿದ್ದು ನಾಳೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕುರುಬೂರು ಶಾಂತಕುಮಾರ್, ಕಾವೇರಿ ನೀರಿಗಾಗಿ ಆಗ್ರಹಿಸಿ  ನಾಳೆ ರಾಷ್ಟ್ರೀಯ ರಾಜ್ಯ ಹೆದ್ದಾರಿ ಬಂದ್ ಚಳುವಳಿ ಮಾಡುತ್ತೇವೆ. ನೀರು ಬಿಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದವು.  ಆದರೂ ಸಹ ಸರ್ಕಾರ ತಮಿಳುನಾಡಿಗೆ  3 ಸಾವಿರ ಕ್ಯೂಸೆಕ್ ನೀರು  ಹರಿಸುತ್ತಿದೆ. ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ.  ನಾಳೆ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುತ್ತದೆ.  ರಾಜ್ಯಾದ್ಯಂತ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ತಿಳಿಸಿದರು.

Key words: Cauvery –fight- CM’s -house –tomorrow-  Farmer leader -Kuruburu Shanthakumar.

The post ಕಾವೇರಿ ಹೋರಾಟ: ನಾಳೆ ಸಿಎಂ ಮನೆಗೆ ಮುತ್ತಿಗೆ- ರೈತ ಮುಖಂಡ ಕುರುಬೂರು ಶಾಂತಕುಮಾರ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸರ್ಕಾರದಿಂದ ಚಳುವಳಿಗಾರರನ್ನ ಹಿಮ್ಮೆಟ್ಟಿಸುವ ಹುನ್ನಾರ: ನಾವು ಯಾವುದೇ ಕಾರಣಕ್ಕೂ ಕುಗ್ಗಲ್ಲ- ಬಡಗಲಪುರ ನಾಗೇಂದ್ರ.
ಮೈಸೂರು,ಜೂನ್,2,2022(www.justkannada.in): ನಮ್ಮ ಹಳೆ ಹೋರಾಟಗಾರ ಸ್ನೇಹಿತನನ್ನ ಬಳಸಿಕೊಂಡು ಸರ್ಕಾರದಿಂದ ಚಳುವಳಿಗಾರರನ್ನ ಹಿಮ್ಮೆಟ್ಟಿಸುವ ಹುನ್ನಾರ ನಡೀತ ಇದೆ. ನಾವು ಯಾವುದೇ ಕಾರಣಕ್ಕೂ ಕುಗ್ಗಲ್ಲ ,ನಮಗೆ ನೈತಿಕ ಬಲ ಇದೆ.  ಸ್ಪಷ್ಟತೆಯಿಂದ ನಾವು ಎದೆಗುಂದದೆ ಚಳುವಳಿಗಳನ್ನ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತರ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಬಡಗಲಪುರ ನಾಗೇಂದ್ರ,  ರಾಕೇಶ್ ಟಿಕಾಯತ್ ರವರ ಮೇಲಿನ ಹಲ್ಲೆ ವಿಶಾದಕರ. ದೆಹಲಿಯಲ್ಲಿ ನಡೆದ ರೈತ ಆಂದೋಲನ ಯಶಸ್ವಿ ಆಗಿದೆ. ಈ ಉದ್ದೇಶಕ್ಕೆ ಕೇಂದ್ರ  ಸರ್ಕಾರದ   ವೈಪಲ್ಯಗಳನ್ನ ಮರೆಮಾಚುತ್ತಿದೆ. ನಾವು ಸರ್ಕಾರ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಕುತಂತ್ರಕ್ಕೆ ಬಲಿಯಾಗಲ್ಲ. ಎದೆಗುಂದದೆ ಚಳುವಳಿಗಳನ್ನ ಮಾಡುತ್ತೇವೆ ಎಂದರು.

ಮೌಲ್ಯಯುತವಾದ ಹಸಿರು ಟವಲ್ ಅನ್ನು ದುರುಪಯೋಗ ಮಾಡಿಕೊಳ್ಳುತ್ತಿರವ ವ್ಯಕ್ತಿಗಳು ಹಾಗೂ ಗುಂಪನ್ನ ದೂರ ಇಟ್ಟು  ಹೋರಾಟ ಮುಂದುವರೆಸುತ್ತೇವೆ. ನಮ್ಮ ಗುರುಗಳು ನಂಜುಂಡ ಸ್ವಾಮಿ ಅವರು ಹೇಳಿದ್ರು . ಹಸಿರು ಟವೆಲ್  ಒಂದು ದಿನ ಗಾಂಧಿ ಟೋಪಿ ಅಗುತ್ತೆ ಅಂತ. ಕಳ್ಳರು ,ಸುಳ್ಳರು ಧಗಾಕೋರರು ನೀತಿಗೆಟ್ಟೋರೆಲ್ಲಾ ಹಸಿರು ಟವೆಲ್ ಹಾಕೋಕೆ ಶುರು ಮಾಡಿದ್ದಾರೆ. ಅದಕ್ಕಾಗಿ ನಾವೇ ಒಂದು ಲೋಗೋ ರೆಡಿ ಮಾಡಿಕೊಂಡಿದ್ದೇವೆ. ಇನ್ನು ಮುಂದೆ ಇದಿಕ್ಕೆಲ್ಲಾ ತಿಲಾಂಜಲಿ ಹಾಡುತ್ತೇವೆ. ಮಹಿಳೆ ,ವಿದ್ಯಾರ್ಥಿ ಸೇರಿದಂತೆ ಯುವಕರ ನೈತಿಕ ಬಲವನ್ನ ಕಟ್ಟುತ್ತೇವೆ ಎಂದರು.

ಸಂಘ ಪರಿವಾರದವರ ಕೈಗೊಂಬೆ ಆಗಬೇಡಿ ,ಈ ನಾಡಿನ ಸಾಹಿತಿಗಳ ಮಾತಿಗೆ ಗೌರವ ಕೊಡಿ .

ಪಠ್ಯ ಪರಿಷ್ಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಡಗಲಪುರ ನಾಗೇಂದ್ರ, ಸರ್ಕಾರ ಬಂಡತನದಿಂದ ವರ್ತಿಸುತ್ತಿದೆ. ನೀವು ಏನೇ ಕೂಗಾಡಿಕೊಳ್ಳಿ ನಮ್ಮ ಯೋಜನೆ ಜಾರಿಗೆ ತಂದೇ ತರುತ್ತೇವೆ ಎಂದು ಬಂಡಾಟಕ್ಕೆ ಬಿದ್ದಿದೆ. ಮುಂದೊಂದು ದಿನ ಮಾಡಿದ್ದುಣ್ಣೋ ಮಾರಾಯ ಅಂತ ಸರ್ಕಾರ ಇದನ್ನ ಅನುಭವಿಸಬೇಕಾಗುತ್ತೆ. ಬಸವರಾಜ ಬೊಮ್ಮಾಯಿ ಅವರು ಉತ್ತಮ ಮನೆತನದಿಂದ ಬಂದವರು. ಸಂಘ ಪರಿವಾರದವರ ಕೈಗೊಂಬೆ ಆಗಬೇಡಿ ,ಈ ನಾಡಿನ ಸಾಹಿತಿಗಳ ಮಾತಿಗೆ ಗೌರವ ಕೊಡಿ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಪ್ರತಾಪ್ ಸಿಂಹ ವಿರುದ್ದ ಕಿಡಿಕಾರಿದ ಬಡಗಲಪುರ ನಾಗೇಂದ್ರ, ನಮ್ಮ ಪ್ರತಾಪ್ ಸಿಂಹ ಅಪ್ರಭುತ್ವಿತ ವ್ಯಕ್ತಿ, ತಿಳುವಳಿಕೆ ಇಲ್ಲ. ಕೈಕಾಲು ನೆಟ್ಟಗಿಲ್ಲ ,ತಲೆನೂ ನೆಟ್ಟಗಿಲ್ಲ ಬೌದ್ದಿಕ ದಿವಾಳಿತನ ತೋರಿಸುತ್ತಿದ್ದಾರೆ. ಪಠ್ಯ ಪುಸ್ತಕ ವಿರೋಧ ಮಾಡುವ ಸಾಹಿತಿಗಳನ್ನ  ಕಾಂಗ್ರೆಸ್ ಏಜೇಂಟ್ ರಂತೆ ಬಿಂಬಿಸ್ತಾ ಇದ್ದಾರೆ. ಅವನಿಗೆ ಎಷ್ಟು ವಯಸ್ಸೋ ಗೊತ್ತಿಲ್ಲಾ , ಸಾಹಿತಿಗಳ ಬಗ್ಗೆ ಅವರ ಹೋರಾಟಗಳ ಬಗ್ಗೆ ಗೊತ್ತಿಲ್ಲಾ ಅವನಿಗೆ. ಕಾಂಗ್ರೇಸ್ ಏನ್ ಮಾಡಿತ್ತೋ ಅದರ ಎರಡರಷ್ಟು ಕೆಟ್ಟದನ್ನ ಮಾಡಿದ್ದಕ್ಕೆ ಬಿಜೆಪಿಯನ್ನ ವಿರೋಧಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸಭಾ ಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಡಗಲಪುರ ನಾಗೇಂದ್ರ,  ಗುಂಪು ಗುಂಪಾಗಿ ಎಲ್ಲಾ ಮತಗಳನ್ನ ಕೇಳ್ತಿದ್ದಾರೆ. ನಾನು ಇದುವರೆಗೆ ಒಂದೂವರೆ ಲಕ್ಷ ಮತದಾರರನ್ನ ಭೇಟಿ ಮಾಡಿದ್ದೇವೆ. ನಾನು ಕೂಡ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದೇನೆ. ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್ ಇದೆ. ಮೊದಲನೇ ಪ್ರಾಶಸ್ತ್ಯ ದಲ್ಲೇ ಗೆಲ್ಲುವ ವಿಶ್ವಾಸವಿದೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: government-against-mysore-farmer leader- Badagalpur Nagendra.

The post ಸರ್ಕಾರದಿಂದ ಚಳುವಳಿಗಾರರನ್ನ ಹಿಮ್ಮೆಟ್ಟಿಸುವ ಹುನ್ನಾರ: ನಾವು ಯಾವುದೇ ಕಾರಣಕ್ಕೂ ಕುಗ್ಗಲ್ಲ- ಬಡಗಲಪುರ ನಾಗೇಂದ್ರ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪತ್ರಕರ್ತರ ಸೋಗಿನಲ್ಲಿ ಬಂದು ಹಲ್ಲೆ: ಕಿಡಿಗೇಡಿಗಳ ವಿರುದ್ಧ ಕಠಿಣ ಶಿಕ್ಷೆಯಾಗಬೇಕು- ರಾಕೇಶ್ ಟಿಕಾಯತ್ ಆಗ್ರಹ.
ಬೆಂಗಳೂರು,ಮೇ,30,2022(www.justkannada.in): ಪತ್ರಿಕಾಗೋಷ್ಠಿ ವೇಳೆ ತಮ್ಮ ಮೇಲೆ ಮಸಿ ಎರಚಿ ಹಲ್ಲೆಗೆ ಮುಂದಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತನಾಯಕ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ.

ಗಾಂಧಿಭವನದಲ್ಲಿ ಮಸಿ ಎರಚಿ ಹಲ್ಲೆ ನಡೆಸಿದ ಬೆನ್ನಲ್ಲೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಾಕೇಶ್ ಟಿಕಾಯತ್, ಪತ್ರಕರ್ತರ ಸೋಗಿನಲ್ಲಿ ಬಂದು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಕಿಡಿಗೇಡಿಗಳು ನಮ್ಮನ್ನ ಟಾರ್ಗೆಟ್ ಮಾಡಿದ್ದಾರೆ.ನೇರಗುರಿ ನಾವೇ.  ಎಲ್ಲರಿಗೂ ತಮ್ಮ ವಿಚಾರ ಹೇಳುವ ಅಧಿಕಾರ ಇದೆ. ಹಲ್ಲೆ ಮಾಡಿದವರಿಗೆ ಮುಲಾಜಿಲ್ಲದೇ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ರಾಕೇಶ್ ಟಿಕಾಯತ್ ಗೆ ಮಸಿ ಬಳಿದ ಘಟನೆ ಖಂಡಿಸಿ ನಾಳೆ ಕಪ್ಪುಪಟ್ಟಿ  ಧರಿಸಿ ರಾಜ್ಯಾದ್ಯಂತ ಪ್ರತಿಭಟನೆ  ನಿರ್ಧರಿಸಲಾಗಿದೆ. ಇನ್ನು ಘಟನೆ ಸಂಬಂಧ ಭರತ್ ಶೆಟ್ಟಿ ಸೇರಿ ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದು ಹೈಗ್ರೌಂಡ್ಸ್ ಪೊಲೀಶ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

Key words: harsh punishment –Farmer leader-Rakesh Tikayat

The post ಪತ್ರಕರ್ತರ ಸೋಗಿನಲ್ಲಿ ಬಂದು ಹಲ್ಲೆ: ಕಿಡಿಗೇಡಿಗಳ ವಿರುದ್ಧ ಕಠಿಣ ಶಿಕ್ಷೆಯಾಗಬೇಕು- ರಾಕೇಶ್ ಟಿಕಾಯತ್ ಆಗ್ರಹ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಮ್ಮ ಹೋರಾಟ ಹಿಂಪಡೆಯುವುದಿಲ್ಲ- ರೈತನಾಯಕ ರಾಕೇಶ್ ಟಿಕಾಯಿತ್ ಹೀಗೆ ಹೇಳಿದ್ದೇಕೆ..?
ನವದೆಹಲಿ,ನವೆಂಬರ್,19,2021(www.justkannada.in):  ವಿವಾದಿತ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ರೈತರು ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಜಗ್ಗದ ರೈತ ನಾಯಕ ರಾಕೇಶ್ ಟಿಕಾಯತ್ ನಮ್ಮ ಹೋರಾಟ ಹಿಂಪಡೆಯುವುದಿಲ್ಲ ಎಂದಿದ್ದಾರೆ.

ಹೌದು, ಸಂಸತ್ ನಲ್ಲಿ ಕಾಯ್ದೆಗಳನ್ನ ರದ್ದುಪಡಿಸಬೇಕು. ಸಂಸತ್ ನಲ್ಲಿ ಕಾಯ್ದೆ ರದ್ದುಪಡಿಸುವ ದಿನಕ್ಕೆ ಕಾಯುತ್ತಿದ್ದೇವೆ. ಎಂಎಸ್ ಪಿ ಬಗ್ಗೆ ನಿರ್ಧಾರ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು  ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

ಹಾಗೆಯೇ ಕೇಂದ್ರ ಸರ್ಕಾರ ರೈತರ ಇತರ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಚರ್ಚಿಸಬೇಕು ಎಂದು ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ.

Key words: Our –protest- not- withdrawn-Farmer leader- Rakesh Tikayith

The post ನಮ್ಮ ಹೋರಾಟ ಹಿಂಪಡೆಯುವುದಿಲ್ಲ- ರೈತನಾಯಕ ರಾಕೇಶ್ ಟಿಕಾಯಿತ್ ಹೀಗೆ ಹೇಳಿದ್ದೇಕೆ..? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಗೂಂಡಾ ಕಾಯ್ದೆ ಅಡಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನ ಬಂಧನಕ್ಕೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಗ್ರಹ.
ಮೈಸೂರು,ಅಕ್ಟೋಬರ್,4,2021(www.justkannada.in):  ಉತ್ತರಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಸಾವು ಹಿನ್ನೆಲೆ ಘಟನೆಯನ್ನ  ಕರ್ನಾಟಕ ರಾಜ್ಯ ಕಬ್ಬು ಬೆಳಗಾರರ ಸಂಘ ಖಂಡಿಸಿದ್ದು ಘಟನೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅವರ ಪುತ್ರನೇ ನೇರ ಕಾರಣ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ರೈತಮುಖಂಡ ಕುರುಬೂರು ಶಾಂತಕುಮಾರ್, ಅಧಿಕಾರದ ಮದದಲ್ಲಿ ಬಿಜೆಪಿ ಗೂಂಡಾವರ್ತನೆ ಮಾಡುತ್ತಿದೆ. ಕೂಡಲೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರನ್ನ ಸಂಪುಟದಿಂದ ವಜಾ ಮಾಡಬೇಕು. ಗೂಂಡಾಕಾಯ್ದೆ ಅಡಿ ಕೇಂದ್ರ ಗೃಹ ಖಾತೆ ರಾಜ್ಯಸಚಿವರ ಪುತ್ರನನ್ನು ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ನಿನ್ನೆ ಉತ್ತರಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿದ ಘಟನೆ ನಡೆದಿದ್ದು ಘಟನೆಯ ವೇಳೆ ಕೇಂದ್ ಗೃಹ ಖಾತೆ ರಾಜ್ಯ ಸಚಿವ ಅಜಯ್​ ಕುಮಾರ್​ ಮಿಶ್ರಾ ಅವರ ಪುತ್ರ ಇದ್ದರು ಎನ್ನಲಾಗದೆ.

Key words: Farmer leader- Kurubur Shanthakumar –demands- arrest – Union Home Minister’s- son

The post ಗೂಂಡಾ ಕಾಯ್ದೆ ಅಡಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನ  ಬಂಧನಕ್ಕೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಗ್ರಹ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯದಿದ್ರೆ ಜನ ನಿಮ್ಮನ್ನ ಕಸದ ತೊಟ್ಟಿಗೆ ಹಾಕ್ತಾರೆ- ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರ ಶೇಖರ್ ಎಚ್ಚರಿಕೆ.
ಬೆಂಗಳೂರು,ಸೆಪ್ಟಂಬರ್,27,2021(www.justkannada.in):  ನಿಮಗೆ ಅಧಿಕಾರದ ಆಸೆ ಇದ್ದರೆ ಕೃಷಿ ತಿದ್ಧುಪಡಿ ಕಾಯ್ದೆಯನ್ನ ಹಿಂಪಡೆಯಿರಿ. ಇಲ್ಲದಿದ್ರೆ ಜನರು ನಿಮ್ಮನ್ನ ಕಸದ ತೊಟ್ಟಿಗೆ ಎಸೆಯುತ್ತಾರೆ ಎಂದು  ಕೇಂದ್ರ ಸರ್ಕಾರಕ್ಕೆ  ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಈ ಮಧ್ಯೆ ನಗರದ ಟೌನ್ ಹಾಲ್ ನಿಂದ ರೈತರ ಪ್ರತಿಭಟನಾ ರ್ಯಾಲಿ ಶುರವಾಗಿದ್ದು ಫ್ರೀಡಂಪಾರ್ಕ್ ಗೆ ತಲುಪಲಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್, ಸರ್ಕಾರ ಬಂದ್ ವಿಫಲಗೊಳಿಸಲು ಯತ್ನಿಸುತ್ತಿದೆ.  ಹೀಗಾಗಿ ಕೆಎಸ್ ಆರ್ ಟಿಸಿ, ಬಿಎಂಟಿಸಿಬಸ್ ಗಳನ್ನ ಓಡಿಸುತ್ತಿದ್ದಾರೆ. ದೇಶಾಧ್ಯಂತ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಧ್ವನಿ ಎತ್ತಿದ್ದಾರೆ . ಈ ಧ್ವನಿ ಪ್ರಧಾನಿ ಮೋದಿ ಕಿವಿಗೆ ಕೇಳಿಸಬೇಕು. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ಸಹಕಾರ ನೀಡಬೇಕು.  ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರತಿಭಟನೆಗೆ ಕೆಆರ್ ಪುರ ಸಂತೆ ವ್ಯಾಪಾರಗಳ ಒಕ್ಕೂಟ ಸಾಥ್ ಕೊಟ್ಟಿದ್ದು  ಕೆಆರ್ ಪುರ ಸಂತೆ ಮಾರುಕಟ್ಟೆ ಅಧ್ಯಕ್ಷ ಎಲೆ ಶ್ರೀನಿವಾಸ್ ನೇತೃತ್ವದಲ್ಲಿ ಗೋಣಿ ಚೀಲ ತೊಟ್ಟು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ರ್ಯಾಲಿ ನಿಲ್ಲಿಸಲು ಪೊಲೀಸರು ಮುಂದಾದರು. ಕೆ.ಆರ್.ಪುರ ಮಾರ್ಕೆಟ್ ನಿಂದ 100 ಮೀ. ಸಾಗಿದ ರ್ಯಾಲಿ ಕೆ.ಆರ್.ಪುರ ಬಿಬಿಎಂಪಿ ಕಚೇರಿ ಮುಂದೆ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಭಟನೆಗೆ ಮುಂದಾದರು.

Key words:  Agricultural- Amendment- Act – back –farmer leader-Kodihalli ChandraShekhar

ENGLISH SUMMARY…

“People will ditch you if you won’t withdraw the amended agri bill: Farmer leader Kodihalli Chandrashekar warns govt.

Bengaluru, Sept. 27, 2021 (www.justkannada.in): “If you want power, withdraw the amended agriculture bill, otherwise people will ditch you,” farmer leader Kodihalli Chandrashekar warned the Govt. of India.

A call for Bharath Bundh has been given opposing the amended agriculture bill of the Govt. of India, which is supported by several farmers’ organizations and the Congress party. The protest march in Bengaluru commenced from the Town Hall and will conclude at Freedom Park.

Speaking on the occasion, farmer leader Kodihalli Chandrashekar said that the government is attempting to make the bundh a failure. “That is why it is running KSRTC and BMTC buses. Farmers across the country are opposing the amended agriculture bill. This voice should reach Modi. We are protesting peacefully, and the government should cooperate, it should withdraw the amended bill,” he demanded.

The K.R. Puram Traders Federation has extended its support to the protest. The protestors demonstrated under the leadership of K.R. Puram Regulated Market President Yele Srinivas, wearing gunny bags.

Keywords: Farmers rally/ Bharath Bundh/ Kodihalli Chandrashekar/ ditch

The post ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯದಿದ್ರೆ ಜನ ನಿಮ್ಮನ್ನ ಕಸದ ತೊಟ್ಟಿಗೆ ಹಾಕ್ತಾರೆ- ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರ ಶೇಖರ್ ಎಚ್ಚರಿಕೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೇಂದ್ರ ಸರ್ಕಾರ ಮಾತುಕತೆಗೆ ಕರೆದರೆ ಸಿದ್ಧ- ರೈತ ಮುಖಂಡ ರಾಕೇಶ್ ಟಿಕಾಯತ್.
ನವದೆಹಲಿ,ಸೆಪ್ಟಂಬರ್,27,2021(www.justkannada.in):  ಕೇಂದ್ರದ ಕೃಷಿ ತಿದ್ಧುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ರೈತರ ಹೋರಾಟದ ಕಿಚ್ಚು ಜೋರಾಗಿದ್ದು, ಇಂದು ಭಾರತ್ ಬಂದ್ ಗೆ ಕರೆ ನೀಡಿ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಗಾಜಿಪುರ ಗಡಿಯಲ್ಲಿ ಮಾತನಾಡಿರುವ ರೈತಮುಖಂಡ ರಾಕೇಶ್ ಟಿಕಾಯತ್, ಕೃಷಿ ತಿದ್ಧುಪಡಿ ಕಾಯ್ದೆಯನ್ನ ಸರ್ಕಾರ ಹಿಂಪಡೆಯಲೇಬೇಕು. ಕಾಯ್ದೆ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಕೇಂಧ್ರ ಸರ್ಕಾರ ಮಾತುಕತೆಗೆ ಕರೆದರೆ ನಾವು ಸಿದ್ದರಿದ್ದೇವೆ ಎಂದು  ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

ಹಾಗೆಯೇ ಭಾರತ್ ಬಂದ್ ಗೆ ಬೆಂಬಲಿಸಿರುವ ವಿಪಕ್ಷಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.  ಭಾರತ್ ಬಂದ್ ಬಿಸಿ ರಾಷ್ಟ್ರರಾಜಧಾನಿ ನವದೆಹಲಿಗೆ ತಟ್ಟಿದ್ದು, ದೆಹಲಿ ಪ್ರವೇಶಿಸುವ ಗಡಿಗಳನ್ನ ಬಂದ್ ಮಾಡಲಾಗಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ ಎನ್ನಲಾಗಿದೆ.

Key words:  central government -ready – talks-farmer leader -Rakesh Tikayat.

The post ಕೇಂದ್ರ ಸರ್ಕಾರ ಮಾತುಕತೆಗೆ ಕರೆದರೆ ಸಿದ್ಧ- ರೈತ ಮುಖಂಡ ರಾಕೇಶ್ ಟಿಕಾಯತ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೆಆರ್ ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡುಗಡೆಗೆ ಬಡಗಲಪುರ ನಾಗೇಂದ್ರ ಒತ್ತಾಯ.
ಮೈಸೂರು,ಜೂನ್,25,2021(www.justkannada.in):  ಕೆ.ಆರ್‌.ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಬಡಗಲಪುರ ನಾಗೇಂದ್ರ,  ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬಿನ ಬೆಳೆಯ ರಕ್ಷಣೆಗೆ ಮುಂದಾಗಬೇಕು. ಮಂಡ್ಯ ಜಿಲ್ಲೆಯಾದ್ಯಂತ ಕಬ್ಬಿನ ಬೆಳೆ ಒಣಗುತ್ತಿದೆ. ಬೆಳೆ ರಕ್ಷಣೆಗಾಗಿ ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿದ್ದರೂ ಇದುವರೆಗೂ ಬಿಡುಗಡೆ ಮಾಡಿಲ್ಲ. ಪರಿಣಾಮ ಬೆಳೆದು ನಿಂತಿರುವ ಕಬ್ಬು ಒಣಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ಇದೀಗ 90 ಅಡಿಗೇರಿದೆ. ಹಾಗಾಗಿ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೇ ಅಹೋರಾತ್ರಿ ಧರಣಿ ಪ್ರತಿಭಟನೆ ‌ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೆ‌.ಆರ್‌.ಎಸ್ ಜಲಾಶಯವನ್ನು ಆಶ್ರಯಿಸಿರುವ ಭಾಗದ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆಯಾಗಿದೆ. ನಿರೀಕ್ಷಿತ  ಮಳೆಯಾಗದ ಪರಿಣಾಮ ಕೆರೆ ಕಟ್ಟೆಗಳು ಒಣಗಲಾರಂಭಿಸಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಾಗಾಗಿ ಕೆ.ಆರ್‌‌.ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡಿ ಕೆರೆ ಕಟ್ಟೆಗಳನ್ನು ತುಂಬಿಸಲು ಅನುಕೂಲ ಮಾಡಿಕೊಡಬೇಕು ಎಂದು ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಕಬ್ಬು ಬೆಳೆಗಾರರನ್ನು ನಿರ್ಲಕ್ಷ್ಯ ಮಾಡಿದೆ. ಸರ್ಕಾರ ಕಬ್ಬಿಗೆ ವೈಜ್ಞಾನಿಕ ದರ ನಿಗಧಿ ಪಡಿಸಬೇಕು. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಬೇಕು. ಕಬ್ಬು ಸಾಗಣೆ ಮಾಡಿರುವ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾಗಿರುವ ಬಾಕಿ ಹಣದ ಪಾವತಿಗೆ ಮುಂದಾಗಬೇಕು. ಕಟಾವಿಗೆ ಬಂದಿರುವ ಕಬ್ಬನ್ನು ಅರೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಡಗಲಪುರ ನಾಗೇಂದ್ರ ಹೇಳಿದರು.

Key words: mysore- farmer leader- Badalepura Nagendra- demands -release -water – KRS reservoir

The post ಕೆಆರ್ ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡುಗಡೆಗೆ ಬಡಗಲಪುರ ನಾಗೇಂದ್ರ ಒತ್ತಾಯ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.