Dubai | Just Kannada - Daily News Updates
ದುಬೈ: ಕನ್ನಡಿಗರ ಕೂಟದ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ.ಕೆ. ಪುನರಾಯ್ಕೆ
ದುಬೈ,ಏಪ್ರಿಲ್,2,2026 (www.justkannada.in): ಮಧ್ಯಪ್ರಾಚ್ಯದ ಪ್ರತಿಷ್ಠಿತ ಹಾಗೂ ಹಿರಿಯ ಕನ್ನಡ ಸಂಘಟನೆಗಳಲ್ಲಿ ಒಂದಾದ ‘ಕನ್ನಡಿಗರ ಕೂಟ, ದುಬೈ’ ಸಂಘಟನೆಯ 2026-2028ನೇ ಸಾಲಿನ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ.ಕೆ. ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘಟನೆಯ ಸ್ಥಾಪಕ ಸದಸ್ಯರು, ಸಲಹಾ ಮಂಡಳಿ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಪ್ರಕ್ರಿಯೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಏಕಮತದಿಂದ ಕೈಗೊಳ್ಳಲಾಯಿತು.
ಕನ್ನಡಿಗರ ಕೂಟ, ದುಬೈ ಕಳೆದ 24 ವರ್ಷಗಳಿಂದ ದುಬೈಯಲ್ಲಿ ಪ್ರತಿ ನವೆಂಬರ್ 2ನೇ ವಾರದಲ್ಲಿ “ಕರ್ನಾಟಕ ರಾಜ್ಯೋತ್ಸವ’ವನ್ನು ದುಬೈಯಲ್ಲಿ ನಿರಂತರವಾಗಿ ಆಚರಿಸುತ್ತಿರುವ ಏಕೈಕ ಕನ್ನಡ ಸಂಘಟನೆ ಎಂಬ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಜೊತೆಗೆ, ದುಬೈ ಮತ್ತು ಕರ್ನಾಟಕದಲ್ಲಿ ಅನೇಕ ಸಂಗೀತ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು, ರಕ್ತದಾನ ಶಿಬಿರ, ಇಫ್ತಾರ್ ಕೂಟ. ಹಿರಿಯ ಸಾಧಕರಿಗೆ ಗೌರವ ಸನ್ಮಾನ ಸಮಾರಂಭ ಹೀಗೆ ನೂರಾರು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿ, ಕನ್ನಡಿಗರ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಹಾಗೂ ಸಂಸ್ಕೃತಿ ಸಂರಕ್ಷಣೆ, ಸಮುದಾಯ ಸೇವೆ ಮತ್ತು ಜವಾಬ್ದಾರಿಯುತ ಕಾರ್ಯಕ್ರಮ ನಿರ್ವಹಣೆಗೆ ಬದ್ಧವಾಗಿದೆ.
ಪುನರ್ ಆಯ್ಕೆಯ ನಂತರ ಅಧ್ಯಕ್ಷ ಅರುಣ್ ಕುಮಾರ್ ಅವರು ಸಮಿತಿ ಮತ್ತು ಸಲಹಾ ಸದಸ್ಯರಿಗೆ ತಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು. ಅವರು ಸಂಸ್ಥೆಯ ಸ್ಥಾಪಕರು ನಿರ್ಮಿಸಿದ ಪರಂಪರೆಯನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಭರವಸೆ ನೀಡಿದರು. ಅವರು 2026ರ ಏಪ್ರಿಲ್ ತಿಂಗಳಲ್ಲಿ ಸಮಿತಿ ವಿಸ್ತರಣೆ ನಡೆಯಲಿದ್ದು, ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು “ಸಂಗೀತ ಸೌರಭ 2026” ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು U.A.E ನಿಯಮಾವಳಿ ಮತ್ತು ಮಾರ್ಗಸೂಚಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಘೋಷಿಸಲಾಗುವುದೆಂದು ತಿಳಿಸಿದರು.
‘ಕರ್ನಾಟಕ ರಾಜ್ಯೋತ್ಸವ-2026’ ದಿನಾಂಕ ಪ್ರಕಟ
ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ದುಬೈನಲ್ಲಿ ನಿರಂತರವಾಗಿ ರಾಜ್ಯೋತ್ಸವ ಆಚರಿಸುತ್ತಿರುವ ಪರಂಪರೆಯನ್ನು ಮುಂದುವರಿಸಿರುವ ಈ ಸಂಘಟನೆಯು, ತನ್ನ ಸುದೀರ್ಘ ಸಾಂಸ್ಕೃತಿಕ ಪಯಣದಲ್ಲಿ ನಾಡಿನ ಸಾಹಿತಿಗಳು, ಸಾಧಕರು, ಸಂಗೀತ ದಿಗ್ಗಜರು, ಖ್ಯಾತ ನಟ-ನಟಿಯರು, ರಾಜಕೀಯ ಮುತ್ಸದ್ದಿಗಳು ಹಾಗೂ ಕ್ರೀಡಾ ಸಾಧಕರನ್ನು ದುಬೈಗೆ ಆಮಂತ್ರಿಸಿ ಗೌರವಿಸಿದ ಕೀರ್ತಿ ಹೊಂದಿದೆ. ಅನಿವಾಸಿ ಕನ್ನಡಿಗರು ಮತ್ತು ತಾಯ್ತಾಡಿನ ಸಾಧಕರ ನಡುವೆ ಭದ್ರವಾದ ಸಾಂಸ್ಕೃತಿಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘವು, ತನ್ನ ಈ ಭವ್ಯ ಪರಂಪರೆಯನ್ನು ಮುಂದುವರಿಸುತ್ತಾ ಈ ವರ್ಷದ ‘ಕರ್ನಾಟಕ ರಾಜ್ಯೋತ್ಸವ-2026’ ಸಮಾರಂಭವನ್ನು ನವೆಂಬರ್ 07, ಶನಿವಾರ ದಂದು ಆಚರಿಸಲು ಅಧಿಕೃತವಾಗಿ ನಿರ್ಧರಿಸಿದೆ.
ಐಕ್ಯತೆಗಾಗಿ ವಿಶೇಷ ಕರೆ..
2025ರ ರಾಜ್ಯೋತ್ಸವದಲ್ಲಿ ಕನ್ನಡಿಗರ ಕೂಟ, ದುಬೈ ಯಿಂದ” ಅಂತಾರಾಷ್ಟ್ರೀಯ ಸೇವಾ ರತ್ನ” ಪ್ರಶಸ್ತಿ ಪಡೆದ ಡಾ. ರೋನಾಲ್ಡ್ ಕೊಲಾಸೋ ಅವರ ಮಾತುಗಳನ್ನು ಸ್ಮರಿಸಿದ ಅವರು,  ಲೋಕೋಪಕಾರಿ ಸಾಧಕರು, ಉದ್ಯಮಿ ಹಾಗೂ ಅನೇಕ ಕನ್ನಡ ಸಂಘಟನೆಗಳ ಪೋಷಕರಾದ ಡಾ. ರೋನಾಲ್ಡ್ ಕೊಲಾಸೋ ಅವರು ದುಬೈಯಲ್ಲಿರುವ ಎಲ್ಲಾ ಕನ್ನಡ ಸಂಘಟನೆಗಳು ಒಂದಾಗಿ ಸೇರಿ ಒಂದು ದೊಡ್ಡ ರಾಜ್ಯೋತ್ಸವವನ್ನು ನಡೆಸುವಂತೆ ಕರೆ ನೀಡಿದ್ದರು. ಈ ಕರೆಗೆ ಗೌರವ ಸೂಚಿಸಿ, ಡಾ. ರೋನಾಲ್ಡ್ ಕೊಲಾಸೋ ಅವರ ಸಲಹೆಯಂತೆ, 2026ರ ರಾಜ್ಯೋತ್ಸವವನ್ನು ಕನ್ನಡಿಗರ ಕೂಟ, ದುಬೈ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲು ಎಲ್ಲಾ ಕನ್ನಡ ಸಂಘಟನೆಗಳು ಒಗ್ಗೂಡಿ ಕನ್ನಡಿಗರ ಶಕ್ತಿ ಮತ್ತು ಐಕ್ಯತೆಯನ್ನು ಜಗತ್ತಿಗೆ ಪ್ರದರ್ಶಿಸಬೇಕೆಂದು ಅರುಣ್ ಕುಮಾರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
ಸಂಘಟನೆಯ ಸ್ಥಾಪಕ ಸದಸ್ಯರು, ಸಲಹಾ ಸಮಿತಿ ಸದಸ್ಯರಾದ ಸದನ್ ದಾಸ್, ವೀರೇಂದ್ರ ಬಾಬು, ಉಮಾ ವಿದ್ಯಾಧರ, ಇವರೊಂದಿಗೆ ಸಲಹಾ ಮಂಡಳಿಯ ಪ್ರಮುಖರಾದ ಮಂಜುನಾಥ್ ರಾಜನ್, ಅಡ್ವಕೇಟ್ ಇಬ್ರಾಹಿಂ ಖಲೀಲ್, ಅಶ್ರಫ್ ಮಂತೂರ್, ಛಾಯಾ ಕೃಷ್ಣಮೂರ್ತಿ, ಕಾರ್ಯಕಾರಿಣಿ ಸಮಿತಿಯ ಮಲ್ಲಿಕಾರ್ಜುನ ಅಂಗಡಿ, ಚೇತನ್ ಸುಬ್ರಮಣ್ಯ, ದೀಪಕ್ ಸೋಮಶೇಖರ, ವಿನೀತ್ ರಾಜ್, ಶ್ರೀನಿವಾಸ ಅರಸ್, ವೆಂಕಟರಮಣ ಕಾಮತ್, ವಿನಾಯಕ ಹೆಗಡೆ, ಡಾ.ನಿರುಪಮಾ ದಿನೇಶ್ ಮತ್ತು ನಟರಾಜ್ ಸೇರಿದಂತೆ ಹಲವು ಗಣ್ಯರು ಹಾಗೂ ಕಾರ್ಯಕಾರಿಣಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರ ಆಯ್ಕೆಯನ್ನು ಸ್ವಾಗತಿಸಿದರು.
Key words: Dubai, Arun Kumar M.K,  re-elected, president of Kannadigara Koota
‘ನಾವು ಭಾರತಕ್ಕೆ ಜೀವಂತವಾಗಿ ಬರ್ತೇವೆ ಅಂದುಕೊಂಡಿರಲಿಲ್ಲ..!’ ದುಬೈ ಪರಿಸ್ಥಿತಿ ಬಗ್ಗೆ ವಿವರಿಸಿದ MLC ಭೊಜೇಗೌಡ
ಬೆಂಗಳೂರು,ಮಾರ್ಚ್,3,2026 (www.justkannada.in):  ಇರಾನ್ ಮೇಲೆ ಇಸ್ರೇಲ್ ,ಅಮೇರಿಕಾ ದಾಳಿ ಬೆನ್ನಲ್ಲೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಅಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು ಸೇರಿ ಭಾರತೀಯರನ್ನ ವಾಪಸ್ ತಾಯ್ನಾಡಿಗೆ ಕರೆ ತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮಧ್ಯೆ ದುಬೈನಲ್ಲಿ ಸಿಲುಕಿಕೊಂಡಿದ್ದ ವಿಧಾನಪರಿಷತ್ ಸದಸ್ಯ ಬೋಜೇಗೌಡ ಅವರು ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ  ಎಂಎಲ್ ಸಿ ಭೋಜೆಗೌಡ ” ನಾನು ದಕ್ಷಿಣ ಆಫ್ರಿಕಾಗೆ ಹೋಗಿದ್ದೆ, ಅಲ್ಲಿಂದ ಭಾರತಕ್ಕೆ ವಾಪಸ್‌ ದುಬೈ ಮೂಲಕ ಬರಬೇಕಿತ್ತು. ಆದರೆ ನನ್ನ ಫ್ಲೈಟ್‌ ತಡವಾಯಿತು. ಆಗ ಕಾರಣವನ್ನು ವಿಚಾರಿಸಿದಾಗ ಅಬುದಾಬಿಯಲ್ಲಿ ಬಾಂಬ್ ದಾಳಿ ಆಗುತ್ತಿದೆ ಎಂದರು, ಇದಾದ ಕೆಲ ಹೊತ್ತಿನಲ್ಲೇ ನಮ್ಮನ್ನು ಫ್ಲೈಟ್ ನಿಂದಲೇ ಇಳಿಸಿದರು. . ಆ ಕ್ಷಣದಲ್ಲಿ ನಾವು ಏನು ಮಾಡಬೇಕು ಅನ್ನೋದು ತಿಳಿಯಲಿಲ್ಲ. ನಾನು ನನ್ನ ಪತ್ನಿ ಬದುಕಿ ಬರುತ್ತೇವೆ.  ಅಂದುಕೊಂಡಿರಲಿಲ್ಲ. ನಾವು ಭಾರತಕ್ಕೆ ಜೀವಂತ ಬರುತ್ತೇವೆ ಎಂದು ಕೊಂಡಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಈ ವೇಳೆ  ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು  ದೂರವಾಣಿ ಕರೆ ಮೂಲಕ ಧೈರ್ಯ ತುಂಬಿ ದುಬೈ ಹೋಟೆಲ್‌ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನೂ ಮಾಡಿಕೊಟ್ಟರು. ಆದಾಗ್ಯೂ, ನನಗೆ ಅಲ್ಲಿನ ಪರಿಸ್ಥಿತಿಗಳಿಂದ ಆತಂಕ ಕಾಡುತ್ತಲೇ ಇತ್ತು ಇನ್ನು, ಸಿಎಂ ಸಿದ್ದರಾಮಯ್ಯ , ಸಚಿವರಾದ ಕೃಷ್ಣ ಭೈರೇಗೌಡ ನನ್ನನ್ನು ಸಂಪರ್ಕಿಸಿ ಪರಿಸ್ಥಿತಿ ಕುರಿತು ತಿಳಿದುಕೊಂಡರು. ಅಲ್ಲಿನ ಯುದ್ದವಾತಾವರಣದಿಂದ ನಾವು ಇಷ್ಟು ಬೇಗ ತಾಯ್ನಾಡಿಗೆ ಮರಳುತ್ತೇವೆ ಎಂದು ಊಹಿಸಿರಲಿಲ್ಲ ಎಂದು ಭೋಜೇಗೌಡ ಅವರು ತಮಗಾದ ಅನುಭವ ಹಂಚಿಕೊಂಡಿದ್ದಾರೆ.
Key words: MLC, Bhoje Gowda, situation, Dubai
ಇರಾನ್-ಇಸ್ರೇಲ್ ಸಂಘರ್ಷ: ದುಬೈ, ಬಹ್ರಾನ್ ನಲ್ಲಿ ಸಿಲುಕಿದ 109 ಕನ್ನಡಿಗರು
ಬಳ್ಳಾರಿ ಜಿಲ್ಲೆಯ 32 ಮಂದಿ, ಬೆಂಗಳೂರಿನ 25 ಜನರು, ಚಿಕ್ಕಬಳ್ಳಾಪುರ 2, ದಾವಣಗೆರೆಯ 9 ಮಂದಿ  ಕೊಡಗಿನ 4 ಮಂದಿ ಸೇರಿ 100 ಮಂದಿ ದುಬೈನಲ್ಲಿ ಸಿಲುಕಿದ್ದಾರೆ ಮತ್ತು  ಹಾಗೆಯೇ ಹಾಸನದ 4 ಮಂದಿ ಕೊಡಗು ಜಿಲ್ಲೆಯ ಓರ್ವ ಉಡುಪಿಯ 3 ಮಂದಿ ಇತರೆ ಜಿಲ್ಲೆಯ ಓರ್ವ ಸೇರಿ 9 ಮಂದಿ ಬಹ್ರಾನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ಮುಂದಾಗಿದೆ.
Key words: Iran-Israel, conflict, 109 Kannadigas, Dubai, Bahrain
”ಪತ್ನಿ ದುಬೈ, ಪತಿ ಮೈಸೂರು” ಖಿನ್ನತೆಗೊಳಗಾದ ಪತಿ ನೇಣಿಗೆ ಶರಣು…!
ಬೆಂಗಳೂರು,ಡಿಸೆಂಬರ್,21,2020(www.justkannada.in) : ಪತ್ನಿ ಇಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದ ಪತಿ ನೇಣಿಗೆ ಶರಣಾಗಿದ್ದಾರೆ.
ನಗರದ ಸಾತಗಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಶಂಶೀರ್(33) ಮೃತ ದುರ್ದೈವಿ. ಒಂದು ತಿಂಗಳ ಹಿಂದೆ ದುಬೈಗೆ ತೆರಳಿದ ಪತ್ನಿ ಅಶ್ವಿನಿ. ಪ್ರೀತಿಸಿ ಅನ್ಯಧರ್ಮ ವಿವಾಹವಾಗಿದ್ದ ಶಂಶೀರ್ ಹಾಗೂ ಅಶ್ವಿನಿ. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು ಎಂದು ತಿಳಿದು ಬಂದಿದೆ.
ಶಂಶೀರ್ ಹಾಗೂ ಅಶ್ವಿನಿ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿ ನಡುವೆ ಅನ್ಯೋನ್ಯತೆ ಕೊರತೆ ಹಿನ್ನಲೆ ದುಬೈನಲ್ಲಿ ಕೆಲಸ ಗಿಟ್ಟಿಸಿಕೊಂಡು ಅಶ್ವಿನಿ ತೆರಳಿದ್ದಾರೆ.
ಪತ್ನಿ ದೂರವಾದ ಹಿನ್ನಲೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಂಶೀರ್ ನೇಣಿಗೆ ಶರಣಾಗಿದ್ದಾರೆ. ಈ ಪ್ರಕರಣವು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
key words : Wife-Dubai-Husband-Mysore-Surrendered-husband-surrender …
ದುಬೈನಿಂದ ಮೈಸೂರಿಗೆ ವಾಪಸ್ಸಾದ ಶಾಸಕ ತನ್ವೀರ್ ಸೇಠ್: ಪಟಾಕಿ ಸಿಡಿಸಿ ಸಂಭ್ರಮಿಸಿದ ಬೆಂಬಲಿಗರು…
ಮೈಸೂರು,ಫೆ,24,2020(www.justkannada.in):  ಮಾರಣಾಂತಿಕ ಹಲ್ಲೆಗೊಳಗಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದುಬೈಗೆ ತೆರಳಿದ್ದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಇಂದು ಮೈಸೂರಿಗೆ ವಾಪಸ್ ಆಗಿದ್ದಾರೆ.
ಶಾಸಕ ತನ್ವೀರ್ ಸೇಠ್ ದುಬೈನಿಂದ ಮೈಸೂರಿಗೆ ವಾಪಸ್ಸಾದ್ದು ಈ ಹಿನ್ನೆಲೆ ತನ್ವೀರ್ ಸೇಠ್ ಅವರ ಬೆಂಬಲಿಗರು ಕೊಲಂಬಿಯಾ ಏಷ್ಯಾ ಬಳಿ ಸಂಭ್ರಮಿಸಿದರು.  ಪಟಾಕಿ ಸಿಡಿಸಿ ಘೋಷಣೆ ಕೂಗಿ  ತನ್ವೀರ್ ಸೇಠ್ ಅವರನ್ನ ಬರಮಾಡಿಕೊಂಡರು.
ಕಳೆದ ನೆವೆಂಬರ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಶಾಸಕ ತನ್ವೀರ್ ಸೇಠ್ ಮೇಲೆ ಫರ್ಹಾನ್ ಪಾಷಾ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ತನ್ವೀರ್ ಸೇಠ್ ಅವರನ್ನ ಕೂಡಲೇ  ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ತನ್ವೀರ್ ಸೇಠ್ ಚಿಕಿತ್ಸೆಗಾಗಿ ದುಬೈಗೆ ತೆರಳಿದ್ದರು.
Key words: congress MLA-Tanveer Seth –come-Mysore-from- Dubai – celebrated- supporters.