do'nots Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ರಾಜಧಾನಿ ‘ ಲಾಕ್ ಡೌನ್ ‘ : ಏನಿದೆ, ಏನಿರಲ್ಲ ಕಂಪ್ಲೀಟ್ ಡಿಟೈಲ್ ಇಲ್ಲಿದೆ.
ಬೆಂಗಳೂರು, ಜು.14, 2020 : (www.justkannada.in news ) ರಾಜಧಾನಿ ಬೆಂಗಳೂರಿನಲ್ಲಿ (ಬಿಬಿಎಂಪಿ, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆ ) ಇಂದು ರಾತ್ರಿ 8 ಗಂಟೆಯಿಂದ ಒಂಬತ್ತು ದಿನಗಳ ಲಾಕ್‌ಡೌನ್ ಜಾರಿಗೆ ಬರಲಿದೆ.

ಕೋವಿಡ್ -19 (Covid-19) ಹರಡುವಿಕೆ ನಿಯಂತ್ರಿಸಲು ಹಾಗೂ ಹತೋಟಿಗೆ ತರಲು ತಜ್ಞರ ಸಲಹೆ ಮೇರೆಗೆ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರಕಾರ ಲಾಕ್ ಡೌನ್ ತೀರ್ಮಾನಕ್ಕೆ ಬಂದಿದೆ. ಪರಿಣಾಮ ಇಂದು ರಾತ್ರಿ 8 ಗಂಟೆಯಿಂದ ಜುಲೈ 22 ರ ಬೆಳಿಗ್ಗೆ 5 ಗಂಟೆಯವರೆಗೆ ಈ ಲಾಕ್‌ಡೌನ್ ಜಾರಿಯಲ್ಲಿರುತ್ತದೆ.

ಮಾರ್ಗಸೂಚಿಗಳ ಅನ್ವಯ ಏನೇನು ಇರಲಿದೆ, ಯಾವುದಕ್ಕೆ ನಿರ್ಬಂಧವಿದೆ :

* ರಾಜ್ಯ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಇತ್ಯಾದಿ ಮುಚ್ಚಿರುತ್ತವೆ.

* ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಣಾ ದಳ, ನಾಗರೀಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ ವಿನಾಯಿತಿ.

* ವಿದ್ಯುತ್, ನೀರು, ನೈರ್ಮಲ್ಯ ನಿರ್ವಹಿಸುವ ಎಲ್ಲಾ ಕಚೇರಿಗಳು ಬಿಬಿಎಂಪಿ ಮತ್ತು ಅಧೀನ ಕಚೇರಿಗಳು ತೆರೆದಿರಲಿವೆ.

* ಬಿಬಿಎಂಪಿ ಹಾಗೂ ಅಧೀನ ಕಛೇರಿಗಳು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಅಧೀನ ಕಚೇರಿಗಳು ಸಹ ಒಪನ್.

* ವಿಧಾನ ಸೌಧ, ವಿಕಾಸ್ ಸೌಧ ಮತ್ತು ಎಂಎಸ್ ಕಟ್ಟಡದಲ್ಲಿನ ಸೆಕ್ರೆಟರಿಯಟ್ ಕಚೇರಿಗಳಲ್ಲಿ ಶೇ.50 ರ ಸಿಬ್ಬಂದಿ ಹಾಜರಿಗೆ ಅನುಮತಿ.

* ಕೋರ್ಟ್ ಕೆಲಸಗಳಿಗೆ ಸಂಬಂಧಿಸಿದ ಕಛೇರಿಗಳು ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯವಾಗಿ ಕಾರ್ಯನಿರ್ವಹಿಸಲಿವೆ.

* ಕರೋನಾವೈರಸ್ (Coronavirus) ಸಂಬಂಧಿತ ಕಾರ್ಯಕ್ಕೆ ನಿಯೋಜಿತ ಎಲ್ಲಾ ಕಛೇರಿಗಳು, ಅಧಿಕಾರಿಗಳು, ಸಿಬ್ಬಂಧಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಕಛೇರಿಗಳು ಹಾಗೂ ಸ್ವಯಂ ಸೇವಕರು ಮನೆಯಿಂದಲೇ ಕೆಲಸ ನಿರ್ವಹಿಸುವುದಕ್ಕೆ ಪ್ರೋತ್ಸಾಹಿಸುವುದು.

* ನಿರ್ಬಂಧಿತ ವಲಯ ಹೊರತುಪಡಿಸಿ ಎಲ್ಲಾ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವುದು.

* ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ ಬೇರೆಡೆ ಎಲ್ಲಾ ಬಗೆಯ ಸರಕು ಸಾಗಣೆ ಎಂದಿನಂತೆ ಇರಲಿವೆ.

# ಈ ಕಾರ್ಯಚಟುವಟಿಕೆಗಳಿಗೆ ನಿಷೇಧ :

* ಈಗಾಗಲೇ ವೇಳಾಪಟ್ಟಿ ನಿಗಧಿಯಾಗಿರುವ ವಿಮಾನ ಹಾಗೂ ರೈಲು ಪ್ರಯಾಣಿಕರಿಗೆ ಲಾಕ್‌ಡೌನ್ ಅವಧಿಯಲ್ಲಿ ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ಆದರೆ ಯಾವುದೇ ಹೊಸದಾಗಿ ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶವಿಲ್ಲ.

* ಶಾಲಾ-ಕಾಲೇಜು, ಶಿಕ್ಷಣ/ ತರಬೇತಿ/ ಕೋಚಿಂಗ್ ಮುಂತಾದ ಸಂಸ್ಥೆಗಳು ಕ್ಲೋಸ್ . ಆದರೆ ದೂರ ಶಿಕ್ಷಣ ಕಲಿಕೆಗೆ ಅವಕಾಶ.

* ಕ್ವಾರಂಟೈನ್ ಸೌಲಭ್ಯಗಳಿಗೆ ಉದ್ದೇಶಿಸಿ ಉಳಿದಂತೆ ಹೋಟೆಲ್ ಗಳು, ರೆಸ್ಟೋರೆಂಟ್ ಮತ್ತು ಇತರೆ ಆತಿಥ್ಯ ಸೇವೆ ನಿರ್ಬಂಧ.

* ಹೋಟೆಲ್ ಮತ್ತು ರೆಸ್ಟೋರೆಂಟ್ ಗಳನ್ನೂ ಆಹಾರ ತಯಾರಿಕೆಗೆ / ಸರಬರಾಜು ಉದ್ದೇಶಕ್ಕಾಗಿ ಮಾತ್ರ ತೆರೆಯಲು ಅನುಮತಿಸಲಾಗಿದೆ.

* ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್ ಗಳು, ಜಿಮ್ ಗಳು, ಕ್ರೀಡಾ ಸಂಕೀರ್ಣಗಳು, ಸ್ವಿಮ್ಮಿಂಗ್ ಪೂಲ್ ಕ್ಲೋಸ್.

* ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳಿಗೆ ಸಾರ್ವಜನಿಕರಿಗೆ ನಿಷೇಧ.

key words : bangalore-lock-down-does-do’nots-police

The post ರಾಜಧಾನಿ ‘ ಲಾಕ್ ಡೌನ್ ‘ : ಏನಿದೆ, ಏನಿರಲ್ಲ ಕಂಪ್ಲೀಟ್ ಡಿಟೈಲ್ ಇಲ್ಲಿದೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.