dignity Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು: ಕೆ.ವಿ.ಪ್ರಭಾಕರ್ ಶ್ಲಾಘನೆ
ಬೆಂಗಳೂರು ಫೆಬ್ರವರಿ,17,2026 (www.justkannada.in): ಸಾರ್ವಜನಿಕ‌ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ ಮಾದರಿಯಾಗಿ ಕಾಣುತ್ತಾರೆ. ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಶ್ಲಾಘಸಿದರು.

ಗಾಂಧಿ ಭವನದಲ್ಲಿ ನಡೆದ ಹಿರಿಯ ಪತ್ರಕರ್ತ ದಿವಂಗತ ಪಿ.ರಾಮಯ್ಯ ಅವರ ಶ್ರದ್ದಾಂಜಲಿ ಹಾಗೂ “ನಾನು ಹಿಂದೂ ರಾಮಯ್ಯ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಆಗುಹೋಗುಗಳನ್ನು, ಒಳಿತು ಕೆಡುಕುಗಳನ್ನೇ ಧ್ಯಾನಿಸುವ ಪತ್ರಕರ್ತರು ಸದಾ ಈ ಧಾವಂತದಲ್ಲಿಯೇ ಉಳಿದು ಕ್ರಮೇಣ ಅಸೂಕ್ಮರಾಗುವ, ಸಂವೇದನೆಗಳನ್ನು‌ ಕಳೆದುಕೊಳ್ಳುವ ಅಪಾಯ ಹೆಚ್ಚು. ಇದನ್ನು ಪ್ರಜ್ಞಾಪೂರ್ವಕಾಗಿ ಮೀರುವ ಪ್ರಯತ್ನ ಮಾಡಿದಾಗಷ್ಟೆ ವೃತ್ತಿ ಘನತೆ ಹೆಚ್ಚುತ್ತದೆ. ನಮ್ಮೆಲ್ಲ‌ರ ವೈಯುಕ್ತಿಕ ಹಳಹಳಿಕೆ , ಧಾವಂತಗಳ ನಡುವೆಯೂ ಇತರರ ಘನತೆಗೆ ಕುಂದು ಬಾರದಂತೆ ವೃತ್ತಿಪರರಾಗುವುದು, ಪತ್ರಿಕೋದ್ಯಮ ನಡೆಸುವುದು, ಪತ್ರಕರ್ತರಾಗಿ ಉಳಿಯುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದರು.

ಅಗಲಿದ ಹಿರಿಯ ಚೇತನ ಪಿ. ರಾಮಯ್ಯ ಈ ವಿಚಾರದಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿದ್ದರು. ಪತ್ರಕರ್ತರಾಗುವುದು ಒಂದು ನಮೂನೆಯ ದೀಕ್ಷೆ ಇದ್ದಂತೆ. ಒಮ್ಮೆ ನೀವು ಪತ್ರಕರ್ತರೆಂದು ಗುರುತಿಸಿಕೊಂಡ ಮೇಲೆ ಕೆಲವು ನಿಷ್ಠುರ ಗುಣಗಳು ಅನಾಯಸವಾಗಿ ಬಂದುಬಿಡುತ್ತವೆ. ಮುಂದೆ ರಾಜಕಾರಣಿಯಾದರೂ ಸರಿಯೇ,  ಉದ್ಯಮಿಯಾದರೂ ಸರಿಯೇ. ಒಮ್ಮೆ ಪತ್ರಕರ್ತರಾದವರು ಮಾಜಿಯಾಗಲಾರರು, ನಿವೃತ್ತರಾಗಲಾರರು.ಚಲನಶೀಲತೆಯನ್ನುಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಇದ್ದ ಪತ್ರಕರ್ತರಿಗೆ ಸಾವು ಇರದು ಎಂದು ಅಭಿಪ್ರಾಯಪಟ್ಟರು.

ಕಾಲವನ್ನು ಒಪ್ಪಿಕೊಳ್ಳುತ್ತಲೇ ಸಮಾಜದಲ್ಲಿರುವ ಹುಳಕನ್ನು ನಯವಾಗಿ ತೋರಿಸಿ ತಿದ್ದಬಲ್ಲವರು ಮಾತ್ರ ಜನಮಾನಸದಲ್ಲಿ ಉಳಿಯಬಲ್ಲರು.‌ ಅವರಿಗೂ ಆತ್ಮತೃಪ್ತಿ ತರಬಲ್ಲವು. ಇಂಥಾ ಆತ್ಮತೃಪ್ತಿ ಗಳಿಸಿದ್ದಾಗಿ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದ ರಾಮಯ್ಯ ಅವರು,  ತಾವು ಸಾರ್ಥಕ್ಯವಾಗಿ ಬಾಳಿ, ತಮ್ಮೊಡನಿರುವ ವೃತ್ತಿಪರರ ಘನತೆಯನ್ನು ಎತ್ತಿ ಹಿಡಿದು ಪತ್ರಕರ್ತರಾಗಿ ಅಷ್ಟೆ ಅಲ್ಲ ವ್ಯಕ್ತಿತ್ಚ ದೃಷ್ಟಿಯಿಂದಲೂ ಅನುಸರಣೀಯರಾಗಿದ್ದರು ಎಂದು ಧನ್ಯತೆ ಅರ್ಪಿಸಿದರು.

ಸಾರ್ವಜನಿಕ‌ ಜೀವನ ವಿಪರೀತ ಕಲುಷಿತ ಮತ್ತು ಕಳಪೆ ಆಗುತ್ತಿರುವ ಹೊತ್ತಿನಲ್ಲಿ ಪಿ.ರಾಮಯ್ಯ ಅವರಂತಹ ಒಂದು ಅಪ್ಪಟ ಮಾದರಿ ನಮ್ಮನ್ನೆಲ್ಲಾ ಅಗಲಿದೆ.  ರಾಮಯ್ಯ ಅವರು ಪತ್ರಕರ್ತರಾಗಿ ಪತ್ರಿಕಾ ವೃತ್ತಿಯ ಘನತೆ-ಮೌಲ್ಯ-ನೈತಿಕ ಶಕ್ತಿ ಹೆಚ್ಚಿಸಲು ಶ್ರಮಿಸಿದರು ಎಂದು ವಿವರಿಸಿದರು.

ಹಾಗೆಯೇ ಪಿ.ರಾಮಯ್ಯ ಅವರು ರಾಜಕಾರಣಿಯಾಗಿ ರಾಜಕಾರಣದ ಉದ್ದೇಶ, ಕಾಳಜಿಯ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡಿ ಸಾರ್ವಜನಿಕ ಜೀವನದ ಮೌಲ್ಯವನ್ನು ಉನ್ನತ ಮಟ್ಟದಲ್ಲಿ ಉಳಿಸುವ ಪ್ರಯತ್ನ ಮಾಡಿದ್ದರು.

ಹೀಗಾಗಿ ಪಿ.ರಾಮಯ್ಯ ಪತ್ರಕರ್ತರಾಗಿ, ರಾಜಕಾರಣಿಯಾಗಿ ಅವರು ತಮ್ಮ ಕಾಲದ ಸಾರ್ವಜನಿಕ ಬದುಕಿನ ಮೌಲ್ಯಗಳ ಪ್ರತಿರೂಪವಾಗಿದ್ದರು. ವೃತ್ತಿಪರತೆ ಮತ್ತು ಸಾಮಾಜಿಕ ಬದ್ಧತೆ ರಾಮಯ್ಯನವರ ವ್ಯಕ್ತಿತ್ವದ ಎರಡು ಕಣ್ಣುಗಳಾಗಿದ್ದವು. ಸುದ್ದಿಯನ್ನು ಅವರು ಗ್ರಹಿಸುತ್ತಿದ್ದ ರೀತಿಯೇ, ಅವರು ಸಮಾಜಮುಖಿ ಆಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಆಗ ಸಮಾಜಮುಖಿಯಲ್ಲದ ಪತ್ರಕರ್ತರಿಗೆ ವೃತ್ತಿಯಲ್ಲಿ ಜಾಗ ಇರಲಿಲ್ಲ, ಸಮಾಜಮುಖಿಯಲ್ಲದ ಬರಹಗಳಿಗೆ ಪುಟಗಳಲ್ಲಿ ಜಾಗವೂ ಸಿಗುತ್ತಿರಲಿಲ್ಲ.ಈ ಹೊತ್ತಿನಲ್ಲಿ ಇವೆರಡೂ ಮಾದರಿಗಳೂ ಸವಕಲಾಗಿ ಕಾಣುತ್ತಿರುವುದು ಬೇಸರದ ಸಂಗತಿ ಎಂದರು.

ರಾಮಯ್ಯನವರಂತಹ ಹಿರಿಯರು ಪತ್ರಿಕೋದ್ಯಮದ ನೈತಿಕ ಸ್ಥೈರ್ಯದಂತೆ ಇದ್ದರು. ಅವರು ನಿರ್ಗಮಿಸಿದಾಗ ಕೇವಲ ಒಬ್ಬ ಪತ್ರಕರ್ತನ ನಿರ್ಗಮನವಲ್ಲ, ಬದಲಿಗೆ ಒಂದು ಕಾಲಘಟ್ಟದ ಪತ್ರಿಕಾ ಮೌಲ್ಯಗಳ ಅಂತ್ಯದಂತೆ ಭಾಸವಾಗುತ್ತದೆ” ಎಂದು ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರು ದಾಖಲಿಸಿದ್ದನ್ನು ಉಲ್ಲೇಖಿಸಿದರು.

ಪಿ. ರಾಮಯ್ಯ ಅವರು ಬರೆದ “ನಾನು ಹಿಂದೂ ರಾಮಯ್ಯ” ಪುಸ್ತಕ ಅವರ ಆತ್ಮಕಥೆಯಾಗಿರದೆ,   ಅರ್ಧ ಶತಮಾನದ ಚರಿತ್ರೆಯೂ ಆಗಿದೆ. ಹಳೆಯ ಮೈಸೂರು ಭಾಗದ ಸಾಮಾಜಿಕ ಮತ್ತು ರಾಜಕೀಯ ಬದುಕು ಮತ್ತು ಬದಲಾವಣೆಗಳ ದಾಖಲೆಯಾಗಿದೆ ಎಂದರು.

ಅಂದಿನ ಕಾಲದ ಪತ್ರಿಕೋದ್ಯಮದಲ್ಲಿ ಅನಿವಾರ್ಯವಾಗಿದ್ದ ನೈತಿಕತೆ, ಸವಾಲುಗಳು ಮತ್ತು ವರದಿಗಾರಿಕೆಯಲ್ಲಿನ ಬದ್ಧತೆಯ ವಿಲ್ ಬರೆದಿಟ್ಟಂತಿದೆ. ಪಿ.ರಾಮಯ್ಯನವರಿಗೆ ದೇವರಾಜ ಅರಸು ಅವರಿಂದ ಹಿಡಿದು ಅನೇಕ ಮುಖ್ಯಮಂತ್ರಿಗಳೊಂದಿಗೆ ಇದ್ದ ಆಪ್ತ ಒಡನಾಟವನ್ನು ರಾಜ್ಯ ಧರ್ಮ/ ವೃತ್ತಿಧರ್ಮವನ್ನು ಕಾಪಾಡಲು ಕಟ್ಟುನಿಟ್ಟಾಗಿ ಬಳಸಿದ್ದನ್ನು ಸ್ಮರಿಸಿದರು.

ಮೇಲ್ಮನೆಯಲ್ಲಿ (ವಿಧಾನ ಪರಿಷತ್) ನಡೆಯುತ್ತಿದ್ದ ಚರ್ಚೆಗಳಲ್ಲಿ ಗಂಭೀರತೆ ಮತ್ತು ಮೌಲ್ಯಗಳನ್ನು ತರುವಲ್ಲಿ ಇವರು ಶ್ರಮಿಸಿದರು. ಹೀಗಾಗಿ ರಾಮಯ್ಯ ಅವರು ತಾವು ತೊಡಗಿಸಿಕೊಂಡಿದ್ದ ಎಲ್ಲಾ ಕ್ಷೇತ್ರಗಳ ಘನತೆ ಹೆಚ್ಚಿಸುವ ಕೆಲಸ ಮಾಡಿ ಆ ಮಾದರಿಗಳನ್ನು ನಮ್ಮೆದುರಿಗೆ ಬಿಟ್ಟು ಹೋಗಿದ್ದಾರೆ. ಈ ಮಾದರಿಗಳನ್ನು ಇವತ್ತಿನ ಪತ್ರಕರ್ತರು ಮುಂದುವರೆಸಬೇಕು ಎಂದು ಕರೆ ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ವೋಡೆ ಪಿ ಕೃಷ್ಣ, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, KUWJ ಅಧ್ಯಕ್ಷ ಶಿವಾನಂದ ತಗಡೂರು, ಈ ಸಂಜೆ ಸಂಪಾದಕ ಟಿ.ವೆಂಕಟೇಶ್, ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ.ವಿಠ್ಠಲ್ ಮೂರ್ತಿ, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್, ಗಾಂಧಿ ಸ್ಮಾರದ ನಿಧಿ ಕೋಶಾಧ್ಯಕ್ಷರಾದ ದಿನೇಶ್, ರಾಮಯ್ಯ ಅವರ ಪುತ್ರ ಡಾ.ಬಾಲಾಜಿ ಅವರುಗಳು ಉಪಸ್ಥಿತರಿದ್ದರು.

Key words: P. Ramaiah, dignity, journalism, politics, K.V. Prabhakar

The post ಪಿ.ರಾಮಯ್ಯ ಅವರು ಪತ್ರಿಕಾ ವೃತ್ತಿ ಮತ್ತು ರಾಜಕಾರಣದ ಘನತೆ ಹೆಚ್ಚಿಸಲು ಶ್ರಮಿಸಿದ್ದರು: ಕೆ.ವಿ.ಪ್ರಭಾಕರ್ ಶ್ಲಾಘನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಹಿಳೆಯರ ಘನತೆಗೆ ಚ್ಯುತಿ ತರುವ ಕೆಲಸ ಮಾಡಿದ್ರೆ ತಕ್ಷಣವೇ ದೂರು ದಾಖಲಿಸಿ- ಸಿಎಂ ಸಿದ್ದರಾಮಯ್ಯ
ಬೆಂಗಳೂರು,ಜುಲೈ,10,2025 (www.justkannada.in): ಮಹಿಳೆಯರ ಘನತೆಗೆ ಚ್ಯುತಿಯುಂಟು ಮಾಡುವ ವಿಡಿಯೋಗಳು ಅಥವಾ ಖಾತೆಗಳನ್ನು ಆನ್‌ಲೈನ್‌ ನಲ್ಲಿ ನೋಡಿದರೆ, ತಕ್ಷಣವೇ ಸೈಬರ್ ಸೆಲ್‌ ನ ದೂರವಾಣಿ ಸಂಖ್ಯೆ: 1930ಗೆ ಕರೆಮಾಡಿ ಅಥವಾ ವೆಬ್‌ಸೈಟ್: cybercrime.gov.in ನಲ್ಲಿ ದೂರು ದಾಖಲಿಸಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ,  ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಅವರಿಗೆ ಕಿರುಕುಳ ನೀಡುವುದು, ವೀಡಿಯೋಗಳನ್ನು ಜಾಲತಾಣಗಳಲ್ಲಿ ಶೇರ್‌ ಮಾಡಿ ಅವರ ಮಾನಹಾನಿ ಮಾಡುವುದು ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುತ್ತದೆ. ಇದು ನಮ್ಮ ಕರ್ನಾಟಕದ ಪರಂಪರೆಯಲ್ಲ.

ಕಳೆದ ಕೆಲವು ದಿನಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿದ್ದು, ತಕ್ಷಣವೇ ಕೃತ್ಯ ಎಸಗಿದವರನ್ನು ಬಂಧಿಸುವುದು ಸೇರಿದಂತೆ ಎಲ್ಲಾ ಅಗತ್ಯ ಕಾನೂನು ಕ್ರಮಗಳನ್ನು ಸರ್ಕಾರ ಜರುಗಿಸಿದೆ. ಇದರ ಜೊತೆಗೆ ನಾವು ಇಂತಹ ಕೃತ್ಯಗಳ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಮಹಿಳೆಯರು ಕೀಳುದೃಷ್ಟಿಯ ಅಥವಾ ಯಾವುದೇ ತರನಾದ ಕಿರುಕುಳಗಳ ಭಯವಿಲ್ಲದೆ ಧೈರ್ಯವಾಗಿ ನಡೆಯಲಾರದ ಸ್ಥಿತಿಗೆ ನಮ್ಮ ಸಮಾಜ ಹೋಗುತ್ತಿದೆ ಎಂದಾದರೆ, ನಾಗರಿಕರಾಗಿ ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ? ಎಂಬುದನ್ನು ಎಲ್ಲರೂ ತಮ್ಮ ಆತ್ಮಸಾಕ್ಷಿಯನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ. ಇವು ನಮ್ಮ ಸಾಮಾಜಿಕ ಮೌಲ್ಯಗಳಿಗೆ ವಿರುದ್ಧವಾದವು ಮಾತ್ರವಲ್ಲ, ಕಾನೂನಿನ ರೀತಿಯಲ್ಲಿ ಶಿಕ್ಷಾರ್ಹ ಅಪರಾಧಗಳ ಕೂಡ ಹೌದು.

ನಾಡಿನ ಮಹಿಳೆಯರ ಜೊತೆ ನಮ್ಮ ಸರ್ಕಾರ ದೃಢವಾಗಿ ನಿಂತಿದೆ, ನಿಮ್ಮ ಸುರಕ್ಷೆ ಮತ್ತು ಘನತೆ ನಮ್ಮ ಸರ್ಕಾರದ ಆಧ್ಯತೆಯಾಗಿದೆ. ನಿಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆಗೆ ನಾವು ಬದ್ಧರಿದ್ದೇವೆ ಎಂಬುದನ್ನು ನಾಡಿನ ನನ್ನ ಎಲ್ಲಾ ತಾಯಂದಿರಿಗೆ, ಅಕ್ಕತಂಗಿಯರಿಗೆ ತಿಳಿಸಲು ಬಯಸುತ್ತೇನೆ.  ಯಾರೇ ಆಗಲಿ ಮಹಿಳೆಯರ ಘನತೆಗೆ ಚ್ಯುತಿಯುಂಟು ಮಾಡುವ ವಿಡಿಯೋಗಳು ಅಥವಾ ಖಾತೆಗಳನ್ನು ಆನ್‌ಲೈನ್‌ನಲ್ಲಿ ನೋಡಿದರೆ, ತಕ್ಷಣವೇ ಸೈಬರ್ ಸೆಲ್‌ನ ದೂರವಾಣಿ ಸಂಖ್ಯೆ: 1930ಗೆ ಕರೆಮಾಡಿ ಅಥವಾ ವೆಬ್‌ಸೈಟ್: cybercrime.gov.in ನಲ್ಲಿ ದೂರು ದಾಖಲಿಸಿ.

ನಾವು ನೀವೆಲ್ಲರೂ ಜೊತೆಗೂಡಿ ಪ್ರತಿ ಮಹಿಳೆಯೂ ಸುರಕ್ಷಿತವಾಗಿ, ಗೌರವದಿಂದ ಮತ್ತು ಸ್ವಾತಂತ್ರ್ಯದಿಂದ ಬದುಕುವ ಶ್ರೇಷ್ಠ ಕರ್ನಾಟಕವನ್ನು ನಿರ್ಮಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

Key words: dignity, women, complain, CM, Siddaramaiah

The post ಮಹಿಳೆಯರ ಘನತೆಗೆ ಚ್ಯುತಿ ತರುವ ಕೆಲಸ ಮಾಡಿದ್ರೆ ತಕ್ಷಣವೇ ದೂರು ದಾಖಲಿಸಿ- ಸಿಎಂ ಸಿದ್ದರಾಮಯ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

SAF ರಚನೆಯಿಂದ ಉಡುಪಿ ಘನತೆಗೆ ಧಕ್ಕೆಯಾಗಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್
ಉಡುಪಿ,ಜೂನ್,14,2025 (www.justkannada.in): ಕೋಮು ದಳ್ಳುರಿ ನಿಗ್ರಹಕ್ಕಾಗಿ ರಚನೆ ಮಾಡಲಾಗಿರುವ ಎಸ್‌ಎಎಫ್‌ ನಿಂದ ಉಡುಪಿ ಘನತೆಗೆ ಧಕ್ಕೆಯಾಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಎಸ್‌ಎಎಫ್‌ ವ್ಯಾಪ್ತಿಗೆ ಸೇರಿಸಿರುವುದರಿಂದ ಬ್ರ್ಯಾಂಡ್‌ ಉಡುಪಿ ಘನತೆಗೆ ಧಕ್ಕೆಯಾಗಿದೆ ಎಂಬ ಶಾಸಕ ಯಶ್‌ ಪಾಲ್‌ ಸುವರ್ಣ ಅವರ ಹೇಳಿಕೆ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜ.ಪರಮೇಶ್ವರ್, ಕೋಮು ನಿಗ್ರಹಕ್ಕಾಗಿ ರಚನೆಯಾಗಿರುವ ವಿಶೇಷ ಕಾರ್ಯಪಡೆಯ  ವ್ಯಾಪ್ತಿಗೆ ಸೇರಿಸಿರುವುದರಿಂದ ಉಡುಪಿ ಜಿಲ್ಲೆಯ ಘನತೆಗೆ ಧಕ್ಕೆಯಾಗುವುದಿಲ್ಲ. ಕರಾವಳಿ ಭಾಗದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಘಟನಾವಳಿಗಳ ಆಧಾರದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಯಾವುದೇ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸುವ ಸಲುವಾಗಿ ಮಾಡಿಲ್ಲ ಎಂದರು.

ಈ ಮಧ್ಯೆ ಕಾರ್ಕಳ ಭಾಗದಲ್ಲಿ ನಕ್ಸಲ್‌ ನಿಗ್ರಹ ಪಡೆಯ  ಮುಖ್ಯ ಕಚೇರಿ ಆರಂಭಿಸಿದ್ದೆವು. ಎಎನ್‌ಎಫ್‌ನಿಂದ ಉಡುಪಿಯ ಘನತೆ ಕಡಿಮೆಯಾಯಿತೇ..? ನಕ್ಸಲರಿಂದ ಬಹಳಷ್ಟು ಜನರ ಹತ್ಯೆ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಉಡುಪಿಯಲ್ಲಿ ಎಎನ್‌ಎಫ್ ಕಚೇರಿ ಆರಂಭಿಸಿದ್ದೆವು. ಕೋಮುವಾದಕ್ಕೆ ಸಂಬಂಧಪಟ್ಟ ಪ್ರಕರಣಗಳು ನಡೆಯದಿದ್ದಲ್ಲಿ ಎಸ್‌ಎಎಫ್‌ ಅಗತ್ಯ ಬರುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

Key words: Udupi, dignity, SAF, Home Minister, Dr G Parameshwar

The post SAF ರಚನೆಯಿಂದ ಉಡುಪಿ ಘನತೆಗೆ ಧಕ್ಕೆಯಾಗಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು ಮಾರ್ಚ್,12,2025 (www.justkannada.in): ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ರಚಿಸಿ ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನ ನೇಮಿಸಿ ಸರ್ಕಾರ ಸಂಬಳ ನೀಡುತ್ತಿರುವುದಕ್ಕೆ ವಿಪಕ್ಷಗಳಿಂದ ಆಕ್ಷೇಪ, ವಿರೋಧ ವ್ಯಕ್ತವಾದ ಬೆನ್ನಲ್ಲೆ ಈ ಬಗ್ಗೆ ಇದೀಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರ ಆರೋಪದ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ,  ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿವೇಶನ ಮುಗಿಯುತ್ತಿದ್ದಂತೆ ಈ ಬಗ್ಗೆ ಸಭೆ ಕರೆದು ತಕರಾರುಗಳನ್ನು ಪರಿಹರಿಸಲಾಗುವುದು ಎಂದರು.

ಅಧಿಕಾರಕ್ಕೆ ಬಂದಾಗ ಪಕ್ಷದ ಕಾರ್ಯಕರ್ತರಿಗೆ ಅಧಿಕಾರದಲ್ಲಿ ಅವಕಾಶ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಎಲ್ಲಾ ಶಾಸಕರ ಕಚೇರಿಗೂ RSS ಕಾರ್ಯಕರ್ತರನ್ನು ನೇಮಿಸಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ, ತಾಲ್ಲೂಕುಗಳಲ್ಲಿ ಶಾಸಕರ ಘನತೆಗೆ, ಅಧಿಕಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ. ಈ ಬಗ್ಗೆ ಎಲ್ಲಾ ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ ಎಂದರು.

ರಾಜ್ಯ ಮತ್ತು ಜಿಲ್ಲಾ, ತಾಲ್ಲೂಕು ಗ್ಯಾರಂಟಿ ಜಾರಿ ಸಮಿತಿಗಳಲ್ಲಿ ಬದಲಾವಣೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರಿ ಸಂಬಳ ಭತ್ಯೆ ನೀಡುತ್ತಿದೆ ಎಂದು ಬಿಜೆಪಿ-ಜೆಡಿಎಸ್  ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ರಾಜ್ಯಪಾಲರಿಗೆ ಈಗಾಗಲೇ ದೂರು ನೀಡಿದೆ.

Key words: Guarantee committees, MLAs, dignity, CM Siddaramaiah

The post ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: ಸಿಎಂ ಸಿದ್ದರಾಮಯ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಹುಲ್ ಗಾಂಧಿಯದ್ದು ಆಧಾರ ರಹಿತ ಭಾಷಣ: ಸಂಸತ್ ಘನತೆಗೆ ಧಕ್ಕೆ- ಬಿವೈ ವಿಜಯೇಂದ್ರ
ಬೆಂಗಳೂರು,ಜುಲೈ, 2,2024 (www.justkannada.in):  ಹಿಂದೂ ಎಂದು ಹೇಳುವವರು ದ್ವೇಷ ಬಿತ್ತುತ್ತಾರೆ ಎಂದು ಹೇಳಿಕೆ ನೀಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಸದನದಲ್ಲಿ ರಾಹುಲ್ ಗಾಂಧಿ ಭಾಷಣ ಆಧಾರ ರಹಿತವಾದುದ್ದು.  ಬಿಜೆಪಿ ವಿರುದ್ದ ಸುಳ್ಳುಆರೋಪ  ಮಾಡಿದ್ದಾರೆ. ರಾಹುಲ್ ಗಾಂಧಿ ಸಂಸತ್ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಹೇಳಿದರು.

ಚುನಾವಣೆ ಸಮಯದಲ್ಲೂ ಸುಳ್ಳು ಹೇಳೀ ಓಡಾಡಿದರು.  ರಾಹುಲ್ ಗಾಂಧಿ ಹಿಂದೂಗಳ ತೇಜೋವಧೆ ಮಾಡಿದ್ದಾರೆ. ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ರಾಹುಲ್  ಗಾಂಧಿ ಇದಕ್ಕಾಗಿ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಬಿ.ವೈ ವಿಜಯೇಂದ್ರ ಆಗ್ರಹಿಸಿದರು.

Key words: Rahul Gandh, speech, dignity,  Parliament,  BY Vijayendra

The post ರಾಹುಲ್ ಗಾಂಧಿಯದ್ದು ಆಧಾರ ರಹಿತ ಭಾಷಣ:  ಸಂಸತ್ ಘನತೆಗೆ ಧಕ್ಕೆ- ಬಿವೈ ವಿಜಯೇಂದ್ರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಗ್ರಾಫಿಕ್ ಯುಗ ಅದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ” : ಸಚಿವ ಸಿ.ಪಿ.ಯೋಗೇಶ್ವರ್
ಮೈಸೂರು,ಮಾರ್ಚ್,07,2021(www.justkannada.in) : ಇದು ಗ್ರಾಫಿಕ್ ಯುಗ ಅದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ. ಆಧುನಿಕ ಯುಗದ ಗ್ರಾಫಿಕ್‌ಗೆ ಬಲಿಪಶು ಆಗುವ ಭಯ ನಮಗೆ ಕಾಡುತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ದೃಶ್ಯ ಮಾಧ್ಯಮಗಳನ್ನು ತಿರುಚುವ, ಧ್ವನಿ‌ ನೀಡುವ ಕೆಲಸ ಆಗುತ್ತಿದೆ. ಗ್ರಾಫಿಕ್ ಮೂಲಕ ಕೈ,ಕಾಲು,ತಲೆ ಕತ್ತರಿಸಿದಂತೆ ಮಾಡಬಹುದು. ಸಿನಿಮಾದಿಂದ ಬಂದ ನನಗೆ ಅದೆಲ್ಲಾ ಗೊತ್ತಿದೆ. ಮಾನ ಮರ್ಯಾದೆ ಗೌರವದ ಕಾರಣಕ್ಕಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದಿದ್ದಾರೆ.

ಕೃಪೆ-internet

ಸುಳ್ಳು ಬೇಗ ಹರಡುತ್ತದೆ, ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕು. ಆದರೆ,ಮಾಧ್ಯಮದಲ್ಲಿ ಬಂದ ಕೂಡಲೇ ಅದನ್ನು ಜನ ನಂಬುತ್ತಾರೆ. ಆದರೆ, ಸತ್ಯ ಹೊರಬರುವುದು ಪೊಲೀಸ್ ತನಿಖೆ. ನ್ಯಾಯಲಯದ ಮೂಲಕ. ಅದಕ್ಕಾಗಿ ನಾವೆಲ್ಲಾ ಭಯಪಡುತ್ತಿದ್ದೇವೆ ಎಂದು ತಿಳಿಸಿದರು.

key words : Graphic-human-dignity-Anxiety-Minister-C.P.Yogeshwar

The post “ಗ್ರಾಫಿಕ್ ಯುಗ ಅದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ” : ಸಚಿವ ಸಿ.ಪಿ.ಯೋಗೇಶ್ವರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪ್ರಧಾನಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಸಿ, ಹೋರಾಟ ಅಂತ್ಯಗೊಳಿಸುವುದು ಸೂಕ್ತ- ಹೆಚ್.ಡಿ ಕುಮಾರಸ್ವಾಮಿ ಟ್ವೀಟ್
ಬೆಂಗಳೂರು,ಡಿಸೆಂಬರ್,26,2020(www.justkannada.in) : ಕೇಂದ್ರ ಸರ್ಕಾರ ರೈತರಿಗೆ ಕಾರ್ಯಕ್ರಮಗಳ ಮೂಲಕ ಪರೋಕ್ಷ ಸಂದೇಶ ರವಾನಿಸುವ ಬದಲಿಗೆ ಪ್ರಧಾನಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಸಿ, ಹೋರಾಟ ಅಂತ್ಯಗೊಳಿಸುವುದು ಸೂಕ್ತ. ಇದು ದೇಶದ ಘನತೆ ದೃಷ್ಟಿಯಿಂದ ಅತ್ಯಗತ್ಯವೂ ಹೌದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ದೇಶದ ಘನತೆಯ ವಿಚಾರದಲ್ಲಿ ಮೋದಿಯವರೂ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಆದ್ದರಿಂದ ಸಮಸ್ಯೆ ಕೂಡಲೇ ಇತ್ಯರ್ಥವಾಗಲಿ ಎಂದು ಸಲಹೆ ನೀಡಿದ್ದಾರೆ.

ಕಾಯ್ದೆ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್  ಭರವಸೆ ಮೂಡಿಸುವಂತಿವೆ. ಕಾಯ್ದೆಗಳ ಪ್ರಯೋಗಾತ್ಮಕ ಜಾರಿಗೆ ಅವಕಾಶ ನೀಡುವಂತೆ ಅವರು ಕೋರಿದ್ದಾರೆ. ಅಲ್ಲದೆ, ಕಾಯ್ದೆಗಳು ರೈತರಿಗೆ ಸಮಸ್ಯೆ ಸೃಷ್ಟಿಸುವಂತಿದ್ದರೆ, ಸರ್ಕಾರ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ. ರೈತರೂ ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದಿದ್ದಾರೆ.

ರೈತರ ಪ್ರತಿಭಟನೆ ದೇಶ ಮಾತ್ರವಲ್ಲದೇ, ವಿಶ್ವದ ಗಮನ ಸೆಳೆಯುತ್ತಿದೆ

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ದೇಶ ಮಾತ್ರವಲ್ಲದೇ, ವಿಶ್ವದ ಗಮನ ಸೆಳೆಯುತ್ತಿದೆ. ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಏನೋ ಸಮಸ್ಯೆ ಸೃಷ್ಟಿಯಾಗಿದೆ ಎಂಬರ್ಥವನ್ನು ರೈತರ ಈ ಹೋರಾಟ ಹೊಮ್ಮಿಸುತ್ತಿದೆ ಎಂದು ಆತಂಕವ್ಯಕ್ತಪಡಿಸಿದ್ದಾರೆ.

ಸರ್ಕಾರ, ಹೋರಾಟಗಾರರ ನಡುವೆ ಸಮನ್ವಯವಿರಲಿ

ಭಾರತೀಯ ಕೃಷಿರಂಗ ವಿಷವರ್ತುಲದಲ್ಲಿದೆ ಎಂಬುದು ಸಾರ್ವತ್ರಿಕ ಆರೋಪ. ಕೃಷಿ ರಂಗದ ಕಲ್ಯಾಣವಾಗುತ್ತದೆ ಎಂದರೆ ಯಾವುದೇ ಪ್ರಯೋಗಕ್ಕೆ ನಾವೂ ಸಿದ್ಧರಿರುವುದು ಅಗತ್ಯ ಕೂಡ. ಹಾಗಾಗಿ, ರೈತರು ಕಾಯ್ದೆಗೆ ಅವಕಾಶ ನೀಡುವ ಬಗ್ಗೆಯೂ ಒಮ್ಮೆ ಆಲೋಚಿಸುವುದು ಉಚಿತವೂ ಆಗಿದೆ ಎಂಬುದು ನನ್ನ ಅಭಿಪ್ರಾಯ. ಆದರೆ, ಸರ್ಕಾರ, ಹೋರಾಟಗಾರರ ನಡುವೆ ಸಮನ್ವಯವಿರಲಿ.

ಮೋದಿ ತಾವು ಗಳಿಸಿಕೊಂಡ ಹೆಸರಿಗೂ ಇದು ಕಪ್ಪುಚುಕ್ಕೆಯಾಗಬಹುದು

ಭಾರತ ಗಳಿಸಿಕೊಂಡ ಖ್ಯಾತಿ, ಸ್ಥಾನಮಾನಗಳಿಗೆ ಈ ಹೊಸ ಕಾಯ್ದೆಗಳು, ಅದರ ವಿರುದ್ಧ ನಡೆಯುತ್ತಿರುವ ಹೋರಾಟಗಳು ಚ್ಯುತಿಯುಂಟು ಮಾಡಬಾರದು ಎಂಬುದು ನನ್ನ ಅಭಿಲಾಷೆ. ಮೋದಿ ಪ್ರಧಾನಿಯಾದ ನಂತರ ಸ್ವತಃ ತಾವು ಗಳಿಸಿಕೊಂಡ ಹೆಸರಿಗೂ ಇದು ಕಪ್ಪುಚುಕ್ಕೆಯಾಗಬಹುದು ಎಂಬುದನ್ನು ಅವರು ಗಮನಿಸಬೇಕು. ಅದೇ ಹೊತ್ತಲ್ಲೇ ರೈತರಿಗೆ ಅನಾನುಕೂಲವೂ ಆಗಬಾರದು.

key words : Meeting-country’s-dignity-essential-Former-CM-HD Kumaraswamy-said-whom?

The post ಪ್ರಧಾನಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಸಿ, ಹೋರಾಟ ಅಂತ್ಯಗೊಳಿಸುವುದು ಸೂಕ್ತ- ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಗಾಂಭೀರ್ಯದಿಂದ ನಡೆದುಕೊಳ್ಳಿ, ವಿದೂಷಕನಂತೆ ಕೆಲಸ ಮಾಡಬೇಡಿ : ಎಚ್.ಡಿ.ಕುಮಾರಸ್ವಾಮಿ ಟೀಕೆ
ಬೆಂಗಳೂರು,ಅಕ್ಟೋಬರ್,29,2020(www.justkannada.in) : ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ ಗಾಂಭೀರ್ಯದಿಂದ ನಡೆದುಕೊಳ್ಳಿ. ವಿದೂಷಕನಂತೆ ಕೆಲಸ ಮಾಡಬೇಡಿ. ನೀವು ಹೇಳಿರುವ ಭೀಮಾರ್ಜುನ, ಕೃಷ್ಣರಿಗೆ ನಿಜವಾಗಿಯೂ ಆ ಯೋಗ್ಯತೆ ಹೊಂದಿದ್ದಾರಾ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಶಿರಾದಲ್ಲಿ ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶಿರಾ ಉಪಚುನಾವಣೆ ಯುದ್ಧಕ್ಕೆ ಪಂಚ ಪಾಂಡವರನ್ನು ಕಳಿಸಿ ಕೊಟ್ಟಿದ್ದೇವೆ ಎಂದು ನೀಡಿದ್ದ ಹೇಳಿಕೆಗೆ ಎಚ್.ಡಿ.ಕೆ. ಕಿಡಿಕಾರಿದ್ದಾರೆ.

ಧರ್ಮ ಯುದ್ಧದಲ್ಲಿ ಗೆಲ್ಲುವುದಕ್ಕೆ ಸಂದೇಶ ಏನಿದೆ?

ಧರ್ಮ ಯುದ್ಧದಲ್ಲಿ ಗೆಲ್ಲುವುದಕ್ಕೆ ಸಂದೇಶ ಏನಿದೆ. ನಳಿನ್ ಕುಮಾರ್ ಹೇಳಿರುವ ಪಂಚ ಪಾಂಡವರಿಗೆ ಆ ಯೋಗ್ಯತೆ ಹೊಂದಿದ್ದಾರ. ಗಾಂಭೀರ್ಯದಿಂದ ನಡೆದುಕೊಳ್ಳಿ ಎಂದು ನಳಿನ್ ಕುಮಾರ್ ಕಟೀಲ್ ಗೆ ಹೇಳಿದ್ದಾರೆ.

ಅಧರ್ಮ ಯುದ್ಧವನ್ನು ಬಿಜೆಪಿಯುವರು ಮಾಡುತ್ತಿದ್ದಾರೆ

ಅಕ್ರಮವಾಗಿ ಹಣ ಸಂಪಾದನೆ ಮಾಡಿಕೊಂಡು ಕುಳಿತಿದ್ದಾರೆ.  ಜನರು ರಸ್ತೆಯಲ್ಲಿ ಊಟಕ್ಕೂ ಗತಿಯಿಲ್ಲದೆ ಮಲಗಿದ್ದಾರೆ. ಅವರ ಕಡೆಗೆ ತಿರುಗಿ ನೋಡುವ ಯೋಗ್ಯತೆಯಿಲ್ಲ. ಅಧರ್ಮ ಯುದ್ಧವನ್ನು ಬಿಜೆಪಿಯುವರು ಮಾಡುತ್ತಿದ್ದು, ಜೆಡಿಎಸ್ ನಡೆಸುತ್ತಿರುವುದು ಧರ್ಮ ಯುದ್ಧ ಎಂದು ತಿಳಿಸಿದ್ದಾರೆ.

key words : Walk-dignity-Don’t-act-clown-H.D.Kumaraswamy’s-criticism

The post ಗಾಂಭೀರ್ಯದಿಂದ ನಡೆದುಕೊಳ್ಳಿ, ವಿದೂಷಕನಂತೆ ಕೆಲಸ ಮಾಡಬೇಡಿ : ಎಚ್.ಡಿ.ಕುಮಾರಸ್ವಾಮಿ ಟೀಕೆ  appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.