digitization Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಹಸ್ತಪ್ರತಿಗಳ ಸಂರಕ್ಷಣೆ, ಡಿಜಿಟಲೀಕರಣ: ವಿವರ, ಮಾಹಿತಿ ನೀಡುವಂತೆ ವಿವಿಗಳಿಗೆ CS ಶಾಲಿನಿ ರಜನೀಶ್ ಸೂಚನೆ
ಬೆಂಗಳೂರು,ಡಿಸೆಂಬರ್,4,2025 (www.justkannada.in): ತಮ್ಮ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಸ್ತುಸಂಗ್ರಹಾಲಯಗಳ ಸಂಗ್ರಹದಲ್ಲಿರುವ ಹಸ್ತಪ್ರತಿಗಳ ವಿವರಗಳನ್ನು ಮತ್ತು ಇವುಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣಗೊಳಿಸುವ ಮತ್ತು ಡಿಜಿಟಲೀಕರಣಗೊಳಿಸಿರುವ ಮಾಹಿತಿಯನ್ನು ಕಛೇರಿಗೆ ಕಳುಹಿಸಿ ಕೊಡುವಂತೆ ಎಲ್ಲಾ ವಿವಿಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.

ಈ ಸಂಬಂಧ ರಾಜ್ಯದ ವಿವಿಗಳಿಗೆ ಸೂಚಿಸಿರುವ ಸಿಎಸ್ ಡಾ. ಶಾಲಿನಿ ರಜನೀಶ್, ಭಾರತ ದೇಶಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳನ್ನು ಸಮೀಕ್ಷೆಯನ್ನು ಕೈಗೊಂಡು ಇವುಗಳ ಇಂದಿನ ತಂತ್ರಜ್ಞಾನ ಮೂಲಕ ಇವುಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣಗೊಳಿಸುವ ಮೂಲಕ ಭವಿಷ್ಯದ ಪೀಳಿಗೆಗೆ ಅವುಗಳ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ಬಳಕೆಗೆ ಪರಂಪರೆ ಮತ್ತು ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ಡಿಜಿಟಲೀಕರಣ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ 5ನೇ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಈ ವಿಷಯವಾಗಿ ಚರ್ಚಿಸಲಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕುರಿತಂತೆ ಮಾಹಿತಿಗಳನ್ನು ನೀಡುವಂತೆ ಕೋರಿದ್ದಾರೆ.

ಹಸ್ತಪ್ರತಿಗಳು ಹಳೆಯ ಕನ್ನಡ, ತುಳು, ಮೋದಿ (ತಿಗಳಾರಿ), ದೇವನಾಗರಿ ಮತ್ತು ಉರ್ದು ಸಂಸ್ಕೃತ, ತೆಲುಗು, ಪರ್ಷಿಯನ್, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಕಂಡುಬರುತ್ತವೆ. ಹಸ್ತಪ್ರತಿ ಸಂರಕ್ಷಣೆ ಮತ್ತು ಡಿಜಿಟಲೀಕರಣವು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಎರಡು ಪೂರಕ ಪ್ರಕ್ರಿಯೆಗಳಾಗಿದ್ದು, ಈ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಹಸ್ತಪ್ರತಿಗಳ ಸಂರಕ್ಷಣೆಯು ಲ್ಯಾಮಿನೇಷನ್, ಆಮ್ಲೀಕರಣವನ್ನು ಕಡಿಮೆ ಮಾಡುವುದು ಮತ್ತು ಪರಿಸರ ನಿಯಂತ್ರಣಗಳಂತಹ ತಂತ್ರಗಳನ್ನು ಬಳಸಿಕೊಂಡು ಭೌತಿಕ ಸಂರಕ್ಷಣೆಯನ್ನು ಒಳಗೊಂಡಿರುತ್ತದೆ.

ಡಿಜಿಟಲೀಕರಣವು ವ್ಯಾಪಕ ಪ್ರವೇಶ, ಹುಡುಕಾಟ ಮತ್ತು ದೀರ್ಘಕಾಲೀನ ಸಂಗ್ರಹಣೆಗಾಗಿ  ಡಿಜಿಟಲ್ ಪ್ರತಿಗಳನ್ನು ಸೃಷ್ಟಿಸುತ್ತದೆ, ಭೌತಿಕ ನಿರ್ವಹಣೆಯಿಂದ ದುರ್ಬಲವಾದ ಮೂಲಗಳನ್ನು ರಕ್ಷಿಸುತ್ತದೆ. ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆಯ ಮೂಲಕ ಸಾರ್ವಜನಿಕ ಪ್ರವೇಶವನ್ನು ಒದಗಿಸುವ ಸಲುವಾಗಿ ಡಿಜಿಟಲೀಕರಣಗೊಳಿಸಲು ಮತ್ತು ಸಂಯೋಜಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯವು ಸಮಗ್ರ ಯೋಜನೆಯನ್ನು ರೂಪಿಸುತ್ತಿದ್ದು, ಪ್ರಾಚೀನ ಹಸ್ತಪ್ರತಿಗಳ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳ ಜ್ಞಾನವನ್ನು ಶಾಶ್ವತವಾಗಿ ಉಳಿಸಲು ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಅಗತ್ಯವಾಗಿದೆ ಎಂದು ಸಿಎಸ್  ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ತಮ್ಮ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಸ್ತುಸಂಗ್ರಹಾಲಯಗಳ ಸಂಗ್ರಹದಲ್ಲಿರುವ ಹಸ್ತಪ್ರತಿಗಳನ್ನು ವಿವರಗಳನ್ನು ಮತ್ತು ಇವುಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣಗೊಳಿಸುವ ಮತ್ತು ಡಿಜಿಟಲೀಕರಣಗೊಳಿಸಿರುವ ಮಾಹಿತಿಯನ್ನು ಈ ಕಛೇರಿಗೆ ಕಳುಹಿಸಿಕೊಡಬೇಕು ಎಂದು ಸಿಎಸ್ ಶಾಲಿನಿ ರಜನೀಶ್ ತಿಳಿಸಿದ್ದಾರೆ.

Key words: Preservation, digitization, manuscripts, CS, Shalini Rajneesh

The post ಹಸ್ತಪ್ರತಿಗಳ ಸಂರಕ್ಷಣೆ, ಡಿಜಿಟಲೀಕರಣ: ವಿವರ, ಮಾಹಿತಿ ನೀಡುವಂತೆ ವಿವಿಗಳಿಗೆ CS ಶಾಲಿನಿ ರಜನೀಶ್  ಸೂಚನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಂಡ್ಯ: ರೆಕಾರ್ಡ್ ರೂಮ್ ಡಿಜಿಟಲೀಕರಣಕ್ಕೆ ಅಧಿಕೃತ ಚಾಲನೆ
ಮಂಡ್ಯ,ಜನವರಿ,9,2025 (www.justkannada.in): ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಅವರು ಇಂದು ಮಂಡ್ಯ ತಾಲ್ಲೂಕು ಕಚೇರಿಯಲ್ಲಿ ರೆಕಾರ್ಡ್ ರೂಮ್, ಸರ್ವೆ ದಾಖಲೆಗಳ ಡಿಜಿಟಲೀಕರಣ ಭೂ ಸುರಕ್ಷಾ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಶಾಸಕ ಪಿ. ರವಿಕುಮಾರ್ ಅವರು,  ರೈತರು ತಮ್ಮ ಭೂಮಿ ದಾಖಲೆಗಳನ್ನು ಕಳೆದುಕೊಂಡು ಮತ್ತೆ ಪಡೆಯಲು ತಹಶೀಲ್ದಾರ್ ಕಚೇರಿ ತಿಂಗಳುಗಟ್ಟಲೆ ತಿರುಗಿದರೂ ದಾಖಲಾತಿ ದೊರೆಯುತ್ತಿರಲಿಲ್ಲ, 40-50 ವರ್ಷದ ಹಳೆಯ ಭೂ ದಾಖಲೆಗಳ ಪತ್ರದ ಕಾಗದ ಹಳೆಯದಾಗಿ ಹರಿದುಹೋಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿತ್ತು.  ಇದನ್ನು ಚಿಂತಿಸಿ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಅವರಿಗೆ ಬೇಕಾದ ಸಮಯದಲ್ಲಿ ದಾಖಲೆಗಳ ಪ್ರಿಂಟ್ ಗಳನ್ನು ನೀಡಬಹುದು ಎಂದರು.

ರೈತರಿಗೆ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಇಲ್ಲಿಯ ತನಕ ಕಂದಾಯ ಇಲಾಖೆಯಲ್ಲಿ ನೋಂದಣಿ ಆಗಿರುವ ಎಲ್ಲಾ ಭೂಮಿ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಕ್ಲೌಡ್ ನಲ್ಲಿ ಸಂಸ್ಕರಿಸಲಾಗುವ ಯೋಜನೆ ಇದಾಗಿದೆ ಎಂದರು.

ಭೂಸುರಕ್ಷಾ ಎಂಬ ಅಪ್ಲಿಕೇಶನ್ ನಲ್ಲಿ ನಿಮ್ಮ ಭೂ ದಾಖಲೆಯ ಸಂಖ್ಯೆಯನ್ನು ನೀಡಿದರೆ ಸಾಕು, ಒಂದು ನಿಮಿಷದಲ್ಲಿ ನಿಮ್ಮ ಭೂ ದಾಖಲಾತಿ ಪತ್ರಗಳನ್ನು ನೀಡುವ  ಕ್ರಾಂತಿಕಾರಿ ಯೋಜನೆಯನ್ನು  ಸರ್ಕಾರ ಮಾಡಿದೆ. ಇಂದು ಡಿಜಿಟಲೀಕರಣ ಯೋಜನೆಗೆ  ಅಧಿಕೃತವಾಗಿ ಚಾಲನೆ ನೀಡಿರುವುದು ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ‌, ಶೀತಲೀಕರಣಗೊಂಡ ಭೂಮಿ ದಾಖಲಾತಿಗಳು, ಕಳೆದು ಹೋದ ಭೂಮಿ ದಾಖಲೆಗಳು ರೈತರಿಗೆ ಅನುಕೂಲವಾಗುವಂತೆ ಯಾವುದೇ ದಾಖಲಾತಿಗಳನ್ನು ಯಾರು ತಿದ್ದುಲು ಕದಿಯಲು ಅವಕಾಶ ನೀಡಿದೆ ಸ್ಕ್ಯಾನ್ ಮಾಡುವ ಮೂಲಕ ಶೇಖರಿಸಿ ಇಡುವ ಯೋಜನೆ ಇದಾಗಿದೆ ಎಂದರು‌.

ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ದಾಖಲೆಗಳ ಡಿಜಿಟಲೀಕರಣ ಕೆಲಸ ಈಗಾಗಲೇ ಪ್ರಾರಂಭಿಸಿದ್ದು, 56  ಲಕ್ಷಕ್ಕೂ ಹೆಚ್ಚು ದಾಖಲಾತಿ ಪತ್ರಗಳನ್ನು ಸ್ಕ್ಯಾನ್ ಮಾಡಲಾಗಿದೆ.   ಮಂಡ್ಯ ತಾಲೂಕಿನಲ್ಲೂ ಇಂದು ಚಾಲನೆ ನೀಡಿದ್ದೇವೆ. ಇಲ್ಲೂ ಸಹ 90 ಸಾವಿರ ಕಡತಗಳಿವೆ 45 ಲಕ್ಷಕ್ಕೂ ಹೆಚ್ಚು ದಾಖಲಾತಿ ಪತ್ರಗಳಿವೆ ಮುಂದಿನ ಒಂದು ವರ್ಷದೊಳಗೆ ಎಲ್ಲವನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕಾರಿಸುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ಡಾ ಶಿವಕುಮಾರ ಬಿರಾದರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Mandya, digitization, record room, survey records

The post ಮಂಡ್ಯ: ರೆಕಾರ್ಡ್ ರೂಮ್ ಡಿಜಿಟಲೀಕರಣಕ್ಕೆ ಅಧಿಕೃತ ಚಾಲನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

BIG NEWS : ಕೋವಿಡ್ ಸಂಕಷ್ಟದಲ್ಲಿ ವಿದ್ಯಾರ್ಥಿಗಳ ನೆರವಿಗೆ KSOU ಆರಂಭಿಸಿದೆ ರೇಡಿಯೋ ಪಾಠ..!
ಮೈಸೂರು, ಜು.20, 2020 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ‘ ರೇಡಿಯೋ ಪಾಠ ‘ ಆರಂಭಿಸಿದೆ. ಜತೆಗೆ ಜು. 31 ರ ಬಳಿಕ ಸಂಪೂರ್ಣ ಡಿಜಿಟಲೀಕರಣಗೊಂಡು ವಿದ್ಯಾರ್ಥಿಗಳ ಪ್ರವೇಶಾತಿಯಿಂದ ಹಿಡಿದು ಪ್ರತಿಯೊಂದು ವ್ಯವಸ್ಥೆಯೂ ಆನ್ ಲೈನ್ ಮೂಲಕವೇ ನಡೆಯಲಿದೆ.

ಕೆಎಸ್ಒಯು ಕುಲಪತಿ ಡಾ.ಎಸ್.ವಿದ್ಯಾಶಂಕರ್, ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಿಷ್ಟು…

ವಿದ್ಯಾರ್ಥಿಗಳ ಹಿತ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಮುಕ್ತ ವಿವಿ ಆನ್ ಲೈನ್ ವ್ಯವಸ್ಥೆ ಜಾರಿಗೆ ಮುಂದಾಗಿತ್ತು. ಜತೆಗೆ ಈಗ ಕೋವಿಡ್ ಸಂಕಷ್ಟದ ಸಮಯಬೇರೆ. ಆದ್ದರಿಂದ ಸಂಪೂರ್ಣ ಡಿಜಿಟಲೀಕರಣ ಮಾಡುವತ್ತ ದಾಪುಗಾಲಿಟ್ಟಿದ್ದೇವೆ. ಜು.31 ರ ಬಳಿಕ ಮುಕ್ತ ವಿವಿ ವ್ಯವಸ್ಥೆ ಸಂಪೂರ್ಣ ಆನ್ ಲೈನ್ ಗೊಳ್ಳಲಿದೆ.

ಆ ಮೂಲಕ ದೂರ ಶಿಕ್ಷಣ ವಿದ್ಯಾರ್ಥಿಗಳು, ಪ್ರವೇಶಾತಿ, ಶುಲ್ಕ ಪಾವತಿ, ಅಧ್ಯಯನ ಸಾಮಗ್ರಿಗಳು ಸೇರಿದಂತೆ ಇನ್ನಿತರೆ ಯಾವುದೇ ಕಾರ್ಯಕ್ಕೂ ಮುಕ್ತ ವಿವಿಗೆ ಬರುವುದು ತಪ್ಪುತ್ತದೆ. ದೂರ ಶಿಕ್ಷಣ ವ್ಯವಸ್ಥೆಯ ‘ ರೀಚ್ ದ ನಾನ್ ರೀಚ್ ‘ ಗುರಿ ತಲುಪಬಹುದು ಎಂದರು.

ಆನ್ ಲೈನ್ ದಾಖಲು :

ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರವೇಶಾತಿಯ ಜನವರಿ ಸೈಕಲ್ ನಲ್ಲಿ ಈಗಾಗಲೇ 6000 ವಿದ್ಯಾರ್ಥಿಗಳು ಅಡ್ಮಿಷನ್ ಆಗಿದ್ದಾರೆ. ಆ ಮೂಲಕ ಮುಕ್ತ ವಿವಿ ಮೊಟ್ಟ ಮೊದಲ ಬಾರಿಗೆ ಜಾರಿಗೊಳಿಸಿದ್ದ ಆನ್ ಲೈನ್ ಅಡ್ಮಿಷನ್ ಪದ್ಧತಿಗೆ ವಿದ್ಯಾರ್ಥಿಗಳಿಂದ ಪೂರಕ ಬೆಂಬಲ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದು ಮುಕ್ತ ವಿವಿ ಕುಲಪತಿ ಡಾ. ಎಸ್. ವಿದ್ಯಾಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಸ್ಟೂಡೆಂಟ್ ಆ್ಯಪ್ :

ಇದೇ ಮೊದಲ ಬಾರಿ ಕರ್ನಾಟಕ ರಾಜ್ಯ ಮುಕ್ತ ವಿವಿ ಜಾರಿಗೊಳಿಸಿದ್ದ ‘ ಸ್ಟೂಡೆಂಟ್ ಆ್ಯಪ್’ ಗೆ ವಿದ್ಯಾರ್ಥಿ ವಲಯದಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮೂರು ತಿಂಗಳ ಹಿಂದೆಯಷ್ಟೆ ಬಿಡುಗಡೆಗೊಂಡ ಈ ಆ್ಯಪ್ ಈಗಾಗಲೇ 12, 000 ಡೌನ್ಲೋಡ್ ಆಗಿದೆ.

ಈ ಆ್ಯಪ್ ಮೂಲಕವೇ ವಿದ್ಯಾರ್ಥಿಗಳಿಗೆ ಪಾಠ ಕೇಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿಂದೆ ಮುಕ್ತ ವಿವಿಯ ಜ್ಞಾನವಾಹಿನಿ ಯೋಜನೆಯಡಿ ಪರಿಣಿತ ಪ್ರಾಧ್ಯಾಪಕರಿಂದ ಪಠ್ಯಗಳನ್ನು ರೆಕಾರ್ಡ್ ಮಾಡಿಸಲಾಗಿತ್ತು. ಈಗ ಆ ಪಾಠದ ಪ್ರವಚನಗಳನ್ನು ಸಂಪೂರ್ಣ ಡಿಜೀಟಲಿಕರಣಗೊಳಿಸಿ ಆ್ಯಪ್ ನಲ್ಲಿ ‘ ರೇಡಿಯೋ ಪಾಠ ‘ ದ ಮೂಲಕ ವಿದ್ಯಾರ್ಥಿಗಳಿಗೆ ಸದುಪಯೋಗವಾಗುವಂತೆ ಮಾಡಲಾಗಿದೆ.

ಇಂತಹ ಸಹಸ್ರಾರು ಪಾಠ ಪ್ರವಚನಗಳನ್ನು ರೆಕಾರ್ಡ್ ಮಾಡಲಾಗಿದ್ದು, ಅವನ್ನೆಲ್ಲಾ ಡಿಜಿಟಲೀಕರಣದ ಮೂಲಕ ರೇಡಿಯೋ ಪಾಠದಲ್ಲಿ ಕೇಳುವಂತೆ ಮಾಡುವ ಗುರಿ ಹೊಂದಲಾಗಿದೆ.

ಗೂಗಲ್ ಪ್ಲೇಸ್ಟೋರ್ ನಲ್ಲಿ ‘ಸ್ಟೂಡೆಂಟ್ ಆ್ಯಪ್ ‘ ಎಂದು ಟೈಪ್ ಮಾಡಿದರೆ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ಕೇವಲ ಮುಕ್ತವಿವಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಇತರೆ ಯಾವುದೇ ವಿವಿಯ ವಿದ್ಯಾರ್ಥಿಗಳು ಸಹ ಉಚಿತವಾಗಿ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರ ಪ್ರಯೋಜನ ಪಡೆಯಬಹುದು ಎಂದು ಕುಲಪತಿ ಡಾ. ಎಸ್.ವಿದ್ಯಾಶಂಕರ್ ತಿಳಿಸಿದರು.

ಸದ್ಯದಲ್ಲೇ ಮುಕ್ತ ವಿವಿಯ ವೆಬ್ ಸೈಟ್ ಹಾಗೂ ಆ್ಯಪ್ ಮೂಲಕ ಲೈವ್ ಪ್ರೋಗ್ರಾಮ್ ಜಾರಿಗೊಳ್ಳಲಿದೆ. ಈ ನಿಟ್ಟಿನಲ್ಲಿ ಅಗತ್ಯ ತಾಂತ್ರಿಕ ಪೂರ್ವ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದರು.

ooooo

key words : Mysore-mysuru-KSOU-radio-classes-digitization-online-admission-VC-vidyashankar

The post BIG NEWS : ಕೋವಿಡ್ ಸಂಕಷ್ಟದಲ್ಲಿ ವಿದ್ಯಾರ್ಥಿಗಳ ನೆರವಿಗೆ KSOU ಆರಂಭಿಸಿದೆ ರೇಡಿಯೋ ಪಾಠ..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.