Device- ready - detection - bacteria - IISc scientists. Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಐಐಎಸ್ಸಿ ವಿಜ್ಞಾನಿಗಳಿಂದ ಬ್ಯಾಕ್ಟೀರಿಯಾಗಳ ವ್ಯೋಮಪಯಣಕ್ಕೆ ಸಾಧನ ಸಿದ್ಧ.
ಬೆಂಗಳೂರು,ಸೆಪ್ಟಂಬರ್,4,2021(www.justkannada.in):

ಮುಂದಿನ ಮಂಗಳಯಾನದಲ್ಲಿ ಜೀವಿಗಳನ್ನೂ ಕಳಿಸಲು ವ್ಯವಸ್ಥೆ ರೆಡಿಯಾಗಿದೆ. ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸಸಿನ ಇಂಜಿನೀಯರುಗಳು ವ್ಯೋಮದಲ್ಲಿ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಜೀವಿಗಳನ್ನು ಬೆಳೆಸಿ, ಅಧ್ಯಯನ ಮಾಡಲು ಅಗತ್ಯವಾದಂತಹ ಪುಟ್ಟಲ್ಯಾಬ್-ಆನ್-ಚಿಪ್‌ ಉಪಕರಣವನ್ನು ಸಿದ್ಧಪಡಿಸಿ, ಪರೀಕ್ಷಿಸಿದ್ದಾರೆ. ಇದು ಭೂಮಿಯಲ್ಲಿದ್ದುಕೊಂಡೆ ಲಕ್ಷಾಂತರ ಕಿಲೋಮೀಟರುಗಳು ದೂರದಲ್ಲಿರುವ ವ್ಯೋಮ ನೌಕೆಯಲ್ಲಿ ಬ್ಯಾಕ್ಟೀರಿಯಾಗಳನ್ನು ಬೆಳೆಸಿ ಅಧ್ಯಯನಮಾಡಲು ನೆರವಾಗುತ್ತದೆ.

ಬ್ಯಾಕ್ಟೀರಿಯಾಗಳನ್ನು ಬೆಳೆಸಲು ಸದಾ ಬೆಚ್ಚಗಿರುವ ವಾತಾವರಣ ಬೇಕಾಗುತ್ತದೆ. ಪ್ರಯೋಗಾಲಯಗಳಲ್ಲಿ ಇದಕ್ಕಾಗಿ ವಿದ್ಯುತ್ತಿನಿಂದ ಬೆಚ್ಚಗಿಡಬಹುದಾದ ಸಾಧನಗಳಿರುತ್ತವೆ. ಆದರೆ ವ್ಯೋಮದಲ್ಲಿ ಇಷ್ಟುದೊಡ್ಡಉಪಕರಣವನ್ನು ಕೊಂಡೊಯ್ಯಲಾಗಲಿ, ವಿದ್ಯುತ್ತಾಗಲಿ ಇರುವುದಿಲ್ಲ ಜೊತೆಗೆ ಅಲ್ಲಿನ ಪರಿಸರ ಅತ್ಯಂತ ಶೀತಲವಾ ಕೂಡ. ಹೀಗಾಗಿ, ಪುಟ್ಟದಾದ, ಅಲ್ಪವಿದ್ಯುತ್ತಿನಲ್ಲಿಯೇ ಬೆಚ್ಚಗಿನ ವಾತಾವರಣವನ್ನುನೀಡುವ ಉಪಕರಣಗಳ ಅವಶ್ಯಕತೆ ಇದೆ.

ಐಐಎಸ್ಸಿಯ ಮೆಕ್ಯಾನಿಕಲ್‌ ಇಂಜಿನೀಯರಿಂಗ್‌ ವಿಭಾಗದ ಕೌಶಿಕ್‌ ವಿಶ್ವನಾಥನ್‌ ಹಾಗೂ ಅಲೋಕ್‌ ಕುಮಾರ್‌ ಮತ್ತು ತಂಡದದವರು ತಯಾರಿಸಿರುವ ಈ ಸಾಧನದಲ್ಲಿ ಒಮ್ಮೆಲೇ ಹನ್ನೆರಡು ವಿಭಿನ್ನ ಬ್ಯಾಕ್ಟೀರಿಯಾಗಳನ್ನು ಬೆಳೆಸಬಹುದು. ಒಂದು ವಾಟ್‌ ಅಂದರೆ ಒಂದುಸ್ಮಾರ್ಟ್‌ ಫೋನ್‌ ಬಳಸುವುದಕ್ಕಿಂತಲೂ ಕಡಿಮೆ ವಿದ್ಯುತ್ತನ್ನು ಇದು ಬಳಸುತ್ತದೆ. ಜೊತೆಗೆ ದೂರದಿಂದಲೇ ಬ್ಯಾಕ್ಟೀರಿಯಾದ ಬೆಳೆವಣಿಗೆ ಹೇಗಾಗುತ್ತಿದೆ ಎಂದು ಕೂಡ ತಿಳೀಯಬಹುದು.

ಪುಟ್ಟ, ಪುಟ್ಟ ಕೆಲವೇ ಮಿಲಿಮೀಟರು ಅಗಲದ ಪ್ಲಾಸ್ಟಿಕ್‌ ಕೋಣೆಗಳಿರುವ ಉಪಕರಣ ಇದು. ಇದರ ತಳದಲ್ಲಿ ಎಲ್‌ಇಡಿ ದೀಪವನ್ನೂ, ಮೇಲ್ಬಾಗದಲ್ಲಿ ಬೆಳಕಿನ ತಗುಲಿದಾಗ ಅದರ ಪ್ರಖರತೆಗೆ ತಕ್ಕಂತೆ ವಿದ್ಯುತ್‌ ಉತ್ಪಾದಿಸಬಲ್ಲ ಫೋಟೋ ಡಯೋಡ್‌ ಸಂವೇದಕವನ್ನೂ ಜೋಡಿಸಲಾಗಿದೆ. ಇವೆರಡರ ನಡುವೆ ಇರುವಕೋಣೆಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಬೇಕಾದ ಸಕ್ಕರೆದ್ರಾವಣವನ್ನುಇಡಬಹುದು. ಈ ದ್ರಾವಣಕ್ಕೆ ಬೇಕಾದ ಬ್ಯಾಕ್ಟೀರಿಯಾಗಳನ್ನು ಇಷ್ಟಬಂದಾಗ ಸೇರಿಸುವ ವ್ಯವಸ್ಥೆ ಮಾಡಲಾಗಿದೆ. ಭೂಮಿಯಿಂದಲೇ ಸಂಕೇತವನ್ನು ನೀಡಿ, ಈ ಕೋಣೆಗಳೊಳಗೆ ಬ್ಯಾಕ್ಟೀರಿಯಾವನ್ನು ಹರಿಯಬಿಡಬಹುದು. ಅನಂತರ ಅವು ಬೆಳೆಯುವ ಬಗೆಯನ್ನು ಗುರುತಿಸಬಹುದು.

ಬ್ಯಾಕ್ಟೀರಿಯಾಗಳು ಬೆಳೆದಂತೆ ಎಲ್‌ ಇಡಿ ದೀಪದಿಂದ ಹರಿಯುವ ಬೆಳಕಿನ ಪ್ರಖರತೆ ಕುಂದುತ್ತದೆ. ಇದನ್ನು ವಿಶ್ಲೇಷಿಸುವ ಮೂಲಕ ಅವುಗಳ ಬೆಳೆವಣಿಗೆ ಹೇಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಹೀಗೆ ದೂರನಿಯಂತ್ರಣದಿಂದಲೇ ಬೇಕೆಂದ ಬ್ಯಾಕ್ಟೀರಿಯಾವನ್ನು, ಬೇಕೆಂದಾಗ, ಬೇಕಾದ ಪೋಷಕಾಂಶಗಳನ್ನು ನೀಡಿ ಬೆಳೆಸಿ ಪರೀಕ್ಷಿಸುವ ವ್ಯವಸ್ಥೆ ಈ ಸಾಧನದಲ್ಲಿ ಇದೆ.

ಕೋಣೆಗಳಲ್ಲಿಟ್ಟಬ್ಯಾಕ್ಟೀರಿಯಾಸೋರದಂತೆಭದ್ರವಾಗಿಯೂ, ಎಲ್‌ಇಡಿದೀಪದಪ್ರಖರತೆಯಿಂದಾಗಿಹೆಚ್ಚುಬಿಸಿಯಾಗದಂತೆಯೂ, ಇದರಿಂದಾಗಿಬ್ಯಾಕ್ಟೀರಿಯಾಗಳಬೆಳೆವಣಿಗೆಗೆಅಡ್ಡಿಯಾಗದಂತೆಯೂಎಚ್ಚರವಹಿಸಲಾಗಿದೆಎನ್ನುತ್ತಾರೆಕೌಶಿಕ್‌ ವಿಶ್ವನಾಥನ್.‌ ಈ ಸಾಧನದಲ್ಲಿಸ್ಪೋರೋಸಾರ್ಸಿನಾಪ್ಯಾಶ್ಚುರೈಎನ್ನುವಬ್ಯಾಕ್ಟೀರಿಯಾವನ್ನುಬೆಳೆಸಿಪರೀಕ್ಷಿಸಿಯೂನೋಡಿದ್ದಾರೆ.

ಇನ್ನು ಇದು ವ್ಯೋಮದಲ್ಲಿ ಇರುವ ಒತ್ತಡಗಳ ವ್ಯತ್ಯಾಸ, ವ್ಯೋಮ ನೌಕೆಯ ಅಲುಗಾಟಗಳನ್ನು ತಾಳಿಕೊಳ್ಳುವಂತೆ ಮಾಡಿದರೆ ಮುಂದಿನ ಗಗನಯಾನವೋ, ಮಂಗಳಯಾನದಲ್ಲಿಯೋ ನಾವೇ ಜೀವಿಗಳ ಪರೀಕ್ಷೆಯನ್ನು ಕೈಗೊಳ್ಳಬಹುದು. ಬೇರೆ ಜಂತುಗಳನ್ನೂ ಬೆಳೆಸುವುದಕ್ಕೆಇದು ನೆರವಾಗಬಲ್ಲುದು ಎನ್ನುವ ಆಶಯವನ್ನು ಐಐಎಸ್ಸಿ ವಿಜ್ಞಾನಿಗಳು ಪ್ರಕಟಿಸಿದ್ದಾರೆ.

ಈ ಶೋಧದ ವಿವರಗಳನ್ನು ಆಕ್ಟಾಆಸ್ಟ್ರೋನಾಮಿಕಾ ಪತ್ರಿಕೆ ಪ್ರಕಟಿಸಿದೆ.

ವರದಿ: ಕೊಳ್ಳೇಗಾಲ ಶರ್ಮ

Key words:Device- ready – detection – bacteria – IISc scientists.

The post ಐಐಎಸ್ಸಿ ವಿಜ್ಞಾನಿಗಳಿಂದ ಬ್ಯಾಕ್ಟೀರಿಯಾಗಳ ವ್ಯೋಮಪಯಣಕ್ಕೆ ಸಾಧನ ಸಿದ್ಧ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.