DC Shilpanag Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಯುವ ಸಮೂಹ ಸೇವಾ ಮನೋಭಾವ ಬೆಳೆಸಿಕೊಂಡು ನಾಡು- ನುಡಿ ಸೇವೆ ಮಾಡಬೇಕು- ಡಿಸಿ ಶಿಲ್ಪಾನಾಗ್
ಮೈಸೂರು,ನವೆಂಬರ್,25,2024 (www.justkannada.in):  ಯುವ ಸಮೂಹ ಸರ್ಕಾರಿ ಸೇವೆಗೆ ಬರಬೇಕು. ಸೇವಾ ಮನೋಭಾವ ಬೆಳೆಸಿಕೊಂಡು ನಾಡು- ನುಡಿಯ ಸೇವೆ ಮಾಡಬೇಕು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ನಡೆಯುತ್ತಿರುವ 30 ದಿನಗಳ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಚಾಮರಾಜನಗರ ಡಿಸಿ ಶಿಲ್ಪಾನಾಗ್ ಅವರು ಮಾತನಾಡಿದರು.

ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಲು ನಿಷ್ಟೆ ಇರಬೇಕು. ಅಧಿಕಾರಿಗಳಾದ ಮೇಲೆ ನಿಮ್ಮ ನಿಲುವು ಬದಲಾಗಬಾರದು. ರಾಷ್ಟ್ರೀಯ ಐಕ್ಯತೆ, ಸಮಾನತೆ, ಸಾಮಾಜಿಕ ಕಳಕಳಿಯಲ್ಲಿ ತೊಡಗಿಸಿಕೊಳ್ಳಬೇಕು. ಜನರು ಅಧಿಕಾರಿಗಳ ಮೇಲೆ ವಿಶ್ವಾಸ ಇಟ್ಟಿರುತ್ತಾರೆ. ಜೊತೆಗೆ ನಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆಯಿಂದ ಇರಬೇಕು ಎಂದರು.

ನಾವೆಲ್ಲರೂ ಕೂಡ ವ್ಯವಸ್ಥೆಯನ್ನು ಟೀಕಿಸುತ್ತಿದ್ದೇವೆ, ಸ್ಥಳೀಯ ಸಂಸ್ಥೆಗಳನ್ನು ನಿಂದಿಸುತ್ತೇವೆ, ರಸ್ತೆ ಸರಿಯಿಲ್ಲವೆಂದರೆ ಸರ್ಕಾರವನ್ನು ಟೀಕಿಸುತ್ತೇವೆ.  ಆದರೆ ನಾವು ವ್ಯವಸ್ಥೆಯೊಳಗೆ ಬಂದಾಗ ನಮ್ಮ ಜವಾಬ್ದಾರಿಯನ್ನು ಮರೆಯಬಾರದು ಎಂದರು.

ಉನ್ನತ ಶಿಕ್ಷಣ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದೆ. ಪದವಿ ಪಡೆದವರೆಲ್ಲ ಯುಪಿಎಸ್‌ಸಿ. ಕೆಪಿಎಸ್‌ಸಿ ಪರೀಕ್ಷೆ ಬರೆಯಬಹುದು. ನಿಮ್ಮಂತ ಯುವ ಸಮೂಹ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂದ ಅವರು ಪರೀಕ್ಷೆ ಬಗ್ಗೆ ಭಯಬೇಡ. ಸಿದ್ಧತೆ ನಿರಂತರ ಇರಲಿ. ಪ್ರತಿದಿನ ಪತ್ರಿಕೆ ಓದಿ. ಪರೀಕ್ಷಾ ವೇಳೆಯಲ್ಲಿ ಸಮಯ ನಿರ್ವಹಣೆಯ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದರು.

ಸಮಾಜಕ್ಕೆ ಸೇವೆ ಮಾಡಬೇಕು ಅಂತ ಬಂದಿದ್ದೀರಿ. ಸೇವೆ ಮಾಡಿ. ಸಮಾಜಕ್ಕೆ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗಲ್ಲ. ಕಷ್ಟಪಟ್ಟವರಿಗೆ ಮಾತ್ರ ಸಮಾಜ ಸೇವಾ ಮಾಡುವ ಅವಕಾಶ ಸಿಗುವುದು.  ಇಂದಿನ ಪರೀಕ್ಷಾರ್ಥಿಗಳು ಒಂದು ಪರೀಕ್ಷೆ ಬರೆದ ಕೂಡಲೇ. ಯಶಸ್ಸು ಬೇಕೆಂದು ಅಪೇಕ್ಷಿಸುತ್ತಾರೆ. ಇಲ್ಲವಾದರೆ ಅಲ್ಲಿಗೆ ಬಿಟ್ಟುಬಿಡುತ್ತಾರೆ. ಪರೀಕ್ಷೆ ಬರೆದ ಮೊದಲೆ ವರ್ಷದಲ್ಲಿ ಎಲ್ಲವೂ ನಿರ್ಧಾರವಾಗುವುದಿಲ್ಲ. ಆಗಾಂತ ಐದು ಹತ್ತು ವರ್ಷ ತೆಗೆದುಕೊಳ್ಳಬಾರದು. ನಿಮ್ಮ ಆತ್ಮಗೌರವ ಪರೀಕ್ಷೆಗಳಿಂದ ನಿರ್ಧಾರವಾಗಲ್ಲ ಎಂಬುದನ್ನು ಮೊದಲು ತಿಳಿಯಿರಿ ಎಂದು ಸಲಹೆ ನೀಡಿದರು.

ಪ್ರತಿದಿನ ಓದುತ್ತಾ ಹೋದಂತೆ ನಿಮ್ಮನ್ನು ನೀವು ಭೌದ್ಧಿಕವಾಗಿ ರೂಪಿಸಿಕೊಳ್ಳಬೇಕು. ನಿಮ್ಮ ಶಕ್ತಿ ಮತ್ತು ದೌರ್ಬಲ್ಯವನ್ನ ಅರಿಯಿರಿ ಎಂದರು.

ಬಳಿಕ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳ ಬಗ್ಗೆ ಅಭ್ಯರ್ಥಿಗಳಿಗಿದ್ದ ಗೊಂದಲ ನಿವಾರಿಸಿ, ಕೆಲವು ಸಲಹೆ ನೀಡಿದರು.

ಮೈಸೂರು ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ಪಿ ಶಿವರಾಜು ಮಾತನಾಡಿ, ಮನೋಧರ್ಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ಹೀಗಾಗಿ ಎಲ್ಲರೂ ಮನೋಧರ್ಮ ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಿ, ಐಎಎಸ್ ಹಾಗೂ ಕೆಎಎಸ್ ಅಧಿಕಾರಿಯಾಗಬೇಕಾದರೆ ಅದು ನಮ್ಮಿಂದ ಏನನ್ನೊ ಬಯಸುತ್ತಿದೆ ಎಂಬುದನ್ನು ನಾವು ಮನಗಾಣಬೇಕು. ಜೊತೆಗೆ ಅದನ್ನ ಪೂರ್ಣಗೊಳಿಸುವ ಛಲ ವಿಶ್ವಾಸವಿರಬೇಕು ಎಂದು ಹೇಳಿದರು.

ಅಧಿಕಾರಿಗಳಿಗೆ ತುಂಬಾ ಒತ್ತಡ ಇರುತ್ತದೆ. ಎಲ್ಲಾ ಒತ್ತಡವನ್ನು ನಿವಾರಿಸಿಕೊಂಡು ಸಾರ್ವಜನಿಕ ಸೇವೆ ಮಾಡಬೇಕು. ನಮ್ಮ ದೇಶವೇ ನಮಗೆ ನಾಯಕ. ಇಲ್ಲಿನ ಪರೀಕ್ಷಾ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದೆ. ಸರ್ಕಾರಿ ಸೇವೆಗೆ ಬಂದ ಮೇಲೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ನಿಮ್ಮಲ್ಲಿ ವಿಶಿಷ್ಟ ಚೇತನವಿದೆ. ಸೋಲದೆ ಮುನ್ನುಗ್ಗಿ. ಸೋತೆ ಎಂದು ಕೊರಗಬೇಡಿ. ಸೋಲಿಗೆ ಸಾವಿರ ಕಾರಣ ಇರುತ್ತದೆ. ಗೆಲುವಿಗೆ ಯಾವುದೇ ಕಾರಣವಿರಲ್ಲ. ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರಣಪ್ಪ ಹಲಸೆ ಮಾತನಾಡಿ ಪ್ರತಿಯೊಬ್ಬರ ಯಶಸ್ಸಿಗೆ ಪರಿಶ್ರಮ ಇರಬೇಕು, ಜೊತೆಗೆ ನಿಮ್ಮೆಲ್ಲರ ಗೆಲುವಿಗೆ ನೀವೇ ಹೊಣೆಯಾಗುತ್ತೀರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಕೆ.ಬಿ ಪ್ರವೀಣ, ಡೀನ್ ಗಳಾದ ಡಾ. ಎನ್. ಲಕ್ಷ್ಮಿ ಪ್ರೊ. ರಮಾನಾಥಂನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿಗಳಾದ ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಇದ್ದರು.

Key words: youth, develop, spirit, service, DC Shilpanag

The post ಯುವ ಸಮೂಹ ಸೇವಾ ಮನೋಭಾವ ಬೆಳೆಸಿಕೊಂಡು ನಾಡು- ನುಡಿ ಸೇವೆ ಮಾಡಬೇಕು- ಡಿಸಿ ಶಿಲ್ಪಾನಾಗ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಇಂಡಿಗನತ್ತ ಗ್ರಾಮಕ್ಕೆ ಭೇಟಿ: ಬಂಧಿತರ ಬಿಡುಗಡೆಗೊಳಿಸುವ ಭರವಸೆ ನೀಡಿದ ಡಿಸಿ ಶಿಲ್ಪನಾಗ್
ಹನೂರು,ಮೇ,14,2024 (www.justkannada.in): ಲೋಕಸಭೆ ಚುನಾವಣೆ ವೇಳೆ ಮತಯಂತ್ರವನ್ನ ಧ್ವಂಸಗೊಳಿಸಿದ್ದ ಪ್ರಕರಣ ಸಂಬಂಧ ಇಂದು ಇಂಡಿಗನತ್ತ ಗ್ರಾಮಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂಧಿಸಿದರು.

ರಾಜ್ಯದಲ್ಲಿ ಏಪ್ರಿಲ್ 26 ರಂದು ನಡೆದ ಲೋಕಸಭಾ ಚುನಾವಣೆ ಮತದಾನದ ವೇಳೆ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ  ಇಂಡಿಗನತ್ತ ಗ್ರಾಮಸ್ಥರು ಮತದಾನಕ್ಕೆ ಬಹಿಷ್ಕಾರ ಹಾಕಿ ಗಲಾಟೆ ಮಾಡಿ ಮತಯಂತ್ರ ಧ್ವಂಸಗೊಳಿಸಿದ್ದರು. ಪ್ರಕರಣ ಸಂಬಂಧ ಹಲವರನ್ನ ಬಂಧಿಸಲಾಗಿದೆ.

ಮತಯಂತ್ರ ಧ್ವಂಸ ಪ್ರಕರಣದಲ್ಲಿ 40 ಕ್ಕೂ ಹೆಚ್ಚು ಜನರು ಜೈಲು ಸೇರಿದ್ದು, ಪೋಲಿಸರ ಬಂಧನ ಭೀತಿಯಿಂದ 200 ಹೆಚ್ಚು ಗ್ರಾಮಸ್ಥರು ಊರು ಬಿಟ್ಟಿದ್ದಾರೆ. ಇನ್ನು ವಯಸ್ಸಾದ ವೃದ್ಧರು, ಮಕ್ಕಳು, ಮಹಿಳೆಯರಿಗೆ ಆಶ್ರವಾಗಿದ್ದ ಮನೆಯ ಯಜಮಾನರಿಲ್ಲ ಹಿರಿಜೀವಗಳು ಪರದಾಟ ನಡೆಸುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಹಿರಿಜೀವಗಳಿಗೆ ಚಿಕಿತ್ಸೆ ಇಲ್ಲದೆ ಪರದಾಡುವ ಸುದ್ದಿಯಾಗಿತ್ತು.

ಇದೀಗ ಜಿಲ್ಲಾಡಳಿತ ಸ್ಥಳಕ್ಕೆ ದೌಡಾಯಿಸಿದ್ದು ಇಂಡಿಗನತ್ತ ಗ್ರಾಮಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಸೇರಿದಂತೆ ಎಲ್ಲಾ ಅಧಿಕಾರಿಗಳು ಭೇಟಿ ನೀಡಿದ್ದು ಗ್ರಾಮಸ್ಥರು ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಶಿಲ್ಪನಾಗ್, ಯಾರು ಮನೆ ಬಿಟ್ಟು ಹೋಗಬೇಡಿ, ಮತಯಂತ್ರ ಪ್ರಕರಣಗಳಲ್ಲಿ ಬಂಧಿಸಿರುವವರನ್ನ ಬಿಡುಗಡೆ ಮಾಡುತ್ತೇವೆ. ಯಾರು ಊರು ಬಿಟ್ಟು ಹೋಗಬೇಡಿ, ಯಾರನ್ನೂ ಬಂಧಿಸುವುದಿಲ್ಲ, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ. ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

Key words: Visit –Indiganatta-village- DC Shilpanag

The post ಇಂಡಿಗನತ್ತ ಗ್ರಾಮಕ್ಕೆ ಭೇಟಿ: ಬಂಧಿತರ ಬಿಡುಗಡೆಗೊಳಿಸುವ ಭರವಸೆ ನೀಡಿದ ಡಿಸಿ ಶಿಲ್ಪನಾಗ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.