Dattatreya salagame Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಇ- ಸಂಚಾರ’ ವಲಯದಲ್ಲಿ ಸ್ವಯಂ ಉತ್ಪಾದನೆಗೆ ಆದ್ಯತೆ-ಬಿಟಿಎಸ್-2020”ದಲ್ಲಿ ದತ್ತಾತ್ರೇಯ ಸಾಲಗಾಮೆ ಸಲಹೆ
ಬೆಂಗಳೂರು ನವೆಂಬರ್,20,2020(www.justkannada.in):  ಸುಸ್ಥಿರ ‘ಇ-ಸಂಚಾರ’ (ಇ-ಮೊಬಿಲಿಟಿ) ವಲಯದಲ್ಲಿ ನಾವು ಎಲ್ಲೆಲ್ಲಿ ಸ್ವಯಂ ಉತ್ಪಾದನೆ ಮಾಡಬಹುದು ಎಂಬ ಅಧ್ಯಯನ ಆಗಬೇಕು. ಇದೇ ವೇಳೆ ಹೈಪರ್ ಲೋಕಲ್ ಪರಿಹಾರಗಳನ್ನು ಕಂಪನಿಗಳು ರೂಪಿಸಿದರೆ  ಸ್ವಾವಲಂಬನೆ ಸಾಧ್ಯವಾಗಲಿದೆ  ಎಂದು ರಾಬರ್ಟ್ ಬಾಷ್‌ ನ ಭಾರತೀಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ದತ್ತಾತ್ರೇಯ ಸಾಲಗಾಮೆ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗಮೇಳ- 2020”ದ ಎರಡನೇ ದಿನವಾದ ಶುಕ್ರವಾರ ಜರ್ಮನಿ ಕಾನ್ಸುಲೇಟ್ ನೇತೃತ್ವದಲ್ಲಿ ನಡೆದ ‘ಇ- ಮೊಬಿಲಿಟಿ- ಭವಿಷ್ಯದ ಹಾದಿ’ ಕುರಿತ ಸಂವಾದದಲ್ಲಿ ಅವರು ಭಾಗವಹಿಸಿದ್ದರು.

ನಡೆದ ‘ಇ- ಮೊಬಿಲಿಟಿ- ಭವಿಷ್ಯದ ಹಾದಿ’ ಸಂವಾದವನ್ನು ವಿಡಿಎಂಎ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ನಾಥ್ ನಿರ್ವಹಿಸಿದರು.  ಬೆಂಗಳೂರಿನ ಜರ್ಮನ್ ಕನ್ಸುಲೇಟ್‌ನ ಕನ್ಸುಲ್ ಜನರಲ್ ಆಖಿಂ ಬುರ್ಕಾರ್ತ್,  ದತ್ತಾತ್ರೇಯ ಸಾಲಗಾಮೆ, ಪಂಕಜ್ ವ್ಯಾಸ್ ಹಾಗೂ ಮನು ಸಾಲೆ ಪಾಲ್ಗೊಂಡರು.

ಸಾಂಪ್ರದಾಯಿಕ ಸಾರಿಗೆಯಿಂದ ಇ-ಮೊಬಿಲಿಟಿಯತ್ತ ರೂಪಾಂತರಗೊಳ್ಳುವಲ್ಲಿ ಸರ್ಕಾರದ ಕಾರ್ಯನೀತಿಯ ಪಾತ್ರ ದೊಡ್ಡದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಫೇಮ್ 1 ಹಾಗೂ ಫೇಮ್ 2 ನೀತಿಗಳು ಇ-ವಾಹನ ಉದ್ಯಮಕ್ಕೆ ಉತ್ತೇಜನಕಾರಿಯಾಗಿವೆ. ಆರಂಭದ ಇದೇ ವೇಗವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 2022ರ ನಂತರದ ಸರ್ಕಾರದ ನೀತಿಯೂ ಸ್ಪಷ್ಟವಾಗಿರಬೇಕು. ಇವಿ ಕ್ಷೇತ್ರದ ಮೂಲಸೌಕರ್ಯದಂತಹ ಕ್ಷೇತ್ರದಲ್ಲಿ ಸರ್ಕಾರಿ-ಖಾಸಗಿ ಸಹಭಾಗಿತ್ವದಿಂದ ವೇಗವರ್ಧನೆಯಾಗಲಿದೆ ಎಂದು ದತ್ತಾತ್ರೇಯ ಸಾಲಗಾಮೆ ಅಭಿಪ್ರಾಯಪಟ್ಟರು.

ಪವರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತ ಪ್ರಬಲವಾಗಿದೆ. ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಪ್ರೋತ್ಸಾಹದಾಯಕ ವಾತಾವರಣವಿದೆ. ದೇಶದಲ್ಲಿ ಮೊತ್ತಮೊದಲ ಇ-ವಾಹನ ಉದ್ಯಮ ಸ್ಥಾಪನೆಯಾಗಿದ್ದೇ ಬೆಂಗಳೂರಿನಲ್ಲಿ ಎಂದು ನೆನಪಿಸಿಕೊಂಡರು.

ಪೆಡಲ್ ಸೈಕಲ್‍‌ ವಾಲಾಗಳಿಂದ ಮೌನಕ್ರಾಂತಿ

ಭಾರತದಲ್ಲಿ ಇ-ಮೊಬಿಲಿಟಿಯ ಆರಂಭದ ಮೌನಕ್ರಾಂತಿ ಮಾಡಿದವರು ಅಸಂಘಟಿತ ವಲಯಗಳ ಸೈಕಲ್‌ ವಾಲಾಗಳು. ಪೆಡಲ್ ಸೈಕಲ್‌ ಗಳಿಂದ ರೂಪಾಂತರಗೊಂಡ ಇ-ರಿಕ್ಷಾಗಳು ಮೆಟ್ರೋ ಫೀಡರ್‌ಗಳಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇನ್ಫೀನಿಯನ್ ಟೆಕ್ನಾಲಜೀಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿನಯ್ ಶೆಣೈ ಬೊಟ್ಟು ಮಾಡಿದರು.

ಮೊದಲ ಹಂತದಲ್ಲಿ ತ್ರಿಚಕ್ರ, ದ್ವಿಚಕ್ರ ವಾಹನವನ್ನು ನಾವು ಇ-ವಾಹನಗಳಾಗಿ ಪರಿವರ್ತನೆಗೊಳಿಸಬಹುದು. ಎರಡನೆಯ ಹಂತದಲ್ಲಿ ಸಾರ್ವಜನಿಕ ಸಾರಿಗೆಗಳನ್ನು ಪರಿವರ್ತಿಸಬೇಕು. ಕೊನೆಯ ಹಂತದಲ್ಲಿ ಪ್ರಯಾಣಿಕ ಹಾಗೂ ಲಕ್ಷುರಿ ವಾಹನಗಳು ರೂಪಾಂತರಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ದಿಸೆಯಲ್ಲಿ ಸರ್ಕಾರ ಮುಂಚೂಣಿಯಲ್ಲಿ ನಿಲ್ಲಬೇಕು. ಚಾರ್ಜಿಂಗ್ ಮೂಲಸೌಕರ್ಯ, ಸ್ಟೇಶನ್ ಸೌಲಭ್ಯವನ್ನು ಕಲ್ಪಿಸಬೇಕು. ಆಪರೇಟರ್‌ಗಳಿಗೆ ಸಹಾಯ ನೀಡಬೇಕು, ಉದ್ಯಮಗಳಿಗೆ ಪ್ರೋತ್ಸಾಹಧ ನೀಡುವ ಕಾರ್ಯ ಮಾಡಬೇಕು ಎಂದರು.

ಜರ್ಮನಿ ಸಹಭಾಗಿತ್ವದಿಂದ ಅನುಕೂಲ

ಇ-ವಿ ಕ್ಷೇತ್ರದಲ್ಲಿ ಜರ್ಮನಿಯು ತುಂಬಾ ಮುಂದಿದೆ. ಸರ್ಕಾರದ ನೀತಿ ನಿರ್ಧಾರಗಳು, ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿ ಕ್ಷೇತ್ರದಲ್ಲಿ ಭಾರತ-ಜರ್ಮನಿ ಸಹಭಾಗಿತ್ವದಿಂದ ಅನುಕೂಲ ಸಾಧ್ಯವಿದೆ. ಸಾಫ್ಟ್ ವೇರ್‌ನ ಸೂಕ್ತ ಬಳಕೆಯಿಂದ ಭಾರತದ ರಸ್ತೆ ಸ್ಥಿತಿ, ಹವಾಮಾನ ಪರಿಸ್ಥಿತಿಯ ದೋಷವನ್ನು ಮೀರಿ ವಾಹನಗಳು ಕಾರ್ಯನಿರ್ವಹಿಸುವಂತೆ ಮಾಡಬಹುದಾಗಿದೆ ಎಂದು ಮರ್ಸಿಡೆಸ್ ಬೆಂಝ್  ಆರ್ ಆಂಡ್ ಡಿ ಇಂಡಿಯಾದ ಸಿಇಒ ಮನು ಸಾಲೆ ಹೇಳಿದರು.

ಇ-ಹೈವೇ ಅಥವಾ ಇಲೆಕ್ಟ್ರಿಕ್ ರಸ್ತೆ ವ್ಯವಸ್ಥೆಯು ಇ-ಮೊಬಿಲಿಟಿಗೆ ಉತ್ತೇಜನ ನೀಡಬಲ್ಲುದು ಎಂದು ಸೀಮನ್ಸ್ ಟೆಕ್ನಾಲಜೀಸ್ ಇಂಡಿಯಾದ ಸಿಇಒ ಪಂಕಜ್ ವ್ಯಾಸ್ ಅಭಿಪ್ರಾಯಪಟ್ಟರು.

ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಸುಸ್ಥಿರ ಸಾರಿಗ ಅತ್ಯಗತ್ಯ. ಜರ್ಮನಿಯು ಭವಿಷ್ಯದ ಸುಸ್ಱಿರ ಸಾರಿಗೆಗೆ ಬುನಾದಿ ಹಾಕಿದೆ. ಜರ್ಮನಿ-ಭಾರತ ಸಹಭಾಗಿತ್ವದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಬೆಂಗಳೂರಿನ ಜರ್ಮನ್ ಕನ್ಸುಲೇಟ್‌ನ ಕನ್ಸುಲ್ ಜನರಲ್ ಆಖಿಂ ಬುರ್ಕಾರ್ತ್ ಹೇಳಿದರು.

ವಿಡಿಎಂಎ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ನಾಥ್ ಸಂವಾದ ನಿರ್ವಹಿಸಿದರು. ನೆರ್ವಾನಿಕ್ ಎಐ ಲ್ಯಾಬ್ಸ್ ಪ್ರೈ.ಲಿನ ಸಹಸಂಸ್ಥಾಪಕರಾದ ರಂಜನ್ ಕುಮಾರ್ ಹಾಗೂ ಜರ್ಮನಿ ತಂತ್ರಜ್ಞಾನ ಕನ್ಸಲ್ಟ್ ಹೂಬರ್ಟ್ ರಿಲಾರ್ಡ್ ಸಂವಾದದಲ್ಲಿ ಪಾಲ್ಗೊಂಡಿದ್ದರು.

Key words: Preference – self-generating – e-mobility- Dattatreya  salagame- BTS-2020

The post ಇ- ಸಂಚಾರ’ ವಲಯದಲ್ಲಿ ಸ್ವಯಂ ಉತ್ಪಾದನೆಗೆ ಆದ್ಯತೆ-ಬಿಟಿಎಸ್-2020”ದಲ್ಲಿ ದತ್ತಾತ್ರೇಯ ಸಾಲಗಾಮೆ ಸಲಹೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.