D. Devaraja arasu | Just Kannada - Daily News Updates

ಡಿ.ದೇವರಾಜ ಅರಸು ಬಗ್ಗೆ ಸ್ವಪಕ್ಷಿಯ ನಾಯಕನ ಹೇಳಿಕೆಗೆ ಹೆಚ್. ವಿಶ್ವನಾಥ್ ಕಿಡಿ
ಬೆಂಗಳೂರು,ಸೆಪ್ಟಂಬರ್,17,2024 (www.justkannada.in): ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ದೇವರಾಜ್ ಅರಸು ಬಗ್ಗೆ ಮಾತನಾಡಿ ಲಿಂಗಾಯತರಿಗೆ ಅನ್ಯಾಯ ಮಾಡಿದ್ರು ಎಂದಿದ್ದಾರೆ. ವಿದೇಶದಲ್ಲಿ ಓದಿದ ಬೆಲ್ಲದ್ ರಿಗೆ ದೇವರಾಜ್ ಅರಸು ಬಗ್ಗೆ ಗೊತ್ತಿಲ್ಲ, ಓದಿಕೊಂಡಿಲ್ಲ ಎನಿಸುತ್ತದೆ. ಅರವಿಂದ ಬೆಲ್ಲದ್ ಅವರು ಕರ್ನಾಟಕದ ಇತಿಹಾಸವನ್ನ ಓದಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಹುಬ್ಬಳ್ಳಿಯಲ್ಲಿ ಸಾಕಷ್ಟು ಆಸ್ತಿಯನ್ನ ನೀವು ಹೊಂದಿದ್ದೀರಾ. ಬಡವರ ಕಷ್ಟ ನೋವು ನಿಮಗೆ ತಿಳಿದಿಲ್ಲ. ಲಿಂಗಾಯತರಿಗೆ ಅವರು ಮೀಸಲಾತಿ ನೀಡಲಿಲ್ಲ ಎಂದಿದ್ದೀರಾ. ಸಂವಿಧಾನ ಜಾರಿಗೆ ಬರುವ ಮುನ್ನವೇ ರಾಜಪ್ರಭುತ್ವದಲ್ಲಿ ಮೈಸೂರು ಮಹಾರಾಜರು ಮೀಸಲಾತಿ ನೀಡಿದ್ದಾರೆ. 3ಬಿ ನಲ್ಲಿ ಲಿಂಗಾಯತರಿಗೆ ಈಗಲೂ ಮೀಸಲಾತಿ ಇದೆ. ಲಿಂಗಾಯತರಲ್ಲಿ ಅನೇಕ ಬಡವರು ಇದ್ದಾರೆ. ದೇವರಾಜ್ ಅರಸು ರವರು ಯಾವುದೇ ಒಂದು ಜಾತಿ ಪರವಾಗಿ ಕೆಲಸ ಮಾಡಿಲ್ಲ ಎಂದು ಹೇಳಿವ ಮೂಲಕ ಸ್ವಪಕ್ಷಿಯ ನಾಯಕನ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ನಾಗಮಂಗಲ ಗಲಭೆ ಪ್ರಕರಣ: ಸಚಿವರ ವಿರುದ್ದ ವಾಗ್ದಾಳಿ

ನಾಗಮಂಗಲ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಈ ರೀತಿ ಆಗಬಾರದು ಜಿಲ್ಲಾ ಮಂತ್ರಿಗಳು ಸುಮ್ಮನೆ ಭಾಷಣ ಮಾಡ್ತಾರೆ ಅಷ್ಟೇ. ಜಿಲ್ಲೆಯ ಸೂಕ್ಷ್ಮತೆ ಅರ್ಥನೇ ಮಾಡಿಕೊಂಡಿಲ್ಲ ಅಂದ್ರೆ ಯಾವ ಸೀಮೆ ಮಂತ್ರಿ ನೀವು. ಎಲ್ಲರನ್ನ ಕರೆದು ಮೊದಲೇ ಶಾಂತಿ ಸಭೆ ಮಾಡಬಹುದಿತ್ತು ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಾನು ಸಿದ್ದರಾಮಯ್ಯಗೆ ವಿನಂತಿ ಮಾಡ್ತೀನಿ. ಕಾಂತರಾಜು ವರದಿ ಹೊರಗಡೆ ಬರ್ಲಿಲ್ಲ. ಅಹಿಂದ ಅಂತೀರಾ ಕಾಂತರಾಜು ವರದಿ ಜನಕ್ಕೆ ತಿಳಿದುಕೊಳ್ಳಲು ಬಿಡಲಿಲ್ಲ ನೀವು. ಈ ಕಡೆ ಬಂದಾಗ ಬಸವಣ್ಣ ಆ ಕಡೆ ಹೋದಾಗ ರಾಯಣ್ಣ ಅಂಬೇಡ್ಕರ್, ಬರೀ ಭಾಷಣಕ್ಕೆ ಸೀಮಿತ ಆಗೋದ್ರಿ ಸಿದ್ದರಾಮಯ್ಯ. ಸಿದ್ದರಾಮಯ್ಯ ಮೊದಲನೇ ಅವಧಿಯಲ್ಲಿ ಶೋಷಿತರ ಧ್ವನಿ ಆಗಿದ್ರು. ಎರಡನೇ ಅವಧಿಯಲ್ಲಿ ಭ್ರಷ್ಟರ ಧ್ವನಿ ಆಗ್ತಿದ್ದಾರೆ. ನಾವು ಸಿದ್ದರಾಮಯ್ಯ ಈ ರೀತಿ ಮಾಡ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.

ಮುನಿರತ್ನ ನಮ್ಮ ಬಿಜೆಪಿ ಶಾಸಕರು. ಅವರು ನಮ್ಮ ಜೊತೇನೆ ಬಂದಿದ್ದವರು. ಕಾಂಗ್ರೆಸ್ ತೊರೆದು ಯಡಿಯೂರಪ್ಪ ಸಿಎಂ ಮಾಡಲು ನಮ್ಮ ಜೊತೆ ಬಂದಿದ್ದರು. ಯಡಿಯೂರಪ್ಪ ಅವರನ್ನು ಮಂತ್ರಿ ಕೂಡ ಮಾಡಿದ್ದರು. ಮುನಿರತ್ನನ್ನ ಸಿ.ಟಿ ರವಿ, ಅಶ್ವತ್ ನಾರಾಯಣ್ ಡಿಫೆಂಡ್ ಮಾಡಬಾರದು. ಎರಡು ದಿನ ಜೈಲಲ್ಲಿ ಇರಲಿ ಜಾತಿ ನಿಂದನೆ ಮಾಡೋದು ಅಂದ್ರೆ ಏನು ಅರ್ಥ ಎಂದು  ಶಾಸಕ ಮುನಿರತ್ನ ಹೇಳಿಕೆ ಖಂಡಿಸಿದರು.

Key words: D. Devaraja Arasu, statement, Arvind Bellad, H. Vishwanath

ಡಿ.ದೇವರಾಜ ಅರಸು ಅವರ ಪ್ರತಿಮೆ ನಿರ್ಮಾಣ ಕಾರ್ಯ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಸಿಎಂ ಬೊಮ್ಮಾಯಿಗೆ ಮನವಿ.
ಬೆಂಗಳೂರು,ಮಾರ್ಚ್,10,2022(www.justkannada.in):  ಮೈಸೂರಿನಲ್ಲಿ ಡಿ.ದೇವರಾಜ ಅರಸು ಅವರ ಪ್ರತಿಮೆ ನಿರ್ಮಾಣ ಕಾರ್ಯ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಮೈಸೂರಿನ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ನಿಯೋಗವು ಮನವಿ ಸಲ್ಲಿಸಿತು.

ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್  ಅವರ ನೇತೃತ್ವದಲ್ಲಿ  ಸಿಎಂ ಬಸವರಾಜ ಬೊಮ್ಮಾಯಿ ರವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಹಿಂದುಳಿದ ವರ್ಗಗಳ ಹರಿಕಾರ. ಮಾಜಿ ಸಿಎಂ ದಿ. ಡಿ.ದೇವರಾಜ ಅರಸು ಅವರ ಪ್ರತಿಮೆ ನಿರ್ಮಾಣ ಮಾಡುವಂತೆ ಕೋರಿ ಈ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡ್ಡಿಯೂರಪ್ಪ ಅವರಿಗೆ ಅವರ ಅಧಿಕಾರಾವಧಿಯಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಆರ್.ರಘು ಕೌಟಿಲ್ಯ ಅವರ ನೇತೃತ್ವದಲ್ಲಿ ನಿಯೋಗವು ಮನವಿ ಮಾಡಿತ್ತು.

,ಮನವಿಗೆ ಸ್ಪಂದಿಸಿದ  ಬಿಎಸ್ ವೈ ಮೈಸೂರು ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾ ಮಟ್ಟದ ಕಛೇರಿ ಸಂಕೀರ್ಣ ಮುಂಭಾಗದಲ್ಲಿ ಡಿ.ದೇವರಾಜ ಅರಸು ಅವರ ಪ್ರತಿಮೆ ಪ್ರತಿಷ್ಠಾಪನೆ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಾರ್ಯಲಯದಿಂದ ಸೂಚನೆ ನೀಡಿತ್ತು .

ಅದರಂತೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ,ಜಿಲ್ಲಾಧಿಕಾರಿಗಳು ಹಾಗೂ ಸಂಸದರಾದ ಪ್ರತಾಪ್ ಸಿಂಹ ಅವರು ಸ್ಥಳ ಪರಿಶೀಲಿಸಿ ಪ್ರತಿಮೆ ನಿರ್ಮಾಣ ಮಾಡಲು ಸೂಕ್ತ ಸ್ಥಳವೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಕಾರ್ಯಪಾಲಕ ಅಭಿಯಂತರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಮೈಸೂರು ಅವರಿಂದ ದಿ. ಡಿ.ದೇವರಾಜ ಅರಸು ಅವರ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ನಕ್ಷೆ ಹಾಗೂ ಅಂದಾಜು ವೆಚ್ಚ ಪಡೆದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಿದ್ದಾರೆ.

ಪ್ರತಿಮೆ ಪ್ರತಿಷ್ಠಾಪನೆಗೆ ರೂ.92 ಲಕ್ಷಗಳನ್ನು ಪ್ರತ್ಯೇಕವಾಗಿ ಲೆಕ್ಕ ಶೀರ್ಷಿಕೆ 4225-03-283-0-1 ಆಬ್ಜೆಕ್ಟೀವ್ ಕೋಡ್ 386 ರಡಿಯಲ್ಲಿ ವಿಶೇಷ ಪ್ರಕರಣವಾಗಿ ಪರಿಗಣಿಸಿ ಬಿಡುಗಡೆ ಮಾಡಲು ಕೋರಿ ಪ್ರಸ್ತಾವನೆ ಸಲ್ಲಿಸಿದೆ . ಆದುದರಿಂದ ತಾವು ಡಿ.ದೇವರಾಜ ಅರಸು ಪ್ರತಿಮೆ ನಿರ್ಮಾಣ ಕಾರ್ಯವನ್ನು ಕೂಡಲೇ ಅನುಷ್ಠಾನಗೊಳಿಸಲು  ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು  ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್,ವಿಶ್ವನಾಥ್, ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ಸಮಿತಿಯ ಗೌರವ ಸಲಹೆಗಾರರಾದ ಡಾ.ವೈ.ಡಿ.ರಾಜಣ್ಣ, ಸಮಿತಿಯ ರಾಜ್ಯ ಸಂಚಾಲಕ ಡೈರಿ ವೆಂಕಟೇಶ್ ಉಪಸ್ಥಿತರಿದ್ದರು.

Key words: mysore-statue – D. Devaraja arasu

ರಾಜಕೀಯದಲ್ಲಿ ಹೊಸ ಯುಗ ಪ್ರಾರಂಭಿಸಿದ ಕೀರ್ತಿ ಡಿ.ದೇವರಾಜ ಅರಸು ಅವರದ್ದು- ಹಿರಿಯ ಸಾಹಿತಿ ಪ್ರೊ. ಕೆ. ಎಸ್. ಭಗವಾನ್…
ಮೈಸೂರು,ಡಿಸೆಂಬರ್,15,2020(www.justkannada.in): ಹಿಂದುಳಿದವರ ಬಗ್ಗೆ ಬಹಳ ಕಾಳಜಿ ಹೊಂದಿದ್ದವರು ಡಿ.ದೇವರಾಜ ಅರಸು.ಹಿಂದುಳಿದವರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದಿದ್ದವರು. ರಾಜಕೀಯದಲ್ಲಿ ಹೊಸ ಯುಗ ಪ್ರಾರಂಭಿಸಿದ ಕೀರ್ತಿ  ಡಿ.ದೇವರಾಜ ಅರಸು ಅವರದ್ದು ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್ ಭಗವಾನ್ ಬಣ್ಣಿಸಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರ ಸಾಮಾಜಿಕ ಚಿಂತನೆಗಳ ಕುರಿತು ಅರಸು ಪ್ರತಿಷ್ಟಾಪನಾ ಸಮಿತಿ ಹಾಗೂ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕಾಂಗ್ರೆಸ್ ಕಚೇರಿಯಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿತ್ತು. ಜ್ಯೋತಿ ಬೆಳಗಿಸಿ, ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ‌ ವಿಚಾರಗೋಷ್ಠಿಗೆ ಹಿರಿಯ ಸಾಹಿತಿ ಪ್ರೊ. ಕೆ. ಎಸ್. ಭಗವಾನ್ ಚಾಲನೆ ನೀಡಿದರು.

ಇತ್ತೀಚಿನ ರಾಜಕಾರಣಿಗಳಿಗೆ ಓದುವ ಅಭ್ಯಾಸವೇ ಇಲ್ಲ….

ವಿಚಾರಗೋಷ್ಠಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರೊ.ಕೆ.ಎಸ್ ಭಗವಾನ್,  ಡಿ.ದೇವರಾಜ ಅರಸು ಅವರು ಹಿಂದುಳಿದವರ ಬಗ್ಗೆ ಬಹಳ ಕಾಳಜಿ ಹೊಂದಿದ್ದರು. ಹಿಂದುಳಿದವರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದಿದ್ದವರು. ರಾಜಕೀಯದಲ್ಲಿ ಹೊಸ ಯುಗ ಪ್ರಾರಂಭಿಸಿದ ಕೀರ್ತಿ ಅವರದ್ದು. ಅವರು ಸಾಹಿತ್ಯದಲ್ಲೂ ಸಾಕಷ್ಟು ಆಸಕ್ತಿ ಹೊಂದಿದ್ದವರು. ಆದರೆ ಇತ್ತೀಚಿನ ರಾಜಕಾರಣಿಗಳಿಗೆ ಓದುವ ಅಭ್ಯಾಸವೇ ಇಲ್ಲ. ಹಾಗಾಗಿ ಹೊಸ ಹೊಸ ಆಲೋಚನೆಗಳು ಅವರಿಗಿರುವುದಿಲ್ಲ ಎಂದು ಟೀಕಿಸಿದರು.

ಹಾಗೆಯೇ ದೇವರಾಜ ಅರಸು ಅಂತಹವರ ರಾಜಕಾರಣಿ ಅಪರೂಪ. ಅವರ ಚಿಂತನೆಗಳನ್ನು,ವಿಚಾರಗಳನ್ನು ನಾವು ಕೂಡಾ ಅಳವಡಿಸಿ ಕೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಹೆಚ್.ಎ ವೆಂಕಟೇಶ್, ಮಡ್ಡಿಕೆರೆ ಗೋಪಾಲ್, , ಚಂದ್ರಶೇಖರ, ಪ್ರತಿಷ್ಠಾನದ ಅಧ್ಯಕ್ಷ ಜಾಕೀರ್ ಹುಸೇನ್ ಹಾಗೂ ಹಲವು ಸಾಹಿತಿಗಳು, ಪ್ರಗತಿಪರ ಚಿಂತಕರು ಇತರರು ಉಪಸ್ಥಿತರಿದ್ದರು.

english summary…..

The credit of starting a new era in politics goes to Late D. Devraj Urs – Prof. K.S. Bhagwan

Mysuru, Dec. 15, 2020 (www.justkannada.in): “Former Chief Minister of Karnataka Late D. Devraj Urs had a concern for the backward classes he introduced many programmes for the development of backward caste people. The credit of introducing a new era in politics goes to him,” opined senior litterateur Prof. K.S. Bhagawan.

He participated in a seminar on ‘Social thoughts of former Chief Minister D. Devraj Urs,’ organized by the Ursu Pratishtapana Samiti, and Mysuru City and Rural District Congress Committee, held at the Congress office today he said, apart from bringing many reforms in politics he also had interest in literature, that is absent in the politicians today. “Nobody has reading habits and, hence they lack new thoughts,” he said.

Mentioning D.Devraj Urs as a rare politician, he wished everyone to adopt his views and ideas.

Keywords: D. Devraj Urs/ Seminar/ Prof. K.S. Bhagwan

Key words: Politics- D. Devaraja arasu-Senior Literature -Pro. K. S. Bhagavan

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ದಿನ ಹಿನ್ನೆಲೆ: ಟ್ವೀಟ್ ಮಾಡಿ ಸ್ಮರಿಸಿದ ಹೆಚ್.ಡಿ ಕುಮಾರಸ್ವಾಮಿ…
ಬೆಂಗಳೂರು,ಆ,20,2020(www.justkannada.in):  ರಾಜ್ಯ ಕಂಡ ದೂರದೃಷ್ಠಿಯ ನಾಯಕ, ಹಿಂದುಳಿದ ಮತ್ತು ದುರ್ಬಲ ವರ್ಗದ ಧ್ವನಿ ಮುತ್ಸದ್ಧಿ ನಾಯಕ  ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮದಿನವಾಗಿದ್ದು, ಈ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಸ್ಮರಿಸಿದ್ದಾರೆ.

ಕರ್ನಾಟಕ ನಾಮಕರಣ, ಹಾವನೂರು ಕಮಿಷನ್, ಭೂ ಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ ಹಾಗೂ ಶೋಷಿತ ಸಮುದಾಯಕ್ಕೆ  ರಾಜಕೀಯ ಆಸರೆ ಒದಗಿಸಿದ ಮಹಾನ್ ನಾಯಕ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನದ ಸಂದರ್ಭದಲ್ಲಿ ವಿನಮ್ರವಾಗಿ  ಸ್ಮರಿಸಿಕೊಳ್ಳುತ್ತೇನೆ ಎಂದು ಟ್ವಿಟ್ಟರ್ ನಲ್ಲಿ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಮರಿಸಿದ್ದಾರೆ.

ಹಾಗೆಯೇ ಯೂರಿಯಾ ಗೊಬ್ಬರ ಕೊರತೆ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ,  ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಗೊಬ್ಬರ ಸಿಗದ ರೈತರು ಹಿಡಿಶಾಪ ಹಾಕುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ವಾಡಿಕೆಗಿಂತ ಈ ಬಾರಿ ರಾಜ್ಯದಾದ್ಯಂತ ಶೇಕಡ 25ರಷ್ಟು ಹೆಚ್ಚು ಬಿತ್ತನೆ ಆಗಿದೆ. ಕೃಷಿ ಇಲಾಖೆ ಇದನ್ನು ಅಂದಾಜಿಸುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಬಾಯಿಮಾತಿನ ಅನುಕಂಪಕ್ಕಿಂತ ರಸಗೊಬ್ಬರ ಪೂರೈಕೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಗೊಬ್ಬರ ಕೊರತೆಯಿಂದ ಬಿತ್ತನೆ ಕಾರ್ಯ ನಿಲ್ಲಿಸದಂತೆ ತುರ್ತು ಸೂಕ್ತ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿ ರಾಜ್ಯ ಸರ್ಕಾರಕ್ಕೆ ಹೆಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Key words: Birthday – former CM-D. Devaraja Arasu-Tweet-HD Kumaraswamy.

ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಡಿ.ದೇವರಾಜ ಅರಸು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕನ್ನಡಪರ ಹೋರಾಟಗಾರ ಪ.ಮಲ್ಲೇಶ್…
ಮೈಸೂರು,ಮೇ,22,2019(www.justkannada.in): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ರಾಜಕೀಯ ಗುರು ಡಿ.ದೇವರಾಜ ಅರಸು ಅವರ ಬಗ್ಗೆ ಹಿರಿಯ ಹೋರಾಟಗಾರ ಪ.ಮಲ್ಲೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ಲಂಚ ಆರಂಭಿಸಿದವರು ಡಿ.ದೇವರಾಜ ಅರಸು. ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತಿಯೊಬ್ಬ ಅಧಿಕಾರಿಗೂ 5000 ರೂ. ಲಂಚ ಹೋಗುತ್ತಿತ್ತು ಎಂದು ಪ.ಮಲ್ಲೇಶ್ ಹೇಳಿದ್ದಾರೆ

ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ಪ.ಮಲ್ಲೇಶ್, ಡಿ.ದೇವರಾಜ ಅರಸು ಅವರು  ಸಿಎಂ ಆಗಿದ್ದಾಗ ಪ್ರತಿಯೊಬ್ಬ ಅಧಿಕಾರಿಗೂ 5000 ರೂ. ಲಂಚ ಹೋಗುತ್ತಿತ್ತು. ಸಿದ್ದರಾಮಯ್ಯ ಇದನ್ನು ಒಪ್ಪಿಕೊಳ್ಳೋದಿಲ್ಲ. ಅದು ನನಗೆ ಚನ್ನಾಗಿ ಗೊತ್ತು. ರಾಜ್ಯದಲ್ಲಿ ಮುತ್ಸದ್ಧಿ ಎನ್ನಿಸಿಕೊಂಡವರು ನಿಜಲಿಂಗಪ್ಪ ಮಾತ್ರ.  ಡಿ.ದೇವರಾಜ ಅರಸು ಕೂಡ ಮುತ್ಸದ್ದಿ ಅಲ್ಲ ಎಂದರು.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಜಾರಿಗೆ ತರುವ ವಿಚಾರಕ್ಕೆ ಹಾಲಿ‌ ಸಿಎಂ ಹೆಚ್.ಡಿ ಕುಮಾರಸ್ವಾಮಿ  ವಿರುದ್ದ ಗರಂ ಆದ  ಪ.ಮಲ್ಲೇಶ್ , ಕನ್ನಡ ಶಾಲೆಗಳಲ್ಲಿ ಅವೈಜ್ಞಾನಿಕವಾಗಿ ಇಂಗ್ಲಿಷ್ ತರುಲು ಹೊರಟಿರೋದು ಅವಿವೇಕಿತನ. ಅವಿವೇಕಿಗಳು ಜ್ಞಾನ ಇಲ್ಲದೆ ಇರೋರು ಐ.ಎ.ಎಸ್ ಅಧಿಕಾರಿಗಳ ಮಾತು ಕೇಳಿ‌ ಜಾರಿಗೆ ತರಲು ಯತ್ನಿಸುತ್ತಿದ್ದಾರೆ. ವೇದಿಕೆಯಲ್ಲೇ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಚಕಾರವೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ.ಮಲ್ಲೇಶ್ ಮಾತಿಗೆ ನಾನೇ ಮೊದಲು ರಿಯಾಕ್ಟ್ ಮಾಡಿದ್ದು ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು

ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಮಲ್ಲೇಶ್, ನನಗೆ ಗೊತ್ತಿದೆ ಯಾರು ರಿಯಾಕ್ಟ್ ಮಾಡಿದ್ದಾರೆ . ಅಲ್ದೆ ರೈತರ ಪರ ಹೋರಾಟಗಾರ ಮೇಲಿನ‌ ಕೇಸ್ ಗಳು ವಾಪಾಸ್ ತೆಗೆದು ಕೊಂಡಿದ್ದಾರೆ. ಆದ್ರೆ ಕನ್ನಡ ಪರ ಹೋರಾಟಗಾರ ಮೇಲಿನ ಕೇಸ್ ಗಳು ವಾಪಾಸ್ ತೆಗೆದುಕೊಂಡಿಲ್ಲ. ಈಗಾದ್ರೆ ಕನ್ನಡ, ಕನ್ನಡ ಹೋರಾಟಗಾರರ ಸ್ಥಿತಿ ಮುಂದೆ ಏನಾಗುತ್ತೆ ನೀವೇ ಹೇಳಿ ಎಂದು ಪ್ರಶ್ನಿಸಿದರು.

Key words: Kannada fighter P. Mallesh give  controversial statement about D. Devaraja arasu

#mysore  #Kannadafighter # PMallesh  #DDevaraja arasu