create history | Just Kannada - Daily News Updates

ಮೊಯ್ಲಿ ಅವರು125 ವರ್ಷ ಬದುಕಲಿ: ಸಾಹಿತ್ಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಠಿಸಲಿ- ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು,ನವೆಂಬರ್,11,2026 (www.justkannada.in): ಬಹಳ ಅಪರೂಪದ ರಾಜಕಾರಣಿ ವೀರಪ್ಪ ಮೊಯ್ಲಿ ಅವರು 125 ವರ್ಷ ಕಾಲ ಬದುಕಲಿ ಸಾಹಿತ್ಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಠಿಸಲಿ. ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದರು.

ಇಂದು ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಮಾಜಿ ಸಿಎಂ  ವೀರಪ್ಪ ಮೊಯ್ಲಿ ಅವರು ಬರೆದಿರುವ ‘ವಿಶ್ವಸಂಸ್ಕೃತಿಯ ಮಹಾಯಾನ ಗದ್ಯ ಮಹಾಕಾವ್ಯ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಜಿ ಸಿಎಂ ಸಿದ್ಧರಾಮಯ್ಯ ಮಾತನಾಡಿದರು.

ವೀರಪ್ಪ ಮೊಯ್ಲಿಯವರು ಮೊದಲು ವಕೀಲರು ನಂತರ ರಾಜಕೀಯಕ್ಕೆ ಬಂದವರು‌. ಶಾಲಾ ಸಮಯದಲ್ಲಿಯೇ ಅವರಿಗೆ ಸಾಹಿತ್ಯದ ಅಭಿರುಚಿ ಇತ್ತು. ಬಹಳ ಅಪರೂಪದ ರಾಜಕಾರಣಿ ವೀರಪ್ಪ ಮೊಯ್ಲಿ. ಮೊಯ್ಲಿಯವರು ನಾಟಕ, ಮಹಾಕಾವ್ಯ, ಕಾದಂಬರಿಗಳನ್ನು ಬರೆದಿದ್ದಾರೆ. ರಾಜಕೀಯ ಸಾಹಿತ್ಯ ಎರಡು ಕ್ಷೇತ್ರದಲ್ಲಿ ಹೆಸರು ಮಾಡುವುದು ಕಷ್ಟ. ನಾನು ಸಾಹಿತ್ಯದ ಅಭಿಮಾನಿ ಆದರೆ ನಾನು ಸಾಹಿತಿ ಅಲ್ಲ. ಕನ್ನಡ ನಾಡಿನಲ್ಲಿ ಕನ್ನಡವನ್ನು ಕಾಯುವ ಪರಿಸ್ಥಿತಿ ಬಂದಿರುವುದು ದುರ್ದೈವ. ಬೇರೆ ರಾಜ್ಯದಲ್ಲಿ ಈ ರೀತಿ ಸ್ಥಿತಿ ಇಲ್ಲ. ರಾಜಕಾರಣಿಯಾದರೂ ಮೊಯ್ಲಿಯವರಿಗೆ ಸಾಹಿತ್ಯದಲ್ಲಿ ಬಹಳ ಆಸಕ್ತಿಯನ್ನು ಇತ್ತು. ವೀರಪ್ಪ ಮೊಯ್ಲಿಯವರಿಗೆ ದೇವರು ಆಯಸ್ಸು ಆರೋಗ್ಯ ಕೊಡಲಿ. ಅವರು ಬದುಕಿರುವವರೆಗೆ ಸಾಹಿತ್ಯದ ಕೃಷಿ ಮಾಡಲಿ ಎಂದರು.

ನಾನು ನೂರು ವರ್ಷ ಬದುಕಬೇಕು ಅಂತ ಆಸೆಯಿದೆ. ಆದರೆ ಅದು ನಮ್ಮ ಕೈನಲ್ಲಿ ಇಲ್ಲ. ಆದರೆ ನೂರು ವರ್ಷ ಬದುಕಬೇಕು ಅಂತ ಆಸೆ ಇದೆ. ಮಹಾತ್ಮಾ ಗಾಂಧಿಯವರಿಗೆ ಅಭಿಮಾನಿಯೊಬ್ಬರು ಪತ್ರ ಬರೆಯುತ್ತಾರೆ. ಅದಕ್ಕೆ ಮಹಾತ್ಮ ಗಾಂಧೀಜಿ ಮತ್ತೆ ಪತ್ರ ಬರೆಯುತ್ತಾರೆ.  ತಪ್ಪಾಗಿ ನೂರು ವರ್ಷ ಅಂತ ಹೇಳಿದ್ದೀರಾ. ನಾನು 125 ವರ್ಷ ಬದುಕುತ್ತೀನಿ ಅಂತ ಪತ್ರ  ಬರೆಯುತ್ತಾರೆ. ವೀರಪ್ಪ ಮೊಯಿಲಿಯವರು 125 ವರ್ಷ ಕಾಲ ಬದುಕಲಿ ಎಂದು ಹರಸುತ್ತೇನೆ. ವಿಶ್ವ ಸಂಸ್ಕೃತಿಯ ಮಹಾಯಾನದ 10 ನೇ ಸಂಪುಟವನ್ನು ರಚಿಸಲಿ. ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಲಿ ಎಂದು ಆಶಿಸುತ್ತೇನೆ ಎಂದರು.

ಸಂಸ್ಕೃತಿ ,ನಾಗರೀಕತೆಯನ್ನು ಪ್ರಸ್ತಾಪ ಮಾಡಿದ್ದಾರೆ. ಕೇವಲ ಭಾರತ ಮಾತ್ರವಲ್ಲದೇ ಬೇರೆ ದೇಶಗಳ ಸಂಸ್ಕೃತಿಯನ್ನು ಇಲ್ಲಿ ಪ್ರಸ್ತಾಪ ಮಾಡಿದ್ದಾರೆ. ಈಶ್ವರನ ಮನಸ್ಸಿರಬೇಕು, ಕೃಷ್ಣನ ಹೃದಯವಿರಬೇಕು, ಶ್ರೀ ರಾಮನ ಕಾರ್ಯಕ್ಷೇತ್ರ ಇರಬೇಕು ಅಂತ ಮೊಯ್ಲಿಯವರು ಬರೆದಿದ್ದಾರೆ. ಮಹಾತ್ಮಾ ಗಾಂಧಿಯವರ ಬಗ್ಗೆ ಹೆಚ್ಚು ಪ್ರಶಂಸೆ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿಯವರನ್ನು ಯುಗ ಪುರುಷ ಎಂದು ಕರೆದಿದ್ದಾರೆ. 1915 ರಲ್ಲಿ ಗಾಂಧಿಜೀಯವರ ಭಾರತಕ್ಕೆ ಬಂದರೂ ಅಲ್ಲಿಂದ ಅವರ ಯುಗ ಭಾರತದಲ್ಲಿ ಪ್ರಾರಂಭ ಆಯಿತು.  ಗಾಂಧೀಜಿಯವರ ನಾಯಕತ್ವ ಇಲ್ಲದೇ ಹೋಗಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಶಾಂತಿ ಮತ್ತು ಅಣುಬಾಂಬ್ ಎರಡರಲ್ಲಿ ಯಾವುದು ಮುಖ್ಯ ಎಂದಾಗ ವಿಶ್ವದಲ್ಲಿ ಎಲ್ಲರು ಅಣುಬಾಂಬ್ ಅಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಗಾಂಧೀಜಿಯವರು ಅಹಿಂಸೆಯನ್ನು ಆಯ್ಕೆ ಮಾಡಿಕೊಂಡರು ಎಂದು ಹೇಳಿದರು.

ಮೊಯ್ಲಿಯವರು ಸಾಮಾಜಿಕ ನ್ಯಾಯದ ಪರ ಇರುವವರು. ಹಳ್ಳಿಯಿಂದ ಬಂದವರು. ರಾಜಕಾರಣಿಗಳು ಸಾಹಿತಿಗಳಾಗುವುದು ಬಹಳ ವಿರಳ. ಗಾಂಧೀಜಿ ನೆಹರನ್ನು ನೋಡಿದ್ದೇವು. ಡಿಕೆ ಶಿವಕುಮಾರ್ ಅವರು ಜೆ.ಹೆಚ್ ಪಟೇಲ್ ರ ಬಗ್ಗೆ ಹೇಳಿದರು. ಜೆ.ಹೆಚ್ ಪಟೇಲ್ ಅವರು ಸಾಹಿತಿ ಅಲ್ಲ ಅವರು ಒಳ್ಳೆ ಭಾಷಣಕಾರರು. ಅವರು ಸಿಎಂ ಆಗಿದ್ದಾಗ ನಾನು ಡಿಸಿಎಂ ಆಗಿದ್ದೆ. ಕನಕಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಸಿಎಂ ತಡವಾಗಿ ಬಂದರು ಅಂತ ಸಾಹಿತಿಗಳು ಬೇಸರ ವ್ಯಕ್ತಪಡಿಸಿದರು. ಆದರೆ ಅವರ ಭಾಷಣ ಕೇಳಿ ಖುಷಿಪಟ್ಟರು ಎಂದು ಮೆಲುಕು ಹಾಕಿದರು.

ಇತಿಹಾಸ ಗೊತ್ತಿಲ್ಲದೆ ಇದ್ದವರು ಇತಿಹಾಸ ಸೃಷ್ಟಿ ಮಾಡುವುದಕ್ಕೆ ಆಗುವುದಿಲ್ಲ.ಮೊಯ್ಲಿಯವರು ಸಾಹಿತ್ಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿ ಮಾಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ  ತಿಳಿಸಿದರು. ಇದೇ ವೇಳೆ ವೀರಪ್ಪ ಮೊಯ್ಲಿಯವರನ್ನು ರಾಜ್ಯಸಭೆ ಸದಸ್ಯರನ್ನು ಮಾಡಿ ಎಂದು  ಅಭಿಮಾನಿ ಘೋಷಣೆ ಕೂಗಿದನು. ಅದು ನಾನು ಮಾಡುವುದಕ್ಕೂ ಅಗುವುದಿಲ್ಲ ಹೈಕಮಾಂಡ್ ಮಾಡಬೇಕು. ನಾನು ಹೇಳುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

Veerappa Moily,  Former CM, Siddaramaiah