corrupt Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಸಚಿವ ಸಂಪುಟದಲ್ಲಿ ಹೊಸತನವಿಲ್ಲ, ಭ್ರಷ್ಟಾಚಾರಿಗಳನ್ನು ಮರಳಿ ತಂದಿದ್ದಾರೆ- ಆರ್.ಅಶೋಕ್
ಬೆಂಗಳೂರು,ಆಗಸ್ಟ್,4,2026 (www.justkannada.in):  ಡಿ.ಕೆ ಶಿವಕುಮಾರ್‌ ಅವರ ಹೊಸ ಸಚಿವ ಸಂಪುಟದಲ್ಲಿ ಹೊಸತನವಿಲ್ಲ. ಸಂಪುಟಕ್ಕೆ ಭ್ರಷ್ಟಾಚಾರಿಗಳನ್ನು ಮರಳಿ ತಂದಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಇಂದು ಮಾತನಾಡಿದ ಆರ್.ಅಶೋಕ್,  ರಾಜ್ಯ ಹಿಂದೆಂದೂ ಕಂಡಿರದ ಸಚಿವ ಸಂಪುಟ ರಚನೆಯಾಗಿದೆ.  ಡಿಕೆ ಶಿವಕುಮಾರ್ ಸಂಪುಟದಲ್ಲಿ  ಭ್ರಷ್ಟಾಚಾರಿಗಳು ತುಂಬಿಕೊಂಡಿದ್ದಾರೆ. ಅನೇಕರು ಪೇಮೆಂಟ್‌ ಮೂಲಕ ಬಂದು ಸೇರಿದ್ದಾರೆ.  ಪರಿಶಿಷ್ಟರ 187 ಕೋಟಿ ರೂ. ಲೂಟಿ ಮಾಡಿ ಚುನಾವಣೆಗೆ ಬಳಸಿರುವುದು ಖಚಿತವಾಗಿದೆ. ಈ ಪ್ರಕರಣದಲ್ಲಿ ಬಿ.ನಾಗೇಂದ್ರ ಜೈಲಿಗೆ ಹೋದರೂ, ಈಗ ಮತ್ತೆ ಅವರಿ ಸಚಿವ ಸ್ಥಾನ ನೀಡಿದ್ದಾರೆ. ಅವರಿಗೆ ಕ್ಲೀನ್ ಚಿಟ್ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.

ಸಂಪುಟ ವಿಸ್ತರಣೆ ಬೆನ್ನಲ್ಲೆ ಅನೇಕ ಕಡೆಗಳ ಕಾಂಗ್ರೆಸ್‌ ಕಾರ್ಯಕರ್ತರೇ ಪ್ರತಿಭಟನೆಗಿಳಿದಿದ್ದಾರೆ.  ಕೈಗೇ ಏನೇನೂ ತೆಗೆದುಕೊಂಡು ಸಿಎಂ ಭಾವಚಿತ್ರಕ್ಕೆ ಹೊಡೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಚಿವ ಸಂಪುಟದಲ್ಲಿ ಹೊಸತನವಿಲ್ಲ. ಇದು ಸಿಎಂ ಡಿ.ಕೆ.ಶಿವಕುಮಾರ್‌ ಅವರ ಪಟ್ಟಿಯಲ್ಲ, ಪೇಮೆಂಟ್‌ ಲಿಸ್ಟ್‌ ಎಂದು ತಿಳಿದುಬಂದಿದೆ ಎಂದು ಆರ್.ಅಶೋಕ್ ಲೇವಡಿ ಮಾಡಿದರು.

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದ ಬಗ್ಗೆ ಟೀಕಿಸಿದ ಆರ್.ಅಶೋಕ್, ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸ್ಥಾನ ನೀಡಿಲ್ಲ. ಚುನಾವಣೆಗೆ ಮುನ್ನ ಮಹಿಳೆಯರ ಸಬಲೀಕರಣದ ಬಗ್ಗೆ ಉದ್ದುದ ಮಾತನಾಡಿದ್ದ ಕಾಂಗ್ರೆಸ್‌ ಹೈಕಮಾಂಡ್ ಈಗ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ. ಇದು ರಾಜ್ಯದ ಮಹಿಳೆಯರಿಗೆ ಮಾಡಿರುವ ದ್ರೋಹ. ಈ ಸರ್ಕಾರ ಇದುವರೆಗೆ ಟೆಕಾಫ್ ಆಗಿಲ್ಲ, ಇನ್ನು ಮುಂದೆಯೂ ಆಗಲ್ಲ ಎಂದು ಕುಟುಕಿದರು.

Key words: Cabinet Expansion, corrupt, R. Ashok

The post ಸಚಿವ ಸಂಪುಟದಲ್ಲಿ ಹೊಸತನವಿಲ್ಲ, ಭ್ರಷ್ಟಾಚಾರಿಗಳನ್ನು ಮರಳಿ ತಂದಿದ್ದಾರೆ- ಆರ್.ಅಶೋಕ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಸಾಕಷ್ಟು ರಕ್ಷಣೆ-ಕೇಂದ್ರ ಸಚಿವ HDK ಕಿಡಿ
ಹಾಸನ,ಜನವರಿ,21,2026 (www.justkannada.in): ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ವೈರಲ್ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಸಾಕಷ್ಟು ರಕ್ಷಣೆ ಸಿಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಘಟನೆ ಬೆಳಕಿಗೆ ಬಂದ ಕೂಡಲೇ ಡಿಜಿಪಿ ಅಮಾನತು ಮಾಡಬೇಕಿತ್ತು ರಾಮಚಂದ್ರರಾವ್ ಹಿನ್ನೆಲೆ ಏನು?  ಭ್ರಷ್ಟಾಚಾರದ ಕುರಿತು ಚರ್ಚಿಸದ ರೀತಿ ಅಧಿಕಾರಿಗಳು ಅಂತಹ ವಾತಾವರಣ ನಿರ್ಮಾಣ ಮಾಡಿಕೊಂಡಿದ್ದಾರೆ.  2016 2017ರಲ್ಲಿ ಬಿಳಿಕೆರೆ ಬಳಿ ಬಸ್ ನಲ್ಲಿ ಕಳ್ಳತನ ಮಾಡಿದ್ದರು. ಭ್ರಷ್ಟ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಸಾಕಷ್ಟು ರಕ್ಷಣೆ ಸಿಗುತ್ತಿದೆ ಬೇರೆಯಾ ಸರ್ಕಾರದಲ್ಲೂ ಭ್ರಷ್ಟ ಅಧಿಕಾರಿಗಳಿಗೆ ಇಷ್ಟು ರಕ್ಷಣೆ ಇಲ್ಲ ಎಂದು ಕಿಡಿಕಾರಿದರು.

ಅಬಕಾರಿ ಡಿಸಿ 2 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದರು. ಅಧಿಕಾರಿಗಳನ್ನೇ ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ.  ಇದಕ್ಕಿಂದ ದಾಖಲೆ ಏನು ಬೇಕು ನಿಮಗೆ.  ಕಾಂಗ್ರೆಸ್ ಸರ್ಕಾರದ ಕರ್ಮಕಾಂಡ ಹೇಳಲು ಬೇಕಾದಷ್ಟು ಇದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ದ ಹೆಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

Key words: protection, corrupt, officials, Congress government, HDK

The post ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಸಾಕಷ್ಟು ರಕ್ಷಣೆ-ಕೇಂದ್ರ ಸಚಿವ HDK ಕಿಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭ್ರಷ್ಟ ಸರ್ಕಾರಕ್ಕೆ ಗೌರವ ಇದ್ದರೆ ವಸತಿ ಸಚಿವರ ರಾಜೀನಾಮೆ ಪಡೆಯಲಿ- ಎನ್.ಮಹೇಶ್ ಆಗ್ರಹ
ಮೈಸೂರು,ಜೂನ್,23,2025 (www.justkannada.in): ರಾಜ್ಯದಲ್ಲಿರುವುದು 100% ಭ್ರಷ್ಟಾಚಾರ ಸರ್ಕಾರ. ಈ ಸರ್ಕಾರಕ್ಕೆ ಗೌರವ ಇದ್ದರೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್ ಮಹೇಶ್ ಆಗ್ರಹಿಸಿದರು.

ವಸತಿ ಇಲಾಖೆಯಲ್ಲಿನ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಎನ್. ಮಹೇಶ್, ಈ ಸರ್ಕಾರ ಹಗರಣದ ಸರಮಾಲೆಯನ್ನೇ ಕಟ್ಟುಕೊಂಡಿದೆ. ಅರೆ ಬೆಂದ ಸರ್ಕಾರ ಇದಾಗಿದ್ದು, ಇದೀಗ  ಮತ್ತೊಂದು ಹಗರಣ ಸರ್ಕಾರದ ವಿರುದ್ದ ಕೇಳಿ ಬಂದಿದೆ. ಸರ್ಕಾರಕ್ಕೆ ಗೌರವ ಇದ್ದರೆ ವಸತಿ ಸಚಿವರ ರಾಜೀನಾಮೆ ಪಡೆಯಲಿ. ಬಿ.ನಾಗೇಂದ್ರ ರಾಜೀನಾಮೆ ಪಡೆದ ಹಾಗೆ ಜಮೀರ್ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಈ ಸರ್ಕಾರ 100% ಭ್ರಷ್ಟಾಚಾರ ಸರ್ಕಾರ. ಈ ಸರ್ಕಾರದಲ್ಲಿ ಅಭಿವೃದ್ಧಿ ಏನು ಇಲ್ಲ. ಗ್ಯಾರಂಟಿ ಯೋಜನೆಗಳ ಅಸ್ತವ್ಯಸ್ತವಾಗಿ ಜಾರಿ ಮಾಡಿದ ಗರಿಮೆಯೊಂದಿಗೆ ಮುಂದೆಯೂ ಅಧಿಕಾರ ಸಿಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಈ ಎಲ್ಲಾ ಹಗರಣಗಳೇ ಮುಂದೆ ಇವರಿಗೆ ಸರ್ಕಾರಕ್ಕೆ ಉರುಳಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಗೆ ಇದೇನು ಬೇಕಿಲ್ಲ. ಹೈಕಮಾಂಡ್ ಗೆ ರಾಜ್ಯ ಸರ್ಕಾರ ಎಟಿಎಂ ಆಗಿದೆ. ಬಿಹಾರ, ಯುಪಿ ರಾಜ್ಯಗಳ ಚುನಾವಣೆಗೆ ಹಣ ಬೇಕಲ್ವಾ. ಈ ಕಾರಣಕ್ಕೆ ಸರ್ಕಾರವನ್ನ ಪ್ರಶ್ನೆ ಮಾಡುತ್ತಿಲ್ಲ. ಜಮೀರ್ ಅಹ್ಮದ್ ಖಾನ್ ರಾಜೀನಾಮೆ ಪಡೆಯೋ ಧೈರ್ಯ ಸಿಎಂಗಿಲ್ಲ ಅಂದರೆ ಅವರನ್ನೇ ಸಿಎಂ ಮಾಡಲಿ ಎಂದು ಕಿಡಿಕಾರಿದರು.

ಪ್ರಬಲ ಸಮುದಾಯಗಳಿಗೆ ಹೆದರಿ ಅಹಿಂದ ಸಮುದಾಯಕ್ಕೆ ಅನ್ಯಾಯ

ಜಾತಿಗಣತಿ ಮರು ಸಮೀಕ್ಷೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎನ್.ಮಹೇಶ್, ಜನರ ಕಣ್ಣೋರೆಸುವ ಕೆಲಸ ಸರ್ಕಾರ ಮಾಡುತ್ತಿದೆ. ಸಿದ್ದರಾಮಯ್ಯ ಪ್ರಬಲ ಸಮುದಾಯಗಳಿಗೆ ಹೆದರಿ ಅಹಿಂದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಜನಗಣತಿ ಜೊತೆ ಜಾತಿಗಣತಿ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರದ ಜಾತಿಗಣತಿ, ಜನಗಣತಿ ಒಪ್ಪಿಕೊಂಡು ಸುಮ್ಮನಿರಬೇಕು. ಒಳ ಮೀಸಲಾತಿ ಜಾರಿ ಮಾಡಲು ಸರ್ಕಾರಕ್ಕೆ ಇಷ್ಟ ಇಲ್ಲ. ಈ ಕಾರಣಕ್ಕೆ ಒಳ ಮೀಸಲಾತಿ ಸಮೀಕ್ಷೆ ಮುಂದೂಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿದ ಎನ್ ಮಹೇಶ್,  ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಡುವೆ ಅಧಿಕಾರ ಹಂಚಿಕೆ ಆಗಿದೆ ಅಂತ ಡಿಕೆ ಬೆಂಬಲಿಗರು ಹೇಳುತ್ತಿದ್ದಾರೆ. ಅಧಿಕಾರ ಹಂಚಿಕೆ ಆಗುವ ಸಂದರ್ಭದಲ್ಲಿ ಆಗುವ ಬೆಳವಣಿಗೆಯಿಂದ ಈ ಸರ್ಕಾರ ಕುಸಿದು ಹೋಗಬಹುದು. ಏನು ಬೇಕಾದರೂ ಆಗಬಹುದು ಎಂದರು.

Key words: corrupt, government, Housing Minister, resign, N. Mahesh

The post ಭ್ರಷ್ಟ ಸರ್ಕಾರಕ್ಕೆ ಗೌರವ ಇದ್ದರೆ ವಸತಿ ಸಚಿವರ ರಾಜೀನಾಮೆ ಪಡೆಯಲಿ- ಎನ್.ಮಹೇಶ್ ಆಗ್ರಹ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಇಂದಿನಿಂದ ಜನಾಕ್ರೋಶ ಯಾತ್ರೆ- ಬಿವೈ ವಿಜಯೇಂದ್ರ
ಬೆಂಗಳೂರು,ಏಪ್ರಿಲ್,7,2025 (www.justkannada.in): ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಇಂದಿನಿಂದ ಜನಾಕ್ರೋಶ ಯಾತ್ರೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜನಾಂದೋಲನಕ್ಕೆ ಇಂದು ಮೈಸೂರಿನಲ್ಲಿ ಚಾಲನೆ ನೀಡುತ್ತಾರೆ.  ಭ್ರಷ್ಠ ಸರ್ಕಾರದ ವಿರುದ್ದ ಜನಾಂದೋಲನ ಮಾಡುತ್ತೇವೆ. 4 ಹಂತದಲ್ಲಿ ಹೋರಾಟ ಮಾಡುತ್ತೇವೆ ಎಂದರು.

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಧಲ್ಲಿ ಪೊಲೀಸರು ಕ್ರೂರವಾಗಿ ನಡೆದು ಕೊಂಡಿದ್ದಾರೆ ಬೇಲ್ ಸಿಕ್ಕ ಮೇಲೂ ಪೊಲೀಸರು ವಿನಯ್ ಮನೆಗೆ ಹೋಗ್ತಾರೆ. ಈ ಪ್ರಕರಣದ ಇಲ್ಲಿಗೆ ಬಿಡಲ್ಲ ಹೋರಾಟ ಮಾಡುತ್ತೇವೆ. ಪೊಲೀಸರ ಕಿರುಕುಳದ ಬಗ್ಗೆ ವಿನಯ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಸರ್ಕಾರದ ದಬ್ಬಾಳಿಕೆ ಸಹಿಸಲ್ಲ.  ಕಾಂಗ್ರೆಸ್ ಪುಢಾರಿಗಳಿಂದ ತೊಂದರೆ ಆದರೆ ಸಂಪರ್ಕ ಮಾಡಿ. ನಾವು ಏನು ಕಾನೂನು ಅನುಕೂಲ ಮಾಡಬೇಕೋ ಮಾಡುತ್ತೇವೆ ಎಂದರು.

Key words: Janakrosha Yatra, against, corrupt, Congress government, BY Vijayendra

The post ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಇಂದಿನಿಂದ ಜನಾಕ್ರೋಶ ಯಾತ್ರೆ- ಬಿವೈ ವಿಜಯೇಂದ್ರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಿಜೆಪಿಯ ರಾಶಿ ರಾಶಿ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಲಿ – ಸಿಎಂ ಸಿದ್ದರಾಮಯ್ಯ‌ ಆಗ್ರಹ
ಮೈಸೂರು, ಸೆಪ್ಟೆಂಬರ್ 28, 2024 (www.justkannada.in): ಬಿಜೆಪಿ ಪಕ್ಷದಲ್ಲಿಯೇ ಬಹಳ ಭ್ರಷ್ಟಾಚಾರಿಗಳಿದ್ದು, ಪ್ರಧಾನಿ ಮೋದಿಯವರು ಅವರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪ್ರಧಾನಿ ಮೋದಿ ಅವರು ಹರಿಯಾಣದ ಪ್ರಚಾರ ಭಾಷಣದಲ್ಲಿ ರಾಜ್ಯದ ಮುಡಾ ವಿಚಾರವನ್ನು ಪ್ರಸ್ತಾಪಿಸಿದ  ವಿಚಾರ ಕುರಿತು ಮೈಸೂರಿನಲ್ಲಿ ಮಾತನಾಡಿದ  ಸಿಎಂ ಸಿದ್ದರಾಮಯ್ಯ, ಮೋದಿಯವರು ಮಣಿಪುರದ ಹಿಂಸೆಯ ಬಗ್ಗೆ ಮಾತನಾಡುವುದೂ ಇಲ್ಲ , ಅಲ್ಲಿಗೆ ಭೇಟಿಯೂ ನೀಡಲಿಲ್ಲವೇಕೆ? ಎಂದು ಪ್ರಶ್ನಿಸಿದರು.

ಸುಳ್ಳು ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ

ಕುಮಾರಸ್ವಾಮಿ ಪತ್ರಿಕಾ ಗೋಷ್ಟಿಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿಯವರ ಎಲ್ಲ ಹೇಳಿಕೆಗಳು ಸುಳ್ಳಿನಿಂದ ಕೂಡಿದ್ದು, ಅವರ ಎಲ್ಲ ಮಾತಿಗೆ ಪ್ರತಿಕ್ರಿಯೆ ನೀಡುವುದು ಅವಶ್ಯಕತೆಯಿಲ್ಲ ಎಂದರು.

ಪೊನ್ನಣ್ಣ ನವರು ನನ್ನ ಕಾನೂನು ಸಲಹೆಗಾರರಾಗಿರುವುದರಿಂದ , ಪ್ರತಿದಿನ ಅವರಿಂದ ಕಾನೂನಿನ  ಚರ್ಚೆ ನಡೆಸುತ್ತೇನೆ ಎಂದರು.

Key words: CM Siddaramaiah, PM Modi, action, corrupt, BJP Leader

The post ಬಿಜೆಪಿಯ ರಾಶಿ ರಾಶಿ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಲಿ – ಸಿಎಂ ಸಿದ್ದರಾಮಯ್ಯ‌ ಆಗ್ರಹ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಶುದ್ಧ ಹಸ್ತವಾಗಿದ್ದರೆ, ಭ್ರಷ್ಟರಾಗಿಲ್ಲ ಅಂದ್ರೆ ಸಿಬಿಐಗೆ ಯಾಕೆ ಹೆದರುತ್ತೀರಾ? ಸಿಎಂ ವಿರುದ್ದ ಆರ್.ಅಶೋಕ್ ವಾಗ್ದಾಳಿ
ಮೈಸೂರು,ಆಗಸ್ಟ್,9,2024 (www.justkannada.in): ನನ್ನ ನಲವತ್ತು ವರ್ಷದ ರಾಜಕೀಯದಲ್ಲಿ ಶುದ್ಧವಾಗಿದ್ದೇನೆ ಎಂದು ಸಿದ್ದರಾಮಯ್ಯ ನೂರು ಸಲ ಹೇಳಿದ್ದಾರೆ. ಹಾಗಾದರೇ ನೀವು ಶುದ್ಧ ಹಸ್ತವಾಗಿದ್ದರೆ, ಭ್ರಷ್ಟರಾಗಿಲ್ಲ ಅಂದ್ರೆ ಸಿಬಿಐಗೆ ಯಾಕೆ ಹೆದರುತ್ತೀರಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಮೈಸೂರಿನಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ  ನಡೆದ ಹಿನ್ನೆಲೆ, ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಜನಾಂದೋಲನದಲ್ಲಿ ಸಿಎಂ ದೊಡ್ಡ ಮಟ್ಟದ ಭಾಷಣ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಹೇಳಿದ್ದೆ ಹೇಳೋ ಕಿಸಬಾಯಿ ದಾಸ ಎಂಬಂತೆ ಹೇಳಿದ್ದನ್ನೇ ಹೇಳಿದ್ದಾರೆ. ಈ ಸಮಾವೇಶಕ್ಕೆ ಜನರಿಗೆ ಕಾಸು ಕೊಟ್ಟು ಕರೆಸಿದ್ದಾರೆ. ಶಾಸಕರುಗಳಿಗೆ ಜನರನ್ನ ಕರೆ ತರಲು ಹೇಳಿದ್ದರು. ನನ್ನ ನಲವತ್ತು ವರ್ಷದ ರಾಜಕೀಯದಲ್ಲಿ ಶುದ್ಧವಾಗಿದ್ದೇನೆ ಎಂದು ನೂರು ಸಲ ಹೇಳಿದ್ದಾರೆ. ನೀವು ಶುದ್ಧ ಹಸ್ತವಾಗಿದ್ದರೆ, ಭ್ರಷ್ಟರಾಗಿಲ್ಲ ಅಂದ್ರೆ. ಯಾವ ಸಿಬಿಐ ನಿಮ್ಮನ್ನ ಏನು ಮಾಡಲಿಕ್ಕೆ ಆಗೋದಿಲ್ಲ. ನೀವು ತಪ್ಪು ಮಾಡಿಲ್ಲ ಅಂದ್ರೆ ಸಿಬಿಐ ಗೆ ಯಾಕೆ ಹೆದರುತ್ತಿದ್ದೀರಾ ಎಂದು ಪ್ರಶ್ನಿಸಿದರು.

ವಾಲ್ಮೀಕಿ ಹಗರಣದಲ್ಲೂ ಇದೆ ರೀತಿ ಹೇಳಿದರು. ಯಾವಾಗ ಇಡಿ ಎಂಟ್ರಿ ಆಯ್ತು.  ಹಗರಣ ನಡೆದಿದೆ ಎಂದು ಒಪ್ಪಿಕೊಂಡರು. ಹಗರಣ ನಡೆದಿದೆ ಇದರಲ್ಲಿ ನಮ್ಮದೇನು ತಪ್ಪಿದೆ ಎಂದು ಹೇಳಿದ್ದಾರೆ. ಪ್ರತಿ ತಿಂಗಳು ಪ್ರಿನ್ಸಿಪಾಲ್ ಸೆಕ್ರೆಟ್ರೇರಿ ರಿವಿವ್ ಮೀಟಿಂಗ್ ಮಾಡ್ತಾರೆ. ಆಗ ನಿಮಗೆ ಹಗರಣ ಬಗ್ಗೆ ಮಾಹಿತಿ ತಿಳಿಲಿಲ್ವಾ.? ಮುಖ್ಯ ಕಾರ್ಯದರ್ಶಿಗಳು ಸಭೆ ಮಾಡುವಾಗಲು ನಿಮ್ಮ ಗಮನಕ್ಕೆ ಬರಲಿಲ್ವ. ಮುಖ್ಯ ಕಾರ್ಯದರ್ಶಿಗಳು ಇದನ್ನ ನಿಮಗೆ ಹೇಳಲಿಲ್ವ. ಬಜೆಟ್ ಸಂದರ್ಭದಲ್ಲದರೂ ಇದನ್ನ ಕೇಳಿದ್ರೆ ನಿಮಗೆ ಹಗರಣ ಗೊತ್ತಾಗುತ್ತಿತ್ತು. ನೀವು ಅದನ್ನ ಮಾಡಲಿಲ್ಲ, ಈ ಹಗರಣದಲ್ಲಿ ನೀವೆಲ್ಲ ಭಾಗಿಯಾಗಿದ್ದೀರಾ. ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧ ಕಡೆಯಿಂದ ತೆಲಂಗಾಣ ಚುನಾವಣೆಗೆ ನಮ್ಮ ರಾಜ್ಯದ ಹಣ ಹೋಗಿದೆ. ಹೀಗಿದ್ದರೂ ಈಗಲೂ ಕೂಡ ಸಿಎಂ ನಮ್ಮ ಪಾತ್ರ ಏನಿಲ್ಲ ಎಂದು ಹೇಳುತ್ತಿದ್ದಾರೆ. ವಾಲ್ಮೀಕಿ ಹಗರಣ ತನಿಖೆ ಒಂದು ಹಂತಕ್ಕೆ ಬಂದಿದೆ. ಬ್ಯಾಂಕ್ ಅಧಿಕಾರಿಗಳು ಕೂಡ ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದಾರೆ. ನಾವು ಕೂಡ ಈ ಹಗರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೋಯುತ್ತೇವೆ. ಈ ಹಗರಣ ಕುರಿತು ಸಾಕಷ್ಟು ಮಾಹಿತಿಯನ್ನ ಸಿಎಂಗೆ ನೀಡಿದ್ದೇನೆ. ಸಿಎಂ ನಾನು ಯಾವುದೇ ಮಾಹಿತಿ ಕೊಟ್ಟಿಲ್ಲ ಎಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರ್ ಅಶೋಕ್ ಕಿಡಿಕಾರಿದರು.

ನೀವು ಕ್ಲೀನ್, ತೆರೆದ ಪುಸ್ತಕ ಅಂದ್ರೆ ಕೆಂಪಣ್ಣ ಆಯೋಗ ಒಮ್ಮೆ ತೆರೆದು ಬಿಡಿ.

ಮುಡಾ ಹಗರಣ ವಿಚಾರವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಇದರಲ್ಲಿ ನಮ್ಮ ಪಾತ್ರ ಏನಿಲ್ಲ ಎಂದು ಹೇಳ್ತಿದೀರಾ. ಆಗಿದ್ರೆ ನಮಗಿಂತ ಮುಂಚೆ ನೀವೇಕೆ ಬಾಯಿ ಬಡಿದುಕೊಂಡು ಹೋಗುತ್ತಿದ್ದೀರಾ. ಮುಡಾ ಹಗರಣದಂತೆ ರೀಡೂ ಹಗರಣ ಕೂಡ. ನೀವು ಕ್ಲಿನ್, ತೆರೆದ ಪುಸ್ತಕ ಅಂದ್ರೆ ಕೆಂಪಣ್ಣ ಆಯೋಗ ಒಮ್ಮೆ ತೆರೆದು ಬಿಡಿ. ಕೆಂಪಣ್ಣ ಆಯೋಗನೆ ಮುಗಿದಿಲ್ಲ, ಈಗ ದೇಸಾಯಿ ಆಯೋಗ ಬೇರೆ. ಇದಕ್ಕೆ ಇನ್ನೆಷ್ಟು ವರ್ಷ ತೆಗೆದುಕೊಳ್ಳುತ್ತೀರಾ ಹೇಳಿ ಎಂದು ಪ್ರಶ್ನಿಸಿದರು.

ಸದನದಲ್ಲಿ ಮಾತನಾಡಿದ್ರೆ ಏಟಿಗೆ ಎದುರೇಟು ಕೊಡುತ್ತಿದ್ದೆವು.

ಮುಡಾ ಹಗರಣ ವಿರುದ್ಧ ನಾವು ಜೆಡಿಎಸ್ ಪಾದಯಾತ್ರೆ ಮಾಡುತ್ತಿದ್ದೇವೆ. ನಿಮ್ಮದೇ ಪಕ್ಷದ ಅಧ್ಯಕ್ಷ ಮರೀಗೌಡ ಮುಡಾ ಹಗರಣ ಬಗ್ಗೆ ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆಗಿದ್ರೆ ನಿಮ್ಮ ಪಕ್ಷದ ನಾಯಕ ಸುಳ್ಳು ಹೇಳುತ್ತಿದ್ದಾರಾ. ವಿಧಾನಸಭೆಯಲ್ಲಿ ಒಮ್ಮೆ ನಿಂತು ನಮ್ಮ ಪ್ರಶ್ನೆಗೆ ಉತ್ತರ ಹೇಳ್ತಿದ್ದಿರಿ. ಆದರೆ ಸದನದಲ್ಲಿ ತಪ್ಪಿಸಿಕೊಂಡು ಓಡ್ತೀರಾ, ಆಚೆ ಬಂದು ಪ್ರೆಸ್ ಮೀಟ್ ಮಾಡ್ತೀರಾ. ಸದನದಲ್ಲಿ ಮಾತನಾಡಿದ್ರೆ ಏಟಿಗೆ ಎದುರೇಟು ಕೊಡುತ್ತಿದ್ದೆವು ಎಂದು ಆರ್.ಅಶೋಕ್ ಚಾಟಿ ಬೀಸಿದರು.

ಅಬ್ರಹಾಂ ನನ್ನ ಬ್ಲಾಕ್ ಮೇಲರ್ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಜಂತಕಲ್ ಮೈನಿಂಗ್ ಕೇಸ್ ಹಾಕಿದಾಗ ಅಬ್ರಹಾಂ ಹಾಕಿರುವ ಕೇಸ್ ಸರಿ ಇದೆ ಎಂದು ಹೇಳಿದ್ರಿ. ಆಗಿದ್ರೆ ಸುಪ್ರೀಂ ಕೋರ್ಟ್ ನಲ್ಲಿ ಯಡಿಯೂರಪ್ಪ ಕೇಸ್ ಇದಿಯಲ್ಲ ವಾಪಾಸ್ ತಗೋತೀರಾ. ಬಿಜೆಪಿ ವಿರುದ್ಧ ಅಬ್ರಹಾಂ ಆರೋಪ ಮಾಡಿದ್ರೆ ಸರಿ. ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ್ರೆ ಆತ ಬ್ಲಾಕ್ ಮೇಲರ್ ಅಂತೀರಾ ಎಂದು ಟೀಕಿಸಿದರು.

Key words: corrupt, afraid, CBI, R. Ashok, CM Siddaramaiah

The post ಶುದ್ಧ ಹಸ್ತವಾಗಿದ್ದರೆ, ಭ್ರಷ್ಟರಾಗಿಲ್ಲ ಅಂದ್ರೆ ಸಿಬಿಐಗೆ ಯಾಕೆ ಹೆದರುತ್ತೀರಾ? ಸಿಎಂ ವಿರುದ್ದ ಆರ್.ಅಶೋಕ್ ವಾಗ್ದಾಳಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಬೇಕೆಂಬ ಸಂಕಲ್ಪದಿಂದ ಪಾದಯಾತ್ರೆ- ಬಿವೈ ವಿಜಯೇಂದ್ರ
ಮಂಡ್ಯ,ಆಗಸ್ಟ್,6,2024 (www.justkannada.in):ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನ ಕಿತ್ತೆಸೆಯಬೇಕೆಂಬ ಸಂಕಲ್ಪದಿಂದ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ಇಂದು ಬಿಜೆಪಿ ಜೆಡಿಎಸ್ ನಿಂದ  ಮೈಸೂರು ಚಲೋ ಪಾದಯಾತ್ರೆಯ ನಾಲ್ಕನೇ ದಿನ ಪಾಲ್ಗೊಂಡು  ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯದಲ್ಲಿರುವುದು ರಾಜ್ಯದ ಆರೂವರೆ ಕೋಟಿ ಜನರಿಗೆ ಚುನಾಯಿತ ಸರಕಾರ ಎಂದು ಅನಿಸುತ್ತಿಲ್ಲ. ಕಾಂಗ್ರೆಸ್‌ ನವರು ಅನೇಕ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ರಾಜ್ಯದ ಅಭಿವೃದ್ದಿ ಮಾಡದೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಭ್ರಷ್ಟ ಕಾಂಗ್ರೆಸ್ ಸರಕಾರ ಮತ್ತು ಭ್ರಷ್ಟ ಸಿಎಂ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕಿತ್ತೆಸೆಯಬೇಕೆಂದು ಸಂಕಲ್ಪದೊಂದಿಗೆ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.

ರಾಜ್ಯದಲ್ಲಿ ವಿದ್ಯುತ್ ದರ, ಹಾಲಿನ ದರ ಹೆಚ್ಚಿಸಿದ್ದಾರೆ. ಆದರೆ  ಅದರ ಪ್ರಯೋಜನ ರೈತರು, ಹೈನುಗಾರರಿಗೆ ಲಭಿಸಿಲ್ಲ. ಯಡಿಯೂರಪ್ಪನವರು, ಬಿಜೆಪಿ ಸರಕಾರವು ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ಕೊಡುತ್ತಿತ್ತು ಎಂದು  ಬಿವೈ ವಿಜಯೇಂದ್ರ ಕಿಡಿ ಕಾರಿದರು.

Key words: Padayatra, corrupt, Congress, government, BY Vijayendra

The post ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಬೇಕೆಂಬ ಸಂಕಲ್ಪದಿಂದ ಪಾದಯಾತ್ರೆ- ಬಿವೈ ವಿಜಯೇಂದ್ರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದುಡ್ಡಿನ ಮೇಲೆ ಬಿಜೆಪಿಯಿಂದ ಚುನಾವಣೆ: ಭ್ರಷ್ಟ ಸರ್ಕಾರವನ್ನ ಕಿತ್ತೊಗೆಯಲು ಜನರು ನಿರ್ಧಾರ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.
ಮಂಗಳೂರು,ಏಪ್ರಿಲ್,25,2023(www.justkannada.in): ಬಿಜೆಪಿಯ ಭ್ರಷ್ಟಾಚಾರದಿಂದಾಗಿ ರಾಜ್ಯಕ್ಕೆ ಈಗ ಕೆಟ್ಟ ಹೆಸರು ಬಂದಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಲು  ಜನರು ನಿರ್ಧರಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಲ್ಲಿ ಇಂದು ಲಂಚ ಕೊಡದೆ ಯಾವುದೇ ಕೆಲಸ ಆಗ್ತಿಲ್ಲ. ಭ್ರಷ್ಟಾಚಾರದಿಂದಾಗಿ ರಾಜ್ಯಕ್ಕೆ ಈಗ ಕೆಟ್ಟ ಹೆಸರು ಬಂದಿದೆ. 40% ಕಮಿಷನ್​ ಬಗ್ಗೆ ಗುತ್ತಿಗೆದಾರರು ಆರೋಪ ಮಾಡಿದ್ದರು. ಪ್ರಧಾನಿ ಮೋದಿ, ರಾಷ್ಟ್ರಪತಿಗೂ ಗುತ್ತಿಗೆದಾರರು ಪತ್ರ ಬರೆದಿದ್ದರು. ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಕಿಡಿಕಾರಿದರು.

ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನ ನಿರ್ಧರಿಸಿದ್ದಾರೆ.  ನಮಗೆ 150 ಸ್ಥಾನವನ್ನ ಕೊಡಿ. ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಇಡಿ ಐಟಿ ಎಲ್ಲವೂ ಅವರ ಕೈಯಲ್ಲಿ ಇದೆ  ಬಿಜೆಪಿಯವರೇ ಎಲ್ಲಾ ಕಡೆ ಎಟಿಎಂ ಇಟ್ಟಿದ್ದಾರೆ. ದುಡ್ಡಿನ ಮೇಲೆ ಬಿಜೆಪಿಯವರು ಚುನಾವಣೆ ಮಾಡುತ್ತಿದ್ದಾರೆ ಎಂದು  ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

Key words: bjp-corrupt -government- AICC president -Mallikarjuna Kharge.

The post ದುಡ್ಡಿನ ಮೇಲೆ ಬಿಜೆಪಿಯಿಂದ ಚುನಾವಣೆ: ಭ್ರಷ್ಟ ಸರ್ಕಾರವನ್ನ ಕಿತ್ತೊಗೆಯಲು ಜನರು ನಿರ್ಧಾರ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭ್ರಷ್ಟ ರಕ್ಷಕ ಸರ್ಕಾರಕ್ಕೆ ರಾತ್ರೋರಾತ್ರಿ ಯೂಟರ್ನ್ ಹೊಡೆಯುವಂತೆ ಚಾಟಿಯೇಟು ಬಿದ್ದಿದೆ- ರಾಜ್ಯ ಕಾಂಗ್ರೆಸ್ ಟೀಕೆ.
ಬೆಂಗಳೂರು,ಜುಲೈ,16,2022(www.justkannada.in):  ಸರ್ಕಾರಿ ಕಚೇರಿಗಳಲ್ಲಿ ಫೋಟೋ ವಿಡಿಯೋ ಚಿತ್ರೀಕರಣ ನಿಷೇಧ  ವಿಧಿಸಿ ನಂತರ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾದ ನಂತರ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರದ ನಡೆ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯವಾಡಿದೆ.

ಈ ಕುರಿತು ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಭ್ರಷ್ಟ ರಕ್ಷಕ ಸರ್ಕಾರಕ್ಕೆ ರಾತ್ರೋರಾತ್ರಿ ಯೂಟರ್ನ್ ಹೊಡೆಯುವಂತೆ ಚಾಟಿಯೇಟು ಬಿದ್ದಿದೆ. ಸಾರ್ವಜನಿಕ ಟೀಕೆ, ವಿಪಕ್ಷಗಳ ವಿರೋಧವೇ ಬರಬೇಕಾ ಭ್ರಷ್ಟ ಬಿಜೆಪಿ ಸರ್ಕಾರ ಬುದ್ದಿ ಕಲಿಯಲು? ಎಂದು ಕಿಡಿಕಾರಿದೆ.

ಹಾಗೆಯೇ ಚಿತ್ರೀಕರಣ ನಿಷೇಧ  ವಾಪಸ್ ಆದೇಶದಲ್ಲಿ ಕನ್ನಡ ಅಕ್ಷರಗಳ ದೋಷಗಳು ಕಂಡು ಬಂದಿದ್ದು ಈ ಕುರಿತು    ಲೇವಡಿ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರ “ಮದ್ಯ’ ರಾತ್ರಿ” ಕೆಲಸಗಳನ್ನು ನಿಲ್ಲಿಸಬೇಕು & ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಬೇಕೆಂಬುದು ನಮ್ಮ ಸಲಹೆ! ಎಂದು ಹೇಳಿದರು.

ನಾಗಪುರದ ಆಡಳಿತದಲ್ಲಿ ನೀವು ನಾಮಕಾವಸ್ತೆ ಸಿಎಂ ಮಾತ್ರಾನಾ?

ಇನ್ನು ಹಾಗೆಯೇ ಆದೇಶದ ಬಗ್ಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ಧ ಸಿಎಂ ಬೊಮ್ಮಾಯಿಗೆ ತಿರುಗೇಟು ನೀಡಿರುವ ಕಾಂಗ್ರೆಸ್,  ಸಿಎಂ ಬೊಮ್ಮಾಯಿ ಅವರೇ, ರಾಜ್ಯದಲ್ಲಿ ನಿಮ್ಮ ಗಮನಕ್ಕಿಲ್ಲದೆ ಆಡಳಿತ ನಡೆಯುತ್ತಿದೆಯೇ? . ಹಾಗಿದ್ದರೆ ಆ ‘ಆಡಳಿತ’ ನಡೆಸುತ್ತಿರುವವರು ಯಾರು? . ನೀವು ಕೇವಲ ಉತ್ಸವಮೂರ್ತಿ ಮಾತ್ರಾನಾ?  ಅಧಿಕಾರಿಗಳು, ಮಂತ್ರಿಗಳು ನಿಮ್ಮನ್ನ ಕಡೆಗಣಿಸಿದ್ದಾರಾ? . ಸರ್ಕಾರದಲ್ಲಿ ನಿಮಗೆ ಹಿಡಿತ ಇಲ್ಲವೇ?  ನಾಗಪುರದ ಆಡಳಿತದಲ್ಲಿ ನೀವು ನಾಮಕಾವಸ್ತೆ ಸಿಎಂ ಮಾತ್ರಾನಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Key words:  corrupt – government – u turn – State -Congress

ENGLISH SUMMARY..

The corrupt govt. has taken a U-turn after getting thrashing”: Cong. ridicules

Bengaluru, July 16, 2022 (www.justkannada.in): Following severe criticism by the people against the State Govt. orders prohibiting visitors from taking pictures and videos in government offices, the State Govt. today withdrew the order. The State Congress leaders have ridiculed the government’s move.

In a tweet by the State Cong. unit, “The corrupt government has taken a U-turn soon after getting a thrashing from the public. The BJP govt. appears to mend its ways only through rival party’s opposition and public furor.”

Keywords: Corrupt BJP govt/ State Cong/ ridicules

The post ಭ್ರಷ್ಟ ರಕ್ಷಕ ಸರ್ಕಾರಕ್ಕೆ ರಾತ್ರೋರಾತ್ರಿ ಯೂಟರ್ನ್ ಹೊಡೆಯುವಂತೆ ಚಾಟಿಯೇಟು ಬಿದ್ದಿದೆ- ರಾಜ್ಯ ಕಾಂಗ್ರೆಸ್  ಟೀಕೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭ್ರಷ್ಟ ಬಿಬಿಎಂಪಿ ಅಲ್ಲ, ಭ್ರಷ್ಟ ಬಿಜೆಪಿ ಎನ್ನಿ – ಉದ್ಯಮಿ ಮೋಹನ್ ದಾಸ್ ಪೈಗೆ ಹೆಚ್.ಡಿ ಕುಮಾರಸ್ವಾಮಿ ಸಲಹೆ.
ಬೆಂಗಳೂರು,ಮೇ,20,2022(www.justkannada.in): ಉದ್ಯಮಿ ಮೋಹನ್ ದಾಸ್ ಪೈ ಅವರು  ಪ್ರಧಾನಿಗಳಿಗೆ ಸೇವ್ ಬೆಂಗಳೂರು ಅಂತ ಟ್ವೀಟ್ ಮಾಡಿದ್ದಾರೆ. ಭ್ರಷ್ಟಾಚಾರ  ಬಿಬಿಎಂಪಿ ಅಂತ ಟ್ವೀಟ್ ಮಾಡಿ ಸೇವ್ ಬೆಂಗಳೂರು (ಬೆಂಗಳೂರು ರಕ್ಷಿಸಿ) ಎಂದು ಹೇಳಿದ್ದಾರೆ. ಮೋಹನ್ ದಾಸ್ ಪೈ ಅವರು ಕರೆಪ್ಟ್ ಬಿಬಿಎಂಪಿ ಅಂತ ಹೇಳಬೇಡಿ. ಕರೆಪ್ಟ್ ಬಿಜೆಪಿ ಅಂತ ಹೇಳಿ ಎಂದು ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದರು.

ಬಿಬಿಎಂಪಿಯಲ್ಲಿ ಆಡಳಿತ ಮಾಡ್ತಿರೋದು ಬಿಜೆಪಿ ಸರ್ಕಾರ. ಬೆಂಗಳೂರು ಉಸ್ತುವಾರಿ ಸಿಎಂ ಇದ್ದಾರೆ. ಬೆಂಗಳೂರು ಮಂತ್ರಿಗಳು ಲೂಟಿ ಮಾಡಿದ್ದಾರೆ. ಲೂಟಿ ಮಾಡಿದ ಮಂತ್ರಿಗಳ ಕ್ಷೇತ್ರದಲ್ಲಿ ಪ್ರದಕ್ಷಿಣೆ ಮಾಡ್ತೀರಾ. ಲೂಟಿ ಮಾಡಿರೋದು ಸತ್ಯ ಹೇಳ್ತಾರೆ ಎಂದು ವ್ಯಂಗ್ಯವಾಡಿದರು.

ದಾಸರಹಳ್ಳಿ ಕ್ಷೇತ್ರದಲ್ಲಿ ಇವತ್ತು ಪ್ರದಕ್ಷಿಣೆ ಹಾಕಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ದಾಸರಹಳ್ಳಿ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಾಸರಹಳ್ಳಿ ಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ 780 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೆ. ಅಮೇಲೆ ಬಿಜೆಪಿ ಸರ್ಕಾರ ಅದನ್ನು ತಡೆ ಹಿಡಿದಿದೆ. ರಾಜಕಾಲುವೆಗೆ 130 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೆ. ಅದನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಚಿಕ್ಕಬಾಣವಾರ ಕೆರೆ 102 ಎಕರೆ ಇದೆ. ಈ ಕೆರೆಗೆ ಸ್ಯಾನಿಟರಿ ನೀರು ಬರ್ತಿದೆ. ಕೆರೆ ಪಕ್ಕದಲ್ಲಿ ಮಾಜಿ ಶಾಸಕರು ಹಣ ಪಡೆದು ಅಪಾರ್ಟ್ ಮೆಂಟ್ ಕಟ್ಟಿಸಲು ಅನುಮತಿ ಕೊಟ್ಟಿದ್ದಾರೆ. ಈ ಅಪಾರ್ಟ್ ಮೆಂಟ್ ನಿಂದ ಸ್ಯಾನಿಟರಿ ನೀರು ಬರುತ್ತಿದೆ. ನಾನು ಕೆರೆ ಅಭಿವೃದ್ಧಿ ಗೆ ಕೊಟ್ಟ ಹಣವೂ ಬಿಡುಗಡೆ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಇಂತಹ ಕೆರೆಗಳನ್ನು ಮುಚ್ಚಿಕೊಂಡು ಬರುತ್ತಿದ್ದೀರಾ, ಕಾಂಗ್ರೆಸ್ ಅವರು ಮೇಕೆದಾಟು ಅಂತ ಬಾಯಿ ಬಡಿದುಕೊಳ್ಳಬೇಡಿ ಹೀಗೆ ಕೆರೆ ಮುಚ್ಚಿಕೊಂಡು ಬಂದು ಪಾದಯಾತ್ರೆ ಅಂದರೆ ಏನು ಪ್ರಯೋಜನ ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದಾವೂಸ್ ಶೃಂಗಸಭೆಗೆ ಹೋಗಿ ಹೇಗೆ ಹೂಡಿಕೆದಾರರನ್ನು ಕರೆಯುತ್ತೀರಾ‌. ಇಷ್ಟು ಸಮಸ್ಯೆ ಇದ್ದರೆ ಹೂಡಿಕೆದಾರರು ಬರ್ತಾರಾ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಕಾಲದಲ್ಲಿ ಹೆಚ್ಚು ಅನುದಾನ ಕೊಟ್ಟಿದ್ದೇನೆ ಅಂತಾರೆ. ಅ ಅನುದಾನದಲ್ಲಿ ಎಷ್ಟು ಜನರ ಸಮಸ್ಯೆ ಸರಿ ಆಯಿತು. ಎಷ್ಟು ಲೂಟಿ ಆಯ್ತು, ಅವರ ಐದು ವರ್ಷದ ಅವಧಿಯಲ್ಲಿ ಏನು ಆಗಿದೆಂದು ಸಿದ್ದರಾಮಯ್ಯ ಅವರು ಹೇಳಲಿ ಎಂದು ಸವಾಲು ಹಾಕಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದರೆ ಇವತ್ತು ಯಾಕೆ ಈ ಸಮಸ್ಯೆ ಆಗುತಿತ್ತು ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಗೆ ಹೆಚ್ ಡಿಕೆ ಸವಾಲು

ಸಿದ್ದರಾಮಯ್ಯ ಕಾಲದಲ್ಲಿ ಯಾರು, ಯಾರು ಎಷ್ಟು ಹಣ ನುಂಗಿದವರ ಪಟ್ಟಿ ಕೊಡಲಾ? ಎಂದು ಸವಾಲು ಹಾಕಿದರು.  ಕಾಂಗ್ರೆಸ್ ಅವಧಿಯಲ್ಲಿ ಕಾಂಗ್ರೆಸ್ ನ ಮಂತ್ರಿಗಳು ಎಷ್ಟು ಲೂಟಿ ಮಾಡಿದ್ದೀರಾ ಗೊತ್ತಿದೆ. ಹೌದು ನಾನು ಕೆಲಸ ಮಾಡಿಲ್ಲ. ನಿಮ್ಮ ತರಹ ಲೂಟಿಯೂ ಮಾಡಿಲ್ಲ. ನನ್ನನ್ನು ಹೆಸರಿಗೆ ಸಿಎಂ ಮಾಡಿದ್ರಿ. ನನಗೆ ಒಂದೇ ಒಂದು ವರ್ಗಾವಣೆ ಮಾಡಲು ಬಿಡಲಿಲ್ಲ. ಬೆಂಗಳೂರಿನ ಸಂಬಂಧ ಒಂದೇ ಒಂದು ಸಭೆ ಮಾಡಲು ಬಿಡಲಿಲ್ಲ. ಡಿಸಿಎಂ ಆಗಿದ್ದ ಪರಮೇಶ್ವರ್ ಅವರನ್ನು ಕೇಳಿ.‌ ಇದಕ್ಕೆ ಕಾರಣ ಸಿದ್ದರಾಮಯ್ಯ. ನನ್ನ ಬಗ್ಗೆ ಸಿದ್ದರಾಮಯ್ಯ ಮಾತಾಡೋದು ಬೇಡ. ನಾನು ಸಿದ್ದರಾಮಯ್ಯಗೆ ಓಪನ್ ಚಾಲೆಂಜ್ ಮಾಡುತ್ತೇನೆ. ಬನ್ನಿ ಚರ್ಚೆ ಮಾಡೋಣ. ಯಾರ ಕಾಲದಲ್ಲಿ ಏನೇನು   ಆಗಿದೆ ಚರ್ಚೆಗೆ ನಾನು ಸಿದ್ದ ಎಂದು ಕುಮಾರಸ್ವಾಮಿ ಅವರು  ಸಿದ್ದರಾಮಯ್ಯಗೆ ಸವಾಲ್ ಹಾಕಿದರು.

ಈ ಸಂದರ್ಭದಲ್ಲಿ ದಾಸರಹಳ್ಳಿ ಶಾಸಕ ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ. ಎ.ಶರವಣ ಮುಂತಾದವರು ಜತೆಯಲ್ಲಿದ್ದರು.

Key words: Not –corrupt- BBMP- corrupt- BJP-HD Kumaraswamy

The post ಭ್ರಷ್ಟ ಬಿಬಿಎಂಪಿ ಅಲ್ಲ, ಭ್ರಷ್ಟ ಬಿಜೆಪಿ ಎನ್ನಿ – ಉದ್ಯಮಿ ಮೋಹನ್ ದಾಸ್ ಪೈಗೆ  ಹೆಚ್.ಡಿ ಕುಮಾರಸ್ವಾಮಿ ಸಲಹೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.