condemnable Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಭಾರತ್ ಜೋಡೋ ಸಂಘಗಳ ಕುರಿತ ಅಶೋಕ್ ಆಕ್ಷೇಪ ಖಂಡನಾರ್ಹ- ಹೆಚ್.ಎ ವೆಂಕಟೇಶ್
ಮೈಸೂರು,ಜುಲೈ,17,2026 (www.justkannada.in): ಯುವಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂಘಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ಭಾರತ್ ಜೋಡೋ ಯುವ ಸಂಘಗಳ ಕುರಿತು, ವಿಪಕ್ಷ ಬಿಜೆಪಿ ನಾಯಕ ಆರ್. ಅಶೋಕ್ ಮುಂದಿಡುತ್ತಿರುವ ಆಕ್ಷೇಪ ಖಂಡನಾರ್ಹ ಎಂದು ಕೆಪಿಸಿಸಿ ವಕ್ತಾರ ಹೆಚ್ ಎ ವೆಂಕಟೇಶ್ ಟೀಕಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುವ ಯುವಜನತೆಯ ಮನಸ್ಸಿನಲ್ಲಿ ಕೋಮು ವಿಷ ತುಂಬಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಬಿಜೆಪಿಯವರಿಗೆ  ಕಾಂಗ್ರೆಸ್ ಸರ್ಕಾರದ ಈ ಯುವ ಅಭಿವೃದ್ಧಿ ಯೋಜನೆ  ಕುಟುಕುತ್ತಿದೆ ಎನ್ನಬಹುದು.

ಬಿಜೆಪಿಯವರು ಇದುವರೆಗೆ ಯುವ ಜನತೆಯನ್ನು ದಾರಿ ತಪ್ಪಿಸಿ, ಇವರನ್ನು ತಮ್ಮ ದುಷ್ಟ ರಾಜಕೀಯ ಹುನ್ನಾರಗಳಿಗೆ ಬಲಿಪಶು ಮಾಡಿಕೊಳ್ಳುತ್ತಿದ್ದರು. ಕೋಮು ದಳ್ಳುರಿಗೆ ಯುವಕರನ್ನು ನೂಕಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಲಾಭ ಪಡೆದು ಅಧಿಕಾರಕ್ಕೆ ಏರುತ್ತಿದ್ದರು. ಬಿಜೆಪಿಯವರೇ ಮುನ್ನಡೆಸುವ ಹತ್ತಾರು ಕೋಮುವಾದಿ ಸಂಘಟನೆಗಳ ನಾಯಕರ ಮಾತಿನಿಂದ ದಿಕ್ಕು ತಪ್ಪಿದ ಯುವಜನತೆ, ಕೋಮುಗಲಭೆ- ಹಿಂಸೆ- ಮುಂತಾದ ಘಟನೆಗಳಲ್ಲಿ ಭಾಗಿಯಾಗಿ,  ಇಂದಿಗೂ ಸಹ ಜೈಲುಗಳಲ್ಲಿ ಕೊಳೆಯುತ್ತಿರುವುದು ಹಾಗೂ ವಿವಿಧ ನ್ಯಾಯಾಲಯಗಳಿಗೆ ಅಲೆಯುತ್ತಿರುವುದನ್ನು ಕಾಣಬಹುದು ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಬಿಜೆಪಿ ಪ್ರೇರಿತ ಕೋಮುವಾದಿ ಸಂಘಟನೆಗಳ ನಾಯಕರು ಯುವಜನತೆಯನ್ನು ದಾರಿ ತಪ್ಪಿಸಿರುವ ಸಾವಿರಾರು ಪ್ರಕರಣಗಳಿವೆ. ಈ ಹಿನ್ನಲೆಯಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸಿ ಸಮಾನತೆ ಹಾಗೂ ಸಮಾಜಮುಖಿ ರಾಜಕೀಯ ಪ್ರಜ್ಞೆ ಜಾಗೃತಗೊಳಿಸಲು ರಾಜ್ಯ ಸರ್ಕಾರ ಭಾರತ್ ಜೋಡೋ ಯುವಸಂಘಗಳ ರಚನೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಹೆಚ್ ಎ ವೆಂಕಟೇಶ್ ತಿಳಿಸಿದ್ದಾರೆ.

ಯಾವುದೇ ಜಾತಿ ಧರ್ಮದ ಭೇದ ಭಾವವಿಲ್ಲದೆ, ಎಲ್ಲರನ್ನೂ ಒಳಗೊಳ್ಳುವ ಆರೋಗ್ಯಕರ ಸಮಾಜ ನಿರ್ಮಾಣ  ಈ ಸಂಘಗಳ ಮುಖ್ಯ ಉದ್ದೇಶವಾಗಿದೆ. ಇದೊಂದು ಮಹೋನ್ನತ ಆಶಯವಾಗಿದೆ. ಯುವ ಜನತೆಗಾಗಿ ಆರೋಗ್ಯಕರ ಜೀವನ ಶೈಲಿ,  ನಾಯಕತ್ವ ಮತ್ತು ಸಂಘಟನಾ  ಮನೋಭಾವ ವೃದ್ಧಿಸುವುದು,  ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವುದು  ಭಾರತ್ ಜೋಡೋ ಯುವ ಸಂಘಗಳ ಉದ್ದೇಶ.

ಯುವಜನತೆಯ ಮಾನಸಿಕ ದೈಹಿಕ ಬೆಳವಣಿಗೆಯ  ಆಶಯದೊಂದಿಗೆ ಭಾರತ್ ಜೋಡೋ ಸಂಘ ಕಾರ್ಯನಿರ್ವಹಣೆ ಆರಂಭಿಸಿದರೆ,  ತಮ್ಮ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎನ್ನುವುದು ಬಿಜೆಪಿಯವರಿಗೆ  ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಪಕ್ಷದ ನಾಯಕ ಆರ್. ಅಶೋಕ್  ಭಾರತ್ ಜೋಡೋ ಸಂಘಗಳನ್ನು ಗಂಜಿ ಕೇಂದ್ರಗಳೆಂದು ಲೇವಡಿ ಮಾಡಿದ್ದಾರೆ. ಯುವಜನತೆ ಬಿಜೆಪಿಯ ಈ ಹುನ್ನಾರವನ್ನು ಮನವರಿಕೆ ಮಾಡಿಕೊಂಡಿದೆ. ಜಾಗೃತ ಯುವ ಮನಸ್ಸುಗಳು ರಾಜ್ಯವನ್ನು ಮುಂದೆ ಎಂದಿಗೂ ಸಹ ಕೋಮುವಾದಿಗಳ ವಶಕ್ಕೆ ನೀಡುವುದಿಲ್ಲ ಎನ್ನುವುದು ಬಿಜೆಪಿಯವರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿಯೇ ಈ ಪಕ್ಷದ ನಾಯಕರು ಭಾರತ್ ಜೋಡೋ ಸಂಘಗಳ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ನಾಯಕರ ಗುಬೆಲ್ಸ್ ಪ್ರಚಾರದ ನಡುವೆಯೂ;  ಯುವಜನತೆ ಎಚ್ಚೆತ್ತುಕೊಂಡಿರುವುದು; ರಾಜ್ಯ ಸರ್ಕಾರ ಯುವ ಜನತೆಯ ಆಶಯಕ್ಕೆ ಪೂರಕವಾಗಿ ಕ್ರಮವಹಿಸುತ್ತಿರುವುದು ಸ್ವಾಗತಾರ್ಹ ಎಂದಿದ್ದಾರೆ.

Key words: Bharat Jodo Sanghas, Ashok, condemnable, H.A. Venkatesh

The post ಭಾರತ್ ಜೋಡೋ ಸಂಘಗಳ ಕುರಿತ ಅಶೋಕ್ ಆಕ್ಷೇಪ ಖಂಡನಾರ್ಹ- ಹೆಚ್.ಎ ವೆಂಕಟೇಶ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸಂಪುಟ ವಿಸ್ತರಣೆ ಕುರಿತು HDK ಹೇಳಿಕೆ ಖಂಡನೀಯ- ಎಚ್.ಎ. ವೆಂಕಟೇಶ್
ಮೈಸೂರು,ಜೂನ್,23,2026 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಖಂಡನೀಯ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಕಿಡಿಕಾರಿದರು.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಎಚ್.ಎ ವೆಂಕಟೇಶ್, ಜವಾಬ್ದಾರಿಯುತ ಸ್ಥಾನ ಹೊಂದಿರುವ  ಓರ್ವ ಮಾಜಿ ಮುಖ್ಯಮಂತ್ರಿ ಹೀಗೆ ನಡೆದುಕೊಳ್ಳಬಾರದು ಮತ್ತು ಇಂತಹ ಹಗುರ, ಆಧಾರ ರಹಿತ ಹೇಳಿಕೆಗಳನ್ನು ನೀಡಬಾರದು. ನೈತಿಕತೆ ಬದಿಗಿಟ್ಟು ಮುಂದೆ ಬಂದಿರುವ ಕುಮಾರಸ್ವಾಮಿಯವರಿಂದ ಇಂತಹ ಹೇಳಿಕೆ ನಿರೀಕ್ಷಿತವೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸಚಿವ ಸ್ಥಾನಕ್ಕಾಗಿ  ಆಕಾಂಕ್ಷಿಗಳಿಂದ  ಮ್ಯಾನೇಜ್ಮೆಂಟ್ ಮತ್ತು ಪೇಮೆಂಟ್ ಕೋಟಾಗಳ ವಸೂಲಿ ನಡೆಯುತ್ತಿದೆ ಎಂದು ಕುಮಾರಸ್ವಾಮಿಯವರು ಬೀಸು ಹೇಳಿಕೆ ನೀಡಿದ್ದಾರೆ. ಇವರೊಳಗೆ ತಹತಹಿಸುತ್ತಿರುವ ಹತಾಶ ಮತ್ತು ಮತ್ಸರದ ಮನಸ್ಥಿತಿಯನ್ನು ಈ ಹೇಳಿಕೆ ಬಿಂಬಿಸುತ್ತಿದೆ. ಗಾಳಿ ಬಂದಾಗ ತೂರಿಕೊಂಡಿರುವ ತನ್ನ ಅವಕಾಶವಾದಿ ವರ್ತನೆಯನ್ನೇ ಮಹಾನ್ ಸಾಧನೆ ಎಂದು ಭಾವಿಸಿರುವ ಎಚ್ಡಿಕೆ, ತಾವು ಅಧಿಕಾರದಲ್ಲಿದ್ದು ಸಚಿವಸ್ಥಾನ ಹಂಚುತ್ತಿದ್ದಾಗ ಮಾಡಿದ್ದನ್ನೇ ಬೇರೆಯವರೂ ಸಹ ಅನುಸರಿಸುತ್ತಾರೆ ಎಂದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

ಇಷ್ಟಕ್ಕೂ ಓರ್ವ ಪ್ರಜ್ಞಾವಂತ ರಾಜಕಾರಣಿ, ತನ್ನ ರಾಜಕೀಯ ಎದುರಾಳಿಗಳನ್ನು ತನ್ನೊಳಗಿನ ಬೌದ್ಧಿಕ ಮತ್ತು ಆಡಳಿತಾತ್ಮಕ ಶಕ್ತಿ ಸಾಮರ್ಥ್ಯ ಹಾಗೂ ಆಸೀಮ ಅಭಿವೃದ್ಧಿ ಕಾರ್ಯಗಳ ಮೂಲಕ ಎದುರಿಸುತ್ತಾನೆ.  ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ತನ್ನ ಕುಟುಂಬದ ವೈರಿ ಎಂಬರ್ಥದಲ್ಲಿ ನೋಡುವ ಎಚ್ಡಿಕೆ, ಇವರ ಬಗ್ಗೆ ಹಲವು ಬಾರಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವುದುಂಟು. ಇದೇ ಹಿನ್ನೆಲೆಯನ್ನಿಟ್ಟುಕೊಂಡು ಈಗಲೂ ವರ್ತಿಸಲು ಹೊರಟಿರುವುದು ಅಕ್ಷಮ್ಯವಾದುದು ಎಂದು ಹೆಚ್ ಎ ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.

ನಿರ್ಲಜ್ಜ ಮತ್ತು ಅನೈತಿಕ ಮೈತ್ರಿ ರಾಜಕಾರಣದ ಹೆಗ್ಗುರುತಿನಂತಿರುವ ಕುಮಾರಸ್ವಾಮಿಯವರು ಬೇರೆಯವರು ತನ್ನಂತೆಯೇ ಆಲೋಚಿಸುತ್ತಾರೆ, ರಾಜಕಾರಣವನ್ನು ಕೇವಲ ಹಣ ಮಾಡಲಷ್ಟೇ ಬಳಸಿಕೊಳ್ಳುತ್ತಾರೆ ಎಂದು ಭಾವಿಸಿರುವುದು ಆತಂಕದ ವಿಚಾರ.  ಓರ್ವ ಮಾಜಿ ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ಸರ್ಕಾರದ ಸಚಿವರಾಗಿ ಕುಮಾರಸ್ವಾಮಿಯವರು ತಮ್ಮ ಆಲೋಚನೆಯ ಮಟ್ಟವನ್ನು ಮೇಲ್ದರ್ಜೆಗೇರಿಸಿಕೊಳ್ಳುವ ಮತ್ತು ಅನ್ಯಪಕ್ಷದ ರಾಜಕಾರಣಿಗಳನ್ನು ವಿಶಾಲ ದೃಷ್ಟಿಕೋನದಲ್ಲಿ ಗಮನಿಸುವ ಗುಣ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹೆಚ್ ಎ ವೆಂಕಟೇಶ್  ಹರಿಹಾಯ್ದಿದ್ದಾರೆ.

Key words: HDK, statement, cabinet expansion, condemnable, H.A. Venkatesh,

The post ಸಂಪುಟ ವಿಸ್ತರಣೆ ಕುರಿತು HDK ಹೇಳಿಕೆ ಖಂಡನೀಯ- ಎಚ್.ಎ. ವೆಂಕಟೇಶ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ- ಮಾಜಿ ಸಿಎಂ ಬೊಮ್ಮಾಯಿ
ನವದೆಹಲಿ, ಫೆಬ್ರವರಿ ,11,2026 (www.justkannada.in):  ರಾಜ್ಯ ಕಾಂಗ್ರೆಸ್  ಸರ್ಕಾರ ಕೆಪಿಎಸ್ ಶಾಲೆಗಳನ್ನು ತೆರೆಯುವ ಮ್ಯಾಗ್ನೆಟ್​ ಯೋಜನೆ ಜಾರಿಗೆ ಮುಂದಾಗಿದ್ದು,  ಈ ಮೂಲಕ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ ಸರ್ಕಾರದ ನಡೆಯನ್ನ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ 638 ಕನ್ನಡ ಶಾಲೆಗಳನ್ನು ಮುಚ್ಚಿದೆ.  ಇದು ಕನ್ನಡ ಮತ್ತು ಕನ್ನಡ ಶಾಲೆಗಳ ವಿರೋಧಿಯಾಗಿದ್ದು, ಸರ್ಕಾರದ ನಡೆ ಖಂಡನೀಯವಾದರು ಎಂದು ಕಿಡಿಕಾರಿದರು.

ಕನ್ನಡ ಶಾಲೆಗಳ ಪುನರಾರಂಭಕ್ಕೆ ಸರ್ಕಾರಕ್ಕೆ ಒತ್ತಾಯಿಸಿದ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಶಿಕ್ಷಕರ ನೇಮಕಾತಿ ಮತ್ತು ಶಿಕ್ಷಕರಿಗೆ ಸಂಬಳ ಕೊಡಲು ಆಗುತ್ತಿಲ್ಲ.  ಹೀಗಾಗಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: Closing, Kannada, government schools , condemnable, Former CM, Bommai

The post ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ- ಮಾಜಿ ಸಿಎಂ ಬೊಮ್ಮಾಯಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಜ್ಯದಲ್ಲಿ ಡ್ರಗ್ಸ್ ಜಾಲ ವ್ಯಾಪಕ ಎಂಬ ಬಿಜೆಪಿ ಆರೋಪ ಖಂಡನೀಯ, ಆಕ್ಷೇಪಾರ್ಹ- ಹೆಚ್.ಎ ವೆಂಕಟೇಶ್
ಬೆಂಗಳೂರು,ಡಿಸೆಂಬರ್,30,2025 (www.justkannada.in): ರಾಜ್ಯದಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗುತ್ತಿದೆ ಎಂಬ ಬಿಜೆಪಿ ಪಕ್ಷದ ಆರೋಪ ಖಂಡನೀಯ ಮತ್ತು ಆಕ್ಷೇಪಾರ್ಹ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಗುಡುಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್,  ವಾಸ್ತವವಾಗಿ ಬಿಜೆಪಿ  ಅಧಿಕಾರದಲ್ಲಿರುವ ಉತ್ತರ ಭಾರತದ ಅನೇಕ ರಾಜ್ಯಗಳು ಮಾದಕ ವಸ್ತು ಬಿಕರಿ ಮತ್ತು ತಯಾರಿಕೆಯ ಮೂಲಸ್ಥಾನಗಳಾಗಿವೆ ಎನ್ನುವುದಕ್ಕೆ ರಾಶಿ ರಾಶಿ ದಾಖಲೆಗಳಿವೆ. ಪಂಜಾಬ್, ಹರಿಯಾಣ, ಗುಜರಾತ್, ಬಿಹಾರ,  ಉತ್ತರಪ್ರದೇಶ ಮುಂತಾದ ರಾಜ್ಯಗಳ ಯುವಜನತೆ ಡ್ರಗ್ಸ್ ವ್ಯಸನಿಗಳಾಗಲು ಬಿಜೆಪಿ ದುರಾಡಳಿತ ಮತ್ತು ಈ ಪಕ್ಷದ ನಾಯಕರ ಹಣದಾಸೆ ಕಾರಣ ಎನ್ನುವುದನ್ನು ನಮ್ಮ ರಾಜ್ಯದ ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಮರೆಮಾಚಿದಂತಿದೆ ಎಂದು ಬಿಜೆಪಿ ನಾಯಕರಿಗೆ ಕುಟುಕಿದ್ದಾರೆ.

ಕರ್ನಾಟಕದಲ್ಲಿ ಪತ್ತೆಯಾಗಿರುವ ಎಲ್ಲಾ  ಡ್ರಗ್ಸ್ ಪ್ರಕರಣಗಳ ಹಿಂದೆ ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರ,  ಬಿಹಾರದವರ ಕೈವಾಡ  ಹೆಚ್ಚು ಇರುವುದನ್ನು  ಸಮರ್ಥ ಗೃಹ ಸಚಿವ ಮತ್ತು ಹಿರಿಯ ದಲಿತ ನಾಯಕ ಡಾ.ಜಿ.  ಪರಮೇಶ್ವರ್ ಬಯಲಿ ಗೆಳೆದಿದ್ದಾರೆ. ಇದರಿಂದ ಬೆಚ್ಚಿಬಿದ್ದಿರುವ ಬಿಜೆಪಿ,  ಈ ವಾಸ್ತವಾಂಶ ಮುಚ್ಚಿಡಲು ದಲಿತರೇ ಆಗಿರುವ  ಛಲವಾದಿ ನಾರಾಯಣಸ್ವಾಮಿ ಅವರ ಮೂಲಕ ಪೋಸ್ಟರ್ ಬಿಡುಗಡೆ ಮಾಡಿಸಿ ಇವರನ್ನು ರಕ್ಷಾ ಕವಚದಂತೆ  ಬಳಸಿಕೊಳ್ಳುತ್ತಿರುವುದು ವಿಷಾದದ ಸಂಗತಿ.     ಛಲವಾದಿ ನಾರಾಯಣ ಸ್ವಾಮಿಯವರೂ ಸಹ  ಉದ್ದೇಶಪೂರ್ವಕವಾಗಿ ಸತ್ಯಾಂಶಗಳನ್ನು  ಮರೆಮಾಚಿ ಆತ್ಮ ವಂಚನೆ ಮಾಡಿಕೊಂಡಿದ್ದಾರೆ ಎನ್ನುವುದು ಸತ್ಯ ಸಂಗತಿ ಎಂದು ಹೆಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್ ನಲ್ಲಿ ಉದ್ಯಮಿ ಅದಾನಿಗೆ ಸೇರಿದ ಮಂದರಾ ಬಂದರಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ಎಷ್ಟು ಲಕ್ಷ ಕೋಟಿ ಮೌಲ್ಯದ ಎಷ್ಟು ಟನ್  ಡ್ರಗ್ಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಲೋಕಸಭೆ,  ರಾಜ್ಯಸಭೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರವೇ ಅಧಿಕೃತ ಅಂಕಿ ಅಂಶ ನೀಡಿದೆ. ಇದನ್ನು ಛಲವಾದಿ ಸೇರಿದಂತೆ ಇತರ ಬಿಜೆಪಿ ನಾಯಕರು ಗಮನಿಸಿದರೆ ಇವರಿಗೆ ಜ್ಞಾನೋದಯ ವಾದೀತು!

ಗುಜರಾತ್ ಸೇರಿದಂತೆ ದೇಶ ವ್ಯಾಪಿ ಮಾದಕ ವಸ್ತು ಜಾಲ ಹರಡಲು ಮಂದರಾ ಬಂದರು ಮೂಲ ಕಾರಣವಾಗಿದೆ. ಆದರೂ ಈ ಉದ್ಯಮಿಯ ಮೇಲೆ  ಇಡಿ, ಸಿಬಿಐ, ಐಟಿ ಮುಂತಾದ ಸಂಸ್ಥೆಗಳ ದಾಳಿ ಇರಲಿ,  ಸ್ಥಳೀಯ ಪೊಲೀಸರ ತನಿಖೆ ಸಹ ನಡೆದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ.  ಇಂತಹ ಅತಿದೊಡ್ಡ ಮಾದಕ ವಸ್ತು ಜಾಲದ ಮುಕ್ತ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ಹಾಗೂ ಗುಜರಾತ್  ಬಿಜೆಪಿ ಸರ್ಕಾರದ ಬಗ್ಗೆ ಛಲವಾದಿ ಮತ್ತು ತಂಡ ಮೊದಲು ದನಿ ಎತ್ತಬೇಕಿತ್ತು. ಆದರೆ ಇದನ್ನು ವ್ಯವಸ್ಥಿತವಾಗಿ  ಮುಚ್ಚಿಡಲಾಗಿದೆ ಎಂದು ಹೆಚ್.ಎ ವೆಂಕಟೇಶ್ ಕಿಡಿಕಾರಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗೃಹ ಸಚಿವರು ಬಿಜೆಪಿ ಆಡಳಿತವಿರುವ ಹೊರ ರಾಜ್ಯಗಳಿಂದ ಇಲ್ಲಿಗೆ ಬಂದು,  ವಾತಾವರಣ ಹದಗೆಡಿಸುತ್ತಿರುವ ಡ್ರಗ್  ಪೆಡ್ಲರ್ ಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಇದರಿಂದ ರಾಜ್ಯ ಬಿಜೆಪಿ ನಾಯಕರು ತಳಮಳಿಸುವಂತಾಗಿದೆ. ಈ ನಗ್ನ ಸತ್ಯದ ಅರಿವಿದ್ದರೂ ಸಹ ಗೃಹ ಸಚಿವರ ಬಗ್ಗೆ ಮಾತನಾಡುವ ಮೂಲಕ, ಛಲವಾದಿ ನಾರಾಯಣಸ್ವಾಮಿ ತಮಗೆ ಯಾವ ನೈತಿಕತೆಯೂ ಇಲ್ಲ. ತಾವು ಬಹಳ ನಿರ್ಲಜ್ಜರು ಎನ್ನುವುದನ್ನು ಮತ್ತೆ ಸಾಬೀತು ಮಾಡಿಕೊಂಡಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಚ್.ಎ. ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: BJP, allegation, drug network, state, condemnable, H.A. Venkatesh

The post ರಾಜ್ಯದಲ್ಲಿ ಡ್ರಗ್ಸ್ ಜಾಲ ವ್ಯಾಪಕ ಎಂಬ ಬಿಜೆಪಿ  ಆರೋಪ ಖಂಡನೀಯ, ಆಕ್ಷೇಪಾರ್ಹ- ಹೆಚ್.ಎ ವೆಂಕಟೇಶ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಖಂಡನೀಯ: ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ- ಸಚಿವ ಕೆಜೆ ಜಾರ್ಜ್
ಚಿಕ್ಕಮಗಳೂರು, ಡಿಸೆಂಬರ್ 6,2025 (www.justkannada.in):  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಉಂಟಾದ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ (40) ಎಂಬುವವರ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕೊಲೆಯಾದ ಗಣೇಶ್ ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು ಎನ್ನಲಾಗಿದೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಗಣೇಶ್ ಕುಟುಂಬಸ್ಥರಿಗೆ  ಸಾಂತ್ವನ ಹೇಳಿದ್ದಾರೆ.

ಬಳಿಕ ಮಾತನಾಡಿರುವ ಸಚಿವ ಕೆ.ಜೆ ಜಾರ್ಜ್ ಭಿನ್ನಾಭಿಪ್ರಾಯಕ್ಕೆ ಹತ್ಯೆ ಮಾಡಿರೋದು ಖಂಡನೀಯ.  ದತ್ತಜಯಂತಿ ಶಾಂತಿಯಿಂದ ನಡೆದ ಬಳಿಕವೂ ಹತ್ಯೆಯಾಗಿದೆ ಕಾರ್ಯಕರ್ತರ ಹತ್ಯೆ ಜಿಲ್ಲೆಗೆ ಶೋಕ ತರುವಂತ ಘಟನೆ. ಈಗಾಗಲೇ ಐವರ ಬಂಧನವಾಗಿದ್ದು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುತ್ತೆ  ಎಂದು ತಿಳಿಸಿದರು.

Key words: Congress, worker, murder, condemnable, Minister, KJ George

The post ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಖಂಡನೀಯ: ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ- ಸಚಿವ ಕೆಜೆ ಜಾರ್ಜ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ಖಂಡನೀಯ: ಸೂಕ್ತಕ್ರಮಕ್ಕೆ ಮಾಜಿ ಸಿಎಂ ಹೆಚ್,ಡಿಕೆ ಆಗ್ರಹ.
ತುಮಕೂರು,ಡಿಸೆಂಬರ್,1,2022(www.justkannada.in):  ಬೆಳಗಾವಿ ಕಾಲೇಜೊಂದರಲ್ಲಿ ಡ್ಯಾನ್ಸ್ ಮಾಡುವ ವೇಳೆ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಕಿಡಿಗೇಡಿ ಸಹಪಾಠಿಗಳು ನಡೆಸಿದ ಹಲ್ಲೆಯನ್ನು  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ. ಅಲ್ಲದೇ ದೂರು ನೀಡಲು ಹೋದ ವಿದ್ಯಾರ್ಥಿ ಮೇಲೆಯೇ ಪೊಲೀಸರು ಧರ್ಪ ಮೆರೆದಿರುವುದಕ್ಕೂ ಹೆಚ್.ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ,  ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ದೂರು ಕೊಡಲು ಹೋದ ಆ ವಿದ್ಯಾರ್ಥಿ ಮೇಲೆ ಪೊಲೀಸರು ಕೂಡ ಅಮಾನುಷವಾಗಿ ಹಲ್ಲೆ ನಡೆಸಿರುವುದು ಕನ್ನಡಕ್ಕೆ, ಕರ್ನಾಟಕಕ್ಕೆ ಬಗೆದ ದೊಡ್ಡ ದ್ರೋಹ ಎಂದು ಕಿಡಿಕಾರಿದ್ದಾರೆ.

ಡಿಸಿಪಿ ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳು ಇಬ್ಬರು ಬಾಲಕನ ವಿಷಯದಲ್ಲಿ ಕ್ರೂರವಾಗಿ ವರ್ತಿಸಿ ದರ್ಪ ತೋರಿಸಿರುವುದು ಸರಿಯಲ್ಲ. ಡಿಸಿಪಿ ಅಧಿಕಾರಿ ಆ ಬಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿ, ಬೂಟು ಕಾಲಿನಿಂದ ಒದ್ದಿರುವುದು ಅಕ್ಷಮ್ಯ ಹಾಗೂ ಅನಾಗರಿಕ ವರ್ತನೆ ಎಂದು ಹೆಚ್.ಡಿಕೆ ಖಂಡಿಸಿದ್ದಾರೆ.

ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಬಾಲಕನ ಮೇಲೆ ಹಲ್ಲೆ ನಡೆಸಿದ ಇತರೆ ಬಾಲಕರನ್ನು ವಶಕ್ಕೆ ಪಡೆದು, ಅವರಿಗೆ ಚಿತಾವಣೆ ನೀಡಿದವರನ್ನು ಬಂಧಿಸಬೇಕು ಹಾಗೂ ಕನ್ನಡ ಬಾವುಟ ಹಾರಿಸಿದ ಬಾಲಕನ ಮೇಲೆ ದುಂಡಾವರ್ತನೆ ತೋರಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಸರಕಾರ ಬಂದ ಮೇಲೆ ಬೆಳಗಾವಿಯಲ್ಲಿ ಗೊಂದಲ ಹೆಚ್ಚಾಗುತ್ತಿದೆ. ಪ್ರತಿ ಸೂಕ್ಷ್ಮ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಬಿಜೆಪಿಯ ಕೈಯ್ಯಲ್ಲಿ ಕನ್ನಡ ಮತ್ತು ಕನ್ನಡಿಗರು ಸುರಕ್ಷಿತವಾಗಿಲ್ಲ ಎನ್ನುವುದು ಸ್ಪಷ್ಟ. ಬೆಳಗಾವಿ ವಿಷಯ ಗಮನಿಸಿದರೆ ಅದು ಅರ್ಥವಾಗುತ್ತದೆ ಎಂದು ಹೆಚ್,ಡಿಕೆ ವಾಗ್ದಾಳಿ ನಡೆಸಿದ್ದಾರೆ.

Key words: attack – student – condemnable-Former CM -HDK

ENGLISH SUMMARY…

Assault on a student for waving Karnataka flag: Former CM HDK demands legal action against assaulters

Tumakuru, December 1, 2022 (www.justkannada.in): Former Chief Minister H.D. Kumaraswamy has condemned the incident of the assault on a college student in Belagavi who waved the Kannada flag at a college function.

In a tweet, H.D. Kumaraswamy mentioned, “I strongly condemn the assault on the student who waved the Karnataka flag in the Tilakawadi Police Station limits in Belagavi. “Even the police have assaulted him. It is nothing but an insult for Karnataka and our language,” his tweet read.

The State Government should consider this incident seriously, arrest the culprits, and initiate action against the two police officers who also assaulted the student, he demanded.

Keywords: H.D. Kumaraswamy/ College student/ Kannada flag/ attack

The post ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ಖಂಡನೀಯ: ಸೂಕ್ತಕ್ರಮಕ್ಕೆ ಮಾಜಿ ಸಿಎಂ ಹೆಚ್,ಡಿಕೆ ಆಗ್ರಹ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಡಿ.ಮಾದೇಗೌಡರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಖಂಡನೀಯ- ಮಾಜಿ ಮೇಯರ್ ಪುರುಷೋತ್ತಮ್.
ಮೈಸೂರು,ಅಕ್ಟೋಬರ್,31,2022(www.justkannada.in): ಎನ್.ಟಿ.ಎಂ.ಎಸ್ ಶಾಲೆ ಮುಚ್ಚಿಸಿ, ರಾಮಕೃಷ್ಣ ಆಶ್ರಮದ ಪರನಿಂತ ಡಿ.ಮಾದೇಗೌಡರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಖಂಡನೀಯ ಎಂದು ಮೈಸೂರು ಮಾಜಿ ಮೇಯರ್  ಪುರುಷೋತ್ತಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಸರ್ಕಾರ ಈ ಕೂಡಲೇ ಮಾದೇಗೌಡರ ಹೆಸರನ್ನು ಕೈ ಬಿಡಬೇಕು. ಇವರು ಕನ್ನಡ ನಾಡು ನುಡಿಗಾಗಿ ಇವರ ಕೊಡುಗೆ ಏನೂ ಇಲ್ಲ. ಈ ಕೂಡಲೇ ಇವರ ಹೆಸರನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಜೊತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ರಾಮಕೃಷ್ಣ ಆಶ್ರಮವನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖಂಡನೀಯ. ರಾಮಕೃಷ್ಣ ಆಶ್ರಮದದಲ್ಲಿ ಮಹಿಳಾ ಶಿಕ್ಷಣಕ್ಕೆ ಅವಕಾಶ ಇಲ್ಲ.ಇಲ್ಲಿ ಲಿಂಗ ತಾರತಮ್ಯ ಮಾಡುತ್ತಾರೆ. ಸಾಕಷ್ಟು ಶುಲ್ಕ ಕಟ್ಟಿಸಿಕೊಂಡು ಶಿಕ್ಷಣ ನೀಡುತ್ತಾರೆ. ಇವರೇನು ಸಮಾಜಕ್ಕೆ ಬಿಟ್ಟಿ ಸೇವೆ ಏನೂ ಮಾಡುತ್ತಿಲ್ಲ.ಈ ಆಶ್ರಮದ ಕೊಡುಗೆ ನಾಡಿಗೆ ಏನೂ ಇಲ್ಲ. ಸರ್ಕಾರ ಈ ಆಶ್ರಮಕ್ಕೆ ಪ್ರಶಸ್ತಿ ಘೋಷಣೆ ಹೇಗೆ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮೇಯರ್ ಪುರುಷೋತ್ತಮ್ ಅಸಮಾಧಾನ ವ್ಯಕ್ತಪಡಿಸಿದರು.

Key words:  Kannada Rajyotsava Award – D. Made Gowda – condemnable- Former Mayor- Purushottam

The post ಡಿ.ಮಾದೇಗೌಡರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಖಂಡನೀಯ- ಮಾಜಿ ಮೇಯರ್ ಪುರುಷೋತ್ತಮ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ತಡೆಯಲು ಹೆಚ್.ಡಿಕೆಯಿಂದ ವಾಮಮಾರ್ಗ ಖಂಡನೀಯ- ಸಚಿವ ಅಶ್ವಥ್ ನಾರಾಯಣ್.
ಬೆಂಗಳೂರು,ಅಕ್ಟೋಬರ್,1,2022(www.justkannada.in): ರಸ್ತೆ ಕಾಮಗಾರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಹ್ವಾನಿಸದ ಹಿನ್ನೆಲೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಕಾರಿಗೆ ಮುತ್ತಿಗೆ ಹಾಕಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಅಶ್ವಥ್ ನಾರಾಯಣ್, ನಮ್ಮ ರಾಮನಗರ ಜಿಲ್ಲೆಯಲ್ಲಿ ನಮ್ಮ ಬಿಜೆಪಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ತಡೆಯಲು ಹೆಚ್.ಡಿ. ಕುಮಾರಸ್ವಾಮಿ ಅವರು ವಾಮ ಮಾರ್ಗ ಅನುಸರಿಸುತ್ತಿರುವುದು ಖಂಡನೀಯ ಎಂದು ಗುಡುಗಿದ್ದಾರೆ.

‘ಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು ಎಂಬ ಸಿದ್ಧಾಂತಕ್ಕೆ ಕಟ್ಟುಬೀಳುವ ಬದಲು ನಾವು ಮಾಡುತ್ತಿರುವ ಜನಪರ ಕಾರ್ಯಗಳನ್ನು ಬೆಂಬಲಿಸಿ. ಮಾನ್ಯ ಕುಮಾರಸ್ವಾಮಿ ಅವರೇ, ಅಧಿಕಾರ ಬರುತ್ತದೆ, ಹೋಗುತ್ತದೆ. ಇದ್ದಷ್ಟು ದಿನ ಎಷ್ಟು ಜನಪರ ಕೆಲಸ ಮಾಡಿದ್ದೇವೆ ಎಂಬುದಷ್ಟೇ ಶಾಶ್ವತವಾಗಿ ಉಳಿಯುತ್ತದೆ ‘ ಎಂದು ಹೆಚ್.ಡಿಕೆ ವಿರುದ್ಧ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

Key words: HD Kumaraswamy- development – Ramanagara – condemnable-Minister -Aswath Narayan.

The post ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ತಡೆಯಲು ಹೆಚ್.ಡಿಕೆಯಿಂದ ವಾಮಮಾರ್ಗ ಖಂಡನೀಯ- ಸಚಿವ ಅಶ್ವಥ್ ನಾರಾಯಣ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.