complaints Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಸಿಎಂ, ಡಿಸಿಎಂ ವಿರುದ್ದ ಸ್ವಾಮೀಜಿಗಳಿಂದ ದೂರು: ಇದು ಸಲ್ಲದ ಬೆಳವಣಿಗೆ- ಹೆಚ್.ಎ ವೆಂಕಟೇಶ್
ಮೈಸೂರು,ಜೂನ್,9,2025 (www.justkannada.in):  ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಕೆಲ ಸ್ವಾಮೀಜಿಗಳು ಸಿಎಂ,  ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಪೊಲೀಸ್ ದೂರು ನೀಡಿರುವುದು ಸಲ್ಲದ ಬೆಳವಣಿಗೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ವಾಮೀಜಿಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಎಚ್.ಎ ವೆಂಕಟೇಶ್, ಸಮಾಜದ ನೈತಿಕ ಮತ್ತು ಧಾರ್ಮಿಕ ಉನ್ನತಿಗೆ ಶ್ರಮಿಸಬೇಕಾದ ಸ್ವಾಮೀಜಿಗಳು, ಕ್ಷುಲ್ಲಕ ರಾಜಕೀಯದ ದಾಳವಾಗುವ ಅಗತ್ಯವಿರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ ಹಿನ್ನೆಲೆಯಲ್ಲಿ ಅಮಾನತ್ತಾಗಿದ್ದಾರೆ, ನ್ಯಾಯಾಂಗ ತನಿಖೆ, ಸಿಐಡಿ ತನಿಖೆ ಜಾರಿಯಲ್ಲಿದೆ. ಮೃತರ ಕುಟುಂಬಗಳಿಗೆ  ಪರಿಹಾರ ನೀಡಲಾಗುತ್ತಿದೆ, ಒಟ್ಟು ಘಟನೆಯಲ್ಲಿ ತನ್ನಿಂದಾಗಬೇಕಾದ ಕ್ರಮಗಳನ್ನೆಲ್ಲಾ ಸರ್ಕಾರ ತ್ವರಿತವಾಗಿ ತೆಗೆದುಕೊಂಡಿದೆ, ಇಷ್ಟಿದ್ದರೂ ಕೆಲ ಸ್ವಾಮೀಜಿಗಳು ಸರ್ಕಾರದ ವಿರುದ್ಧ ಏಕೆ ಮುಗಿಬಿದ್ದಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ಸಮಯ ಕಾಲ್ತುಳಿತದಿಂದ ಬಹುದೊಡ್ಡ ದುರಂತ ಸಂಭವಿಸಿತ್ತು. ಹಲವು ತಿಂಗಳು ಕಳೆದರೂ ಈ ದುರಂತದಲ್ಲಿ  ಮೃತಪಟ್ಟವರ ಅಧಿಕೃತ ಅಂಕಿ ಅಂಶಗಳನ್ನು ಒಬ್ಬ ಸ್ವಾಮೀಜಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಅಲ್ಲಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿಲ್ಲ. ಕಾಲ್ತುಳಿತ ಘಟನೆಗೆ ಒಬ್ಬ ಅಧಿಕಾರಿಯನ್ನೂ ಸಹ ಹೊಣೆಯಾಗಿಸಿ ಅಮಾನತು ಮಾಡಿಲ್ಲ.  ಆದರೆ ಕರ್ನಾಟಕ ಸರ್ಕಾರ ಎಡಿಜಿಪಿ ಮಟ್ಟದ ಅಧಿಕಾರಿಯನ್ನೇ ಅಮಾನತು ಮಾಡಿದೆ. ಈಗ ಸಿಎಂ ಡಿಸಿಎಂ, ಗೃಹ ಸಚಿವರ ವಿರುದ್ಧ ದೂರು ನೀಡಿರುವ ನಮ್ಮ ರಾಜ್ಯದ ಈ ಸ್ವಾಮೀಜಿಗಳು ಪ್ರಯಾಗ್ ರಾಜ್ ಭಕ್ತರ ಸಾವಿಗೆ ಮಿಡಿದು, ಬಿಜೆಪಿಯ ಯೋಗಿ ಆದಿತ್ಯನಾಥ್ ವಿರುದ್ಧ ಆಗ ಏಕೆ ದೂರು ನೀಡಲಿಲ್ಲ ಎನ್ನುವ ಪ್ರಶ್ನೆಯೂ ಇಲ್ಲಿ ಮೂಡುತ್ತದೆ.

ಆಧ್ಯಾತ್ಮಿಕತೆಯ ಮೂಲಕ ನೈತಿಕ ಮತ್ತು ಸಾಮಾಜಿಕ ಜಾಗೃತಿ ಮೂಡಿಸಬೇಕಾದವರು ರಾಜಕೀಯದ ರಾಡಿಯಲ್ಲಿ ಬಿದ್ದು ಮನಸ್ಸು ಮತ್ತು ಮೈಯನ್ನು ಕೊಳಕು ಮಾಡಿಕೊಳ್ಳುವುದು ಹಾಗೂ ಕಾವಿಯ ಪ್ರಖರತೆಗೆ ಧಕ್ಕೆ ತಂದುಕೊಳ್ಳುವುದು ಸರಿಯಲ್ಲ ಎಂದು ಹೆಚ್ ಎ ವೆಂಕಟೇಶ್ ಕಿಡಿಕಾರಿದ್ದಾರೆ.

ದೂರು ನೀಡಿರುವ  ಸ್ವಾಮೀಜಿಗಳಲ್ಲಿ ಒಬ್ಬರು, ಈ ಹಿಂದೆ ಕೋಮು ಸೌಹಾರ್ದ ಹದಗೆಡಿಸುವ ಹೇಳಿಕೆಗಳಿಗೆ ಹೆಸರಾಗಿದ್ದರು. ಹೀಗಾಗಿ ಈ ಸ್ವಾಮೀಜಿಗಳ ತಂಡದ ಹಿಂದೆ ಯಾರ ಕುಮ್ಮಕ್ಕಿದೆ ಎನ್ನುವುದನ್ನು ಸಮಾಜ ಬಹಳ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಎಲ್ಲವನ್ನೂ  ತ್ಯಜಿಸಿದ ಸನ್ಯಾಸಿಗಳು ಎಲ್ಲರೊಳಿತಿಗಾಗಿ ನಡೆಯಬೇಕು ಮತ್ತು ದುಡಿಯಬೇಕು. ಅದು ಬಿಟ್ಟು ಸಮಾಜಘಾತಕರ ವಿಭಜನಕಾರಿ ಹುನ್ನಾರಕ್ಕೆ ಆಯುಧದಂತೆ ವರ್ತಿಸುವುದು ಸರಿಯಲ್ಲ ಎಂದು ಎಚ್.ಎ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Key words: Complaints, Swamiji, CM, DCM, H.A. Venkatesh

The post ಸಿಎಂ, ಡಿಸಿಎಂ ವಿರುದ್ದ ಸ್ವಾಮೀಜಿಗಳಿಂದ ದೂರು: ಇದು ಸಲ್ಲದ ಬೆಳವಣಿಗೆ- ಹೆಚ್.ಎ ವೆಂಕಟೇಶ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಾಲ್ತುಳಿತ ಪ್ರಕರಣ: ಸಿಎಂ, ಡಿಸಿಎಂ ವಿರುದ್ಧ ಸ್ವಾಮೀಜಿಗಳಿಂದ ದೂರು
ಬೆಂಗಳೂರು,ಜೂನ್,9,2025 (www.justkannada.in):  ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಆರ್ ಸಿಬಿ ಅಭಿಮಾನಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸ್ ಠಾಣೆಗೆ ವಿವಿಧ ಸ್ವಾಮೀಜಿಗಳು ದೂರು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ವಿರುದ್ದ ಪ್ರಣವಾನಂದ ಸ್ವಾಮೀಜಿ ನೇತೃತ್ವದ ನಿಯೋಗ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದೆ. ಆರ್ ಸಿಬಿ ಮ್ಯಾನೇಜ್ಮೆಂಟ್ ವಿರುದ್ಧವೂ ದೂರು ನೀಡಲಾಗಿದೆ.

ಪ್ರಣವಾನಂದ ಶ್ರೀ, ಕುಂಬಾರ ಗುಂಡಯ್ಯ ಶ್ರೀ ಸೇರಿದಂತೆ ಮೂವರು ಸ್ವಾಮೀಜಿಗಳು ದೂರು ದಾಖಲಿಸಿದ್ದಾರೆ. ಕಾಲ್ತುಳಿತ ದುರಂತದಲ್ಲಿ 11 ಜನರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Key words: Stampede case, Complaints, Swamijis, against, CM, DCM

The post ಕಾಲ್ತುಳಿತ ಪ್ರಕರಣ: ಸಿಎಂ, ಡಿಸಿಎಂ ವಿರುದ್ಧ ಸ್ವಾಮೀಜಿಗಳಿಂದ ದೂರು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮತದಾರರಿಗೆ ಹಣದ ಆಮಿಷ ಆರೋಪ: ಸಿಎಂ ಸೇರಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ದೂರು.
ಬೆಂಗಳೂರು,ಜನವರಿ,25,2023(www.justkannada.in): ಮತದಾರರಿಗೆ ಹಣದ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿ  ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಬಿಜೆಪಿ ನಾಯಕರ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಬಿಜೆಪಿ ನಾಯಕರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,   ಸಿಎಂ ಬೊಮ್ಮಾಯಿ ಮತ್ತು ಅವರ ತಂಡ ಭ್ರಷ್ಟಾಚಾರದ ಪಿತಾಮಹ.  ಬಿಜೆಪಿ ನಾಯಕರು ಮತದಾರರಿಗೆ ಅಮಿಷವೊಡ್ಡಲು ಹೊರಟಿದ್ದಾರೆ 40 ಪರ್ಸೆಂಟ್ ಕಮಿಷನ್ ಮೂಲಕ ಸಾವಿರಾರು ಕೋಟಿ ರೂ. ಸಂಗ್ರಹಿಸಿದ್ದಾರೆ. ರಮೇಶ್ ಜಾರಕಿಹೊಳಿ ಒಂದು ಮತಕ್ಕೆ 6 ಸಾವಿರ ರೂ. ಕೊಡುತ್ತೇವೆ ಎಂದಿದ್ದಾರೆ. ಅಮಿಷದ ವಿಡಿಯೋ ಇದೆ. ಈ ಸಂಬಂಧ ದಾಖಲೆ ಸಮೇತ ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ಎಫ್ ಐಆರ್ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸುತ್ತೇವೆ ಎಂದರು.

Key words: allegations -Congress- complaints –against- BJP leaders

The post ಮತದಾರರಿಗೆ ಹಣದ ಆಮಿಷ ಆರೋಪ: ಸಿಎಂ ಸೇರಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ದೂರು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ವಾಹನಗಳ ಮೇಲೆ ಉನ್ನತ ಭದ್ರತಾ ಸಂಖ್ಯಾ ಫಲಕಗಳ ಪರಿಶೀಲನೆ ಕುರಿತ ದೂರುಗಳಗೆ ಸಂಚಾರಿ ಪೊಲೀಸರ ಸ್ಪಷ್ಟನೆ
ಬೆಂಗಳೂರು, ಅಕ್ಟೋಬರ್ ೨, ೨೦೨೧ (www.justkannada.in): ಸಂಚಾರಿ ಪೊಲೀಸ್ ಇಲಾಖೆ ಇನ್ನೂ ಕಡ್ಡಾಯಗೊಳಿಸದೇ ಇದ್ದರೂ ಸಹ ಸಂಚಾರ ವಿಭಾಗದ ಪೊಲೀಸರು ವಾಹನಗಳ ಉನ್ನತ ಭದ್ರತಾ ಸಂಖ್ಯಾ ಫಲಕಗಳನ್ನು ಪರಿಶೀಲಿಸಲು (High Security Registration Plates (HSRPs)) ಆರಂಭಿಸಿರುವುದು ಜನಸಾಮಾನ್ಯರಲ್ಲಿ ಆಕ್ರೋಶ ಮೂಡಿಸಿದೆ.

ಎಲ್ಲೆಂದರಲ್ಲಿ ವಾಹನಗಳನ್ನು ‘ನೋ ಪಾರ್ಕಿಂಗ್’ನಲ್ಲಿ ನಿಲ್ಲಸಲಾಗಿದೆ ಎಂಬ ಕಾರಣ ನೀಡಿ ಠಾಣೆಗೆ ತೆಗೆದುಕೊಂಡು ಹೋಗುವ ಪ್ರಕ್ರಿಯೆ ಇತ್ತೀಚೆಗೆ ಸಾರ್ವಜನಿಕರನ್ನು ಕೆರಳಿಸಿತ್ತು. ಅದರ ಬೆನ್ನಲ್ಲೇ ಭದ್ರತಾ ಸಂಖ್ಯಾ ಫಲಕಗಳ ತಪಾಸಣೆ ಸಾರ್ವಜನಿಕರ ಆಕ್ರೋಶವನ್ನು ವೃದ್ಧಿಸಿದ್ದು, ಹೆಚ್‌ಎಸ್‌ಆರ್‌ಪಿ ಕುರಿತಂತೆ ಸಂಚಾರಿ ಪೊಲೀಸರು ಯಾವ ರೀತಿ ಸಾರ್ಜಜನಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರಿಂದ ದೂರುಗಳ ಸುರಿಮಳೆ ಆರಂಭವಾಗಿದೆ.

ಈ ಕುರಿತಂತೆ ಸಂಚಾರ ಇಲಾಖೆಯು ತನ್ನ ಟ್ವಿಟ್ಟರ್ ಪುಟದಲ್ಲಿ ಸ್ಪಷ್ಟನೆ ನೀಡಿದೆ; ಪ್ರಸ್ತುತ ಹೆಚ್‌ಎಸ್‌ಆರ್‌ಪಿಗಳು ಕೇವಲ ಏಪ್ರಿಲ್ ೨೦೧೯ರ ನಂತರ ನೋಂದಣಿಯಾಗಿರುವ ವಾಹನಗಳಿಗೆ ಮಾತ್ರ ಕಡ್ಡಾಯಗೊಳಿಸಲಾಗಿದ್ದು, ಹಳೆಯ ವಾಹನಗಳಿಗೂ ಕಡ್ಡಾಯಗೊಳಿಸಿ ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ತಿಳಿಸಿದೆ.

ಸಂಚಾರ ಪೊಲೀಸ್ ವಿಭಾಗದ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ಅವರು ಈ ಕುರಿತಂತೆ ನೀಡಿರುವ ತಮ್ಮ ಸ್ಪಷ್ಟನೆಯಲ್ಲಿ ಪ್ರಸ್ತುತ ಹೆಚ್‌ಎಸ್‌ಆರ್‌ಪಿಗಳು ಹೊಸ ವಾಹನಗಳಿಗೆ ಮಾತ್ರ ಕಡ್ಡಾಯವಾಗಿದೆ. ಹೆಚ್‌ಎಸ್‌ಆರ್‌ಪಿಗಳ ತಪಾಸಣೆ ಕೇವಲ ಸಂಚಾರ ವಿಭಾಗದ ಪೊಲೀಸರು ಮಾತ್ರವೇ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಆದರೆ ಈ ಕುರಿತಂತೆ ವಾಹನ ಬಳಕೆದಾರರ ಅಭಿಪ್ರಾಯವೇ ಬೇರೆ ಇದೆ. ಟ್ವಿಟ್ಟರ್‌ನ ಒಂದು ದೂರಿನಲ್ಲಿ ಈ ರೀತಿ ಇದೆ: “IND number plates ಇಲ್ಲದಿರುವ ಕಾರಣದಿಂದಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ನಮ್ಮ ವಾಹನವನ್ನು ತಡೆದರು. ಆದರೆ ಅದು ಯಾವಾಗನಿಂದ ಕಡ್ಡಾಯಗೊಳಿಸಲಾಗಿದೆ ಎಂಬುದೇ ನನಗೆ ಗೊತ್ತಿಲ್ಲ?! ಅದಕ್ಕೆ ಕಾಲಾವಕಾಶವನ್ನೇನಾದರೂ ನಿಗಧಪಡಿಸಿರುವರೇ? ಈ ಕುರಿತಂತೆ ಏನಾದರೂ ಸುದ್ದಿ ಇದೆಯೇ?”

ರಾಷ್ಟ್ರದ ಸಂಕ್ಷೇಪವನ್ನು ಹೊಂದಿರುವ ಕಾರಣದಿಂದಾಗಿ ಹೆಚ್‌ಎಸ್‌ಆರ್‌ಪಿ ಎಂದರೆ IND number plates ಎಂದು ಕರೆಯಲಾಗುತ್ತದೆ.

ಈ ಕುರಿತಂತೆ ಮಾತನಾಡಿರುವ ಸಂಚಾರ ಪೊಲೀಸ್ ವಿಭಾಗದ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ಅವರು ನಮ್ಮ ಅಧಿಕಾರಿಗಳು ಕೇವಲ ದೋಷಪೂರಕವಾಗಿರುವಂತಹ ನಂಬರ್ ಪ್ಲೇಟ್‌ಗಳಿರುವಂತಹ ವಾಹನಗಳ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿದ್ದಾರೆ. “ನಾವು ಕೇವಲ ಅಸಮರ್ಪಕವಾಗಿರುವ, ದೋಷಪೂರಿತವಾದ ಅಥವಾ ನಾನ್-ಸ್ಟಾಡರ್ಡ್ ನಂಬರ್ ಪ್ಲೇಟ್‌ಗಳಿರುವಂತಹ ವಾಹನಗಳ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಸೆಕ್ಯೂರಿಟಿ (IND) ನಂಬರ್ ಪ್ಲೇಟ್‌ಗಳ ಮೇಲೆ ಕ್ರಮ ಕೈಗೊಳ್ಳಲು ಕೇವಲ ಸಂಚಾರ ಪೊಲೀಸ್ ಇಲಾಖೆಗೆ ಮಾತ್ರ ಅಧಿಕಾರವಿದೆ. ಈ ಕುರಿತಂತೆ ಯಾವುದೇ ಕ್ರಮ ಕೈಗೊಳ್ಳದಿರುವಂತೆ ನಮ್ಮ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ,” ಎಂದು ತಿಳಿಸಿದರು.

ಭಾರತೀಯ ಮೋಟಾರು ವಾಹನಗಳ ಕಾಯ್ದೆಯಡಿ ಹೊರಡಿಸಲಾಗಿರುವಂತಹ ಆದೇಶಗಳಲ್ಲಿ, ವಾಹನಗಳ ಮೇಲಿನ ನಂಬರ್ ಪ್ಲೇಟ್‌ನ ಅಳತೆ, ಫಾಂಟ್ ಗಾತ್ರ ಹಾಗೂ ಸ್ಪಷ್ಟವಾಗಿ ಗೋಚರಿಸುವ ಕುರಿತಂತೆ ಸ್ಪಷ್ಟವಾ ವ್ಯಾಖ್ಯಾನವಿದೆ. ಆ ಮಾರ್ಗಸೂಚಿಗಳನ್ನು ಉಲ್ಲಂಘಿಸಬಾರದು ಎಂದು ತಿಳಿಸುತ್ತದೆ.

ನಂಬರ್ ಪ್ಲೇಟ್‌ಗಳ ಮೇಲೆ ಹೆಸರುಗಳನ್ನು ನಮೂದಿಸುವುದು, ಯಾವುದೇ ರೀತಿಯ ಘೋಷಣೆಗಳು, ಚಿತ್ರಗಳು, ಆರ್ಟ್ವರ್ಕ್ಗಳು ಹಾಗೂ ಫ್ಯಾನ್ಸಿ ಅಕ್ಷರಗಳ ಬಳಕೆಯನ್ನೂ ಸಹ ನಿಷೇಧಿಸುತ್ತದೆ. ವಾಹನಗಳ ನಂಬರ್ ಪ್ಲೇಟ್ ವಾಹನದ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಎರಡೂ ಕಡೆ ಸ್ಪಷ್ಟವಾಗಿ ಕಾಣುವಂತಿರಬೇಕು ಹಾಗೂ ಆಂಗ್ಲ ಅಕ್ಷರಗಳು ಹಾಗೂ ಅರಬಿಕ್ ಅಂಕಿಗಳಲ್ಲಿರಬೇಕು, ಎನ್ನುತ್ತಾರೆ ಅಧಿಕಾರಿ ರವಿಕಾಂತೇಗೌಡ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : not-checking-hi-sec-number-plates-traffic-cops-clarify-after-complaints

The post ವಾಹನಗಳ ಮೇಲೆ ಉನ್ನತ ಭದ್ರತಾ ಸಂಖ್ಯಾ ಫಲಕಗಳ ಪರಿಶೀಲನೆ ಕುರಿತ ದೂರುಗಳಗೆ ಸಂಚಾರಿ ಪೊಲೀಸರ ಸ್ಪಷ್ಟನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಶಾಲೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ದೂರು ಹಿನ್ನೆಲೆ: ಎಲ್ಲಾ ಜಿಲ್ಲೆಗಳಲ್ಲಿ ವಿಚಕ್ಷಣ ದಳ ರಚನೆ-ಸಚಿವ ಸುರೇಶ್ ಕುಮಾರ್…
ರಾಮನಗರ,ಜನವರಿ,2,2021(www.justkannada.in): ನಿನ್ನೆಯಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿದ್ದು ಈ ಮಧ್ಯೆ ಶಾಲೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ದೂರು ಕೇಳಿ ಬರುತ್ತಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲಿ ವಿಚಕ್ಷಣ ದಳ ರಚನೆ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಪ್ರತಿ ಜಿಲ್ಲೆಗಳಲ್ಲೂ  ಮೂರರಿಂದ ನಾಲ್ಕು ತಂಡ ವಿಚಕ್ಷಣ ದಳ ರಚನೆ ಮಾಡುತ್ತೇವೆ. ವಿಚಕ್ಷಣ ದಳ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಶಾಲೆಗಳ ಸ್ಥಿತಿ ಬಗ್ಗೆ ವರದಿ ನೀಡುತ್ತಾರೆ ಎಂದರು.

ಇನ್ನು ಶೈಕ್ಷಣಿಕ ವರ್ಷದ ಪರೀಕ್ಷೆ ಬಗ್ಗೆ ಆತಂಕ ಬೇಡ. ಮೂರ್ನಾಲ್ಕು ದಿನಗಳಲ್ಲಿ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. ಹಾಗಯೇ ಬಸ್ ಸೌಲಭ್ಯದ ಬಗ್ಗೆ ಚರ್ಚೆ ಮಾಡುತ್ತೇನೆ. ಹಳೆ ಬಸ್ ಪಾಸ್ ಅನ್ನೇ ತೋರಿಸಿ ಪ್ರಯಾಣ ಬೆಳೆಸಬಹುದು.  ಬಸ್ ನಿರ್ವಾಹಕರು ವಿದ್ಯಾರ್ಥಿಗಳಿಗೆ ತೊಂದರೆ ಕೊಡಬಾರದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆ ಗೊತ್ತಿದೆ. ಖಾಸಗಿ ಶಾಲೆಗಳು ಪೋಷಕರ ಜತೆ ಸಭೆ ನಡೆಸಿ.  ಪೋಷಕರ ಸ್ಥಿತಿ ಅವಲೋಕಿಸಿ ಶುಲ್ಕ ನಿಗದಿ ಮಾಡಿ. ಇಲ್ಲದಿದ್ದರೇ ಇಲಾಖೆ ವತಿಯಿಂದ ಶುಲ್ಕ ನಿಗದಿ ಮಾಡಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

Key words: Covid –rule- Violation- Complaints – Schools-Minister -Suresh Kumar

The post ಶಾಲೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ದೂರು ಹಿನ್ನೆಲೆ: ಎಲ್ಲಾ ಜಿಲ್ಲೆಗಳಲ್ಲಿ ವಿಚಕ್ಷಣ ದಳ ರಚನೆ-ಸಚಿವ ಸುರೇಶ್ ಕುಮಾರ್… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಟ್ವೀಟರ್ ವಿರುದ್ಧ ಪ್ರಧಾನಿಗೆ ಪತ್ರ ಬರೆದು ದೂರು ನೀಡಿದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ.
ಹೊಸದಿಲ್ಲಿ, ಏ.26, 2020 : (www.justkannada.in news ) ಭಾರತದ ವಿರುದ್ಧ ಷಡ್ಯಂತರ ಹಾಗೂ ಭಾರತವನ್ನು ಒಡೆಯುವ ಟ್ವೀಟ್ಗಳನ್ನು ಪ್ರಚಾರಮಾಡುವ ಉದ್ಯಮವನ್ನು ಟ್ವಿಟ್ಟರ್ ಮಾಡುತ್ತಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಆರೋಪಿಸಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಹೆಗಡೆ ಹೇಳಿರುವುದಿಷ್ಟು….

ಕೆಲವು ದಿನಗಳ ಹಿಂದೆ ಗುರುಪಟವಂತ ಸಿಂಘ್ ಪನ್ನೂನ್ ಎಂಬ ಟ್ವಿಟ್ಟರ್ ಖಾತೆಯಿಂದ ಪಂಜಾಬ್ ರಾಜ್ಯವನ್ನು ಭಾರತದಿಂದ ಸ್ವಾತಂತ್ರಗೊಳಿಸಿ ಖಲಿಸ್ಥಾನ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿಸುವುದರ ಬಗ್ಗೆ ಟ್ವೀಟ್ ಮಾಡಿದ್ದು ಅದನ್ನು ಟ್ವಿಟ್ಟರಿಗೆ ಹಣಪಾವತಿಸಿ ಜಾಹಿರಾತು ನೀಡಿದ್ದಾರೆ. ಇದು ಭಾರತದ ವಿರುದ್ಧ ನಡೆಸುತ್ತಿರುವ ಜಾಹೀರಾತಾಗಿದ್ದು ಇದನ್ನು ಟ್ವಿಟ್ಟರ್ ಅನುಮೋದಿಸಿ ಜಾಹೀರಾತನ್ನು ಪ್ರಚುರ ಪಡೆಸಿದೆ. ಇಂತಹ ರಾಷ್ಟ್ರವಿರೋಧ ಚಟುವಟಿಕೆಯನ್ನು ಬಯಲು ಮಾಡಿ, ಸನ್ಮಾನ್ಯ ಪ್ರಧಾನಿ ಹಾಗೂ ಗೃಹ ಸಚಿವರ ಗಮನಕ್ಕೆ ನಾನು ತಂದಿದ್ದರ ಪರಿಣಾಮವಾಗಿ, ಏಪ್ರಿಲ್ 22 ರಂದು ತಬ್ಲೀಘಿ ಜಮಾತ್ ನ ವಿರುದ್ಧ ನಾನು ಮಾಡಿರುವ ಟ್ವೀಟಿನ ನೆಪವಿಟ್ಟುಕೊಂಡು ನನ್ನ ಟ್ವಿಟ್ಟರ್ ಅಕೌಂಟನ್ನು ರದ್ದುಮಾಡಿದ್ದಾರೆ. ಬದಲಾಗಿ, ನಾನು ಮಾಡಿರುವ ಟ್ವೀಟನ್ನು ತಗೆದುಹಾಕಿದಲ್ಲಿ ನನ್ನ ಅಕೌಂಟ್ ಅನ್ನು ಪುನಃ ಸಕ್ರಿಯಗೊಳಿಸುವುದಾಗಿ ಹೇಳಿದ್ದಾರೆ.

ಮಾನ್ಯರೆ,

ದೇಶದ ವಿರುದ್ಧ ನಡೆಯುವ ಯಾವುದೇ ನಡೆಯನ್ನು ಅದು ಯಾರೇ ಇರಲಿ, ನನ್ನ ವಿರೋಧವನ್ನು ನಾನು ವ್ಯಕ್ತಪಡೆಸುತ್ತಾ ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲಾ. ಈ ನಿಟ್ಟಿನಲ್ಲಿ ನಾನು ಮಾಡಿರುವ ಟ್ವೀಟನ್ನು ನಾನು ಅಳಿಸುವ ಪ್ರಶ್ನೆಯೇ ಇಲ್ಲಾ.

ಅದರಲ್ಲಿ ಟ್ವಿಟ್ಟರ್ ನಡೆಸುತ್ತಿರುವ ಭಾರತ ವಿರೋಧ ಪ್ರಚಾರಗಳನ್ನು ನಾನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ದೇಶ ವಿರೋಧಿ ಸಮಾಜಿಕ ಜಾಲತಾಣದ ಅಕೌಂಟಿಗಿಂತ ನನ್ನ ದೇಶ, ನನ್ನ ಸಿದ್ಧಾಂತ ನನ್ನ ಜೀವನದ ಆದ್ಯತೆ ಎಂದಿದ್ದಾರೆ ಅನಂತಕುಮಾರಹೆಗಡೆ.

key words : twitter-bjp-mp-ananthkumar.hegde-complaints-pm-modi

The post ಟ್ವೀಟರ್ ವಿರುದ್ಧ ಪ್ರಧಾನಿಗೆ ಪತ್ರ ಬರೆದು ದೂರು ನೀಡಿದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಐಎಂಎ ವಂಚನೆ ಕೇಸ್: 12ಸಾವಿರಕ್ಕೂ ಹೆಚ್ಚು ದೂರು: ಇಡಿಯಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಗೆ ಚಿಂತನೆ…
ಬೆಂಗಳೂರು,ಜೂ,12,2019(www.justkannada.in): ಐಎಂಎ  ಜ್ಯುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಸಾವಿರಕ್ಕೂ ಹೆಚ್ಚು ದೂರು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈ ನಡುವೆ ಸುಮಾರು 12 ಸಾವಿರಕ್ಕೂ ಹೆಚ್ಚು ಹೂಡಿಕೆದಾರರು ದೂರು ದಾಖಲಿಸಿದ್ದಾರೆ. ಜೂನ್ 10 ರಂದು 3250 ದೂರುಗಳು ದಾಖಲಾಗಿದ್ದರೇ ನಿನ್ನೆ 8ಸಾವಿರಕ್ಕೂ ಹೆಚ್ಚು ದೂರು ನೀಡಲಾಗಿದೆ. ಇಂದು ಬೆಳಿಗ್ಗೆಯಿಂದ ಸುಮಾರು 1500 ದೂರುಗಳು ಬಂದಿವೆ ಎನ್ನಲಾಗಿದೆ.

ಶಿವಾಜಿನಗರದ ಎಎಸ್ ಕನ್ವೆನ್ಸನ್ ಹಾಲ್ ನಲ್ಲಿ ದೂರು ನೀಡಲು ಪೊಲೀಸರು ವ್ಯವಸ್ಥೆ ಮಾಡಿದ್ದು, ರಾಜ್ಯದ ವಿವಿಧೆಡೆಯಿಂದ ಹೂಡಿಕೆದಾರರು ಬಂದು ದೂರು ನೀಡುತ್ತಿದ್ದಾರೆ. ಇನ್ನು 12ಸಾವಿರಕ್ಕೂ ಹೆಚ್ಚು ದೂರು ಬಂದಿರುವ ಹಿನ್ನೆಲೆ, ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ಚಿಂತನೆ ನಡೆಸಿದೆ ಎನ್ನಲಾಗಿದೆ.

Key words: IMA fraud case: over 12,000 complaints filed

#IMA #fraud #12000complaints. #bangalore

The post ಐಎಂಎ ವಂಚನೆ ಕೇಸ್: 12ಸಾವಿರಕ್ಕೂ ಹೆಚ್ಚು ದೂರು: ಇಡಿಯಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಗೆ ಚಿಂತನೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.