co-operative society Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರು ಪಾಲಿಕೆ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಯಶೋಧರ, ಉಪಾಧ್ಯಕ್ಷರಾಗಿ ಕೆ.ಸುಮಂಗಳ ಆಯ್ಕೆ
ಮೈಸೂರು,ಏಪ್ರಿಲ್,2,2025 (www.justkannada.in): ಮೈಸೂರು ಮಹಾ ನಗರಪಾಲಿಕೆಯ ನೌಕರರ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಖಜಾಂಚಿ ಸ್ಥಾನಗಳಿಗೆ ಇಂದು ಚುನಾವಣೆ ನಡೆಸಲಾಯಿತು.

ಅಧ್ಯಕ್ಷರಾಗಿ ಎಸ್.ಯಶೋಧರ, ಉಪಾಧ್ಯಕ್ಷರಾಗಿ ಕೆ.ಸುಮಂಗಳ ರವರು ಹಾಗೂ ಖಜಾಂಚಿಯಾಗಿ ನಸ್ರುಲ್ಲಾ  ಅವರು ಅವಿರೋಧವಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಸಹಕಾರ ಸಂಘದ ಒಳಿತಿಗಾಗಿ  ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಜವಾಬ್ದಾರಿ ನಿರ್ವಹಿಸಲು ಶ್ರಮಿಸುತ್ತಿವೆ ಎಂದು ತಿಳಿಸಿದರು.

ಈ ವೇಳೆ ಸದಸ್ಯರುಗಳಾದ ಬಿ.ಪ್ರಸಾದ್, ಎಚ್. ಎಂ.ಶಿವಪ್ರಸಾದ್, ಕೆ ವಿಶ್ವನಾಥ್, ಎನ್. ಮಂಜುನಾಥ್. ಬಿ.ರಾಜು, ಎಸ್ ಮೈತ್ರಿ, ವಿ. ರಾಜೇಶ್ವರಿ ಬಾಯಿ,  ಎಂ .ಬಸವಣ್ಣ, ಡಿ .ಸುರೇಂದ್ರ ಕುಮಾರ್ ಮತ್ತು ಸಹಕಾರ ಸಂಘದ ಕಾರ್ಯದರ್ಶಿ ಎನ್ ಶಿವಕುಮಾರ್ ಉಪಸ್ಥಿತರಿದ್ದರು.

Key words: Mysore City Corporation, Co -operative Society, election

The post ಮೈಸೂರು ಪಾಲಿಕೆ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಯಶೋಧರ, ಉಪಾಧ್ಯಕ್ಷರಾಗಿ ಕೆ.ಸುಮಂಗಳ ಆಯ್ಕೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಆರ್ ಬಿ ಐ ವ್ಯಾಪ್ತಿಗೆ ಸಹಕಾರ ಸಂಘ; ಅವ್ಯವಹಾರಗಳಿಗೆ ಬೀಳಲಿದೆ ಕಡಿವಾಣ- ಕೇಂದ್ರದ ಕ್ರಮ ಸ್ವಾಗತಿಸಿದ ಸಚಿವ ಎಸ್.ಟಿ ಸೋಮಶೇಖರ್….
ಕಲಬುರಗಿ,ಜೂ,26,2020(www.justkannada.in): ಸಹಕಾರ ಸಂಘಗಳಲ್ಲಿ ಸಾರ್ವಜನಿಕರ ಹಣ ದುರುಪಯೋಗಕ್ಕೆ ಕಡಿವಾಣ ಹಾಕಿ, ಅವರ ಹಣಕ್ಕೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಸ್ವಾಗತಾರ್ಹ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸಹಕಾರ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮಕ್ಕೆ ಚೆಕ್ ವಿತರಣೆ ಮಾಡುವ ಮೂಲಕ  ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಗಳು ಸೇರಿದಂತೆ ಅನೇಕ ಸಹಕಾರಿ ಬ್ಯಾಂಕ್ ಗಳಲ್ಲಿ ಇಂದು ಅಕ್ರಮಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರ ಆಸ್ತಿ ಹಾಗೂ ಹಣಕ್ಕೆ ಭದ್ರತೆ ಇಲ್ಲದಂತಾಗುವುದಲ್ಲದೆ, ಸಹಕಾರ ಸಂಘಗಳಲ್ಲಿ ನಡೆಯುವ ಇಂಥ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳ ಮೇಲುಸ್ತುವಾರಿ ಹೊಣೆಯನ್ನು ಆರ್ ಬಿ ಐ ಗೆ ವಹಿಸಿದೆ. ಪ್ರಧಾನಿಯವರ ಈ ಕ್ರಮವನ್ನು ರಾಜ್ಯ ಸರ್ಕಾರ ಸ್ವಾಗತಿಸುತ್ತದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಈವರೆಗೆ 5 ಲಕ್ಷ ರೈತರಿಗೆ ಸಾಲ….

ರಾಜ್ಯದಲ್ಲಿ ಗುರುವಾರದ ವರೆಗೆ (25/06/2020) 5,42,991 ರೈತರಿಗೆ 3807 ಕೋಟಿ ರೂಪಾಯಿ ಹಣವನ್ನು ರೈತರಿಗೆ ಕೃಷಿ ಸಾಲವಾಗಿ ವಿತರಣೆ ಮಾಡಲಾಗಿದೆ. ರೈತರಿಗೆ ಸಾಲ ಕೊಡುವ ಸಂಬಂಧ ಪ್ರಸಕ್ತ ಸಾಲಿನಲ್ಲಿ 1750 ಕೋಟಿ ರೂ. ಸಾಲವನ್ನು ಅಪೆಕ್ಸ್ ಬ್ಯಾಂಕಿಗೆ ನಬಾರ್ಡ್ ಕೊಟ್ಟಿದೆ. ಕಳೆದ ಬಾರಿ ರೈತರಿಗೆ 13,577 ಕೋಟಿ ರೂಪಾಯಿಯನ್ನು ಕೊಡಲಾಗಿತ್ತು. ಈ ಬಾರಿ 14,500 ಕೋಟಿ ರೂಪಾಯಿ ಬೆಳೆ ಸಾಲ ನೀಡಲು ಚಾಲನೆ ನೀಡಲಾಗಿದೆ ಎಂದು ಸಚಿವ ಎಸ್. ಟಿ.ಸೋಮಶೇಖರ್ ತಿಳಿಸಿದರು.

ರೈತರಿಗೆ ಹೆಚ್ಚಿನ ಸಾಲ ಸಿಗಬೇಕು. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಯಾಗಬಾರದು ಎಂಬುದು ಮಾನ್ಯ ಮುಖ್ಯಮಂತ್ರಿಗಳ ಆಶಯವಾಗಿದ್ದು, ಅವರ ನಿರ್ದೇಶನದಂತೆ ಹೊಸ ರೈತರಿಗೆ ಸಾಲ ನೀಡಲು ಎಲ್ಲ ಜಿಲ್ಲಾ ಸಹಕಾರ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರಾದ ಎಸ್ ಟಿ ಸೋಮಶೇಖರ್ ತಿಳಿಸಿದರು.

ಕಲಬುರಗಿ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್

ಕಲಬುರಗಿ ಡಿಸಿಸಿ ಬ್ಯಾಂಕ್ ನಲ್ಲಿ ಅನೇಕ ಅಕ್ರಮಗಳ ಆರೋಪಗಳು ಬಂದ ಹಿನ್ನೆಲೆಯಲ್ಲಿ ಇದನ್ನು ಸೂಪರ್ ಸೀಡ್ ಮಾಡಲಾಗಿದ್ದು, ನಬಾರ್ಡ್ ಅನುಮತಿಗಾಗಿ ಕಳುಹಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಪ್ರತಿ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಶೀಘ್ರ

ಶೀಘ್ರದಲ್ಲಿಯೇ ಪ್ರತಿ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಮಾಡಲಾಗುವುದು. ರೈತರಿಗೆ, ಬಡವರಿಗೆ, ಮಹಿಳೆಯರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ವಿವಿಧ ವರ್ಗಗಳಿಗೆ ಎಷ್ಟು ಸಾಲ ವಿತರಣೆ ಮಾಡಲಾಗಿದೆ ಎಂಬುದನ್ನು ಈ ವೇಳೆ ಪರಿಶೀಲಿಸಲಾಗುತ್ತದೆ. ರಾಜ್ಯದ ಒಟ್ಟು 21 ಡಿಸಿಸಿ ಬ್ಯಾಂಕಗಳಲ್ಲಿ 20 ಡಿಸಿಸಿ ಬ್ಯಾಂಕ್ ಗಳಲ್ಲಿ ಸಾಲ ನೀಡಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.

Key words: Co-operative Society – RBI –minister- ST Somashekhar

The post ಆರ್ ಬಿ ಐ ವ್ಯಾಪ್ತಿಗೆ ಸಹಕಾರ ಸಂಘ; ಅವ್ಯವಹಾರಗಳಿಗೆ ಬೀಳಲಿದೆ ಕಡಿವಾಣ- ಕೇಂದ್ರದ ಕ್ರಮ ಸ್ವಾಗತಿಸಿದ ಸಚಿವ ಎಸ್.ಟಿ ಸೋಮಶೇಖರ್…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪತ್ರಕರ್ತರ ಸಹಕಾರ ಸಂಘದ ಬಲವರ್ಧನೆಗೆ ಸರ್ಕಾರ ಬದ್ಧ- ಡಿಸಿಎಂ ಡಾ. ಅಶ್ವತ್ಥನಾರಾಯಣ್
ಬೆಂಗಳೂರು,ಫೆ,14,2020(www.justkannada.in):  ಪತ್ರಕರ್ತರ ಸಹಕಾರ ಸಂಘ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ವೃತ್ತಿ ಜೀವನಕ್ಕೆ ಪೂರಕವಾಗಿದೆ. ಇಂಥ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಬೇಕು ಈ ನಿಟ್ಟಿನಲ್ಲಿ ಪತ್ರಕರ್ತರ ಸಹಕಾರ ಸಂಘಕ್ಕೆ ಸರ್ಕಾರದ ಕಡೆಯಿಂದ ಎಲ್ಲ ಅಗತ್ಯ ನೆರವು ಒದಗಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಪತ್ರಕರ್ತರ ಸಂಘದ 70ನೇ ವರ್ಷಾಚರಣೆ ಪ್ರಯುಕ್ತ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಅಶ್ವತ್ಥನಾರಾಯಣ ಮಾತನಾಡಿದರು.

“ಸಹಕಾರ ಸಂಘಗಳ ಆಶ್ರಯದಲ್ಲಿ ಅದರ ಸದಸ್ಯರು ಬದುಕು ಕಟ್ಟಿಕೊಳ್ಳಬೇಕು. ವೃತ್ತಿ ಜೀವನಕ್ಕೆ ಪೂರಕವಾಗುವುದೇ ಇಂಥ ಸಂಘಗಳ ಉದ್ದೇಶವಾಗಬೇಕು. ಪತ್ರಕರ್ತರ ಸಂಘ  ತನ್ನ ಮೂಲ ಉದ್ದೇಶಕ್ಕೆ ಬದ್ಧವಾಗಿ ಇಷ್ಟು ವರ್ಷ ಉಳಿದಿರುವುದು ಬಹಳ ಸಂತೋಷದ ವಿಚಾರ. ಸಂಘದ ಸದಸ್ಯರಿಗೆ ತುರ್ತುಸಾಲ, ವೈಯಕ್ತಿಕ ಸಾಲ ಒದಗಿಸುವ ಮೂಲಕ ಸ್ವಾಭಿಮಾನದ ಬದುಕಿಗೆ ನೆರವಾಗುತ್ತಿದೆ. ಇಂಥ ಸಹಕಾರ ಸಂಘಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು. ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಕ್ಕೆ ನಾವು ಕೈ ಜೋಡಿಸುತ್ತೇವೆ,” ಎಂದರು.

“ಸಮಾಜಕ್ಕೆ ಆತ್ಮೀಯವಾಗಿರುವ ಮಾಧ್ಯಮಗಳಿಗೆ ಶಕ್ತಿ ತುಂಬದಿದ್ದರೆ ಕಷ್ಟವಾಗುತ್ತದೆ. ವ್ಯವಸ್ಥೆಯಲ್ಲಿ  ಪಾರದರ್ಶಕತೆ, ಉತ್ತರದಾಯಿತ್ವ ತರಲು ಮಾಧ್ಯಮದಿಂದಲೇ ಸಾಧ್ಯ. ಜವಾಬ್ದಾರಿ ಅರಿತು ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡರೆ  ಸಮಾಜದ ರಕ್ಷಣೆ ಸಾಧ್ಯ. ಸೃಜನಶೀಲತೆ ಹಾಗೂ ಉತ್ತಮ ಚಿಂತನಾ ಕ್ರಮದ ಜತೆಗೆ ನಿಷ್ಪಕ್ಷಪಾತ ನಿಲುವು ಇದ್ದಾಗ ಒಳ್ಳೆಯ ಕೊಡುಗೆ ನೀಡಬಹುದು,” ಎಂದು ಅವರು ಹೇಳಿದರು.

ಡಿಜಿಟಲ್‌ ಮಾಧ್ಯಮದ ಪಾತ್ರ ದೊಡ್ಡದು

“ಡಿಜಿಟಲ್‌ ಮೀಡಿಯಾ ಈಗ ಎಲ್ಲರಿಗೂ ಮುಕ್ತವಾಗಿದ್ದು, ದೊಡ್ಡ ಮಟ್ಟದಲ್ಲಿ ಬೆಳೆದು ಸಮಾಜಕ್ಕೆ ಶಕ್ತಿ ತುಂಬುತ್ತಿದೆ. ಈ ದಾರಿಯಲ್ಲಿ ಜಗತ್ತು  ವೇಗವಾಗಿ ಸಾಗುತ್ತಿದ್ದು, ನಾವು ಸಹ ಇದನ್ನು ಅಳವಡಿಸಿಕೊಳ್ಳಬೇಕು.  ಡಿಜಿಟಲ್‌ ಮಾಧ್ಯಮಗಳಲ್ಲಿ ಅನುಕೂಲದ ಜತೆಗೆ ಅನನಕೂಲವೂ ಇದ್ದು, ಎಚ್ಚರಿಕೆಯಿಂದ ನಿಭಾಯಿಸಬೇಕು. ನಿರಾಧಾರವಾಗಿ ಬರೆದರೆ ಮಾತ್ರ ಸಮಸ್ಯೆ ಆಗುವುದು. ಮುಂದಿನ ದಿನದಲ್ಲಿ ಸೈಬರ್‌ ಕಾನೂನಿನಲ್ಲಿ ಸಾಕಷ್ಟು ಸುಧಾರಣೆ ಆಗಲಿದ್ದು, ಆನ್‌ಲೈನ್‌ ಮಾಧ್ಯಮಕ್ಕೆ ಹೆಚ್ಚು ಆದ್ಯತೆ ದೊರೆಯಲಿದೆ,”

ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿಯವರು, ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್‌ ರಾಜೇಂದ್ರಕುಮಾರ್‌, ಸ್ಮರಣ ಸಂಚಿಕೆ ಸಂಪಾದಕ ರಘುನಾಥ ಚ.ಹ, ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.

Key words: Govt- Committed – strengthen- journalists’ -co-operative society –DCM-Ashwath narayan

The post ಪತ್ರಕರ್ತರ ಸಹಕಾರ ಸಂಘದ ಬಲವರ್ಧನೆಗೆ ಸರ್ಕಾರ ಬದ್ಧ- ಡಿಸಿಎಂ  ಡಾ. ಅಶ್ವತ್ಥನಾರಾಯಣ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.