CM D. K. Shivakumar | Just Kannada - Daily News Updates
‘ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2027’ ನಲ್ಲಿ ಭಾಗವಹಿಸಿ: ಪೋಲೆಂಡ್ ಗೆ ಸಿಎಂ ಡಿ.ಕೆ ಶಿವಕುಮಾರ್ ಆಹ್ವಾನ
ಬೆಂಗಳೂರು, ಅಕ್ಟೋಬರ್,23,2026 (www.justkannada.in):  ಕರ್ನಾಟಕದ ‘ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2027’ ರಲ್ಲಿ ಪೋಲೆಂಡ್ ದೇಶವನ್ನು ಪಾಲುದಾರ ರಾಷ್ಟ್ರವಾಗಿ ಭಾಗವಹಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಹ್ವಾನಿಸಿದರು. ಇದೇ ವೇಳೆ ಪೋಲೆಂಡಿನ TZMO ಗ್ರೂಪ್ ನಿಂದ ₹80 ಕೋಟಿ ಹೂಡಿಕೆಯನ್ನು ಅವರು ಪ್ರಸ್ತಾಪಿಸಿದ್ದು, ಇದರಿಂದ ಕರ್ನಾಟಕದಲ್ಲಿ ಸುಮಾರು 1,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.
ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಶುಕ್ರವಾರ ನಡೆದ ಭಾರತ-ಪೋಲೆಂಡ್ ಬಿಸಿನೆಸ್ ಮೀಟಿಂಗ್ ನಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿದರು.
“ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಕರ್ನಾಟಕದ ಜಾಗತಿಕ ಕೇಂದ್ರವಾಗಿರುವ ಬೆಂಗಳೂರಿಗೆ ಪೋಲೆಂಡ್ ನ  ಪ್ರಧಾನಮಂತ್ರಿ  ಡೊನಾಲ್ಡ್ ಟಸ್ಕ್ ಮತ್ತು ಪೋಲಿಷ್ ನಿಯೋಗವನ್ನು ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ” ಎಂದರು.
ತಂತ್ರಜ್ಞಾನ, ನಾವಿನ್ಯತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ದ್ವಿಪಕ್ಷಿಯ ಸಹಕಾರ
“ಬೆಂಗಳೂರಿನ ತಂತ್ರಜ್ಞಾನ ಪರಿಸರ ವ್ಯವಸ್ಥೆ ಮತ್ತು ಸುಧಾರಿತ ಉತ್ಪಾದನೆ, ಕೃತಕ ಬುದ್ಧಿಮತ್ತೆ (AI) ಹಾಗೂ ಹಸಿರು ಇಂಧನದಲ್ಲಿ ಪೋಲೆಂಡಿನ ಪರಿಣತಿಯನ್ನು ಬಳಸಿಕೊಂಡು ಹೂಡಿಕೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಆಳವಾಗಿಸಲು ರಾಜ್ಯವು ಉತ್ಸುಕವಾಗಿದೆ” ಎಂದು ಹೇಳಿದರು.
ವೇಮಗಲ್ನಲ್ಲಿ TZMO ಗ್ರೂಪ್ನ 80 ಕೋಟಿ ರೂ. ಪ್ರಸ್ತಾವಿತ ಹೂಡಿಕೆ
“ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಐದು ಎಕರೆ ಪ್ರದೇಶದಲ್ಲಿ ಸುಮಾರು ₹80 ಕೋಟಿ ಮೊತ್ತದ TZMO ಗ್ರೂಪ್ನ ಪ್ರಸ್ತಾವಿತ ಹೂಡಿಕೆಯನ್ನು ಅವರು ಸ್ವಾಗತಿಸಿದರು. ಈ ಯೋಜನೆಯು ಸುಮಾರು 1,000 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಭಾರತದಲ್ಲಿ ಇದೇ ಮೊದಲ ಬಾರಿಗೆ ‘ಸ್ಮಾರ್ಟ್ ಅಡಲ್ಟ್ ಇನ್ಕಾಂಟಿನೆನ್ಸ್ ಪ್ಯಾಡ್ ಗಳ’ ತಯಾರಿಕೆಯನ್ನು ಪರಿಚಯಿಸಲಿದೆ” ಎಂದರು.
ವೈದ್ಯಕೀಯ ಉತ್ಪನ್ನ, ಸುಧಾರಿತ ಉತ್ಪಾದನಾ ವಲಯಗಳಲ್ಲಿ ಅವಕಾಶ
“ಕರ್ನಾಟಕದಲ್ಲಿ ಹೆಚ್ಚಿನ ಪೋಲಿಷ್ ಹೂಡಿಕೆಗೆ, ವಿಶೇಷವಾಗಿ ವೈದ್ಯಕೀಯ ಉತ್ಪನ್ನಗಳು, ಆರೋಗ್ಯ ರಕ್ಷಣೆ ಮತ್ತು ಸುಧಾರಿತ ಉತ್ಪಾದನಾ ವಲಯಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಹೊಸ ತಂತ್ರಜ್ಞಾನಗಳನ್ನು ತರುವ, ಸ್ಥಳೀಯ ಉದ್ಯಮಗಳನ್ನು ಬಲಪಡಿಸುವ, ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ರಫ್ತಿಗೆ ಬೆಂಬಲ ನೀಡುವ ಹೂಡಿಕೆಗಳನ್ನು ಆಕರ್ಷಿಸಲು ರಾಜ್ಯವು ಉತ್ಸುಕವಾಗಿದೆ” ಎಂದರು.
ಕೃತಕ ಬುದ್ಧಿಮತ್ತೆ, ಗೇಮಿಂಗ್ ಮತ್ತು ಡಿಪ್-ಟೆಕ್ ನಾವೀನ್ಯತೆಗಳಲ್ಲಿ ಸಹಯೋಗವನ್ನು ಉತ್ತೇಜಿಸಲು ಕಟೋವಿಸ್ ಮತ್ತು Kato.hub ನ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯೊಂದಿಗೆ ಸಹಿ ಮಾಡಲಾದ ಒಪ್ಪಂದ ಪತ್ರವನ್ನು (LoI) ಉಲ್ಲೇಖಿಸಿದರು. ಇದರಲ್ಲಿ ಪ್ರಸ್ತಾವಿತ ‘ಕರ್ನಾಟಕ-ಕಟೋವಿಸ್ ಡಿಜಿಟಲ್ ಮತ್ತು ಗೇಮಿಂಗ್ ಕಾರಿಡಾರ್’ ಸಹ ಸೇರಿದೆ. ಈ ಉಪಕ್ರಮವು ಉಭಯ ಕಡೆಯ ಸ್ಟಾರ್ಟ್ಅಪ್ ಗಳು, ತಂತ್ರಜ್ಞಾನ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಸಹಯೋಗ ನೀಡಲು, ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರಸ್ಪರ ಮಾರುಕಟ್ಟೆಗಳಿಗೆ ವಿಸ್ತರಿಸಲು ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
“ಕೃತಕ ಬುದ್ಧಿಮತ್ತೆ, ಸಾಫ್ಟ್ ವೇರ್, ಗೇಮಿಂಗ್, ರೋಬೋಟಿಕ್ಸ್, ಸ್ಮಾರ್ಟ್ ಉತ್ಪಾದನೆ ಮತ್ತು ಸ್ಟಾರ್ಟ್ಅಪ್ ನಾವೀನ್ಯತೆಗಳಲ್ಲಿ ಬೆಂಗಳೂರಿನ ಅವಕಾಶಗಳನ್ನು ಅನ್ವೇಷಿಸಲು ಶಿವಕುಮಾರ್ ಪೋಲಿಷ್ ತಂತ್ರಜ್ಞಾನ ಕಂಪನಿಗಳಿಗೆ ಕರೆ ನೀಡಿದರು. ನುರಿತ ಉದ್ಯೋಗಗಳನ್ನು ಸೃಷ್ಟಿಸಲು ಸಂಶೋಧನೆ, ಶಿಕ್ಷಣ ಮತ್ತು ತಂತ್ರಜ್ಞಾನ ವರ್ಗಾವಣೆಯಲ್ಲಿ ಬಲವಾದ ಪಾಲುದಾರಿಕೆ ಬೇಕು” ಎಂದು ಕರೆ ನೀಡಿದರು.
ತಂತ್ರಜ್ಞಾನ ಸಹಕಾರ: ಪೋಲೆಂಡ್ ನಲ್ಲಿ 20 ವರ್ಷಗಳಿಂದ ಇನ್ಫೋಸಿಸ್ ಉಪಸ್ಥಿತಿ
ಭಾರತ-ಪೋಲೆಂಡ್ ತಂತ್ರಜ್ಞಾನ ಸಹಕಾರದ ಅವಕಾಶಗಳಿಗೆ ಉದಾಹರಣೆಯಾಗಿ ಪೋಲೆಂಡ್ ನಲ್ಲಿ ಇನ್ಫೋಸಿಸ್ ನ (Infosys) ಸುಮಾರು 20 ವರ್ಷಗಳ ಉಪಸ್ಥಿತಿಯೇ ಸಾಕ್ಷಿ. ಬೆಂಗಳೂರಿನಲ್ಲಿ ಪೋಲಿಷ್ ಹೂಡಿಕೆಗಳನ್ನು ಸುಗಮಗೊಳಿಸಲು ಕರ್ನಾಟಕ ಕಾರ್ಯನಿರ್ವಹಿಸಲಿದ್ದು, ಪೋಲೆಂಡ್ನಲ್ಲಿ ಅವಕಾಶಗಳನ್ನು ಅನ್ವೇಷಿಸುವಲ್ಲಿ ರಾಜ್ಯದ ಕಂಪನಿಗಳಿಗೆ ಬೆಂಬಲ ನೀಡಲಿದೆ” ಎಂದು ಹೇಳಿದರು.
ಸುಸ್ಥಿರ ಕೈಗಾರಿಕಾ ಅಭಿವೃದ್ಧಿಗೆ ಪೋಲಿಷ್ ಪರಿಣತಿ ಬಳಕೆ
ಕರ್ನಾಟಕದ ಪರಿಸರ ಆದ್ಯತೆಗಳು ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯನ್ನು ಮುನ್ನಡೆಸಲು ಪೋಲಿಷ್ ಪರಿಣತಿಯನ್ನು ಬಳಸಿಕೊಂಡು ನವೀಕರಿಸಬಹುದಾದ ಇಂಧನ, ತ್ಯಾಜ್ಯದಿಂದ ಇಂಧನ ತಯಾರಿಕೆ, ಕೆಸರು ನಿರ್ವಹಣೆ, ತ್ಯಾಜ್ಯನೀರಿನ ಸಂಸ್ಕರಣೆ ಮತ್ತು ಆವರ್ತಿತ ಆರ್ಥಿಕತೆಯ (Circular Economy) ಪರಿಹಾರಗಳನ್ನು ಸಹಕಾರಕ್ಕಾಗಿ ಭರವಸೆಯ ಕ್ಷೇತ್ರಗಳಾಗಿವೆ” ಎಂದು ತಿಳಿಸಿದರು.
ಮಾಹಿತಿ ತಂತ್ರಜ್ಞಾನ, ಸಾಫ್ಟ್ವೇರ್ ಸೇವೆಗಳು, ಫಾರ್ಮಾಸ್ಯುಟಿಕಲ್ಸ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪಾಲುದಾರಿಕೆಗಳನ್ನು ಅನ್ವೇಷಿಸಲು ಅಸ್ಸೆಕೊ (Asseco) ಮತ್ತು ಪೋಲ್ಫಾರ್ಮಾ (Polpharma) ಸೇರಿದಂತೆ ಪೋಲಿಷ್ ಕಂಪನಿಗಳನ್ನು ಅವರು ಆಹ್ವಾನಿಸಿದರು. ಆರ್ಲೆನ್ (ORLEN) ಮತ್ತು ಕೆಜಿಎಚ್ಎಮ್ ಪೋಲ್ಸ್ಕಾ ಮೀಡ್ಜ್ (KGHM Polska Miedź) ನಂತಹ ಕಂಪನಿಗಳನ್ನು ಕರ್ನಾಟಕದ ಇಂಧನ, ಪೆಟ್ರೋಕೆಮಿಕಲ್ ಮತ್ತು ಸುಧಾರಿತ ಉತ್ಪಾದನಾ ವಲಯಗಳಲ್ಲಿ ಹೂಡಿಕೆ ಮತ್ತು ತಂತ್ರಜ್ಞಾನ ಸಹಯೋಗವನ್ನು ಪರಿಗಣಿಸಲು ಪ್ರೋತ್ಸಾಹಿಸಲಾಯಿತು.
ಬೆಂಗಳೂರಿನ ಹೊರಗೆ ಇತರ ಜಿಲ್ಲೆಗಳಲ್ಲೂ ಹೂಡಿಕೆಗೆ ಆಹ್ವಾನ
“ಹೂಡಿಕೆ ಅವಕಾಶಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದ ಇತರ ಜಿಲ್ಲೆಗಳನ್ನು ಅನ್ವೇಷಿಸಲು ಮತ್ತು ರಾಜ್ಯದ ಕೈಗಾರಿಕಾ ಪರಿಸರ ವ್ಯವಸ್ಥೆಯ ಲಾಭವನ್ನು ಪಡೆದುಕೊಳ್ಳಿ” ಎಂದು ಕರೆ ನೀಡಿದರು.
“ಬೆಂಗಳೂರಿನಲ್ಲಿರುವ ಪೋಲೆಂಡ್ ನ ಕಾನ್ಸುಲೇಟ್ ಕಚೇರಿಯು ವ್ಯಾಪಾರ ಮತ್ತು ಸಾಂಸ್ಥಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಪೋಲಿಷ್ ಉದ್ಯಮಗಳು ಹಾಗೂ ಕರ್ನಾಟಕದ ಕೈಗಾರಿಕೆಗಳ ನಡುವೆ ಭಾಗೀದಾರಿಕೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದರು.
“ಈ ಸಭೆಯು ಕಳೆದ ವರ್ಷ ವಾರ್ಸಾದಲ್ಲಿ ಕರ್ನಾಟಕದ ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಪೋಲೆಂಡ್ ಉಪಪ್ರಧಾನಿ ನಡುವಿನ ಚರ್ಚೆಗಳು ಹಾಗೂ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಪೋಲೆಂಡ್ ಭಾಗವಹಿಸುವಿಕೆ ಉಭಯ ಪಕ್ಷಗಳ ಸಹಯೋಗದ ಮೇಲೆ ಆಧಾರಿತವಾಗಿದೆ. ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಈ ಬಾರಿಯೂ ಪಾಲ್ಗೊಳ್ಳಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದು, ಇದು ಇನ್ನಷ್ಟು ಹೂಡಿಕೆಗಳು ಮತ್ತು ಸಹಕಾರಕ್ಕೆ ದಾರಿ ಮಾಡಿಕೊಡಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
“ಪೋಲೆಂಡ್ ಪ್ರಧಾನಮಂತ್ರಿಯವರ ಭೇಟಿಯು ಹೂಡಿಕೆ ಪ್ರಸ್ತಾವನೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ನಿಯೋಗದ ಭೇಟಿಯ ನಂತರ ಉಭಯ ಕಡೆಯ ಅಧಿಕಾರಿಗಳು ಮತ್ತು ವ್ಯವಹಾರ ಪ್ರತಿನಿಧಿಗಳು ಇದನ್ನು ಮುಂದುವರಿಸಬಹುದು. ರಾಜ್ಯದಲ್ಲಿ ವಿದೇಶಿ ಹೂಡಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಹೂಡಿಕೆ ಮತ್ತು ಸಾಗರೋತ್ತರ ವ್ಯವಹಾರಗಳ ಪ್ರತ್ಯೇಕ ಇಲಾಖೆಯನ್ನೇ ಪ್ರಾರಂಭಿಸಿರುವುದಾಗಿ” ತಿಳಿಸಿದರು.
ಪೋಲೆಂಡ್ ಪ್ರಧಾನಿ ಎರಡನೇ ಬಾರಿ ಬೆಂಗಳೂರಿಗೆ ಭೇಟಿ: ಹೆಮ್ಮೆಯ ವಿಚಾರ
ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, “ಪೋಲೆಂಡ್ ಪ್ರಧಾನಮಂತ್ರಿಗಳು ಎರಡನೇ ಬಾರಿಗೆ ನಮ್ಮ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದು ನಮ್ಮ ರಾಜ್ಯದ ಉದ್ಯಮಿಗಳು ಹಾಗೂ ಯುವ ನಾಯಕರಿಗೆ ಹೆಮ್ಮೆಯ ವಿಚಾರ. ವ್ಯಾಪಾರಕ್ಕೆ ಇಲ್ಲಿರುವ ಅವಕಾಶಗಳಿಗಾಗಿ ಅವರು ಬಂದಿದ್ದಾರೆ. ಅವರ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ಇದಕ್ಕಾಗಿ ನಾನು ದೆಹಲಿಯಿಂದ ವಾಪಸ್ಸಾಗಿರುವೆ. ಇಲ್ಲಿ ಉದ್ಯಮ ಸ್ಥಾಪನೆಗಾಗಿ ಅವರಿಗೆ ಆಹ್ವಾನ ನೀಡಿದ್ದೇವೆ. ಪೋಲೆಂಡಿನ ಕಂಪನಿಗಳು ಇಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ” ಎಂದು ತಿಳಿಸಿದರು.
“ಕರ್ನಾಟಕ ಹಾಗೂ ಬೆಂಗಳೂರಿಗೆ ವಿದೇಶದ ನಾಯಕರು ಬರುತ್ತಿರುವುದು ನಮ್ಮ ರಾಜ್ಯ ಹೇಗೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿ. ನಾವು ಅನೇಕ ವಿಚಾರ ಚರ್ಚೆ ಮಾಡಲಾಗಿದೆ. ಬಾಹ್ಯಾಕಾಶಕ್ಕೆ ತೆರಳಿದ್ದ ಇಬ್ಬರು ಗಗನಯಾತ್ರಿಗಳ ಪೈಕಿ ಒಬ್ಬರು ಪೋಲೆಂಡ್ ನವರಾಗಿದ್ದರೆ, ಮತ್ತೊಬ್ಬರು ನಮ್ಮವರು. ಸಂಶೋಧನೆ, ಅನ್ವೇಷಣೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ವಿನಿಮಯಕ್ಕೆ ಬದ್ಧರಾಗಿದ್ದೇವೆ. ನಮ್ಮ ರಾಜ್ಯದಲ್ಲಿ ಕೇವಲ ಐಟಿ ಕ್ಷೇತ್ರದ ಜನಸಂಖ್ಯೆಯತ್ತ ಮಾತ್ರ ಗಮನಹರಿಸುತ್ತಿಲ್ಲ. ನಾವು ಈಗ ಎಐ ತಂತ್ರಜ್ಞಾನದತ್ತ ಹೆಚ್ಚು ಗಮನಹರಿಸುತ್ತಿದ್ದೇವೆ” ಎಂದು ಸಿಎಂ ತಿಳಿಸಿದರು.
ಹೂಡಿಕೆ, ವಾಣಿಜ್ಯ ಮತ್ತು ತಂತ್ರಜ್ಞಾನ ಅವಕಾಶಗಳ ಕುರಿತು ಪೋಲೆಂಡ್ ಪ್ರಧಾನಿ ಹಾಗೂ ಸಿಎಂ ಚರ್ಚೆ
ಭಾರತ ಪೋಲೆಂಡ್ ಬಿಸಿನೆಸ್ ಮೀಟಿಂಗ್ಗೂ ಮುನ್ನ ಪೋಲೆಂಡ್ ಪ್ರಧಾನಮಂತ್ರಿ ಡೊನಾಲ್ಡ್ ಟಸ್ಕ್ ಮತ್ತು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಭೇಟಿಯಾಗಿ ಹೂಡಿಕೆ, ವಾಣಿಜ್ಯ ಮತ್ತು ತಂತ್ರಜ್ಞಾನ ಅವಕಾಶಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು.
“ಪೋಲೆಂಡ್-ಭಾರತ ಹೂಡಿಕೆಗೆ ಕರ್ನಾಟಕ ಹೆಬ್ಬಾಗಿಲು”
ಪ್ರಧಾನಮಂತ್ರಿ ಡೊನಾಲ್ಡ್ ಟಸ್ಕ್ ಅವರು ಪೋಲೆಂಡ್ ಮತ್ತು ಭಾರತದ ನಡುವಿನ ಹೂಡಿಕೆಗೆ ಕರ್ನಾಟಕವು ಪ್ರಮುಖ ಹೆಬ್ಬಾಗಿಲಾಗಲಿದೆ ಎಂದು ಒತ್ತಿಹೇಳಿದರು. ಅವರು ಏರೋಸ್ಪೇಸ್ (ಬಹ್ಯಾಕಾಶ), ರಕ್ಷಣೆ ಮತ್ತು ಸುಧಾರಿತ ಉತ್ಪಾದನಾ ವಲಯಗಳಲ್ಲಿ (advanced manufacturing) ಆಸಕ್ತಿ ವ್ಯಕ್ತಪಡಿಸಿದರು ಹಾಗೂ ಹೆಚ್ಚಿನ ಹೂಡಿಕೆಗಳಿಗಾಗಿ ಕರ್ನಾಟಕ ಮತ್ತು ಪೋಲೆಂಡ್ ಈ ನಿರ್ದಿಷ್ಟ ವಲಯಗಳಲ್ಲಿ ಸಹಕರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕದಂತೆಯೇ ಪೋಲೆಂಡ್ ಕೂಡ ಕಿರಿಯ ವಯಸ್ಸಿನ ಕೆಲಸಗಾರರನ್ನು ಹೊಂದಿದ್ದು, ಕರ್ನಾಟಕ ಮತ್ತು ಪೋಲೆಂಡ್ ನಡುವಿನ ಸಹಕಾರವು ಎರಡೂ ಕಡೆಯವರಿಗೆ ಪರಸ್ಪರ ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು.
ಕರ್ನಾಟಕ-ಪೋಲೆಂಡ್ ಸಹಕಾರಕ್ಕೆ ಸಿಎಂ ಒತ್ತು
ಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ತಂತ್ರಜ್ಞಾನ ಪರಿಸರ ವ್ಯವಸ್ಥೆ (technology ecosystem) ಹಾಗೂ ಪೋಲೆಂಡ್ ನ ಸುಧಾರಿತ ಉತ್ಪಾದನೆ, ಕೃತಕ ಬುದ್ಧಿಮತ್ತೆ (AI) ಮತ್ತು ಹಸಿರು ಇಂಧನ (green energy) ವಲಯದ ಪರಿಣತಿಯನ್ನು ಬಳಸಿಕೊಂಡು ಬೆಳೆಯುವ ಬಗ್ಗೆ ಒತ್ತು ನೀಡಿದರು.
ಬೆಂಗಳೂರಿನಲ್ಲಿ ಪೋಲಿಷ್ ಹೂಡಿಕೆಗಳನ್ನು ಉತ್ತೇಜಿಸುವ ಮೂಲಕ ಮತ್ತು ಪೋಲೆಂಡ್ ನಲ್ಲಿ ಅವಕಾಶಗಳನ್ನು ಹುಡುಕುತ್ತಿರುವ ಕರ್ನಾಟಕದ ಕಂಪನಿಗಳಿಗೆ ಬೆಂಬಲ ನೀಡುವ ಮೂಲಕ ಈ ವ್ಯವಹಾರ ಸಂಬಂಧಗಳನ್ನು ಬಲಪಡಿಸಲು ಶ್ರಮಿಸುವುದಾಗಿ ಹೇಳಿದರು. ಇದಲ್ಲದೆ, ಅವರು ಕರ್ನಾಟಕದ ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯ ಬಗ್ಗೆ ಶ್ರೀ ಡೊನಾಲ್ಡ್ ಟಸ್ಕ್ ಅವರಿಗೆ ಮಾಹಿತಿ ನೀಡಿದರು.
ಪೋಲೆಂಡ್ ನಿಯೋಗದಲ್ಲಿ ಭಾರತದಲ್ಲಿನ ಪೋಲೆಂಡ್ ರಾಯಭಾರಿ ನೀತಾ ಭೂಷಣ್; ಪ್ರಧಾನಮಂತ್ರಿ ಕಾರ್ಯಾಲಯ ಹಿರಿಯ ಅಧಿಕಾರಿಗಳು ರಾಜ್ಯ ಕಾರ್ಯದರ್ಶಿ ಹಾಗೂ ಸರ್ಕಾರದ ವಕ್ತಾರ ಆಡಮ್ ಶ್ಲಾಪ್ಕಾ (AdamSzłapka); ಪ್ರಧಾನಮಂತ್ರಿ ಕಾರ್ಯಾಲಯದ ವಿದೇಶಾಂಗ ವ್ಯವಹಾರಗಳ ಇಲಾಖೆಯ ನಿರ್ದೇಶಕಿ ಮಾಲ್ಗೋರ್ಜಾಟಾ ಲಾಟ್ಕಿವಿಚ್-ಪಾವ್ಲಾಕ್ (Ms. Małgorzata Łatkiewicz-Pawlak); ಮತ್ತು ಪ್ರಧಾನಮಂತ್ರಿ ಕಚೇರಿಯ ಸಲಹೆಗಾರ್ತಿ ಬೀಟಾ ಟುರ್ಸ್ಕಾ (Ms. Beata Turska) ಭಾಗವಹಿಸಿದ್ದರು.
ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಕ್ಕೆ ಪ್ರಧಾನಿಗಳು ಆ ಸ್ಥಾನದಲ್ಲಿ ಕೂತಿದ್ದಾರೆ: ಸಿಎಂ ಡಿ.ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್,23,2026 (www.justkannada.in): “ಕಾಂಗ್ರೆಸ್ ಪಕ್ಷ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿರುವುದರಿಂದಲೇ  ಇಂದು ಪ್ರಧಾನಮಂತ್ರಿಗಳು ಆ ಸ್ಥಾನದಲ್ಲಿ ಕೂತಿದ್ದಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ತಾಜ್ ವೆಸ್ಟ್ ಎಂಡ್ ನಲ್ಲಿ ಮಾಧ್ಯಮಗಳ  ಜೊತೆ ಮಾತನಾಡಿದ ಸಿಎಂ ಡಿಕೆ  ಶಿವಕುಮಾರ್, ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮೇಲೆತ್ತಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಟೀಕೆ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಕಾಂಗ್ರೆಸ್ ಇಲ್ಲವಾಗಿದ್ದರೆ ಈ ದೇಶ ಪ್ರಜಾಪ್ರಭುತ್ವ ವ್ಯವಸ್ಥೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ವಿಚಾರ ಪ್ರಧಾನಮಂತ್ರಿಗಳಿಗೂ ಗೊತ್ತು. ನಾವು ನಮ್ಮ ಮೂಲ ಮರೆಯಬಾರದು. ನಮ್ಮ ಮೂಲವನ್ನು ಮರೆತರೆ ನಾವು ಯಶಸ್ವಿಯಾಗುವುದಿಲ್ಲ” ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ಇಡೀ ವಿಶ್ವ ಎದುರು ನೋಡುತ್ತಿರುವ ನಾಯಕ
ರಾಹುಲ್ ಗಾಂಧಿ ಅವರು ಪದೇ ಪದೆ ವಿದೇಶಕ್ಕೆ ಹೋಗಿ ಬರುತ್ತಿರುವುದರ ಬಗ್ಗೆ ಬಿಜೆಪಿ ಎತ್ತಿರುವ ಪ್ರಶ್ನೆಗಳ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರು. ಅನೇಕ ವಿದೇಶದ ನಾಯಕರು, ವಿಶ್ವವಿದ್ಯಾಲಯಗಳು ರಾಹುಲ್ ಗಾಂಧಿ ಅವರಿಗೆ ಆಮಂತ್ರಣ ನೀಡುತ್ತಾರೆ. ರಾಹುಲ್ ಗಾಂಧಿ ಅವರು ಇಡೀ ವಿಶ್ವ ಎದುರು ನೋಡುತ್ತಿರುವ ನಾಯಕ” ಎಂದು ತಿಳಿಸಿದರು.
ಕಾನೂನು ಶಿಕ್ಷಣದ ಮೂಲಸೌಕರ್ಯ ವಿಸ್ತರಣೆಗೆ ರಾಜ್ಯ ಸರ್ಕಾರ ಬದ್ಧ: ಸಿಎಂ ಡಿ.ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್,17,2026 (www.justkannada.in):  “ಕಾನೂನು ಶಿಕ್ಷಣ ಮತ್ತು ಸಾಂಸ್ಥಿಕ ಮೂಲಸೌಕರ್ಯಗಳನ್ನು ಬಲಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ರಾಷ್ಟ್ರೀಯ ಕಾನೂನು ಶಾಲೆ (ಎನ್ಎಲ್ಎಸ್ಐಯು) ಕ್ಯಾಂಪಸ್ ವಿಸ್ತರಣೆಗೆ ಸಂಪೂರ್ಣ ನೆರವು ನೀಡಲಾಗುವುದು” ಎಂದು ಸಿಎಂ ಡಿ. ಕೆ ಶಿವಕುಮಾರ್ ಅವರು ಭರವಸೆ ನೀಡಿದರು.
ನಾಗರಭಾವಿಯಲ್ಲಿರುವ ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (NLSIU) ದ ದಕ್ಷಿಣ ಬ್ಲಾಕ್‌, ಸಭಾಂಗಣ ಹಾಗೂ ವಿದ್ಯಾರ್ಥಿ ಕೇಂದ್ರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು.
“ನ್ಯಾಷನಲ್ ಲಾ ಸ್ಕೂಲ್ ಸ್ಥಾಪನೆಯಲ್ಲಿ ಕರ್ನಾಟಕ ನೇತೃತ್ವ ವಹಿಸಿರುವುದಕ್ಕೆ ನನಗೆ ಹೆಮ್ಮೆಯಿದೆ. ತಮ್ಮ ವಿದ್ಯಾರ್ಥಿ ನಾಯಕತ್ವದ ದಿನಗಳಲ್ಲಿ ಈ ಸಂಸ್ಥೆಯ ಪ್ರಾರಂಭವನ್ನು ದೇಶಾದ್ಯಂತ ಅಪಾರ ಉತ್ಸಾಹದೊಂದಿಗೆ ಸಂಭ್ರಮಿಸಿದ್ದೆವು. ಈ ಪ್ರತಿಷ್ಠಿತ ಸಂಸ್ಥೆಯನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಸರ್ಕಾರ ಸದಾ ಸಿದ್ಧವಾಗಿದೆ” ಎಂದು ತಿಳಿಸಿದರು.
ಜಮೀನು ಮಂಜೂರಾತಿ, ಆರ್ಥಿಕ ನೆರವಿನ ಭರವಸೆ
“ಕ್ಯಾಂಪಸ್ ಮೂಲಸೌಕರ್ಯಗಳ ಅಗತ್ಯಗಳಿಗೆ ಭೂಮಿಯ ಕೊರತೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. 7 ಎಕರೆ ಆಗಿರಲಿ ಅಥವಾ 10 ಎಕರೆ ಆಗಿರಲಿ, ನಿಮಗೆ ಏನು ಅಗತ್ಯವಿದೆಯೋ ಅದನ್ನು ನೀಡಲು ಸರ್ಕಾರ ಬದ್ಧವಾಗಿದೆ. ಜಮೀನು ಮಂಜೂರಾತಿ ಹಾಗೂ ಆರ್ಥಿಕ ನೆರವು ಎರಡನ್ನೂ ಒದಗಿಸಲಾಗುವುದು” ಎಂದು ಅಭಯ ನೀಡಿದರು.
ಕುಲಪತಿಗಳು ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿಗಳು, “ಸಂಸ್ಥೆಯ ಈ ಮೂಲಸೌಕರ್ಯ ವಿಸ್ತರಣೆಯು ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತವನ್ನು ಎತ್ತಿಹಿಡಿಯುವ ಭವಿಷ್ಯದ ನಾಯಕರನ್ನು ರೂಪಿಸಲು ನೆರವಾಗಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಿನ ಬಜೆಟ್ ನಲ್ಲಿ ಅನುದಾನ: ಸಿಎಂ ಡಿ.ಕೆ ಶಿವಕುಮಾರ್
ಮಂಡ್ಯ, ಅಕ್ಟೋಬರ್,17,2026 (www.justkannada.in): “ಮುಂದಿನ ಬಜೆಟ್ ನಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಸೂಕ್ತ ಅನುದಾನ ಮೀಸಲಿಡಲಾಗುವುದು. ಅರಣ್ಯ ಇಲಾಖೆಗೆ ಸೇರಿದ 5000 ಹೆಕ್ಟೇರ್  ಭೂಮಿಗೆ ಪರ್ಯಾಯ ಭೂಮಿಯನ್ನು ಒದಗಿಸಲು ಈಗಾಗಲೇ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಭೂಮಿ ಪೂಜೆಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಕೆಆರ್ ಎಸ್ ನ ಬೃಂದಾವನ ಉದ್ಯಾನದಲ್ಲಿ ನಡೆದ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಿಎಂ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದರು.
“ಕಾವೇರಿ ಆರತಿಯು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು, ಉಪಕಾರ ಸ್ಮರಣೆ ಮಾಡಲು ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ತಾಯಿ ಜನ್ಮ ನೀಡಿದರೆ ಕಾವೇರಿ ತಾಯಿ ಅನ್ನ ನೀಡುತ್ತಿದ್ದಾಳೆ. ಕಾವೇರಿ ತಾಯಿಯ ಮಡಿಲಲ್ಲಿ ಮಗು ಬೆಳೆದರೆ, ಇಡೀ ಕರುನಾಡು ಬೆಳೆಯುತ್ತದೆ. ನಾವು ಕಾವೇರಿಯ ಅಭಿವೃದ್ಧಿಗೆ, ಪ್ರತಿ ಹನಿ ಉಳಿಸಲು ಹೋರಾಟ ಮಾಡಿಕೊಂಡು ಬಂದಿದ್ದೇವೆ” ಎಂದರು.
“ಕಾವೇರಿ ನಮ್ಮ ಸಂಸ್ಕೃತಿ, ಪ್ರಕೃತಿ ಹಾಗೂ ನಮ್ಮ ಬದುಕಿನ ದೊಡ್ಡ ಶಕ್ತಿ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ನೀರು ಉಳಿದರೆ ನಾಡು ಉಳಿಯುತ್ತದೆ. ಕಾವೇರಿ ಉಳಿದರೆ ಕರುನಾಡು ಉಳಿಯುತ್ತದೆ ಎಂದು ನಾವೆಲ್ಲ ಒಪ್ಪಿಕೊಂಡಿದ್ದೇವೆ” ಎಂದು ಹೇಳಿದರು.
ಕಾವೇರಿ ಸಮೃದ್ಧಿಯ ಸಂಕೇತ
“ಚಾಮುಂಡೇಶ್ವರಿ ಶಕ್ತಿಯ ಸಂಕೇತವಾದರೆ ಕಾವೇರಿ ಸಮೃದ್ಧಿಯ  ಸಂಕೇತ. ನಮ್ಮ ನಾಡಿನ ಸಂಸ್ಕೃತಿಗೆ  ನಮನ ಸಲ್ಲಿಸಲು ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮುಂದಿನ ದಿನಗಳಲ್ಲಿಯೂ ಎಲ್ಲಾ ಸರ್ಕಾರಗಳು, ಸಾರ್ವಜನಿಕರು,  ಇಲಾಖೆಗಳು  ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು” ಎಂದರು.
“ಜಲ ಎಲ್ಲರ ಜೀವ. ಜೀವ ಜಲಕ್ಕೆ ನಮನ ಸಲ್ಲಿಸುವ ಕೆಲಸವನ್ನು ಮಾಡಬೇಕು, ಉಪಕಾರ ಸ್ಮರಣೆ ಸಲ್ಲಿಸಬೇಕು. ಕಾವೇರಿ  ಹುಟ್ಟಿ, ಸಮುದ್ರ ಸೇರುವವರೆಗೂ ಅದೆಷ್ಟೋ ನಗರ, ಜನರು ಉದ್ಯಮಗಳಿಗೆ ರಕ್ಷಣೆಯಾಗಿದೆ” ಎಂದು ತಿಳಿಸಿದರು.
“ಕನ್ನಂಬಾಡಿ ಕಟ್ಟೆ 347 ಕಿ.ಮೀ ಉದ್ದ,  37147 ಎಕರೆ ಭೂಮಿಗೆ ನೀರಾವರಿಯು ಒದಗಿಸುತ್ತಿದೆ. ಹಿಂದೆ ನಾನು ಜಲ ಸಂಪನ್ಮೂಲ ಸಚಿವನಾದ್ದ ಸಂದರ್ಭದಲ್ಲಿ ಮಂಡ್ಯ ಹಾಗೂ ಮೈಸೂರು ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿ ಅಳತೆ ಮಾಡುವ ಕೆಲಸವನ್ನು ವಹಿಸಲಾಗಿತ್ತು. ಈಗಾಗಲೇ ಇದರ ಗುರುತನ್ನು ಕೂಡ ಮಾಡಲಾಗಿದೆ. ಕಳೆದ ವರ್ಷ 341 ಟಿಎಂಸಿ ನೀರು ಸಮುದ್ರದ ಪಾಲಾಯಿತು. 177 ಟಿಎಂಸಿ ತಮಿಳುನಾಡಿಗೆ ಹರಿಸಬೇಕಿತ್ತು . ಈ ವರ್ಷ  ದೇಶದಲ್ಲಿ ಭೀಕರ ಬರಗಾಲ ಎದುರಾಗಿದೆ ರಾಜ್ಯದಲ್ಲಿ ಕೃಷ್ಣ ಅಣೆಕಟ್ಟು ಬಿಟ್ಟರೆ ಬೇರೆ ಯಾವ ಅಣೆಕಟ್ಟು ತುಂಬಿಲ್ಲ” ಎಂದರು.
ಅಣೆಕಟ್ಟಿನ ಹೂಳು ತೆಗೆಸಲಾಗುವುದು
“ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಆಂಧ್ರಪ್ರದೇಶ ತೆಲಂಗಾಣ ಹಾಗೂ ನಾನು ಸೇರಿ ಭೇಟಿ ಮಾಡಿದ ಸಂದರ್ಭದಲ್ಲಿ  ಕಾವೇರಿ ಮತ್ತು ತುಂಗಭದ್ರ ಜಲಾಶಯಗಳಿಂದ ಹೂಳು ತೆಗೆಯಲು ಟೆಂಡರ್ ಕರೆಯಲು ಸೂಚಿಸಿದ್ದಾರೆ.ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಈಗಾಗಲೇ ಹೂಳು ತೆಗೆಯುವ ಕಾರ್ಯಕ್ರಮ ಪ್ರಾರಂಭವಾಗಿದ್ದು, ಡ್ರಜ್ಜಿಂಗ್ ಮೆಶೀನ್ ತರಿಸಿ ಹೂಳು ತೆಗೆಸಿ, ಮರಳು ಹಾಗೂ ಮಣ್ಣನ್ನು ರೈತರಿಗೆ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ನಾನು ಹಾಗೂ ನೀರಾವರಿ ಸಚಿವರು ತೆಲಂಗಾಣಕ್ಕೆ ಭೇಟಿ ನೀಡಿ ಈ ಯೋಜನೆಯನ್ನು ವೀಕ್ಷಿಸಿ ನೀರು ವ್ಯರ್ಥವಾಗದಂತೆ ಪ್ರಯತ್ನ ಮಾಡಲಾಗುವುದು” ಎಂದರು.
ಪರಂಪರೆ ಕಾಪಾಡಲು ಕಾವೇರಿ ಆರತಿ ಕಾರ್ಯಕ್ರಮ
“ಕಳೆದ ವರ್ಷ ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ ಹಲವಾರು ಟೀಕೆಗಳು ವ್ಯಕ್ತವಾಯಿತು. ಕೆಲವರು ನ್ಯಾಯಾಲಯಕ್ಕೂ ಹೋದರು. ಕಾವೇರಿ ಆರತಿ ಯೋಜನೆ ಅಡಿ 100 ಕೋಟಿ ಹಣವನ್ನು ಮೀಸಲಿಟ್ಟು, ಕೆಳ ಭಾಗದಲ್ಲಿ ತೆರೆದ ಸ್ಟೇಡಿಯಂ ನಿರ್ಮಿಸಿ ಪ್ರತಿ ವಾರ ಆರತಿ ನಡೆದು ಜನರಿಗೆ ಧಾರ್ಮಿಕ ಶ್ರದ್ಧೆ ಮೂಡಿಸಲು, ಪರಂಪರೆ ಕಾಪಾಡಲು ಪ್ರಯತ್ನಿಸಲಾಯಿತು.” ಎಂದರು
ಟೀಕೆಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ
“ನಾನು ಟೀಕೆಗಳನ್ನು ಸ್ವಾಗತಿಸುವವನು. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂದು ನಂಬಿರುವವನು . ರಾಜಕಾರಣ ಮಾಡುವವರಿಗೆ ವೈರಿಗಳು ಇರಬೇಕು, ಟೀಕೆ ಮಾಡುವವರೂ ಇರಬೇಕು. ವೈರಿಗಳು ಇಲ್ಲದಿದ್ದರೆ ಎಚ್ಚರಿಕೆಯಿಂದ ಬದುಕು ಮತ್ತು ಆಳ್ವಿಕೆಯನ್ನು ನಡೆಸಲು ಸಾಧ್ಯವಿಲ್ಲ. ಟೀಕೆ, ಅವಹೇಳನಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಬದುಕಿನಲ್ಲಿ ನನಗೆ ಕಷ್ಟವೂ, ಗೊತ್ತು ಸುಖವು ಗೊತ್ತು. ರಾಜ್ಯದ ಜನತೆಗೆ ಸೇವೆ ಮಾಡಲು ರಾಜ್ಯದ ಜನತೆ ನನ್ನ ಹಾಗೂ ಸಿದ್ದರಾಮಯ್ಯನವರ ನಾಯಕತ್ವದಲ್ಲಿ 136 ಸ್ಥಾನಗಳನ್ನು ಕೊಟ್ಟು ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿದ್ದಾರೆ” ಎಂದರು.
ರಾಜ್ಯದ ಅಭಿವೃದ್ಧಿಯನ್ನು ವಿರೋಧಿಸುವವರಿಗೆ ಕಾವೇರಿ ಸದ್ಬುದ್ಧಿ ಕೊಡಲಿ
“ರಾಜ್ಯದ ಅಭಿವೃದ್ಧಿಯನ್ನು  ವಿರೋಧ ಮಾಡುವವರಿಗೆ ಕಾವೇರಿ ತಾಯಿ ಸದ್ಬುದ್ಧಿಯನ್ನು ಕೊಡಲಿ” ಎಂದರು.
ಎಷ್ಟು ಉಳಿ ಏಟು ಬಿದ್ದರೂ ಈ ಕಲ್ಲು ಜಗ್ಗಲು ಸಾಧ್ಯವಿಲ್ಲ
“ಹಿಂದೆ ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳು 45 ಸಾವಿರ ಕೋಟಿ ರೂ.ಗಳಷ್ಟು  ಸಾಲ ಮನ್ನಾ ಮಾಡಿದ್ದರು. ನಾನು  ಗ್ಯಾರಂಟಿ ಯೋಜನೆಗಳ ಅಡಿ ಇದುವರೆಗೂ 160 ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಕೊಟ್ಟು, ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತರಲಾಗಿದೆ. ಟೀಕೆ ಮಾಡುವವರು ಮಾಡಲಿ,  ಅಸೂಯೆ ಪಡುವವರು ಪಟ್ಟುಕೊಳ್ಳಲಿ. ನನ್ನನ್ನು ಕೆಲವರು ಕನಕಪುರದ ಬಂಡೆ ಎಂದು ಕರೆಯುತ್ತಾರೆ.  ಬಂಡೆ ಪ್ರಕೃತಿ, ಅದನ್ನು ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕೆತ್ತನೆ ಮಾಡಿ ದೇವಿಯನ್ನು ರೂಪಿಸಿರುವುದಕ್ಕೆ ಪೂಜೆ  ಮಾಡಲು ಸಾಧ್ಯವಾಗಿದೆ. ಎಷ್ಟು ಉಳಿ ಏಟು ಬಿದ್ದರೂ ಈ ಕಲ್ಲು ಜಗಲು ಸಾಧ್ಯವಿಲ್ಲ. ರಾಜ್ಯದ ಜನರ ಋಣವನ್ನು ತೀರಿಸಲು ಕಂಕಣಬದ್ಧನಾಗಿದ್ದೇನೆ. ಶಪಥ, ಸಂಕಲ್ಪವನ್ನು ಮಾಡಿದ್ದೇನೆ. ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಪಾದಯಾತ್ರೆ ಕೈಗೊಂಡಾಗ ಅನೇಕರು ಇದು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಎಲ್ಲರ ಪ್ರಾರ್ಥನೆಯಿಂದ ನಮ್ಮ ಅ ವಧಿಯಲ್ಲಿಯೇ ಸುಪ್ರೀಂ ಕೋರ್ಟ್ ಅಣೆಕಟ್ಟು ಕಟ್ಟಲು  ಅನುಮತಿಯನ್ನು ಕೊಟ್ಟಿದೆ” ಎಂದರು
ಕಟ್ಟಕಡೆಯ  ರೈತನಿಗೆ ನೀರು ಒದಗಿಸಲಾಗುತ್ತಿದೆ
“ನಮ್ಮ ವಿಚಾರಗಳು ಜನರ ಬದುಕಿಗೋಸ್ಕರವಾಗಿದೆ. ಇಡೀ ವಿಶ್ವ ಇಂದು ಬೆಂಗಳೂರಿನತ್ತ ನೋಡುತ್ತಿದ್ದು ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುತ್ತಿದ್ದೇವೆ. ಈಗ 6 ನೇ ಹಂತವನ್ನು ತಲುಪಿದೆ. ರೈತರಿಗೆ ನೀರು ಕೊಡಲು ಕಿಂಚಿತ್ತು ಸಮಸ್ಯೆಯಾಗದಂತೆ ಕಟ್ಟ ಕಡೆಯ ರೈತನಿಗೆ ನೀರು ಒದಗಿಸಿಕೊಂಡು ಬರುತ್ತಿದ್ದೇವೆ” ಎಂದರು.
“ಕಾವೇರಿಗೆ ಆರತಿ ಬೆಳಗುತ್ತಿರುವುದು ನಮ್ಮ ಪುಣ್ಯ. ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕೂಡ ಎಲ್ಲರ ಭಾಗ್ಯ”ಎಂದು ಹೇಳಿದರು
ಕಾವೇರಿ ಆರತಿ ಕರ್ನಾಟಕಕ್ಕೆ ಕೀರ್ತಿ
“ಮೈಸೂರಿನ ಶಕ್ತಿ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಲು ಆರಾಧನೆ ನಡೆಸುತ್ತಿದ್ದೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ 3.87 ಕೋಟಿ  ಜನರಿಗೆ ಬದುಕು ನೀಡಿದೆ. ಕಾವೇರಿ ಆರತಿ ಕರ್ನಾಟಕಕ್ಕೆ ಕೀರ್ತಿ. ಮನುಷ್ಯತ್ವವನ್ನು ರಕ್ಷಣೆ ಮಾಡಲು ನಾವೆಲ್ಲರೂ ಸೇರಿದ್ದೇವೆ. ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಭಗವಂತನಲ್ಲಿ ಪ್ರಾರ್ಥನೆ ಮಾಡಿರುವ ಫಲವಾಗಿ ಕಾವೇರಿ ತುಂಬಿ ರಾಜ್ಯಕ್ಕೆ ಶಕ್ತಿ ಕೊಡಲಿ. ಕೊಡಗಿನಲ್ಲಿ ಕಾವೇರಿ ಹುಟ್ಟಿ ಸಮುದ್ರ ಸೇರುವವರೆಗೆ ಲಕ್ಷಾಂತರ ಜನರಿಗೆ ಬದುಕು ನೀಡುತ್ತಿದ್ದಾಳೆ. ಕಾವೇರಿ ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿದೆ” ಎಂದರು.
Key words: Funds, construction, Mekedatu dam, upcoming budget, CM D.K. Shivakumar
ಪ್ರತಿಯೊಬ್ಬರ ಮತದಾನದ ಹಕ್ಕನ್ನು ಉಳಿಸುವುದು ನಮ್ಮ ಸಂಕಲ್ಪ: ಸಿಎಂ ಡಿ ಕೆ ಶಿವಕುಮಾರ್
ಮೈಸೂರು, ಅ.11,2026 (www.justkannada.in): “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಪ್ರತಿಯೊಬ್ಬ ನಾಗರಿಕರ ಹಕ್ಕು. ಈ ಮತದಾನದ ಹಕ್ಕನ್ನು ಯಾರೂ ಕಳೆದುಕೊಳ್ಳಬಾರದು. ಎಲ್ಲವನ್ನು ಉಳಿಸಬೇಕು ಎನ್ನುವುದು ನಮ್ಮ ಸರ್ಕಾರದ ಸಂಕಲ್ಪ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಮೈಸೂರಿನ ಕುಪ್ಪಣ್ಣ ಪಾರ್ಕ್ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.
“ಈಗಾಗಲೇ ಕೆಲವರು ದೇಶದ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ದೊಡ್ಡ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ ಎನ್ನುವುದು ದೇಶದ ಪ್ರತಿಯೊಬ್ಬ ಪ್ರಜೆಯ ಅರಿವಿಗೆ ಬಂದಿದೆ. ಹೀಗಾಗಿ ದೇಶಕ್ಕೆ ದೇಶವೇ ಹೋರಾಟ ಮಾಡುತ್ತಿದೆ” ಎಂದು ಹೇಳಿದರು.
“ಈ ಹೋರಾಟ ಕಾಂಗ್ರೆಸ್ ಪಕ್ಷದ್ದು, ಸರ್ಕಾರದ್ದು ಅಂತಲ್ಲ. ನಮ್ಮದು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಹಾಗೂ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸಿದ ಪಕ್ಷ. ಹೀಗಾಗಿ, ದೇಶದ ಪ್ರತಿಯೊಬ್ಬ ಪ್ರಜೆಯ ಮತದಾನದ ಹಕ್ಕನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದೇ ಭಾವಿಸಿದ್ದೇವೆ” ಎಂದರು.
“ಪ್ರಜಾಪ್ರಭುತ್ವದ ಮೂಲ ಭಾರತ. ಪ್ರಜಾಪ್ರಭುತ್ವಕ್ಕೆ ನಾಲ್ಕು ಸ್ತಂಭಗಳು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕೆ- ಮಾಧ್ಯಮ. ಈ ಆಧಾರ ಸ್ತಂಭಗಳನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಹಿಂದೆ ರಾಜರಿದ್ದರು. ಈಗ ನಾವು ಜನರ ಪ್ರತಿನಿಧಿಗಳಾಗಿದ್ದೇವೆ. ಈಗಾಗಲೇ 150 ಕ್ಕೂ ಹೆಚ್ಚು ನಿವೃತ್ತ ಐಎಎಸ್ ಅಧಿಕಾರಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಮೊನ್ನೆಯಿಂದಲೇ ದೆಹಲಿಗೆ ಯಾರೂ ಕೂಡ ಕಾಲಿಡಬಾರದು ಎಂದು ಎಲ್ಲಾ ರೀತಿಯಿಂದಲೂ ನಿರ್ಬಂಧ ಹೇರಲಾಗಿದೆ. ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹೀಗಾಗಿ, ಸೋಮವಾರದಂದು ನಮ್ಮ ಪಕ್ಷದ ಎಲ್ಲಾ ಹಿರಿಯ ನಾಯಕರು, ಸಂಸತ್ ಸದಸ್ಯರು, ಸಚಿವರು, ಶಾಸಕರು ಎಲ್ಲರೂ ಸೇರಿ ಹೋರಾಟ ಹಮ್ಮಿಕೊಡಿದ್ದೇವೆ. ಅದರಲ್ಲಿ ನಾನೂ ಕೂಡ ಪಾಲ್ಗೊಳ್ಳಲಿದ್ದೇನೆ” ಎಂದರು.
“ಕೊಪ್ಪಳದ ಗವಿಮಠದ ಶ್ರೀಗಳು ಹೇಳಿದಂತೆ ಎಲ್ಲಾ ಪವರ್ ಗಳಿಗಿಂತ ನಮ್ಮ ಈ ಚಾಮುಂಡಿ ತಾಯಿಯ ಪವರ್ ಬಹಳ ಶಕ್ತಿಶಾಲಿಯಾಗಿದೆ. ಆಕೆ ನಮ್ಮನ್ನು ಕಾಪಾಡುತ್ತಾಳೆ. ನಾವು ಪವಿತ್ರವಾದ ಸ್ಥಳದಲ್ಲಿ ನಿಂತಿದ್ದೇವೆ” ಎಂದರು.
ಹೋಟೆಲ್ ಒಂದರಲ್ಲಿ ಸ್ಟಿಂಗ್ ಆಪರೇಷನ್ ನಡೆಸಿದ ವ್ಯಕ್ತಿ ಹೆಸರನ್ನು ಮುಖ್ಯಮಂತ್ರಿಗಳು ಬಹಿರಂಗ ಪಡಿಸಲಿ ಎಂದು ಕುಮಾರಸ್ವಾಮಿ ಹಾಕಿದ ಸವಾಲಿನ ಬಗ್ಗೆ ಕೇಳಿದಾಗ, “ಅದಕ್ಕೆಲ್ಲಾ ಕಾಲವೇ ಉತ್ತರ ನೀಡುತ್ತದೆ” ಎಂದರು.
Key words: Safeguarding, everyone’s, right , vote, is, our resolve, CM D.K. Shivakumar
ಶಕ್ತಿ, ಅರಿವು, ಸಂಸ್ಕೃತಿ, ಸಮಾನತೆಯ ಸಂಗಮ‌ ಮೈಸೂರು ದಸರಾ: ಸಿಎಂ ಡಿ.ಕೆ.ಶಿವಕುಮಾರ್ ಬಣ್ಣನೆ
ಮೈಸೂರು, ಅಕ್ಟೋಬರ್,11,2026 (www.justkannada.in): ಮೈಸೂರು ದಸರಾ ಶಕ್ತಿ, ಅರಿವು, ಸಂಸ್ಕೃತಿ ಮತ್ತು ಸಮಾನತೆಯ ನಾಲ್ಕು ಜ್ಯೋತಿಗಳ ಸಂಗಮ. ಶಕ್ತಿಯಿಂದ ಸಾಧನೆ, ಅರಿವಿನಿಂದ ಅಭಿವೃದ್ಧಿ, ಸಂಸ್ಕೃತಿಯಿಂದ ಸಮಾನತೆ, ಸಮಾನತೆಯಿಂದ ಶಾಂತಿ ಸಾಧ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ನಡೆದ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
“ಅಜ್ಞಾನದ ಮುಳ್ಳನ್ನು ಜ್ಞಾನದ ಮುಳ್ಳಿನಿಂದ ತೆಗೆಯುವುದು ಅಕ್ಷರ. ಅಧರ್ಮದ ಮುಳ್ಳನ್ನು ಧರ್ಮದ ಮುಳ್ಳಿನಿಂದ ತೆಗೆಯುವುದು ದಸರಾ. ದೇವರನ್ನು ದೇವಸ್ಥಾನದಲ್ಲಿ ಕಾಣುವುದು ಭಕ್ತಿಯಾದರೆ, ದೇವರನ್ನು ಮನುಷ್ಯನಲ್ಲಿ ಕಾಣುವುದು ಮಾನವೀಯತೆ” ಎಂದು  ಹೇಳಿದರು.
ಮೈಸೂರಿನ ಮೂಲಕ ಭಾರತ ನೋಡಲಾಗುತ್ತಿದೆ
“ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ದಸರಾ ಪರಿವರ್ತನೆಯಾಗಿದೆ. ಈಗ ನಡೆಯುತ್ತಿರುವುದು ಪ್ರಜಾ ದರ್ಬಾರಿನ ದಸರಾ. ಪ್ರಜಾಪ್ರಭುತ್ವದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುತ್ತಿದ್ದೇವೆ. ದಸರಾ ಹಬ್ಬದ ಸಂಭ್ರಮ ಮೈಸೂರಿಗೆ ಮಾತ್ರ ಸೀಮಿತವಾಗದೆ ಇಡೀ ರಾಜ್ಯಕ್ಕೆ ಹರಡಿಕೊಂಡಿದೆ. ಮುಂದಿನ 11 ದಿನಗಳ ಕಾಲ ಮೈಸೂರಿನ ಮೂಲಕ ಭಾರತವನ್ನು ನೋಡಲಾಗುತ್ತದೆ. ಭಾರತೀಯ ಪರಂಪರೆಗೆ ಕನ್ನಡಿ ಹಿಡಿಯುವ ಈ ಮಹೋತ್ಸವ ನಾಡಿನ ಹೆಮ್ಮೆಯ ಸಂಕೇತವಾಗಿದೆ” ಎಂದರು.
ವಿಜಯನಗರದಿಂದ ಮೈಸೂರು ಒಡೆಯರವರೆಗೆ ಸಾಂಸ್ಕೃತಿಕ ಪಯಣ
“ವಿಜಯನಗರದ ಅರಸರು ಆರಂಭಿಸಿದ ದಸರಾ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿ, ಅದರ ಸಾಂಸ್ಕೃತಿಕ ದೀಪ ಆರದಂತೆ ಕಾಪಾಡಿದರು. ಅರಸರು ದಸರಾವನ್ನು ಕೇವಲ ಪೂಜೆ ಮತ್ತು ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸದೆ, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ವೇದಿಕೆಯನ್ನಾಗಿ ರೂಪಿಸಿದರು” ಎಂದು ಸ್ಮರಿಸಿದರು.
“ವಿಜಯನಗರದ ಅರಸರ ಕಾಲದಲ್ಲಿ ಕೋಣಗಳನ್ನು ದಸರೆಗೆ ಕರೆತರುವ ಪರಂಪರೆಯಿತ್ತು. ಆ ಪರಂಪರೆಯ ಸಾಂಸ್ಕೃತಿಕ ನೆನಪನ್ನು ಈ ವರ್ಷ ಕಂಬಳದ ಮೂಲಕ ಮುಂದುವರಿಸಲಾಗಿದೆ. ಟೀಕೆಗಳನ್ನು ಎದುರಿಸಿ ಇದನ್ನು ನಡೆಸಲಾಗುತ್ತಿದೆ” ಎಂದರು.
“ಮುಖ್ಯಮಂತ್ರಿಯಾಗಿ ನಾಡಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ತಮ್ಮ ಬದುಕಿನ ಸ್ಮರಣೀಯ ದಿನ ಹಾಗೂ ಹೊಸ ಅಧ್ಯಾಯ ಎಂದು ಬಣ್ಣಿಸಿದ ಅವರು, ತಾಯಿ ಚಾಮುಂಡೇಶ್ವರಿ ಮತ್ತು ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿದರು. ನಾಲ್ಕು ಶತಮಾನಗಳಿಗೂ ಹಿಂದಿನ ಪರಂಪರೆಯನ್ನು ಹೊತ್ತ ದಸರಾ ಕಾಲಕ್ಕೆ ತಕ್ಕಂತೆ ರೂಪಾಂತರಗೊಂಡು, ನಾಡಿನ ಜನರೆಲ್ಲರೂ ಒಗ್ಗೂಡುವ ಉತ್ಸವವಾಗಿ ಬೆಳೆದಿದೆ ಎಂದರು.
ಕಲೆ, ಸಂಸ್ಕೃತಿಯ ಜೀವಂತ ವೇದಿಕೆ
“ಡೊಳ್ಳು, ತಮಟೆ, ನಗಾರಿ, ವೀರಗಾಸೆ, ಕೋಲಾಟ ಮತ್ತು ಯಕ್ಷಗಾನದಂತಹ ಕಲಾಪ್ರಕಾರಗಳು ಕರ್ನಾಟಕದ ಸಂಸ್ಕೃತಿಯನ್ನು ಜೀವಂತವಾಗಿಟ್ಟಿವೆ. ಸಾವಿರಾರು ರಂಗಭೂಮಿ ಕಲಾವಿದರು, ಹಾಡುಗಾರರು ಮತ್ತು ಸಂಗೀತಗಾರರು ತಮ್ಮ ಪರಿಶ್ರಮದಿಂದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇಂತಹ ಕಲಾವಿದರಿಗೆ ದಸರಾ ದೊಡ್ಡ ವೇದಿಕೆಯಾಗಿದ್ದು, ಅವರ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಕಲ್ಪಿಸುತ್ತದೆ” ಎಂದು ಹೇಳಿದರು.
ಮತ್ತು ಪ್ರವಾಸಿಗನಿಗೆ ಮರೆಯಲಾಗದ ಅನುಭವ. ಮೈಸೂರು ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಮತ್ತೊಮ್ಮೆ ಕಂಡುಕೊಳ್ಳುವ ಸಂದರ್ಭವೂ ಹೌದು. ಮೈಸೂರಿನ ಸಂಸ್ಕೃತಿ ಒಬ್ಬರಿಂದ ರೂಪುಗೊಂಡದ್ದಲ್ಲ; ರಾಜರು, ಕಲಾವಿದರು, ಕುಶಲಕರ್ಮಿಗಳು, ಸಂಗೀತಗಾರರು, ಶಿಕ್ಷಕರು ಮತ್ತು ವ್ಯಾಪಾರಿಗಳು ಸೇರಿದಂತೆ ಅನೇಕ ತಲೆಮಾರುಗಳ ಜನರ ಬೆವರಿನ ಫಲವಾಗಿದೆ” ಎಂದು ವಿವರಿಸಿದರು.
ನಂಬಿಕೆಯೂ ಅದರ ಪ್ರಮುಖ ಆಸ್ತಿಯಾಗಿದೆ. ಕೆಲವು ನಗರಗಳು ಯುದ್ಧ ಮತ್ತು ಹೋರಾಟಗಳಿಂದ ಬೆಳೆದರೆ, ಮೈಸೂರು ತನ್ನ ಸಂಸ್ಕೃತಿಯಿಂದ ಬೆಳೆದ ನಗರ” ಎಂದು ಹೇಳಿದರು.
‘ಬ್ರ್ಯಾಂಡ್ ಮೈಸೂರು’ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ
“ಮೈಸೂರು ರೇಷ್ಮೆ, ಶ್ರೀಗಂಧ, ಚಿತ್ರಕಲೆ, ಸಂಗೀತ ಸೇರಿದಂತೆ ಇಲ್ಲಿನ ವೈಶಿಷ್ಟ್ಯಗಳು ನಾಡಿನ ಸಾಂಸ್ಕೃತಿಕ ಗುರುತನ್ನು ರೂಪಿಸಿವೆ. ರೇಷ್ಮೆ ಉಡುಗೆಯಾಗುತ್ತದೆ, ಶ್ರೀಗಂಧ ಪರಿಮಳವಾಗುತ್ತದೆ, ಚಿತ್ರಕಲೆ ಅಲಂಕಾರವಾಗುತ್ತದೆ, ಸಂಗೀತ ಮನಸ್ಸಿಗೆ ನೆಮ್ಮದಿ ನೀಡುತ್ತದೆ” ಎಂದು ಹೇಳಿದರು.
“‘ಬ್ರ್ಯಾಂಡ್ ಮೈಸೂರು’ ಪರಿಕಲ್ಪನೆಗೆ ಬುನಾದಿ ಹಾಕಿದವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಮಹತ್ವದ್ದಾಗಿದೆ. ಮೈಸೂರು ರೇಷ್ಮೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಚಿತ್ರಕಲೆ, ಮೈಸೂರು ಪಾಕ್ ಮತ್ತು ಕನ್ನಂಬಾಡಿ ಅಣೆಕಟ್ಟಿನಂತಹ ಸಾಧನೆಗಳು ಮೈಸೂರಿನ ಹೆಸರನ್ನು ರಾಜ್ಯದ ಗಡಿಗಳಾಚೆಗೂ ಪರಿಚಯಿಸಿವೆ ಎಂದು ಸ್ಮರಿಸಿದರು. ಈ ಸಾಂಸ್ಕೃತಿಕ ಮತ್ತು ಅಭಿವೃದ್ಧಿಯ ಪರಂಪರೆಯನ್ನು ಮುಂದುವರಿಸಿಕೊಂಡು ಕರ್ನಾಟಕ ಇಂದು ವಿಶ್ವದ ಗಮನ ಸೆಳೆಯುತ್ತಿದೆ” ಎಂದರು.
ಗ್ಯಾರಂಟಿ ಯೋಜನೆಗಳ ಮೂಲಕ ಸಮಾನತೆಯ ಆಶಯ
“ತಾಯಿ ಚಾಮುಂಡೇಶ್ವರಿಯ ಪಾದಕ್ಕೆ ಗೃಹಲಕ್ಷ್ಮಿ ಯೋಜನೆಯ ₹2,000 ಅರ್ಪಿಸಿದ ದಿನದಿಂದ ಇಂದಿಗೆ 1,139 ದಿನಗಳು ಪೂರ್ಣಗೊಂಡಿವೆ. ಅಂದಿನಿಂದ ಇಂದಿನವರೆಗೂ ಜನರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಲೋಪವಿಲ್ಲದೆ ಮುಂದುವರಿಸಿಕೊಂಡು ಬರಲು ಸರ್ಕಾರ ಪ್ರಯತ್ನಿಸಿದೆ” ಎಂದು ತಿಳಿಸಿದರು.
“ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿವೆ. ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ, ಇತರ ರಾಜ್ಯಗಳು ಇಂತಹ ಯೋಜನೆಗಳನ್ನು ಜಾರಿಗೊಳಿಸಲು ಪರದಾಡುತ್ತಿವೆ” ಎಂದು ಅವರು ಹೇಳಿದರು.
ಮಾನವ ಧರ್ಮವೇ ವಿಶ್ವಶಾಂತಿಗೆ ಬುನಾದಿ
“ಮನುಷ್ಯನನ್ನು ಮನುಷ್ಯನಿಂದ ಬೇರ್ಪಡಿಸುವ ಅನೇಕ ಮತಗಳಿದ್ದರೂ, ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಮನುಜಮತವೇ ವಿಶ್ವಶಾಂತಿಗೆ ಬುನಾದಿ ಎಂಬ ಕುವೆಂಪು ಅವರ ಆಶಯವನ್ನು ಎಲ್ಲರೂ ಪಾಲಿಸಬೇಕು. ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಸಂದೇಶವನ್ನು ಉಲ್ಲೇಖಿಸಿದ ಅವರು, ‘ನಾನು’, ‘ನಾನೇ’ ಎಂಬುದು ಅಧರ್ಮವಾದರೆ, ‘ನಾವು’, ‘ನಮ್ಮದು’ ಎನ್ನುವುದು ಸುಧರ್ಮ” ಎಂದು ಹೇಳಿದರು.
ಮಠಾದೀಶರುಗಳ ಬಗ್ಗೆ ಅಪಾರ ಗೌರವವಿದೆ
“ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಸಮಾಜದ ಏಳಿಗೆಯಲ್ಲಿ ಮಠಮಾನ್ಯಗಳ ಪಾತ್ರ ಅನನ್ಯ. ಸರ್ಕಾರ ಮಾಡಬೇಕಾದ ಅನೇಕ ಸಾಮಾಜಿಕ ಕಾರ್ಯಗಳನ್ನು ಮಠಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಹೀಗಾಗಿ, ಮಠಾಧೀಶರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರೊಂದಿಗಿನ ನನ್ನ ಸಂಬಂಧವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ” ಎಂದು ಹೇಳಿದರು.
“ಮಠಾಧೀಶರನ್ನು ಸಮಾಜದ ದೊಡ್ಡ ಶಕ್ತಿಯಾಗಿ, ದೇವರಿಗೆ ಸಮಾನವಾಗಿ ಗೌರವಿಸುತ್ತೇನೆ. ಅವರ ಆಶಯಗಳಿಗೆ ಗೌರವ ನೀಡುತ್ತಾ ಬಂದಿದ್ದೇನೆ.‌ ಕೆಲವು ಸಂದರ್ಭಗಳಲ್ಲಿ ಮಾತುಗಳನ್ನು ಕತ್ತರಿಸಿ, ತಿರುಚಿ ಮಾಧ್ಯಮಗಳು ಪ್ರಸಾರ ಮಾಡುವ ಮೂಲಕ ತಪ್ಪು ಸಂದೇಶ ನೀಡಲಾಗುತ್ತಿದೆ. ಗುರುಗಳನ್ನು ಸಮಾಜದ ದೊಡ್ಡ ಶಕ್ತಿಯಾಗಿ ನೋಡುತ್ತೇನೆ. ಅವರಿಗೆ ಗೌರವ ನೀಡುವುದರ ಜತೆಗೆ, ಅವರ ಪ್ರತಿನಿಧಿಯಾಗಿಯೂ ನನ್ನನ್ನು ನಾನು ಭಾವಿಸುತ್ತೇನೆ” ಎಂದು ತಿಳಿಸಿದರು.
ಸರ್ಕಾರದ ಜತೆಗೆ ಮಠಗಳೂ ಸಮಾಜದ ಶಕ್ತಿ
“ಭಾರತದ ಸಂಸ್ಕೃತಿ ಮತ್ತು ಕರ್ನಾಟಕದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಠಮಾನ್ಯಗಳು ಮಹತ್ವದ ಕೊಡುಗೆ ನೀಡಿವೆ. ಸಮಾಜದ ಜನರಿಗೆ ಮಾರ್ಗದರ್ಶನ ನೀಡುವುದರ ಜತೆಗೆ, ಶಿಕ್ಷಣ, ಸಾಮಾಜಿಕ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಠಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ. ಸರ್ಕಾರದ ಜವಾಬ್ದಾರಿಯ ಭಾಗವಾಗಿರುವ ಅನೇಕ ಸಾಮಾಜಿಕ ಕಾರ್ಯಗಳನ್ನು ಮಠಗಳು ತಮ್ಮದೇ ರೀತಿಯಲ್ಲಿ ನಿರ್ವಹಿಸುತ್ತಿವೆ ಎಂಬುದನ್ನು ಮರೆಯುವಂತಿಲ್ಲ” ಎಂದು ಹೇಳಿದರು.
“ರಾಜ್ಯದ ಜನರ ಪ್ರತಿನಿಧಿಯಾಗಿ ಹಾಗೂ ಮಠಗಳ ಮಾನ್ಯಗಳ, ಸರ್ವಧರ್ಮಗಳ ಪ್ರತಿನಿಧಿಯಾಗಿ ಪೂಜ್ಯ ಗವಿಮಠ ಶ್ರೀಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅರಮನೆಯ ಅಂಗಳದಲ್ಲಿ ಅರಳಿದ ದಸರಾ ಇಂದು ಜನರ ಹೃದಯದಲ್ಲಿ ನೆಲೆಗೊಂಡ ನಾಡಹಬ್ಬ. ರಾಜಪ್ರಭುತ್ವದ ವೈಭವದಿಂದ ಪ್ರಜಾಪ್ರಭುತ್ವದ ಸಂಭ್ರಮದವರೆಗೆ ಬೆಳೆದು ಬಂದಿರುವ ಮೈಸೂರು ದಸರಾ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆ, ಸಾಮರಸ್ಯ ಮತ್ತು ಸ್ವಾಭಿಮಾನದ ಸಂಕೇತ” ಎಂದು ಬಣ್ಣಿಸಿದರು.
ಶ್ರೀಗಳ ಸಮಾಜಸೇವೆ ದೇಶಕ್ಕೆ ಮಾದರಿ
“ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ದಸರಾ ಉದ್ಘಾಟಿಸುವ ಮೂಲಕ ನಾಡಹಬ್ಬಕ್ಕೆ ಹೊಸ ಶಕ್ತಿ, ಹುರುಪು ಹಾಗೂ ಯುವ ಚೈತನ್ಯ ತುಂಬಿದ್ದಾರೆ. ಅವರಿಂದ ದಸರಾಕ್ಕೆ ಹೊಸ ಮೆರುಗು ಬಂದಿದೆ. ಶ್ರೀಗಳ ಸಮಾಜಸೇವೆ ದೇಶಕ್ಕೆ ಮಾದರಿ. ಕೊಪ್ಪಳದ ಗವಿಮಠ ಸರ್ವಜನಾಂಗದ ಶಾಂತಿಯ ಮಠ. ಅವರು ಕೇವಲ ಮಠದ ಸ್ವಾಮೀಜಿಯಲ್ಲ, ಜನರ ಸ್ವಾಮೀಜಿ ಎಂದು” ಬಣ್ಣಿಸಿದರು.
“ಬರವನ್ನು ಎದುರಿಸಲು ಜಲದೀಕ್ಷೆಯ ಸಂದೇಶ ನೀಡಿರುವ ಶ್ರೀಗಳು ಭಗೀರಥರಿದ್ದಂತೆ. ನೀರನ್ನು ವ್ಯರ್ಥ ಮಾಡುವುದು ಮುಂದಿನ ಪೀಳಿಗೆಯ ರಕ್ತ ಹೀರಿದಂತೆ ಎಂಬ ಅವರ ಮಾತು ಪ್ರತಿಯೊಬ್ಬರಿಗೂ ಎಚ್ಚರಿಕೆಯಾಗಿದೆ. ಇಡೀ ರಾಜ್ಯಕ್ಕೆ ಈಗ ಜಲದೀಕ್ಷೆಯ ಅಗತ್ಯವಿದೆ. ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಬೇಕು” ಎಂದು ಕರೆ ನೀಡಿದರು.
“ನಾನು ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಮೂರು ಸೈನ್ಯದ ತುಕಡಿಗಳು ದಸರಾದಲ್ಲಿ ಭಾಗವಹಿಸಲು ಮನವಿ ಮಾಡಿದ್ದೆ. ಅವರು ನನ್ನ ಮನವಿಯನ್ನು ಪುರಸ್ಕರಿಸಿದ್ದಾರೆ.   ಅದಕ್ಕಾಗಿ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರಿಗೆ ನನ್ನ ಧನ್ಯವಾದಗಳು” ಎಂದು ಹೇಳಿದರು.
“ನವದುರ್ಗೆಯರ ಆಶೀರ್ವಾದ ಸರ್ಕಾರದ ಮೇಲಿರಲಿ. ದುರ್ಗೆಯರ ಜೊತೆಗೆ ರಾಜ್ಯದ ಕೋಟ್ಯಂತರ ತಾಯಂದಿರ ಆಶೀರ್ವಾದವೂ ನಮ್ಮ ಮೇಲಿದೆ. ದೇವರ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಮೇಲಿರಲಿ. ದಸರಾ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಪರಂಪರೆ, ಕಲೆ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಒಂದೆಡೆ ಸೇರಿಸುವ ಮಹೋತ್ಸವ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಮೂಲಕ ಕನ್ನಡಿಗರ ಸ್ವಾಭಿಮಾನ ಮತ್ತು ಮೈಸೂರಿನ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದರು.
Key words: Mysuru Dasara, confluence, power, knowledge, culture,  CM D.K. Shivakumar
ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ ಶಿವಕುಮಾರ್ ಮನವಿ
ಬೆಂಗಳೂರು, ಅಕ್ಟೋಬರ್,3,2026 (www.justkannada.in): “ಕರ್ನಾಟಕ ರಾಜ್ಯವು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರು, ಜನಸಾಮಾನ್ಯ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. NDRF ಮಾನದಂಡಗಳನ್ವಯ ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೇಂದ್ರ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಬರ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರದ ಅಂತರ್ಸಚಿವಾಲಯ ತಂಡದೊಂದಿಗೆ ಅವರು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಲೋಚನೆ ನಡೆಸಿದರು.
ರಾಜ್ಯಕ್ಕೆ ನ್ಯಾಯಸಮ್ಮತ ಪರಿಹಾರ ದೊರಕಿಸಿ
“ರಾಜ್ಯದಲ್ಲಿ 240 ತಾಲ್ಲೂಕುಗಳ ಪೈಕಿ 217 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಯಾವುದೇ ಒತ್ತಡಗಳಿಗೆ ಜಗ್ಗದೆ, ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅತ್ಯಂತ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಿ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗಿದೆ” ಎಂದು ತಿಳಿಸಿದರು.
ರೈತರು ಕಂಗಾಲಾದರೆ ಎಲ್ಲವೂ ಸ್ಥಗಿತಗೊಂಡಂತೆ- ಸಿಎಂ
“ರೈತರು ಕಂಗಾಲಾದರೆ ಎಲ್ಲವೂ ಸ್ಥಗಿತವಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವು ರಾಜ್ಯದ ರೈತರ ನೆರವಿಗೆ ಧಾವಿಸಬೇಕು” ಎಂದು ಮನವಿ ಮಾಡಿದರು.
ಆಘಾತಕಾರಿ ಪರಿಸ್ಥಿತಿ
“ನನ್ನ ಹಾಗೂ ಉಪಮುಖ್ಯಮಂತ್ರಿ ಡಾ. ಪರಮೇಶ್ವರ ಅವರ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಜನರು ಇಷ್ಟು ತೊಂದರೆಗೊಳಗಾಗಿರುವುದನ್ನು ನೋಡಿಲ್ಲ. ಇದು ಅತ್ಯಂತ ಆಘಾತಕಾರಿ ಪರಿಸ್ಥಿತಿ. ಜನಪ್ರತಿನಿಧಿಗಳು ಹಾಗೂ ರೈತರ ಸಮಸ್ಯೆಗಳನ್ನು ಅರಿಯಲು ವಿಶೇಷ ಅಧಿವೇಶನ ಕರೆಯಲಾಗಿತ್ತು. 150 ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡಿದರು” ಎಂದು ವಿವರಿಸಿದರು.
“ರಾಜ್ಯದ ಕೃಷ್ಣಾ ಜಲಾನಯನ ಪ್ರದೇಶ ಹೊರತು ಪಡಿಸಿ ಎಲ್ಲ ಜಲಾಶಯಗಳಲ್ಲಿ ನೀರಿನ ಹರಿವು ಕಡಿಮೆ ಇದೆ. ಮಲೆನಾಡು, ಕರಾವಳಿ ಪ್ರದೇಶಗಳಲ್ಲಿಯೂ ಮಳೆಯ ತೀವ್ರ ಕೊರತೆಯಾಗಿದೆ. ಅದಾಗ್ಯೂ ಕಾವೇರಿ ನದಿಗೆ ನೀರು ಬಿಡುಗಡೆ ಮಾಡುವಂತೆ ಸಿಡಬ್ಲ್ಯುಸಿ ಆದೇಶ ನೀಡುತ್ತಿದೆ. ನಗರ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಎದುರಾಗಿದೆ. ರೈತರಿಗೆ ರಾಜ್ಯ ಸರ್ಕಾರದ ಹಂತದಲ್ಲಿ 2500 ರೂ. ಪರಿಹಾರ ಮೊತ್ತ ಘೋಷಿಸಲಾಗಿದೆ. ಆದರೆ ಕೇಂದ್ರದಿಂದ ಹೆಚ್ಚಿನ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ” ಎಂದರು.
ಮುನ್ನೆಚ್ಚರಿಕೆಯ ಕ್ರಮ
“ರಾಜ್ಯ ಸರ್ಕಾರದ ಎಲ್ಲ ಸಚಿವರೂ ಜಿಲ್ಲೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳೂ ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ, ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮಾನ್ಯ ಪ್ರಧಾನಮಂತ್ರಿಯವರು ಬರ ಪರಿಸ್ಥಿತಿಯ ಕುರಿತು ರಾಜ್ಯಕ್ಕೆ ಭೇಟಿ ನೀಡಿದಾಗ ಮುನ್ನೆಚ್ಚರಿಕೆ ನೀಡಿದ್ದರು. ಅದರಂತೆ ನಾನೂ ಸಚಿವ ಸಂಪುಟ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನು. ರೈತರಿಗೂ ಬಿತ್ತನೆ ಕುರಿತು ಮಾರ್ಗದರ್ಶನ ನೀಡಲಾಗಿತ್ತು” ಎಂದು ವಿವರಿಸಿದರು.
“ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಬ್ಬು ಬೆಳೆಗಾರರು ಹೆಚ್ಚಿನ ಬೆಲೆಗೆ ಒತ್ತಾಯಿಸುತ್ತಿದ್ದಾರೆ. ಅಂತೆಯೇ ಹಾಲು ಉತ್ಪಾದಕರೂ ಕನಿಷ್ಠ 10 ರೂ. ದರ ಏರಿಕೆಗೆ ಒತ್ತಾಯಿಸುತ್ತಿದ್ದಾರೆ. ಈ ಸವಾಲಿನ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಕೆಲಸ ಮಾಡೋಣ” ಎಂದು ಕರೆ ನೀಡಿದರು.
ವಸ್ತುನಿಷ್ಠ ವರದಿ ಸಲ್ಲಿಕೆ: ಕೇಂದ್ರ ತಂಡ ಮುಖ್ಯಸ್ಥರ ಭರವಸೆ
ಮುಖ್ಯಮಂತ್ರಿಗಳ ಮನವಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಬರ ಪರಿಸ್ಥಿತಿ ಅಧ್ಯಯನ ತಂಡದ ಮುಖ್ಯಸ್ಥ ಅಜಿತ್ ಕುಮಾರ್ ಸಾಹು ಅವರು ಮಾತನಾಡಿ, “ತಾವು ಮೂರು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಮಾಡಿ ವಸ್ತುಸ್ಥಿತಿ ಅರಿಯುವುದರೊಂದಿಗೆ ದತ್ತಾಂಶಗಳನ್ನೂ ರಾಜ್ಯ ಸರ್ಕಾರದ ಅಧಿಕಾರಿಗಳಿಂದ ಪಡೆದುಕೊಂಡು ವಸ್ತುನಿಷ್ಠ ವರದಿ ಸಲ್ಲಿಸುವುದಾಗಿ” ತಿಳಿಸಿದರು.
ಈ ಸಭೆಯಲ್ಲಿ  ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಉಮಾ ಮಹಾದೇವನ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Provide, ₹3,705.30 crore, drought relief, CM D.K. Shivakumar,  appeal.
ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ: ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ- ಸಿಎಂ ಡಿ.ಕೆ ಶಿವಕುಮಾರ್
ನವದೆಹಲಿ, ಸೆಪ್ಟಂಬರ್, 29,2026 (www.justkannada.in):  ಹೌದು, ಇಂದಿನ ಮೌಲ್ಯದಲ್ಲಿ ನನ್ನ ಬಳಿ 1,400 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ. ಕುಮಾರಸ್ವಾಮಿ ಅವರು ಹತಾಶಾರಾಗಿ ಈ ರೀತಿ ಮಾತನಾಡುತ್ತಿದ್ದಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆರೋಪಗಳ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ  ಶಿವಕುಮಾರ್, “ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು, ತಾ ಮುಂದು ನಾ ಮುಂದು ಎಂಬ ಪೈಪೋಟಿಯಲ್ಲಿ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರು ಇಷ್ಟು ದಿನ ಏಕೆ ಸುಮ್ಮನಿದ್ದರು. ಅವರ ತಂದೆ ದೇವೇಗೌಡರೇ ಆ ಯೋಜನೆಗೆ ಸಹಿ ಹಾಕಿದ್ದರು. ಜೊತೆಗೆ ಇವರು ಸಹ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಗಾಂಧಿ ಎನ್ನುವವರೊಬ್ಬರಿಗೆ ಇವರೇ ಪ್ರಯತ್ನಿಸಿ ಟೆಂಡರ್ ಕೊಡಿಸಿದರು. ಈ ವಿಚಾರವಾಗಿ ನ್ಯಾಯಾಲಯವು ಛಿಮಾರಿ ಹಾಕಿತ್ತು. ಬೇನಾಮಿ ಹೆಸರಿನಲ್ಲಿ ಅಲ್ಲಲ್ಲಿ ಸಾಕಷ್ಟು ವ್ಯವಹಾರಗಳು ನಡೆದವು. ಅವರಂತೆ ನಾನು ಹೆಸರುಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ” ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಐಟಿ ಅಧಿಕಾರಿಯೇ?
“ನನ್ನ ಆಸ್ತಿ ವಿಚಾರವಾಗಿ ಮಾತನಾಡಿದ್ದಾರೆ. ರೈತನ ಮಗ, ಉದ್ಯಮಿಯಾದ ನನಗೆ ಆಸ್ತಿ ಇರಬಾರದೇ? ನನ್ನ ಮಕ್ಕಳು ಆಸ್ತಿ ಕೊಂಡುಕೊಳ್ಳಬಾರದೇ? ಕಾನೂನಾತ್ಮಕ ಇರುವ ಅವಕಾಶದಲ್ಲೇ ನಾನು ಆಸ್ತಿ ಮಾಡಿದ್ದೇ‌ನೆ. ತಪ್ಪೇನಿದೆ?ಕುಮಾರಸ್ವಾಮಿ ಅವರು ಏನಾದರೂ ಆದಾಯ ತೆರಿಗೆ ಅಧಿಕಾರಿಯೇ? ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿ” ಎಂದು ಸವಾಲು ಹಾಕಿದರು.
“ಇವರುಗಳು ಮಾತ್ರ ಯಾವುದೋ ಊರಿಂದ ಬಂದು ಇಲ್ಲೆಲ್ಲಾ ಆಸ್ತಿಗಳನ್ನ ತೆಗೆದುಕೊಳ್ಳಬಹುದಾ. ಬಿಎಂಐಸಿಎಪಿಎ , ನೈಸ್ ರಸ್ತೆ ಯೋಜನೆಯೊಳಗೆ ಇವರ ಆಸ್ತಿ ಇಲ್ಲವೇ? ಆಸ್ತಿಗಳನ್ನು ಯಾರ್ಯಾರು ತಗೊಂಡಿದ್ದಾರೆ? ಯಾಕೆ ಇವರ ಆಸ್ತಿಗಳೆಲ್ಲಾ ವ್ಯಾಪ್ತಿಯಲ್ಲಿ, ಬಿಡದಿ ಟೌನ್ ಶಿಪ್ ಯೋಜನೆಯೊಳಗೆ ಹೇಗೆ ಆಸ್ತಿ ಬಂದಿತು?” ಎಂದು ಪ್ರಶ್ನಿಸಿದರು.
“ಕುಮಾರಸ್ವಾಮಿ ಅವರು ಏನಾದರೂ ಮಾಡಿಕೊಳ್ಳಲಿ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ನನಗೆ ಆಸ್ತಿ ಇದೆ. ನನ್ನ ಮಕ್ಕಳಿಗೆ ಇನ್ನೂ ತೆಗೆದುಕೊಳ್ಳುವ ಶಕ್ತಿ ಇದ್ದರೆ ತೆಗೆದುಕೊಳ್ಳುತ್ತಾರೆ. ಕಾನೂನಲ್ಲಿ ಅವಕಾಶ ಇದೆ, ಖರೀದಿ ಮಾಡುವ ಸಾಮರ್ಥ್ಯವಿದೆ, ಬದುಕುತ್ತಾರೆ” ಎಂದು ಸ್ಪಷ್ಟಪಡಿಸಿದರು.
ನಾನು ಲಂಚ ಪಡೆದಿದ್ದೇನಾ ಅಥವಾ ಹಗರಣದಲ್ಲಿ ಸಿಕ್ಕಿಬಿದ್ದಿದ್ದೇನಾ?
ಶೋಭಾ ಡೆವಲಪರ್ಸ್ ಜೊತೆ 5 ಕೋಟಿ ಹೂಡಿಕೆ ಮಾಡಿ ಈಗ 2,000 ಕೋಟಿ ಮಾಡಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಹೌದು, ನಾವು ಎಷ್ಟಾದರೂ ಮಾಡುತ್ತೇವೆ. ನನಗೆ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರು 1 ಲಕ್ಷ ರೂಪಾಯಿಗೆ ಆಗ ಒಂದು ನಿವೇಶನ ನೀಡಿದ್ದರು. ಇಂದು ಅದರ ಬೆಲೆ 20 ಕೋಟಿ ಇದೆ. ಇದರಲ್ಲಿ ಏನಾದರೂ ತಪ್ಪಿದೆಯೇ? ನಾನು ಲಂಚ ಹೊಡೆದಿದ್ದೇನೆಯೇ? ಇಲ್ಲ ಯಾವುದಾದರೂ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೆನೆಯೇ? ಯಾವುದೂ ಇಲ್ವವಲ್ಲಾ” ಎಂದು ವ್ಯಂಗ್ಯವಾಡಿದರು.
ಕದ್ದು ಏನನ್ನೂ ಮಾಡಿಕೊಂಡಿಲ್ಲ
“ನನಗೆ ಉದ್ದಿಮೆ ಮಾಡಲು ಎಲ್ಲಾ ರೀತಿಯ ಹಕ್ಕು, ಅವಕಾಶವಿದೆ. ನನ್ನ ಮಕ್ಕಳಿಗೂ ಸಾಮರ್ಥ್ಯವಿದೆ. ಇನ್ನೂ ಖರೀದಿ ಮಾಡುವ ಸಾಮರ್ಥ್ಯವಿದೆ. ನಾನು ಕದ್ದುಮುಚ್ಚಿ ಮಾಡೋ ಅವಶ್ಯಕತೆಯಿಲ್ಲ. ನನ್ನ ಆಸ್ತಿಯನ್ನ ಈಗಾಗಲೇ ಘೋಷಣೆ ಮಾಡಿಕೊಂಡಿದ್ದೇನೆ” ಎಂದರು.
“ಕುಮಾರಸ್ವಾಮಿ ಅವರದ್ದು ಏನೇನಿದೆ ಅಂತ ನಾನು ಈಗ ಮಾತನಾಡಲು ಹೋಗುವುದಿಲ್ಲ. ನನಗೆ ಈ ವಿಚಾರಗಳನ್ನು ಯಾರೋ ಹೇಳಿದರು. ಕುಮಾರಸ್ವಾಮಿ ಅವರು ಎಲ್ಲಾ ಎತ್ತಿಕೊಂಡು ಹೋಗಿ ಸಂಸ್ಥೆಗಳಿಗೆಲ್ಲಾ ಈಗಾಗಲೇ ಕೊಟ್ಟಿದ್ದಾರಲ್ಲಾ? ಇನ್ನೆಷ್ಟು ಬಾರಿ ಕೊಡುತ್ತಾರೆ. ಅವರಿಗೆ ಲಾರಿ ಬೇಕಾದರೆ ಕಳುಹಿಸಿಕೊಡೋಣ” ಎಂದು ಲೇವಡಿ ಮಾಡಿದರು.
ವಿಧಾನಸಭೆಗೆ ಬಂದು ಚರ್ಚೆ ಮಾಡಲಿ
ಕುಮಾರಸ್ವಾಮಿ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆಗೆ ಸವಾಲು ಹಾಕಿರುವ ಬಗ್ಗೆ ಕೇಳಿದಾಗ, “ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾಕೆ? ಧೈರ್ಯವಿದ್ದರೆ ಯಾರನ್ನಾದರೂ ಕೌನ್ಸಿಲ್ ಅಥವಾ ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ಅಸೆಂಬ್ಲಿ ಒಳಗಡೆ ಬಂದು ಚರ್ಚೆ ಮಾಡಲಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆ ಮಾಡುವ ಬದಲು ಫ್ರೀಡಂ ಪಾರ್ಕ್ ಇದೆ, ಅಲ್ಲಿಗೆ ಹೋಗಿ ಚರ್ಚೆ ಮಾಡಿಕೊಳ್ಳಲಿ” ಎಂದರು.
ಗೊಡ್ಡು ಬೆದರಿಕೆಗೆಲ್ಲಾ ಡಿ ಕೆ ಶಿವಕುಮಾರ್ ಹೆದರುವುದಿಲ್ಲ
ನೈಸ್ ಯೋಜನೆ ಜಾರಿಗೆ ತಮಗೆ ಬೆಂಬಲ ಇರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾತನಾಡಿ, “2007 ರಲ್ಲಿ ಅವರಿಗೆ ಅಧಿಕಾರವಿತ್ತಲ್ಲ. ಇವರೇ ಹರಾಜಿನಲ್ಲಿ   ನಿಖಿಲ್ ಗಾಂಧಿ  ಕೊಟ್ಟಿದ್ದರಲ್ಲ. ಯಾಕೆ ಮಾಡಲು ಆಗಿಲ್ಲ? ಅಧಿಕಾರದಲ್ಲಿದ್ದಾಗ ಟೋಲ್ ರದ್ದು ಮಾಡದವರು ಈಗ ದೇಶಾದ್ಯಂತ ಟೋಲ್ ಬಂದ್ ಮಾಡಿಸಲು ಪ್ರಧಾನಿ ಮೋದಿಯವರಿಗೆ ಹೇಳಲಿ. ಈ ಗೊಡ್ಡು ಬೆದರಿಕೆಗೆಲ್ಲಾ ಡಿ ಕೆ ಶಿವಕುಮಾರ್ ಹೆದರುವುದಿಲ್ಲ. ಈ ನಾಟಕ, ಡ್ರಾಮಾ, ಫಿಲಾಸಫಿ, ಬ್ಲಾಕ್ ಮೇಲ್  ಎಲ್ಲಾ ಬೇಕಾದಷ್ಟು ನೋಡಿದ್ದೀನಿ. ಇವಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಮಾಡುವ ಕೆಲಸ ಮಾಡೋಣ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ ಎಂದು ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ, ನಾಳೆಯೂ ಹೇಳುತ್ತೇನೆ” ಎಂದರು.
ಬ್ಲ್ಯಾಕ್‌ಮೇಲ್ ಹಾಗೂ ಫೋನ್ ಟ್ಯಾಪಿಂಗ್ ತಂತ್ರಕ್ಕೆ ಹೆದರುವುದಿಲ್ಲ
ಕುಮಾರಸ್ವಾಮಿ ಅವರು ಇದು ಭಾಗ 1 ಎಂದು ಹೇಳಿದ್ದಾರೆ ಎಂದು ಕೇಳಿದಾಗ, “ಪಾರ್ಟ್ 1, 2, 3,4 ಸ್ಟಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಅವರ ಹತ್ರ ಇರೋದೆಲ್ಲಾ ಗೊತ್ತಿದೆ. ಚೆನ್ನಿಗಪ್ಪನ ಕಾಲದಿಂದಲೂ ಗೊತ್ತಿದೆ. ಬಾಲ ಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ನನ್ನೇ ಟ್ಯಾಪ್ ಮಾಡಿಸಿದವರು, ಅವರನ್ನೇ ಬಿಟ್ಟಿಲ್ಲಾ, ನನ್ನನ್ನು ಬಿಡುತ್ತಾರೆಯೇ? ಹಾಗೆಂದು ಭಾವಿಸಿದರೆ ನಮ್ಮಂಥ ಮುಠ್ಠಾಳರು ಯಾರೂ ಇಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಹೆದರಲಿಲ್ಲ, ಈಗ ಹೆದರುತ್ತೇನೆಯೇ? ನನ್ನನ್ನು ದೊಡ್ಡ ಬೆದರಿಕೆ ಹಾಕಿ ಹೆದರಿಸುವ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಜಾಯಮಾನ ನನ್ನದಲ್ಲ” ಎಂದರು.
ಸ್ವಂತ ಅಪ್ಪ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳದವರು ನಮ್ಮನ್ನು ಬಿಡುತ್ತಾರೆಯೇ?
“ಸ್ವಂತ ಅಪ್ಪನನ್ನೇ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳಲಾಗದವರು ನಮ್ಮನ್ನು ಬಿಡುತ್ತಾರೆಯೇ? ನಾವೇನೂ ಅವರಿಂದ ಒಳ್ಳೆಯದನ್ನು ನಿರೀಕ್ಷಿಸಿಲ್ಲ.  ನಮ್ಮ ಸರ್ಕಾರದ ಜನಪ್ರಿಯತೆಯನ್ನು ತಡೆದುಕೊಳ್ಳಲು ಆಗದೆ ‘ಅಸೂಯೆ’ಯಿಂದ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಸಂಸ್ಕಾರವೂ ಇಲ್ಲ, ಸಂಸ್ಕೃತಿಯೂ ಇಲ್ಲ” ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ತಾರ್ತಿಕ ಅಂತ್ಯವಿಲ್ಲವೇ ಎಂದು ಕೇಳಿದಾಗ, “ನನಗೆ ಅವರ ಮೇಲೆ ಆರೋಪ ಮಾಡಲು ಇಷ್ಟವಿಲ್ಲ. ಅದಕ್ಕೆಲ್ಲ ನನ್ನ ಬಳಿ ಸಮಯವೂ ಇಲ್ಲ. ನೀವು ಹೇಳಿದ್ದಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ ಅಷ್ಟೇ. ಉತ್ತರ ಕೊಡಲೂ ನನಗೆ ಇಷ್ಟವಿಲ್ಲ” ಎಂದರು.
ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ
ಬಂಗಾರಪ್ಪ ಅವರು ನೀಡಿದ್ದ ನಿವೇಶನದ ಬಗ್ಗೆ ಕೇಳಿದಾಗ, “ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಕಾಲದಲ್ಲಿ 99 ಸಾವಿರ ನೀಡಿ ನಿವೇಶನ ಖರೀದಿಸಿದ್ದೆ. ಅವರೇ ಅದನ್ನು ಹಂಚಿಕೆ ಮಾಡಿದ್ದರು. ಇವತ್ತಿಗೆ 20 ಕೋಟಿ ಬೆಲೆ ಬಾಳುತ್ತದೆ. ನನ್ನ ಆಸ್ತಿಯ ಬೆಲೆ ಹೆಚ್ಚಾಗಿದೆ. ಅದನ್ನು ಘೋಷಿಸಿದ್ದೇನೆ. ತಪ್ಪೇನಿದೆ? ಇಂಥ ನೂರಾರು ಆಸ್ತಿ ನನ್ನ ಬಳಿ ಇದೆ. ಲಾರಿ ಇಟ್ಟುಕೊಂಡು ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ. ನನ್ನದೇ ವೃತ್ತಿ, ವ್ಯವಹಾರ ಬದುಕಿದೆ. ಪ್ರತಿ ವರ್ಷವೂ ಆಸ್ತಿ ಘೋಷಿಸಿದ್ದೇನೆ. ಚುನಾವಣಾ ಆಯೋಗ, ಇಡಿ ಎಲ್ಲಾ ನೋಡಿ ಆಗಿದೆ. ಇನ್ನು ಯಾವುದಾದರೂ ದೊಡ್ಡ ಏಜೆನ್ಸಿಯನ್ನು ಹಾಕಿ ನೋಡಲಿ. ಯಾರು ಬೇಡ ಹೇಳುತ್ತಾರೆ” ಎಂದರು.
ಯತೀಂದ್ರ ಸಿದ್ದರಾಮಯ್ಯ ಮೇಲಿನ ದೂರು ಸುಳ್ಳು
ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವ ಬಗ್ಗೆ ಕೇಳಿದಾಗ, “ಅವರು ಮಂತ್ರಿಯಾಗಿ ಅಥವಾ ಹುದ್ದೆಗೆ ಬಂದು ಇನ್ನಷ್ಟೇ ಕೆಲವು ತಿಂಗಳುಗಳಾಗಿವೆ, ಅಷ್ಟರಲ್ಲೇ 444 ಕೋಟಿ ಅಕ್ರಮ ಮಾಡಲು ಸಾಧ್ಯವೇ? ಅದೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ” ಎಂದು ತಳ್ಳಿಹಾಕಿದರು.
ದೆಹಲಿಯಲ್ಲಿ ಶಿಕ್ಷಣ ನೀತಿ ಕುರಿತು ಪ್ರಮುಖ ಸಭೆ
“ಕೆಲವು ರಾಜ್ಯಗಳಲ್ಲಿ ಬಿಜೆಪಿ ಸಿದ್ಧಾಂತವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮಲ್ಲಿ ಮೊದಲಿನಿಂದಲೂ ಇರುವ ತತ್ವಗಳ ಆಧಾರದ ಮೇಲೆ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಕ್ರಮ ವಹಿಸಲು ಮಾರ್ಗದರ್ಶನವಿದೆ” ಎಂದರು
ಗುತ್ತಿಗೆದಾರರ ಬಾಕಿ ಹಣದ ಬಿಡುಗಡೆ ಕೋರಿಕೆ
ಗುತ್ತಿಗೆದಾರರ ಸಂಘವು ₹38,000 ಕೋಟಿ ಬಾಕಿ ಹಣ ಬಿಡುಗಡೆಗೆ ಬರೆದಿರುವ ಪತ್ರದ ಕುರಿತು ಮಾತನಾಡಿ, “ಹಿಂದಿನ ಯಡಿಯೂರಪ್ಪನವರ ಸರ್ಕಾರ ಅಷ್ಟೊಂದು ಜಾಸ್ತಿ ಕೆಲಸಗಳನ್ನು ಕೊಟ್ಟು ಆರ್ಥಿಕ ಹೊರೆ ಹಾಕಿ ಹೊರಟುಹೋದರು. ಪತಿಕಾ ಗೋಷ್ಠಿ ನಡೆಸುತ್ತಿರುವವರಿಗೆ ಇದಕ್ಕೆ ಪರಿಹಾರ ಸೂಚಿಸಲು ಹೇಳಿ ಎಂದು ವ್ಯಂಗ್ಯವಾಡಿದರು. ಪರಿಸ್ಥಿತಿ ಕಷ್ಟವಿದೆ, ಆದರೂ ಅದರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ತಮಿಳುನಾಡು ನಿಯೋಗ ಮೇಕೆದಾಟು ಯೋಜನೆ ಸ್ಥಳಕ್ಕೆ ಬಂದು ಪರಿಶೀಲಿಸಲಿ: ಸಿಎಂ ಡಿ.ಕೆ ಶಿವಕುಮಾರ್
ನವದೆಹಲಿ: ಸೆಪ್ಟಂಬರ್, 29,2026 (www.justkannada.in): “ಮೇಕೆದಾಟು ಯೋಜನೆಯಿಂದ ನಾವು ಕುಡಿಯುವ ಉದ್ದೇಶಕ್ಕೆ ಮಾತ್ರ ನೀರನ್ನು ಬಳಸಿಕೊಳ್ಳಬಹುದು, ನೀರಾವರಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅಂಶ ಕೇಂದ್ರ ಸಚಿವರಿಗೆ ಮನದಟ್ಟಾಗಿದೆ. ತಮಿಳುನಾಡು ಸರ್ಕಾರ ಕೂಡ ನಿಯೋಗ ಕಳುಹಿಸಿ ಯೋಜನೆ ಜಾಗ ಪರಿಶೀಲನೆ ಮಾಡಲಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿ ಬಳಿಕ ಸಿಎಂ ಡಿಕೆ ಶಿವಕುಮಾರ್ ಅವರು ಕರ್ನಾಟಕ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ಮೇಕೆದಾಟು ಅಣೆಕಟ್ಟಿಗೆ ಮತ್ತೊಮ್ಮೆ ಡಿಪಿಆರ್ ಸಲ್ಲಿಕೆಯಾಗಿರುವ ಬಗ್ಗೆ ಎಂದು ಕೇಳಿದಾಗ, “ಈ ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯ ಸ್ಥಳ ಗುರುತಿಸಲಾಗಿದೆ. ಈಗ 5 ಸಾವಿರ ಕ್ಯೂಸೆಕ್ ನೀರಿಗೆ ಬಡಿದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಕೆ.ಆರ್.ಎಸ್ ತುಂಬಿಲ್ಲದ ಕಾರಣ ಕಬಿನಿ ಭಾಗದ ರೈತರು ಗಲಾಟೆ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ತಂಡ ಸ್ಥಳಕ್ಕೆ ಭೇಟಿ ನೀಡಿದೆ” ಎಂದು ಮಾಹಿತಿ ನೀಡಿದರು.
“ತಮಿಳುನಾಡು ತಂಡ ಭೇಟಿ ನೀಡಿದರೂ ಅವರಿಗೂ ಸಹಕಾರ ನೀಡಲಾಗುವುದು. ನೀರನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ  ಎನ್ನುವುದು ಅಧಿಕಾರಿಗಳಿಗೆ ಸಹ  ಮನದಟ್ಟಾಗಿದೆ. ತಮಿಳುನಾಡು ಮುಖ್ಯಮಂತ್ರಿಯವರಿಗೆ ಮೇಕೆದಾಟು ಯೋಜನೆಯ ಸಭೆಯಲ್ಲಿ ಪಾಲ್ಗೊಳ್ಳಲು ಭೇಟಿ ನೀಡಲು ಮನವಿ ಮಾಡಿಕೊಳ್ಳಲಾಗುವುದು” ಎಂದರು.
ಜಲಶಕ್ತಿ ಸಚಿವರಿಂದ ಸಕಾರಾತ್ಮಕ ಸ್ಪಂದನೆ
“ರಾಜ್ಯದ ಕೃಷ್ಣಾ, ಮೇಕೆದಾಟು ಸೇರಿದಂತೆ ಇತರೆ ಜಲವಿವಾದಗಳ ಕುರಿತು ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ ಅವರೊಂದಿಗೆ ಚರ್ಚಿಸಿ  ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಮಧ್ಯಸ್ಥಿಕೆ ವಹಿಸಿ ಸಹಕರಿಸಲು ಮನವಿ ಮಾಡಲಾಗಿದ್ದು, ಸಚಿವರು ಸಕಾರಾತ್ಮಕ ಸ್ಪಂದಿಸಿದ್ದಾರೆ. ರಾಜ್ಯದ ಯೋಜನೆಗಳಿಗೆ ಬರಬೇಕಾದ ಅನುದಾನಗಳ ಬಗ್ಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.
ಮಹದಾಯಿ ಯೋಜನೆ: ಜಂಟಿ ಸಭೆ ನಡೆಸಲು ಕೇಂದ್ರದ ಭರವಸೆ
“ಮಹದಾಯಿ ಮತ್ತು ಅರಣ್ಯ ವಿಚಾರಕ್ಕೆ ಸಂಬಂಧಿಸಿದಂತೆ ಜಂಟಿ ಸಭೆಯನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಅಕ್ಕ ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು  ಸಮಸ್ಯೆ  ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ” ಎಂದು ಮಾಹಿತಿ ನೀಡಿದರು.
ರಾಜಕೀಯ ಬದ್ಧತೆ ಅಗತ್ಯ
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಪತ್ರವ್ಯವಹಾರ ಸರಿಯಾಗಿ ಆಗುತ್ತಿಲ್ಲ ಎಂದು ಕೇಳಿದಾಗ, “ಅವೆಲ್ಲಾ ಸುಳ್ಳು.  ಕೇಂದ್ರ ಸಚಿವರೂ ಈ ಬಗ್ಗೆ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ರಾಜಕೀಯ ಬದ್ಧತೆ ಅಗತ್ಯವಿದೆ.  ಅರಣ್ಯ ಇಲಾಖೆಯೊಂದಿಗೆ ಪ್ರತ್ಯೇಕ ಸಭೆ ನಡೆಸಲು ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ 2023ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿ ಮೀಸಲಿರಿಸಿದ್ದರೂ ಈವರೆಗೆ  ಅನುದಾನ ಬಿಡುಗಡೆ ಮಾಡಿಲ್ಲ. ನಾವು ಕೇಳುತ್ತಲೇ ಇದ್ದೇವೆ . ಅವರು ಬಿಡುಗಡೆ ಮಾಡುತ್ತಿಲ್ಲ” ಎಂದರು.
ರಾಜ್ಯದ ಹಿತಕ್ಕೆ ಸಹಕಾರ ನೀಡುವುದಾಗಿ ಕೇಂದ್ರದ ಭರವಸೆ
“ದಕ್ಷಿಣ ವಲಯದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ   ಕೇಂದ್ರ  ಗೃಹಸಚಿವರು  ತಮಿಳುನಾಡಿನಲ್ಲಿ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡುವುದಾಗಿ  ಮಾತು ಕೊಟ್ಟಂತೆ ಶೀಘ್ರದಲ್ಲಿಯೇ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ, ಪ್ರಸ್ತಾವನೆಗಳನ್ನು ಅವರ ಮುಂದಿಡಲಾಗಿದೆ ಎಲ್ಲರೂ ರಾಜ್ಯದ ಹಿತಕ್ಕೆ ಸಹಕಾರ ಕೊಡುವುದಾಗಿ ಒಪ್ಪಿದ್ದಾರೆ.  ಅಕ್ಟೋಬರ್ 10  ನಂತರ ಸಮಯ ನೀಡುವುದಾಗಿ ತಿಳಿಸಿದ್ದಾರೆ” ಎಂದರು.
ಬರಪರಿಹಾರಕ್ಕೆ ಮನವಿ ಮಾಡಲಾಗಿದೆ
ಕೇಂದ್ರಕ್ಕೆ ಬರ ಪರಿಹಾರ  ಕೇಳಲಾಗಿದೆಯೇ ಎಂದು ಕೇಳಿದಾಗ, “ರಾಜ್ಯದಲ್ಲಿ 200 ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ. 101 ತಾಲ್ಲೂಕುಗಳಿಗೆ 700 ಕೋಟಿ ಅನುದಾನ ಕೋರಲಾಗಿತ್ತು. ಪ್ರಸ್ತುತ ಬರಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪರಿಹಾರದ ಮೊತ್ತವೂ ಏರಿಕೆಯಾಗಲಿದೆ. ಅಕ್ಟೋಬರ್ 3 ರಂದು ಕೇಂದ್ರದ ತಂಡ ಬರ ಪರಿಶೀಲನೆಗಾಗಿ ರಾಜ್ಯಕ್ಕೆ ಆಗಮಿಸಲಿದೆ” ಎಂದರು.
ಭದ್ರಾ ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಮನವಿ
ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೂ ಕೇಂದ್ರಕ್ಕೆ ಮನದಟ್ಟು ಮಾಡಿಕೊಡಲಾಗಿದೆ. ಮೂರು ನಾಲ್ಕು ವರ್ಷಗಳಿಂದ ಕೇವಲ ಮಾತುಗಳನ್ನೇ ಆಡಿದ್ದು ಅನುದಾನ ಬಿಡುಗಡೆಯಾಗಿಲ್ಲ ಎಂದು ತಿಳಿಸಲಾಗಿದೆ.  ವಿಚಾರ ಸಚಿವ ಸಂಪುಟ ಸಭೆಯಲ್ಲಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲು ಒತ್ತಾಯಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಹಸಿರು ಉದ್ಯಾನವನ: ರಕ್ಷಣಾ ಸಚಿವರ ಭರವಸೆ
“ಬೆಂಗಳೂರಿನ ಇಬ್ಬಲೂರಲ್ಲಿ 700ಎಕರೆ ರಕ್ಷಣಾ ಇಲಾಖೆಯ ಭೂಮಿ ಖಾಲಿ ಇದೆ. ಹಸಿರು ಉದ್ಯಾನವನ ಪ್ರಾರಂಭಿಸಲು ಸರ್ಕಾರ ಯೋಜಿಸಿದೆ. ಇದಕ್ಕೆ ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ” ಎಂದು ಹೇಳಿದರು.
“ಇದರ ಜೊತೆಗೆ ಉದ್ಯಾನವನ, ಮೇಕ್ರಿ ಸರ್ಕಲ್ ಹಾಗೂ ಸರ್ಜಾಪುರ ರಸ್ತೆ ಅಗಲೀಕರಣಕ್ಕೆ ಇಲಾಖೆ ಜಮೀನು ಹಸ್ತಾಂತರಕ್ಕೆ ಮನವಿ ಮಾಡಲಾಗಿದೆ. ಬೆಂಗಳೂರಿನ ರಕ್ಷಣಾ ಜಮೀನಿನಲ್ಲಿರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ, ಅವಳಿ ಸುರಂಗ ಯೋಜನೆ, ಅಗರ- ಸರ್ಜಾಪುರ ರಸ್ತೆ ವಿಸ್ತರಣೆ, ಏರ್ಪೋರ್ಟ್ ರಸ್ತೆಯಿಂದ (ಬಳ್ಳಾರಿ ರಸ್ತೆ) ಸರೋವರ ಲೇಔಟ್ಗೆ ಲಿಂಕ್ ರಸ್ತೆ ನಿರ್ಮಾಣಕ್ಕೆ ನೆರವು, ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣಕ್ಕೆ ರಕ್ಷಣಾ ಇಲಾಖೆ ಜಮೀನು ಹಸ್ತಾಂತರದ ಬಗ್ಗೆ ಮನವಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ಸ್ಕೈ ಡೆಕ್: ದೇಶದ ಇತರೆ ರಾಜ್ಯಗಳನ್ನು ಪರಿಗಣಿಸಿದಂತೆಯೇ ಬೆಂಗಳೂರನ್ನೂ ಪರಿಗಣಿಸಿ
“ಕಳೆದ ಎರಡೂವರೆ  ವರ್ಷಗಳಿಂದ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ. ನಗರದಲ್ಲಿ  ಎರಡು ವಿಮಾನ ನಿಲ್ದಾಣಗಳಿರುವುದರಿಂದ ಅಲ್ಲಿಂದ  26 ಕಿಮೀ ದೂರದಲ್ಲಿ ಸ್ಥಳ ಗುರುತಿಸಲು ಸಲಹೆ ನೀಡಿದ್ದಾರೆ.  ಪ್ರವಾಸಿಗರು ಭೇಟಿ ನೀಡುವಂತಹ ಸ್ಥಳದಲ್ಲಿ ಇರಬೇಕು. ಹಾಗಾಗಿ ಇತರೆ ದೇಶದ ಇತರೆ ರಾಜ್ಯಗಳನ್ನು ಪರಿಗಣಿಸಿದಂತೆಯೇ ಬೆಂಗಳೂರನ್ನೂ ಪರಿಗಣಿಸುವಂತೆ ಮನವಿ ಮಾಡಲಾಗಿದೆ” ಎಂದರು.
ರಾಜ್ಯದ ಹಿತ ಕಾಪಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ
“ಕಸ್ತೂರಿ ರಂಗನ್ ವರದಿ, ಬರ ಮತ್ತು ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ರಾಜ್ಯದ ಹಿತ ಕಾಪಾಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ” ಎಂದರು.
ಗವಿಸಿದ್ದೇಶ್ವರ ಸ್ವಾಮೀಜಿಗಳ ಕುರಿತ ವದಂತಿ: ತಪ್ಪಿತಸ್ಥರ ವಿರುದ್ಧ ಕ್ರಮ
ಗವಿಸಿದ್ದೇಶ್ವರ ಸ್ವಾಮೀಜಿಗಳನ್ನೂ ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿರುವ ಬಗ್ಗೆ ಕೇಳಿದಾಗ, “ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ನಾನೇ ಖುದ್ದಾಗಿ ಆಹ್ವಾನಿಸಿದ್ದೇನೆ. ಅವರಲ್ಲದೆ ಇನ್ನೂ ಹಲವು ಸ್ವಾಮೀಜಿಗಳನ್ನು ಆಹ್ವಾನಿಸಿದ್ದೇನೆ. ರಾಜ್ಯದ ನಾಡದೇವತೆಗೆ  ಪ್ರಾರ್ಥಿಸಲು ಅವರು ಬರಲಿದ್ದಾರೆ. ಕೆಲವರಿಗೆ ಅಸೂಯೆ ಇರುತ್ತದೆ. ಆದ್ದರಿಂದ ತಪ್ಪು ಸಂದೇಶ ನೀಡಿದ್ದಾರೆ.   ಪೊಲೀಸರು ಇದನ್ನು ತನಿಖೆ ಮಾಡುತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದರು.
ಎಸ್ ಐ ಆರ್ ಈಗ ರಾಷ್ಟ್ರಮಟ್ಟದ ವಿಚಾರ
ಸಿಡಬ್ಲ್ಯುಸಿ ಸಭೆಯಲ್ಲಿ ಎಸ್ಐಆರ್ ವಿಚಾರ ಪ್ರಸ್ತಾಪ ಮಾಡಲಾಗುವುದೇ ಎಂದು ಕೇಳಿದಾಗ, “ಮತಗಳ್ಳತನ ವಿರುದ್ಧ ಅಭಿಯಾನ ಪ್ರಾರಂಭವಾಗಿದ್ದೆ ಕರ್ನಾಟಕದಿಂದ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಮತಗಳ್ಳತನದ ವಿಚಾರವನ್ನು ಎತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 31 ಸಾವಿರ ಮತಗಳಿಂದ ಸೋತಿದ್ದರು ಹಾಗೂ ಈ ಕ್ಷೇತ್ರವೊಂದರಲ್ಲೇ ಇಂದಿನ ಮಾಹಿತಿಯಂತೆ 12 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಎಸ್ ಐ ಆರ್ ವಿಚಾರ ಈಗ ರಾಷ್ಟ್ರದ ವಿಚಾರವಾಗಿದೆ. ನಮ್ಮ ನಾಯಕರು ಎಸ್ ಐ ಆರ್ ನ ಬಗ್ಗೆ ಹಲವು ಆತಂಕಗಳನ್ನು ವ್ಯಕ್ತಪಡಿಸಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದ್ದು, ನಾವೆಲ್ಲರೂ ಅವರೊಂದಿಗಿದ್ದೇವೆ” ಎಂದರು.
ರೈತ ಚೈತನ್ಯ ಯಾತ್ರೆ ನನ್ನ ಕ್ಷೇತ್ರದಿಂದಲೇ ಮಾಡಲಿ, ಬೇಡ ಎನ್ನುವುದಿಲ್ಲ
ವಿರೋಧಪಕ್ಷದವರ ರೈತ ಚೈತನ್ಯ ಯಾತ್ರೆ ಬಗ್ಗೆ ಕೇಳಿದಾಗ, “ಈ ಯಾತ್ರೆಯನ್ನು ನನ್ನ ಕ್ಷೇತ್ರದಿಂದಲೇ, ನನ್ನ ಮನೆಯಿಂದಲೇ ಪ್ರಾರಂಭಿಸಲಿ, ನಾನು ಬೇಡ ಎನ್ನುವುದಿಲ್ಲ. ಅವರು ರಾಜಕಾರಣ ಮಾಡಲಿ, ನಾವು ಬೇಡ ಎನ್ನಲಾಗುವುದಿಲ್ಲ. ಅವರ ಎಲ್ಲ ಚಟುವಟಿಕೆಗಳ ಬಗ್ಗೆ ನನಗೆ ಮಾಹಿತಿಗಳು ಬರುತ್ತವೆ. ಹೋರಾಟ ಮಾಡುವವರಿಗೆ ಬೇಡ ಎನ್ನುವುದಿಲ್ಲ.  ಪಾದಯಾತ್ರೆ ಅವರು ಮಾಡಿಕೊಳ್ಳಲಿ. ವಿರೋಧಪಕ್ಷದವರನ್ನು ಕಸ್ತೂರಿ ರಂಗನ್ ಮತ್ತು  ಬರದ ವಿಚಾರದ ಬಗ್ಗೆ ಚರ್ಚೆ ಮಾಡಲು ಕರೆದಿದ್ದೇವೆ. ಕೆಲವು ನಮ್ಮನ್ನು ಮೂದಲಿಸಿದ್ದಾರೆ. ಸಲಹೆಯನ್ನೂ ನೀಡಿದ್ದಾರೆ. ಈ ವಿಚಾರವಾಗಿ ಸರ್ವಪಕ್ಷದ ನಿಯೋಗ ದೆಹಲಿಗೆ ತೆರಳೋಣವೆಂದು ಹೇಳಿದ್ದೇನೆ. ನಮಗೆ ರಾಜ್ಯದ ಜನರ ಹಿತ ಮುಖ್ಯ. ವಿರೋಧಪಕ್ಷದವರು ಸರ್ವಪಕ್ಷ ನಿಯೋಗದಲ್ಲಿ  ಬರಲು ಒಪ್ಪಿದರೆ ಅವರು ರೈತರೊಂದಿಗೆ ಇದ್ದಾರೆ, ಇಲ್ಲವಾದರೆ ಅವರು ರೈತರೊಂದಿಗೆ ಇಲ್ಲ ಎಂದು ಸಾಬೀತಾಗುತ್ತದೆ” ಎಂದರು.
ಭಾರತ ಮಂಟಪ ಮಾದರಿಯಲ್ಲಿ ‘ಕರ್ನಾಟಕ ಮಂಟಪ’ ನಿರ್ಮಾಣಕ್ಕೆ ಚಿಂತನೆ: ಸಿಎಂ ಡಿ.ಕೆ ಶಿವಕುಮಾರ್
ಬೆಂಗಳೂರು, ಸೆಪ್ಟಂಬರ್,28,2026 (www.justkannada.in): “ದೆಹಲಿಯಲ್ಲಿ ಭಾರತ ಮಂಟಪದ ಮಾದರಿಯಲ್ಲಿ ಜಕ್ಕೂರು,  ಮೈಸೂರು ಲ್ಯಾಂಪ್ಸ್ ಅಥವಾ  ಎನ್ ಜಿ ಇ ಎಫ್ ಸ್ಥಳದಲ್ಲಿ , ಮೆಟ್ರೋ ನಿಲ್ದಾಣ ಸಮೀಪ ‘ಕರ್ನಾಟಕ ಮಂಟಪ’  ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಅರಮನೆ ಮೈದಾನದಲ್ಲಿ ನಡೆದ ಮೊದಲ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿದರು.
“ಪ್ರವಾಸೋದ್ಯಮ ಕಣ್ಣಿಗೆ, ಮನಸ್ಸಿಗೆ ಆನಂದ ನೀಡುತ್ತದೆ. ನಮ್ಮ ರಾಜ್ಯದ ಪರಿಸರ ನಮ್ಮ ದೊಡ್ಡ ಆಸ್ತಿ. ನಮ್ಮ ಸರ್ಕಾರ  ಕಲೆ, ಸಂಸ್ಕೃತಿ, ಮನರಂಜನೆ ಒಳಗೊಂಡಂತೆ  ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದೆ” ಎಂದರು.
ಈಸ್ ಆಫ್ ಡೂಯಿಂಗ್ ಬಿಸಿನೆಸ್ ಮೂಲಕ 2-3 ತಿಂಗಳಲ್ಲೇ ಅನುಮತಿ
“ಪರಿಸರ, ಸಂಸ್ಕೃತಿ, ಉಳಿಸಬೇಕು. ಕೊಡಗು, ಮಲೆನಾಡು ಪ್ರದೇಶಗಳಲ್ಲಿ ಪ್ರವಾಸೋದ್ಯಮ ಉತ್ತೇಜನ ನೀಡಲು ಚಿಂತಿಸಲಾಗಿದೆ. ನಮ್ಮ ಸಂಸ್ಕೃತಿ ಹಾಳುಮಾಡಬಾರದು. ಭಾರತ ಗೊತ್ತಿಲ್ಲದಿದ್ದರೂ ಜನಕ್ಕೆ ಬೆಂಗಳೂರು ಗೊತ್ತಿದೆ. ಬೆಂಗಳೂರಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಿದೇಶಿ ಪಾಸ್ ಪೋರ್ಟ್ ದಾರರು ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವೈಟ್ ಫೀಲ್ಡ್, ಏರ್ ಪೋರ್ಟ್ ರಸ್ತೆಯಲ್ಲಿ ಸಾಕಷ್ಟು ಹೋಟೆಲುಗಳನ್ನು ತೆರೆಯಲಾಗಿದ್ದು, ಹೊಸದಾಗಿ ತೆರೆಯಲಾಗುವ ಹೋಟೆಲುಗಳಿಗೆ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಮೂಲಕ 2-3 ತಿಂಗಳಲ್ಲೇ ಅನುಮತಿ ದೊರಕಿಸಲಾಗುವುದು” ಎಂದರು.
ಹಣ ಸಂಚರಿಸುತ್ತಿದ್ದರೆ ಆರ್ಥಿಕತೆಗೆ ಶಕ್ತಿ
“ಹಣ ಸಂಚರಿಸುತ್ತಿದ್ದರೆ ಆರ್ಥಿಕತೆಗೆ ಶಕ್ತಿ ಬರುತ್ತದೆ. ಆರ್ಥಿಕವಾಗಿ ಶಕ್ತಿಯಿದ್ದರೆ ಇನ್ನಷ್ಟು ಹೊಟೇಲುಗಳನ್ನು ತೆರೆಯಲು ಸಾಧ್ಯ. ಭಾರತದ ಜನ  ಹೊರಗೆ ಹೋಗಿ ಹೂಡಿಕೆ ಮಾಡಿದಂತೆ ಬೇರೆ ಯಾವ ದೇಶದಲ್ಲಿಯೂ ಹೂಡಿಕೆ ಮಾಡಲಾಗುವುದಿಲ್ಲ. ಭಾರತೀಯ ಆರ್ಥಿಕತೆ ಬಲವಾಗಿದೆ. ಭಾರತೀಯರಿಗೂ ಪ್ರವಾಸದಲ್ಲಿ ಆಸಕ್ತಿಯಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಎಲ್ಲವೂ ಲಭ್ಯವಿದೆ. ನಮ್ಮ ಸರ್ಕಾರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬದ್ಧವಾಗಿದೆ” ಎಂದರು.
ಪ್ರವಾಸೋದ್ಯಮದಲ್ಲಿ ಬದ್ಧತೆ, ಉತ್ಸಾಹವಿದ್ದರೆ ಮಾತ್ರ ಯಶಸ್ವಿ
ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅಗತ್ಯವಿರುವ  ಎಲ್ಲವೂ ಇದೆ. ರಾಜ್ಯದಲ್ಲಿ ಪ್ರವಾಸೋದ್ಯಮವೆಂದರೆ ಆತಿಥ್ಯ. ಇದು ಸಾಮಾನ್ಯ ವಿಚಾರವಲ್ಲ. ಪ್ರವಾಸೋದ್ಯಮದಲ್ಲಿ ತೊಡಗಿಕೊಳ್ಳಲು ಬದ್ಧತೆ ಮತ್ತು ಉತ್ಸಾಹವಿರಬೇಕು. ಇದಿಲ್ಲದಿದ್ದರೆ ಪ್ರವಾಸೋದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದರು.
ಪ್ರವಾಸೋದ್ಯಮದಲ್ಲಿ ದುಡಿಯುತ್ತಿರುವವರನ್ನು  ಗುರುತಿಸಲಾಗಿದೆ
“ಪ್ರವಾಸೋದ್ಯಮದ ಬಗ್ಗೆ ನಾನು ಅಧ್ಯಯನ ಮಾಡಿದ್ದೇನೆ. ಪ್ರವಾಸ ಕೈಗೊಳ್ಳುವುದು ನನ್ನ ಹಿಂದಿನ ಹವ್ಯಾಸವಾಗಿತ್ತು. ಪ್ರವಾಸೋದ್ಯಮದಲ್ಲಿ ದುಡಿಯುತ್ತಿರುವವರನ್ನು  ಗುರುತಿಸಿ  ಹೆಚ್ಚಿನ ಜವಾಬ್ದಾರಿ ನೀಡಲು ನಮ್ಮ ಸರ್ಕಾರ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿ ನೀಡುವಾಗ ಹಾಕುವ ಹಾರ ಮತ್ತು ಶಾಲು ಬಹಳ ಭಾರ. ಅದಕ್ಕೆ ತನ್ನದೇ ಆದ ತೂಕವಿದೆ ಎಂದರು. 350ಕ್ಕೂ ಹೆಚ್ಚು ಜನ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿಗಳನ್ನು ಪಡೆದಿದ್ದಾರೆ” ಎಂದರು.
ಗೈಡ್, ಚಾಲಕರು ಪ್ರವಾಸೋದ್ಯಮದ ರಾಯಭಾರಿಗಳು
“ಗೈಡ್ ಕೇವಲ ದಾರಿ ತೋರುವವನಲ್ಲ ಕರ್ನಾಟಕದ ಕಥೆ ಹೇಳುವವನಲ್ಲ. ಟ್ಯಾಕ್ಸಿ ಚಾಲಕ ಕೇವಲ ಚಾಲಕನಲ್ಲ. ಅವರೆಲ್ಲಾ ಪ್ರವಾಸೋದ್ಯಮದ ರಾಯಭಾರಿಗಳು ಎನ್ನುವುದನ್ನು ನಾವು ಮರೆಯುವುದಿಲ್ಲ.  ಕರ್ನಾಟಕದಲ್ಲಿ ಅಗಾಧವಾದ ಸಂಪತ್ತಿದ್ದು ನೈಸರ್ಗಿಕ ಸಂಪನ್ಮೂಲಗಳಿವೆ. ಆದರೆ ಇವುಗಳನ್ನು ನಾವು ಹೆಚ್ಚು ಬಳಸಿಕೊಂಡಿಲ್ಲ. ಇದನ್ನು ಪ್ರಪಂಚಕ್ಕೆ ನಾವು ತೋರಿಸಿಲ್ಲ. ಪ್ರಸ್ತುತ ಪ್ರವಾಸೋದ್ಯಮದಲ್ಲಿ ಹೊಸ ಹಂತಕ್ಕೆ ಬೆಳೆಯುತ್ತಿದ್ದೇವೆ” ಎಂದರು.
ರಾಜ್ಯದ ಸಂಪತ್ತನ್ನು ಹೆಚ್ಚಿನ ಜನರಿಗೆ ಪರಿಚಯ ಮಾಡಿಸಬೇಕು
“ಇಡೀ ಏಷ್ಯಾ ಖಂಡದಲ್ಲಿಯೇ ಮೊಟ್ಟಮೊದಲ ಬಾರಿಗೆ ವಿದ್ಯುತ್ ಬೆಳಕು ಕಂಡ ರಾಜ್ಯ ನಮ್ಮದು. ಶಿವನಸಮುದ್ರದ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳು ಜೋಗ ಜಲಪಾತಕ್ಕಿಂತಲೂ ಅದ್ಭುತವಾಗಿದೆ. ನಮ್ಮ ಸಂಪತ್ತನ್ನು ಹೆಚ್ಚಿನ ಜನರಿಗೆ ಪರಿಚಯ ಮಾಡಿಸಬೇಕು ಪರಿಸರವೂ ಉಳಿಯಬೇಕು. ಹುಲಿ, ಆನೆ, ಸೇರಿದಂತೆ ಕಾಡಿನ ಎಲ್ಲಾ ಪ್ರಾಣಿಗಳನ್ನು ಉಳಿಸಬೇಕು. ಸರ್ಕಾರ ಅನೇಕ ಪ್ರವಾಸೋದ್ಯಮ ನೀತಿಗಳನ್ನು ಹೊರ ತಂದಿದೆ” ಎಂದು ತಿಳಿಸಿದರು.
ನೈಸರ್ಗಿಕ ಮತ್ತು ಸಾಂಸ್ಕೃತಿಕ ಸಂಪತ್ತಿನ ಸದ್ಬಳಕೆ ಅಗತ್ಯ
“ನಮ್ಮ 360 ಕಿಲೋಮೀಟರ್ ವ್ಯಾಪ್ತಿಯ ಕರಾವಳಿಯ ಸಾಮರ್ಥ್ಯವನ್ನು  ನಾವು ಹೆಚ್ಚಾಗಿ ಬಳಸಿಕೊಂಡಿಲ್ಲ. ಮಂಗಳೂರಿನಲ್ಲಿ ಬೃಹತ್ ಕೈಗಾರಿಕೆಗಳಿವೆ. ಬಂದರು ಇದೆಯಾದರೂ ಪಂಚತಾರಾ ಹೋಟೆಲ್ ಗಳಿಲ್ಲ. ಜಾರ್ಜ್ ಅವರಿಗೆ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉತ್ಸಾಹವಿದ್ದು, ಇಲಾಖೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳಲು ‘ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026’ ಗೆ ಅನುಮೋದನೆ ನೀಡಿದೆ. ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಮುಖ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಇದರಡಿಯಲ್ಲಿ ಪ್ರವಾಸೋದ್ಯಮ ಯೋಜನೆಗಳಿಗೆ ‘ಕೈಗಾರಿಕಾ ಮತ್ತು ಮೂಲಸೌಕರ್ಯ ಸ್ಥಾನಮಾನ’ ನೀಡಲು ತೀರ್ಮಾನಿಸಲಾಗಿದೆ” ಎಂದು ವಿವರಿಸಿದರು.
ಹೂಡಿಕೆದಾರರ ಆಸಕ್ತಿ ಕಾಪಾಡಲು ಸಕಲ ವ್ಯವಸ್ಥೆ
“ಜಾಗತಿಕ ಹೂಡಿಕೆದಾರರ ಇಲಾಖೆಯನ್ನು ಕೂಡ ತೆರೆಯಲಾಗಿದ್ದು, ಅನಿವಾಸಿ ಭಾರತೀಯರಿಗೆ ವಿಶೇಷ ಸೌಲಭ್ಯಗಳು, ಹೂಡಿಕೆ ಮಾರ್ಗದರ್ಶನ  ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಈಸ್ ಆಫ್ ಡೂಯಿಂಗ್ ಬಿಸಿನೆಸ್ ಕಲ್ಪಿಸಿ 2-3 ತಿಂಗಳಲ್ಲೇ ಎಲ್ಲಾ ಅನುಮತಿಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೂಡಿಕೆದಾರರ ಆಸಕ್ತಿ ಕಾಪಾಡಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ” ಎಂದರು.
ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಸಮಸ್ಯೆಗಳಿಗೆ ಮುಕ್ತಿ ನೀಡಲು ಯತ್ನ
“ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಸಮಸ್ಯೆಗಳಿಗೂ ಮುಕ್ತಿ ನೀಡಲು ಅನೇಕ ರಾಜ್ಯಗಳೊಂದಿಗೆ ವಿಚಾರ ವಿನಿಮಯ ಮಾಡಿ ಕೇರಳ ಹಾಗೂ ಗೋವಾ ಮಾದರಿಯ ನೀತಿಗಳಿಗೆ ನೀಡಿದಂತೆ ಶಕ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು” ಎಂದರು.
ಚರ್ಚೆಗಳನ್ನು  ಸರ್ಕಾರ ಮುಕ್ತ  ಮನಸ್ಸಿನಿಂದ  ಸ್ವಾಗತಿಸುತ್ತದೆ
“ತುಳುನಾಡಿನಿಂದ ಹೊರಗಿನ ದೇಶಗಳಿಗೆ ತೆರಳಿರುವವರನ್ನು ತವರಿಗೆ  ಕರೆಸಿ ತುಳುನಾಡಿನಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಮನವಿ ಮಾಡಲಾಗಿದೆ. ದಸರಾದಲ್ಲಿ ತುಳುನಾಡು ಬಯಲುಕುಪ್ಪೆ, ರಕ್ಷಣಾ ಇಲಾಖೆಗಳ ಸ್ತಬ್ಧಚಿತ್ರ ರಚಿಸಲು,  ತಯಾರಿಸಲು ಸೂಚಿಸಲಾಗಿದೆ. ಕಾವೇರಿ ಆರತಿ ಕಾರ್ಯಕ್ರಮ ಕೂಡ ನಡೆಯಲಿದ್ದು, ಮೈಸೂರು ಸೇರಿದಂತೆ  ಪ್ರವಾಸೋದ್ಯಮಕ್ಕೆ  ಹೊಸ ರೂಪ ನೀಡಲು ಪ್ರಯತ್ನಿಸಲಾಗುತ್ತಿದೆ” ಎಂದರು.
ರಾಜ್ಯದಲ್ಲಿ ಅನೇಕ ವಿಶ್ವ ಪಾರಂಪರಿಕ ತಾಣಗಳು ಇವೆ. ಚರ್ಚೆಗಳನ್ನು  ಸರ್ಕಾರ ಮುಕ್ತ  ಮನಸ್ಸಿನಿಂದ  ಸ್ವಾಗತಿಸುತ್ತದೆ. ಪ್ರವಾಸೋದ್ಯಮದಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಹೂಡಿಕೆದಾರರಿಗೆ ಶಕ್ತಿ ತುಂಬಬೇಕಿದೆ. ಪರಂಪರೆ, ಇತಿಹಾಸ ಹೊಸ  ಅವಕಾಶಗಳನ್ನು ಸೃಷ್ಟಿಸುತ್ತದೆ.  ನಮ್ಮ ರಾಜ್ಯದ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ನಮ್ಮ ಊರು, ನಮ್ಮ ಊಟ, ಸಂಸ್ಕೃತಿ, ಇತಿಹಾಸ ಎಲ್ಲಕ್ಕೂ ಮಹತ್ವ ನೀಡಬೇಕು” ಎಂದರು.
ಕನ್ವೆನ್ಷನ್ ಕೇಂದ್ರ ಸ್ಥಾಪಿಸಲು  ಚಿಂತನೆ
“ಬುಕ್ ಮೈ ಶೋ ತಂಡದವರು ಮುಂಬೈ ಬಿಟ್ಟರೆ   ಬೆಂಗಳೂರಿನಲ್ಲಿಯೇ ಕೋಲ್ಡ್ ಪ್ಲೇ ಸೇರಿದಂತೆ ವರ್ಷಕ್ಕೆ ಕನಿಷ್ಠ  25 ರಿಂದ 30 ಪ್ರದರ್ಶನಗಳನ್ನು ಬೆಂಗಳೂರಿನಲ್ಲಿಯೇ ನಡೆಸುವುದಾಗಿ ಚರ್ಚೆ ಮಾಡಿದ್ದಾರೆ.  ಕನ್ವೆನ್ಷನ್ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿಯೂ ಸರ್ಕಾರ ಚಿಂತನೆ ನಡೆಸುತ್ತಿದೆ. ಕೆಎಸ್ ಸಿಎ ಅವರೊಂದಿಗೆ ಮುಂದಿನ ವಾರ ನಡೆಸಲಾಗುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಬ್ರಿಗೇಡ್ ಸಂಸ್ಥೆಯವರು ಕೂಡ ಇದರ   ಭಾಗವಾಗಲು ಇಚ್ಛಿಸಿದ್ದಾರೆ” ಎಂದರು.
“ಏಷ್ಯಾದ ಅತಿ ಎತ್ತರದ ಸ್ಕೈ ಡೆಕ್ ನಿರ್ಮಾಣ ಕಾರ್ಯ ಇಷ್ಟು ಹೊತ್ತಿಗೆ ಮುಗಿಯಬೇಕಿತ್ತು. ಇದರ ಅನುಷ್ಠಾನಕ್ಕೆ  ಪಿ ಪಿ ಪಿ ಮಾದರಿ ಅನುಸರಿಸಬೇಕಿತ್ತು. ಸೂಕ್ತ ಸ್ಥಳ ಗುರುತಿಸಿ ಅನುಷ್ಠಾನ ಮಾಡಲಾಗುವುದು” ಎಂದರು.
“ಮಂಗಳೂರು ಐ”- ಮಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ  ದುಬೈ ಶೈಲಿಯ ಬೃಹತ್ ಆಕಾಶಗೋಪುರ ಮತ್ತು ಪ್ರವಾಸಿ ಆಕರ್ಷಣೆಯ ಯೋಜನೆಯಾಗಿದೆ. ಇವುಗಳ ಅನುಷ್ಠಾನ ಕಷ್ಟಕರ ಹಾಗೂ ಸಮಯ ಹಿಡಿಯಲಿದೆ. ಮಂಗಳೂರಿನಲ್ಲಿ ತೆಗೆದುಕೊಂಡ ನಿರ್ಧಾರಗಳ ಅನುಷ್ಠಾನಕ್ಕೆ ತೀರ್ಮಾನಿಸಬೇಕಿದೆ” ಎಂದರು.