Chamundi Hill - become -plastic free- area - start - Dussehra- Subhash B Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ದಸರಾ ಪ್ರಾರಂಭವಾಗುವ ಮುಂಚೆ ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು-ನ್ಯಾ. ಸುಭಾಷ್ ಬಿ ಅಡಿ
ಮೈಸೂರು ಜುಲೈ,14,2023(www.justkannada.in):  ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಎಲ್ಲಾ ಅಗತ್ಯವಾದ ಕ್ರಮಗಳನ್ನು ಕೈಗೊಂಡು, ದಸರಾ ಪ್ರಾರಂಭವಾಗುವ ಮುಂಚೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕಣದ ಮುಖ್ಯಸ್ಥರು ಹಾಗೂ ನ್ಯಾಯಮೂರ್ತಿಗಳಾದ ಸುಭಾಷ್ ಬಿ ಅಡಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಸ ವಿಲೇವಾರಿ ಕುರಿತು  ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಂಧ್ರಕ್ಕೆ ತಿರುಪತಿ ಹೇಗೆ ಪ್ರಮುಖ, ಕರ್ನಾಟಕದಲ್ಲಿ ಅಷ್ಟೇ ಪ್ರಮುಖ  ಚಾಮುಂಡಿ ಬೆಟ್ಟ. ಪರಿಸರವನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಚಾಮುಂಡಿ ಬೆಟ್ಟಕ್ಕೆ ಎಂಟ್ರಿ ಆಗುವ ಪ್ರದೇಶದಲ್ಲಿಯೇ ಪ್ಲಾಸ್ಟಿಕ್ ಕೊಂಡ್ಯೋಯ್ಯದಂತೆ ಪರಿಶೀಲಿಸಬೇಕು. ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಗಳ ಬಳಕೆ ನಿಷೇಧಿಸಿ 20 ಲೀಟರ್ ನ ಕ್ಯಾನ್ ನೀರನ್ನು ಪೇಪರ್ ಕಪ್ ನಲ್ಲಿ ಬಳಸಬೇಕು ಎಂದರು.

ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಬೆಟ್ಟ ಮುಕ್ತ ಮಾಡಲು ಅಲ್ಲಿನ ಗ್ರಾಮ ಪಂಚಾಯಿತಿ ಹಾಗೂ ದೇವಸ್ಧಾನ ಮಂಡಳಿ ಸೇರಿ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮವಹಿಸಬೇಕು. ಬಳಸಿದರೆ ದಂಡ ವಿಧಿಸುವ ಕೆಲಸ ಆಗಬೇಕು. ಕಾನೂನು ಪಾಲನೆ ಮಾಡದ್ದರೆ ಲೈಸನ್ಸ್ ರದ್ದು ಪಡಿಸಿ,  ದೇವಸ್ಧಾನದ ಪ್ರವೇಶದಲ್ಲಿ ಪ್ಲಾಸ್ಟಿಕ್ ತರದಂತೆ  ಪರಿಶೀಲಿಸಬೇಕು ಎಂದರು.

ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಸದಂತೆ ಅರಿವು ಮೂಡಿಸಿ. ಬೀದಿ ಬದಿ ವ್ಯಾಪಾರಿಗಳು ಏಕ ಬಳಕೆಯ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಬೇಕು. ಕಾನೂನು ಪಾಲಿಸದಿದ್ದರೆ ದಂಡ ಹಾಕಿ. ಮೈಸೂರನ್ನು ಸ್ವಚ್ಛ ನಗರಿಯಾಗಿ ಇಟ್ಟುಕೊಳ್ಳಬೇಕು. ಏಕ ಬಳಕೆಯ ಪ್ಲಾಸ್ಟಿಕ್ ನ್ನು ನಿಷೇಧಿಸಿದ ಮೊದಲ ನಗರ ಮೈಸೂರು. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು ಎಂದರು.

ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ಸರಿಯಾಗಿ ನಿರ್ವಹಣೆ ಮಾಡಬೇಕು. ಹಸಿ ಕಸವನ್ನು ಘನ ತಾಜ್ಯ ವಿಲೇವಾರಿ ಘಟಕ ಗಳಲ್ಲಿ ಗೊಬ್ಬರವಾಗಿ ತಯಾರಿಸಿ ಮರು ಬಳಕೆ ಮಾಡಬೇಕು. ರಸ್ತೆಗಳನ್ನು ಯಾವುದಾದರೂ ಉದ್ದೇಶಕ್ಕೆ ಅನುಮತಿ ಪಡೆದು ಆಗೆದರೆ, ಅವರೇ ರಸ್ತೆಯನ್ನು ದುರಸ್ಥಿ ಮಾಡಬೇಕು. ಮದುವೆ ಹಾಗೂ ಇತರೆ ಮೆರವಣೆಗೆ ಅಥವಾ 100 ಕಿಂತ ಹೆಚ್ಚಿನ ಜನ ಸೇರುವ ಸಭೆ ಸಮಾರಂಭಗಳಲ್ಲಿ ಆಗುವ ಕಸ ನಿರ್ವಹಣೆ ಗೆ ಶುಲ್ಕ ವಿಧಿಸಬೇಕು. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಗಳಲ್ಲಿ  ಕಸವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕೆಮಿಕಲ್ ಹಾಗೂ ಬಾಯೋಮೆಡಿಕಲ್ ವೆಸ್ಟ್ ನ್ನು ಸರಿಯಾಗಿ ಏಜೆನ್ಸಿಗಳು ಸಂಗ್ರಹಿಸಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ್ದು, ಬಳಕೆದಾರರಿಗೆ ದಂಡ ವಿಧಿಸಲಾಗುತ್ತಿದೆ. ಆಷಾಡ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಸಿಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಲಲಿತ ಮಹಲ್ ಪ್ಯಾಲೇಸ್ ಬಳಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ 5 ತಂಡಗಳನ್ನು ರಚಿಸಿ ಪ್ಲಾಸ್ಟಿಕ್ ನ್ನು ಚಾಮುಂಡಿ ಬೆಟ್ಟಕ್ಕೆ ಏಕ ಬಳಕೆಯ ಪ್ಲಾಸ್ಟಿಕ್ ತೆಗೆದುಕೊಂಡು ಹೋಗದಂತೆ ತಡೆಯಲಾಗಿದೆ. ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನೀರನ್ನು ಬಳಸದೆ ಪೇಪರ್ ಅಥವಾ ಗಾಜಿನ ಲೋಟದಲ್ಲಿ ನೀರನ್ನು ನೀಡಲಾಗುತ್ತಿದೆ ಎಂದರು.

ಚಾಮುಂಡಿ ಬೆಟ್ಟದ ಪ್ರಾಧಿಕಾರವನ್ನು ರಚಿಸಲು ಮಾನ್ಯ ಮುಖ್ಯಮಂತ್ರಿ ಗಳು ಬಜೆಟ್ ನಲ್ಲಿ ಘೋಷಣೆ ಮಾಡಿದ್ದು ಪ್ರಾಧಿಕಾರ ರಚನೆ ಆದರೆ ಪ್ಲಾಸ್ಟಿಕ್ ಮುಕ್ತ ಚಾಮುಂಡಿ ಬೆಟ್ಟ ಮಾಡಲು ಅನುಕೂಲವಾಗುತ್ತದೆ. ಮುಂದಿನ ದಸರಾದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.

ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ರಾದ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ, ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿನೇಶ್ ಬಿ ಜಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Chamundi Hill – become -plastic free- area – start – Dussehra- Subhash B

The post ದಸರಾ ಪ್ರಾರಂಭವಾಗುವ ಮುಂಚೆ ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು-ನ್ಯಾ. ಸುಭಾಷ್ ಬಿ ಅಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.