Census 2027 Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಜನಗಣತಿ–2027: ಸ್ವಯಂ-ಗಣತಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ
ಮೈಸೂರು, ಮಾರ್ಚ್,31,2026 (www.justkannada.in): ಜನಗಣತಿ-2027 ರ ಅಂಗವಾಗಿ ಸಾರ್ವಜನಿಕರು ಸುರಕ್ಷಿತ ವೆಬ್ ಪೋರ್ಟಲ್ ಮೂಲಕ ಸ್ವಯಂ- ಗಣತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮೈಸೂರು  ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು ಏಪ್ರಿಲ್ 16 ರಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ 15 ದಿನಗಳ ಮುಂಚಿತವಾಗಿ ಅಂದರೆ ದಿನಾಂಕ: 01.04.2026 ರಿಂದ 15.04.2026 ವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದೆ.  ಸಾರ್ವಜನಿಕರು ಸ್ವಯಂ ಗಣತಿಗಾಗಿ  ವೆಬ್ ಸೈಟ್ ವಿಳಾಸ www.se.census.gov.in ಬಳಸಿಕೊಂಡು ಲಾಗ್ ಇನ್ ಆಗಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಸಂಬಂಧ ಕೇಳಲಾಗುವ 33 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ‌.

ಸಾರ್ವಜನಿಕರು ಸ್ವಯಂ ಗಣತಿ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ SMS ಮತ್ತು ಈ ಮೇಲ್ ಪೊರ್ಟಲ್ ಗೆ ರೆಫರೆನ್ಸ್ ಐ.ಡಿ ಸ್ವೀಕೃತವಾಗುತ್ತದೆ.  ಗಣತಿದಾರರು ಮನೆಗೆ ಭೇಟಿ ನೀಡಿದಾಗ ರೆಫರೆನ್ಸ್ ಐ.ಡಿ ನೀಡುವ ಮೂಲಕ ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿರುತ್ತದೆ. ಒಂದು ವೇಳೆ ರೆಫರೆನ್ಸ್ ಐ.ಡಿ ನೀಡದಿದ್ದಾರೆ ಗಣತಿದಾರರು ಮೊದಲಿನಿಂದಲೂ ಎಲ್ಲಾ ಪ್ರಶ್ನೆಗಳನ್ನು ಕೇಳಿ ಹೊಸದಾಗಿ ಗಣತಿ ಮಾಡಬೇಕಿರುತ್ತದೆ.

ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವುದರಿಂದ ಗಣತಿದಾರರು ಬಂದಾಗ ಆಗುವ ಸಮಯ ವ್ಯಯವನ್ನು ತಪ್ಪಿಸಬಹುದಾಗಿದೆ‌‌. ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Census 2027, Public, participate, Mysore, DC

The post ಜನಗಣತಿ–2027: ಸ್ವಯಂ-ಗಣತಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಎರಡು ಹಂತದಲ್ಲಿ ಜನಗಣತಿ-2027: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಬೆಂಗಳೂರು ಗ್ರಾಮಾಂತರ, ಮಾರ್ಚ್,9,2026 (www.justkannada.in): ಜನಗಣತಿ-2027 ಭಾರತದ 16ನೇ ಜನಗಣತಿ ಮತ್ತು ಸ್ವಾತಂತ್ರ್ಯದ ನಂತರದ 8ನೇ ಜನಗಣತಿ ಇದಾಗಿದೆ. ಈ ಬಾರಿಯ ಜನಗಣತಿಯು ಎರಡು ಹಂತದಲ್ಲಿ ನಡೆಯಲಿದ್ದು ಏಪ್ರಿಲ್ 1, 2026 ರಿಂದ ಸೆಪ್ಟೆಂಬರ್ 30, 2026 ರವರೆಗೆ ನಡೆಯಲಿರುವ ಮೊದಲ ಹಂತದ ಮನೆಗಳ ಪಟ್ಟಿ ಮತ್ತು ವಸತಿ ಗಣತಿಯನ್ನು ಒಳಗೊಂಡಿದೆ. ಎರಡನೇ ಹಂತದ ಜನಸಂಖ್ಯಾ ಗಣತಿಯು ಫೆಬ್ರವರಿ 9, 2027ರಿಂದ ಫೆಬ್ರವರಿ 28, 2027ರವರೆಗೆ ನಡೆಯಲಿದೆ.

ಈ ಹಿಂದೆ 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿತ್ತು. ಬಳಿಕ 2021ರಲ್ಲಿ ಜನಗಣತಿ ನಡೆಯಬೇಕಾಗಿತ್ತು. ಆದರೆ, ಕೋವಿಡ್ ಕಾರಣಕ್ಕೆ 10 ವರ್ಷಗಳಿಗೆ ಒಮ್ಮೆ ನಡೆಯಬೇಕಾದ ಜನಗಣತಿ ನಡೆದಿರಲಿಲ್ಲ. ಇದೀಗ 2026-27ನೇ ಸಾಲಿನಲ್ಲಿ ಜನಗಣತಿ ನಡೆಯುತ್ತಿದೆ.

ಮೊದಲ ಹಂತದಲ್ಲಿ ಏಪ್ರಿಲ್ 01 ರಿಂದ 15 ವರೆಗೆ ಸಾರ್ವಜನಿಕರು ಜನಗಣತಿ ಆ್ಯಪ್ ಅಥವಾ ಪೋರ್ಟಲ್ ಮೂಲಕ ಸ್ವಯಂ ಮಾಹಿತಿ ದಾಖಲಿಸಿಕೊಳ್ಳಬಹುದು. ನಂತರ ಏಪ್ರಿಲ್ 16 ರಿಂದ ಮೇ 16 ರವರೆಗೆ ಗಣತಿದೋರರು ಮನೆಪಟ್ಟಿ, ಮನೆ ಗಣತಿ  ಕ್ಷೇತ್ರ ಕಾರ್ಯ ಮಾಡಲಿದ್ದಾರೆ. ಗಣತಿದಾರರ ಸ್ಮಾರ್ಟ್ ಫೋನ್ ಮೀಸಲಾದ ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಫ್‌ಲೈನ್‌ನಲ್ಲಿಯೂ ಈ ಆ್ಯಪ್ ಕೆಲಸ ಮಾಡಲಿದ್ದು, ನೆಟ್‌ವರ್ಕ್ ವ್ಯಾಪ್ತಿಗೆ ಬಂದಾಗ ಸಂಗ್ರಹಿಸಿದ ಮಾಹಿತಿಗಳು ಸರ್ವ‌್ರಗೆ ಸಂಯೋಜನೆ ಆಗಲಿವೆ. ಗಣತಿ ಪ್ರಕ್ರಿಯೆಯನ್ನು ಆರಂಭದಿಂದ ಮುಕ್ತಾಯದವರೆಗೆ ನಿರ್ವಹಿಸಲು ‘ಜನಗಣತಿ ನಿರ್ವಹಣೆ ಮತ್ತು ಮಾನಿಟರಿಂಗ್ ಸಿಸ್ಟಂ’ (ಸಿಎಂಎಂಎಸ್) ಎಂಬ ವಿಶೇಷ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ.

ಜನಗಣತಿ ಸಲುವಾಗಿ ಬ್ಲಾಕ್ ರಚಿಸಲಾಗಿದ್ದು,150 ರಿಂದ 200 ಮನೆಗಳು ಅಥವಾ 700 ರಿಂದ 800 ಜನಸಂಖ್ಯೆಗೆ ಓರ್ವ ಗಣತಿದಾರರನ್ನು ಮತ್ತು ಪ್ರತಿ ಆರು ಜನ ಗಣತಿದಾರರಿಗೆ ಓರ್ವ ಮೇಲ್ವಿಚಾರಕರನ್ನು ನೇಮಿಸಲಾಗಿದೆ.

ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು, ಜಿಲ್ಲಾ ಜನಗಣತಿ ಅಧಿಕಾರಿಗಳಾಗಿ ಅಪರ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಗಳಾಗಿ ಜಿಪಂ ಮುಖ್ಯ ಯೋಜನಾಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು,ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಉಪ ವಿಭಾಗಾಧಿಕಾರಿಗಳು ಉಪ ವಿಭಾಗ ಹಂತದ ಚಾರ್ಜ್ ಅಧಿಕಾರಿಗಳಾಗಿ, ಗ್ರಾಮೀಣ ಪ್ರದೇಶದ ಚಾರ್ಜ್ ಅಧಿಕಾರಿಗಳಾಗಿ ತಹಶೀಲ್ದಾರರು,ನಗರ ಪ್ರದೇಶಕ್ಕೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಚಾರ್ಜ್ ಅಧಿಕಾರಿಗಳಾಗಿರುತ್ತಾರೆ.

ಮೊದಲ ಹಂತದಲ್ಲಿ ಮನೆ ಗಣತಿ ‘ಮೊದಲ ಹಂತದಲ್ಲಿ ಮನೆ ಗಣತಿ ಮಾತ್ರ ನಡೆಯಲಿದ್ದು, ಕ್ಷೇತ್ರ ಮಟ್ಟದ ಗಣತಿದಾರರು ಎಚ್‌ಎಲ್‌ಬಿ (ಹೌಸ್ ಲಿಸ್ಟಿಂಗ್ ಬ್ಲಾಕ್) ಕ್ರಿಯೇಟರ್ ಆ್ಯಪ್ ಬಳಸಿ ಪ್ರತಿ ಬ್ಲಾಕ್‌ನ ಮನೆಗಳ ಲೊಕೇಶನ್ ಮತ್ತು ವ್ಯಾಪ್ತಿಯನ್ನು ಜಿಯೋ ಟ್ಯಾಗಿಂಗ್‌ ಮೂಲಕ ಗುರುತಿಸಲಿದ್ದಾರೆ. ಮೊದಲ ಹಂತದಲ್ಲಿ 33 ಪ್ರಶ್ನೆ ಒಳಗೊಂಡಿದ್ದು ಮನೆಗಳ ಸಂಖ್ಯೆ, ಗೋಡೆ, ಛಾವಣಿ ನಿರ್ಮಾಣಕ್ಕೆ ಬಳಸಿದ ವಸ್ತುಗಳು, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಮತ್ತು ಮನೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.

ಎರಡನೇ ಹಂತ ಜನಸಂಖ್ಯಾ ಗಣತಿ ಎರಡನೇ ಹಂತದಲ್ಲಿ  ಪ್ರತಿ ವ್ಯಕ್ತಿಯ ವಯಸ್ಸು, ಲಿಂಗ, ಶಿಕ್ಷಣ, ಉದ್ಯೋಗ, ಧರ್ಮ ಮತ್ತು ಭಾಷೆಯಂತಹ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ.

ಜನಗಣತಿ-2027 ಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ಚಾರ್ಜ್ ಆಫೀಸರ್ ಗಳಿಗೆ ತರಬೇತಿ ನೀಡಲಾಗುವುದು. ಗಣತಿದಾರರಿಗೂ ತರಬೇತಿ ನೀಡಲಾಗುತ್ತಿದೆ. ಸಾರ್ವಜನಿಕರು ಜನಗಣತಿಗೆ ನಿಖರವಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು  ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ತಿಳಿಸಿದ್ದಾರೆ.

Key words: Census 2027, conducted, two phases

The post ಎರಡು ಹಂತದಲ್ಲಿ ಜನಗಣತಿ-2027:  ಜಿಲ್ಲಾಡಳಿತದಿಂದ ಸಕಲ ಸಿದ್ಧತೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.