Cancel - old pension-state government - adopt Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಹಳೆ ಪಿಂಚಣಿ ರದ್ದು : ನೂತನ ಪಿಂಚಣಿ ಯೋಜನೆಗೆ ಅಳವಡಿಸಿಕೊಳ್ಳಲು ವಿವಿಗಳಿಗೆ ರಾಜ್ಯ ಸರ್ಕಾರ ಆದೇಶ.
ಬೆಂಗಳೂರು,ಸೆಪ್ಟಂಬರ್,18,2021(www.justkannada.in): ವಿಶ್ವವಿದ್ಯಾನಿಲಯಗಳಲ್ಲಿ ಹಳೆಯ ಪಿಂಚಣಿಯಲ್ಲಿ ಮುಂದುವರಿಸಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದ್ದು ಈ  ಹಿನ್ನೆಲೆಯಲ್ಲಿ ದಿನಾಂಕ 1-4-2006 ಈ ಮೊದಲು ಪಿಂಚಣಿಯುಕ್ತ ಸೇವೆಯಲ್ಲಿದ್ದು, ತದನಂತರ ವಿಶ್ವವಿದ್ಯಾಲಯಗಳಲ್ಲಿ ನೇರ ನೇಮಕಾತಿಯ ಮೂಲಕ ಹೊಸ ಹುದ್ದೆ ಪಡೆದು ಸೇರಿದವರನ್ನು ಹೊಸ ಪಿಂಚಣಿ ಯೋಜನೆಗೆ ಅಳವಡಿಸುವಂತೆ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ವಿಶೇಷ ಕಾರ್ಯದರ್ಶಿ ಪದ್ಮಾವತಿ ಅವರು, ಕರ್ನಾಟಕ ಸರ್ಕಾರದಲ್ಲಿ ದಿನಾಂಕ 01-04-2006 ಅನ್ವಯವಾಗುವಂತೆ ನೂತನ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. ಇದರ ಪ್ರಕಾರ 01-04-2006ರ ನಂತರದ ನೇರ ನೇಮಕಾತಿಯಲ್ಲಿ ಆಯ್ಕೆಯಾದವರನ್ನು ಕಡ್ಡಾಯವಾಗಿ ನೂತನ ಪಿಂಚಣಿ ಯೋಜನೆಗೆ ಅಳವಡಿಸಬೇಕಾಗಿದೆ. ಸರ್ಕಾರದ ಪಿಂಚಣಿ ನೀತಿಯನ್ನು ಸರ್ಕಾರದಿಂದ ಅನುದಾನ ಪಡೆಯುವ ಎಲ್ಲಾ ವಿಶ್ವವಿದ್ಯಾಲಯಗಳು ಅನಸರಿಸಬೇಕಾಗುತ್ತದೆ. ಆದರೆ ರಾಜ್ಯದಲ್ಲಿನ ಕೆಲವು ವಿಶ್ವವಿದ್ಯಾಲಯಗಳು ಅವರವರ ಮಟ್ಟದಲ್ಲಿ ದಿನಾಂಕ 1-4-2006 ರ ನಂತರ ನೇರ ನೇಮಕಾತಿಯಾಗಿರುವವರನ್ನು ಹಳೆಯ ಪಿಂಚಣಿಯಲ್ಲಿ ಮುಂದುವರೆಸಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಮುಂದುವರೆದು, ಕೆಲವು ವಿಶ್ವವಿದ್ಯಾಲಯಗಳು ನೇರ ನೇಮಕಾತಿಯಲ್ಲಿ 01-04-2006 ರ ನಂತರದ ನೇರ ನೇಮಕಾತಿ ಸಂದರ್ಭದಲ್ಲಿ ಹೊಸಹುದ್ದೆಗೆ ಸೇರಲು ಅವಕಾಶ ನೀಡಿ, ತದ ನಂತರ ಅವರಿಗೆ ಅದೇ ಹುದ್ದೆಯಲ್ಲಿ ಪದೋನ್ನತಿಯನ್ನೂ ಸಹ ಸ್ವೀಕರಿಸಲು ಅವಕಾಶ ನೀಡಿ ಹಳೆಯ ಪಿಂಚಣಿಯಲ್ಲಿ ಮುಂದುವರೆಸಿದ್ದು ಇದಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ.

ದಿನಾಂಕ 01-04-2006 ರ ನಂತರದ ಎಲ್ಲ ನೇಮಕಾತಿಗಳು ಹೊಸ ನೇಮಕಾತಿಗಳಾಗಿದ್ದು, ನೂತನ ಪಿಂಚಣಿ ಯೋಜನೆಯಡಿಯಲ್ಲಿನ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ಹಿಂದಿನ ಪಿಂಚಣಿ ಯೋಜನೆಯಡಿಯಲ್ಲಿನ ಸೇವೆಯನ್ನು ಮುಂದುವರೆದ ಸೇವೆಯೆಂದು ಪರಿಗಣಿಸಿ ಹಳೆಯ ಯೋಜನೆಯ ವ್ಯಾಪ್ತಿಯಲ್ಲಿ ಮುಂದುವರೆಸಲು ಪರಿಗಣಿಸಲು ಅವಕಾಶವಿರುವುದಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಈ ರೀತಿ ಹಳೆಯ ಪಿಂಚಣಿಯಲ್ಲಿ ಮುಂದುವರಿಸಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರವು ರದ್ದುಗೊಳಿಸಿದ್ದು, ಅವರಿಗೆ ಹೊಸ ಪಿಂಚಣಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಅಳವಡಿಸಲು ಸರ್ಕಾರ ಆದೇಶಿಸಿದೆ.

Key words: Cancel – old pension-state government – adopt – new pension scheme-university

The post ಹಳೆ ಪಿಂಚಣಿ ರದ್ದು : ನೂತನ ಪಿಂಚಣಿ ಯೋಜನೆಗೆ ಅಳವಡಿಸಿಕೊಳ್ಳಲು ವಿವಿಗಳಿಗೆ ರಾಜ್ಯ ಸರ್ಕಾರ ಆದೇಶ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.