campuses. | Just Kannada - Daily News Updates

ಕ್ವಿನ್ ಸಿಟಿಯಲ್ಲಿ ವಿದೇಶಿ ವಿವಿಗಳ ಕ್ಯಾಂಪಸ್ ಗೆ ಸರ್ಕಾರದ ಒಲವು: ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್- ಸಚಿವ ಎಂ.ಬಿ ಪಾಟೀಲ್
ಬೆಂಗಳೂರು,ಆಗಸ್ಟ್,21,2026 (www.justkannada.in):  ದೊಡ್ಡಬಳ್ಳಾಪುರ ಮತ್ತು ಡಾಬಸಪೇಟೆ ನಡುವೆ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ ಟೊಯೊಟಾದಂತಹ 8 ಅಗ್ರಗಣ್ಯ ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳು (ಒಟ್ಟು 14) ಒಡಂಬಡಿಕೆ ಮಾಡಿಕೊಂಡಿವೆ. ಕೆಲವು ವಿದೇಶಿ ವಿ.ವಿ.ಗಳು ತಮ್ಮ ಅಗತ್ಯಕ್ಕೆ ಹೊಂದುವಂತಹ ಕಟ್ಟಡಗಳನ್ನು (ಬಿಲ್ಡ್ ಟು ಸೂಟ್) ಕೇಳುತ್ತಿವೆ. ಈ ನಿಟ್ಟಿನಲ್ಲಿ ಸೂಕ್ತ ಮಾದರಿ ಅಳವಡಿಸಿಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ನಾಮಕರಣ ಸದಸ್ಯ ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ಎಂ.ಬಿ ಪಾಟೀಲ್ ಉತ್ತರ ನೀಡಿದರು.

ಒಟ್ಟು 5 ಸಾವಿರ ಎಕರೆಯಲ್ಲಿ ಕ್ವಿನ್ ಸಿಟಿ ಅಸ್ತಿತ್ವಕ್ಕೆ ಬರುತ್ತಿದೆ. ಈಗ ಮೊದಲ ಹಂತದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಟೊಯೊಟಾ ಕಂಪನಿಯು ತನ್ನ ತವರಾಗಿರುವ ಜಪಾನಿನಲ್ಲಿ ಕೂಡ ಹೊಂದಿಲ್ಲದಂತಹ ಅತ್ಯುತ್ಕೃಷ್ಟ ಗುಣಮಟ್ಟದ ನಾವೀನ್ಯತಾ ಕೇಂದ್ರವನ್ನು ಇಲ್ಲಿ ಸ್ಥಾಪಿಸುತ್ತಿದೆ. ಜೊತೆಗೆ ಜಾಗತಿಕ ಮಟ್ಟದ ವೈದ್ಯಕೀಯ ಸಂಸ್ಥೆಗಳು, ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಕಾನೂನು ಶಾಲೆಯ ಕ್ಯಾಂಪಸ್ ಕೂಡ ಇಲ್ಲಿ ಬರಲಿವೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ವಿವರಿಸಿದ್ದಾರೆ.

ಜಾಗತಿಕವಾಗಿ 2ನೇ ಶ್ರೇಯಾಂಕ ಹೊಂದಿರುವ ಲಂಡನ್ನಿನ ಇಂಪೀರಿಯಲ್ ಕಾಲೇಜು, 19ನೇ ಶ್ರೇಯಾಂಕದ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿವಿ, 139ನೇ ಸ್ಥಾನದಲ್ಲಿರುವ ಲಿವರ್ ಪೂಲ್ ವಿವಿ, 164ನೇ ಸ್ಥಾನದಲ್ಲಿರುವ ಲ್ಯಾಂಕಾಸ್ಟರ್ ವಿವಿ, 241ನೇ ಸ್ಥಾನದಲ್ಲಿರುವ ಲಾ ಟ್ರೋಬ್ ವಿವಿ ಮತ್ತು 374ನೇ ಸ್ಥಾನದಲ್ಲಿರುವ ಫ್ಲಿಂಡರ್ಸ್ ವಿವಿ ರಾಜ್ಯ ಸರಕಾರದೊಂದಿಗೆ ಈಗಾಗಲೇ ಒಡಂಬಡಿಕೆಗೆ ಅಂಕಿತ ಹಾಕಿವೆ. ಈ ಪೈಕಿ ಸೌತ್ ವೇಲ್ಸ್ ಮತ್ತು ಲಿವರ್ಪೂಲ್ ವಿ.ವಿ.ಗಳು ಬೆಂಗಳೂರಿನ ಮಾನ್ಯತಾ ಬಿಝಿನೆಸ್ ಪಾರ್ಕ್ ಮತ್ತು ವೈಟ್ ಫೀಲ್ಡ್ ನಲ್ಲಿರುವ ಅಲೆಂಬಿಕ್ ಸಿಟಿ ಸಂಕೀರ್ಣದಲ್ಲಿ ಕ್ಯಾಂಪಸ್ ಆರಂಭಿಸಿವೆ. ಇವು ಕ್ವಿನ್ ಸಿಟಿಯಲ್ಲಿ ಕ್ಯಾಂಪಸ್ ತೆರೆಯಬೇಕು ಎನ್ನುವುದು ಸರಕಾರದ ಆಶಯವಾಗಿದೆ. ಇಂಪೀರಿಯಲ್ ಕಾಲೇಜ್ ನಮ್ಮಲ್ಲಿ ಇನ್ನೋವೇಶನ್ ಹಬ್ ಸ್ಥಾಪಿಸಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.

ಕೆಲವು ಕಂಪನಿಗಳು/ ವಿ.ವಿ.ಗಳು ‘ಬಿಲ್ಡ್ ಟು ಸೂಟ್’ ಮಾದರಿ ಬಯಸುತ್ತಿವೆ. ಇಂತಹ ಕಂಪನಿಗಳಿಗೆ ಅಗತ್ಯಗಳಿಗೆ ತಕ್ಕಂತೆ ಕಟ್ಟಡ ನಿರ್ಮಿಸಿ ಕೊಡುವ ಚಿಂತನೆ ಇದೆ. ಇಂತಹ ಕಡೆಗಳಲ್ಲಿ ಮುಂದಿನ 30-40 ವರ್ಷಗಳ ಕಾಲ ಅವು ಸುಗಮವಾಗಿ ಸಕ್ರಿಯವಾಗಿರಬಹುದು. ಕಟ್ಟಡ ಕೊಡುವಾಗ ಸಂಸ್ಥೆಗಳ ಅರ್ಹತೆಗೆ ಮಾತ್ರ ಆದ್ಯತೆ ಕೊಡಲಾಗುವುದು. ಕ್ವಿನ್ ಸಿಟಿಯಲ್ಲಿ ವಸತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳು ಕೂಡ ಇರಲಿವೆ. ಈ ಬಗ್ಗೆ ಇನ್ನೊಂದು ವರ್ಷದಲ್ಲಿ ಸೂಕ್ತ/ಪ್ರತಿಷ್ಠಿತ ಸಂಸ್ಥೆಗಳಿಗೆ ಜಾಗ‌ ಕೊಡುವ ಕೆಲಸ ಮಾಡಲಾಗುವುದು ಎಂದು  ಸಚಿವ ಎಂ.ಬಿ ಪಾಟೀಲ್ ಅವರು ನುಡಿದಿದ್ದಾರೆ.

ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್

ಮೈಸೂರಿನಲ್ಲಿ ಕೂಡ ಆಧುನಿಕ ಕೈಗಾರಿಕೆಗಳು ಬರಬೇಕು ಎಂಬ ಸದಸ್ಯ ಕೆ.ಶಿವಕುಮಾರ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ ಪಾಟೀಲ್, ಅಲ್ಲಿನ ವಿಮಾನ ನಿಲ್ದಾಣದ ಸಮೀಪದಲ್ಲಿ ಸುಸಜ್ಜಿತ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಆದರೆ ಅಲ್ಲಿಯ ಸ್ಥಳೀಯರು ತಮ್ಮ ಭೂಮಿಗೆ ಬೆಂಗಳೂರಿನಲ್ಲಿ ಇರುವಷ್ಟೇ ಪರಿಹಾರ ಕೇಳುತ್ತಿದ್ದು, ಇದು ಕಗ್ಗಂಟಾಗಿದೆ. ಇದನ್ನು ಬಗೆಹರಿಸಿಕೊಂಡು ಮುಂದುವರಿಯಲಾಗುವುದು ಎಂದಿದ್ದಾರೆ.

ನಂಜನಗೂಡಿನ ಬಳಿ ಸೆಮಿಕಂಡಕ್ಟರ್ ಉದ್ಯಮಕ್ಕೆ ಜಾಗ ಗುರುತಿಸಲಾಗಿತ್ತು. ರಾಜ್ಯದಲ್ಲೇ ಸಂಶೋಧನೆ ಮತ್ತು ವಿನ್ಯಾಸದ ಜತೆಗೆ ಉತ್ಪಾದನೆ ಕೂಡ ಆಗಬೇಕು. ಆದರೆ ಉತ್ಪಾದನೆ ಆಧರಿತ ಪ್ರೋತ್ಸಾಹನಾ ಭತ್ಯೆ (ಪಿಎಲ್ಐ) ಪಡೆಯಲು ಕಂಪನಿಗಳು ಕೇಂದ್ರ ಸರಕಾರವನ್ನು ಕೋರಬೇಕು. ಈ ಹಂತದಲ್ಲಿ ಕೇಂದ್ರ ಸರ್ಕಾರವು ಅಂತಹ ಸಂಸ್ಥೆಗಳಿಗೆ ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಹೂಡಿಕೆ ಮಾಡುವಂತೆ ಒತ್ತಡ ಹೇರುತ್ತಿವೆ. ಇದರ ಹಿಂದೆ ಕೇಂದ್ರದ ರಾಜಕೀಯ ನಿರ್ಧಾರವಿದೆ. ಆದರೂ ರಾಜ್ಯಕ್ಕೆ ಲ್ಯಾಮ್ ರೀಸರ್ಚ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ತರಹದ ದೈತ್ಯ ಸೆಮಿಕಂಡಕ್ಟರ್ ಉದ್ದಿಮೆಗಳನ್ನು ತರಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹಂತದಲ್ಲಿ ಮಾತನಾಡಿದ ಕೆ.ಶಿವಕುಮಾರ್, ‘ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮತ್ತು ನಮ್ಮಲ್ಲಿಗೆ ಹೆಚ್ಚಿನ ಬಂಡವಾಳ ತರಲು ಪಾಟೀಲರು ಶ್ರಮಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಉದ್ಯೋಗಸೃಷ್ಟಿ, ಪ್ರಾದೇಶಿಕ ಸಮಾನತೆ ಮತ್ತು ಆರ್ಥಿಕ ವರಮಾನ, ರಫ್ತು ಚಟುವಟಿಕೆ ಸಾಧ್ಯವಾಗುತ್ತಿದೆ. ಇದು ಅಭಿನಂದನಾರ್ಹ ಸಂಗತಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Key words: Government’ foreign university, campuses, Queen City, Minister, M.B. Patil, K.Shivakumar

ಕಾಲೇಜು ಕ್ಯಾಂಪಸ್ ಕಲುಷಿತಗೊಳಿಸುತ್ತಿರುವ ಕಾಂಗ್ರೆಸ್: ಮಾಜಿ ಮೇಯರ್ ಶಿವಕುಮಾರ್ ಆಕ್ರೋಶ
ಮೈಸೂರುಜುಲೈ23,2026 (www.justkannada.in): ಕಾಂಗ್ರೆಸ್ ಪಕ್ಷವು ಶಾಲಾ- ಕಾಲೇಜು ಆವರಣವನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಶೈಕ್ಷಣಿಕ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ ಮಾಜಿ ಮೇಯರ್ ಶಿವಕುಮಾರ್ ಆರೋಪಿಸಿದ್ದಾರೆ.

ಮಹಾರಾಣಿ ಕಾಲೇಜು ಸಭಾಂಗಣದಲ್ಲಿ ಬುಧವಾರ ರಾಹುಲ್ ಗಾಂಧಿ ಅವರ ಬ್ಯಾನರ್ ಅಳವಡಿಕೆ ಹಾಗೂ ಫೋಟೋ ಪ್ರದರ್ಶನ ಕಳವಳಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳ ವರ್ಗೀಕರಣ ಮತ್ತು ನಿಯಂತ್ರಣ ಅಧಿನಿಯಮ- 1989ರ ಅನ್ವಯ, ಕಾಲೇಜು ಕ್ಯಾಂಪಸ್ಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಶಾಲೆ- ಕಾಲೇಜು ಆವರಣವು ದೈನಂದಿನ ಪಾಠ ಪ್ರವಚನದೊಂದಿಗೆ ಪಠ್ಯೇತರ ಚಟುವಟಿಕೆಗಳು, ಆಟೋಟ ಕಾರ್ಯಕ್ರಮಗಳು, ಶಾರೀರಿಕ ಶಿಕ್ಷಣ ಮತ್ತು ವ್ಯಾಯಾಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸದ್ವಿನಿಯೋಗ ಆಗಬೇಕೆಂದು ಸ್ಪಷ್ಟ ಮಾರ್ಗಸೂಚಿಯನ್ನು ಹಲವಾರು ಸುತ್ತೋಲೆಗಳ ಮೂಲಕ ಹೊರಡಿಸಲಾಗಿದೆ.

ಅದಾಗ್ಯೂ, ಕಾಂಗ್ರೆಸ್ ಶಾಸಕರ ಒತ್ತಡಕ್ಕೆ ಮಣಿದು ಪದವ್ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಮಹಾರಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡಿರುವುದು ಸರ್ಕಾರದ ನೀತಿ- ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಕಾಂಗ್ರೆಸ್ ಪಕ್ಷವು ರಾಜ್ಯ ಮತ್ತು ದೇಶಾದ್ಯಂತ ವಿದ್ಯಾರ್ಥಿಗಳನ್ನು ಬಳಸಿಕೊಂಡು ಚಿಲ್ಲರೆ ರಾಜಕೀಯ ಮಾಡುತ್ತಿರುವುದು ಮಹಾರಾಣಿ ಕಾಲೇಜಿನಲ್ಲಿ ನಡೆದ ವಿದ್ಯಮಾನದಿಂದ ಬಯಲಾಗಿದೆ. ಇಂತಹ ಷಡ್ಯಂತ್ರವನ್ನು ದೇಶದ ನಾಗರಿಕರು ಹಾಗೂ ವಿದ್ಯಾರ್ಥಿಗಳೇ ಹಿಮ್ಮೆಟ್ಟಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Key words: Congress, polluting, college, campuses, Former Mayor, Shivakumar

ಕ್ಯಾಂಪಸ್‌ ಗಳಲ್ಲಿ ತಾರತಮ್ಯ ನಿವಾರಣೆಗೆ UGC ತಂದಿದೆ ಹೊಸ ನಿಯಮ.
ಮೈಸೂರು, ಜ.೨೭,೨೦೨೬: ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಕ್ಯಾಂಪಸ್‌ ಗಳಲ್ಲಿ ಜಾತಿತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಹೊಸ ನೀತಿ ಜಾರಿಗೊಳಿಸಿದೆ.  ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಸಂವರ್ಧನೆ’ಗೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

UGC ಹೊಸ ಮಾರ್ಗಸೂಚಿ ಅನ್ವಯ, ಕ್ಯಾಂಪಸ್‌ಗಳಲ್ಲಿ ದಶಕಗಳಿಂದ ಬೇರೂರಿರುವ ತಾರತಮ್ಯದ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಹೊಸ ಆಯಾಮ ನೀಡಿದಂತಾಗಿದೆ.

ಈ ಗೆಜೆಟ್ ಅಧಿಸೂಚನೆಯು ಕೇವಲ ಒಂದು ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗಿಲ್ಲ. ಇದು ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಯಾವುದೇ ರೀತಿಯ ತಾರತಮ್ಯವನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.

ಧರ್ಮ (Religion): ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಎಂಬ ಭೇದವಿಲ್ಲದೆ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಯನ್ನು ಪೀಡಿಸುವುದು ಅಪರಾಧ.

ಜನಾಂಗ (Race): ವಿಶೇಷವಾಗಿ ಈಶಾನ್ಯ ಭಾರತದ ವಿದ್ಯಾರ್ಥಿಗಳ ವಿರುದ್ಧ ಅವರ ದೈಹಿಕ ರೂಪ ಅಥವಾ ಭಾಷೆಯ ಆಧಾರದ ಮೇಲೆ ನಡೆಯುವ ನಿಂದನೆಗೆ ಕಡಿವಾಣ.

ಜಾತಿ (Caste): ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ವಿರುದ್ಧ ನಡೆಯುವ ಸಾಂಸ್ಥಿಕ ತಾರತಮ್ಯವನ್ನು ತಡೆಯುವುದು.

ಲಿಂಗ (Gender): ಮಹಿಳೆಯರು ಮತ್ತು ತೃತೀಯ ಲಿಂಗಿಗಳ (Third Gender) ಸುರಕ್ಷತೆ ಮತ್ತು ಸಮಾನ ಅವಕಾಶಗಳ ಖಾತರಿ.

ವಿಕಲಚೇತನತೆ (Disability): ದಿವ್ಯಾಂಗ ವಿದ್ಯಾರ್ಥಿಗಳನ್ನು ಅವಹೇಳನ ಮಾಡುವುದು ಅಥವಾ ಅವರಿಗೆ ಅಗತ್ಯ ಸೌಲಭ್ಯ ನಿರಾಕರಿಸುವುದನ್ನು ತಡೆಯುವುದು.

‘ಸಮತಾ ಸಮಿತಿ’ (Equity Committee) ರಚನೆ ಮತ್ತು ಅಧಿಕಾರ

ಪ್ರತಿ ವಿಶ್ವವಿದ್ಯಾಲಯದಲ್ಲಿ ತಾರತಮ್ಯದ ದೂರುಗಳನ್ನು ವಿಚಾರಿಸಲು ಒಂದು ಪ್ರಬಲ ಸಮಿತಿಯನ್ನು ರಚಿಸುವುದು ಕಡ್ಡಾಯವಾಗಿದೆ.

ಸಮಿತಿಯ ಸದಸ್ಯರು:

ವಿಶ್ವವಿದ್ಯಾಲಯದ ಕುಲಪತಿಗಳು (VC) ಇದರ  ಅಧ್ಯಕ್ಷರಾಗಿರುತ್ತಾರೆ.  ಜತೆಗೆ ಮೂವರು ಹಿರಿಯ ಪ್ರೊಫೆಸರ್‌ಗಳು, ಒಬ್ಬ ಬೋಧಕೇತರ ಸಿಬ್ಬಂದಿ, ಇಬ್ಬರು ನಾಗರಿಕ ಸಮಾಜದ ತಜ್ಞರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಭಾಗವಾಗಿರುತ್ತಾರೆ.

ಈ ಸಮಿತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಮಹಿಳೆಯರು ಮತ್ತು ದಿವ್ಯಾಂಗರಿಗೆ ಕಡ್ಡಾಯವಾಗಿ ಪ್ರಾತಿನಿಧ್ಯ ಇರಬೇಕು ಎಂದು ನಿಯಮ ಹೇಳುತ್ತದೆ.

ಕಾರ್ಯವೈಖರಿ:

ಇದು ಕೇವಲ ದೂರು ಸ್ವೀಕರಿಸುವುದು ಮಾತ್ರವಲ್ಲದೆ, ಕ್ಯಾಂಪಸ್‌ನಲ್ಲಿ ಸಮಾನತೆಯನ್ನು ತರಲು ತಡೆಗಟ್ಟುವ ಕ್ರಮಗಳನ್ನು (Preventive Measures) ತೆಗೆದುಕೊಳ್ಳಬೇಕು.

ಶೈಕ್ಷಣಿಕ ಸಾಂಸ್ಥಿಕ ತಾರತಮ್ಯ: ಐಐಟಿ (IIT), ಐಐಎಂ (IIM) ಗಳಂತಹ ಸಂಸ್ಥೆಗಳಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಈ ಕಾನೂನಿನ ಅನಿವಾರ್ಯತೆ ತೋರಿಸುತ್ತದೆ. ರೋಹಿತ್ ವೇಮುಲ ಪ್ರಕರಣವು ಶೈಕ್ಷಣಿಕ ಕ್ಷೇತ್ರದಲ್ಲಿ ಜಾತಿ ತಾರತಮ್ಯ ಎಷ್ಟು ಆಳವಾಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ.

ಕೇವಲ ಮೇಲ್ಜಾತಿಯವರೇ ಗುರಿಯಲ್ಲ:

ಈ ನಿಯಮವು ಎಲ್ಲರಿಗೂ ಅನ್ವಯಿಸುತ್ತದೆ. ಒಬ್ಬ ಒಬಿಸಿ ವಿದ್ಯಾರ್ಥಿ ದಲಿತ ವಿದ್ಯಾರ್ಥಿಯನ್ನು ನಿಂದಿಸಿದರೆ ಅಥವಾ ಒಬ್ಬ ದಲಿತ ವ್ಯಕ್ತಿ ವಿಕಲಚೇತನರನ್ನು ಅವಹೇಳನ ಮಾಡಿದರೂ ಈ ಕಾಯ್ದೆಯಡಿ ಶಿಕ್ಷಾರ್ಹರಾಗುತ್ತಾರೆ.

key words: UGC, brought a new rule, eliminate, discrimination, campuses.

SUMMARY:

UGC has brought a new rule to eliminate discrimination on campuses.

The UGC’s new “Equity Regulations 2026” aim to prevent discrimination in higher education based on caste, gender, religion, region, disability, etc.