BTS-2020 Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಕೋವಿಡ್ ಲಸಿಕೆ: ಸಂಶೋಧನಾ ಸಂಸ್ಥೆ- ಔಷಧ ಕಂಪನಿಗಳ ಸಹಭಾಗಿತ್ವ ಅಗತ್ಯ-“ರಾಘವನ್ ವರದರಾಜನ್ ಅಭಿಮತ
ಬೆಂಗಳೂರು,ನವೆಂಬರ್,21,2020(www.justkannada.in):  ಕೋವಿಡ್-19 ಸೋಂಕಿಗೆ ಪರಿಣಾಮಕಾರಿ ಲಸಿಕೆ ಕಂಡುಹಿಡಿಯುವ ದಿಸೆಯಲ್ಲಿ ಸಂಶೋಧನಾ ಸಂಸ್ಥೆಗಳಿಗೆ ಔಷಧ ತಯಾರಿಕಾ ಕಂಪನಿಗಳ ಸಹಕಾರ ಅಗತ್ಯ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರೊಫೆಸರ್ ರಾಘವನ್ ವರದರಾಜನ್ ಅಭಿಪ್ರಾಯಪಟ್ಟರು.

ಸಮ್ಮೇಳನದ ಮೂರನೇ ದಿನವಾದ ಶನಿವಾರ ಕೋವಿಡ್ ಲಸಿಕೆ ಕುರಿತ ವಿಚಾರ ಗೋಷ್ಠಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡ ಪ್ರೊಫೆಸರ್ ರಾಘವನ್ ವರದರಾಜನ್, ಕೊರೋನಾಕ್ಕೆ ಸಂಬಂಧಪಟ್ಟಂತೆ ಕೆಲವು ಕಂಪನಿಗಳ ಲಸಿಕೆಗಳು ದೊಡ್ಡ ಮಟ್ಟದಲ್ಲಿ ಭರವಸೆ ಮೂಡಿಸಿವೆ; ಆದರೂ ಸಾರ್ವಜನಿಕ ಬಳಕೆಗೆ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ. ಈ ನಿಟ್ಟಿನಲ್ಲಿ ಸಂಶೋಧನೆಗಳು ಮುಂದುವರಿದಿವೆ, ಐಐಎಸ್ಸಿ, ಏಮ್ಸ್ ನಂತಹ ಸಂಶೋಧನಾ ಸಂಸ್ಥೆಗಳಿಗೆ ಔಷಧ ತಯಾರಿಕಾ ಕಂಪನಿಗಳು ಸಹಕಾರ ನೀಡುವುದು ಅಗತ್ಯ ಎಂದರು.

ಯಾವುದೇ ಒಂದು ಸಾಂಕ್ರಾಮಿಕ ಕಾಯಿಲೆಗೆ ಲಸಿಕೆ ಕಂಡುಹಿಡಿಯಬೇಕೆಂದರೆ ಹಲವು ವರ್ಷಗಳೇ ಬೇಕಾಗುತ್ತದೆ. ಮಾನವನ ಜೈವಿಕ ವ್ಯವಸ್ಥೆ ಮೇಲೆ ಲಸಿಕೆ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಾನಾ ಹಂತದಲ್ಲಿ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ. ಆದರೆ ಕೋವಿಡ್ ವಿಚಾರಕ್ಕೆ ಬಂದರೆ ಸಂಶೋಧನೆಗಳು ತ್ವರಿತಗತಿಯಲ್ಲಿ ಸಾಗಿವೆ. ಔಷಧ ತಯಾರಿಕಾ ಕಂಪನಿಗಳ ಸಹಭಾಗಿತ್ವದಲ್ಲಿ ಸಂಶೋಧನೆಗಳು ನಡೆದರೆ ಲಸಿಕೆ ಅಭಿವೃದ್ಧಿ ಹಾಗೂ ಉತ್ಪಾದನೆ ಸುಲಭವಾಗಲಿದೆ ಎಂದು ರಾಘವನ್ ವರದರಾಜನ್ ಹೇಳಿದರು.

ಹೆಪಟೈಟಿಸ್-ಬಿ ಗೆ ಲಸಿಕೆ ಅಭಿವೃದ್ಧಿಗೆ ಕಾರಣವಾಗಿದ್ದೇ ಐಐಎಸ್ಸಿಯ ಸಂಶೋಧನೆ. ಅದೇ ರೀತಿ ರೀಟಾ ವೈರಸ್ ಗೆ ಸಹ ಲಸಿಕೆ ಕಂಡುಹಿಡಿಯಲು ನೆರವಾಗಿದ್ದು ಏಮ್ಸ್ ನ ಸಂಶೋಧನೆ. ಈಗ ಕೊರೊನಾ ವೈರಸ್ ಗೆ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್, ಆಕ್ಸ್ ಫರ್ಡ್ ವಿ.ವಿ. ಮತ್ತು ಆಸ್ಟ್ರಾಜೆನಿಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಗಳು ಭರವಸೆ ಮೂಡಿಸಿವೆ ಎಂದು ಬಿಲ್ ಅಂಡ್ ಮಿಲಿಂದಾ ಪ್ರತಿಷ್ಠಾನದ ಹಿರಿಯ ಸಲಹೆಗಾರ ಡಾ. ಹರೀಶ್ ಅಯ್ಯರ್ ಹೇಳಿದರು.

ಕೋವಿಡ್ ಲಸಿಕೆ ಪೂರ್ತಿ ಸಿದ್ಧಗೊಂಡಾಗ ಅದರ ಸಂಗ್ರಹ, ಸಾಗಣೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅದನ್ನು ಹಾಕುವ ವಿಚಾರದಲ್ಲಿ ಸಾಕಷ್ಟು ಸವಾಲುಗಳು ಎದುರಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ಎಮೋರಿ ವ್ಯಾಕ್ಸಿನ್ ಸೆಂಟರ್‍ ನ ಪ್ರೊಫೆಸರ್ ಡಾ. ರಾಮರಾವ್ ಅಮಾರಾ ಹಾಗೂ ಎಸ್.ಕೃಷ್ಣಾ ಲ್ಯಾಬ್ನಕ ಡಾ.ಅರುಣ್ ಶಂಕರದಾಸ್ ಅವರು ಡೆಂಗೆ ಹಾಗೂ ಕೋವಿಡ್ ಲಸಿಕೆ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು.

Key words: Covid Vaccine-Research- Institute – Partnership -pharmaceutical companies –essential-Raghavan Varadarajan BTS-2020

The post ಕೋವಿಡ್ ಲಸಿಕೆ: ಸಂಶೋಧನಾ ಸಂಸ್ಥೆ- ಔಷಧ ಕಂಪನಿಗಳ ಸಹಭಾಗಿತ್ವ ಅಗತ್ಯ-“ರಾಘವನ್ ವರದರಾಜನ್ ಅಭಿಮತ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೋವಿಡ್ ಲಸಿಕೆ ಭ್ರಷ್ಟಾಚಾರ ಕೂಪ ಆಗಬಾರದು- ‘ಬಿಟಿಎಸ್-2020’ದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಸಲಹೆ…
ಬೆಂಗಳೂರು,ನವೆಂಬರ್,21,2020(www.justkannada.in): ಕೋವಿಡ್ ಲಸಿಕೆಯನ್ನು ಮುಂದೆ ಮಾರುಕಟ್ಟೆಗೆ ಬಿಟ್ಟಾಗ ಯಾರು ಆರ್ಥಿಕವಾಗಿ ಸಮರ್ಥರೋ ಅವರಿಗೆ ಸೂಕ್ತ ಬೆಲೆ ನಿಗದಿ ಮಾಡಿ ಲಭ್ಯವಾಗುವಂತೆ ಮಾಡಬೇಕು. ಅದರಿಂದ ಬಂದ ಹಣದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಉಚಿತವಾಗಿ ಕೊಡುವ ವ್ಯವಸ್ಥೆಯಾಗಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು.

“ಬೆಂಗಳೂರು ತಂತ್ರಜ್ಞಾನ ಮೇಳ-2020”ದ ಕೊನೆಯ ದಿನವಾದ ಶನಿವಾರ “ಸ್ವಾಸ್ಥ್ಯಕ್ಕಾಗಿ ತಂತ್ರಜ್ಞಾನಗಳಲ್ಲಿ ಹೂಡಿಕೆ” ಕುರಿತ ಸಂವಾದ ಗೋಷ್ಠಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿದರು.

ಮುಂಬರುವ ತಿಂಗಳುಗಳಲ್ಲಿ ಕೋವಿಡ್ ಲಸಿಕೆ ಮಾರುಕಟ್ಟೆಗೆ ಬಂದಾಗ ಅದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ. ಯಾರಿಗೆ ಸೋಂಕು ತಗುಲುವ ಅಪಾಯ ಹೆಚ್ಚೋ, ಉದಾಹರಣೆಗೆ ಆರೋಗ್ಯ ಸೇವೆಯಲ್ಲಿರುವವರು, ಪೊಲೀಸರು ಇಂಥವರಿಗೆ ಮೊದಲು ಲಸಿಕೆ ಹಾಕಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

“ಯಾರು ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು” ಎಂಬುದನ್ನು ಕೋವಿಡ್ ಸೋಂಕು ಸನ್ನಿವೇಶ ದೃಢಪಡಿಸಿದೆ. ಇದನ್ನು ಅರ್ಥಮಾಡಿಕೊಂಡರೆ ಕಂಪನಿಗಳು ಮೂಲ ಸೌಕರ್ಯಕ್ಕಾಗಿ ಮಾಡುವ ಅನಗತ್ಯ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಜೊತೆಗೆ ತಮ್ಮ ನಿರ್ವಹಣಾ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಅನುಸರಿಸಿದರೆ ಅಂತಿಮವಾಗಿ ಅದು ಭೂಗ್ರಹದ ಮೇಲಿನ ಒತ್ತಡವನ್ನು ಕೂಡ ತಗ್ಗಿಸುತ್ತದೆ ಎಂದು ಸದ್ಗರು ಜಗ್ಗಿ ವಾಸುದೇವ್  ವಿವರಿಸಿದರು.

ಕಂಪನಿಗಳು ಮನುಷ್ಯರನ್ನು ಸಂಪನ್ಮೂಲ ಎಂದು ನೋಡುವ ಧೋರಣೆ ಬದಲಾಗಬೇಕು. ಬದಲಿಗೆ ಮನುಷ್ಯರನ್ನು ಅಂತಃಸತ್ವವುಳ್ಳವರು ಎಂಬ ದೃಷ್ಟಿಯಲ್ಲಿ ನೋಡುವ ಹಾಗೂ ಆ ಅಂತಃಸತ್ವ ಅನಾವರಣಗೊಳ್ಳಲು ಅನುವಾಗುವ ಕಾರ್ಯರೀತಿ ಅನುಷ್ಠಾನಗೊಳಿಸುವ ಕುರಿತು ಆಲೋಚಿಸಲು ಇದು ಸೂಕ್ತ ಸಮಯ ಎಂದು ತಿಳಿಸಿದರು.

ಈಗ ತಂತ್ರಜ್ಞಾನದ ಬಲದಿಂದ ಜಗತ್ತಿನ ಯಾವುದೇ ಭಾಗದ ಜನರನ್ನು ತಲುಪಬಹುದಾಗಿದೆ. ಮುಂಚೆ ನಾವು ಕೆಲವೇ ಜನರನ್ನು ತಲುಪುವುದು ಕಷ್ಟವಾಗುತ್ತಿತ್ತು. ಈಗ ಅಲ್ಪಾವಧಿಯಲ್ಲಿ ನೂರಾರು ಕೋಟಿ ಜನರನ್ನು ತಲುಪಬಹುದಾಗಿದೆ. ಈ ತಂತ್ರಜ್ಞಾನವು ಸದುದ್ದೇಶಕ್ಕೆ ಹಾಗೂ ಆನಂದದಿಂದ ಕೂಡಿದ ಸಮಾಜ ನಿರ್ಮಾಣಕ್ಕೆ ಬಳಕೆಯಾಗಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್ ಪ್ರತಿಪಾದಿಸಿದರು.

ಬುದ್ಧಿ ಎಂದರೆ ಕೇವಲ ನೆನಪಿನ ಶಕ್ತಿ ಅಲ್ಲ. ಬುದ್ಧಿಗೆ ನಾಲ್ಕು ಆಯಾಮಗಳಿವೆ. ಬೌದ್ಧಿಕತೆ, ಅಹಂಕಾರ, ಮನಸ್ಸು (ಸಂಸ್ಕಾರ), ಚಿತ್ತ ಎಂಬ ಆಯಾಮಗಳ ಬಗ್ಗೆ ಭಾರತೀಯರು ಪ್ರಾಚೀನ ಕಾಲದಲ್ಲೇ ಮನಗಂಡಿದ್ದರು. ದುರದೃಷ್ಟವಶಾತ್ ಇಂಗ್ಲಿಷ್ ಶಿಕ್ಷಣ ಪದ್ಧತಿಯು ಬುದ್ಧಿ ಎಂದರೆ ಕೇವಲ ಜ್ಞಾಪಕ ಶಕ್ತಿ ಎಂಬ ಭ್ರಮೆ ಹುಟ್ಟಿಸಿತು. ಈ ದೃಷ್ಟಿಯಲ್ಲಿ ನೋಡಿದರೆ ಚಿಪ್ ಗಳನ್ನು ಹಾಗೂ ಸ್ಮಾರ್ಟ್ ಫೋನ್ ಗಳನ್ನು ಮನುಷ್ಯರಿಗಿಂತ ಹೆಚ್ಚು ಬುದ್ಧಿಶಾಲಿಗಳು ಎನ್ನಬೇಕಾಗುತ್ತದೆ ಎಂದರು.

ಬ್ರಹ್ಮಾಂಡದಲ್ಲಿ ಗ್ರಹಗಳು, ನಕ್ಷತ್ರಗಳು, ಎಲ್ಲಾ ಆಕಾಶಕಾಯಗಳನ್ನು ಸೇರಿಸಿದರೂ ಭೌತಿಕ ಪ್ರಪಂಚವು ಹೆಚ್ಚೆಂದರೆ ಅದು ಶೇ 1 ರಷ್ಟು ಮಾತ್ರ ಆಗುತ್ತದೆ. ಉಳಿದ ಶೇ 99 ರಷ್ಟು ಭಾಗವು ನಮಗೆ ಏನೂ ಎಂದು ಗೊತ್ತಿಲ್ಲದ “ಶೂನ್ಯ”ವೇ ಆಗಿದೆ. ವಿಜ್ಞಾನವು ಶೇ 1 ರಷ್ಟಿರುವ ಭೌತಿಕ ಪ್ರಪಂಚದ ಬಗ್ಗೆ ವಿವರಿಸಲು ಪ್ರಯತ್ನಿಸುತ್ತದೆ. ಆದರೆ ಅಧ್ಯಾತ್ಮವು ಶೇ 99ರಷ್ಟಿರುವ “ಶೂನ್ಯ”ವನ್ನೂ ದೃಷ್ಟಿಯಲ್ಲಿರಿಸಿಕೊಂಡು ಆಲೋಚನಾ ಮಗ್ನವಾಗಿರುತ್ತದೆ. ವಿಜ್ಞಾನ ಹಾಗೂ ಅಧ್ಯಾತ್ಮ ಬೇರೆ ಬೇರೆಯಲ್ಲ. ಆದರೆ ಅಧ್ಯಾತ್ಮದ ಚಿಂತನಾ ವ್ಯಾಪ್ತಿ ವಿಜ್ಞಾನಕ್ಕಿಂತ ವಿಶಾಲವಾದುದು ಎಂದು ಅಭಿಪ್ರಾಯಪಟ್ಟರು.

ಪ್ರಪಂಚದಲ್ಲಿರುವ ಎಲ್ಲಾ ಗ್ರಂಥಾಲಯಗಳಲ್ಲಿರುವ ಪುಸ್ತಕಗಳೆಲ್ಲವನ್ನು ಓದಿದ ಮೇಲೂ ಯಾವುದೇ ವ್ಯಕ್ತಿ ತನಗೆ ಎಲ್ಲಾ ಗೊತ್ತು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇಷ್ಟೆಲ್ಲಾ ಆದರೂ ಬ್ರಹ್ಮಾಂಡದ ಶೇ 1.ರಷ್ಟು ಮಾತ್ರವೂ ನಮಗೆ ತಿಳಿದಿಲ್ಲ. ಆದ್ದರಿಂದ ನಾವು “ನಮಗೆ ಗೊತ್ತಿಲ್ಲ” ಎಂದು ಹೇಳುವ ವಿನಮ್ರತೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಿಗೂ “ಏನೂ ಗೊತ್ತಿಲ್ಲ” ಎಂದು ಹೇಳಿಕೊಳ್ಳುವುದನ್ನು ಕಲಿಸಬೇಕು. ದುರಂತದ ಸಂಗತಿಯೆಂದರೆ ಇಂಗ್ಲಿಷ್ ಪ್ರಣೀತ ಶಿಕ್ಷಣ ಪದ್ಧತಿಯು ನಮ್ಮಲ್ಲಿ “ನನಗೆ ಎಲ್ಲಾ ಗೊತ್ತು” ಎಂಬ ಭ್ರಮೆ ಮೂಡಿಸುತ್ತಿದೆ. ಈ ಭಾವನೆಯು ನಮ್ಮ ಅರಿಯುವ ಸಾಮರ್ಥ್ಯಕ್ಕೆ ಮಬ್ಬು ಕವಿಸಿದೆ.

ಯೋಗ ಎಂದರೆ ಕೇವಲ ದೇಹದ ವ್ಯಾಯಾಮ ಅಲ್ಲ. ಯೋಗ ಎಂದರೆ ಐಕ್ಯತೆ ಎಂದು ಅರ್ಥ. ಅಂದರೆ, ವ್ಯಕ್ತಿಯ ವೈಯಕ್ತಿಕ ಅಸ್ಮಿತೆಯು ಬಾಹ್ಯ ಜಗತ್ತಿನೊಂದಿಗೆ ಐಕ್ಯವಾಗುವುದು ಎಂದರ್ಥ. ಇದನ್ನೇ ಭಾರತೀಯ ಸಂಸ್ಕೃತಿ “ಅಹಂ ಬ್ರಹ್ಮಾಸ್ಮಿ” ಎಂದು ಕರೆಯುತ್ತದೆ. ಈ ಪ್ರಜ್ಞೆ ಬೆಳೆದರೆ ಬೇರೆ ಯಾವ ನೈತಿಕತೆಯೂ ಬೇಕಿಲ್ಲ. ಆಧುನಿಕ ಶಿಕ್ಷಣ ಪದ್ಧತಿ ಇದಕ್ಕೆ ತದ್ವಿರುದ್ಧವಾಗಿ ಸ್ವಕೇಂದ್ರಿತ ಮನೋಭಾವ ಬೆಳೆಸುತ್ತಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.

ನಮ್ಮ ಮಕ್ಕಳು ಮರ-ಗಿಡ, ಬೆಳಕು, ಬಯಲು, ನದಿ, ತೊರೆಗಳಿಗೆ ತೆರೆದುಕೊಂಡು ಬದುಕಬೇಕು. ಆದರೆ ಈಗ ನಗರಗಳಲ್ಲಿ ಮಕ್ಕಳು ಮನೆಯಿಂದ ಆಚೆ ಕಾಲಿಟ್ಟರೆ ಸಾಕು ವಾಹನಗಳ ಗದ್ದಲದಲ್ಲಿ ಸಿಲುಕುವಂತಾಗಿದೆ. ಇದಕ್ಕೆ ಪರಿಹಾರ ಕಂಡಹಿಡಿಯಬೇಕು ಎಂದು ಅಭಿಪ್ರಾಯಪಟ್ಟರು.

ತಮ್ಮ “ಈಶ” ಪ್ರತಿಷ್ಠಾನವು ಕಾರ್ಯನಿರ್ವಹಿಸುತ್ತಿರುವ 49 ಗ್ರಾಮಗಳಲ್ಲಿ ಕೋವಿಡ್ ಸೋಂಕು ಪ್ರರಣಗಳು ವರದಿಯಾಗಲಿಲ್ಲ (ಹೊರಗಿನಿಂದ ಬಂದ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಹೊರತುಪಡಿಸಿ). ತಜ್ಞರು ಕೂಡ ಇದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆರೋಗ್ಯ, ನೈರ್ಮಲ್ಯ ಹಾಗೂ ರೋಗ ನಿರೋಧಕ ಶಕ್ತಿ ಬಗ್ಗೆ ನಾವು ಮುಂಚಿನಿಂದಲೂ ಅರಿವು ಮೂಡಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಸದ್ಗುರು ವಿವರಿಸಿದರು.

ಇಂಟೆಲ್ ಇಂಡಿಯಾ ಕಂಟ್ರಿ ಹೆಡ್ ನಿವೃತಿ ರಾಯ್ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ಗೋಷ್ಠಿ ನಿರ್ವಹಿಸಿದರು.

ಸಂವಾದದಲ್ಲಿ ಸದ್ಗುರು ನುಡಿಗಳು:

ನಾವು ಉಸಿರಾಡಿ ಹೊರಗೆ ಬಿಟ್ಟಿದ್ದನ್ನು ಸಸ್ಯಗಳು ಉಸಿರಾಡುತ್ತವೆ. ಅವು ಹೊರಗೆ ಬಿಟ್ಟಿದ್ದನ್ನು ನಾವು ಉಸಿರಾಡುತ್ತೇವೆ. ಇದನ್ನು ನಮ್ಮ “ಈಶ” ಪ್ರತಿಷ್ಠಾನ ಅರ್ಥ ಮಾಡಿಸಿದ್ದರಿಂದ ಜನ ತಾವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಒಟ್ಟಾರೆ ದಕ್ಷಿಣ ಭಾರತದಲ್ಲಿ “ಹಸಿರು ಹೊದಿಕೆ” ಪ್ರದೇಶವು ಗೂಗಲ್ ಮ್ಯಾಪ್ ಪ್ರಕಾಶ ಕಳೆದ ದಶಕದಲ್ಲಿ ಶೇ 10ರಷ್ಟು ಹೆಚ್ಚಾಗಿದೆ.

ಬ್ರಿಟಿಷರು ಬರೆದ ಭಾರತದ ಇತಿಹಾಸವನ್ನು ನಾವು ಓದುತ್ತಿರುವುದು ದುರದೃಷ್ಟ. ನಮ್ಮನ್ನು ನಿಯಂತ್ರಿಸುವ ದುರುದ್ದೇಶದಿಂದ ಬರೆದ ಚರಿತ್ರೆ ಅದಾಗಿದೆ..

ಭಾರತದ ಮಣ್ಣಿನಲ್ಲಿ, ಅದರಲ್ಲೂ ದಕ್ಷಿಣ ಭಾರತದ ಮಣ್ಣಿನ ಒಂದು ಹಿಡಿಯಲ್ಲಿ 50,000 ಪ್ರಭೇದದ ಸೂಕ್ಷ್ಮಾಣುಜೀವಿಗಳಿವೆ. ಇಷ್ಟು ಸತ್ವಯುತವಾದ ಮಣ್ಣು ಬಹುಶಃ ಬೇರೆಲ್ಲೂ ಇಲ್ಲ.

ಭಾರತದ ಉತ್ತರದಲ್ಲಿ ಹಿಮಾಚಲ ಪರ್ವತ ನಮ್ಮ ರಕ್ಷತೆ ಇತ್ತು, ಇನ್ನೊಂದು ಕಡೆ ಹಿಂದೂ ಸಾಗರದ ರಕ್ಷಣೆ ಇತ್ತು. ಜೊತೆಗೆ ಸಮೃದ್ಧತೆ ಇತ್ತು. ಹೀಗಾಗಿ ಇಲ್ಲಿ ಸಾವಿರಾರು ವರ್ಷಗಳ ಕಾಲ ಯುದ್ಧದ ಭಯ ಎಂಬುದೇ ಇರಲಿಲ್ಲ. ಸಹಜವಾಗಿಯೇ ಜನರು ಸಂಗೀತ, ಕಲೆ, ವಿಜ್ಞಾನ, ಖಗೋಳ ಇತ್ಯಾದಿ ಚರ್ಚೆಗಳಲ್ಲಿ ತೊಡಗಿದ್ದರಿಂದ ಹಿಂದೂಸ್ತಾನದಲ್ಲಿ ಇವೆಲ್ಲವೂ ವಿಕಸನಗೊಂಡವು. ಇದನ್ನು ನಾನು ರಾಷ್ಟ್ರೀಯತಾವಾದಿಯ ನೆಲೆಯಲ್ಲಿ ಹೇಳುತ್ತಿಲ್ಲ. ಇದು ಚಾರಿತ್ರಿಕ ವಾಸ್ತವ.

ಕರ್ನಾಟಕ ಸರ್ಕಾರವು ಒಂದು ಪ್ರಯೋಗ ಮಾಡಿದರೆ ಒಳ್ಳೆಯದು. ಬೆಂಗಳೂರಿನಿಂದ ಆಚೆ 50 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ 1 ಎಕರೆಯಷ್ಟು ಜಾಗದಲ್ಲಿ ಜನರಿಗೆ ಬೇಕಾದ ಸೌಲಭ್ಯಗಳು ಇರುವಂತೆ ನೋಡಿಕೊಂಡು 100 ಅಂತಸ್ತುಗಳ ಕಟ್ಟಡ ಕಟ್ಟಬೇಕು. ಉಳಿದ 49 ಎಕರೆ ಪ್ರದೇಶದಲ್ಲಿ ಮರ ಗಿಡಗಳು, ಕೆರೆ ಇವೆಲ್ಲಾ ಇರಬೇಕು. ನಮ್ಮ ಮಕ್ಕಳು ಇಂತಹ ವಾತಾವರಣದಲ್ಲಿ ಬೆಳೆಯಬೇಕು.

Key words: Covid vaccine- should -not – scam- Sadguru Jaggi Vasudev -advises -BTS-2020

The post ಕೋವಿಡ್ ಲಸಿಕೆ ಭ್ರಷ್ಟಾಚಾರ ಕೂಪ ಆಗಬಾರದು- ‘ಬಿಟಿಎಸ್-2020’ದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಸಲಹೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಜಸ್ಥಾನದ ಹಿಮಾಂಶು ಮಕರ್ ಗ್ರಾಮೀಣ ಐಟಿ ಕ್ವಿಝ್ 2020ರ ಚಾಂಪಿಯನ್
ಬೆಂಗಳೂರು,ನವೆಂಬರ್,21,2020(www.justkannada.in):  ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವಾಲಯದ ಸಹಭಾಗಿತ್ವದಲ್ಲಿ ಐಟಿ ದಿಗ್ಗಜ ಟಿಸಿಎಸ್ ನಡೆಸುವ ಗ್ರಾಮೀಣ ಐಟಿ ರಸಪ್ರಶ್ನೆ ರಾಷ್ಟ್ರೀಯ ಫೈನಲ್ಸ್‌ಲ್ಲಿ ರಾಜಸ್ಥಾನದ ಹಿಮಾಂಶು ಮಕರ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ -2020”ರಲ್ಲಿ ಇದೇ ಮೊದಲ ಬಾರಿಗೆ ವರ್ಚುವಲ್ ರೂಪದಲ್ಲಿ ರಾಷ್ಟ್ರೀಯ ಕ್ವಿಝ್ ಫೈನಲ್ ಸ್ಪರ್ಧೆ ನಡೆಯಿತು.

ರಾಜಸ್ಥಾನದ ಸೂರತ್‌ ಗಢದ ಸ್ವಾಮಿ ವಿವೇಕಾನಂದ ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿಯಾಗಿರುವ ಹಿಮಾಂಶು ಮೊದಲ ಸುತ್ತಿನಿಂದಲೇ ಪಟಪಟನೆ ಉತ್ತರಗಳನ್ನು ನೀಡುತ್ತಾ ಅಂತಿಮ ಸುತ್ತಿನ ತನಕ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ 350 ಅಂಕಗಳನ್ನು ಗಳಿಸಿಕೊಳ್ಳುವ ಮೂಲಕ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದರು ಜತೆಗೆ 1 ಲಕ್ಷ ರೂ. ಬಹುಮಾನ ಗೆದ್ದುಕೊಂಡರು.

300 ಅಂಕಗಳನ್ನು ಗಳಿಸಿ ತುರುಸಿನ ಪೈಪೋಟಿ ನೀಡಿದ ಮಧ್ಯಪ್ರದೇಶದ ದೇವಾಸ್‌ ನ ಎಕ್ಸಲೆನ್ಸ್ ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಮನ್ ಕುಮಾರ್ ರನ್ನರ್ ಅಪ್ ಆದರು. ಇವರಿಗೆ 50 ಸಾವಿರ ರೂ. ಬಹುಮಾನ ನೀಡಲಾಯಿತು.

ಈ ಅಂತಿಮ ಸುತ್ತಿನಲ್ಲಿ ಒಟ್ಟು 6 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ಸುಹಾಸ್ ಶೆಣೈ ಯು, ಗುಜರಾತ್‌ ನ ಭಾವನಗರದ ಪರಸ್ ಗಥಾನಿ, ಛತ್ತೀಸ್‌ಗಢದ ರಾಯ್ಪುರದ ತೋಮನ್ ಸೇನ್ ಹಾಗೂ ಮಹಾರಾಷ್ಟ್ರದ ವಾರ್ಧಾದ ಸಾಕ್ಷಿ ಹಿಂದೂಜಾ ಫೈನಲ್‌ಗೇರಿದ್ದ ಇತರ ಸ್ಪರ್ಧಿಗಳಾಗಿದ್ದರು.

5 ಸುತ್ತಿನ ಸ್ಪರ್ಧೆ

ಬೈಟ್ ಅಬಂಡೆನ್ಸ್, ಟೆಕ್ ವಿಶನ್, ಟೆಕ್ ಕ್ಲೌಡ್, ಟೆಕ್ ಅಜೈಲ್ ಮತ್ತು ಟೆಕ್ ಎಕೋಸಿಸ್ಟಮ್ ಹೀಗೆ ಐದು ವಿಭಾಗಗಳಲ್ಲಿ ರಸಪ್ರಶ್ನೆಗಳನ್ನು ಕೇಳಲಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಗುರುತಿಸುವುದು, ಐಟಿ ಕಂಪನಿಗಳು, ಉತ್ಪನ್ನಗಳ ಲೋಗೋಗಳು, ಚಿತ್ರಗಳನ್ನು ಗುರುತಿಸಿ ಅವುಗಳ ಹಿನ್ನೆಲೆಯನ್ನು ವಿವರಿಸುವುದು, ಕಂಪನಿಗಳು, ಉತ್ಪನ್ನಗಳ ಅಸ್ತವ್ಯಸ್ತಗೊಂಡ ಹೆಸರುಗಳನ್ನು ಗುರುತಿಸುವುದು, ಕಂಪನಿಗಳ ಘೋಷವಾಕ್ಯಗಳನ್ನು ಗುರುತಿಸುವ ಸವಾಲನ್ನು ಒಡ್ಡಲಾಯಿತು. ರಾಷ್ಟ್ರೀಯ ಮಟ್ಟವಾಗಿದ್ದರಿಂದ ಪ್ರಶ್ನೆಗಳು ತುಸು ಕಠಿಣವಾಗಿಯೇ ಇದ್ದವು. ಪಿಕ್‌ಬ್ರೈನ್ ಎಂದೇ ಹೆಸರುವಾಸಿಯಾದ ಬಾಲಸುಬ್ರಮಣಿಂ ಕ್ವಿಝ್ ಮಾಸ್ಟರ್ ಆಗಿದ್ದರು.

ದಾಖಲೆ ಸೇರಿರುವ ಕ್ವಿಜ್

ಮೆಟ್ರೋ, ರಾಜಧಾನಿ ನಗರಗಳನ್ನು ಹೊರತುಪಡಿಸಿ, ಗ್ರಾಮೀಣ ಭಾಗಗಳ ಮಕ್ಕಳಲ್ಲಿ ಮಾಹಿತಿ ತಂತ್ರಜ್ಞಾನ ಅರಿವು ಪರೀಕ್ಷಿಸುವ ಹಾಗೂ ಐಟಿ ಕುರಿತು ಆಸಕ್ತಿ ಹೆಚ್ಚಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಕಳೆದ 21 ವರ್ಷಗಳಿಂದ ಈ ಕ್ವಿಝ್ ನಡೆಯುತ್ತಿದ್ದು, ಈ ತನಕ 18 ದಶಲಕ್ಷ ಮಕ್ಕಳನ್ನು ತಲುಪಿದೆ. 8 ರಿಂದ 12ನೇ ತರಗತಿಯ ತನಕದ ಮಕ್ಕಳಿಗೆ ವಿವಿಧ ಹಂತಗಳಲ್ಲಿ ನಡೆಸಲಾಗುವ ಈ ಕ್ವಿಝ್ ಈಗಾಗಲೇ ಲಿಮ್ಕಾ ದಾಖಲೆ ಸೇರಿದೆ.

ಟಿಸಿಎಸ್‌ ನ ಆಪರೇಶನ್ಸ್ ಮುಖ್ಯಸ್ಥ ಸುನಿಲ್ ದೇಶಪಾಂಡೆ ಅವರು ವರ್ಚುವಲ್ ಆಗಿ ಪ್ರಶಸ್ತಿ ವಿತರಣೆ ಮಾಡಿದರು. ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತ ಮಕ್ಕಳಿಗೆ ಶುಭ ಹಾರೈಸಿದರು. ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ ಮುಖ್ಯ ಅತಿಥಿಗಳಾಗಿದ್ದರು.

English summary…

Himanshu Makar of Rajasthan is the Rural IT quiz 2020 champion

Bengaluru, Nov. 21, 2020 (www.justkannada.in): Himanshu Makar of Rajasthan has emerged as the champion of the National Rural IT quiz competition organised by the Ministry of IT and BT, Govt. of Karnataka, in association with the IT giant TCS.

The Bengaluru Tech Meet-2020 had organised the National quiz on a virtual platform. Himanshu, a student of the Swami Vivekananda Government Model School, Surathgadh, Rajasthan maintained the lead from the beginning rounds itself. He secured first place by scoring 350 marks and earned Rs. 1 lakh cash prize, followed by Aman Kumar, of the Devas Excellence Govt. School, Madhya Pradesh, who earned 300 marks and earned Rs. 50,000 cash prize.

The objective of organising this quiz programme was to educate and create interest among the rural students in the area of Information Technology. This quiz programme is being held for the last 21 years and already reached 18 million children. The quiz that is being held for students studying from 8th standard to 12th standard students in various levels has already gained a place in the Limca Book of Records.

Keywords: Rural IT quiz 2020/Bengalutu Tech Meet-2020/Himanshu makar

Key words: Rajasthan -Himanshu Makar – champion – Rural- IT Quiz 2020-bts 2020

The post ರಾಜಸ್ಥಾನದ ಹಿಮಾಂಶು ಮಕರ್ ಗ್ರಾಮೀಣ ಐಟಿ ಕ್ವಿಝ್ 2020ರ ಚಾಂಪಿಯನ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಇ- ಸಂಚಾರ’ ವಲಯದಲ್ಲಿ ಸ್ವಯಂ ಉತ್ಪಾದನೆಗೆ ಆದ್ಯತೆ-ಬಿಟಿಎಸ್-2020”ದಲ್ಲಿ ದತ್ತಾತ್ರೇಯ ಸಾಲಗಾಮೆ ಸಲಹೆ
ಬೆಂಗಳೂರು ನವೆಂಬರ್,20,2020(www.justkannada.in):  ಸುಸ್ಥಿರ ‘ಇ-ಸಂಚಾರ’ (ಇ-ಮೊಬಿಲಿಟಿ) ವಲಯದಲ್ಲಿ ನಾವು ಎಲ್ಲೆಲ್ಲಿ ಸ್ವಯಂ ಉತ್ಪಾದನೆ ಮಾಡಬಹುದು ಎಂಬ ಅಧ್ಯಯನ ಆಗಬೇಕು. ಇದೇ ವೇಳೆ ಹೈಪರ್ ಲೋಕಲ್ ಪರಿಹಾರಗಳನ್ನು ಕಂಪನಿಗಳು ರೂಪಿಸಿದರೆ  ಸ್ವಾವಲಂಬನೆ ಸಾಧ್ಯವಾಗಲಿದೆ  ಎಂದು ರಾಬರ್ಟ್ ಬಾಷ್‌ ನ ಭಾರತೀಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ದತ್ತಾತ್ರೇಯ ಸಾಲಗಾಮೆ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗಮೇಳ- 2020”ದ ಎರಡನೇ ದಿನವಾದ ಶುಕ್ರವಾರ ಜರ್ಮನಿ ಕಾನ್ಸುಲೇಟ್ ನೇತೃತ್ವದಲ್ಲಿ ನಡೆದ ‘ಇ- ಮೊಬಿಲಿಟಿ- ಭವಿಷ್ಯದ ಹಾದಿ’ ಕುರಿತ ಸಂವಾದದಲ್ಲಿ ಅವರು ಭಾಗವಹಿಸಿದ್ದರು.

ನಡೆದ ‘ಇ- ಮೊಬಿಲಿಟಿ- ಭವಿಷ್ಯದ ಹಾದಿ’ ಸಂವಾದವನ್ನು ವಿಡಿಎಂಎ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ನಾಥ್ ನಿರ್ವಹಿಸಿದರು.  ಬೆಂಗಳೂರಿನ ಜರ್ಮನ್ ಕನ್ಸುಲೇಟ್‌ನ ಕನ್ಸುಲ್ ಜನರಲ್ ಆಖಿಂ ಬುರ್ಕಾರ್ತ್,  ದತ್ತಾತ್ರೇಯ ಸಾಲಗಾಮೆ, ಪಂಕಜ್ ವ್ಯಾಸ್ ಹಾಗೂ ಮನು ಸಾಲೆ ಪಾಲ್ಗೊಂಡರು.

ಸಾಂಪ್ರದಾಯಿಕ ಸಾರಿಗೆಯಿಂದ ಇ-ಮೊಬಿಲಿಟಿಯತ್ತ ರೂಪಾಂತರಗೊಳ್ಳುವಲ್ಲಿ ಸರ್ಕಾರದ ಕಾರ್ಯನೀತಿಯ ಪಾತ್ರ ದೊಡ್ಡದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಫೇಮ್ 1 ಹಾಗೂ ಫೇಮ್ 2 ನೀತಿಗಳು ಇ-ವಾಹನ ಉದ್ಯಮಕ್ಕೆ ಉತ್ತೇಜನಕಾರಿಯಾಗಿವೆ. ಆರಂಭದ ಇದೇ ವೇಗವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 2022ರ ನಂತರದ ಸರ್ಕಾರದ ನೀತಿಯೂ ಸ್ಪಷ್ಟವಾಗಿರಬೇಕು. ಇವಿ ಕ್ಷೇತ್ರದ ಮೂಲಸೌಕರ್ಯದಂತಹ ಕ್ಷೇತ್ರದಲ್ಲಿ ಸರ್ಕಾರಿ-ಖಾಸಗಿ ಸಹಭಾಗಿತ್ವದಿಂದ ವೇಗವರ್ಧನೆಯಾಗಲಿದೆ ಎಂದು ದತ್ತಾತ್ರೇಯ ಸಾಲಗಾಮೆ ಅಭಿಪ್ರಾಯಪಟ್ಟರು.

ಪವರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತ ಪ್ರಬಲವಾಗಿದೆ. ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಪ್ರೋತ್ಸಾಹದಾಯಕ ವಾತಾವರಣವಿದೆ. ದೇಶದಲ್ಲಿ ಮೊತ್ತಮೊದಲ ಇ-ವಾಹನ ಉದ್ಯಮ ಸ್ಥಾಪನೆಯಾಗಿದ್ದೇ ಬೆಂಗಳೂರಿನಲ್ಲಿ ಎಂದು ನೆನಪಿಸಿಕೊಂಡರು.

ಪೆಡಲ್ ಸೈಕಲ್‍‌ ವಾಲಾಗಳಿಂದ ಮೌನಕ್ರಾಂತಿ

ಭಾರತದಲ್ಲಿ ಇ-ಮೊಬಿಲಿಟಿಯ ಆರಂಭದ ಮೌನಕ್ರಾಂತಿ ಮಾಡಿದವರು ಅಸಂಘಟಿತ ವಲಯಗಳ ಸೈಕಲ್‌ ವಾಲಾಗಳು. ಪೆಡಲ್ ಸೈಕಲ್‌ ಗಳಿಂದ ರೂಪಾಂತರಗೊಂಡ ಇ-ರಿಕ್ಷಾಗಳು ಮೆಟ್ರೋ ಫೀಡರ್‌ಗಳಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇನ್ಫೀನಿಯನ್ ಟೆಕ್ನಾಲಜೀಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿನಯ್ ಶೆಣೈ ಬೊಟ್ಟು ಮಾಡಿದರು.

ಮೊದಲ ಹಂತದಲ್ಲಿ ತ್ರಿಚಕ್ರ, ದ್ವಿಚಕ್ರ ವಾಹನವನ್ನು ನಾವು ಇ-ವಾಹನಗಳಾಗಿ ಪರಿವರ್ತನೆಗೊಳಿಸಬಹುದು. ಎರಡನೆಯ ಹಂತದಲ್ಲಿ ಸಾರ್ವಜನಿಕ ಸಾರಿಗೆಗಳನ್ನು ಪರಿವರ್ತಿಸಬೇಕು. ಕೊನೆಯ ಹಂತದಲ್ಲಿ ಪ್ರಯಾಣಿಕ ಹಾಗೂ ಲಕ್ಷುರಿ ವಾಹನಗಳು ರೂಪಾಂತರಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ದಿಸೆಯಲ್ಲಿ ಸರ್ಕಾರ ಮುಂಚೂಣಿಯಲ್ಲಿ ನಿಲ್ಲಬೇಕು. ಚಾರ್ಜಿಂಗ್ ಮೂಲಸೌಕರ್ಯ, ಸ್ಟೇಶನ್ ಸೌಲಭ್ಯವನ್ನು ಕಲ್ಪಿಸಬೇಕು. ಆಪರೇಟರ್‌ಗಳಿಗೆ ಸಹಾಯ ನೀಡಬೇಕು, ಉದ್ಯಮಗಳಿಗೆ ಪ್ರೋತ್ಸಾಹಧ ನೀಡುವ ಕಾರ್ಯ ಮಾಡಬೇಕು ಎಂದರು.

ಜರ್ಮನಿ ಸಹಭಾಗಿತ್ವದಿಂದ ಅನುಕೂಲ

ಇ-ವಿ ಕ್ಷೇತ್ರದಲ್ಲಿ ಜರ್ಮನಿಯು ತುಂಬಾ ಮುಂದಿದೆ. ಸರ್ಕಾರದ ನೀತಿ ನಿರ್ಧಾರಗಳು, ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿ ಕ್ಷೇತ್ರದಲ್ಲಿ ಭಾರತ-ಜರ್ಮನಿ ಸಹಭಾಗಿತ್ವದಿಂದ ಅನುಕೂಲ ಸಾಧ್ಯವಿದೆ. ಸಾಫ್ಟ್ ವೇರ್‌ನ ಸೂಕ್ತ ಬಳಕೆಯಿಂದ ಭಾರತದ ರಸ್ತೆ ಸ್ಥಿತಿ, ಹವಾಮಾನ ಪರಿಸ್ಥಿತಿಯ ದೋಷವನ್ನು ಮೀರಿ ವಾಹನಗಳು ಕಾರ್ಯನಿರ್ವಹಿಸುವಂತೆ ಮಾಡಬಹುದಾಗಿದೆ ಎಂದು ಮರ್ಸಿಡೆಸ್ ಬೆಂಝ್  ಆರ್ ಆಂಡ್ ಡಿ ಇಂಡಿಯಾದ ಸಿಇಒ ಮನು ಸಾಲೆ ಹೇಳಿದರು.

ಇ-ಹೈವೇ ಅಥವಾ ಇಲೆಕ್ಟ್ರಿಕ್ ರಸ್ತೆ ವ್ಯವಸ್ಥೆಯು ಇ-ಮೊಬಿಲಿಟಿಗೆ ಉತ್ತೇಜನ ನೀಡಬಲ್ಲುದು ಎಂದು ಸೀಮನ್ಸ್ ಟೆಕ್ನಾಲಜೀಸ್ ಇಂಡಿಯಾದ ಸಿಇಒ ಪಂಕಜ್ ವ್ಯಾಸ್ ಅಭಿಪ್ರಾಯಪಟ್ಟರು.

ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಸುಸ್ಥಿರ ಸಾರಿಗ ಅತ್ಯಗತ್ಯ. ಜರ್ಮನಿಯು ಭವಿಷ್ಯದ ಸುಸ್ಱಿರ ಸಾರಿಗೆಗೆ ಬುನಾದಿ ಹಾಕಿದೆ. ಜರ್ಮನಿ-ಭಾರತ ಸಹಭಾಗಿತ್ವದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಬೆಂಗಳೂರಿನ ಜರ್ಮನ್ ಕನ್ಸುಲೇಟ್‌ನ ಕನ್ಸುಲ್ ಜನರಲ್ ಆಖಿಂ ಬುರ್ಕಾರ್ತ್ ಹೇಳಿದರು.

ವಿಡಿಎಂಎ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ನಾಥ್ ಸಂವಾದ ನಿರ್ವಹಿಸಿದರು. ನೆರ್ವಾನಿಕ್ ಎಐ ಲ್ಯಾಬ್ಸ್ ಪ್ರೈ.ಲಿನ ಸಹಸಂಸ್ಥಾಪಕರಾದ ರಂಜನ್ ಕುಮಾರ್ ಹಾಗೂ ಜರ್ಮನಿ ತಂತ್ರಜ್ಞಾನ ಕನ್ಸಲ್ಟ್ ಹೂಬರ್ಟ್ ರಿಲಾರ್ಡ್ ಸಂವಾದದಲ್ಲಿ ಪಾಲ್ಗೊಂಡಿದ್ದರು.

Key words: Preference – self-generating – e-mobility- Dattatreya  salagame- BTS-2020

The post ಇ- ಸಂಚಾರ’ ವಲಯದಲ್ಲಿ ಸ್ವಯಂ ಉತ್ಪಾದನೆಗೆ ಆದ್ಯತೆ-ಬಿಟಿಎಸ್-2020”ದಲ್ಲಿ ದತ್ತಾತ್ರೇಯ ಸಾಲಗಾಮೆ ಸಲಹೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

‘ಬಿಟಿಎಸ್-2020’ದಲ್ಲಿ ಕ್ವೀನ್ಸ್ ಲ್ಯಾಂಡ್ ಪ್ರತಿನಿಧಿ: ಭಾರತದ ಬಾಹ್ಯಾಕಾಶ ತಾಂತ್ರಿಕತೆಯತ್ತ ಆಸ್ಟ್ರೇಲಿಯಾ ಕಣ್ಣು…
ಬೆಂಗಳೂರು,ನವೆಂಬರ್,20,2020(www.justkannada.in):  ಬಾಹ್ಯಾಕಾಶ ತಂತ್ರಜ್ಞಾನ, ರಾಕೆಟ್ ಅಭಿವೃದ್ಧಿ, ಕ್ಷಿಪಣಿ ಅಭಿವೃದ್ಧಿ, ರಾಕೆಟ್ ಉಡಾವಣಾ ಸೌಲಭ್ಯಗಳಲ್ಲಿ ಪ್ರತಿಷ್ಠಿತ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತದ ಬಾಹ್ಯಾಕಾಶ ಸಂಸ್ಥೆಗಳ ಜೊತೆ ಕೈಜೋಡಿಸುವ ಮೂಲಕ ಭಾರತದ ಕಡಿಮೆ ವೆಚ್ಚದ ಉಡಾವಣಾ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆಸ್ಟ್ರೇಲಿಯಾ ಉತ್ಸುಕವಾಗಿದೆ ಎಂದು ಕ್ವೀನ್ಸ್ ಲ್ಯಾಂಡ್ ಸರ್ಕಾರದ ಪ್ರತಿನಿಧಿ ಲಿಯೇನ್ ಕೆಂಪ್ ತಿಳಿಸಿದರು.

ಇಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಮೇಳ-2020 ಕೋವಿಡ್ ಪೂರ್ವ ಅವಧಿಯಲ್ಲಿ “ಸೈಬರ್ ಕ್ಷೇತ್ರದಿಂದ ಹಿಡಿದು ಬಾಹ್ಯಾಕಾಶ ಕ್ಷೇತ್ರದವರೆಗೆ ಆಸ್ಟ್ರೇಲಿಯಾದ ಆವಿಷ್ಕಾರಗಳು ಮತ್ತು ಸವಾಲುಗಳ” ಕುರಿತು ಶುಕ್ರವಾರ ನಡೆದ ವರ್ಚುವಲ್ ಸಂವಾದದಲ್ಲಿ ಮಾತನಾಡಿದರು.

ಕೋವಿಡ್ ನಂತಹ ಸಾಂಕ್ರಾಮಿಕ ವ್ಯಾದಿ ಇಡೀ ವಿಶ್ವವನ್ನು ಬಾಧಿಸುತ್ತಿರುವ ಈ ಕಾಲಘಟ್ಟದಲ್ಲಿ ಸೈಬರ್ ತಾಣವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆದು  ಸುಳ್ಳು ವದಂತಿಗಳಿಂದ ಜನರನ್ನು ರಕ್ಷಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತು ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಇಲಾಖೆಯ ಸೈಬರ್ ವ್ಯವಹಾರಗಳು ಮತ್ತು ನಿರ್ಣಾಯಕ ತಂತ್ರಜ್ಞಾನದ ರಾಯಭಾರಿ ಡಾ. ತೋಬಿಯಾಸ್ ಫೀಕಿನ್ ತಿಳಿಸಿದರು.

ಕೋವಿಡ್ ಒಡ್ಡಿದ ಅಗ್ನಿಪರೀಕ್ಷೆಯನ್ನು ನಾವು ಯಶಸ್ವಿಯಾಗಿ ಎದುರಿಸಿದ್ದೇವೆ. ಈ ಸಂದರ್ಭವನ್ನೇ ಒಂದು ಅವಕಾಶವನ್ನಾಗಿ ಸ್ವೀಕರಿಸಿ ಸೈಬರ್ ಮತ್ತು ಬಾಹ್ಯಾಕಾಶ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೇವೆ. ಆರೋಗ್ಯ ಕ್ಷೇತ್ರದ ಅಗತ್ಯಗಳನ್ನು ಪೂರೈಸುವಲ್ಲಿ ಬಾಹ್ಯಾಕಾಶ ಚಟುವಟಿಕೆಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದು ವಿವರಿಸಿದರು.

ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಮಾತನಾಡಿ, ಸೈಬರ್ ಸುರಕ್ಷತೆ ವಿಚಾರದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅದರಲ್ಲೂ ಮುಖ್ಯವಾಗಿ ಕರ್ನಾಟಕ ಉತ್ತಮ ಬಾಂಧವ್ಯ ಹೊಂದಿರುವುದನ್ನು ಪ್ರಸ್ತಾಪಿಸಿದರು. ದೇಶದಲ್ಲಿಯೇ ಮೊತ್ತಮೊದಲ ಕ್ರಿಮಿನಲ್ ಸೈಬರ್ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೆ ತಂದ ಹೆಗ್ಗಳಿಕೆ ಕರ್ನಾಟಕದ್ದಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ಆಸ್ಟ್ರೇಲಿಯಾ ನಡುವೆ ಇನ್ನಷ್ಟು ತಂತ್ರಜ್ಞಾನ ವಿನಿಮಯಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.

ನ್ಯೂಸೌತ್-ವೇಲ್ಸ್ ವಿಶ್ವವಿದ್ಯಾಲಯದ ಕ್ವಾಂಟಮ್ ಕಂಪ್ಯೂಟೇಶನ್ ಮತ್ತು ಸಂಪರ್ಕ ತಂತ್ರಜ್ಞಾನ ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ಮಿಚೆಲ್ ಸಿಮನ್ಸ್ ಅವರು ಮಾತನಾಡಿ, ಕಳೆದ ಒಂದು ದಶಕದ ಅವಧಿಯಲ್ಲಿ ಕ್ವಾಂಟಮ್ ಕಂಪ್ಯೂಟೇಶನ್ ಕ್ಷೇತ್ರದಲ್ಲಿ ಗಮನಾರ್ಹ ಸಂಶೋಧನೆಗಳು ನಡೆಯುತ್ತಿದ್ದು ಆಸ್ಟ್ರೇಲಿಯಾವು ವಿಶ್ವದಾದ್ಯಂತ 25ಕ್ಕೂ ಅಧಿಕ ಪಾಲುದಾರರ ಜೊತೆ ಅನೇಕ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ವಿವರಿಸಿದರು.

ಈ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮತ್ತಷ್ಟು ವಿಸ್ತರಿಸಲು ಭಾರತದೊಂದಿಗೆ ದೀರ್ಘಾವಧಿ ಸಹಕಾರಕ್ಕಾಗಿ ಆಸ್ಟ್ರೇಲಿಯಾ ಎದುರು ನೋಡುತ್ತಿದೆ ಎಂದು  ತಿಳಿಸಿದ ಅವರು, ದತ್ತಾಂಶ ಸುರಕ್ಷತೆ, ಏರೋಸ್ಪೇಸ್, ಔಷಧಿ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಅತ್ಯುತ್ಕೃಷ್ಟವಾದ ಆನ್ವಯಿಕತೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದರು.

ಆಸ್ಟ್ರೇಲಿಯಾ ಸರ್ಕಾರದ ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕರೇನ್ ಆಂಡ್ರ್ಯೂ, ಭಾರತದಲ್ಲಿ ಆಸ್ಟೇಲಿಯಾದ ಹೈಕಮಿಷನರ್ ಆಗಿರುವ ಬೇರಿ ಓಫರೇಲ್ ಮೊದಲಾದ ತಜ್ಞರು ಸಂವಾದದಲ್ಲಿ ಪಾಲ್ಗೊಂಡಿದ್ದರು.

Key words: Queensland- Representative – BTS-2020O-Australia- space technology – India

The post ‘ಬಿಟಿಎಸ್-2020’ದಲ್ಲಿ ಕ್ವೀನ್ಸ್ ಲ್ಯಾಂಡ್ ಪ್ರತಿನಿಧಿ: ಭಾರತದ ಬಾಹ್ಯಾಕಾಶ ತಾಂತ್ರಿಕತೆಯತ್ತ ಆಸ್ಟ್ರೇಲಿಯಾ ಕಣ್ಣು… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.