Bangladeshi Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಕೋಗಿಲು ಲೇಔಟ್ ನಲ್ಲಿ ಯಾವುದೇ ಅಕ್ರಮ ಬಾಂಗ್ಲಾ ವಲಸಿಗರು ಇಲ್ಲ- ಗೃಹ ಸಚಿವ ಪರಮೇಶ್ವರ್
ಬೆಂಗಳೂರು,ಜನವರಿ,13,2026 (www.justkannada.in):  ಕೋಗಿಲು ಲೇಔಟ್ ನಲ್ಲಿ ಯಾವುದೇ ಅಕ್ರಮ ಬಾಂಗ್ಲಾ ವಲಸಿಗರು ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.

ಕೋಗಿಲು ಲೇಔಟ್ ನಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೋಗಿಲು ಲೇಔಟ್ ನಲ್ಲಿ ಯಾವುದೇ ಅಕ್ರಮ ಬಾಂಗ್ಲಾ ವಲಸಿಗರು ಇಲ್ಲ. ಮನೆಗಳ ತೆರವು ಸಂಬಂಧ ಎಲ್ಲಾ ಮಾಹಿತಿ ತರಿಸಿಕೊಂಡಿದ್ದೇನೆ. ನಾನು ಅಲ್ಲಿರುವವರ ಪಟ್ಟಿ ತರಿಸಿಕೊಂಡು ನೋಡಿದ್ದೇನೆ.

ಅದರಲ್ಲಿ ಯಾವುದೇ ಬಾಂಗ್ಲಾ ನಿವಾಸಿಗಳು ಇಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಈ ಬಗ್ಗೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಪರಮೇಶ್ವರ್ ತಿಳಿಸಿದರು.

Key words: no illegal, Bangladeshi, immigrants, Home Minister ,Parameshwar

The post ಕೋಗಿಲು ಲೇಔಟ್ ನಲ್ಲಿ ಯಾವುದೇ ಅಕ್ರಮ ಬಾಂಗ್ಲಾ ವಲಸಿಗರು ಇಲ್ಲ- ಗೃಹ ಸಚಿವ ಪರಮೇಶ್ವರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಾಂಗ್ಲಾದೇಶಿಗರ ಉದ್ಧಟತನ : ಕ್ರಮ ಕೈಗೊಳ್ಳಲು ಸಂಸದ ಯದುವೀರ್‌ ಒತ್ತಾಯ
ಮೈಸೂರು, ಡಿಸೆಂಬರ್, 31,2025 (www.justkannada.in): ಅಕ್ರಮವಾಗಿ ದೇಶದೊಳಗೆ ನುಸುಳುವವರ ಸಂಖ್ಯೆ ಹೆಚ್ಚಾಗಿದೆ. ಅತ್ಯಂತ ಕಳವಳಕಾರಿ ವಿಷಯ ಎಂದರೆ ಕರ್ನಾಟಕದಲ್ಲಿಯೂ ಬಾಂಗ್ಲಾದೇಶದ ಪ್ರಜೆಗಳು ಉದ್ಧಟತನ ತೋರುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ರಾಜ್ಯ ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಒತ್ತಾಯಿಸಿದ್ದಾರೆ.

ಈ ಸಂಬಂಧ ಗೃಹ ಸಚಿವರಿಗೆ ಪತ್ರ ಬರೆದಿರುವ  ಸಂಸದ ಯದುವೀರ್‌ ಒಡೆಯರ್‌ ಇಂಥ ವಿಷಯಗಳ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವೀಡಿಯೋ ವೈರಲ್‌

ಇನ್‌ ಸ್ಟಾಗ್ರಾಮ್‌ ವೀಡಿಯೋದಲ್ಲಿ ಬಾಂಗ್ಲಾದೇಶದ ಮೂವರು ಅಕ್ರಮ ವಲಸಿಗರು (ಆಟೋ ಚಾಲಕರು) ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ನಾವು ವಾಸಿಸುತ್ತಿದ್ದು, ಇಲ್ಲಿ ಯಾವುದೇ ಭಯ, ಆತಂಕವಿಲ್ಲ. ಅಕ್ರಮವಾಗಿ ಇಲ್ಲಿ ನೆಲಸಬಹುದು ಎಂದು ಹೇಳಿಕೊಂಡಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಎಂದು  ಸಂಸದ ಯದುವೀರ್‌ ತಿಳಿಸಿದ್ದಾರೆ.

ಇದು ಒಂದು ವೇಳೆ ನಿಜವಾದರೆ, ಪೊಲೀಸ್‌ ಇಲಾಖೆಯ ವೈಫಲ್ಯ ಎಂಬುದು ಕಂಡುಬರುತ್ತದೆ. ಕಾರ್ಮಿಕರ ನೋಂದಣಿ, ಸಾರಿಗೆ ಪರವಾನಗಿ, ಅಕ್ರಮ ವಲಸೆ ಸೇರಿದಂತೆ ಇತರೆ ವಿಷಯಗಳಲ್ಲಿ ರಾಜ್ಯ ಗೃಹ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ವಿವರಿಸಿದ್ದಾರೆ.

ಮತ್ತೊಂದು ವೀಡಿಯೋದಲ್ಲಿಯೂ ಇದೇ ರೀತಿಯ ಹೇಳಿಕೆಗಳನ್ನು ನೀಡಿರುವುದು ಕಂಡುಬಂದಿದೆ. ಈ ಎರಡು ವೀಡಿಯೋಗಳ ಲಿಂಕ್‌ ಗಳನ್ನು ಗೃಹ ಸಚಿವರಿಗೆ ಕಳುಹಿಸಿಕೊಡಲಾಗಿದೆ. ಇನ್ನಾದರೂ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಬೇಕು ಎಂದು  ಸಂಸದ ಯದುವೀರ್ ಆಗ್ರಹಿಸಿದ್ದಾರೆ.

ಕರ್ನಾಟಕವು ಈಗ ಅಕ್ರಮ ವಲಸಿಗರಿಗೆ ಸೂಕ್ತ ತಾಣವಗುತ್ತಿದೆ ಎಂದು ಇಲ್ಲಿ ಗೃಹ ಇಲಾಖೆ ಮತ್ತು ಪೊಲೀಸರ ವೈಫಲ್ಯ ಇರುವುದು ಗೊತ್ತಾಗುತ್ತದೆ. ಈ ಘಟನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಾಮಾಜಿಕ ಜಾಲತಾಣ ಲಿಂಕ್‌. ಪೊಲೀಸ್‌ ಪರಿಶೀಲನೆಯಲ್ಲಿನ ನಿರ್ಲಕ್ಷ್ಯ, ಕಾರ್ಮಿಕ ನೋಂದಣಿ, ವಾಹನ ಚಾಲನೆ ಪರವಾನಗಿ ಮತ್ತು ಅಕ್ರಮವಾಗಿ ನೆಲೆಸಿರುವ ಬಗ್ಗೆ ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಬೇಕು. ತಪ್ಪೆಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಯದುವೀರ್ ಒತ್ತಾಯಿಸಿದ್ದಾರೆ.  ತಿಳಿಸಿದ್ದಾರೆ.

ಸಾರ್ವಜನಿಕ ನಂಬಿಕೆ ಉಳಿಸಿಕೊಳ್ಳಬೇಕು

ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳಲು, ಕಾನೂನು ಮತ್ತು ಸುವ್ಯವಸ್ಥೆ ಖಚಿತಪಡಿಸಿಕೊಳ್ಳಲು ಮತ್ತು ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭದ್ರತೆಗಾಗಿ ತುರ್ತು ಕ್ರಮವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಸಂಸದ ಯದುವೀರ್‌ ಒಡೆಯರ್‌ ಆಗ್ರಹಿಸಿದ್ದಾರೆ.

Key words: Bangladeshi, Illegal immigrants, MP Yaduveer

The post ಬಾಂಗ್ಲಾದೇಶಿಗರ ಉದ್ಧಟತನ : ಕ್ರಮ ಕೈಗೊಳ್ಳಲು ಸಂಸದ ಯದುವೀರ್‌ ಒತ್ತಾಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ.
ಬೆಂಗಳೂರು,ಮೇ,20,2022(www.justkannada.in):  ಬಾಂಗ್ಲಾ ಯುವತಿ ಮೇಲೆ‌  ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣ ಸಂಬಂಧ ಆರೋಪಿಗಳು ತಪ್ಪಿತಸ್ಥರು ಎಂದು ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ ತೀರ್ಪು ಕೊಟ್ಟಿದ್ದು 7 ಜನ ಅಪರಾಧಿಗಳಿಗೆ ಜೀವಾವಧಿಶಿಕ್ಷೆ ಪ್ರಕಟಿಸಿದೆ. ಮಹಿಳಾ ಅಪರಾಧಿ ತಾನಿಯಾ ಖಾನಂ ಗೆ 20 ವರ್ಷ ಶಿಕ್ಷೆ, ಅಪರಾಧಿ ಜಮಾಲ್ ಗೆ 5 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ನ್ಯಾಯಾಧೀಶ ಎನ್​​. ಸುಬ್ರಹ್ಮಣ್ಯ ಅವರಿಂದ ತೀರ್ಪು ಪ್ರಕಟಿಸಿದ್ದು, ಸೋಭುಜ್ ಶೇಖ್, ರಿದಯ್ ಬಾಬು,ರಕಿಬುಲ್ ಇಸ್ಲಾಂ ಸಾಗರ್,ಮಹಮ್ಮದ್ ಬಾಬು,ರಫ್ಸಾನ ಮಂಡಲ್, ತಾನಿಯಾ ಲೇ, ದಾಲಿಮ್, ಅಜೀಂ, ಜಮಾಲ್, ಈ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

ಕಳೆದ ವರ್ಷ ಮೇ.18 ರಂದು ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಕೇಸ್ ನಲ್ಲಿ   ಶಾಮೀಲಾದವರೆಲ್ಲ ಬಾಂಗ್ಲಾ ದೇಶದ ಮೂಲದವರು. ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿ ನಗರದ ಎನ್‌ಆರ್‌ಐ ಕಾಲೋನಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಈ ಗ್ಯಾಂಗ್ ರೇಪ್‌ ಭಾರೀ ಸಂಚಲನ ಮೂಡಿಸಿತ್ತು. ವೀಡಿಯೋ ವೈರಲ್ ಆಗ್ತಿದ್ದಂತೆಯೇ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು.ಮೇ 27 ರಂದು ಎಫ್‌ಐಆರ್ ದಾಖಲಿಸಿದ್ದರು.

Key words: gang rape-case – Bangladeshi -young woman-life imprisonment

The post ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.