Bangalore youth Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಪತ್ರಕರ್ತ ನೇಸರ ಕಾರು ಅಪಘಾತ : ಬೆಂಗಳೂರಿನ ರಕ್ಷಿತ್ ವಿರುದ್ಧ ಎಫ್.ಐ.ಆರ್ ದಾಖಲಿಸಿದ ಮಂಡ್ಯ ಗ್ರಾಮಾಂತರ ಪೊಲೀಸರು.
ಮಂಡ್ಯ, ಜೂನ್ 21, 2019 (www.justkannada.in): ಗುರುವಾರ ಸಂಜೆ ಸಂಭವಿಸಿದ ಕಾರುಗಳ ಡಿಕ್ಕಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಎಫ್ ಐ ಆರ್ ದಾಖಲು ಮಾಡಿದ್ದಾರೆ.

ಕಾರು ಓಡಿಸುತ್ತಿದ್ದ ಬೆಂಗಳೂರು ಮೂಲದ ರಕ್ಷಿತ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ರಸ್ತೆ ವಿಭಜಕ್ಕೆ ಕಾರು ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಬಂದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ರಕ್ಷಿತ್ , ಕಾರಿನ ಸ್ಟೇರಿಂಗ್ ಲಾಕ್ ಆದ ಕಾರಣ ಈ ಅಪಘಾತ ಸಂಭವಿಸಿದೆ ಎಂದಿದ್ದಾರೆ.

ಘಟನೆ ಹಿನ್ನೆಲೆ :

ಪ್ರಜಾವಾಣಿ ಮೈಸೂರು ಬ್ಯೂರೊ ವರದಿಗಾರ ನೇಸರ ಕಾಡನಕುಪ್ಪೆ, ಮಡದಿ ಹಾಗೂ ಮಗ ಸಂಚರಿಸುತ್ತಿದ್ದ ಕಾರಿಗೆ ಏಕಮುಖ ಸಂಚಾರ ಮಾರ್ಗದಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದು ಜೂ.20 ರ ಸಂಜೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಪತ್ರಕರ್ತ ನೇಸರ ಹಾಗೂ ಕುಟುಂಬ ವರ್ಗ ಗಂಭೀರವಾಗಿ ಗಾಯಗೊಂಡಿದ್ದರು.

ಅಪಘಾತದಲ್ಲಿ ನೇಸರ ಅವರ ಎಡಗಾಲು ಹಾಗೂ ಎದೆ ಭಾಗಕ್ಕೆ ಪೆಟ್ಟಾಗಿದ್ದು ಪತ್ನಿ ಮೇಘನಾ ಅವರಿಗೆ ತಲೆ, ಎಡಕಾಲು ಹಾಗೂ ಸೊಂಟಕ್ಕೆ ಬಲವಾದ ಪೆಟ್ಟಾಗಿತ್ತು. ಮಗುವಿನ ಎಡಕೈಗೆ ಪೆಟ್ಟಾಗಿ ಈ ಮೂವರೂ ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯ ಐಸಿಯುವಿನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಸ್ತೆ ಅಪಘಾತಕ್ಕೆ ಕಾರಣವಾದ ಬೆಂಗಳೂರಿನ ರಕ್ಷಿತ್ ಹಾಗೂ ಆತನ ಜತೆ ಕಾರಿನಲ್ಲಿದ್ದ ನವ್ಯ ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಇವರ ಕಾರಿನ ಏರ್ ಬಲೋನ್ ಒಪನ್ ಆದ ಕಾರಣ ಅಪಘಾತ ಸಂಭವಿಸಿದರು ಹೆಚ್ಚಿನ ಅನಾಹುತವಾಗಿಲ್ಲ. ಆದರೆ ಪತ್ರಕರ್ತ ನೇಸರ ಮತ್ತು ಕುಟುಂಬ ಸಂಚರಿಸುತ್ತಿದ್ದ ಕಾರಿನಲ್ಲಿ ಏರ್ ಬಲೋನ್ ಇಲ್ಲದ ಕಾರಣ ಕಾರಿನಲ್ಲಿದ್ದವರಿಗೆ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ.

key words : mandya-journalist-car-accident-fir-bangalore-youth

The post ಪತ್ರಕರ್ತ ನೇಸರ ಕಾರು ಅಪಘಾತ : ಬೆಂಗಳೂರಿನ ರಕ್ಷಿತ್ ವಿರುದ್ಧ ಎಫ್.ಐ.ಆರ್ ದಾಖಲಿಸಿದ ಮಂಡ್ಯ ಗ್ರಾಮಾಂತರ ಪೊಲೀಸರು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಯುವತಿಯನ್ನು ಹಿಂದೆ ಕೂರಿಸಿಕೊಂಡು ಡೇಂಜರಸ್ ವ್ಹೀಲಿಂಗ್ ಸ್ಟಂಟ್ ಮಾಡಿದ್ದ ಯುವಕನ ಬಂಧನ
ಬೆಂಗಳೂರು:ಜೂ-11:(www.justkannada.in) ಯುವತಿಯನ್ನು ಹಿಂದೆ ಕೂರಿಸಿಕೊಂಡು ಅಪಾಯಕಾರಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಆಕ್ರೋಶಕ್ಕೆ ಕಾರಣನಾಗಿದ್ದ ಯುವಕನನ್ನು ಹೆಬ್ಬಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೂರ್ ಅಹಮ್ಮದ್(21) ಬಂಧನಕ್ಕೊಳಗಾದ ಯುವಕ. ತನ್ನ ಸ್ನೇಹಿತೆ ಜತೆ ನಂದಿಬೆಟ್ಟಕ್ಕೆ ತೆರಳುವಾಗ ಅಪಾಯಕಾರಿ ಬೈಕ್​ ವ್ಹೀಲಿಂಗ್​ ಮಾಡಿದ್ದ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ವಿಡಿಯೋ ನೋಡಿದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದರು.

ನೂರ್ ಅಹಮ್ಮದ್ ಯಲಹಂಕದ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದನು. ಇತ್ತೀಚೆಗೆ ನೂರ್ ತನ್ನ ಸ್ನೇಹಿತ ಇಮ್ರಾನ್ ಬಳಿ ಸ್ಕೂಟಿ ಪಡೆದು ಜೂನ್ 6ರಂದು ತನ್ನ ಸ್ನೇಹಿತೆ ಜೊತೆ ನಂದಿಬೆಟ್ಟಕ್ಕೆ ತೆರಳಿದ್ದ. ಈ ವೇಳೆ ನೂರ್ ಅಹಮ್ಮದ್ ದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ವೀಲ್ಹಿಂಗ್ ಭಯಂಕರವಾದ ವ್ಹೀಲಿಂಗ್ ಮಾಡಿದ್ದಾನೆ. ಇವರಿಬ್ಬರ ವ್ಹೀಲಿಂಗ್ ವಿಡಿಯೋ ಜಾಅಲತಾಣಗಳಲ್ಲಿ ಅಪ್ ಲೋಡ್ ಆಗಿತ್ತು.

ಸೋನು ಎಂಬ ಯುವತಿಯ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವಿಡಿಯೋವೊಂದು ಅಪ್​ಲೋಡ್​ ಆಗಿ ಆಗಿತ್ತಲ್ಲದೇ ಆಕ್ರೋಶಕ್ಕೂ ಕಾರಣವಾಗಿತ್ತು. ವಿಡಿಯೋದಲ್ಲಿ ಯುವಕ ನೂರ್ ಅಹಮ್ಮದ್​ ತನ್ನ ಡಿಯೋ ಸ್ಕೂಟರ್​ ಸವಾರಿ ಮಾಡುತ್ತಾ ಸೀಟ್​ ಮೇಲೆ ನಿಂತು ವ್ಹೀಲಿಂಗ್‌​ ಮಾಡಿದ್ದ. ಸ್ಕೂಟರ್​ನ ಹಿಂಬದಿ ಕುಳಿತಿದ್ದ ಆತನ ಸ್ನೇಹಿತೆ ತನ್ನ ಒಂದು ಕೈನಲ್ಲಿ ಆತನ ಕಾಲು ಹಿಡಿದು ವ್ಹೀಲಿಂಗ್‌​ ಮಾಡುವಂತೆ ಹುರಿದುಂಬಿಸಿದ್ದಳು. ಈ ವ್ಹೀಲಿಂಗ್‌​ ಕ್ಷಣವನ್ನು ಹಿಂಬದಿ ಬರುತ್ತಿದ್ದವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.

ಪ್ರಕರಣ ದಾಖಲಿಸಿಕೊಂಡ ಹೆಬ್ಬಾಳ ಸಂಚಾರ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾಗ ನೂರ್ ಅಹ್ಮದ್ ಸ್ನೇಹಿತ ಇಮ್ರಾನ್ ಪೊಲೀಸರನ್ನು ಕಂಡು ಪರಾರಿಯಾಗಿದ್ದನು. ಈ ವೇಳೆ ಪೊಲೀಸರು ಆತನ ಸ್ಕೂಟಿ ನಂಬರ್ ಬರೆದುಕೊಂಡು ತನಿಖೆ ನಡೆಸಿದ್ದಾರೆ. ಇಮ್ರಾನ್ , ನೂರ್ ಅಹಮ್ಮದ್ ಬಗ್ಗೆ ಬಾಯ್ಬಿಟ್ಟಿದ್ದಾನೆ. ನೂರ್ ನನ್ನು ಬಂಧಿಸಿರುವ ಪೊಲೀಸರು ಸ್ಕೂಟಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಯುವತಿಯನ್ನು ಹಿಂದೆ ಕೂರಿಸಿಕೊಂಡು ಡೇಂಜರಸ್ ವ್ಹೀಲಿಂಗ್ ಸ್ಟಂಟ್ ಮಾಡಿದ್ದ ಯುವಕನ ಬಂಧನ

Bangalore youth,arrested,dangerous wheeling stunt,tumkur highway

The post ಯುವತಿಯನ್ನು ಹಿಂದೆ ಕೂರಿಸಿಕೊಂಡು ಡೇಂಜರಸ್ ವ್ಹೀಲಿಂಗ್ ಸ್ಟಂಟ್ ಮಾಡಿದ್ದ ಯುವಕನ ಬಂಧನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.