Bangalore Tech Summit -2020 Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ತಂತ್ರಜ್ಞಾನಕ್ಕೆ ಒತ್ತು; ಬೆಂಗಳೂರು ಟೆಕ್‌ ಸಮಿಟ್‌-2020ನಲ್ಲಿ ವಾದ ಮಂಡಿಸಿದ ನಾಲ್ವರು ಸಚಿವರು
ಬೆಂಗಳೂರು,ನವೆಂಬರ್,21,2020(www.justkannada.in):  ಮೂರು ದಿನಗಳ ಬೆಂಗಳೂರು ಟೆಕ್‌ ಸಮಿಟ್‌-2020 ನಲ್ಲಿ ಮಾತನಾಡಿದ ರಾಜ್ಯದ ನಾಲ್ವರು ಪ್ರಮುಖ ಸಚಿವರು, ತಮ್ಮ ಇಲಾಖೆಗಳಲ್ಲಿ ಹಾಕಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದರು.

ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್‌, ಟೆಕ್‌ ಸಮಿಟ್‌ನಲ್ಲಿ ಶನಿವಾರ ಮಾತನಾಡಿದರು.

ಕೋವಿಡ್‌ ನಡುವೆಯೂ ಪ್ರಗತಿ:

ಇಡೀ ಜಗತ್ತು ಕೋವಿಡ್‌ನಿಂದ ತಲ್ಲಣಗೊಂಡಿದ್ದು, ಕೈಗಾರಿಕಾಭಿವೃದ್ಧಿ ಕುಂಠಿತವಾಗಿದೆ. ಆದರೆ, ಕರ್ನಾಟಕವು ಒತ್ತಡದ ಪರಿಸ್ಥಿತಿಯಿಂದ ಬಹುಬೇಗ ಚೇತರಿಸಿಕೊಂಡಿದ್ದು, ಈಗ ಎಲ್ಲವೂ ಸಹಜಸ್ಥಿತಿಗೆ ಮರಳಿದೆ. ಉತ್ಪಾದನೆಯೂ ಮೊದಲಿನ ಸ್ಥಿತಿಗೇ ಮರಳಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

ಸಂಕಷ್ಟದ ಸಮಯದಲ್ಲಿ ಡಿಜಿಟಲ್‌ ಎಕಾನಮಿಯ ಪರಿಕಲ್ಪನೆ ಅತ್ಯುತ್ತಮವಾಗಿ ನೆರವಿಗೆ ಬಂದಿದ್ದು, ಪ್ರಸ್ತುತ ವ್ಯಾಪಾರ-ವಹಿವಾಟು ಕ್ಷೇತ್ರದಲ್ಲಿ ಡಿಜಟಲೀಕರಣ ವೇಗವಾಗಿ ಆಗುತ್ತಿದೆ. ಇದರಿಂದ ಉತ್ಪಾದಕ, ಮಾರಾಟಗಾರ ಹಾಗೂ ಗ್ರಾಹಕನಿಗೆ ಹೆಚ್ಚು ಅನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕರ್ನಾಟಕವು ಈ ನಿಟ್ಟಿನಲ್ಲಿ  ಮುಂಚೂಣಿಯಲ್ಲಿದೆ ಎಂದು ಅವರು ಪ್ರತಿಪಾದಿಸಿದರು.

ಸರಕಾರವು ಈಗಾಗಲೇ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಫಾರ್‌ ಸ್ಮಾರ್ಟ್‌ ಪ್ರೊಡಕ್ಷನ್‌ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಇದನ್ನು ಬಾಶ್‌, ಜನರಲ್‌ ಎಲೆಕ್ಟ್ರಿಕಲ್ಸ್‌, ಡಸಾಲ್ಟ್‌, ಸೀಮನ್ಸ್‌ ಕಂಪನಿಗಳ ಸಹಯೋಗದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಜಗದೀಶ್‌ ಶೆಟ್ಟರ್‌ ತಿಳಿಸಿದರು.

ಸೈಬರ್‌ ಸೆಕ್ಯೂರಿಟಿಗೆ ಒತ್ತು:

ಸಮಿಟ್‌ನಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಿಷ್ಟು; “ತಂತ್ರಜ್ಞಾನದ ಬೆಳವಣಿಗೆ ಹೆಚ್ಚಿದಂತೆಲ್ಲ ಸೈಬರ್‌ ಸೆಕ್ಯೂರಿಟಿಯ ಸವಾಲುಗಳೂ ಹೆಚ್ಚುತ್ತಿವೆ. ಇಂಥ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸರಕಾರ ಎಲ್ಲ ರೀತಿಯ ಹೆಜ್ಜೆಗಳನ್ನೂ ಇಟ್ಟಿದೆ. ಅದಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನವನ್ನು ಚೆನ್ನಾಗಿ ಬಳಸಿಕೊಳ್ಳಲಾಗುತ್ತಿದೆ” ಎಂದರು.

ಜಗತ್ತಿನೆಲ್ಲಡೆ ಡ್ರಗ್‌ ಸಾಗಣೆ, ಮಾನವ ಸಂಪನ್ಮೂಲ ಕಳ್ಳ ಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಅನೇಕ ವಿದ್ರೋಹಿ ಚಟುವಟಿಕೆಗಳು ಹೆಚ್ಚುತ್ತಿವೆ. ಹಾಗೆಯೇ, ಆರ್ಥಿಕ ಅಪರಾಧಗಳು ಕೂಡ ನಡೆಯುತ್ತಿವೆ. ಇವೆಲ್ಲವನ್ನು ಹತ್ತಿಕ್ಕಲು ರಾಜ್ಯದಲ್ಲಿ ಸೈಬರ್‌ ಪೊಲೀಸ್‌ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸೈಬರ್‌ ಪೊಲೀಸರಿಗೆ ಎಲ್ಲ ರೀತಿಯ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸಮಾಜದಲ್ಲಿ ಆಶಾಂತಿ ಸೃಷ್ಟಿಸುತ್ತಿರುವ ಫೇಕ್‌ ನ್ಯೂಸ್‌ ವಿರುದ್ಧವೂ ಸರಕಾರ ಕ್ರಮ ಕೈಗೊಳ್ಳಲಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆಯೇ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಖ್ಯವಾಗಿ ವಾಟ್ಸ್ ಅಪ್‌, ಟಿಟ್ಟರ್‌, ಇನ್ಸ್‌ಟಾಗ್ರಾಂ, ಫೇಸ್‌ಬುಕ್‌, ಯುಟ್ಯೂಬ್‌ ಸೇರಿದಂತೆ ಆನ್‌ಲೈನ್‌ ಫ್ಲಾಟ್‌ಫಾರಂಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವಂಥ ಎಲ್ಲ ಸುಳ್ಳುಸುದ್ದಿಗಳನ್ನು ಹರಡುವುದನ್ನು ತಡೆಯಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ:

ಕೋವಿಡ್‌ ಸಂಕಷ್ಟದ ಹೊತ್ತಿನಲ್ಲಿ ತಂತ್ರಜ್ಞಾನವು ರಾಜ್ಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪೂರಕವಾಯಿತು. ಈಗ ನಡೆಯುತ್ತಿರುವ ಆನ್‌ಲೈನ್‌ ತರಗತಿ ಸೇರಿದಂತೆ ಇಲಾಖೆಯ ಬಹುತೇಕ ಚಟುವಟಿಕೆಗಳು ಆನ್‌ಲೈನ್‌ ಮೂಲಕವೇ ನಡೆಯುತ್ತಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಹೇಳಿದರು.

ಎಲ್ಲರಿಗೂ ಗೊತ್ತಿರುವಂತೆ, ಕರ್ನಾಟಕವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಈ ಪರಂಪರೆ ಮುಂದೆಯೂ ಮುಂದುವರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ-2020 ಅನ್ನು ಕೂಡ ಕ್ಷಿಪ್ರಗತಿಯಲ್ಲಿ ಜಾರಿ ಮಾಡಲು ಸರಕಾರ ಮುಂದಾಗಿದೆ. ಹಾಗೆ ನೋಡಿದರೆ, ಈ ನೀತಿಯನ್ನು ಮೊತ್ತ ಮೊದಲು ಜಾರಿ ಮಾಡಲೊರಟ ರಾಜ್ಯ ಕರ್ನಾಟಕವೇ ಆಗಿದೆ ಎಂದರು ಸುರೇಶ್‌ ಕುಮಾರ್.‌

ಜೈವಿಕ ತಂತ್ರಜ್ಞಾನದಿಂದ ಕೃಷಿಗೆ ಲಾಭ:

ಟೆಕ್‌ ಸಮಿಟ್‌ನಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕರ್ನಾಟಕವು ಕೃಷಿ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಗಳನ್ನಿಟ್ಟಿದೆ. ಅದರಲ್ಲೂ ಆಹಾರ ಪದಾರ್ಥಗಳ ಕೊರತೆಯನ್ನು ನೀಗಿಸಬೇಕಾದರೆ ಜೈವಿಕ ತಂತ್ರಜ್ಞಾನವೇ ಪರಿಹಾರ ಎಂಬುದನ್ನು ಮನಗಂಡಿದೆ ಎಂದರು.

ಈಗಾಗಲೇ ಬಿಟಿ ಹತ್ತಿ ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಜೈವಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕೃಷಿ ಉತ್ಪನ್ನಗಳ ಉತ್ಪಾದನೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಲು ಸಾಧ್ಯವಾಗಿದೆ ಎಂದು ಸಚಿವರು ಹೇಳಿದರು.

English summary….

Four ministers stress on technology at Bengaluru Tech Summit-2020

Bengaluru, Nov. 21, 2020 (www.justkannada.in): Sri Jagadish Shettar, Minister for Large and Medium Scale Industries, Sri Basavaraj Bommai, Home Minister, Sri Suresh Kumar, Primary and Secondary Education Minister and Sri B.C. Patil, Agriculture Minister stressed on the various programmes that have been implemented based on technology, apart from sharing information about the various programmes planned by respective departments.

Speaking on the occasion, Sri Jagadish Shetter, Minister for large scale industries opined that though the entire world has been facing the impact of Covid-19 pandemic, resulting in a decline in industrial development, Karnataka has been successful in recovering from the impact soon. He said that everything has become almost normal and production has also returned to normal.

In his address Home Minister Basavaraj Bommai said that the government has taken all necessary measures to face the cyber security challenges by adopting modern technological methods.

Minister Suresh Kumar expressed his view that the digital technology came to the help of students during the Covid pandemic time. “The State Government is all set to implement the National Education Programme-2020 rapidly,” he added.

Agriculture Minister B.C. Patil opined that Karnataka has taken a big step in the agricultural sector by adopting technology. “We have clearly understood that bio-technology is one of the best solution to solve the problem of shortage of food production,” he said.

Keywords: Bengaluru Tech Summit-2020/Stress on Technology

Key words: Emphasis –technology-Four Ministers – Bangalore Tech Summit -2020

The post ತಂತ್ರಜ್ಞಾನಕ್ಕೆ ಒತ್ತು; ಬೆಂಗಳೂರು ಟೆಕ್‌ ಸಮಿಟ್‌-2020ನಲ್ಲಿ ವಾದ ಮಂಡಿಸಿದ ನಾಲ್ವರು ಸಚಿವರು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಂಗಳೂರು ಟೆಕ್ ಸಮ್ಮಿಟ್-2020: ಕೃಷಿ ನವೋದ್ಯಮ ಉತ್ಸುಕರ ನೆರವಿಗೆ ‘ಕೃಷಿಕ್ ಆಗ್ರಿಬಿಸಿನೆಸ್ ಇನ್ ಕ್ಯುಬೇಟರ್’
ಬೆಂಗಳೂರು,ನವೆಂಬರ್,20,2020(www.justkannada.in):  ಬೆಂಗಳೂರಿನಲ್ಲಿ ನಿನ್ನೆ ಆರಂಭಗೊಂಡ 3 ದಿನಗಳ ‘ತಂತ್ರಜ್ಞಾನ ಶೃಂಗಸಭೆ-2020’ ವರ್ಚುವಲ್ ರೂಪದಲ್ಲಿ ವೈವಿಧ್ಯಮಯ ಮಳಿಗೆಗಳಿವೆ.

ಇಂಥದೊಂದು ಮಳಿಗೆ ‘ಕೃಷಿಕ್ ಆಗ್ರಿಬಿಸಿನೆಸ್ ಇನ್ ಕ್ಯುಬೇಟರ್’ ನಲ್ಲಿ ಕೃಷಿ ವಲಯದ ಉದಯೋನ್ಮುಖ ಉದ್ದಿಮೆದಾರರಿಗೆ ಸಲಹೆ, ಮಾರ್ಗದರ್ಶನಗಳಿವೆ. ಕೃಷಿ ವಲಯದಲ್ಲಿ ನಾವೀನ್ಯತೆಯಿಂದ ಕೂಡಿದ ಪರಿಕಲ್ಪನೆ ಹೊಂದಿರುವ ಹಾಗೂ ಕೃಷಿ ನವೋದ್ಯಮ ಆರಂಭಿಸಲು ಉತ್ಸುಕರಾಗಿರುವ ಯುವಜನರು, ವಿದ್ಯಾರ್ಥಿಗಳು, ರೈತರು, ಮಹಿಳೆಯರು ಮುಂತಾದವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಹೂಡಿಕೆ ಅವಕಾಶಗಳು, ಅಗತ್ಯ ಮೂಲಸೌಕರ್ಯ, ಬೌದ್ಧಿಕ ಆಸ್ತಿ, ಗುಂಪು ತರಬೇತಿ, ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು, ಪ್ರಯೋಗಾಲಯ ಸೌಲಭ್ಯ ಮುಂತಾದವುಗಳ ವಿವರಗಳು ಇಲ್ಲಿವೆ.

ಪ್ರಾಥಮಿಕ ಹಂತದಲ್ಲಿರುವ ಪರಿಕಲ್ಪನೆ (ಐಡಿಯಾ)ಗಳಿಗೆ ಹೂಡಿಕೆ ಮಾಡುವ ಬಗ್ಗೆಯೂ ಮಾಹಿತಿ ಇಲ್ಲಿದೆ. ಒಟ್ಟಾರೆ ಕೃಷಿ ವಲಯದ ನವೋದ್ಯಮ ಐಡಿಯಾ ಇರುವವರಿಗೆ ಈ ಮಳಿಗೆಯಲ್ಲಿ ಸಾಕಷ್ಟು ಮಾಹಿತಿ ಇದೆ. ವರ್ಚುವಲ್ ರೂಪದಲ್ಲಿ ಅಥವಾ ವಾಟ್ಸ್ ಅಪ್ ಮೂಲಕ ಸಂವಾದ ನಡೆಸಬಹುದಾಗಿದ್ದು, ಬಿಸಿನೆಸ್ ಕಾರ್ಡ್ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಈ ಸಂಸ್ಥೆಯ ಬ್ರೋಷರ್, ಕೈಪಿಡಿಯ ಸಾಫ್ಟ್ ಕಾಪಿ ಕೂಡಾ ಲಭ್ಯವಿದೆ.

Key words: Bangalore Tech Summit -2020- Agricultural- Agribusiness – Cubator

The post ಬೆಂಗಳೂರು ಟೆಕ್ ಸಮ್ಮಿಟ್-2020: ಕೃಷಿ ನವೋದ್ಯಮ ಉತ್ಸುಕರ ನೆರವಿಗೆ ‘ಕೃಷಿಕ್ ಆಗ್ರಿಬಿಸಿನೆಸ್ ಇನ್ ಕ್ಯುಬೇಟರ್’ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಂಗಳೂರು ಟೆಕ್ ಸಮ್ಮಿಟ್-2020: ವರ್ಚ್ಯುಯಲ್ ಮೇಳಕ್ಕೆ ನಿರೀಕ್ಷೆ ಮೀರಿ ಸ್ಪಂದನೆ….
ಬೆಂಗಳೂರು,ನವೆಂಬರ್,20,2020(www.justkannada.in):  ಇದೇ ಮೊದಲ ಸಲ ವರ್ಚ್ಯುಯಲ್ ಆಗಿ ನಡೆದ ‘ಬೆಂಗಳೂರು ತಂತ್ರಜ್ಞಾನ ಮೇಳ-2020’ ಕ್ಕೆ ಮೊದಲ ದಿನವಾದ ಗುರುವಾರ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.

ಬಿಟಿಎಸ್-2020 ಆನ್ ಲೈನ್ ವೇದಿಕೆಯೊಂದರಲ್ಲೇ 7000 ವ್ಯಾಪಾರೋದ್ಯಮಿಗಳು ನೋಂದಣಿ ಮಾಡಿ ಪಾಲ್ಗೊಂಡರು. ಇದಲ್ಲದೇ ಇತರ 10,000 ಜನರು ಇದೇ ವೇದಿಕೆ ಮೂಲಕ ಆಸಕ್ತಿಯಿಂದ ಭಾಗವಹಿಸಿದರು. ಒಟ್ಟಾರೆ ಈ ವೇದಿಕೆ ಮೂಲಕ ಪಾಲ್ಗೊಂಡವರ ಸಂಖ್ಯೆ 17,000 ದಾಟಿದೆ. ಕಳೆದ ವರ್ಷ ಮೂರು ದಿನಗಳೂ ಸೇರಿ ಪಾಲ್ಗೊಂಡ ವ್ಯಾಪಾರೋದ್ಯಮಿಗಳ ಸಂಖ್ಯೆ 3,000 ಇತ್ತು.

ಇದಲ್ಲದೇ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕೂಡ 2 ಕೋಟಿಗೂ ಹೆಚ್ಚು ಜನರನ್ನು ಇದು ತಲುಪಿದೆ, ಟಿ.ವಿ. ವಾಹಿನಿಗಳ ಮೂಲಕ ವೀಕ್ಷಿಸಿದವರ ಸಂಖ್ಯೆಯೂ ದೊಡ್ಡದಿದೆ. ಹೀಗಾಗಿ ಒಟ್ಟಾರೆ ದೇಶ-ವಿದೇಶಗಳ ಕೋಟ್ಯಂತರ ಜನರು ಅತ್ಯಧಿಕ ಸಂಖ್ಯೆಯಲ್ಲಿ ಇದರಲ್ಲಿ ಭಾಗಿಯಾಗಿದ್ದಾರೆ.

English summary….

Bengaluru Tech Summit-2020: Virtual mela receives overwhelming response

Bengaluru, Nov. 20, 2020 (www.justkannada.in): The virtual mela held as part of the ‘Bengaluru Technology Mela-2020 which was held for the first time on Thursday received overwhelming response.

About 7000 traders had registered on BTS-2020 online platform alone. Apart from it, 10,000 others also took part through directly through the same platform. Thus, the total number of people who took part in the virtual mela was above 17,000, The total number of traders who participated in the three days programme last year was only 3,000.

Above this the tech meet has been viewed by more than 2 crore people through social media and the number of viewers on TV and other media is also bigger.

Keywords: Bengalutu Tech Summit 2020/ virtual mela

Key words: Bangalore Tech Summit-2020-Virtual Fair – expectation- Responsiveness

The post ಬೆಂಗಳೂರು ಟೆಕ್ ಸಮ್ಮಿಟ್-2020:  ವರ್ಚ್ಯುಯಲ್ ಮೇಳಕ್ಕೆ ನಿರೀಕ್ಷೆ ಮೀರಿ ಸ್ಪಂದನೆ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಂಡವಾಳ ಹೂಡಿಕೆಗೆ ಕರ್ನಾಟಕ ಅತ್ಯಂತ ಸೂಕ್ತ ಸ್ಥಳ- ಬೆಂಗಳೂರು ಟೆಕ್ ಸಮ್ಮಿಟ್-2020ನಲ್ಲಿ ಸಿಎಂ ಬಿಎಸ್ ವೈ ಹೇಳಿಕೆ…
ಬೆಂಗಳೂರು, ನವೆಂಬರ್,19,2020(www.justkannada.in): ಬಂಡವಾಳ ಹೂಡಿಕೆಗೆ ಕರ್ನಾಟಕ ಅತ್ಯಂತ ಸೂಕ್ತ ಸ್ಥಳವಾದ್ದದ್ದು. ಉದ್ಯಮಿಗಳನ್ನ ಸೆಳೆಯುವಲ್ಲಿ ರಾಜ್ಯ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

ಬೆಂಗಳೂರು ಟೆಕ್ ಸಮ್ಮಿಟ್ 2020ಕ್ಕೆ ಚಾಲನೆ ಸಿಕ್ಕ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಕರ್ನಾಟಕಕ್ಕೆ ಈ ಟೆಕ್ ಸಮ್ಮಿಟ್ ಐತಿಹಾಸಿಕ ಅವಕಾಶವಾಗಿದೆ. 25 ದೇಶಗಳು ಈ ಟೆಕ್ ಸಮ್ಮಿಟ್ ನಲ್ಲಿ ಭಾಗವಹಿಸಿವೆ. ಬಂಡವಾಳ ಹೂಡಿಕೆಗೆ ಕರ್ನಾಟಕ ಅತ್ಯಂತ ಸೂಕ್ತ ಸ್ಥಳವಾದ್ದದ್ದು. ಉದ್ಯಮಿಗಳನ್ನ ಸೆಳೆಯುವಲ್ಲಿ ರಾಜ್ಯ ಯಶಸ್ವಿಯಾಗಿದೆ. ನೂತನ ಐಟಿ ನೀತಿ ಜಾರಿಯಿಂದ ಮುಂದಿನ 5 ವರ್ಷದಲ್ಲಿ 60 ಲಕ್ಷ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಹೇಳಿದರು.

2025ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ನಷ್ಟು ಮಾಡಲು ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಲಿಷ್ಠ ದೇಶವನ್ನಾಗಿ ಪರಿವರ್ತಿಸಲು ಪ್ರಧಾನಿ ಮೋದಿ ತೀವ್ರ ಉತ್ಸುಕವಾಗಿದ್ದಾರೆ. ಭಾರತ ಸರ್ಕಾರದ ಈ ದೃಷ್ಟಿಕೋನದಲ್ಲಿ ಸಾಗಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words: Karnataka – best place – invest- CM BS Yeddyurappa- Bangalore Tech Summit 2020

The post ಬಂಡವಾಳ ಹೂಡಿಕೆಗೆ ಕರ್ನಾಟಕ ಅತ್ಯಂತ ಸೂಕ್ತ ಸ್ಥಳ- ಬೆಂಗಳೂರು ಟೆಕ್ ಸಮ್ಮಿಟ್-2020ನಲ್ಲಿ ಸಿಎಂ ಬಿಎಸ್ ವೈ ಹೇಳಿಕೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್‌ ಡಿಜಿಟಲ್‌ ಆರ್ಥಿಕತೆಯ ಗುರಿ-ಬೆಂಗಳೂರು ಟೆಕ್‌ ಸಮ್ಮಿಟ್‌-2020ನಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ಘೋಷಣೆ..
ಬೆಂಗಳೂರು,ನವೆಂಬರ್,19,2020(www.justkannada.in):  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್‌ ಇಂಡಿಯಾ ಹಾಗೂ ಆತ್ಮನಿರ್ಭರ್‌ ಭಾರತ್‌ ಪರಿಕಲ್ಪನೆ ಹಿನ್ನೆಲೆ ಕರ್ನಾಟಕವು ಅಭಿವೃದ್ಧಿಯಲ್ಲಿ ದಾಪುಗಾಲು ಇಡುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್‌ ಡಿಜಿಟಲ್‌ ಆರ್ಥಿಕತೆಯ ಗುರಿ ಸಾಧಿಸಲಾಗುವುದು ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಟೆಕ್‌ ಸಮ್ಮಿಟ್‌ (ಬಿಟಿಎಸ್)-2020 ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಸದ್ಯಕ್ಕೆ 52 ಶತಕೋಟಿ ಡಾಲರ್‌ವಷ್ಟು ಡಿಜಿಟಲ್‌ ಆರ್ಥಿಕತೆಯ ಗುರಿಯನ್ನು ರಾಜ್ಯವು ದಾಟಿದೆ. ಮುಂದಿನ ಪಂಚವರ್ಷಗಳಲ್ಲಿ ಈ ನಿಟ್ಟಿನಲ್ಲಿ ಹಾಕಿಕೊಂಡಿರುವ ಗುರಿಯನ್ನು ಮುಟ್ಟಲು ಎಲ್ಲ ರೀತಿಯ ಕ್ರಮಗಳನ್ನು ಸರಕಾರ ಕೈಗೊಂಡಿದೆ ಎಂದರು.

ಪ್ರಧಾನಮಂತ್ರಿ ಮೋದಿ ಅವರು ನಿಗದಿಪಡಿಸಿರುವ ಒಂದು ಟ್ರಿಲಿಯನ್‌ ಡಿಜಿಟಲ್‌ ಆರ್ಥಿಕತೆಯ ಗುರಿಗೆ ಹೆಚ್ಚಿನ ಕೊಡುಗೆ ನೀಡಲು ಕರ್ನಾಟಕ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಸುಧಾರಣೆಗಳನ್ನು ಕೈಗೊಂಡು ಐಟಿ-ಬಿಟಿ ಸೇರಿದಂತೆ ಸರ್ವ ಕ್ಷೇತ್ರಗಳಲ್ಲೂ ಸುಧಾರಣೆಗಳನ್ನು ತರಲಾಗಿದೆ. ನಿಗದಿತ ಗುರಿಯನ್ನು ತಪ್ಪದೇ ಮುಟ್ಟಲಾಗುವುದು ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸ್ಪಷ್ಟವಾಗಿ ಹೇಳಿದರು.

ಡಿಜಿಟಲ್‌ ಆರ್ಥಿಕತೆಯ ಗುರಿ ತಲುಪಲು ರಾಜ್ಯವು ಈಗಾಗಲೇ ಡಿಜಿಟಲ್‌ ಎಕಾನಮಿ ಮಿಷನ್‌ ಸ್ಥಾಪನೆ ಮಾಡಿ ಕಾರ್ಯಪ್ರವೃತ್ತವಾಗಿದೆ. ತಂತ್ರಜ್ಞಾನದ ಮೂಲಕ ಆರ್ಥಿಕತೆಗೆ ವೇಗ ನೀಡುವುದು ಈ ಮಿಷನ್‌ ಉದ್ದೇಶವಾಗಿದೆ.

ಐಟಿ ಬಿಟಿ ಜತೆಗೆ ಎಲೆಕ್ಟ್ರಾನಿಕ್‌ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಆದ್ಯತೆ…

ಡಿಜಿಟಲ್‌ ಎಕಾನಮಿ ಮಿಷನ್‌ ಮೂಲಕ ಇನ್‌ವೆಸ್ಟ್‌ ಇಂಡಿಯಾ ಮೂಲಕ ಜಾಗತಿಕ ಸಂಪರ್ಕಗಳನ್ನು ಕರ್ನಾಟಕದ ಜತೆ ಅನುಸಂಧಾನಗೊಳಿಸುತ್ತಿದ್ದು, ಈ ಉಪಕ್ರಮದಿಂದ ಕರ್ನಾಟಕದ ತಂತ್ರಜ್ಞಾನ ಉದ್ಯಮ ಮತ್ತು ರಾಜ್ಯದ ಬ್ರಾಂಡ್ ಈಕ್ವಿಟಿಯನ್ನು ಉತ್ತಮಗೊಳಿಸುತ್ತಿದೆ. ಈ ಮೂಲಕ ಮುಂದಿನ ಮೈಲುಗಲ್ಲು ಸಾಧಿಸಲಾಗುವುದು. ಇದಕ್ಕೆ ಪೂರಕವಾಗಿ ಹೊಸ ತಲೆಮಾರಿನ ನವೋದ್ಯಮ, ಐಟಿ ಬಿಟಿ ಜತೆಗೆ ಎಲೆಕ್ಟ್ರಾನಿಕ್‌ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ಕೆಲವೇ ದಿನಗಳ ಹಿಂದೆಯಷ್ಟೇ ರಾಜ್ಯ ಸರಕಾರ ಅತ್ಯಂತ ದೂರದೃಷ್ಟಿಯುಳ್ಳ ಹಾಗೂ ಮುಂದಿನ ಐದು ವರ್ಷಗಳಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ನೀಡಬಲ್ಲ ಐಟಿ ನೀತಿ-2020-25 ಅನ್ನು ರೂಪಿಸಿದ್ದು, ರಾಜ್ಯದ ಪ್ರತಿಮೂಲೆಗೂ ಅತ್ಯುತ್ತಮ ಕನೆಕ್ಟಿವಿಟಿ ಮಾಡಿ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಉಪಕ್ರಮಿಸಲಾಗಿದೆ. ಈಗಾಗಲೇ ಲಭ್ಯವಿರುವ 4ಜಿ ಸೇವೆಯ ಜತೆಗೆ, 5ಜಿ ಸೇವೆಯನ್ನೂ ಪ್ರತಿ ಮೂಲೆಗೂ ವಿಸ್ತರಿಸುವುದು, ಆ ಮೂಲಕ ಡಿಜಿಟಲ್‌ ಆರ್ಥಿಕತೆ ಗುರಿಗೆ ಶಕ್ತಿ ತುಂಬುದು ಸರಕಾರದ ಉದ್ದೇಶವಾಗಿದೆ.

ಇದು ಬೆಂಗಳೂರಿಗೆ ಅದ್ಬುತವಾದ ತಂತ್ರಜ್ಞಾನ ಪಯಣದ ಟ್ರ್ಯಾಕ್…

ಬೆಂಗಳೂರಿಗೆ ಅದ್ಬುತವಾದ ತಂತ್ರಜ್ಞಾನ ಪಯಣದ ಟ್ರ್ಯಾಕ್ ಇದ್ದು, ಈ ವೇದಿಕೆಯ ಮೂಲಕ  ಇವತ್ತು ಮತ್ತೊಂದು ಪ್ರಮುಖ ಅಧ್ಯಾಯ ಆರಂಭಗೊಳ್ಳುತ್ತಿದೆ. ಸುಮಾರು 5500 ಡ್ರೈವಿಂಗ್ ಟೆಕ್ನಾಲಜಿ ಕಂಪನಿಗಳು ರಾಜ್ಯದಲ್ಲಿದ್ದು, ಅವೆಲ್ಲವೂ ಜಾಗತಿಕ ಮಟ್ಟಕ್ಕೆ ಸರಿಸಾಟಿಯಾಗಿ ಕೆಲಸ ಮಾಡುತ್ತಿವೆ.

ಕೋವಿಡ್ ಸಮಯದಲ್ಲಿ ತಂತ್ರಜ್ಞಾನ ಬಳಸಿಕೊಂಡು ರಾಜ್ಯದಲ್ಲಿ ಆಡಳಿತ ನಡೆಸಲಾಗಿದೆ. ಅಂತಹ ವಿಪರೀತ ಸಂರ್ಭದಲ್ಲೂ ರಾಜ್ಯ ಸರಕಾರವು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಹೀಗಾಗಿ ಐಟಿ ಬಿಟಿ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಸುಧಾರಣೆ ತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ.

ಪ್ರಧಾನಿ ಮೋದಿ ಅವರ ಕನಸುಗಳನ್ನು ಕರ್ನಾಟಕ ನನಸು ಮಾಡುತ್ತಿದೆ. ಅವರ ಕನಸು ಆತ್ಮನಿರ್ಭರ ಕಲ್ಪನೆಯೊಂದಿಗೆ ಕರ್ನಾಟಕವನ್ನು ನಿರ್ಮಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಗಳೂರು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಪ್ರಭಾವಶಾಲಿಯಾಗಿ ಬೆಳೆಯಲಿದೆ ಎಂಬ ವಿಶ್ವಾಸ ನನ್ನದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ತಂತ್ರಜ್ಞಾನ ಕ್ಷೇತ್ರವೇ ಮುಂದಿನ ದಿನಗಳಲ್ಲಿ ತನ್ನ ಅಧಿಪತ್ಯವನ್ನು ಸಾಧಿಸಲಿದೆ. ಅದಕ್ಕೆ ಡಿಜಿಟಲ್‌ ಇಂಡಿಯಾ, ಡಿಜಿಟಲ್‌ ಎಕಾನಮಿ ಉಪ ಕ್ರಮಗಳು ಬಲ ತುಂಬುತ್ತಿವೆ. ಭವಿಷ್ಯದಲ್ಲಿ ತಂತ್ರಜ್ಞಾನವೇ ಆಡಳಿತ ನಡೆಸಲಿದೆ. ಆ ನಿಟ್ಟಿನಲ್ಲಿ ಭಾರತದ ಜತೆ ಕರ್ನಾಟಕವೂ ದಾಪುಗಾಲು ಇಡುತ್ತಿದೆ ಎಂದು ಹೇಳಿದರು.

English summary…

Our aim is to achieve 300 billion dollar digital economy in five years: Dr. Ashwathnarayan

Bengaluru, Nov. 19, 2020 (www.justkannada.in): “Karnataka is on the right track and moving fast towards development under the Digital India and Atmanirbhar Bharat programmes which are the brainchild of Prime Minister Narendra Modi. We have an aim to achieve 300 billion dollar digital economy in the next five years,” opined IT-BT Minister and Deputy Chief Minister Dr. C.N. Ashwathnarayan.

He addressed the gathering at the inauguration function of the Bengaluru Tech Summit (BTS)-2020, held at Bengaluru on Sunday. Presently Karnataka has crossed the 52 billion dollar digital economy mark. Our government has taken all the necessary measures to reach our aim in the next five years, he said.

“Karnataka is all set to contribute to the one trillion dollar digital economy as aspired by Prime Minister Narendra Modi. The State Government has made necessary improvements in all the sectors including IT-BT and we are sure we will achieve it,” he added.

Key words: DCM -Dr Ashwatthanarayan- announces – target – $ 300 billion -digital economy -ive years- Bangalore Tech Summit -2020

The post ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್‌ ಡಿಜಿಟಲ್‌ ಆರ್ಥಿಕತೆಯ ಗುರಿ-ಬೆಂಗಳೂರು ಟೆಕ್‌ ಸಮ್ಮಿಟ್‌-2020ನಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ಘೋಷಣೆ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.