bahuroopi | Just Kannada - Daily News Updates

‘ ಬಹುರೂಪಿ ನಾಟಕೋತ್ಸವ’ ಮುಂದೂಡಿಕೆ : ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ
ಮೈಸೂರು, ಡಿ.04, 2021 : (www.justkannada.in news) ಬಹುನಿರೀಕ್ಷಿತ ರಂಗಾಯಣ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಜ. 15 ರ ತನಕ ಮೂಂದೂಡಲಾಗಿದೆ. ಇದೇ 10ರಿಂದ 19ರವರೆಗೆ ಬಹುರೂಪಿ ಉತ್ಸವ ನಡೆಸಲು ಸಕಲ ಸಿದ್ಧತೆ ನಡೆಸಲಾಗಿತ್ತು.

ರಾಜ್ಯ ಸರಕಾರದ ನೂತನ ಕೊವಿಡ್ ಮಾರ್ಗಸೂಚಿ ಅನ್ವಯದ ಹಿನ್ನೆಲೆಯಲ್ಲಿ ರಂಗಾಯಣ ಈ ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಜಸ್ಟ್ ಕನ್ನಡದ ಜತೆ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರು ಹೇಳಿದಿಷ್ಟು…

ರಾಜ್ಯ ಸರಕಾರ ಕೋವಿಡ್ ನ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಸಭೆ, ಸಮಾರಂಭಗಳಿಗೆ 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಆದರೆ ರಂಗಾಯಣದ ಬಹುರೂಪಿ ನಾಟಕೋತ್ಸವ ಸಾವಿರಾರು ಮಂದಿ ಭಾಗವಹಿಸುವ ಉತ್ಸವ. ಆದ್ದರಿಂದ ಬಹುರೂಪಿಯನ್ನು ತಾತ್ಕಾಲಿಕವಾಗಿ ಜ.15 ರ ತನಕ ಮುಂದೂಡಿದ್ದೇವೆ. ರಾಜ್ಯ ಸರಕಾರದ ದಿನವಹಿ ಬೆಳವಣಿಗೆ ಗಮನಿಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುತ್ತದೆ.

ರಂಗಾಯಣದ ಉತ್ಸವದಲ್ಲಿ ಭಾಗವಹಿಸುವ ಕಲಾವಿದರು, ಸಂಪನ್ಮೂಲ ವ್ಯಕ್ತಿಗಳು, ಮಳಿಗೆಗಳು ಹಾಗೂ ಇದರ ವೀಕ್ಷಣೆಗೆ ಆಗಮಿಸುವವರ ಅಂದಾಜು ಲೆಕ್ಕವೇ ದಿನಂಪ್ರತಿ 2000 ಮಂದಿಯಾಗುತ್ತಾರೆ. ಆದ್ದರಿಂದ ಸರಕಾರದ ನಿಯಮಾವಳಿಗಳನ್ನು ಪಾಲಿಸಿ ಉತ್ಸವ ಮಾಡಲು ಸಾಧ್ಯವಾಗದು. ರಂಗಾಸಕ್ತರಿಗಾಗಿಯೇ ಬಹುರೂಪಿ ಉತ್ಸವ ಆಯೋಜಿಸುತ್ತಿರುವುದು. ಆದ್ದರಿಂದ ಈ ಎಲ್ಲಾ ಅಂಶವನ್ನು ಪರಿಗಣಿಸಿ ಬಹುರೂಪಿಯನ್ನು ತಾತ್ಕಾಲಿಕವಾಗಿ ಜ.15 ರ ತನಕ ಮುಂದೂಡುವ ತೀರ್ಮಾನಕ್ಕೆ ಬರಲಾಗಿದೆ.

ಯಾವುದೇ ಬದಲಾವಣೆ ಇಲ್ಲ :

ಕೋವಿಡ್ ಮಾರ್ಗಸೂಚಿಯನ್ವಯ ಬಹುರೂಪಿಯನ್ನು ಯಥಾಸ್ಥಿತಿಯಲ್ಲೇ ಮುಂದೂಡಿರುವುದು. ಆದ್ದರಿಂದ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಉತ್ಸವ ನಡೆಯುವುದು ಈಗ ನಿರ್ಧರಿಸಿರುವ ’ತಾಯಿ’ ಪರಿಕಲ್ಪನೆಯನ್ನೇ ಪ್ರಧಾನ ಅಂಶವನ್ನಾಗಿರಿಸಿಕೊಂಡಿರುವ ಅಂಶಗಳನ್ನು ಆಧಾರಿಸಿಯೇ ನಡೆಯಲಿವೆ. ಜತೆಗೆ ನಾಟಕ, ಸಮಾರಂಭದ ಅತಿಥಿಗಳಲ್ಲೂ ಸಹ ಯಾವುದೇ ಬದಲಾವಣೆ ಇರದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಸ್ಪಷ್ಟಪಡಿಸಿದರು.

key words : Mysore-rangayana-bahuroopi-drama-festival-postponed-temporally-due-to-covid-guide.lines

ಈ ಬಾರಿ ಬಹುರೂಪಿ ಯಶಸ್ವಿಯಾಗಿದೆ- ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿಕೆ…
ಮೈಸೂರು,ಫೆ,20,2020(www.justkannada.in):  ಈ ಬಾರಿಯ ಬಹುರೂಪಿ ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

ಮೈಸೂರಿನಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ರಂಗಾಯಣದ ಏನು ಅಲ್ಲದ ಜನಸಾಮಾನ್ಯರು ಕೂಡ ಬಹುರೂಪಿಯಲ್ಲಿ ಭಾಗವಹಿಸಿದ್ರು. ಈ ಭಾರಿ ಗಾಂಧಿ ಪಥ ಮನೆ ಮನೆಗಳನ್ನು ತಲುಪಿದೆ. ಈ ಯಶಸ್ಸು ನಮ್ಮ ಎಲ್ಲಾ ತಂಡಕ್ಕೂ ಸಲ್ಲುತ್ತದೆ. ಪಂಥಗಳನ್ನು ಮೀರಿ ಪಥಗಳತ್ತ ಹೆಜ್ಜೆ ಹಾಕಿದ್ದೇವೆ. ಎಡ ಪಂಥಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನಾನು ರಂಗಾಯಣಕ್ಕೆ ಸಂಘರ್ಷಕ್ಕೆ ಬಂದಿಲ್ಲ ಸಮನ್ವಯತೆಗೆ ಬಂದಿದ್ದೇನೆ. ನಾನು ಬಂದಿರುವುದು ರಂಗಾಯಣಕ್ಕಾಗಿ. ಯಾವುದೇ ಪಕ್ಷದ ಬಾವುಟ ಹಾರಿಸಲು ಅಲ್ಲ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು.

ಟೀ ಕುಡಿದು ಟೀಕಿಸಿ..

ಟಿಪ್ಪು ಒಬ್ಬ ಮತಾಂಧ ಎಂಬ ಹೇಳಿಕೆ ವಿಚಾರ  ಪ್ರತಿಕ್ರಿಯಿಸಿದ ಅಡ್ಡಂಡ ಕಾರ್ಯಪ್ಪ,  ನನ್ನ ಮಾತು ಸ್ವಲ್ಪ ಒರಟು, ಕೊಡವರ ಮಾತೇ ಹಾಗೆ. ಅಷ್ಟಿಲ್ಲದಿದ್ದರೆ ಕೊಡವರು ದೇಶವನ್ನು ಕಾಯುವುದಕ್ಕೆ ಆಗುತ್ತಿರಲಿಲ್ಲ. ನೀವು ಪತ್ರಕರ್ತರು ಬೇಕಿದ್ದರೆ ಟೀ ಕುಡಿದು ನನ್ನ ಬಗ್ಗೆ ಟೀಕಿಸಿ ಬರೆಯಿರಿ ಎಂದು ಹೇಳಿದರು.

ನಾನು ಹೇಳಿದ್ದು, ಕೊಡವರಿಗೆ ಟಿಪ್ಪು ಎಂದರೆ ಒಬ್ಬ ಮತಾಂಧ. ಮೈಸೂರಿಗರಿಗೆ ಹೆಮ್ಮೆ ಎಂದು ನಾ ಹೇಳಿರುವುದು. ಟಿಪ್ಪು ಕೊಡಗಿನಲ್ಲಿ 12000 ಜನರನ್ನು ಮತಾಂತರ ಮಾಡಿದ್ದ ಎಂದು ಅಡ್ಡಂಡ ಕಾರ್ಯಪ್ಪ ಆರೋಪಿಸಿದರು.

Key words: bahuroopi-success –rangayana director-addanda karyappa