August 31 Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರಿನಲ್ಲಿ ಆ.31 ರಂದು ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’ ಪ್ರದರ್ಶನ
ಮೈಸೂರು,ಆಗಸ್ಟ್,31,2025 (www.justkannada.in): ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ  ಆಗಸ್ಟ್ 31 ರಂದು ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’ ನಾಟಕ ಪ್ರದರ್ಶನಗೊಳ್ಳಲಿದೆ.

ನಟನ ರಂಗಶಾಲೆಯಲ್ಲಿ ಮತ್ತು ಬುಕ್ ಮೈಶೋನಲ್ಲಿ ಟಿಕೆಟ್ ಲಭ್ಯವಿರಲಿದೆ. ಬಾಲ್ಯದ ಮುಗ್ಧತೆ, ಯೌವನದ ತುಂಟಾಟ, ಪ್ರೌಢಾವಸ್ಥೆಯ ಏಳುಬೀಳುಗಳು. ಇವುಗಳ ಮಧ್ಯೆ ಮೂಡುವ ಗೆಳೆತನ, ಅರಳುವ ಪ್ರೀತಿ, ಕಾಡುವ ನೆನಪು, ಅಗಲಿಕೆ , ಸಂತಸ, ನೋವು..ಇವೆಲ್ಲವೂ ನಿಮ್ಮ ಪತ್ರಗಳಲ್ಲಿ ದಾಖಲಾಗಿದ್ದರೆ?! ಒಂದಿಡೀ ಜೀವನದ ಪಿಸುಮಾತುಗಳು, ಹಂಚಿಕೊಂಡ ಗುಟ್ಟುಗಳು , ಜೊತೆಗೆ ಕಂಡ ಕನಸುಗಳು, ಖುಷಿಯ ಚೀತ್ಕಾರದ ಜೊತೆಗೆ ದು:ಖದ ನಿಟ್ಟುಸಿರು. ದೂರವಿದ್ದರೂ ಜೊತೆಗೆ ಸಾಗಿದ ದಾರಿಗಳು. ಇವೆಲ್ಲವೂ ಒಬ್ಬರಿಗೊಬ್ಬರು ಬರೆದ ಪತ್ರಗಳಲ್ಲಿ ಬಿಚ್ಚಿಕೊಳ್ಳುವ ಪ್ರೇಮ ಕಥಾನಕವೇ ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’.

ಈ ನಾಟಕವನ್ನ ಎ.ಆರ್‌.ಗರ್ನಿಯವರು ಬರೆದಿದ್ದು, ವೆಂಕಟೇಶ್ ಪ್ರಸಾದ್ ರೂಪಾಂತರ ಮತ್ತು ನಿರ್ದೇಶನ ಮಾಡಿದ್ದಾರೆ.  ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ನಿರ್ದೇಶಕ ವೆಂಕಟೇಶ್ ಪ್ರಸಾದ್  ಈ ವರ್ಷದ ಮಾರ್ಚ್ ನಲ್ಲಿ ‘ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮೆನ್ಸ್’ ಸಂಸ್ಥೆಯು ತನ್ನ ಹೊಸ ನಾಟಕೋತ್ಸವಕ್ಕೆ ನಮ್ಮ ತಂಡವನ್ನು ಆಹ್ವಾನಿಸಿ, ಹೊಸ ನಾಟಕವೊಂದನ್ನು ಮಾಡಲು ಕೇಳಿಕೊಂಡಿತು. ಹೊಸ ಜಾಗದಲ್ಲಿ ಈ ನಾಟಕೋತ್ಸವ ನಡೆಯಬೇಕಾದ್ದರಿಂದ , ಸಮಯವೂ ಕಡಿಮೆ ಇದ್ದಿದ್ದರಿಂದ ನಾವು ಕಡಿಮೆ ನಟರಿರುವ ನಾಟಕಗಳಿಗೆ ಹುಡುಕಾಟ ಶುರು ಮಾಡಿದೆವು. ಆಗ ಅಕಾಸ್ಮಾತ್ತಾಗಿ ಕಣ್ಣಿಗೆ ಬಿದ್ದಿದ್ದೇ ಎ.ಆರ್‌.ಗರ್ನಿಯವರು ಬರೆದ ‘ಲವ್ ಲೆಟರ್ಸ್’ ನಾಟಕ. 1986 ರಲ್ಲಿ ಪ್ರಕಟವಾದ ಈ ನಾಟಕ ಸುಮಾರು ದೇಶಗಳಲ್ಲಿ ಪ್ರದರ್ಶನ ಕಂಡು ಜನಪ್ರಿಯಯಾದ ನಾಟಕ‌. ಪ್ರೇಮಿಗಳಿಬ್ಬರು ತಮ್ಮ ಇಡೀ ಜೀವನದ ಘಟನೆಗಳನ್ನು, ನೋವು ನಲಿವುಗಳನ್ನು , ಗೆಲುವು ಸೋಲುಗಳನ್ನು , ತಾವು ಪರಸ್ಪರ ಬರೆದುಕೊಂಡ ಪತ್ರಗಳ ಮೂಲಕ‌ ಪ್ರೇಕ್ಷಕರ ಮುಂದೆ ತೆರೆದಿಡುತ್ತಾ ಹೋಗುತ್ತಾರೆ‌. ಇದೊಂದು ಪ್ರೇಮ ಕಥೆ, ಇಬ್ಬರೇ ಕಲಾವಿದರು ಅಭಿನಯಿಸುವ ಕಥೆ‌. ನಮಗೆ ಬೇಕಾದ ನಾಟಕ ಸಿಕ್ಕಾಗಿತ್ತು‌

ಆದರೆ ಕೇವಲ ಇಬ್ಬರು ಕಲಾವಿದರೆಂಬ ಕಾರಣಕ್ಕೆ ಈ ನಾಟಕ ತೆಗೆದುಕೊಂಡದ್ದಲ್ಲ. ಬೇರೆ ಕಾರಣಗಳೂ ಸೇರಿಕೊಂಡವು. ಮೊದಲಿಗೆ ಇದೊಂದು ಭಾವನಾತ್ಮಕ ಪ್ರೇಮ ಕಥೆ. ನಮ್ಮ ಸುತ್ತಲಿನ ಇಡೀ ಜಗತ್ತು ಗದ್ದಲ, ಗೊಂದಲದಲ್ಲಿ ಸಿಲುಕಿರುವಾಗ, ದ್ವೇಷದ ಗಾಳಿಯನ್ನೇ ಉಸಿರಾಡಬೇಕಾದ ಸಂದರ್ಭದಲ್ಲಿ , ಒಂದು ಸೌಮ್ಯವಾದ, ಶಾಂತವಾದ ಪ್ರೀತಿಯ ಕಥೆಯೊಂದನ್ನು ಸಮಾಧಾನದಿಂದ ಪ್ರೇಕ್ಷಕರ ಮುಂದೆ ಹೇಳಬೇಕೆನಿಸಿತ್ತು‌.  ಹಲವು ಹತ್ತು ಅಭಿಪ್ರಾಯಗಳಿಂದ ದೂರವಾಗಿ ದ್ವೀಪಗಳಾದ ನಮ್ಮನ್ನು ಕೊನೆಗೂ ಪ್ರೀತಿ ಮಾತ್ರ ಬೆಸೆಯಲು ಸಾಧ್ಯ. ಅದು ಈ ನಾಟಕ ಮಾಡಲು ಮೊದಲ ಕಾರಣ. ಮತ್ತೊಂದು ಕಾರಣ, ನಾವೆಲ್ಲರೂ ಆಗಾಗ ಕೇಳುವ ಮಾತು – personal is political ಎಂದು. ಅದೇನೆಂದು ಈ ನಾಟಕದಲ್ಲಿ ನೋಡಬಹುದು.  ಮನುಷ್ಯರ ಬದುಕಿನ ವೈಯಕ್ತಿಕ ಬೇರೆ, ಸಾಮಾಜಿಕ ಬೇರೆ ಎಂದು ಮೇಲ್ನೋಟಕ್ಕೆ ಅನಿಸಿದರೂ,  ವ್ಯಕ್ತಿಯ ಸಾಮಾಜಿಕ ಶ್ರೇಣಿ, ಲಿಂಗ, ಸ್ಥಾನಮಾನಗಳು, ಬಾಲ್ಯದ ಅನುಭವಗಳು ಆ ವ್ಯಕ್ತಿಯ personal ಅಂದರೆ ವೈಯುಕ್ತಿಕವನ್ನೂ ನಿರ್ಧರಿಸುತ್ತದೆ‌ ಎಂಬುದು ವಾಸ್ತವ. ಅದು ಈ ನಾಟಕದಲ್ಲಿ ಪ್ರಮುಖವಾಗಿ ಕಾಣುವ ಮತ್ತೊಂದು ಅಂಶ‌ ಎಂದು ನಿರ್ದೇಶಕ ವೆಂಕಟೇಶ್ ಪ್ರಸಾದ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇವೆಲ್ಲದರ ಜೊತೆಗೆ ಇದೊಂದು ಪತ್ರ ವಿನಿಮಯದ ನಾಟಕ. ಹೆಸರೇ ಹೇಳುವಂತೆ ಇಬ್ಬರು ಪ್ರೇಮಿಗಳು ತಮ್ಮ ಜೀವನದುದ್ದಕ್ಕೂ ಬರೆದುಕೊಂಡ ಪತ್ರಗಳು ಈ ನಾಟಕದ ಜೀವಾಳ‌. ಮೊಬೈಲ್ ಮೆಸೇಜುಗಳು, ಸೋಷಿಯಲ್ ಮೀಡಿಯಾಗಳ ಇಂದಿನ ಜಗತ್ತಿನಲ್ಲಿ ಪತ್ರಗಳನ್ನು, ಬರೆಯುವ , ಓದುವ ಅನುಭವ ಖಂಡಿತಾ ಮುದ ನೀಡುವಂತದ್ದು. ಬಾಲ್ಯದಲ್ಲಿ ಪತ್ರಗಳನ್ನು ಬರೆದವರಿಗೆ ಈ ನಾಟಕ ಪತ್ರಗಳ ನೆನಪನ್ನು ತಂದರೆ , ಪತ್ರಗಳನ್ನು ಬರೆಯುವ ಅಭ್ಯಾಸವೇ ಇಲ್ಲದ ಇಂದಿನ ಕಿರಿಯರಿಗೆ ಇದು ಪತ್ರಗಳ ಲೋಕದ ಅಚ್ಚರಿಯನ್ನು ದಾಟಿಸಬಲ್ಲುದೇನೋ !

ಇವೆಲ್ಲ ಕಾರಣಗಳಿಂದ ಈ ನಾಟಕ ಒಂದು ಆಪ್ತವಾದ , ಸುಂದರವಾದ , ಭಾವನಾತ್ಮಕವಾದ ಪ್ರೇಮ ಕಥಾನಕ . ನಾನು ಮೊದಲು ನಿರ್ದೇಶಿಸಿದ ನಾಟಕಗಳಿಗಿಂತ ಭಿನ್ನವಾದ ನಾಟಕವಾದರೂ ಅಷ್ಟೇ ಮುಖ್ಯವಾದ ನಾಟಕ ಇದೆಂದು ನನಗೆ ನಂಬಿಕೆ ಇದೆ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.

Key words: ‘Love Letters-My Beloved One, Drama, Mysore, August 31

The post ಮೈಸೂರಿನಲ್ಲಿ ಆ.31 ರಂದು ‘ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು’ ಪ್ರದರ್ಶನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಆ.31ರಿಂದ ಶಿವಮೊಗ್ಗ ವಿಮಾನ ಹಾರಾಟ ಆರಂಭ-ಸಚಿವ ಎಂ.ಬಿ ಪಾಟೀಲ್.
ಬೆಂಗಳೂರು,ಜುಲೈ,27,2023(www.justkannada.in): ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 31ರಿಂದ ತನ್ನ‌ ಕಾರ್ಯಾಚರಣೆ ಆರಂಭಿಸಲಿದ್ದು ಅಂದು‌ ಮೊದಲ ವಿಮಾನದಲ್ಲಿ ಪ್ರಯಾಣಿಸುವ ಭಾಗ್ಯ ಮಲೆನಾಡಿನ ಜನರಿಗೆ ಸಿಗಲಿದೆ.

ಈ ಮುಂಚೆ ಆಗಸ್ಟ್ 11ರಿಂದ ವಿಮಾನ ಹಾರಾಟ ಆರಂಭವಾಗಬೇಕಿತ್ತು. ತಾಂತ್ರಿಕ ಕಾರಣಗಳಿಂದ  ಆಗಸ್ಟ್ 31ಕ್ಕೆ ಹೋಗಿದ್ದು ಇಂಡಿಗೊ‌ ಏರ್ ಲೈನ್ಸ್ ತನ್ನ ಬುಕ್ಕಿಂಗ್ ಅನ್ನು ಆರಂಭಿಸಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ತಿರುಪತಿಗೂ ಸಂಪರ್ಕ..

ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ ನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ನೀಡಲು ಮೂರು ಏರ್ ಲೈನ್ಸ್ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಸ್ಪೈಸ್ ಜೆಟ್, ಸ್ಟಾರ್ ಏರ್ ಲೈನ್ಸ್ ಮತ್ತು ಅಲಯನ್ಸ್ ಏರ್ ಸಂಸ್ಥೆಗಳು ಈ ರಹದಾರಿಗಳಲ್ಲಿ ವಿಮಾನ ಸಂಚಾರ ಮಾಡುವ ಸಂಬಂಧ ಕರೆದಿದ್ದ ಟೆಂಡರ್ ನಲ್ಲಿ ಭಾಗವಹಿಸಿ ಯಶಸ್ವಿಯಾಗಿವೆ. ಸದ್ಯಕ್ಕೆ ಹಗಲು ವೇಳೆಯ ವಿಮಾನ ಸಂಚಾರ ಮಾತ್ರ ಇರುತ್ತದೆ. ರಾತ್ರಿ ವೇಳೆ ಲ್ಯಾಂಡಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಮುಗಿಯಲಿದೆ ಎಂದು ಅವರು ವಿವರಿಸಿದರು.

ಉಡಾನ್ ಯೋಜನೆಯಡಿ ಅನುಮತಿ ಪಡೆದಿರುವ ವಿಮಾನಯಾನ ಸಂಸ್ಥೆಗಳೂ ವಿಮಾನ ಸಂಚಾರಕ್ಕೆ ಸಿದ್ಧತೆ ನಡೆಸಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ಸಿಕ್ಕ ನಂತರ ಅವೂ ಕಾರ್ಯಾಚರಣೆ ನಡೆಸಲಿವೆ ಎಂದರು.

Key words: Shimoga –flight- started – August 31-Minister -MB Patil.

The post ಆ.31ರಿಂದ ಶಿವಮೊಗ್ಗ ವಿಮಾನ ಹಾರಾಟ ಆರಂಭ-ಸಚಿವ ಎಂ.ಬಿ ಪಾಟೀಲ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.