at-mysore Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಶ್ರೀಕೃಷ್ಣ ಜನ್ಮಾಷ್ಟಮಿ : , ಗೋಪೂಜೆಯಲ್ಲಿ ಪಾಲ್ಗೊಂಡ ಮೇಘಾಲಯದ ರಾಜ್ಯಪಾಲರು.
ಮೈಸೂರು, ಆ.26,2024: (www.justkannada.in news) ಯಾದವಗಿರಿಯ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ  ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮೇಘಾಲಯದ ರಾಜ್ಯಪಾಲ ಶ್ರೀ ವಿಜಯ್ ಶಂಕರ್ ಭಾಗವಹಿಸಿ, ಗೋಪೂಜೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಮಾತನಾಡಿದ ಮೇಘಾಲಯದ ರಾಜ್ಯಪಾಲ ಶ್ರೀ ವಿಜಯ್ ಶಂಕರ್ ಅವರು, ಅನೇಕ ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆಸಲ್ಲಿಸುತ್ತಿರುವ ಶ್ರೀರಾಮಕೃಷ್ಣ ಆಶ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ರಾಷ್ಟ್ರಕವಿ ಕುವೆಂಪು ವಿರಚಿತ ಶ್ರೀರಾಮಕೃಷ್ಣರ ಜೀವನಚರಿತ್ರೆಯನ್ನು ,ವಿವೇಕಾನಂದರ ಜೀವನಚರಿತ್ರೆಯನ್ನು ಓದಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು‌.ಈ ಎರಡು ಕೃತಿಗಳನ್ನು ಓದಿದರೆ ದೇಶದ ಬಗ್ಗೆ ,ನಮ್ಮ ಪರಂಪರೆಯ ಮಹತ್ವದ ದರ್ಶನವಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು‌ ಹಾಗೂ ಶ್ರೀರಾಮಕೃಷ್ಣ ಆಶ್ರಮದ ಟ್ರಸ್ಟಿಗಳಾಗಿರುವ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ , ಶ್ರೀರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥರಾದ ( ಕರೆಸ್ಪಾಂಡೆಂಟ್) ಸ್ವಾಮಿ ಯುಕ್ತೇಶಾನಂದಜೀ, ಶ್ರೀರಾಮಕೃಷ್ಣ ವಿದ್ಯಾಶಾಲೆಯ ಪ್ರಾಂಶುಪಾಲರಾದ ಟಿ.ಕೆ.ಚಂದ್ರಶೇಖರ್ ಹಾಗೂ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಬೋಧಕ ,ಬೋಧಕೇತರ ವರ್ಗದವರು ಭಾಗವಹಿಸಿದ್ದರು.

key words: Sri Krishna Janmashtami, Governor of Meghalaya, Vijayshankar, participates in, cow puja, at Mysore, Ramakrishna matt

The post ಶ್ರೀಕೃಷ್ಣ ಜನ್ಮಾಷ್ಟಮಿ : , ಗೋಪೂಜೆಯಲ್ಲಿ ಪಾಲ್ಗೊಂಡ ಮೇಘಾಲಯದ ರಾಜ್ಯಪಾಲರು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಉರಗ ಸಂತತಿಯ ಉಳಿವು ಮುಖ್ಯ :ಉರಗ ತಜ್ಞ ಸ್ನೇಕ್ ಶಾಮ್
ಮೈಸೂರು, ಜು,16,2024: (www.justkannada.in news) ವಿಶ್ವ ಹಾವು ಗಳ ದಿನಾಚರಣೆ ಅಂಗವಾಗಿ   85000 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿದ ಉರುಗ ತಜ್ಞ ಸ್ನೇಕ್ ಶಾಮ್ ರವರನ್ನು ಗೌರವಿಸಲಾಯಿತು.

ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ದ ವತಿಯಿಂದ  ಉರುಗ ತಜ್ಞ ಸ್ನೇಕ್ ಶಾಮ್ ರವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು

ಸನ್ಮಾನ ಸ್ವೀಕರಿಸಿ ಮಾತನಾಡಿದ ಉರಗತಜ್ಞ ಸ್ನೇಕ್ ಶ್ಯಾಮ್ ಹೇಳಿದಿಷ್ಟು..

ಉರಗ ಸಂತತಿಯ ಉಳಿವು ಮುಖ್ಯ , ಪರಿಸರ ಸಮತೋಲನಕ್ಕೆ ಉರಗ ಸಂತತಿಯ ಉಳಿವೂ ಮುಖ್ಯ ,ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಉಪಯುಕ್ತ ಸ್ಥಳದಲ್ಲಿಯೇ ಗಿಡಗಳನ್ನು ನೆಟ್ಟು ಬೆಳೆಸಬೇಕು. ಆ ಮೂಲಕ ಪರಿಸರವನ್ನು ಶುದ್ಧವಾಗಿಸುವ ಅಲ್ಪ ಸೇವೆಯನ್ನು ಮಾಡಿದಂತಾಗುತ್ತದೆ ಎಂದರು.

ಪರಿಸರದಲ್ಲಿರುವ ಪ್ರತಿಯೊಂದು ಜೀವಿಯೂ ಒಂದನ್ನೊಂದು ಅವಲಂಬಿಸಿಯೇ ಬದುಕುವ ಕಾರಣ ಪ್ರತಿಯೊಂದಕ್ಕೂ ಪ್ರಾಮುಖ್ಯತೆಯಿದೆ. ಎಲ್ಲವನ್ನೂ ಗೌರವಿಸಿ ಎಂದು ಹೇಳಿದ ಅವರು, ಉರಗಗಳ ಬಗೆಗೆ ವಿಶೇಷ ಮಾಹಿತಿಯನ್ನು ನೀಡಿದರು. ಉರಗ ಪ್ರಭೇದಗಳು, ಅವುಗಳ ಸಂತತಿ, ಹಾವಿನ ಕಡಿತದ ಬಳಿಕ ನಡೆಸುವ ಪ್ರಥಮ ಚಿಕಿತ್ಸೆಗಳ ಕುರಿತು  ಮಾಹಿತಿ ನೀಡಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜಿ ರಾಘವೇಂದ್ರ, ಪ್ರಕಾಶ್ ಪ್ರಿಯದರ್ಶನ್, ಪರಮೇಶ್ ಗೌಡ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್, ಅಪೂರ್ವ ಸುರೇಶ್, ಬೈರತಿ ಲಿಂಗರಾಜು, ಸುಚಿಂದ್ರ, ಚಕ್ರಪಾಣಿ, ಎಸ್ ಎನ್ ರಾಜೇಶ್, ಸದಾಶಿವ್, ಸಚಿನ್ ನಾಯಕ್, ಸಫಿ, ರಾಕೇಶ್, ಹಾಗೂ ಇನ್ನಿತರರು ಹಾಜರಿದ್ದರು

key words: world snake day, at Mysore, snake sham

The post ಉರಗ ಸಂತತಿಯ ಉಳಿವು ಮುಖ್ಯ :ಉರಗ ತಜ್ಞ ಸ್ನೇಕ್ ಶಾಮ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜು.21ಕ್ಕೆ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ
ಮೈಸೂರು, ಜು.16,2024: (www.justkannada.in news) ಸಮತಾ ಅಧ್ಯಯನ ಕೇಂದ್ರದ ವತಿಯಿಂದ  ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 21 ರಂದು ಆಯೋಜಿಸಲಾಗಿದೆ.

ಭಾನುವಾರ ಬೆಳಗ್ಗೆ 10.30ಕ್ಕೆ ಸರಸ್ವತಿ ಪುರಂನ ಕಾಮಾಕ್ಷಿ ಆಸ್ಪತ್ರೆ ‌ಸಮೀಪದ ರೋಟರಿ‌ ಪಶ್ಚಿಮ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ. ಎಂ.ಉಷಾ ಅವರಿಗೆ 2024ನೇ ಸಾಲಿನ ಪ್ರಶಸ್ತಿಯನ್ನು ಪುಣೆಯ ಸಿಂಬಯಾಸಿಸ್ ಕಾನೂನು ಕಾಲೇಜು ಡೀನ್  ಡಾ.ಶಶಿಕಲಾ ಗುರುಪುರ ಅವರು ಪ್ರದಾನ ಮಾಡುವರು.

ಶಿವಮೊಗ್ಗದ ‘ಅಹರ್ನಿಶಿ’ ಪ್ರಕಾಶನ  ಪ್ರಕಟಿಸಿರುವ ಉಷಾ ಅವರ  ‘ಬಾಳ‌ ಬಟ್ಟೆ’ ಕಾದಂಬರಿಯನ್ನು 25 ಸಾವಿರ ರೂ. ನಗದು ಬಹುಮಾನ, ಫಲಕವನ್ನು ಒಳಗೊಂಡ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಜಯಾದಬ್ಬೆ ಅವರ ಒಡನಾಡಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಡಾ.ಟಿ. ಸುಬ್ರಹ್ಮಣ್ಯಂ ಅವರು ತಮ್ಮ ಮತ್ತು‌ ವಿಜಯಾ ಅವರ ಒಡನಾಟದ ಕುರಿತು ಮಾತನಾಡುವರು. ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಅವರು ಅಧ್ಯಕ್ಷತೆ ವಹಿಸುತ್ತಾರೆ.

ವಿಜಯಾ ದಬ್ಬೆ ಅವರ ಸ್ಮರಣಾರ್ಥ ಆಯೋಜಿಸಿದ್ದ  ರಾಜ್ಯ‌ ಮಟ್ಟದ ಕಾವ್ಯ ಮತ್ತು ಲಲಿತ ಪ್ರಬಂಧ‌ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.

20ಕ್ಕೆ ಸಾಹಿತ್ಯ ಕಮ್ಮಟ:

ಕಾವ್ಯ ಮತ್ತು ಲಲಿತ ಪ್ರಬಂಧ‌ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರು ಮತ್ತು ಆಸಕ್ತರಿಗಾಗಿ ಜುಲೈ 20ರ ಶನಿವಾರ ಗಂಗೋತ್ರಿ ಬಡಾವಣೆಯ ಯೂತ್ ಹಾಸ್ಟೆಲ್ ನಲ್ಲಿ ಕಾವ್ಯ ಮತ್ತು ಪ್ರಬಂಧ ಕಮ್ಮಟವನ್ನು ಆಯೋಜಿಸಲಾಗಿದೆ.

ಅಂದು‌ ಬೆಳಗ್ಗೆ 10 ಕ್ಕೆ ಆರಂಭವಾಗುವ ಮೊದಲ ಗೋಷ್ಠಿಯಲ್ಲಿ ಕವಯತ್ರಿಯರಾದ ಎಚ್.ಆರ್.ಸುಜಾತ ಮತ್ತು ಮೌಲ್ಯ ಸ್ವಾಮಿ ಕಾವ್ಯಾನುಸಂಧಾನ ನಡೆಸುವರು. ನಂತರ ನಡೆಯುವ ಪ್ರಬಂಧ ಕಮ್ಮಟದಲ್ಲಿ ಲೇಖಕ ಡಾ.ರಾಜಪ್ಪ ದಳವಾಯಿ ಅವರು ಸಂಪನ್ಮೂಲ ವ್ಯಕ್ತಿಯಾಗಿರುವರು.

ಮಧ್ಯಾಹ್ನ 2 ಕ್ಕೆ ಆರಂಭವಾಗುವ 3 ನೇ ಗೋಷ್ಠಿಯಲ್ಲಿ   ಡಾ. ಶಶಿಕಲಾ ಗುರುಪುರ ಅವರು ‘ಸಂವೇದನಾಶೀಲ ಬರಹ-ಕೆಲವು ಆಯಾಮಗಳು’ ವಿಷಯವಾಗಿ ಶಿಬಿರಾರ್ಥಿಗಳೊಂದಿಗೆ ಸಂವಾದಿಸುವರು.

key words: Vijaya Dabbe, Literary Award, to be presented, on July 21, at Mysore

The post ಜು.21ಕ್ಕೆ ವಿಜಯಾ ದಬ್ಬೆ  ಸಾಹಿತ್ಯ ಪ್ರಶಸ್ತಿ ಪ್ರದಾನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಜೀವ್ ಕಂಡಂತೆ ʼ ತಾರಾನಾಥ್ ʼ: ನಮ್ಮಂಥವರ ಬುದ್ಧಿಗೆ, ಪ್ರಜ್ಞೆಗೆ ಎಟಕಿದಷ್ಟು !
ಮೈಸೂರು, ಜೂ.12,2024: (www.justkannada.in news) ಕನ್ನಡಿಗರ ಹೆಮ್ಮೆ, ಸಂಗೀತ ಲೋಕದ ದಿಗ್ಗಜ ಪಂಡಿಂತ್‌ ರಾಜೀವ್‌ ತಾರಾನಾಥರು ನಮ್ಮನ್ನು ಅಗಲಿದ್ದಾರೆ. ಕೆಲ ಕಾಲದಿಂದ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ  ಬಳಲುತ್ತಿದ್ದ ಅವರು ಮಂಗಳವಾರ ಸಂಜೆ ಇಹ ಲೋಕ ತ್ಯಜಿಸಿದರು.

ಸಂಗೀತ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮನ್ನಣೆಗಳಿಸಿದ್ದರು ಅವರೆಂದು ಅದರಿಂದ ಕೋಡು ಮೂಡಿಸಿ ಕೊಂಡವರಲ್ಲ. ಸಹಜವಾಗಿಯೇ ಎಲ್ಲರೊಂದಿಗೂ ಬೆರೆಯುತ್ತಿದ್ದ ಸರಳ ವ್ಯಕ್ತಿತ್ವದವರು. ಈ ಬಗ್ಗೆ ಮೈಸೂರಿನ ಹಿರಿಯ ಪತ್ರಕರ್ತರು, ಸದ್ಯ ಬೆಂಗಳೂರು ವಿಜಯ ಕರ್ನಾಟಕದಲ್ಲಿ ಸುದ್ಧಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚೀ.ಜ.ರಾಜೀವ್‌  ತಮ್ಮ ಫೇಸ್‌ ಬುಕ್‌ ನಲ್ಲಿ ಹೀಗೆ ಬರೆಯುತ್ತಾರೆ..

ಇದು ಜಂಬದ ಮಾತಲ್ಲ. ಪತ್ರಕರ್ತನಾಗಿ ಬಹಳಷ್ಟು ಸಂಖ್ಯೆಯ ಶ್ರೀಸಾಮಾನ್ಯರನ್ನೂ, ಒಂದಿಷ್ಟು ಸಂಖ್ಯೆಯ ಗಣ್ಯಮಹನೀಯರನ್ನು

ಸಂದರ್ಶಿಸಿರುವೆ. ಆದರೆ, ಅದೇಕೋ ಗೊತ್ತಿಲ್ಲ, ಯಾವ ಗಣ್ಯರ ಜತೆಗೂ ಫೋಟೋ ತೆಗೆಸಿಕೊಳ್ಳಬೇಕು ಅನಿಸುತ್ತಿರಲಿಲ್ಲ. ಆತ್ಮ ಪ್ರತ್ಯಯವೇ ? ವ್ಯಕ್ತಿ ತನ್ನ ಕುರಿತು ತಾನು ಹೊಂದಿರುವ  ಕೀಳರಿಮೆಯೇ ? ಗೊತ್ತಿಲ್ಲ. ಆದರೆ, ರಾಜೀವ್ ತಾರಾನಾಥ್ ಅವರನ್ನು ಮಾತನಾಡಿಸುವಾಗೆಲ್ಲಾ, ಈ ಜಿಜ್ಞಾಸೆಯಿಂದ ಹೊರಬರುತ್ತಿದ್ದೆ. ಹಾಗೆ ನೋಡಿದರೆ, ಅಭಿಜಾತ ಸಂಗೀತ ಎಂದರೆ ಏನೆಂದು ಅರ್ಥವಾಗದೇ ಇರುವ  ಪಾಮರರ ಲೋಕದವ ನಾನು. ಹಾಗಾಗಿ ‘ಸರೋದ್ ವಾದಕ’ ಪಂಡಿತ್ ರಾಜೀವ್ ತಾರಾನಾಥ್ ಅರ್ಥವಾಗುವುದು ದೂರದ ಮಾತು. ಈ ವಿಷಯದಲ್ಲಿ ಅವರು ಕೈಗೆ ಎಟಕುತ್ತಿರಲಿಲ್ಲ. ಆದರೆ, ಸಂಗೀತಗಾರ ಎಂಬ ಕಿರೀಟವಿಲ್ಲದ ಬುದ್ಧಿಜೀವಿ ತಾರಾನಾಥ್ ಅವರನ್ನು ಸ್ವಲ್ಪ ಬಲ್ಲೆ. ಮೈಸೂರಿನಲ್ಲಿದ್ದಾಗ ಮೂರು ಬಾರಿ ಅವರನ್ನು ವಿಜಯ ಕರ್ನಾಟಕ ಪತ್ರಿಕೆಗಾಗಿ ಮಾತನಾಡಿಸಿರುವರೆ. ಒಂದು ಸಂದರ್ಶನ ಮಾಡಿರುವೆ.

(ಇದಕ್ಕಾಗಿ ವಿಕದ ಸಂಪಾದಕರಾಗಿದ್ದ ಈ ರಾಘವನ್, ಸುಗತ ಶ್ರೀನಿವಾಸರಾಜು, ಮೈಸೂರು ಸ್ಥಾನಿಕ ಸಂಪಾದಕರಾಗಿದ್ದ ಅರವಿಂದ ನಾವಡ, ಪಿ.ಓಂಕಾರ್ ಅವರನ್ನು ನೆನಪಿಸಿಕೊಳ್ಳುವೆ)

ಇದೇ ನೆಪದಲ್ಲಿ ಅವರ ಮನೆಯಲ್ಲಿ ಕಾಫಿ ಟೀ ಆತಿಥ್ಯ ಸ್ವೀಕರಿಸಿರುವೆ. ಮುಸ್ಸಂಜೆಯ ಆತಿಥ್ಯವನ್ನು ನಿರಾಕರಿಸಿ, ಸಿಹಿ ಬೈಗುಳವನ್ನು ಎದೆಗಿಳಿಸಿಕೊಂಡಿರುವೆ. ಜತೆಗೆ,ಸಭೆ ಸಮಾರಂಭದ  ಭಾಷಣಗಳನ್ನು ಆಲಿಸಿ ವರದಿ ಮಾಡಿರುವೆ.

ಈ ಎಲ್ಲ ಸಂದರ್ಭದಲ್ಲೂ ಅವರು, ತಮ್ಮ   ಪ್ರಾಮಾಣಿಕ ದಿಟ್ಟ ನುಡಿ ಹಾಗೂ ನೈತಿಕತೆಯ ನೇರ ನಡೆಗೆ ಇಷ್ಟವಾಗುತ್ತಲೇ ಇದ್ದರು. ಅವರ ಮಾತಿನ ಲಯ, ಗಟ್ಟಿ ದನಿ, ನೋಟ, ಅಜಾನುಬಾಹು ಆಕೃತಿ- ಈಗಲೂ ಗೌರವ ಮೂಡಿಸುವ ಸಿಗ್ನೇಚರ್ಗಳಂತಿವೆ.

ತನ್ನನ್ನು ಮಾತನಾಡಿಸಲು ಬಂದಿರುವ ವ್ಯಕ್ತಿಯನ್ನು, ಆತನ ಸಾಮರ್ಥ್ಯವನ್ನು ಅಂದಾಜಿಸಿ, ಆ ವಿಷಯದಲ್ಲಿ ಆತನ ಮನೋಸ್ಥೈರ್ಯವನ್ನು ಎಳ್ಳಷ್ಟು ಕುಗ್ಗಿಸದೇ ತಾರಾನಾಥ್ ಮಾತನಾಡುತ್ತಿದ್ದರು. ಈ ಇಡೀ ಮಾತಿನ ಪ್ರಕ್ರಿಯೆಯಲ್ಲಿ ಅವರು ಸಂದರ್ಶಕನ ಪಾಲಿಗೆ ದೊಡ್ಡವರೇ ಆಗಿ ಉಳಿದರೂ, ಸಂದರ್ಶಕನ ಘನತೆಗೆ, ಆತ್ಮವಿಶ್ವಾಸಕ್ಕೆ ಸ್ವಲ್ಪವು ಧಕ್ಕೆಯಾಗುತ್ತಿರಲಿಲ್ಲ !

2014ರ ಆಷಾಢದ ಸೋನೆ ಮಳೆಯ ದಿನಗಳವು. ಮೊಬೈಲ್ ರಿಂಗಣಿಸಿತು. ನೋಡಿದರೆ, ರಾಜೀವ್ ತಾರಾನಾಥ್ ಹೆಸರು !

ಫೋನ್ ಎತ್ತಿದ ತಕ್ಷಣ,”ಹೇಯ್ ರಾಜೀವ. ಮೈಸೂರಿಗೊಬ್ಬ ಮಹಾಮಹಿಮ ಕಲಾವಿದರು ಬರುತ್ತಿದ್ದಾರೆ. ನೀನು ಪ್ರಚಾರ ನೀಡಬೇಕು ಕಣಯ್ಯ,” ಎಂದರು.

“ಯಾರು ಸಾರ್, ?” ಎಂದೇ. “ಅವರು ದೇಶದ ಅಪ್ರತಿಮ ಹಿಂದೂಸ್ತಾನಿ ಸಂಗೀತ ಕಲಾವಿದ ಉಸ್ತಾದ್ ಅಬ್ದುಲ್ ರಶೀದ್ ಖಾನ್ ಅಂತ. ಶತಾಯುಷಿಗಳು… ಈ ಘನ ಕಲಾವಿದನ ಇತಿಹಾಸ  ಗೊತ್ತೆ ? 15ನೇ ಶತಮಾನದ ಮೊಘಲ್ ಸಾಮ್ರಾಜ್ಯದಲ್ಲಿ ಬಾಳಿ ಬದುಕಿದ ಮಿಯಾ ತಾನ್‌ಸೇನ್ ಸಂಗೀತ ಕುಟುಂಬಕ್ಕೆ ಸೇರಿದ ಹಿರಿಯ ಜೀವ. ನೀವೆಲ್ಲಾ ನೋಡಬೇಕು. ಸಂಗೀತ ಕೇಳಬೇಕು,” ಎಂದರು !

“ನಾನೊಬ್ಬ ಯಾಕೆ ಸಾರ್ ? ಪತ್ರಕರ್ತರ ಸಂಘದಲ್ಲಿ ಒಂದು ಸಂವಾದವನ್ನೇ ಮಾಡಿಸೋಣ. ಎಲ್ರೂ ಸೇರಿ ಪ್ರಚಾರ ನೀಡುತ್ತೇವೆ. ನಮ್ಮ ಅಧ್ಯಕ್ಷರಾದ ಸಿ. ಕೆ. ಮಹೇಂದ್ರ ಜತೆ ಬರುವೆ,” ಎಂದೆ. “ವೆರಿ ಗುಡ್, ಪತ್ರಕರ್ತರು ಒಳ್ಳೆಯ ಸುದ್ದಿ ಸಮಾಚಾರವನ್ನು ಎಲ್ಲರಿಗೂ ಹಂಚಬೇಕು, ಅದು ಒಬ್ಬನ ಸ್ವತ್ತಲ್ಲ…,” ಎಂದು ಮಾತಿನಲ್ಲಿಯೇ ಬೆನ್ನಿಗೆ ಗುದ್ದಿದ್ದರು !

ಆ ಸಂವಾದ ಮೈಸೂರಿನ ಪತ್ರಿಕಾ ಭವನದಲ್ಲಿ ಚೆಂದವಾಗಿ ನಡೆದಿತ್ತು. ಹಿರಿಯರಾದ

ಎಂ. ಬಿ. ಮರಂಕಲ್, ಎಂ. ಎಸ್. ಕಾಶೀನಾಥ್, ಗೆಳೆಯರಾದ ಸಿ. ಕೆ. ಮಹೇಂದ್ರ, ಗಿರೀಶ್ ದೊಡ್ಡಮನಿ, ದಕೋಹಳ್ಳಿ ಚಂದ್ರಶೇಖರ್, ಕೆ ದೀಪಕ್ ಸೇರಿದಂತೆ ನಾವೊಂದಿಷ್ಟು ಜನ  ‘ಬಾಲಭಾಷೆ’ಯಲ್ಲಿ 106ರ ಹಿರಿಯ ಜೀವ   ರಶೀದ್ ತಾತನನ್ನು ಪ್ರಶ್ನಿಸಿದ್ದೆವು. ಮೊಮ್ಮಕ್ಕಳಿಗೆ ಕಥೆ ಹೇಳುವ ರೀತಿಯಲ್ಲಿಯೇ ಅವರು ನಮ್ಮ ಪ್ರಶ್ನೆಗಳಿಗೂ ಉತ್ತರಿಸಿದ್ದರು. ಕಡೆಯಲ್ಲಿ ರಾಜೀವ್ ತಾರಾನಾಥ್, “ನೋಡಯ್ಯ, ವಯಸ್ಸು ನೂರು ದಾಟಿದರೂ ವಯೋಸಹಜವಾಗಿ ಮಾತಿನಲ್ಲಿ ಮೂಡುವ ಅಸ್ಪಷ್ಟತೆ, ತೊದಲುವಿಕೆ ಹಾಗೂ ಕಂಪನಕ್ಕೆ  ರಶೀದ್ ಅವರ ಮಾತಿನಲ್ಲಿ  ಇರಲಿಲ್ಲ. ಬದಲಿಗೆ  ಸ್ಫುಟತೆ, ಖಚಿತತೆ, ನಿರರ್ಗಳತೆ ಮತ್ತು ಮಧುರತೆಯೂ ತುಂಬಿತ್ತು. ಇದೇ ಸಂಗೀತದ ಹೆಚ್ಚುಗಾರಿಕೆ ಕಣ್ಣಯ್ಯ,” ಎಂದಿದ್ದರು.

92 ವರ್ಷ ಬಾಳಿ ಬದುಕಿದ ರಾಜೀವ್ ತಾರಾನಾಥ್ ಅವರ ಮಾತು, ಗತ್ತು, ಗೈರತ್ತು ಎಲ್ಲವನ್ನೂ ನೋಡಿದಾಗ, ಅವರ ಇನ್ನೂ 25 ವರ್ಷ ಬದುಕಿದ್ದರೂ ಹೀಗೆ ಇರುತ್ತಿದ್ದರೇನೋ ಅನಿಸುತ್ತೆ.

ಫೋಟೋ: ನಾಗೇಶ್ ಪಾಣತ್ತಲೆ

ಪತ್ರಿಕೆಗಾಗಿ ನಡೆಸಿದ ಸಂದರ್ಶನದಲ್ಲಿ, ಮೊದ ಮೊದಲು ಅವರು ನಮ್ಮಂಥವರ ಮಟ್ಟಕ್ಕೆ ಇಳಿದು, ಬಳಿಕ ನಮ್ಮನ್ನು  ಅವರ ಎತ್ತರಕ್ಕೆ ಕೊಂಡೊಯ್ಯುತ್ತಿದ್ದರು. ಸಂದರ್ಶನದಾಚೆಗೆ ಅವರು ದೊಡ್ಡವರ ಸಣ್ಣಾಟಗಳನ್ನೆಲ್ಲಾ ಹಂಚಿಕೊಂಡು, ಮನುಷ್ಯ ತನ್ನ ವೃತ್ತಿಯಲ್ಲಿ ಪ್ರಮಾಣೀಕೃತವಾದ ಶ್ರೇಷ್ಠತೆಯನ್ನು ಸಾಧಿಸಿದರೆ ಸಾಲದು, ನಡೆ-ನುಡಿಯಲ್ಲಿಯೂ ದೊಡ್ಡ ಮನುಷ್ಯನಾಗಿರಬೇಕು ಎನ್ನುತ್ತಿದ್ದರು. ಅದೇ ರಾಜೀವ್ ತಾರಾನಾಥ್ ನೈತಿಕತೆ !

ಸರೋದ್ ವಾದಕರಲ್ಲದ ರಾಜೀವ್ ತಾರಾನಾಥ್ ಎಂಬ ಘನ ವ್ಯಕ್ತಿತ್ವ ಸರೋದ್ ವಾದನದ ಇಂಪು-ಕಂಪು ಗೊತ್ತಿಲ್ಲದವರ ನಡುವೆಯೂ ನೆನಪಾಗಿ ಉಳಿದಿರುತ್ತಾರೆ. ಹೋಗಿ ಬನ್ನಿ ಸಾರ್….

key words: Sarod Maestro, Pt. Rajeev Taranath, Passes Away, at Mysore

The post ರಾಜೀವ್  ಕಂಡಂತೆ ʼ ತಾರಾನಾಥ್ ʼ: ನಮ್ಮಂಥವರ ಬುದ್ಧಿಗೆ, ಪ್ರಜ್ಞೆಗೆ ಎಟಕಿದಷ್ಟು ! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

25 ರಂದು ಕಾನೂನು ವಿವಿ ಕುಲಪತಿ ಪ್ರೊ.ಸಿ. ಬಸವರಾಜುಗೆ ಅಭಿನಂದನೆ
ಮೈಸೂರು, ಮೇ.23, 2024: (www.justkannada.in news )ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸಿ. ಬಸವರಾಜು ಅವರ ಅಭಿನಂದನಾ ಸಮಾರಂಭ ಮಾನಸ ಗಂಗೋತ್ರಿಯ ಸೆನೆಟ್‌ ಭವನದಲ್ಲಿ ಮೇ 25ರ ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಭಿನಂದಿಸುವರು.

ಮುಖ್ಯಅತಿಥಿಗಳಾಗಿ ಸಾಹಿತಿ ಪ್ರೊ. ಪ್ರಧಾನ ಗುರುದತ್ತ,  ಸಮಾಜ ಸೇವಕ ಮ. ವೆಂಕಟರಾಮ್, ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್. ರಂಗಪ್ಪ, ಪ್ರೊ.ಕೆ.ಆರ್. ವೇಣುಗೋಪಾಲ್, ಪ್ರೊ.ವಿ. ವಿಜಯಕುಮಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್  ಭಾಗವಹಿಸುವರು. ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಅಧ್ಯಕ್ಷತೆ ವಹಿಸುವರು ಎಂದು ಅಭಿನಂದನಾ ಸಮಿತಿಯ  ಅಧ್ಯಕ್ಷ ಪ್ರೊ.ಎಂ.ಎಸ್. ಬೆಂಜಮಿನ್, ಗೌರವಾಧ್ಯಕ್ಷ ಡಾ.ಕೆ.ಬಿ. ಕೆಂಪೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರೊ.ಎನ್. ಸತೀಶ್ಗೌಡ ತಿಳಿಸಿದ್ದಾರೆ.

ಪ್ರೊ.ಸಿ. ಬಸವರಾಜು ಅವರು ಕಾನೂನು ವಿವಿ ಕುಲಪತಿಯಾಗಿ ಮುಂದುವರೆದಿದ್ದು, ಮೈವಿವಿ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿ ಆಗುತ್ತಿರುವುದರಿಂದ ಈ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರೊ.ಬಸವರಾಜು ಪರಿಚಯ

ಮೈಸೂರಿನ ಅಶೋಕಪುರಂನ ಬಡಕುಟುಂಬಕ್ಕೆ ಸೇರಿದ ಸಿ. ಚಿಕ್ಕಬಸವಯ್ಯ ಹಾಗೂ ಡಿ. ಜಯಮ್ಮ ಅವರ ಪುತ್ರರಾಗಿ 1962 ರ ಮೇ 15 ರಂದು ಜನಿಸಿದ ಪ್ರೊ.ಬಸವರಾಜು ಅವರು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ, ಮೈಸೂರು ವಿವಿಯಿಂದ ಚಿನ್ನದ ಪದಕದೊಂದಿಗೆ ಬಿ.ಎ ಪಡೆದರು. ನಂತರ ಆಂಗ್ಲ ಸಾಹಿತ್ಯದಲ್ಲಿ ಎಂ.ಎ, ಎಲ್ಎಲ್ಬಿ, ಎಲ್ಎಲ್ಎಂ [ಸಂವಿಧಾನ ಕಾನೂನು] ಹಾಗೂ ಪಿಎಚ್.ಡಿ [ಸಾಮಾಜಿಕ ನ್ಯಾಯ] ಪಡೆದರು.

ಬೆಂಗಳೂರು ರಾಷ್ಟ್ರೀಯ  ಕಾನೂನು ಶಾಲೆಯಲ್ಲಿ ಕಾನೂನು ಬೋಧನಾ ವೃತ್ತಿ ಆರಂಭಿಸಿ, ನಂತರ ಕರ್ನಾಟಕ ವಿವಿಯಲ್ಲಿ ಸೇವೆ ಸಲ್ಲಿಸಿದರು. ನಂತರ ಮೈಸೂರು ವಿವಿ ಕಾನೂನು ವಿಭಾಗದ ಉಪನ್ಯಾಸಕ ಪ್ರವಾಚಕ, ಪ್ರಾಧ್ಯಾಪಕರಾದರು. ಕಾನೂನು ವಿಭಾಗದ ಮಖ್ಯಸ್ಥ, ಡೀನ್, ಶಿಕ್ಷಣ ಮಂಡಳಿ ಹಾಗೂ ಸಿಂಡಿಕೇಟ್ಸದಸ್ಯರಾದರು. ವಿವಿಯ ಹಲವಾರು ಶಾಸನಬದ್ಧ ಸಮಿತಿಗಳಲ್ಲಿ ಅಧ್ಯಕ್ಷರು ಹಾಗೂ ಸದಸ್ಯರಾಗಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಡಾ.ಗಂಗೂಬಾಯಿ ಹಾನಗಲ್ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಪರೀಕ್ಷಾಂಗ ಕುಲಸಚಿವರಾಗಿದ್ದರು.

ಮೈಸೂರು ವಿವಿ ಶತಮಾನೋತ್ಸವ ಆಚರಿಸಿಕೊಂಡ ಸಂದರ್ಭದಲ್ಲಿ ಪ್ರೊ.ಬಸವರಾಜು ಕುಲಸಚಿವರಾಗಿದ್ದರು.  ನಂತರ ಪ್ರಭಾರ ಕುಲಪತಿಯೂ ಆಗಿದ್ದರು. ಪ್ರಸ್ತುತ ಕರ್ನಾಟಕ ಕಾನೂನು ವಿವಿಯ ಕುಲಪತಿಗಳಾಗಿದ್ದಾರೆ.

ಸುಮಾರು 125ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಕಾನೂನು ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಪೋಲೆಂಡ್, ಚೀನಾ, ದುಬೈ, ಭೂತಾನ್, ಕೆನಡಾ ಸೇರಿದಂತೆ ಬೇರೆ ಬೇರೆ ಕಡೆ175ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹಲವಾರು ವಿಚಾರ ಸಂಕಿರಣ, ಕಾರ್ಯಾಗಾರಗಳಲ್ಲಿ ಮಂಡಿಸಿದ್ದಾರೆ.

ಇವರ ಮಾರ್ಗದರ್ಶನದಲ್ಲಿ 19 ಮಂದಿ ಪಿಎಚ್.ಡಿ ಪಡೆದಿದ್ದಾರೆ. ಅವರು ವಿವಿಧ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರು, ನ್ಯಾಯಾಧೀಶರು, ವಕೀಲರು ಹಾಗೂ ಸರ್ಕಾರಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಭಾರತ ಸಂವಿಧಾನ, ಬಯೋಟೆಕ್ನಾಲಜಿ ಮತ್ತು ಪೇಟೆಂಟ್ಕಾನೂನು, ಇಂಟಲೆಕ್ಶುವಲ್ಪ್ರಾಪರ್ಟಿ ರೈಟ್ಸ್ ಲಾ, ಭಾರತೀ.ಯ ಕಾನೂನು ಮತ್ತು ತೆರಿಗೆ ಕಾನೂನು ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.

ಇವರಿಗೆ ಡಾ.ದೇ.ಜವರೇಗೌಡ ಚಿನ್ನದ ಪದಕ, ಬೆಸ್ಟ್ಸಿಟಿಜನ್ಆಫ್ಇಂಡಿಯಾ ಪ್ರಶಸ್ತಿ, ಯಶಸ್ಸಿ ಸಾಧಕ ಪ್ರಶಸ್ತಿ, ರಾಜೀವ್ಗಾಂಧಿ ಎಕ್ಸಲೆನ್ಸ್ಪ್ರಶಸ್ತಿ, ನ್ಯಾಷನಲ್ಆರ್ಟಿಐ ಜಾಗೃತಿ ಪ್ರಶಸ್ತಿ ಮೊದಲಾದವು ದೊರೆತಿವೆ.

ಕಾನೂನು ಶಾಲೆ ಆರಂಭ

ಸಮಾಜದ ಎಲ್ಲಾ ವರ್ಗದವರಿಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕಾನೂನು ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 2006 ರಲ್ಲಿ ಕಾನೂನು ಶಾಲೆ ಆರಂಭಿಸಿ, ಪ್ರತ್ಯೇಕ ಕಟ್ಟಡ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾನೂನು ಶಾಲೆಯ ಸಂಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ 600 ವಿದ್ಯಾರ್ಥಿಗಳಿದ್ದು, 30 ಮಂದಿ ಅತಿಥಿ ಬೋಧಕರಿದ್ದಾರೆ.

ಕರ್ನಾಟಕ ಕಾನೂನು ವಿವಿ ಕುಲಪತಿ ಜೊತೆಗೆ ರಾಜ್ಯ ಕಾನೂನು ಆಯೋಗದ ಪದನಿಮಿತ್ತ ಸದಸ್ಯರು, ಆಂಧ್ರಪ್ರದೇಶ ಕೇಂದ್ರೀಯ ವಿವಿಯ ಆಡಳಿತ ಮಂಡಳಿ ಸದಸ್ಯರು, ನ್ಯಾಕ್ಪೀರ್ಟೀಂ ಅಧ್ಯಕ್ಷ ಹಾಗೂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಎಲ್. ಹಂಸವೇಣಿ ಮೈಸೂರು ವಿವಿ ಕಂಪ್ಯೂಟರ್ಸೈನ್ಸ್ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಶಶಾಂಕ್ಬಿ. ರಾಜ್ಪುತ್ರ ಹಾಗೂ ಪ್ರಿಯಾಂಕ ಬಿ. ರಾಜ್ಪುತ್ರಿ ಇದ್ದಾರೆ.

key words:  On 25th, felicitation to, Law University, Vice Chancellor Prof. C. Basavaraj, at Mysore.

summary:

Law University Vice Chancellor Prof. C. Basavaraju’s felicitation ceremony will be held at Manasa Gangotri’s Senate Hall on May 25 at 10.30 am. this farewell ceremony has been arranged as Basavaraju continues to be the vice chancellor of the Law University and is retiring from the profession of a professor at the UOM

The post 25 ರಂದು ಕಾನೂನು ವಿವಿ ಕುಲಪತಿ ಪ್ರೊ.ಸಿ. ಬಸವರಾಜುಗೆ ಅಭಿನಂದನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಬಳಿಕ ತಾಯಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ವಿದ್ಯಾರ್ಥಿನಿ.
ಮೈಸೂರು, ಜು.03, 2020 : (www.justkannada.in news) : ತಾಯಿ ಸಾವಿನ ನೋವಿನಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾದ ವಿದ್ಯಾರ್ಥಿನಿ, ಬಳಿಕ ಪರೀಕ್ಷೆ ಮುಗಿಸಿಕೊಂಡು ತಾಯಿ ಅಂತಿಮ ಸಂಸ್ಕಾರದಲ್ಲಿ ಭಾಗಿ.

ಮೈಸೂರಿನ ರೂಪಾನಗರದ ಎಸ್.ಎಸ್.ಎಲ್.ಸಿ.ಪರೀಕ್ಷಾ ಕೇಂದ್ರದಲ್ಲಿ ಹಿಂದಿ ಪರೀಕ್ಷೆ ದಿನವಾದ ಇಂದು ಈ ಘಟನೆ ನಡೆದಿದೆ.

ಮೈಸೂರು ತಾಲೂಕು ಬಿರಿಹುಂಡಿ ಗ್ರಾಮದ ನಿವಾಸಿ. ಬಾಲಕಿ ತಾಯಿ ಲಕ್ಷ್ಮಮ್ಮ, ಕ್ಯಾನ್ಸರ್ ನಿಂದ ಬಳಲುತ್ತಿದ್ದು, ನಿನ್ನೆಯಷ್ಟೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಹಿಂದೆಟು ಹಾಕಿದ್ದಳು.

ಬಳಿಕ ಈ ವಿಷಯ ತಿಳಿದು, ವಿದ್ಯಾರ್ಥಿನಿಗೆ ಧೈರ್ಯ ತುಂಬಿ ಇವತ್ತಿನ ಹಿಂದಿ ಪರೀಕ್ಷೆಗೆ ಗ್ರಾಮದ ಮುಖಂಡ, ಬೀರಿಹುಂಡಿ ಗ್ರಾಪಂ ಮಾಜಿ ಸದಸ್ಯ ಶಿವಣ್ಣ ಕರೆತಂದರು. ಯುವತಿಗೆ ಧೈರ್ಯ ತುಂಬಿ ತನ್ನ ಕಾರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದಂತ ಶಿವಣ್ಣ. ನಂತರ ವಿದ್ಯಾರ್ಥಿನಿ ಪರೀಕ್ಷೆ ಬರೆದ ಬಳಿಕ ಆಕೆ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಆಕೆಯನ್ನು ವಾಪಸ್ ಕರೆದುಕೊಂಡು ಹೋದರು.

oooo

key words : after- sslc exam- girl attend – her mothers- cremation- at mysore

The post ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಬಳಿಕ ತಾಯಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ವಿದ್ಯಾರ್ಥಿನಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

‘ಮೆಟ್ರಿಮೋನಿ ವೆಬ್‌ಸೈಟ್‌’ನಲ್ಲಿ ಪರಿಚಿತವಾದ ಉಪನ್ಯಾಸಕನ ವಿರುದ್ಧ ರೇಪ್ ಕೇಸು ದಾಖಲಿಸಿದ ಯುವತಿ..
ಮೈಸೂರು, ನ.28, 2019 🙁 www.justkannada.in news )  ನಗರದ ಕಾಲೇಜೊಂದರ ಉಪನ್ಯಾಸಕನ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಯುವತಿ ಅತ್ಯಾಚಾರ ಮಾಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ನೊಂದ ಯುವತಿ ಹಾಗೂ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

ನಗರದ ಕಾಲೇಜೊಂದರ ಉಪನ್ಯಾಸಕ ಜೆ.ಆರ್.ಸಂದೇಶ್‌ ಎಂಬುವವರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು.

ಏನಿದು ಘಟನೆ :

‘ಮೆಟ್ರಿಮೋನಿ ವೆಬ್‌ಸೈಟ್‌’ನಲ್ಲಿ ಪರಿಚಯವಾದ 23 ವರ್ಷದ ಯುವತಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಉಪನ್ಯಾಸಕ ಜೆ.ಆರ್.ಸಂದೇಶ್‌ ಅತ್ಯಾಚಾರ ಮಾಡಿದ್ದಾರೆ. ನೊಂದ ಯುವತಿಯು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅವಿವಾಹಿತೆಯಾಗಿರುವ ಯುವತಿಯು ‘ಮೆಟ್ರಿಮೋನಿ ವೆಬ್‌ಸೈಟ್‌’ವೊಂದರಲ್ಲಿ ತನ್ನ ‘ಪ್ರೊಫೈಲ್‌’ನ್ನು ಹಾಕಿದ್ದರು. ಇದರಲ್ಲಿದ್ದ ಮೊಬೈಲ್‌ಗೆ ಸಂದೇಶ ಕಳುಹಿಸುವ ಮೂಲಕ ಉಪನ್ಯಾಸಕ ಜೆ.ಆರ್.ಸಂದೇಶ್‌ ತಾನು ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕ ಎಂದು ಹೇಳಿ ಪರಿಚಯಿಸಿಕೊಂಡ.

ಬಳಿಕ ಮದುವೆಯಾಗುವುದಾಗಿ ನಂಬಿಸಿ, ಬೆತ್ತಲೆ ಚಿತ್ರ ಕಳುಹಿಸುವಂತೆ ಒತ್ತಡ ಹಾಕಿದ. ಇದಕ್ಕೆ ಮಣಿದ ಯುವತಿ ಚಿತ್ರ ಕಳುಹಿಸಿದ್ದಲ್ಲದೇ ಆತನೊಂದಿಗೆ ಓಡಾಡಿದ್ದಾರೆ. ನಂತರ, ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಎಂಬುದು ಆರೋಪ.

ಮರುದಿನ ಬೆಳಿಗ್ಗೆ ಯುವತಿ ಫೋನ್‌ ಮಾಡಿದರೆ ಮದುವೆಯಾಗುವುದಕ್ಕೆ ನಿರಾಕರಿಸಿದ ಎನ್ನಲಾಗಿದೆ, ಇದರಿಂದ ಮನನೊಂದ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಯುವತಿಯ ಪೋಷಕರು ಆರೋಪಿಯನ್ನು ಮನೆಗೆ ಕರೆಸಿ ಮನವೊಲಿಸುವ ಪ್ರಯತ್ನ ನಡೆಸಿದರು.  ಆದರೆ ಈ ವೇಳೆ ಉಪನ್ಯಾಸಕ ಕೊಲೆ ಮಾಡುವ ಬೆದರಿಕೆ ಹಾಕಿದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಯುವತಿ ಪೋಷಕರು ಆರೋಪಿಸಿದ್ದಾರೆ ಎನ್ನಲಾಗಿದೆ.

key words : mysore-matrimony.website-rape-case-by-girl-against-lecturer-at-mysore

The post ‘ಮೆಟ್ರಿಮೋನಿ ವೆಬ್‌ಸೈಟ್‌’ನಲ್ಲಿ ಪರಿಚಿತವಾದ ಉಪನ್ಯಾಸಕನ ವಿರುದ್ಧ ರೇಪ್ ಕೇಸು ದಾಖಲಿಸಿದ ಯುವತಿ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.