assistant professor Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಿಗೆ ಯುವ ವಿಜ್ಞಾನಿ ಪ್ರಶಸ್ತಿ.
ಮೈಸೂರು,ಡಿಸೆಂಬರ್,6,2021(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಅಣುಜೀವವಿಜ್ಞಾನ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಮೋಹನ್ ಸಿ.ಡಿ. ಅವರು ಪ್ರೊ.ಎಚ್.ಎಸ್. ಶ್ರೀವಾಸ್ತವ (PHSS) ಫೌಂಡೇಶನ್-ಯಂಗ್ ಸೈಂಟಿಸ್ಟ್ ಪ್ರಶಸ್ತಿಗೆ (2020-21) ಆಯ್ಕೆಯಾಗಿದ್ದಾರೆ.

ಡಾ.ಮೋಹನ್ ಅವರು  ಪ್ರೊ.ಕೆ.ಎಸ್. ರಂಗಪ್ಪ, ವಿಶ್ರಾ೦ತ ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ ಅವರ ಮಾರ್ಗದರ್ಶನದಲ್ಲಿ ಔಷಧೀಯ ಗುಣಲಕ್ಷಣಗಳನ್ನು ಹೊಂದಿರುವ ರಾಸಾಯನಿಕಗಳು ಕಂಡುಹಿಡಿಯುವ ಬಗ್ಗೆ ಸಂಶೋಧನೆ ನಡೆಸುತಿದ್ದಾರೆ. ಡಾ. ಮೋಹನ್ ಅವರು ಇತ್ತೀಚೆಗೆ ನ್ಯಾಷನಲ್ ಅಕಾಡೆಮಿ ಆಫ್ಸೈನ್ಸಸ್, ಇಂಡಿಯಾದಿಂದ NASI-ಪ್ಲಾಟಿನಂ ಜುಬಿಲಿ ಯುವವಿಜ್ಞಾನಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಪರಿಸರ ಅಥವಾ ಕೃಷಿಯ ಉದಯೋನ್ಮುಖ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವವಿಜ್ಞಾನಿಗಳಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು PHSS ಪ್ರತಿಷ್ಠಾನವು ದ್ವೈವಾರ್ಷಿಕವಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಯೊಂದಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ರೂ. 15,000/- ಮತ್ತು ಪ್ರತಿಷ್ಠಾನದ ಆಜೀವ ಸದಸ್ಯತ್ವ ನೀಡಲಾಗುವುದು. ನಮ್ಮ ದೇಶದ ಅನೇಕ ಗಣ್ಯವ್ಯಕ್ತಿಗಳು PHSS ಪ್ರತಿಷ್ಠಾನದ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಮತ್ತು ರಾಜ್ಯದ ವಿಶ್ವವಿದ್ಯಾಲಯಗಳ ಯುವ ಅಧ್ಯಾಪಕರು ಇಂತಹ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಇದು ಅನೇಕ ಯುವಕರನ್ನು ವೈಜ್ಞಾನಿಕ ಸಂಶೋಧನೆಗೆ ಪ್ರೇರೇಪಿಸುತ್ತದೆ ಮತ್ತು ಈ ಪ್ರಶಸ್ತಿಯು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಾಪ್ತವಾಗಿರುವುದು ಹೆಮ್ಮೆಯ ವಿಷಯವೆಂದು ಕೆ.ಎಸ್ ರಂಗಪ್ಪ ಅವರು ತಿಳಿಸಿದ್ದಾರೆ.

ಈ ವರ್ಷದ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಾಣಬಹುದು :https://phssfoundation.org/index.php

Key words: Young- Scientist Award – Assistant Professor-Mohan CD-Mysore University

ENGLISH SUMMARY…

The University of Mysore has set a milestone as its faculty member, Dr. Mohan C. D., is chosen for the Prof. H.S. Srivastava(PHSS)Foundation -YoungScientist (Life Sciences, Environmental Sciences and Agriculture Sciences) for the year 2020-21. Dr. Mohan C. D. works as an Assistant Professor at the Department of Studies in Molecular Biology, University of Mysore, Manasagangotri, Mysore. He works under the supervision of Prof. K. S. Rangappa, former Vice-Chancellor, University of Mysoreon thediscovery of small molecule modulators of cancer cell death. It may be recalled that, Dr. Mohan has recently received NASI-Platinum Jubilee Young Scientist Award from the National Academy of Sciences, India (Government of India recognised oldest Science Academy of India). The National award is given biennially by the PHSS foundation to the young scientists under the age of 40 years in recognition of outstanding contribution in the emerging areas of science, technology, health, environment or agriculture. The Award consists of a citation and cash prize of Rs. 15,000/- and life Membership of the Foundation.

“Many eminent personalities of our country have bagged the different awards of the PHSS Foundation and it is a good development that young faculty from the state universities are winning such national awards which may motivate many youngsters to take up scientific research” Prof. Rangappa says in the press release. The list of awardees of this year has been enclosed with this letter. More information can be found at: https://phssfoundation.org/index.php

The post ಮೈಸೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಿಗೆ ಯುವ ವಿಜ್ಞಾನಿ ಪ್ರಶಸ್ತಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕರಾಮುವಿವಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ರದ್ದುಗೊಳಿಸುವಂತೆ ದಸಂಸ ಆಗ್ರಹ.
ಮೈಸೂರು,ಆಗಸ್ಟ್,19,2021(www.justkannada.in):  ಕರ್ನಾಟಕ ರಾಜ್ಯ ಮುಕ್ತ ವಿವಿಯ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಿದ್ದು, ಕೂಡಲೇ ಕುಲಪತಿಗಳು ಇದನ್ನು ರದ್ದುಪಡಿಸಿ ಪಾರದರ್ಶಕ ನೇಮಕಾತಿ ನಡೆಸುವಂತೆ ದಸಂಸ ಆಗ್ರಹಿಸಿದೆ.

ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಸದಾ ಒಂದಿಲ್ಲೊಂದು ವಿವಾದವನ್ನೇ ಹಾಸಿ ಹೊದ್ದು ಮಲಗಿರುವ ಮುಕ್ತ ವಿಶ್ವವಿದ್ಯಾನಿಲಯವು ಮತ್ತೊಂದು ವಿವಾದವನ್ನು ಎಳೆದುಕೊಂಡಿದೆ. ಆದೇಶ ಸಂಖ್ಯೆ, ಕ.ರಾ.ಮು.ವಿ (ಆವಿ/ಸಿಬ್ಬಂದಿ-1/10/2021-22 ದಿನಾಂಕ: 28.17.2021ರನ್ವಯ ವಿವಿಧ ವಿಷಯಗಳಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯು ತರಾತುರಿ, ಕಾನೂನು ಬಾಹಿರ ಹಾಗೂ ಗೊಂದಲಮಯದಿಂದ ಕೂಡಿದೆ. ಈ ನೇಮಕಾತಿಯು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಹಾಗೂ ಹುದ್ದೆಯ ಆಕಾಂಕ್ಷಿಗಳ ಆಕ್ರೋಶಕ್ಕೂ ಸಹ ಕಾರಣವಾಗಿದೆ ಎಂದು ದೂರಿದರು.

28,07.2021ರನ್ವಯ ಸಾರ್ವಜನಿಕವಾಗಿ ಆರು ದಿನಗಳ ನಂತರ ಕೇವಲ ಒಂದು ಸ್ಥಳೀಯ ಪತ್ರಿಕೆಯಲ್ಲಿ ಮಾತ್ರ ಪ್ರಕಟಗೊಂಡಿದೆ. ನಿಯಮಾವಳಿ ಸಾರ ಅಧಿಸೂಚನೆಯ ಪ್ರಕಟಣೆಯು ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗಬೇಕಿತ್ತು. ಆದರೆ ವಿಶ್ವವಿದ್ಯಾನಿಲಯದ ಆಡಳಿತ ವರ್ಗವು ಹುದ್ದೆ ಆಕಾಂಕ್ಷಿಗಳನ್ನು ಉದ್ದೇಶ ಪೂರ್ವಕವಾಗಿಯೇ ವಂಚಿಸಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ಹೇಳಿದರು.

ಸಂಖ್ಯೆ ಕ.ರಾ.ಮು.ವಿ/ಆವಿ/ಸಿಬ್ಬಂದಿ-1/100/2001-22. ದಿನಾಂಕ 28.07.2021ರನ್ವಯ ಹೊರಡಿಸಲಾದ ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆ, ಹುದ್ದೆಯ ಅವಧಿ, ವೇತನ, ಮೀಸಲಾತಿ ಅನುಸಾರ ಸವಿವರವಾಗಿ ಪ್ರಕಟಿಸದೆ ಇರುವುದು ನೇಮಕಾತಿ ವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿಯೂ ಯಾವುದೇ ಮಾಹಿತಿ ಇಲ್ಲದಿರುವುದು ಕಂಡುಬಂದಿದೆ.

ಸಂದರ್ಶನದ ದಿನಾಂಕವನ್ನು 11.08.2021 ರಿಂದ 14.08.2021ರ ವರೆಗೆ ನಡೆಸಿದ್ದು, ಬಹಳ ಮುಖ್ಯವಾಗಿ ಕರ್ನಾಟಕ ರಾಜ್ಯ ಸರಕಾರದ ಕೋವಿಡ್ ನಿಯಮಗಳ ಪಾಲನೆ ಅನುಸಾರ (14,08,2021ರ ಶನಿವಾರ ವಾರಾಂತ್ಯ ಕರ್ಫ್ಯೂ ಇದ್ದಾಗಿಯೂ ಸಹ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆಯನ್ನು ಗಾಳಿಗೆ ತೂರಿ ಸಂದರ್ಶನವನ್ನು ನಡೆಸಲು ಮುಂದಾಗಿದ್ದರು. ಆದರೆ, ವಿರೋಧ ವ್ಯಕ್ತವಾದ ಮೇಲೆ ದಿನಾಂಕವನ್ನು ಮುಂದೂಡಿ ಅದನ್ನು 16.18,2021ರ ಸೋಮವಾರದಂದು ಬದಲಾವಣೆ ಮಾಡಲಾಗಿದೆ. ಇದರಿಂದ ದೂರದೂರಿನಿಂದ ಬರುವ ಹುದ್ದೆ ಆಕಾಂಕ್ಷಿಗಳಿಗೆ ತೊಂದರೆ ಆಗಿ ಸಂದರ್ಶನಕ್ಕೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಅಧಿಸೂಚನೆಯಲ್ಲಿ ವಿದ್ಯಾರ್ಹತೆಯನ್ನು ಯುಜಿಸಿ 2018ರ ಮಾರ್ಗಸೂಚಿ ಅನುಸಾರ ನಿಗದಿಪಡಿಸಿದ್ದು, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್.ಡಿ ಪದವಿಯು ಕಡ್ಡಾಯವಾಗಿರುತ್ತದೆ. ಅಧಿಸೂಚನೆಯ ಅರ್ಜಿ ನಮೂನೆಯಲ್ಲಿ ಪಿಎಚ್.ಡಿ., ನೆಟ್, ಕೆ ಸೆಟ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ಮುದ್ರಿಸಿ ಸಂದರ್ಶಕರನ್ನು ದಿಕ್ಕು ತಪ್ಪಿಸಲಾಗಿದೆ ಎಂದು ದೂರಿದರು.

ಅದೇ ರೀತಿ ಯುಜಿಸಿ ನಿಯಮಾನುಸಾರ ಅವಳಿ ವಿಷಯಗಳಾದ ರಾಜ್ಯಶಾಸ ಮತ್ತು ಆಡಳಿತ ವಿಷಯವನ್ನು ವಿವಿಯ ಮಟ್ಟದಲ್ಲಿ ಬೋಧಿಸುವ ಸಂಬಂಧ ಪರಸ್ಪರ ಅಂತರ್ಗತ ವಿಷಯಗಳೆಂದು ಪರಿಗಣಿಸಿ ನೇಮಕಾತಿ ಸಂದರ್ಭದಲ್ಲಿ ಅವಕಾಶ ನೀಡಬೇಕೆಂದು ತಿಳಿಸಿದ್ದರೂ ನಿಯಮವನ್ನು ಗಾಳಿಗೆ ತೂರಿ ಈ ಸಂಬಂಧ ಯಾವುದೇ ತಜ್ಞರ ಅಭಿಪ್ರಾಯ ಪಡೆಯದೆ ಕೇವಲ ಸಾರ್ವಜನಿಕ ವಿಭಾಗದ ಅಧ್ಯಕ್ಷರಾದ ಡಾ.ಜಗದೀಶ ಬಾಬು ಅವರ ಅಭಿಪ್ರಾಯವನ್ನೇ ತಜ್ಞರ ಅಭಿಪ್ರಾಯವೆಂದು ಪರಿಗಣಿಸಿ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಷಯವನ್ನು ಅಧ್ಯಯನ ಮಾಡಿದವರು ಮಾತ್ರ ಸಂದರ್ಶನಕ್ಕೆ ಅರ್ಹರೆಂದು ತಿಳಿಸಿರುತ್ತಾರೆ. ಹಾಗೇ ನೋಡಿದರೆ ಡಾ.ಜಗದೀಶ್ ಬಾಬುರವರೇ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಭಿಯನ ವಿಭಾಗದಲ್ಲಿ ಪಿಎಚ್.ಡಿ ಪದವಿ ಪ್ರಸ್ತುತ ಸಾರ್ವಜನಿಕ ಆಡಳಿತ ವಿಷಯಕ್ಕೆ ಮಾರ್ಗದರ್ಶರಾಗಲು ಹೊರಟಿರುವುದು ಎದ್ದು ಸಮಂಜಸವಾದುದೆ ಎಂದು ಚೋರನಹಳ್ಳಿ ಶಿವಣ್ಣ ಪ್ರಶ್ನಿಸಿದ್ದಾರೆ.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೆ.ವಿ,ದೇವೇಂದ್ರ, ಯಡದೊರೆ ಮಹದೇವಯ್ಯ, ನಟರಾಜು ಹಾರೋಹಳ್ಳಿ, ಸೋಮಣ್ಣ ಬನ್ನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Key words: mysore-Dasamsa- demands -cancellation – appointment -temporary -assistant professor- Recruitment

The post ಕರಾಮುವಿವಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ರದ್ದುಗೊಳಿಸುವಂತೆ ದಸಂಸ ಆಗ್ರಹ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.