actor rishab shetty tweets about rajyotsava celebration |...

ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಿ: ಸರಕಾರಕ್ಕೆ ರಿಷಬ್ ‘ಟ್ವೀಟ್’ ಚಾಟಿ !
ಬೆಂಗಳೂರು, ಅಕ್ಟೋಬರ್ 22, 2021 (www.justkannada.in): ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಆಚರಣೆ, ಇತಿಹಾಸಗಳು ಭಿನ್ನವಾದರೂ ನಾಡಿಗೆ ದಸರಾ ಜತೆಗಿನ ಭಾವನಾತ್ಮಕ ಸಂಬಂಧವೇ ರಾಜ್ಯೋತ್ಸವದೊಂದಿಗೂ ಇದೆ. ಮೈಸೂರಿನ ಸಂಭ್ರಮವೇ ಬೆಳಗಾವಿಯಲ್ಲೂ ಮುಂದುವರೆಯಲು ಮಾನ್ಯ ಮುಖ್ಯಮಂತ್ರಿಗಳು ಅವಕಾಶ ನೀಡಬೇಕಾಗಿ ವಿನಂತಿ…

ಇದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾಡಿರುವ ಟ್ವೀಟ್.

ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಹೀಗೆಂದು ಸಿನಿಮಾ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ. ಟ್ವೀಟ್‌ ಮಾಡಿ ಅಭಿಪ್ರಾಯ ಹಂಚಿಕೊಂಡಿರುವ ರಿಷಬ್‌ ಶೆಟ್ಟಿ, ಕನ್ನಡ ರಾಜ್ಯೋತ್ಸವದ ಸಂಭ್ರಮದ ಆಚರಣೆಗೆ ಬೆಂಬಲ ನೀಡಿದ್ದಾರೆ.

ಭಾಷಾ ಸೂಕ್ಷ್ಮ ಪ್ರದೇಶವಾಗಿರುವ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕೋವಿಡ್‌ ನಿಯಮಗಳಿಗೆ ಒಳಪಟ್ಟು ಆಚರಣೆ ಮಾಡಬೇಕಾಗಿ ಇತ್ತೀಚಿನ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯೋತ್ಸವದ ಅದ್ಧೂರಿ ಆಚರಣೆಗೆ ಅವಕಾಶ ಕೋರಿ ಈಗಾಗಲೇ ಕನ್ನಡ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿವೆ. ಈ ನಡುವೆ ರಿಷಬ್ ಕೂಡ ಟ್ವೀಟ್ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.