000 Health Department Staff Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಆರೋಗ್ಯ ಇಲಾಖೆಯಲ್ಲಿ 7,000 ಹುದ್ದೆಗಳ ನೇಮಕಾತಿಗೆ ಸಿಎಂ ಅಸ್ತು : ಸಚಿವ ಯು.ಟಿ. ಖಾದರ್
ಮೈಸೂರು, ಆ.೧೧,೨೦೨೬ : ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಅವರೊಂದಿಗೆ ನಡೆದ ಚರ್ಚೆಯಲ್ಲಿ ಸದ್ಯದಲ್ಲೇ ಸುಮಾರು 7,000 ಸಿಬ್ಬಂದಿ ನೇಮಕಾತಿಗೆ ಒಪ್ಪಿಗೆ ದೊರೆತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ವೈದ್ಯರು, ನರ್ಸಿಂಗ್ ಸಿಬ್ಬಂದಿ ಸೇರಿದಂತೆ ವಿವಿಧ ವರ್ಗದ ಸಿಬ್ಬಂದಿ ಕೊರತೆಯಿಂದ ಸರ್ಕಾರಿ ಆಸ್ಪತ್ರೆಗಳ ಸೇವೆಯ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ನೇಮಕಾತಿ ಮಹತ್ವ ಪಡೆದುಕೊಂಡಿದೆ. ” ಜಸ್ಟ್‌ ಕನ್ನಡ”  ಜತೆ ಮಾತನಾಡಿದ ಸಚಿವ ಯು.ಟಿ.ಖಾದರ್‌ ಹೇಳಿದಿಷ್ಟು..

50 ಸಾವಿರ ಹುದ್ದೆಗಳಿಗೆ ಈ ಹಿಂದೆಯೇ ಆದೇಶ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಹಿಂದಿನ ಅವಧಿಯಲ್ಲೇ ಆರೋಗ್ಯ ಇಲಾಖೆಯಲ್ಲಿ ಸುಮಾರು 50,000 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಆದೇಶ ನೀಡಲಾಗಿತ್ತು. ಆದರೆ ಎಲ್ಲ ಹುದ್ದೆಗಳನ್ನೂ ಒಂದೇ ಬಾರಿಗೆ ಭರ್ತಿ ಮಾಡುವುದು ಸರ್ಕಾರದ ಉದ್ದೇಶವಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

“ಒಂದೇ ಅವಧಿಯಲ್ಲಿ ಶೇ.100ರಷ್ಟು ಹುದ್ದೆಗಳನ್ನು ಭರ್ತಿ ಮಾಡುವುದಿಲ್ಲ. ಹಂತ ಹಂತವಾಗಿ ಸುಮಾರು ಶೇ.20ರಿಂದ 30ರಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ” ಎಂದು ಖಾದರ್ ಹೇಳಿದ್ದಾರೆ. ಒಮ್ಮೆಲೇ ಎಲ್ಲ ಹುದ್ದೆ ಭರ್ತಿ ಮಾಡಿದರೆ ಮುಂದಿನ ಪೀಳಿಗೆಗೆ ಉದ್ಯೋಗ ಎಲ್ಲಿದೆ? ಸರ್ಕಾರದ ಈ ನಿಲುವಿನ ಹಿಂದಿರುವ ಉದ್ದೇಶವನ್ನು ಸಚಿವರು ವಿವರಿಸಿದ್ದಾರೆ.

ಒಂದೇ ಬಾರಿಗೆ ಇಲಾಖೆಯಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ, ಈಗ ನೇಮಕವಾಗುವ ಸಿಬ್ಬಂದಿ ನಿವೃತ್ತಿಯಾಗುವವರೆಗೆ ಹೊಸದಾಗಿ ವಿದ್ಯಾಭ್ಯಾಸ ಮುಗಿಸಿ ಹೊರಬರುವ ಪ್ರತಿಭಾವಂತರಿಗೆ ಸರ್ಕಾರಿ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತವೆ.

“ಇಂದು ನೇಮಕಗೊಂಡವರು ಮುಂದಿನ ಹಲವು ವರ್ಷಗಳ ಕಾಲ ಸೇವೆಯಲ್ಲಿರುತ್ತಾರೆ. ಆಗ ಮುಂದಿನ ವರ್ಷಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಬರುವ ಪ್ರತಿಭಾವಂತರಿಗೆ ಸರ್ಕಾರಿ ಉದ್ಯೋಗದ ಅವಕಾಶವೇ ಇಲ್ಲದಂತಾಗಬಹುದು. ಹೀಗಾಗಿ ನಿರಂತರವಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಹಂತ ಹಂತವಾಗಿ ನೇಮಕಾತಿ ಮಾಡಲಾಗುತ್ತದೆ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಅಂದರೆ, ನೇಮಕಾತಿ ಇಲ್ಲ ಎಂಬುದಲ್ಲ; ಎಲ್ಲ ಹುದ್ದೆಗಳನ್ನೂ ಒಂದೇ ಹೊತ್ತಿನಲ್ಲಿ ತುಂಬುವುದಿಲ್ಲ ಎಂಬುದು ಸರ್ಕಾರದ ನಿಲುವು.

ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ಜನರೇಟರ್ ಸಮಸ್ಯೆಗೂ ಸಚಿವರ ಸ್ಪಂದನೆ

ಇದೇ ವೇಳೆ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಜನರೇಟರ್ ಕೆಟ್ಟು ನಿಂತಿದ್ದು, ವಿದ್ಯುತ್ ಕಡಿತದ ಸಂದರ್ಭದಲ್ಲಿ ಸಿಬ್ಬಂದಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ದೈನಂದಿನ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ವರದಿಯನ್ನು ಸಚಿವರ ಗಮನಕ್ಕೆ ತರಲಾಯಿತು.

ಈ ಕುರಿತು ಸಚಿವ ಯು.ಟಿ. ಖಾದರ್ ಅವರು ಗಂಭೀರವಾಗಿ ಸ್ಪಂದಿಸಿದ್ದು, ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸಂಪೂರ್ಣ ವರದಿ ತರಿಸಿಕೊಂಡು, ಸಮಸ್ಯೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಲಾಸ್ಟ್‌ ಪಂಚ್‌ :

ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ನಿರಂತರವಾಗಿ ದೂರುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ, ಜನರೇಟರ್‌ನಂತಹ ಮೂಲಭೂತ ವ್ಯವಸ್ಥೆಯೇ ಕಾರ್ಯನಿರ್ವಹಿಸದಿರುವುದು ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಮೇಲೆಯೇ ಪ್ರಶ್ನೆ ಮೂಡಿಸುತ್ತದೆ.

ಒಂದೆಡೆ 7,000 ಸಿಬ್ಬಂದಿ ನೇಮಕಾತಿಗೆ ಸರ್ಕಾರ ಅಸ್ತು ಎಂದಿದೆ. ಮತ್ತೊಂದೆಡೆ ಇರುವ ಆಸ್ಪತ್ರೆಗಳಲ್ಲಿ ಜನರೇಟರ್, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಹೊಸ ನೇಮಕಾತಿಯ ಜೊತೆಗೆ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ, ಸಿಬ್ಬಂದಿ ಕೊರತೆ ಮತ್ತು ಸೇವೆಯ ಗುಣಮಟ್ಟದ ಮೇಲೂ ಸರ್ಕಾರ ಸಮಾನ ಗಮನ ಹರಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Key words: 7,000 Health Department Staff, to Be Recruited Soon, Minister U.T. Khader

SUMMARY:

7,000 Health Department Staff to Be Recruited Soon: Minister U.T. Khader

Bengaluru: Health Minister U.T. Khader said the Chief Minister has given the green signal for the recruitment of around 7,000 staff in the Health Department. He clarified that the government will not fill 100% of vacant posts at once. Instead, only around 20–30% of posts will be filled in phases, ensuring that talented candidates graduating in future also get government job opportunities.

Khader said that during Siddaramaiah’s earlier tenure as Chief Minister, orders had been issued for recruitment to nearly 50,000 health department posts.

Srirangapatna Hospital Generator Issue

When the minister’s attention was drawn to the non-functional generator at Srirangapatna Government Hospital, where staff reportedly have to use mobile phone flashlights during power cuts, he assured that a report would be sought from local health officials. He promised necessary action after examining the report.

Recruitment is important—but fixing basic infrastructure in government hospitals is equally urgent.

The post ಆರೋಗ್ಯ ಇಲಾಖೆಯಲ್ಲಿ 7,000 ಹುದ್ದೆಗಳ ನೇಮಕಾತಿಗೆ ಸಿಎಂ ಅಸ್ತು : ಸಚಿವ ಯು.ಟಿ. ಖಾದರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.