ಸಿದ್ಧರಾಮಯ್ಯ ಚೆಕ್ ಮೂಲಕ ಲಂಚ ಪಡೆದಿದ್ದಾರೆ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ನವೆಂಬರ್,3,2022(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ನಿನ್ನೆ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಚೆಕ್ ಮೂಲಕ 1.30 ಕೋಟಿ ರೂ. ಲಂಚ ಪಡೆದಿದ್ದಾರೆ. ದಾಖಲೆ ಸಮೇತ ಬಿಜೆಪಿ ಮುಖಂಡ ರಮೇಶ್ ದೂರು ನೀಡಿದ್ದಾರೆ ಸಿದ್ದರಾಮಯ್ಯ ಭ್ರಷ್ಟಾಚಾರದ  ಬಗ್ಗೆ ದಾಖಲೆ ಸಮೇತ ದೂರು ನೀಡುತ್ತೇವೆ. ಕಾಂಗ್ರೆಸ್ ನವರ ಭ್ರಷ್ಟಾಚಾರವೇ ಬಹಿರಂಗವಾಗಿದೆ ಬಾಯಿ ಮುಚ್ಚಿಕೊಂಡು ಇರುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಕೆ.ಎಸ್ ಈಶ್ವರಪ್ಪರನ್ನ ಸಿಎಂ ಮಾಡಲಿ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ದೇಶದ ಪ್ರಧಾನಿ ಹಿಂದುಳಿದ ವರ್ಗಕ್ಕೆ ಸೇರಿದವರು ಕಾಂಗ್ರೆಸ್ ಹಿಂದುಳಿದ ವರ್ಗದವರನ್ನ ಪ್ರಧಾನಿ ಮಾಡಿಲ್ಲ. ಪ್ರಧಾನಿ ಮೋದಿಯನ್ನ ಇಡೀ ವಿಶ್ವವೇ ಮೆಚ್ಚುತ್ತಿದೆ. ಒಬ್ಬ ರಾಷ್ಟ್ರಭಕ್ತನನ್ನ ಬಿಜೆಪಿ ಪ್ರಧಾನ ಮಂತ್ರಿ ಮಾಡಿದೆ. ಕಾಂಗ್ರೆಸ್ ಗೆ ಏನು ಕಾಯಿಲೆ ಇತ್ತು. ಡಾ.ಬಿಆರ್ ಅಂಬೇಡ್ಕರ್ ಸೇರಿ ಹಲವು ನಾಯಕರನ್ನ ಸೋಲಿಸಿತ್ತು.  ಕಾಂಗ್ರೆಸ್ ಯಾವಾಗಲೂ ದಲಿತರನ್ನ ಸೋಲಿಸುತ್ತಾ ಬಂದಿದೆ ಎಂದು ಕಿಡಿಕಾರಿದರು.

Key words: Siddaramaiah –received- bribe –cheque-Former minister-KS Eshwarappa.