ಮೈಮುಲ್ ಅಕ್ರಮ ನೇಮಕಾತಿ ಆರೋಪ ವಿಚಾರ: ಅಂತಿಮ ಪಟ್ಟಿ ಪ್ರಕಟಕ್ಕೂ ಮುನ್ನ ಸಂದರ್ಶನ- ದಾಖಲೆ ಸಮೇತ ಬಹಿರಂಗಪಡಿಸಿದ ಸಾ.ರಾ ಮಹೇಶ್

ಮೈಸೂರು,ಜೂ,15,2020(www.justkannada.in): ಮೈಮುಲ್ ಆಕ್ರಮ ನೇಮಕಾತಿ ಆರೋಪ‌ ವಿಚಾರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಳ್ಳುವ ಮುನ್ನವೆ ಸಂದರ್ಶನಕ್ಕೆ ಆಹ್ವಾನ ನೀಡಿ ಮೈಮುಲ್ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಆರೋಪಿಸಿದ್ದಾರೆ.

ಈ ಕುರಿತು ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆ ಸಹಿತ ಮಾಹಿತಿ ಬಹಿರಂಗ ಪಡಿಸಿದ ಶಾಸಕ ಸಾ. ರಾ‌ ಮಹೇಶ್. ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಬೇಡಿ ಅಂತ ಹೈಕೋರ್ಟ್ ಆದೇಶ ನೀಡಿದೆ. ಹೀಗಿರುವಾಗ ಸಂದರ್ಶನ ನಡೆಸುವ ಅಗತ್ಯವೇನಿದೆ. ಈ ಕಾರಣಕ್ಕಾಗಿಯೇ ನಾನು ಅಕ್ರಮದ ಬಗ್ಗೆ ಆರೋಪ ಮಾಡುತ್ತಿದ್ದೇನೆ. ಮೈಮುಲ್ ವಿಚಾರದಲ್ಲಿ ಪಾರದರ್ಶಕತೆ ಇಲ್ಲ, ಸ್ವಜನಪಕ್ಷಪಾತ ನಡೆಯುತ್ತಿರುವುದು ಖಚಿತ ಎಂದು ಕಿಡಿಕಾರಿದರು.

ಈಗಾಗಲೇ ಕೆಲ ಅಭ್ಯರ್ಥಿಗಳು ಅರ್ಧ ಹಣ ಸಟಲ್ ಮಾಡಿದ್ದಾರೆ. ಬಾಕಿ ಇರುವ ಇನ್ನರ್ಧ ಹಣವನ್ನು ವಸೂಲಿ ಮಾಡಿಕೊಳ್ಳುವ ಸಲುವಾಗಿ ಸಂದರ್ಶನ ನಡೆಸಲಾಗುತ್ತಿದೆ. ಮೈಮುಲ್ ನೇಮಕಾತಿ ವಿಚಾರದಲ್ಲಿ ಹೈಕೋರ್ಟ್ ನಲ್ಲಿ ಮತ್ತೊಂದು ರಿಟ್ ಅರ್ಜಿ ಸಲ್ಲಿಕೆ ಆಗಲಿದೆ. ನಮ್ಮ‌ಹೋರಾಟ ನಿರಂತರವಾಗಿ ನಡೆಯುತ್ತದೆ ಎಂಧು ಶಾಸಕ ಸಾ.ರಾ ಮಹೇಶ್ ತಿಳಿಸಿದರು.illegal-recruitment-mymul-mysore-former-minister-sa-ra-mahesh

ಕಲ್ಯಾಣ ಮಂಟಪದ ಮುಂಗಡ ಹಣ ವಾಪಸ್ಸು ವಿಚಾರ. ಒಳ್ಳೆಯ ನಿರ್ಧಾರ

ಕಲ್ಯಾಣ ಮಂಟಪದ ಮುಂಗಡ ಹಣ ವಾಪಸ್ಸು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾ.ರಾ ಮಹೇಶ್,  ಇದು ತುಂಬಾ ಒಳ್ಳೆಯ ನಿರ್ಧಾರ. ಕಂದಾಯ ಸಚಿವರ ಆದೇಶಕ್ಕೆ ಸ್ವಾಗತವಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿ. ಕಲ್ಯಾಣ ಮಂಟಪಗಳ ಕಟ್ಟಡ ತೆರಿಗೆ ವಿನಾಯತಿ ನೀಡಬೇಕು. ಕೆಇಬಿ ಡೆಪಾಸಿಟ್ ಶುಲ್ಕ ಪಾವತಿಸದಂತೆ ವಿನಾಯತಿ ಕೊಡಬೇಕು. ಇದರಿಂದ ಸಾರ್ವಜನಿಕರಿಗೆ ಹಾಗೂ ಕಲ್ಯಾಣ ಮಂಟಪದವರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸಿಎಂ ಕಂದಾಯ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ‌ ಎಂದು ತಿಳಿಸಿದರು.

Key words: illegal- recruitment-mymul-mysore-Former minister- sa.ra Mahesh