ಬಿಜೆಪಿಯವರದ್ಧು ಕೇವಲ ಗೋಹತ್ಯೆ, ಮತಾಂತರ, ಕೇಸರಿ ಶಾಲು ವಿಚಾರವಾಗಿ ಮಾತ್ರ ಮಾತು- ರಮೇಶ್ ಬಂಡಿಸಿದ್ದೇಗೌಡ ಟೀಕೆ.

ಮಂಡ್ಯ,ಫೆಬ್ರವರಿ,18,2022(www.justkannada.in): ಬಿಜೆಪಿಯವರು ಗೋಹತ್ಯೆ, ಮತಾಂತರ, ಕೇಸರಿ ಶಾಲು ವಿಚಾರವಾಗಿ ಮಾತ್ರ ಮಾತನಾಡುತ್ತಾರೆಯೇ ಹೊರತು ಅವರ ಪಕ್ಷದ ಸಾಧನೆ ಬಗ್ಗೆ ಮಾತನಾಡುವುದಿಲ್ಲ. ಮಾತನಾಡಲು ಏನೂ ಇಲ್ಲ ಎಂದು ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಟೀಕಿಸಿದರು.

ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕುರಿತ ಸಭೆಯಲ್ಲಿ  ಮಾತನಾಡಿದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರು, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ತಾತ್ಕಾಲಿಕವಾಗಿ ನಾವು ಅಧಿಕಾರದಿಂದ ದೂರ ಇರಬಹುದು. ಆದರೆ ಮತ್ತೆ ನಾವು ಶಕ್ತಿಶಾಲಿಯಾಗಿ ಬೆಳೆಯುತ್ತೇವೆ. ನೀವೆಲ್ಲರೂ ನಿಷ್ಠೆಯಿಂದ ಪಕ್ಷಕ್ಕೆ ದುಡಿದರೆ ಮತ್ತೆ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದೆ. ಎಲ್ಲರೂ ಪ್ರಾಮಾಣಿಕತೆ, ನಿಷ್ಠೆಯಿಂದ, ಸದಸ್ಯತ್ವ  ಮಾಡಬೇಕು ಹೇಳಿದರು.

ರಾಜ್ಯದಲ್ಲಿ ಶೇ.49 ರಷ್ಟು ಮಹಿಳೆಯರಿದ್ದಾರೆ. ಅವರಿಗೆ ನಾವು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದು, ಅವರಲ್ಲಿ ನಾಯಕತ್ವ ಗುಣ ಬೆಳೆಸಲು ಹಾಗೂ ಮನೆ ಮನೆಗೆ ಹೋದಾಗ ಅಲ್ಲಿ ಮಹಿಳೆಯರ ಮಾಹಿತಿ ಪಡೆಯಲು ನೆರವಾಗಲು ಮಹಿಳೆಯರನ್ನೂ ಮುಖ್ಯ ನೋಂದಣಿದಾರರಾಗಿ ನೇಮಕ ಮಾಡಿದ್ದೇವೆ ಎಂದು ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.

ಕೆ.ಪಿ.ಸಿ.ಸಿ ವತಿಯಿಂದ ಸದಸ್ಯತ್ವ ನೊಂದಣಿ  ಉಸ್ತುವಾರಿಯಾಗಿ ಬಂದಿದ್ದ  ವರುಣ ಮಹೇಶ್ ಮಾತಾನಾಡಿ ರಾಹುಲ್  ಗಾಂಧಿಯವರು ಅತಿ ದೊಡ್ಡ ಆ್ಯಪ್ ಸಿದ್ಧಪಡಿಸಿದ್ದಾರೆ. ಸದಸ್ಯತ್ವ ಅಭಿಯಾನದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕೇವಲ ಕಾಂಗ್ರೆಸ್ ನವರನ್ನೇ ಸದಸ್ಯರನ್ನಾಗಿ ಮಾಡಿದರೆ ಸಾಲದು. ತಟಸ್ಥವಾಗಿರುವ ಜನರನ್ನು ನಾವು ಪಕ್ಷದತ್ತ ಸೆಳೆಯಬೇಕು. ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ಜನ ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ. ನೀವು ಅವರ ಜತೆ ಮಾತನಾಡಿ ಅವರನ್ನು ಸದಸ್ಯರನ್ನಾಗಿ ಮಾಡಬೇಕು  ಎಂದು ಕರೆ ನೀಡಿದರು.  ಬೂತ್ ಮಟ್ಟದಲ್ಲಿ ಪ್ರತಿ ನೋಂದಣಿದಾರರು ದಿನಕ್ಕೆ 30 ಮನೆಗಳಿಗೆ ಹೋದರೆ ಸಾಕು. ಈ ಅಭಿಯಾನ ವೇಗವಾಗಿ ನಡೆಯುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಎನ್. ಪ್ರಕಾಶ್, ಮಿತ್ರ ರಮೇಶ್ ಹಾಗೂ ರಾಮಲಿಂಗಯ್ಯ, ಗಾಯತ್ರಿ, ನಗರಸಭಾ ಸದಸ್ಯ ನಹಿo, ಮತ್ತು  ಯೂತ್ ಕಾಂಗ್ರೆಸ್ ನ ಜೈಕುಮಾರ್ , ಸಂಜಯ, ವಿಜಯಕುಮಾರ್, ಅಭಿಷೇಕ್ ಎಸ್.ಎಲ್ ಹಾಗೂ ಮುಂಚೂಣಿ  ಘಟಕದ ಪದಾಧಿಕಾರಿಗಳು  ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Key words: congress- Membership-campaign