ದ್ವಿತೀಯ ಪಿಯುಸಿ ಇತಿಹಾಸ ಪುಸ್ತಕದಲ್ಲಿ ಭಗವಾನ್ ಮಹಾವೀರರ ಕುರಿತ ಪಠ್ಯಕ್ಕೆ ಆಕ್ಷೇಪ

ಬೆಂಗಳೂರು, ಸೆಪ್ಟೆಂಬರ್, 03,2020(www.justkannada.in) ; ಕೂಡಲೇ ಪಿ ಯು ಸಿ ಕನ್ನಡ ಪಠ್ಯ ಪುಸ್ತಕ ದಲ್ಲಿ ಭಗವಾನ್ ಮಹಾವೀರ್ ಸ್ವಾಮಿ ಬಗ್ಗೆ ಬರೆದ ಚರಿತ್ರೆ ಹಾಗೂ ಸಂದೇಶದ ತಪ್ಪನ್ನು ಸರಿಪಡಿಸಲು ಮುಡಬಿದಿರಿಯ ಶ್ರೀ ದಿಗಂಬರ ಜೈನ ಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಒತ್ತಾಯಿಸಿದ್ದಾರೆ.

jk-logo-justkannada-logo

ಈ ಸಂಬಂಧ  ಉನ್ನತ ಶಿಕ್ಷಣ ಸಚಿವರಿಗೆ ಟ್ವೀಟ್ ಮೂಲಕ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.

Objection-Lord-Mahavira-Second-PUC-History-Book

ಜೈನ ಧರ್ಮವು ಕೋಸಲ, ವಂಗ, ಮಗಧದಲ್ಲಿ ಸೀಮಿತವಾಗಿತ್ತು ಎಂಬ ತಪ್ಪು ಕಲ್ಪನೆಗೆ ದೂಡಿದಂತ್ತಾಗಿದ್ದು, ಅವು ಪಂಚಶೀಲ ತತ್ವಗಳು ಅಲ್ಲ, ಅವು ಪಂಚಾಣುವ್ರತಗಳು ಎಂದು ಪ್ರೊ.ಶ್ರೀನಾಥ್ ರಾವ್ ಕೆ ಎಂಬುವವರು ಟ್ವೀಟ್ ಮೂಲಕ ತಿಳಿಸಿದ್ದರು.

ಪ್ರೊ.ಶ್ರೀನಾಥ್ ರಾವ್ ಕೆ ಅವರ  ಟ್ವೀಟ್ ಬೆಂಬಲಿಸಿ ಮುಡಬಿದಿರಿಯ ಶ್ರೀ ದಿಗಂಬರ ಜೈನ ಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಅವರು ಕೂಡಲೇ ಪಿಯುಸಿ ಇತಿಹಾಸ ಪಠ್ಯ ಪುಸ್ತಕದಲ್ಲಿ ಭಗವಾನ್ ಮಹಾವೀರ್ ಸ್ವಾಮಿ ಬಗ್ಗೆ ಬರೆದ ಚರಿತ್ರೆ ಹಾಗೂ ಸಂದೇಶದ ತಪ್ಪನ್ನು ಸರಿಪಡಿಸಬೇಕು. ಶಿಕ್ಷಣ ಸಚಿವರು ಈ ಕೂಡಲೆ ತಪ್ಪನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

key words ; Objection-Lord-Mahavira-Second-PUC-History-Book