ಜೂ.6ರಿಂದ ರಾಕ್ಹಿ ಭಾಯ್ ಶೂಟಿಂಗ್ ಶುರು !

ಬೆಂಗಳೂರು, ಮೇ 30, 2019 (www.justkannada.in): ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಶುರುವಾಗಿದೆ. ಜೂನ್ 6ಕ್ಕೆ ರಾಕ್ಹಿಂಗ್ ಸ್ಟಾರ್ ಯಶ್ ಕೂಡ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

‘ಕೆಜಿಎಫ್ ಚಾಪ್ಟರ್-2’ ಚಿತ್ರೀಕರಣ ಮುಂದಿನ ತಿಂಗಳು ಜೂನ್ ಇಂದ ಮೈಸೂರಿನಲ್ಲಿ ಶುರುವಾಗಲಿದೆ. ಮೈಸೂರಿನಿಂದ ಚಾಪ್ಟರ್-2 ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಚಾಪ್ಟರ್-2 ಮೊದಲ ಭಾಗಕ್ಕಿಂತ ಅದ್ಧೂರಿಯಾಗಿ ಇರಲಿದೆಯಂತೆ.

ಇಷ್ಟುದಿನಗಳು ಚುನಾವಣಾ ಪ್ರಚಾರ ಮತ್ತ ಇತರ ಕೆಲಸಗಳಲ್ಲಿ ಬ್ಯುಸಿ ಇದ್ದ ರಾಕಿ ಭಾಯ್ ಈಗ ಕೆಜಿಎಫ್ ನತ್ತ ಗಮನ ಹರಿಸಿದ್ದಾರೆ. ಸದ್ಯ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಯಶ್ ಗಮನ ಇನ್ನ ಸಂಪೂರ್ಣ ‘ಕೆಜಿಎಫ್-2’ ಮೇಲೆ ಇರಲಿದೆಯಂತೆ.