ನಟಿ ಕಂಗನಾ ರಣಾವತ್ ಗೆ ವೈ ಪ್ಲಸ್ ಭದ್ರತೆ ವಿಚಾರ: ಇದು ಈ ದೇಶದ ದುರಂತ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ….

ಮೈಸೂರು,ಸೆಪ್ಟಂಬರ್,9,2020(www.justkannada.in):  ನಟಿ ಕಂಗನಾ ರಣಾವತ್ ಗೆ  ವೈ ಪ್ಲಸ್ ಭದ್ರತೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಇದು ಈ ದೇಶದ ದುರಂತ. ಬಾಯಿಗೆ ಬಂದಂತೆ ಮಾತನಾಡುವವರಿಗೆ ವೈ ಶ್ರೇಣಿಯ ಭದ್ರತೆ ಕೊಡುತ್ತಾರೆ ಎಂದು  ಹರಿಹಾಯ್ದರು.jk-logo-justkannada-logo

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್,  ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟಿಯರಾದ ರಾಗಿಣಿ, ಸಂಜನಾ ಹೇಳಿರುವ ಪ್ರಮುಖ ಮುಖಂಡರುಗಳ ಹೆಸರನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದು ದೊಡ್ಡ ಜಾಲವಾಗಿದೆ. ಇಡೀ ದೇಶಾದ್ಯಂತ ಇದರ ಲಿಂಕ್ ಇದೆ. ಸರ್ಕಾರದ ವೈಫಲಗಳನ್ನು ಮುಚ್ಚಿಕೊಳ್ಳಲು ಡ್ರಗ್ಸ್ ವಿಚಾರ ಹಿಡಿದುಕೊಂಡರು. ಈಗ ಅವರೇ ಅದರಲ್ಲಿ ಸಿಲುಕಿ‌ಕೊಂಡಿದ್ದಾರೆ. ಬಿಜೆಪಿಯವರು ಇದರ ಅಡ್ವಾಂಟೇಜ್ ತೆಗೆದುಕೊಳ್ಳಲು ಹೋಗಿ ಈಗ ಅವರೇ ಆ ಬಲೆಯಲ್ಲಿ ಸಿಲುಕಿದ್ದಾರೆ ಎಂದು ಲೇವಡಿ ಮಾಡಿದರು. ಡ್ರಗ್ಸ್ ದಂಧೆ ಪ್ರಕರಣದ ಬಗ್ಗೆ ಹೈಕೋರ್ಟ್ ಸೂಚನೆ ಮೇರೆಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಇನ್ನೂ ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ವೈ ಪ್ಲಸ್ ಭದ್ರತೆ ನೀಡಿರುವ ವಿಚಾರ ಕುರಿತು ಕಿಡಿಕಾರಿದ ಎಂ. ಲಕ್ಷ್ಮಣ್, ಕಂಗನಾ ಬಿಜೆಪಿಯ ಅಂಬಾಸಿಡರ್. ಅವರನ್ನು ಮುಂಬೈನಲ್ಲಿ ಸಂಯುಕ್ತ ಸರ್ಕಾರವನ್ನು ಟೀಕಿಸಲು ಇಟ್ಟುಕೊಂಡಿದ್ದಾರೆ. ಹಾಗಾಗಿ ಅವರಿಗೆ ಎಲ್ಲಾ ಹಂತದ ಭದ್ರತೆ ಕೊಡುತ್ತಾರೆ. ಇದು ಈ ದೇಶದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.y-plus-security-issue-actress-kangana-ranawat-kpcc-spokesperson-m-laxman

ಬಾಯಿಗೆ ಬಂದಂತೆ ಮಾತನಾಡುವವರಿಗೆ ವೈ ಶ್ರೇಣಿಯ ಭದ್ರತೆ ಕೊಡುತ್ತಾರೆ. ಆದರೆ ಈ ದೇಶಕ್ಕಾಗಿ ಬಲಿದಾನ ನೀಡಿದ ಕುಟುಂಬಕ್ಕೆ ಸೇರಿರುವ ಸೋನಿಯಾಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್‌ ಗಾಂಧಿ ಅವರುಗಳಿಗೆ ನೀಡಿದ್ದ ಜೆಡ್ ಪ್ಲಸ್‌ಭದ್ರತೆ ವಾಪಸ್ ಪಡೆದು ಕೇವಲ ಪೊಲೀಸ್ ಭದ್ರತೆ ನೀಡಿದ್ದಾರೆ. ಪ್ರಧಾನ ಮಂತ್ರಿ ಮತ್ತು ಅಮಿತ್ ಶಾ ನಂತರ ಕಂಗನಾ ರಣಾವತ್ ಗೆ ಹೆಚ್ಚಿನ ಭದ್ರತೆ ನೀಡಿದ್ದಾರೆ ಎಂದು ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

Key words: Y Plus- Security-Issue -Actress -Kangana Ranawat-KPCC- spokesperson- M Laxman