ವಿಶ್ವಕಪ್ ಕ್ರಿಕೆಟ್: 2ನೇ ಸೆಮೀಸ್’ನಲ್ಲಿ ಇಂಗ್ಲೆಂಡ್-ಆಸಿಸ್ ಹೋರಾಟ

ಬರ್ಮಿಂಗ್‌ಹ್ಯಾಮ್, ಜುಲೈ 11, 2019 (www.justkannada.in): ವಿಶ್ವಕಪ್‌ ಕ್ರಿಕೆಟ್ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ಹಾಗೂ ಆತಿಥೇಯ ಇಂಗ್ಲೆಂಡ್ ಪರಸ್ಪರ ಎದುರಾಗಲಿವೆ.

ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಎರಡೂ ತಂಡಗಳು ಗುರುವಾರ ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ರವಿವಾರ ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ.

ಇಂಗ್ಲೆಂಡ್ ತನ್ನ ಅಭಿಮಾನಿಗಳ ಎದುರು ಅಮೋಘ ಪ್ರದರ್ಶನ ನೀಡಿ ವಿಶ್ವಕಪ್ ಫೈನಲ್ ತಲುಪುವ ವಿಶ್ವಾಸದಲ್ಲಿದ್ದರೆ, ಆಸ್ಟ್ರೇಲಿಯ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಕಳೆದ 7 ಸೆಮಿ ಫೈನಲ್‌ಗಿಂತ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಲು ಸಜ್ಜಾಗಬೇಕಾಗಿದೆ.