‘ರಾಮಮಂದಿರ ಏಕೆ ಬೇಡ’ ಕೃತಿ ಗ್ರಂಥಾಲಯಗಳಿಗೆ ಖರೀದಿಸುವುದನ್ನು ವಾಪಸ್ ಪಡೆದಿರುವ ನಿರ್ಣಯ ಖಂಡನೀಯ- ಪ್ರೊ. ಮಹೇಶ್ ಚಂದ್ರಗುರು

kannada t-shirts

ಮೈಸೂರು,ಜನವರಿ,27,2021(www.justkannada.in):  ಪ್ರೊ. ಕೆ.ಎಸ್‌. ಭಗವಾನ್ ರಚಿಸಿರುವ ರಾಮಮಂದಿರ ಏಕೆ ಬೇಡ ಎಂಬ ಕೃತಿಯನ್ನು ಸಾರ್ವಜನಿಕ ಗ್ರಂಥಾಲಯಗಳಿಗೆ ಖರೀದಿಸುವುದನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ನಿರ್ಣಯ ಖಂಡನೀಯ ಎಂದು ಪ್ರೊ. ಮಹೇಶ್ ಚಂದ್ರಗುರು ಕಿಡಿಕಾರಿದ್ದಾರೆ.jk

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಪ್ರೊ. ಮಹೇಶ್ ಚಂದ್ರಗುರು, ಭಗವಾನ್ ಅವರು ರಚಿಸಿರುವ ರಾಮಮಂದಿರ ಏಕೆ ಬೇಡ ಎಂಬ ಕೃತಿ ಕಳೆದ 2018ರಿಂದ ಇದುವರೆಗೂ ಮೂರು ಮುದ್ರಣ ಕಂಡಿದೆ. ಆದಾಗ್ಯೂ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳಿಗೆ ಭಗವಾನ್ ರವರ ಪುಸ್ತಕವನ್ನು ಖರೀಸದಂತೆ ನಿರ್ಣಯ ಕೈಗೊಂಡಿರುವುದು ಖಂಡನೀಯ ಎಂದರು.Why Not –Ramamandira-book-Pro. Mahesh Chandraguru-mysore

ಈ ಪುಸ್ತಕವನ್ನು ಕೇಂದ್ರ ರಾಜ್ಯ ಸರ್ಕಾರಗಳಾಗಲೀ ನಿಷೇಧಿಸಿಲ್ಲ. ಆದರೂ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸುವ ಸಮಿತಿಯ ಅಧ್ಯಕ್ಷರಾದ, ಸಂಘಪರಿವಾರದ ನಿಷ್ಠ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡರು ನಿರ್ಧರಿಸಿರುವುದು ಸರಿಯಲ್ಲ. ಇಂತಹ ನಿರ್ಧಾರದಿಂದ ರಾಜ್ಯ ಸರ್ಕಾರದ ಘನತೆಗೇ ಧಕ್ಕೆಯಾಗಲಿದೆ. ಕೂಡಲೇ ನಿರ್ಣಯವನ್ನು ಹಿಂಪಡೆಯಬೇಕು. ಪುಸ್ತಕ ಖರೀದಿಗೆ ಅ‌ನುವು ಮಾಡಿಕೊಡಬೇಕು ಎಂದು ಪ್ರೊಫೆಸರ್ ಮಹೇಶ್ ಚಂದ್ರಗುರು ಆಗ್ರಹಿಸಿದರು.

Key words: Why Not –Ramamandira-book-Pro. Mahesh Chandraguru-mysore

website developers in mysore