ರೈಲ್ವೆ ಇಲಾಖೆ ಖಾಸಗೀರಕರಣಕ್ಕೆ ವಿರೋಧ: ಇಡೀ ದೇಶವನ್ನೇ ಮಾರುವ ಕೆಲಸ ಎಂದು ಟೀಕಿಸಿದ ಎಂ.ಲಕ್ಷ್ಮಣ್….

ಮೈಸೂರು,ಡಿಸೆಂಬರ್,17,2020(www.justkannada.in):  ನರೇಂದ್ರ ಮೋದಿಯವರು ಪ್ರಧಾನಿ ಆದ ಮೇಲೆ ಇಡೀ ದೇಶವನ್ನೇ ಮಾರುವ ಕೆಲಸವಾಗುತ್ತಿದೆ. 34 ಪ್ರಮುಖ ಸಾರ್ವಜನಿಕ ವಲಯಗಳನ್ನು ಇಲ್ಲಿಯವರೆಗೆ ಖಾಸಗೀಕರಣ ಮಾಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶವ್ಯಕ್ತಪಡಿಸಿದರು.Teachers,solve,problems,Government,bound,Minister,R.Ashok

ಈಗಾಗಲೇ ದೇಶದಲ್ಲಿ 70 ರೈಲ್ವೆ ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸಲಾಗಿದೆ

ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ರೈಲ್ವೆ ಖಾಸಗೀಕರಣ  ವಿರೋಧಿಸಿ ಕಿಡಿಕಾರಿದ ಅವರು, ಈಗಾಗಲೇ ದೇಶದಲ್ಲಿ 70 ರೈಲ್ವೆ ನಿಲ್ದಾಣಗಳನ್ನು 3 ವರ್ಷಗಳಿಂದ ಖಾಸಗಿಯವರಿಗೆ ವಹಿಸಲಾಗಿದೆ. 2017 ರಲ್ಲಿ ದೇಶಾದ್ಯಂತ 151 ರೈಲುಗಳನ್ನು ಖಾಸಗಿಯವರಿಗೆ ನೀಡಲಾಗಿದೆ ಎಂದು ದೂರಿದರು.

ರೈಲಿನ ಇಂಜಿನ್ ಗಳಿಗೆ ಅದಾನಿ ಕಂಪನಿ ಸ್ಟಿಕ್ಕರ್ ಗಳನ್ನು ಅಂಟಿಸಲಾಗುತ್ತಿದೆ

ಹಂತ ಹಂತವಾಗಿ ಇಡೀ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ. ಇಡೀ ರೈಲ್ವೆ ಇಲಾಖೆಯನ್ನು ಅದಾನಿ ಗ್ರೂಪ್ ಗೆ ವಹಿಸಲು ಕೇಂದ್ರ ಸರ್ಕಾರ ಮುಂದಾಗಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಈಗಾಗಲೇ ರೈಲಿನ ಇಂಜಿನ್ ಗಳಿಗೆ ಅದಾನಿ ಕಂಪನಿ ಸ್ಟಿಕ್ಕರ್ ಗಳನ್ನು ಅಂಟಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಶೌಚಾಲಯವನ್ನು ಬಳಸಲೂ ಸಹ ಹಣ ನೀಡಬೇಕಾಗುತ್ತದೆ

ಮುಂದೊಂದು ದಿನ ಜನಸಾಮಾನ್ಯರು ರೈಲಿನ ಶೌಚಾಲಯವನ್ನು ಬಳಸಲೂ ಸಹ ಹಣ ನೀಡಬೇಕಾಗುವ ಪರಿಸ್ಥಿತಿ ಬರಲಿದೆ ಎಂದು ರೈಲ್ವೆ ಖಾಸಗೀಕರಣ ವಿರುದ್ಧ ಬೇಸರವ್ಯಕ್ತಪಡಿಸಿದರು.

key words : whole-country-Selling-Work-Congress-spokesperson-M.Laxman-outraged