ಸದ್ದು ಮಾಡುತ್ತಿದೆ ವಿಜಯ್ ದೇವರಕೊಂಡ ‘ವರ್ಲ್ಡ್​ ಫೇಮಸ್​ ಲವರ್​’ ಟೀಸರ್

kannada t-shirts

ಬೆಂಗಳೂರು, ಫೆಬ್ರವರಿ 07, 2020 (www.justkannada.in): ಟಾಲಿವುಡ್​ ರೌಡಿ ವಿಜಯ್ ದೇವರಕೊಂಡ ನಟನೆಯ ‘ವರ್ಲ್ಡ್​ ಫೇಮಸ್​ ಲವರ್​’ ಪೋಸ್ಟರ್ ಹಾಗೂ ಟೀಸರ್ ಸಾಕಷ್ಟು ಸದ್ದು ಮಾಡುತ್ತಿವೆ.

ಹೌದು, ವಿಜಯ್​ ದೇವಕೊಂಡ ಅವರ ಸಿನಿಮಾ ಕೇವಲ ಪೋಸ್ಟರ್​ಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಲ್ಲದೆ ಇದರ ಟೀಸರ್​ನ ತುಣುಕು ರೌಡಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.

ಈ ಚಿತ್ರದಲ್ಲಿ ನಾಲ್ಕುಮಂದಿ ನಾಯಕಿಯರೊಂದಿಗೆ ನಟಿಸಿರುವ ​, ಅರ್ಜುನ್​ ರೆಡ್ಡಿಯಂತೆ ಫುಲ್ ವೈಲೆಂಟ್​ ಪಾತ್ರಕ್ಕೆ ಜೀವ ತುಂಬಿದ್ದಾರೆ ಅಂತ ಚಿತ್ರದ ಪೋಸ್ಟರ್​ಗಳನ್ನು ನೋಡಿಯೇ ಹೇಳಬಹುದು. ಈ ಸಿನಿಮಾದ ಟ್ರೈಲರ್​ ಇಂದು ಸಂಜೆ 4.05ಕ್ಕೆ ಬಿಡುಗಡೆಯಾಗಲಿದೆ.

ಎಂದಿನಂತೆ ಈ ಸಿನಿಮಾದಲ್ಲೂ ವಿಜಯ್​ ತಮ್ಮ ಕಿಸ್ಸಿಂಗ್​ ಪುರಾಣ ಮುಂದುವರೆಸಿದ್ದಾರೆ. ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ಐಶ್ವರ್ಯಾ ರಾಜೇಶ್​ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರೆ, ಇಸ್​ಬೆಲೆ ಲೈಟೆ ಫೈಲಟ್​ ಪಾತ್ರದಲ್ಲಿ ಕ್ಯಾಥರಿನ್​ ತೇರೆಸಾ, ರಾಶಿ ಖನ್ನಾ ವಿಜಯ್​ ಲವರ್​ ಆಗಿ ಕಾಣಿಸಿಕೊಂಡಿದ್ದಾರೆ.

website developers in mysore