ಇತಿಹಾಸದ ಪುಟಗಳಲ್ಲಿ ದಾಖಲಾಗದ ವೀರರ ಬಗ್ಗೆ ನಮಗೆ ಅರಿವಿಲ್ಲ : ಸಾಹಿತಿ ಸಿಪಿಕೆ ಬೇಸರ

kannada t-shirts

ಮೈಸೂರು,ಅಕ್ಟೋಬರ್,31,2020(www.justkannada.in)  : ಅಖಿಲ ಭಾರತ ಮಟ್ಟದ ಇತಿಹಾಸದ ಪುಟಗಳಲ್ಲಿ ದಾಖಲಾಗದ ಅನೇಕ ವೀರರು 1857ಕ್ಕೂ ಹಿಂದೆಯೇ ರಕ್ತ ತರ್ಪಣ ಗೈದಿದ್ದರು. ಅದರೆ, ಅವರ ಬಗೆಗೆ ಅವರದೇ ನೆಲದ ನಮಗೆ ಅರಿವಿಲ್ಲದಿರುವುದು ದುರಂತ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್  ಬೇಸರವ್ಯಕ್ತಪಡಿಸಿದರು.

jk-logo-justkannada-logo

ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಜಲದರ್ಶಿನಿ ಅತಿಥಿ ಗೃಹದಲ್ಲಿ ಆಯೋಜಿಸಿದ್ದ ಸ್ವಾತಂತ್ರ ಹೋರಾಟಗಾರ ಹುತಾತ್ಮ ಸುಬೆದಾರ್ ಗುಡ್ಡೆ ಮನೆ ಅಪ್ಪಯ್ಯಗೌಡರ ಹುತಾತ್ಮ ದಿನವನ್ನು ಸಂಸ್ಕರಣ ದಿನ ಕಾರ್ಯಕ್ರಮದಲ್ಲಿ ಗುಡ್ಡೆ ಮನೆ ಅಪ್ಪಯ್ಯಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರರು.

1857 ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ವರ್ಷ. ಆಂಗ್ಲರ ಸತ್ತೆಯನ್ನು ಅಮೂಲಾಗ್ರವಾಗಿ ಕಿತ್ತೊಗೆದು ಸ್ವದೇಶವನ್ನು ರಕ್ಷಿಸಲು ಮಹಾಸ್ವಾತಂತ್ರ್ಯ ಸಂಗ್ರಾಮವೊಂದು ನಡೆದ ವರ್ಷ. ಇದನ್ನು ಆಂಗ್ಲರು ‘ದಂಗೆ’ ಎಂದರೂ ಅದು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೇ ನಾವು ಅರಿತಿದ್ದೇವೆ ಎಂದರು.

ಮಂಗಲ್ ಪಾಂಡೆ,ತಾಂತ್ಯಟೋಪಿ ಮೊದಲಾದ ವೀರರ ಬಲಿದಾನಗಳ ಬಗ್ಗೆ ಓದಿದ್ದೇವೆ. ಅಷ್ಟಕ್ಕೂ ಒಂದು ಸಂಘಟಿತ ರೂಪವೆಂಬ ದೃಷ್ಟಿಯಲ್ಲಿ ‘ಸಿಪಾಯಿ ದಂಗೆ’ಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಅನ್ನುವುದಕ್ಕೂ  ಮೊದಲು  ವ್ಯವಸ್ಥಿತವಾದ ಹೋರಾಟ ನಡೆದಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಪ್ರಥಮ  ಸ್ವಾತಂತ್ರ್ಯ ಸಂಗ್ರಾಮ 1837 ರಲ್ಲೇ ನಡೆದಿತ್ತು. 1857ರ  ಸಿಪಾಯಿ ದಂಗೆಯ ಇಪ್ಪತ್ತು ವರ್ಷ ಮೊದಲೇ ರಾಷ್ಟ್ರೀಯತೆಯ ಅರಿವು ಇದ್ದೋ, ಇಲ್ಲದೆಯೋ ಆಂಗ್ಲರಿಗೆ ತಮ್ಮ ಸ್ವಾತಂತ್ರ್ಯದ ಹಸಿವಿನ ಬಿಸಿಯನ್ನು ಮುಟ್ಟಿಸಿದವರು ಕೊಡಗು-ಸುಳ್ಯದ ರೈತಾಪಿ ಜನರು. ಇದು ಭಾರತದ ಇತಿಹಾಸದಲ್ಲಿ ದಾಖಲಾಗದ ಮೊದಲ ಸ್ವಾತಂತ್ರ್ಯ ಸಂಗ್ರಾಮ. ಆಂಗ್ಲರು ಹೀಗಳೆದ ದರೋಡೆ,‘ಕಲ್ಯಾಣಪ್ಪನ ಕಾಟಕಾಯಿ’ ಇದು ಅಮರ ಸುಳ್ಯ ದಂಗೆ ಎಂದು ಮಾಹಿತಿ ನೀಡಿದರು.

ಬಿದರೂರಿನ ಧೋಂಡಿಯ ವಾಘ, ಐಗೂರಿನ ವೆಂಕಟಾದ್ರಿ ನಾಯಕ(1802),ಕಿತ್ತೂರಿನ ಚೆನ್ನಮ್ಮಾಜಿ(1824),ಸಂಗೊಳ್ಳಿ ರಾಯಣ್ಣ,ಕೊಡಗಿನ ಅಪರಂಪಾರ(1835)ಕಲ್ಯಾಣಸ್ವಾಮಿ(1837),ಗುಡ್ಡೆಮನೆ ಅಪ್ಪಯ್ಯ, ಕೆದಂಬಾಡಿ ರಾಮಗೌಡ,ಕುಡಿಯ ಸಹೋದರರು ಹೀಗೆ ಅಖಿಲ ಭಾರತ ಮಟ್ಟದ ಇತಿಹಾಸದ ಪುಟಗಳಲ್ಲಿ ದಾಖಲಾಗದ ಅನೇಕ ವೀರರು 1857ಕ್ಕೂ ಹಿಂದೆಯೇ ರಕ್ತ ತರ್ಪಣ ಗೈದಿದ್ದರು. ಅದರೆ, ಅವರ ಬಗೆಗೆ ಅವರದೇ ನೆಲದ ನಮಗೆ ಅರಿವಿಲ್ಲದೇ ಇರುವುದು ದುರಂತ ಎಂದು ಬೇಸರವ್ಯಕ್ತಪಡಿಸಿದರು.

ಆಂಗ್ಲರು ಹಣದ ಮೂಲಕ ಕಂದಾಯ ಸಲ್ಲಿಸಲು ಆಜ್ಞಾಪಿಸಿದಾಗ ವಸ್ತುರೂಪದಲ್ಲಿ ಕಂದಾಯವನ್ನು ಪಾವತಿಸುತ್ತಿದ್ದ ಕೊಡಗು ಜನರಿಗೆ ಅಸಮಾದಾನ ಉಂಟಾಗುತ್ತದೆ. ಏಳುಸಾವಿರ ಸೀಮೆಯ ಹುಲಿ ಕಡಿದ ನಂಜಯ್ಯ,ಗುಡ್ಡೆಮನೆ ಅಪ್ಪಯ್ಯ ಗೌಡ ಇವನಿಗೆ ಬೆಂಗಾವಲಿಗೆ ನಿಂತರು. ಸುಳ್ಯ ಕೆದಂಬಾಡಿ ರಾಮ ಗೌಡ,ಕೂಜುಗೋಡು ಸಹೋದರರು,ಪೆರಾಜೆ ಊಕಣ್ಣ ಬಂಟ,ಕುಂಬ್ಳೆಯ ಅರಸ ಸುಬ್ರಾಯ ಹೆಗ್ಡೆ,ಧರ್ಮಸ್ಥಳದ ಹೆಗ್ಡೆ ಮೊದಲಾದವರು ಬೆಂಬಲ ಸೂಚಿಸಿದರು ಎಂದು ಹೇಳಿದರು.

ಲಕ್ಷ್ಮಪ್ಪ ಬಂಗರಸ,ವಿಟ್ಲದ ಅರಸ ಮೊದಲಾದವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು.ಕುಡಿಯರು, ಪೆರಾಜೆ ಕೃಷ್ಣಯ್ಯ ಮೊದಲಾದವರನ್ನು ಸಿಂಗಾಪುರಕ್ಕೆ ಕಳುಹಿಸಲಾಯ್ತು. ಕೊಡಗಿನ ನಾಯಕ ಗುಡ್ಡೆ ಮನೆ ಅಪ್ಪಯ್ಯ ಗೌಡನನ್ನು 1837ಅಕ್ಟೋಬರ್ 31 ರಂದು ಮಡಿಕೇರಿಯ ಕೋಟೆಯ ಎದುರು  ಬಹಿರಂಗವಾಗಿ ಗಲ್ಲಿಗೇರಿಸಲಾಯ್ತು. ಇದೊಂದು ವಿಫಲ ದಂಗೆ ಎನಿಸಬಹುದು. ಆದರೆ ಎಂದೂ ವಿಪಲವಾಗಲಿಲ್ಲ ಎಂದು ತಿಳಿಸಿದರು.

ಗುಡ್ಡೆಮನೆ ಅಪ್ಪಯ್ಯ ಗೌಡರನ್ನ ಗಲ್ಲಿಗೇರಿಸಿದ ದಿನವನ್ನು ಹುತಾತ್ಮರ ದಿನವಾಗಿಸಲಿ

Undocumented,pages,history,don't,know,about,heroes,Literature,CPK,bored

ಗುಡ್ಡೆಮನೆ ಅಪ್ಪಯ್ಯ ಗೌಡರನ್ನ ಗಲ್ಲಿಗೇರಿಸಿದ ದಿನವನ್ನು  ಹುತಾತ್ಮರ ದಿನವೆಂದು ಸರ್ಕಾರ ಆಚರಿಸಲಿ. ಸ್ವಾತಂತ್ರ್ಯ ಕೇವಲ ಸಂಗತಿಯಲ್ಲ ಅದರ ಹಿಂದೆ ಹಲವರ ಬಲಿದಾನವಿದೆ ಎಂಬುದನ್ನು ನಮ್ಮ ಯುವ ಪೀಳಿಗೆಗೆ ಅರಾಯಲೇ ಬೇಕು. ಮರೆಯಾದ ಇತಿಹಾಸದ ಅಧ್ಯಯನ ಮಾಡಲು ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿ ಆ ಮೂಲಕ ಪ್ರಥಮ ಸಂಗ್ರಾಮವೆನಿಸಿದ ಈ ಅಮರಸೂಳ್ಯ ದಂಗೆಯನ್ನು ಮುಂದಿನ ತಲೆಮಾರಿಗೆ  ಕೊಂಡೊಯ್ಯಬೆಕಾಗಿ ಆಗ್ರಹಿಸಿದರು..

ಈ ವೇಳೆ ಮುಖಂಡರಾದ ಕೆ ಹರೀಶ್ ಗೌಡ ಟ್ರಸ್ಟಿನ ಅಧ್ಯಕ್ಷರಾದ ಸತೀಶ್ ಗೌಡ ಉಪಾಧ್ಯಕ್ಷ ಕುಮಾರ್ ಗೌಡ ಪ್ರಧಾನ ಕಾರ್ಯದರ್ಶಿ ರವಿ ಎ. ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ರವಿ (ರಾಜಕೀಯ ) ಒಕ್ಕಲಿಗರ ಸಂಘದ ಉಪಾಧ್ಯಕ್ಷ ಗುರರಾಜ್ ದಂತ ವೈದ್ಯ ಲೋಕೇಶ್ ಉದ್ಯಮಿ ಅರುಣ್ ಕುಮಾರ್ ಅವರು ಉಪಸ್ಥಿತರಿದ್ದರು.

key words : Undocumented-pages-history-don’t-know-about-heroes-Literature-CPK- bored

website developers in mysore