ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್.

ನವದೆಹಲಿ,ಮೇ,19,2022(www.justkannada.in):  ರಸ್ತೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ, ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್  ಆದೇಶಿಸಿದೆ.

34 ವರ್ಷದ ಹಳೆಯ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧುಗೆ ಜೈಲು ಶಿಕ್ಷೆ ವಿಧಿಸಿದೆ. 1988 ಡಿ.27ರಂದು ಪಟಿಯಾಲಾದಲ್ಲಿ ನಡೆದಿದ್ದ ರಸ್ತೆ ಜಗಳದಲ್ಲಿ ವೃದ್ದರೊಬ್ಬರ ಮೇಲೆ ದಾಳಿ ನಡೆದು ಘಟನೆಯಲ್ಲಿ  ವೃದ್ಧ ಮೃತಪಟ್ಟಿದ್ದರು. ಇದೀಗ ಈ ಪ್ರಕರಣ ಸಂಬಂಧ ನವಜೋತ್ ಸಿಂಗ್ ಸಿಧು ಗೆ 1 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.

34 ವರ್ಷಗಳ ಸುದೀರ್ಘ ವಿಚಾರಣೆ  ನಂತರ ಸುಪ್ರೀಂ ಕೋರ್ಟ್ ಇದೀಗ ನವಜೋತ್ ಸಿಂಗ್ ಸಿಧುಗೆ ಒಂದು  ವರ್ಷ ಜೈಲುಶಿಕ್ಷೆ  ವಿಧಿಸಿದೆ. ಮರುಪರಿಶೀಲನಾ ಅರ್ಜಿಗೂ ಅವಕಾಶ ನೀಡಲಾಗಿದೆ. ಜೈಲು ಶಿಕ್ಷೆ ಪ್ರಕಟ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ನವಜೋತ್ ಸಿಂಗ್ ಸಿಧು ಅವರನ್ನು ವಶಕ್ಕೆ ಪಡೆಯಲಿದ್ದಾರೆ.

Key words:  Supreme Court-today-sentenced -Congress leader -Navjot Singh Sidhu – jail.