ವಿದ್ಯಾರ್ಥಿಗಳಿಗೆ ಸಿಹಿಸುದ್ದಿ:  ಉಚಿತ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿದ ಕೆಎಸ್ ಆರ್ ಟಿಸಿ.

ಬೆಂಗಳೂರು,ಜೂನ್,28,2022(www.justkannada.in):  2021-22ನೇ ಸಾಲಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್ ​ವರೆಗೂ ವಿಸ್ತರಣೆಯಾದ ಹಿನ್ನಲೆ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿಯನ್ನು ಕೆಎಸ್ಆರ್​ಟಿಸಿ ವಿಸ್ತರಣೆ ಮಾಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಎಸ್​ಆರ್​ಟಿಸಿ , ಕಾನೂನು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್ ​ವರೆಗೂ ನಡೆಯಲಿದೆ. ಆದರೆ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿ ಏಪ್ರಿಲ್ ತಿಂಗಳಿಗೆ ಕೊನೆಯಾಗಲಿದೆ. ಹೀಗಾಗಿ ವಿದ್ಯಾರ್ಥಿಗಳ ಬಸ್​ ಪಾಸ್​​ ಅವಧಿಯನ್ನು ವಿಸ್ತರಿಸಿದ್ದು, ವಿದ್ಯಾರ್ಥಿಗಳು ಕಾಲೇಜು ಅಡ್ಮಿಷನ್ ರಶೀದಿ, ಹಳೇ ಪಾಸ್ ತೋರಿಸಿ ಬಸ್​​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

Key words: students-KSRTC – extended -free -bus- pass