ಶ್ರೀನಿವಾಸ್ ‘ಓಲ್ಡ್ ಮಾಂಕ್’ ರೆಡಿ ! ಕೆಲವೇ ದಿನಗಳ ಶೂಟಿಂಗ್ ಬಾಕಿ

Promotion

ಬೆಂಗಳೂರು, ಸೆಪ್ಟೆಂಬರ್ 29, 2020 (www.justkannada.in): ಓಲ್ಡ್ ಮಾಂಕ್ ಚಿತ್ರದ ಇನ್ನೊಂದು ಭಾಗದ 15 ದಿನಗಳ ಶೂಟಿಂಗ್ ಅಕ್ಟೋಬರ್ ನಲ್ಲಿ ನಡೆಯಲಿದೆ.

ಓಲ್ಡ್ ಮಾಂಕ್ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಎಂ ಜಿ ಶ್ರೀನಿವಾಸ್ ಭಾಗದ ಕೇವಲ ಎರಡು ದಿನಗಳ ಶೂಟಿಂಗ್ ಉಳಿಸಿಕೊಂಡಿದ್ದಾರೆ.

ಹಿರಿಯ ಸನ್ಯಾಸಿಯೊಬ್ಬರ ಲವ್ ಸ್ಟೋರಿ ಇದು. ಆತ ಗಾಸಿಪ್ ಪ್ರಿಯ, ಅವನಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಮಲಯಾಳಂ ನಟ ಸುದೇವ್ ನಾಯರ್ ಅವರು ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಚಿತ್ರದ ಶೂಟಿಂಗ್ ಶೇಕಡಾ 50ರಷ್ಟು ಮುಕ್ತಾಯವಾಗಿದ್ದು, ಚಿತ್ರದ ಸ್ಟಿಲ್ ಮತ್ತು ಇತ್ತೀಚಿನ ಸುದ್ದಿಗಳನ್ನು ಶ್ರೀನಿ ಹಂಚಿಕೊಂಡಿದ್ದಾರೆ.