ಸಿಂದಗಿಯಲ್ಲಿ ಸೋತರೂ ಸಮಾಧಾನವಿದೆ: ಹಾನಗಲ್ ಜನತೆಗೆ ನನ್ನ ಸೆಲ್ಯೂಟ್ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

ಬೆಂಗಳೂರು,ನವೆಂಬರ್,2,2021(www.justkannada.in):  ಸಿಂದಗಿಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿತ್ತು. ಆದರೆ ಸೋತರೂ ಸಹ ನಮಗೆ ಸಮಾಧಾನವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಸಿಂದಗಿ ಮತ್ತು ಹಾನಗಲ್ ಬೈ ಎಲೆಕ್ಷನ್ ಫಲಿತಾಂಶ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಕಳೆದ ಚುನಾವಣೆಗೆ ಹೋಲಿಸಿದರೇ ಕಾಂಗ್ರೆಸ್ ಈ ಬಾರಿ ಹೆಚ್ಚು ಮತ ಗಳಿಸಿದೆ. ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಜೆಡಿಎಸ್ ನವರ ಮತವನ್ನ ಬಿಜೆಪಿಯವರು ಪಡೆದಿದ್ದಾರೆ. ಮೊದಲು ಸಿಂದಗಿಯಲ್ಲಿ ಕಾಂಗ್ರೆಸ್ 3ನೇ ಸ್ಥಾನದಲ್ಲಿತ್ತು. ಈಗ 2ನೇ ಸ್ಥಾನಕ್ಕೆ ಬಂದಿದೆ. ಹೀಗಾಗಿ ಸೋತರೂ ಸಮಾಧಾನವಿದೆ.double-engines-oxygen-vaccine-supplies-kpcc-president-dk-shivakumar

ಇನ್ನು ಕಾಂಗ್ರೆಸ್ ಗೆ ಮತ ನೀಡಿದ  ಹಾನಗಲ್ ನ ಎಲ್ಲಾ ಸ್ವಾಭಿಮಾನಿಗಳಿಗೆ ಸೆಲ್ಯೂಟ್. ಹಾನಗಲ್ ನಲ್ಲಿ ಸಿಎಂ ಮಾತ್ರ ಪ್ರಚಾರ ಮಾಡಲಿಲ್ಲ. ಇಡೀ ಸರ್ಕಾರವೇ ಹಾನಗಲ್ ನಲ್ಲಿ ಬೀಡುಬಿಟ್ಟಿತ್ತು. ಪಾಪ ನಮ್ಮ ಫ್ರೆಂಡ್ಸ್ ಬ್ಯಾಗ್ ತೆಗೆದುಕೊಂಡು ಹೋಗಿದ್ದರು. ಆದರೆ ಹಾನಗಲ್ ಜನತೆ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಸದ್ಯ ಈಗ ಏನು ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.

Key words: Sindagi-hanagal-by-election-KPCC President -DK Sivakumar.

ENGLISH SUMMARY…

“We are satisfied though we lost in Sindhagi: BJP has got JDS votes – DKS
Bengaluru, November 2, 2021 (www.justkannada.in): “We were confident that Congress will win at Sindhagi. But we are satisfied though we have lost there,” opined KPCC President D.K. Shivakumar.
Speaking about the Sindagi and Hanagal byelection results he expressed his view that, “compared to the lost election the Congress party has garnered more number of votes. The people of the State want change. The BJP has received JDS votes. The Congress party was in the 3rd place in the beginning. But now it has raised to second place. Hence, we are satisfied though we have lost there,” he added.
Keywords: KPCC President D.K.Shivakumar/ Byelection/ Sindhagi/ Hanagal/ satisfied