ವಾಹನ ಸವಾರರು ಮತ್ತು ಚಿನ್ನ ಖರೀದಿಸುವವರಿಗೆ ಶಾಕ್ ನೀಡಿದ ಬಜೆಟ್: ಯಾವುದು ಅಗ್ಗ, ಯಾವುದು ತಗ್ಗು ಇಲ್ಲಿದೆ ನೋಡಿ..?

ನವದೆಹಲಿ,ಜು,5,2019(www.justkannada.in): ಚಿನ್ನ ಖರೀದಿಸುವವರಿಗೆ ಕೇಂದ್ರ ಬಜೆಟ್ ಶಾಕ್ ನೀಡಿದೆ. ಬಜೆಟ್ ನಲ್ಲಿ ಕೆಲ ವಸ್ತು, ಸೇವೆಗಳು ದುಬಾರಿಯಾದ್ರೆ ಮತ್ತೆ ಕೆಲ ವಸ್ತು, ಸೇವೆಗಳು ಇಳಿಕೆ ಕಂಡಿದೆ.

ಇಂದು  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ  ಮಾಡಿದರು. ಬಜೆಟ್ ನಲ್ಲಿ ಚಿನ್ನಾಭರಣಗಳ ಮೇಲೆ ಕಸ್ಟಮ್ಸ್‌ ಸುಂಕ 10 ರಿಂದ 12.5 ಕ್ಕೆ ಏರಿಕೆ ಮಾಡಲಾಗಿದೆ. ಹಾಗೆಯೇ ಪೆಟ್ರೋಲ್‌ , ಡಿಸೇಲ್‌ ಮೇಲಿನ ಸೆಸ್ ಏರಿಕೆ ಮಾಡಲಾಗಿದೆ. 1 ಲೀಟರ್ ಗೆ 1 ರೂಪಾಯಿ ಸೆಸ್ ಏರಿಕೆ ಮಾಡಲಾಗಿದೆ.  ಹೀಗಾಗಿ ಚಿನ್ನ, ಪೆಟ್ರೋಲ್ ಮತ್ತು ಡೀಸೆಲ್  ಬೆಲೆ ಏರಿಕೆಯಾಗಲಿದೆ.

ಯಾವುದು ದುಬಾರಿ..

ಚಿನ್ನ ಹಾಗೂ ಬಂಗಾರದ ಆಭರಣಗಳು ದುಬಾರಿಯಾಗಿವೆ. ಬೆಲೆ ಬಾಳುವ ಲೋಹ, ತಂಬಾಕು, ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಹೆಚ್ಚಾಗಲಿದೆ. ಸಿಸಿ ಕ್ಯಾಮರಾ, ಪಿವಿಸಿ ಪೈಪ್‌, ಟೈಲ್ಸ್.‌ ಡಿವಿಡಿ,  ಐಪಿ ಕ್ಯಾಮರಾ,  ಆಟೋ ಬಿಡಿಭಾಗಗಳು, ಪಿವಿಸಿ ಪೈಪ್, ಟೈಲ್ಸ್ ದುಬಾರಿಯಾಗಲಿದೆ.

ಯಾವುದು ಅಗ್ಗ ?

ಎಲೆಕ್ಟ್ರಾನಿಕ್ ಕಾರಿನ ಬೆಲೆ ಇಳಿಯಲಿದೆ. ಮನೆ ಖರೀದಿ ಮಾಡುವವರಿಗೆ ಖುಷಿ ಸುದ್ದಿ. ಗೃಹ ಸಾಲ ಇಳಿಕೆಯಾಗಲಿದೆ. ಕೃತಕ ಕಿಡ್ನಿ, ಡಯಾಲಿಸಿಸ್‌ ಯಂತ್ರ ಮತ್ತು ಪರಿಕರಗಳು, ಶಸ್ತ್ರ ಚಿಕಿತ್ಸೆ ಉಪಕರಣಗಳು, ಫಾಮ್ ಆಯಲ್, ಫ್ಯಾಟ್ ಆಯಲ್, ಪೇಪರ್ಸ್,  ಇಥಿಲಿನ್ ಅಗ್ಗವಾಗಲಿವೆ.

Keywords: Shock- centralbudget -gold -buyers- petrol – Diesel