ಅನಧಿಕೃತ ಕಲ್ಲು ಕ್ವಾರಿಗಳ ನಿಯಂತ್ರಣಕ್ಕೆ ಪ್ಲಾನ್: ನಾಳೆ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು, ಜನವರಿ 24, ಜನವರಿ 2021 (www.justkannada.in): ಅನಧಿಕೃತ ಕಲ್ಲು ಕ್ವಾರಿಗಳ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ನಾಳೆ ಹೊಸ ಮಾರ್ಗಸೂಚಿ ಪ್ರಕಟವಾಗಲಿದೆ.

ಶಿವಮೊಗ್ಗ ಕಲ್ಲುಕ್ವಾರಿ ಸ್ಪೋಟಕದ ನಂತ್ರ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿರುವ ಸರಕಾರ ಈ ಸಂಬಂಧ ಕಠಿಣ ಕಾನೂನು ರೂಪಿಸಲು ಮುಂದಾಗಿದೆ. ಈ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಅನಧಿಕೃತ ಕಲ್ಲು ಕ್ವಾರಿಗಳ ನಿಯಂತ್ರಣಕ್ಕಾಗಿ ಮಾಲೀಕರು, ಗುತ್ತಿಗೆದಾರರು, ಸಂಬಂಧಿಸಿದಂತ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುತ್ತಿದೆ.

ನಾಳೆ ಎಲ್ಲರೊಂದಿಗೂ ಚರ್ಚಿಸಿ, ಗೃಹ ಇಲಾಖೆಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗುತ್ತದೆ ಎಂಬುದಾಗಿ ಗೃಹ ಸಚಿವರು ತಿಳಿಸಿದ್ದಾರೆ.