ಜಂಬೂಸವಾರಿಯಲ್ಲಿ ಎರಡು ಸ್ತಬ್ಧಚಿತ್ರಗಳಿಗೆ ಮಾತ್ರ ಅವಕಾಶ

ಮೈಸೂರು,ಅಕ್ಟೋಬರ್,23,2020(www.justkannda.in) : ಕೊರೊನಾದಿಂದಾಗಿ ಸರಳ ದಸರಾ ನಡೆಸುತ್ತಿದ್ದು, ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಕೇವಲ ಎರಡು ಸ್ತಬ್ಧಚಿತ್ರಗಳನ್ನು ಬಳಸಲಾಗುತ್ತಿದೆ.jk-logo-justkannada-logoಸ್ತಬ್ಧಚಿತ್ರಗಳ ಸಿದ್ಧತೆಯು ವಸ್ತುಪ್ರದರ್ಶನ ಆವರಣದಲ್ಲಿ ನಡೆಯುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೈಸೂರು ಅರಮನೆಯ ವೈಭವ ತೋರಿಸುವ ಸ್ತಬ್ಧಚಿತ್ರ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್‌-19ಗೆ ಸಂಬಂಧಿಸಿದ ಸ್ತಬ್ಧಚಿತ್ರ ಸಿದ್ಧಪಡಿಸಲಾಗುತ್ತಿದೆ.

ಕೋವಿಡ್‌ ವಾರಿಯರ್‌ಗಳ ಸಾಧನೆಯನ್ನು ಪ್ರತಿಬಿಂಬಿಸಲಾಗುತ್ತಿದೆ. ಅಲ್ಲದೇ, ಸಾರ್ವಜನಿಕರಲ್ಲಿ ಕೋವಿಡ್‌ ಸಂಬಂಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ.

Only-two-quiet pictures-allowed-Jambuswari

ಈ ಬಾರಿ ಮೆರವಣಿಗೆಯು ಅರಮನೆ ಆವರಣದಲ್ಲಿ ಕೇವಲ 300 ಮೀಟರ್‌ ಅಂತರದೊಳಗೆ ನಡೆಯಲಿದೆ.

key words : Only-two-quiet pictures-allowed-Jambuswari