ನವೆಂಬರ್ 18ರಂದು ನಿತ್ಯಾ ಮೆನನ್ ಪಾರ್ವತಿ ಅಭಿನಯದ `ವಂಡರ್ ವುಮೆನ್’’ ರಿಲೀಸ್

Promotion

ಬೆಂಗಳೂರು, ನವೆಂಬರ್ 04, 2022 (www.justkannada.in): ಗರ್ಭಿಣಿಯರ ಕುರಿತ ಈ ಕಥೆ  `ವಂಡರ್ ವುಮೆನ್’’ ನವೆಂಬರ್ 18ರಂದು ತೆರೆಗೆ ಬರಲಿದೆ.

ಅಂಜಲಿ ಮೆನನ್ ನಿರ್ದೇಶನದ `ವಂಡರ್ ವುಮೆನ್’ನಲ್ಲಿ ನಿತ್ಯಾ, ಪಾರ್ವತಿ, ಪದ್ಮ ಪ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಈ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿ ಹೈಪ್ ಕ್ರಿಯೇಟ್ ಮಾಡಿದೆ. ಇದೊಂದು ಪ್ರೆಗ್ನೆನ್ಸಿ ಕಥೆಯಾಗಿದ್ದು, ಜೀವನದಲ್ಲಿ ಮಹಿಳೆಯರು ಎದುರಿಸುವ ಸವಾಲು ತೆರೆಯ ಮೇಲೆ ಬರಲಿದೆ.

ಅಂದಹಾಗೆ ನಿತ್ಯಾ ಮತ್ತು ಪಾರ್ವತಿ `ವಂಡರ್ ವುಮೆನ್’ ಚಿತ್ರಕ್ಕಾಗಿ ಜೊತೆಯಾಗಿದ್ದು ಇದೇ ಕಾರಣಕ್ಕೆ ಇತ್ತೀಚಿಗೆ ಹಂಚಿಕೊಂಡಿದ್ದ ಪೋಸ್ಟ್ ವೊಂಡು ಎಲ್ಲೆಡೆ ವೈರಲ್ ಆಗಿತ್ತು.